ಶೀರ್ಷಿಕೆ : ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ಸಪ್ತಾಹ
ಲಿಂಕ್ : ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ಸಪ್ತಾಹ
ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ಸಪ್ತಾಹ
ಕೊಪ್ಪಳ ಜೂ. 30 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳ ಕಾರ್ಯಾಲಯ ಹಾಗೂ ವಿವಿಧ ಸ್ವಯಂಸೇವಾ ಸಂಸ್ಥೆಗಳ ಸಹಯೋಗದಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ಸಪ್ತಾಹ ಕೊಪ್ಪಳ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ವ್ಯಸನ (ಅಡಿಕ್ಷನ್) ಎನ್ನುವುದು ಒಂದು ಸಂಕೀರ್ಣವಾದ ಸಮಸ್ಯೆ. ವ್ಯಸನವು ಜೀವ-ವಿಜ್ಞಾನಕ್ಕೆ ಸಂಬಂಧಿಸಿದ ಮೆದುಳಿನ ಅಸ್ವಸ್ಥತೆ ಇದರ ಮೇಲೆ ಮಾನಸಿಕ ಹಾಗೂ ಸಾಮಾಜಿಕ ಅಂಶಗಳ ಪ್ರಭಾವ ಇರುತ್ತದೆ. ತಾತ್ಕಾಲಿಕ ಆನಂದ ನೀಡುವ ಮಾದಕ-ದ್ರವ್ಯಗಳಾದ ಮದ್ಯ, ಸಿಗರೇಟ್, ಡ್ರಗ್ ಇತ್ಯಾದಿಗಳ ಅವಲಂಬನೆಗೆ ಒಳಗಾಗುವುದನ್ನು ವ್ಯಸನ ಎನ್ನಬಹುದು. ಇದು ದೈಹಿಕ ಮಾನಸಿಕ ಹಾಗೂ ಸಾಮಾಜಿಕ ಅಂಗಗಳಲ್ಲಿ ವರ್ಗೀಕರಿಸಬಹುದು. ಕಾನೂನು ಬದ್ಧ ಮಾದಕ ವಸ್ತುಗಳು-ಮದ್ಯ ಮತ್ತು ತಂಬಾಕು ಸಿಗರೇಟ್, ಅಕ್ರಮ ಮಾದಕ ವಸ್ತಗಳು ಮತ್ತು ವಿನೋದ ಉಂಟು ಮಾಡುವ ಡ್ರಗ್ಸ್, ಅಂಗಡಿಗಳಲ್ಲಿ ದೊರೆಯುವ ಅಥವಾ ವೈದ್ಯರು ಸೂಚಿಸಿದ ಔಷಧಗಳು.
ಮಾದಕ ದ್ರವ್ಯ ವ್ಯಸನ ಡ್ರಗ್ ಅಡಿಕ್ಷನ್ :
*********** ಧೂಮಪಾನ ಗಾಂಜಾ ಮುಂತಾದವುಗಳನ್ನು ಸೇವಿಸುವುದು, ಇಂಜೆಕ್ಷನ್ ಚುಚ್ಚಿಕೊಳ್ಳುವುದು, ಜಗಿಯುವುದು ಮತ್ತು ಕುಡಿಯುವುದು ಮುಂತಾಗಿ ಅನೇಕ ವಿಧದಲ್ಲಿ ಮಾದಕ ದ್ಯವ್ಯಗಳನ್ನು ಬಳಸಲಾಗುತ್ತದೆ. ಇದನ್ನು ಸೇವಿಸಿದರೆ ಮಾತ್ರ ಸ್ವಾಭಾವಿಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಈ ವ್ಯಸನಕ್ಕೆ ದಾಸರಾದವರು ಭಾವಿಸಿರುತ್ತಾರೆ ಅವರ ಹೊರತಾಗಿ ಬದುಕಲು ಸಾಧ್ಯವೇ ಇಲ್ಲ ಎಂಬಷ್ಟು ಆ ಚಟಕ್ಕೆ ಅವಲಂಭಿತರಾಗಿರುತ್ತಾರೆ. ಮಾದಕ-ವ್ಯಸನವು ಗಂಭೀರವಾದ ಭಾವನಾತ್ಮಕ ದೈಹಿಕ ಮತ್ತು ಸಾಮಾಜಿಕ ಸಂಬಂಧಗಳ ಸಮಸ್ಯೆಗಳಿಗೆ ಕಾರಣವಾಗಬಹುದು. ಒತ್ತಾಯಕ್ಕೋ, ಶೈಕ್ಷಣಿಕ ಅಥವಾ ಕ್ರೀಡೆಯಲ್ಲಿ ಹೆಚ್ಚಿನ ಸಾಧನೆ ಮಾಡಬೇಕೆಂಬ ಒಲವಿನಿಂದಲೋ ಅಥವಾ ಅವರಲ್ಲಿನ ಒತ್ತಡ ಹಾಗೂ ಸಮಸ್ಯೆಗಳನ್ನು ದುರೆಯಲೆಂದೋ ಮಾದಕ-ದ್ರವ್ಯಗಳನ್ನು ಉಪಯೋಗಿಸಲು ಪ್ರಾರಂಭಿಸುತ್ತಾರೆ.
ಕ್ರಮೇಣ ಡ್ರಗ್ಸ್ ಬಳಕೆಯಿಂದ ಮಿದುಳಿನಲ್ಲಿ ಬದಲಾವಣೆ ಉಂಟಾಗಿ ವ್ಯಕ್ತಿಗಳು ಮಾದಕ-ವಸ್ತುಗಳನ್ನು ಹೆಚ್ಚು ಹೆಚ್ಚು ಬಯಸುವಂತೆ ಮಾಡುತ್ತದೆ. ಅಂತಹವರು ಅದರ ಸೇವನೆಯನ್ನು ನಿಯಂತ್ರಣ ಮಾಡಲಾಗದೆ ಹೋಗುತ್ತಾರೆ. ವ್ಯಕ್ತಿಗಳು ಅವರ ಮನೋಸಾಮಥ್ಯ ಕಳೆದುಕೊಳ್ಳುತ್ತಾರೆ. ಆ ಹವ್ಯಾಸದಿಂದ ಹೊರಬರಬೇಕೆಂದು ನಿಜವಾಗಿ ಬಯಸಿದರೂ ಸಾಧ್ಯವಾಗದೇ ಮತ್ತೆ ಮತ್ತೆ ಅದರೆಡೆಗೆ ಆಕರ್ಷಿತರಾಗುತ್ತಾರೆ. ದೀರ್ಘಕಾಲದ ಡ್ರಗ್ಸ್ ಸೇವನೆಯಿಂದ ಮಿದುಳಿನ ಕ್ರಿಯೆಗಳಾದ ಕಲಿಕೆ, ತೀರ್ಪು, ನಿರ್ಧಾರ, ವರ್ತನೆ, ನಿಯಂತ್ರಣ ಮುಂತಾದವುಗಳ ನಿರ್ವಹಣೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರೊಂದಿಗೆ ವ್ಯಕ್ತಿಗಳು ಕಾಲಕ್ರಮೇಣ ದುರ್ಬಲರಾಗಿ ಖಿನ್ನತೆ ಮತ್ತು ಬೇರೆ ರೀತಿಯ ಮಾನಸಿಕ ಅಸ್ವಸ್ಥತೆಗೆ ಒಳಗಾಗುತ್ತಾರೆ.
ಮದ್ಯಪಾನ-ದುರಾಚಾರ :
********* ಮದ್ಯಪಾನ-ದುರಾಚಾರ ಅಥವಾ ಆಲ್ಕೋಹಾಲ್ ಆಬ್ಯೂಸ್ ಯಾವ ವ್ಯಕ್ತಿಗೆ ಕುಡಿತವನ್ನು ಒಮ್ಮೆ ಆರಂಭಿಸಿದರೆ ಮತ್ತೆ ನಿಲ್ಲಿಸಲು ಆಗುವುದಿಲ್ಲವೋ ಅವರನ್ನು ಕುಡಿತದ ಚಟದಿಂದ ನರಳುತ್ತಿರುವವರು ಎಂದು ಹೇಳಲಾಗುತ್ತದೆ. ಭಾರತದಲ್ಲಿ 30% ಪುರುಷರು ಮತ್ತು ಮಹಿಳೆಯರು ನಿರಂತರಾಗಿ ಮದ್ಯಪಾನ ಮಾಡುತ್ತಾರೆಂದು ಅಂದಾಜಿಸಲಾಗಿದೆ. ಅಧ್ಯಯನವೊಂದರ ಪ್ರಕಾರ 1980ರ ದಶಕದಲ್ಲಿ ಮೊದಲಬಾರಿಗೆ ಕುಡಿತ ಪ್ರಾರಂಭಿಸುವುದರ ವಯಸ್ಸು ಸರಾಸರಿ 28 ವರ್ಷ ಆಗಿತ್ತು. ಈಗ ಇದು 17 ವರ್ಷಕ್ಕೆ ಬಂದಿಳಿದಿದೆ.
ವಾಸ್ತವಾಂಶಗಳು :
******** ಮದ್ಯ-ವ್ಯಸನದ ಕುರಿತಾದ ಕೆಲವು ವಾಸ್ತವಾಂಶಗಳು ಇಂತಿವೆ. ಮದ್ಯ ಸೇವಿಸುವ ಪ್ರತಿ ಇಬ್ಬರಲ್ಲಿ ಒಬ್ಬನು ತೀವ್ರವಾಗಿ ಆ ವ್ಯಸನಕ್ಕೆ ಬಲಿಬೀಳುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂ.ಹೆಚ್.ಓ) ಅಂದಾಜಿಸಿದೆ. ಮದ್ಯ ಸೇವಿಸುವ ವ್ಯಕ್ತಿಗಳು ಮದ್ಯ ಸೇವಿಸದ ವ್ಯಕ್ತಿಗಳಿಗಿಂತ ಮೂರು ಪಟ್ಟು ಹೆಚ್ಚು ಗಂಭೀರ ಅನಾರೋಗ್ಯಕ್ಕೊಳಗಾಗುವ ಸಾಧ್ಯತೆಯಿದೆ. ಭಾರತದ ಆಸ್ಪತ್ರೆಗಳಲ್ಲಿ ದಾಖಲಾಗುವ ಪ್ರತಿ ಐದು ರೋಗಿಗಳಲ್ಲಿ ಒಬ್ಬರು ನೇರವಾಗಿ ಮದ್ಯವ್ಯಸನಕ್ಕೆ ಸಂಬಂಧಿಸಿದವರಾಗಿರುತ್ತಾರೆ. ಮದ್ಯ ಸೇವನೆ ಮಾಡುವವರು ಹಿಂಸೆಗಳಲ್ಲಿ ತೊಡಗುವ ಸಾಧ್ಯತೆ ಹೆಚ್ಚು. ಅದರಲ್ಲೂ ಅವರ ಸಂಗಾತಿಗಳೊಂದಿಗೆ ಅಸಾಧ್ಯತೆ ಅಧಿಕ. ಈ ರೀತಿಯ ಹಿಂಸೆಯು ದೈಹಿಕವಾಗಿ, ಮಾನಸಿಕವಾಗಿ, ಲೈಂಗಿಕವಾಗಿ ಅಥವಾ ಆರ್ಥಿಕವಾಗಿಯೂ ಕೂಡ ನಡೆಯಬಹುದು. ಮದ್ಯಪಾನ ವ್ಯಸನಕ್ಕೆ ದಾಸರಾದವರು ಆತ್ಮಹತ್ಯೆ ಪ್ರಯತ್ನ ಮಾಡಬಹುದು. ಅಪಾಯಕಾರಿಯಾದ ಲೈಂಗಿಕ ವರ್ತನೆ ತೋರಬಹುದು ಅಥವಾ ಹೆಚ್.ಐ.ವಿ. ಸೋಂಕು, ಕ್ಷಯ, ಅನ್ನನಾಳದ ಕ್ಯಾನ್ಸರ್ (ಫುಡ್ ಪೈಪ್ ಕ್ಯಾನ್ಸರ್), ಲಿವರ ಸಮಸ್ಯೆ ಮತ್ತು ಕರುಳಿನ ಹಣ್ಣುಗಳಿಗೆ ಒಳಗಾಗಬಹುದು.
ವ್ಯಸನಕ್ಕೆ ಚಿಕಿತ್ಸೆ :
******** ಆಪ್ತ-ಸಮಾಲೋಚನೆ (ಕೌಂಸಿಲ್ಲಿಂಗ್) ಪಡೆದು ವ್ಯಸನದಿಂದ ಮುಕ್ತರಾಗಬಹುದು. ಮದ್ಯ ಸೇವನೆಯಿಂದ ಹೊರಬರುವ ಮೊದಲು ಹೆಜ್ಜೆಯೆಂದರೆ ನಿಮಗೆ ತೊಂದರೆಯಿದೆ ಎನ್ನುವುದನ್ನು ಒಪ್ಪಿಕೊಳ್ಳುವುದು ಮತ್ತು ಸಹಾಯ ಪಡೆಯುವುದು ವ್ಯಸನವು ಮಧುಮೇಹ ಅಥವಾ ಅಧಿಕರಕ್ತದೊತ್ತಡದಂತೆ ನಿರತರವಾಗಿ ಕಾಡುವ, ಮತ್ತೆ ಮತ್ತೆ ಮರುಕಳಿಸಬಹುದಾದ ಅಸ್ವಸ್ಥತೆ ಚಿಕಿತ್ಸೆಯ ನಂತರ ವ್ಯಸನ ಮರುಕಳಿಸತು ಎಂದರೆ ಚಿಕಿತ್ಸೆ ವಿಫಲಾಯಿತೆಂದಲ್ಲ ಬದಲಾಗಿ, ಆ ವ್ಯಕ್ತಿಗೆ ಮಾದಕ ವಸ್ತುವಿನ ವ್ಯಸನದಿಂದ ಹೊರಬರಲು ಹೆಚ್ಚಿನ ಸಹಾಯದ ಅಗತ್ಯವಿದೆ ಎಂದರ್ಥ. ಮದ್ಯವ್ಯಸನದ ಚಿಕಿತ್ಸೆ ಗುರಿಗಳು, ರೋಗಿಯು ಮದ್ಯವನ್ನು ಬಳಸದಂತೆ ತಡೆಯುವುದು ಮತ್ತು ಮದ್ಯಮುಕ್ತವಾದ, ಅವರು ಇಚ್ಛಿಸಿದ ಹೊಸ ಜೀವನ ಶೈಲಿಯನ್ನು ರೂಪಿಸಿಕೊಳ್ಳಲು ಸಹಾಯ ಮಾಡಬಹುದು.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ ಅಥವಾ ಆರೋಗ್ಯ ಸಹಾಯವಾಣಿ 104 ಕ್ಕೆ ಕರೆ ಮಾಡಬಹುದಾಗಿದೆ ಎಂದು ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಹೀಗಾಗಿ ಲೇಖನಗಳು ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ಸಪ್ತಾಹ
ಎಲ್ಲಾ ಲೇಖನಗಳು ಆಗಿದೆ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ಸಪ್ತಾಹ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ಸಪ್ತಾಹ ಲಿಂಕ್ ವಿಳಾಸ https://dekalungi.blogspot.com/2018/06/blog-post_16.html
0 Response to "ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ಸಪ್ತಾಹ"
ಕಾಮೆಂಟ್ ಪೋಸ್ಟ್ ಮಾಡಿ