ಶೀರ್ಷಿಕೆ : ವಿಧಾನ ಪರಿಷತ್ ಚುನಾವಣೆ : ಮತದಾನ ಹೀಗೆ ಮಾಡಿ
ಲಿಂಕ್ : ವಿಧಾನ ಪರಿಷತ್ ಚುನಾವಣೆ : ಮತದಾನ ಹೀಗೆ ಮಾಡಿ
ವಿಧಾನ ಪರಿಷತ್ ಚುನಾವಣೆ : ಮತದಾನ ಹೀಗೆ ಮಾಡಿ
ಕೊಪ್ಪಳ ಜೂ. 07 (ಕರ್ನಾಟಕ ವಾರ್ತೆ): ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಪದವಿಧರ ಕ್ಷೇತ್ರದ ಚುನಾವಣೆ ಅಂಗವಾಗಿ ಜೂ. 08 ರಂದು ಬೆಳಿಗ್ಗೆ 08 ರಿಂದ ಸಂಜೆ 05 ಗಂಟೆಯವರೆಗೆ ಮತದಾನ ನಡೆಯಲಿದ್ದು, ಈ ಚುನಾವಣೆಯಲ್ಲಿ ಮತದಾರರು ತಮ್ಮ ಮತ ಚಲಾಯಿಸುವ ಬಗೆಯನ್ನು ತಿಳಿಸಲಾಗಿದೆ.
ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಪದವಿಧರ ಕ್ಷೇತ್ರದ ಚುನಾವಣೆಯಲ್ಲಿ ಮತದಾನವು ವಿಧಾನಸಭೆ ಚುನಾವಣೆಗಿಂತ ಭಿನ್ನವಾಗಿದೆ. ಮತದಾನ ಮಾಡುವ ಸಮಯದಲ್ಲಿ ಮತದಾರರು ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳು ಇಂತಿವೆ.
ವಿ.ಪ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರನೂ ಸ್ಪರ್ಧಿಸಿರುವಷ್ಟು ಅಭ್ಯರ್ಥಿಗಳಿಗೆ ಆದ್ಯತಾನುಸಾರ ಮತ ನೀಡಬಹುದು. ಅಂತರಾಷ್ಟ್ರೀಯ ರೂಪದಲ್ಲಿರುವ ಭಾರತೀಯ ಅಂಕಿಗಳಲ್ಲಿ (ಅಂದರೆ ಇಂಗ್ಲೀಷ್ ಅಂಕಿಗಳಲ್ಲಿ 1,2,3,4,...) ಅಥವಾ ರೋಮನ್ ಹಾಗೂ ಯಾವುದೇ ಭಾರತೀಯ ಭಾಷೆಯಲ್ಲಿ ಉಪಯೋಗಿಸುತ್ತಿರುವ ಅಂಕಿಗಳಲ್ಲಿ (1,2,3,4,...) ಎಂಬುದಾಗಿ ಆದ್ಯತೆಯ ಮತವನ್ನು ಸಂಖ್ಯೆಯಲ್ಲಿ ನಮೂದಿಸುವ ಮೂಲಕ ಮಾತ್ರವೇ ಗುರುತು ಮಾಡಬೇಕು. ಆದರೆ ಪದಗಳನ್ನಾಗಲೀ ಅಥವಾ (X) ಅಥವಾ (✔) ಇತ್ಯಾದಿ ಗುರುತುಗಳನ್ನಾಗಲೀ ಉಪಯೋಸಬಾರದು. ಗುರುತುಗಳನ್ನು ಅಭ್ಯರ್ಥಿಗಳ ಹೆಸರುಗಳ ಎದುರು ಇರುವ ಅಂಕಣಗಳಲ್ಲಿಯೇ ಮಾಡಬೇಕು. ಅಂಕಣದ ಹೊರಗಡೆ ಅಥವಾ ಎರಡು ಅಂಕಣಗಳ ನಡೆವೆ ಗುರುತು ಮಾಡಿದರೆ ಅದನ್ನು ಕುಲಗೆಟ್ಟ ಮತವೆಂದು ಪರಿಗಣಿಸಲಾಗುವುದು. ಮೊದಲ ಆದ್ಯತೆ ಮತವನ್ನು ಗುರುತು ಮಾಡುವುದು ಅತ್ಯಗತ್ಯ. ಇಲ್ಲದಿದ್ದರೆ ಮತಪತ್ರವನ್ನು ತಿರಸ್ಕರಿಸಲಾಗುವುದು. ಮೊದಲ ಆದ್ಯತೆ ಮತವನ್ನು ನೀಡಿದ ಮೇಲೆ, ಮುಂದಿನ ಆದ್ಯತೆ ಮತಕ್ಕೆ ಗುರುತು ಮಾಡುವುದು ಮತದಾರರ ಇಚ್ಛೆಗೆ ಅನುಸಾರವಾಗಿರುತ್ತದೆ. ಆದರೆ ಮತದಾರನ ಆದ್ಯತಾನುಸಾರ ಕ್ರಮ ಸಂಖ್ಯೆ ಮುಂದುವರಿದಿರಬೇಕು. ಕ್ರಮ ಸಂಖ್ಯೆಯು ತಪ್ಪಿ ಹೋದಲ್ಲಿ ಮುಂದಿನ ಆದ್ಯತಾ ಮತಗಳು ಕುಲಗೆಟ್ಟ ಮತಗಳಾಗುವುವು. ಅಭ್ಯರ್ಥಿಯ ಹೆಸರಿನ ಎದುರುಗಡೆಯಲ್ಲಿ ಒಂದಕ್ಕಿಂತ ಹೆಚ್ಚಿನ ಅಂಕಿಯನ್ನು ಗುರುತು ಮಾಡಬೇಡಿ ಅಥವಾ ಯಾವುದೇ ಇತರ ಗುರುತನ್ನು ಮಾಡಬೇಡಿ ಮತ್ತು ಒಬ್ಬ ಅಭ್ಯರ್ಥಿಗಿಂತಲೂ ಹೆಚ್ಚಿನ ಹೆಸರುಗಳ ಎದುರುಗಡೆ ಅದೇ ಅಂಕಿಯನ್ನು ಗುರುತು ಮಾಡಬೇಡಿ.
ಮತ ಚಲಾಯಿಸುವ ಉದ್ದೇಶಕ್ಕಾಗಿ ಮತಗಟ್ಟೆ ಅಧಿಕಾರಿಯು ಮತಪತ್ರದೊಡನೆ ನೀಡುವ ನೇರಳೆ ಬಣ್ಣದ ಸ್ಕೆಚ್ ಪೆನ್ನನ್ನು ಮಾತ್ರ ಬಳಸಿ ಮತ ಚಲಾಯಿಸಬೇಕು. ಬೇರೆ ಯಾವುದೇ ಪೆನ್ನು, ಪೆನ್ಸಿಲ್, ಬಾಲ್ ಪಾಯಿಂಟ್ ಪೆನ್ನು ಅಥವಾ ಗುರುತು ಮಾಡುವ ಯಾವುದೇ ಇತರೆ ಸಾಧನವನ್ನು ಬಳಸಿ ಮತ ಚಲಾಯಿಸಿದರೆ ಅಂತಹ ಮತವನ್ನು ಅಸಿಂಧು ಎಂದು ಪರಿಗಣಿಸಲಾಗುವುದು ಎಂದು ಈಶಾನ್ಯ ಪದವಿಧರ ಮತ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ವಿಧಾನ ಪರಿಷತ್ ಚುನಾವಣೆ : ಮತದಾನ ಹೀಗೆ ಮಾಡಿ
ಎಲ್ಲಾ ಲೇಖನಗಳು ಆಗಿದೆ ವಿಧಾನ ಪರಿಷತ್ ಚುನಾವಣೆ : ಮತದಾನ ಹೀಗೆ ಮಾಡಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ವಿಧಾನ ಪರಿಷತ್ ಚುನಾವಣೆ : ಮತದಾನ ಹೀಗೆ ಮಾಡಿ ಲಿಂಕ್ ವಿಳಾಸ https://dekalungi.blogspot.com/2018/06/blog-post_68.html
0 Response to "ವಿಧಾನ ಪರಿಷತ್ ಚುನಾವಣೆ : ಮತದಾನ ಹೀಗೆ ಮಾಡಿ"
ಕಾಮೆಂಟ್ ಪೋಸ್ಟ್ ಮಾಡಿ