ಶೀರ್ಷಿಕೆ : ಮಾವು ಬೆಳೆಗಾರರಿಗೆ ತೋಟಗಾರಿಕೆ ಇಲಾಖೆಯಿಂದ ಉಪಯುಕ್ತ ಸಲಹೆಗಳು
ಲಿಂಕ್ : ಮಾವು ಬೆಳೆಗಾರರಿಗೆ ತೋಟಗಾರಿಕೆ ಇಲಾಖೆಯಿಂದ ಉಪಯುಕ್ತ ಸಲಹೆಗಳು
ಮಾವು ಬೆಳೆಗಾರರಿಗೆ ತೋಟಗಾರಿಕೆ ಇಲಾಖೆಯಿಂದ ಉಪಯುಕ್ತ ಸಲಹೆಗಳು
ಕೊಪ್ಪಳ ಜೂ. 30 (ಕರ್ನಾಟಕ ವಾರ್ತೆ): ಮಾವಿನ ಹಣ್ಣಿನ ಸೀಸನ್ ಇನ್ನೇನು ಮುಗಿಯುತ್ತ ಬಂದಿದ್ದು, ಬರುವ ದಿನಗಳಲ್ಲಿ ಮಾವಿನ ಗಿಡಗಳ ನಿರ್ವಹಣೆ ಕುರಿತು ತೋಟಗಾರಿಕೆ ಇಲಾಖೆ ರೈತರಿಗೆ ಕೆಲವು ಸಲಹೆಗಳನ್ನು ನೀಡಿದೆ.
ಹಣ್ಣಿನ ರಾಜ ಮಾವಿನ ಕಾಲ ಈಗ ಮುಗಿಯುತ್ತ ಬಂದಿದ್ದು, ರೈತರು ತಡವಾಗಿ ಬರುವ ಹಣ್ಣುಗಳನ್ನು ಕಟಾವು ಮಾಡಿ, ಮಾರಾಟ ಮಾಡಿದ ನಂತರ ಹೊಲದಲ್ಲಿ ಕೆಳಗೆ ಬಿದ್ದ ಹಣ್ಣುಗಳನ್ನು ಆರಿಸಿ ತೆಗೆದು ನಾಶಪಡಿಸಬೇಕು. ತೋಟಗಾರಿಕೆ ಇಲಾಖೆಯಿಂದ ವಿವಿಧ ತಳಿ ಓಟೆಗಳನ್ನು ರೈತರಿಂದ ಖರೀದಿಸುವುದರಿಂದ ಓಟೆ ಮಾರಿಯೂ ರೈತರು ಆದಾಯ ಮಾಡಿಕೊಳ್ಳಬಹುದಾಗಿದೆ.
ಜುಲೈ – ಆಗಸ್ಟ ತಿಂಗಳಲ್ಲಿ ರೈತರು ಗಿಡದ ಬುಡದ ಸುತ್ತ ಕಸ ಕಡ್ಡಿ ಸ್ವಚ್ಛಗೊಳಿಸಿ, ಪಾತಿ ಮಾಡಿ, ಸಾವಯವ ಗೊಬ್ಬರಗಳಾದ ಕೊಟ್ಟಿಗೆ ಗೊಬ್ಬರ, ಬೇವಿನ ಹಿಂಡಿ, ಎರೆಹುಳು ಗೊಬ್ಬರ ನೀಡಿ ಮಣ್ಣು ಮುಚ್ಚಿ ನೀರು ಹರಿಸಬೇಕು. ಮಳೆನಿಂತ ಮೇಲೆ ಒಣಗಿದ, ರೋಗಗ್ರಸ್ತ ರೆಂಬೆಗಳನ್ನು ಸವರಿ ಸಿ.ಓ.ಸಿ. ಎಂಬ ಶಿಲೀಂದ್ರನಾಶಕವನ್ನು ಲೇಪಿಸಬೇಕು. ಸೂರ್ಯನ ರಶ್ಮಿಗೆ ಅಡ್ಡ ಬರುವಂತಹ, ಅಪ್ರಯೋಜಕ ಕೊಂಬೆಗಳನ್ನು ಗರಗಸದಿಂದ ಸವರಿ ಶಿಲೀಂದ್ರನಾಶಕ ಲೇಪನ ಮಾಡಬೇಕು. ಇಡೀ ತೋಟವನ್ನು ಕಸದಿಂದ ಮುಕ್ತಗೊಳಿಸಿ ದ್ವಿದಳ ಧಾನ್ಯಗಳ ಬೆಳೆಯನ್ನು ಈ ಹಂಗಾಮಿನಲ್ಲಿ ತೆಗೆದುಕೊಳ್ಳುವುದರಿಂದ ಸ್ವಲ್ಪ ಆದಾಯವೂ ದೊರೆಯುವುದಲ್ಲದೇ, ಇಂತಹ ಬೆಳೆಗಳನ್ನು ರೋಟೋವೇಟರ್ ಮೂಲಕ ಭೂಮಿಗೆ ಸೇರಿಸುವುದರಿಂದ ಸಾರಜನಕದ ಲಭ್ಯತೆಯೂ ಆಗುವುದರಿಂದ ಸೆಪ್ಟೆಂಬರ್ – ಅಕ್ಟೋಬರ್ ತಿಂಗಳಲ್ಲಿ ನೀಡುವ ರಾಸಾಯನಿಕ ಗೊಬ್ಬರಗಳಲ್ಲಿ ಸಾರಜನಕದ ಪ್ರಮಾಣವನ್ನು ಕಡಿಮೆ ಮಾಡಬಹುದು. ಜೆಲ್ಲೆಯಾದ್ಯಂತ ಉತ್ತಮ ಮಳೆಯಾಗಿರುವುದರಿಂದ ರೈತರು ಈ ಲಾಭ ಪಡೆದುಕೊಂಡು ಮುಂದಿನ ವರ್ಷ ಉತ್ತಮ ಮಾವಿನ ಫಸಲು ಪಡೆಯಲು ಈಗಲೇ ತಯಾರಿ ಮಾಡಿಕೊಳ್ಳಿ ಎನ್ನುತ್ತಾರೆ ತೋಟಗಾರಿಕೆ ಉಪ ನಿರ್ದೇಶಕ ಕೃಷ್ಣ ಉಕ್ಕುಂದ ಅವರು.
ಹೆಚ್ಚಿನ ಮಾಹಿತಿಗಾಗಿ ವಿಷಯ ತಜ್ಞರು, ಹಾರ್ಟಿಕ್ಲಿನಿಕ್ ತೋಟಗಾರಿಕೆ ಉಪ ನಿರ್ದೇಶಕರ ಕಛೇರಿ, ಕೊಪ್ಪಳ ಮತ್ತು ಆಯಾ ತಾಲ್ಲೂಕಿನ ತೋಟಗಾರಿಕೆ ಕಛೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಹೀಗಾಗಿ ಲೇಖನಗಳು ಮಾವು ಬೆಳೆಗಾರರಿಗೆ ತೋಟಗಾರಿಕೆ ಇಲಾಖೆಯಿಂದ ಉಪಯುಕ್ತ ಸಲಹೆಗಳು
ಎಲ್ಲಾ ಲೇಖನಗಳು ಆಗಿದೆ ಮಾವು ಬೆಳೆಗಾರರಿಗೆ ತೋಟಗಾರಿಕೆ ಇಲಾಖೆಯಿಂದ ಉಪಯುಕ್ತ ಸಲಹೆಗಳು ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಮಾವು ಬೆಳೆಗಾರರಿಗೆ ತೋಟಗಾರಿಕೆ ಇಲಾಖೆಯಿಂದ ಉಪಯುಕ್ತ ಸಲಹೆಗಳು ಲಿಂಕ್ ವಿಳಾಸ https://dekalungi.blogspot.com/2018/06/blog-post_73.html
0 Response to "ಮಾವು ಬೆಳೆಗಾರರಿಗೆ ತೋಟಗಾರಿಕೆ ಇಲಾಖೆಯಿಂದ ಉಪಯುಕ್ತ ಸಲಹೆಗಳು"
ಕಾಮೆಂಟ್ ಪೋಸ್ಟ್ ಮಾಡಿ