NEWS AND PHOTO DATE: 7--6--2018

NEWS AND PHOTO DATE: 7--6--2018 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು NEWS AND PHOTO DATE: 7--6--2018, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : NEWS AND PHOTO DATE: 7--6--2018
ಲಿಂಕ್ : NEWS AND PHOTO DATE: 7--6--2018

ಓದಿ


NEWS AND PHOTO DATE: 7--6--2018

ಪ್ರಾದೇಶಿಕ ಆಯುಕ್ತರಿಂದ ಮತ ಎಣಿಕೆ ಕೇಂದ್ರದ ಸಿದ್ಧತೆ ಪರಿಶೀಲನೆ
************************************************************
ಕಲಬುರಗಿ,ಜೂ.07.(ಕ.ವಾ.)-ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಪಂಕಜಕುಮಾರ ಪಾಂಡೆ ಅವರು ಗುರುವಾರ ಗುಲಬರ್ಗಾ ವಿಶ್ವವಿದ್ಯಾಲಯದ ಗಣಿತ ವಿಭಾಗಕ್ಕೆ ಭೇಟಿ ನೀಡಿ ಮತ ಎಣಿಕೆ ಕೇಂದ್ರದ ಸಿದ್ಧತೆಗಳನ್ನು ಪರಿಶೀಲಿಸಿದರು.
ಈಶಾನ್ಯ ಪದವೀಧರರ ಮತಕ್ಷೇತ್ರದ ಚುನಾವಣೆಯ ಮತ ಎಣಿಕೆಯು ಗುಲಬರ್ಗಾ ವಿಶ್ವವಿದ್ಯಾಲಯದ ಗಣಿತ ವಿಭಾಗದಲ್ಲಿ ಜೂನ್ 12ರಂದು ಬೆಳಿಗ್ಗೆ 8 ಗಂಟೆಯಿಂದ ನಡೆಯಲಿದೆ. ಮತ ಎಣಿಕೆಯು ಸರಾಗವಾಗಿ ನಡೆಯುವ ಹಾಗೆ ಹಾಗೂ ವಿವಿಧ ಪಕ್ಷಗಳ ಏಜೆಂಟರಿಗೆ ಮತಪತ್ರಗಳನ್ನು ವೀಕ್ಷಿಸಲು ಅನುಕೂಲವಾಗುವ ಹಾಗೆ ಸಿದ್ಧತೆಗಳನ್ನು ಮಾಡಿಕೊಳ್ಳಲು ತಿಳಿಸಿದರು.
ಮತ ಎಣಿಕೆಯು ಪ್ರಾಶಸ್ತ್ಯದ ಮತಗಳನ್ನು ಎಣಿಸುವ ಮೂಲಕ ಕೈಗೊಳ್ಳಬೇಕಾಗಿರುವುದರಿಂದ ಮತಎಣಿಕೆ ಕೇಂದ್ರದಲ್ಲಿ 14 ಟೇಬಲ್‍ಗಳ ವ್ಯವಸ್ಥೆ ಮಾಡಿ ಮತಪತ್ರಗಳನ್ನು ಸಂಗ್ರಹಿಸಲು ಪ್ರತಿ ಟೇಬಲ್‍ಗೆ 13 ಬಾಕ್ಸ್‍ಗಳ ವ್ಯವಸ್ಥೆ ಮಾಡಬೇಕು. ಮತ ಎಣಿಕೆಯಲ್ಲಿ ಯಾವುದೇ ಗೊಂದಲ ಸೃಷ್ಟಿಯಾಗದಂತೆ ನೋಡಿಕೊಳ್ಳಬೇಕೆಂದು ಸೂಚಿಸಿದರು.
ಜೂನ್ 8ರಂದು ನಡೆಯುವ ಮತದಾನದ ನಂತರ ಮತಪಟ್ಟಿಗೆಗಳನ್ನು ಭದ್ರವಾಗಿ ಸಂಗ್ರಹಿಸಲು ಭದ್ರತಾ ಕೋಣೆ ಪರಿಶೀಲಿಸಿ ಕೋಣೆಯಲ್ಲಿ ಮತಪೆಟ್ಟಿಗೆಗಳ ಸುಲಭ ಸಂಗ್ರಹಣೆಗೆ ಅನುಕೂಲವಾಗುವ ಹಾಗೆ ನಂಬರಗಳನ್ನು ನಮೂದಿಸಲು ತಿಳಿಸಿದರು.
ಈ ಸಂದರ್ಭದಲ್ಲಿ ಚುನಾವಣಾ ವೀಕ್ಷಕರು ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತೆ ಡಾ. ಎನ್. ಮಂಜುಳಾ, ಈಶಾನ್ಯ ಪದವೀಧರ ಮತಕ್ಷೇತ್ರ ಸಹಾಯಕ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ, ಅಪರ ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮ್, ಕಲಬುರಗಿ ಎ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಲೋಕೇಶ, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಕಲಬುರಗಿ ಸಹಾಯಕ ಆಯುಕ್ತ ಉಮೇಶಚಂದ್ರ, ಶಿಷ್ಟಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಜೀಜುದ್ದೀನ್, ಎನ್.ಐ.ಸಿ.ಅಧಿಕಾರಿ ಸುಧೀಂದ್ರ ಅವದಾನಿ, ಗುಲಬರ್ಗಾ ವಿಶ್ವವಿದ್ಯಾಲಯದ ರಜಿಸ್ಟ್ರಾರ್ ಪ್ರೊ. ದಯಾನಂದ ಅಗಸರ ಸೇರಿದಂತೆ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.
ಈಶಾನ್ಯ ಪದವೀಧರರ ಮತಕ್ಷೇತ್ರದ ಚುನಾವಣೆ: ಮದ್ಯ ಮಾರಾಟ ನಿಷೇಧ
*****************************************************************
ಕಲಬುರಗಿ,ಜೂ.07.(ಕ.ವಾ.)-ಕರ್ನಾಟಕ ಈಶಾನ್ಯ ಪದವೀಧರರ ಮತಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಇದೇ ಜೂನ್ 8ರಂದು ನಡೆಯುವ ಮತದಾನದ ಪ್ರಯುಕ್ತ ಜೂನ್ 6ರ ಸಾಯಂಕಾಲ 5 ಗಂಟೆಯಿಂದ ಜೂನ್ 8ರ ಮಧ್ಯರಾತ್ರಿಯವರೆಗೆ ಕಲಬುರಗಿ ಜಿಲ್ಲೆಯಾದ್ಯಂತ ಎಲ್ಲ ತರಹದ ಮದ್ಯಪಾನ ಹಾಗೂ ಮದ್ಯದ ವಹಿವಾಟುಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಅವರು ಆದೇಶ ಹೊರಡಿಸಿದ್ದಾರೆ.
ಚುನಾವಣೆಯು ಮುಕ್ತ ಹಾಗೂ ನಿಸ್ಪಕ್ಷಪಾತವಾಗಿ ನಡೆಸಲು ಹಾಗೂ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಕಲಬುರಗಿ ಜಿಲ್ಲೆಯಾದ್ಯಂತ ಎಲ್ಲ ತರಹದ ಮದ್ಯ, ಸರಾಯಿ, ಸೇಂದಿ, ಸ್ವದೇಶಿ ಹಾಗೂ ವಿದೇಶಿ ಮದ್ಯ ಹಾಗೂ ಎಲ್ಲ ತರಹದ ಮಾದಕ ವಸ್ತುಗಳ ಮಾರಾಟವನ್ನು ನಿಷೇಧಿಸಲಾಗಿದೆ.
ಕಲಬುರಗಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪ್ರಜಾ ಪ್ರತಿನಿಧ್ಯ ಕಾಯ್ದೆ 1951ರ ಕಲಂ 135ಸಿ ರಂತೆ ಹಾಗೂ ಕರ್ನಾಟಕ ಅಬಕಾರಿ ಸನ್ನದುಗಳು (ಸಾಮಾನ್ಯ ಷರತ್ತುಗಳು) ನಿಯಮಗಳು 1967ರ ನಿಯಮ-10(ಬಿ) ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಮದ್ಯಮಾರಾಟ ನಿಷೇಧ ಆದೇಶ ಹೊರಡಿಸಲಾಗಿದೆ.
ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಬಸ್‍ಪಾಸ್ ವಿತರಣಾ ವ್ಯವಸ್ಥೆ
***********************************************************
ಕಲಬುರಗಿ,ಜೂ.07.(ಕ.ವಾ.)-ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆ ಕಲಬುರಗಿ ವಿಭಾಗ-1ರಿಂದ 2018-19ನೇ ಸಾಲಿನ ಶೈಕ್ಷಣಿಕ ಅವಧಿಗೆ ಶಾಲಾ/ಕಾಲೇಜಿನ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಬಸ್‍ಪಾಸ್ ವಿತರಿಸಲಾಗುತ್ತಿದೆ. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕಲಬುರಗಿ ವಿಭಾಗ-1ರ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಸ್ಥೆಯಿಂದ ಬಸ್‍ಪಾಸ್ ಅರ್ಜಿಗಳನ್ನು ಆಯಾ ಶಾಲಾ-ಕಾಲೇಜುಗಳಿಗೆ ನೀಡಲಾಗುವುದು. ಅರ್ಜಿಗಳನ್ನು ಶಾಲಾ/ಕಾಲೇಜಿನ ಅಡಳಿತ ವರ್ಗ ವಿದ್ಯಾರ್ಥಿಗಳಿಗೆ ವಿತರಿಸಿ ಭರ್ತಿ ಮಾಡಿದ ಅರ್ಜಗಳನ್ನು ಬಸ್ ಪಾಸ್ ದರದೊಂದಿಗೆ ವಿದ್ಯಾರ್ಥಿಗಳಿಂದ ಸಂಗ್ರಹಿಸಿ ಸಂಸ್ಥೆಯ ಬಸ್ ವಿತರಣಾ ಕೌಂಟರಿಗೆ ನೀಡಿದಲ್ಲಿ ಕೂಡಲೇ ವಿದ್ಯಾರ್ಥಿಗಳಿಗೆ ಬಸ್‍ಪಾಸ್‍ಗಳನ್ನು ವಿತರಿಸಲಾಗುವುದು.
ಬಸ್‍ಪಾಸ್ ದರದ ವಿವರ ಇಂತಿದೆ. 7ನೇ ತರಗತಿವರೆಗಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ 150ರೂ., ಹೈಸ್ಕೂಲ್ ವಿದ್ಯಾರ್ಥಿಗಳಿಗೆ 750ರೂ., ಹೈಸ್ಕೂಲ್ ವಿದ್ಯಾರ್ಥಿನಿಯರಿಗೆ 550ರೂ., ಪಿಯುಸಿ ಪ್ರಥಮ, ದ್ವಿತೀಯ ಮತ್ತು ಎಂ.ಎ., ಎಂ.ಎಸ್.ಸಿ., ಎಂ.ಕಾಂ. ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳಿಗೆ 1050ರೂ., ವೃತ್ತಿಪರ ಕೋಸ್, ವೈದ್ಯಕೀಯ, ಇಂಜನಿಯರಿಂಗ್, ಇತರೆ ವಿದ್ಯಾರ್ಥಿಗಳಿಗೆ, ಬಿ.ಇಡಿ ಮತ್ತು ಡಿ.ಇಡಿ. ವಿದ್ಯಾರ್ಥಿಗಳಿಗೆ 1550ರೂ., ಸಂಜೆ ಕಾಲೇಜು ಮತ್ತು ಪಿಹೆಚ್.ಡಿ. ವಿದ್ಯಾರ್ಥಿಗಳಿಗೆ 1350 ರೂ. ಬಸ್‍ಪಾಸ್ ದರ ನಿಗದಿಪಡಿಸಲಾಗಿದೆ.
ಬಸ್‍ಪಾಸ್ ವಿತರಣೆ ಮಾಡುವ ಕೌಂಟರಿನ ಸ್ಥಳಗಳ ವಿವರ: ಸುಪರ್ ಮಾರ್ಕೇಟ್ ಬಸ್‍ನಿಲ್ದಾಣ, ಸೇಡಂ ರಿಂಗ್ ರೋಡ್, ರಾಷ್ಟ್ರಪತಿ ವೃತ್ತ, ರಾಮಮಂದಿರ ಬಸ್‍ನಿಲ್ದಾಣ, ಎಸ್.ಟಿ.ಬಿ.ಟಿ. ಬಸ್‍ನಿಲ್ದಾಣ, ರೈಲ್ವೆ ಸ್ಟೇಶನ್ ಬಸ್‍ನಿಲ್ದಾಣ, ಹುಮನಾಬಾದ್ ರಿಂಗ್ ರೋಡ ಬಸ್‍ನಿಲ್ದಾಣ, ಗುಲಬರ್ಗಾ ವಿಶ್ವವಿದ್ಯಾಲಯ ಬಸ್‍ನಿಲ್ದಾಣ, ಮಹಾಗಾಂವ ಕ್ರಾಸ್, ಕಮಲಾಪುರ, ಸೇಡಂ, ಮುಧೋಳ, ಮಳಖೇಡ, ಚಿಂಚೋಳಿ, ಸುಲೇಪೇಟ್, ಚಿತ್ತಾಪುರ, ಶಾಹಬಾದ್, ಕಾಳಗಿ, ಚಿಮ್ಮನಚೋಡ್, ವಾಡಿ, ಎಂ.ಎಸ್.ಕೆ.ಮಿಲ್ ಬಸ್‍ನಿಲ್ದಾಣ.
ವಿಜ್ಞಾನೇಶ್ವರ ಸರ್ಕಾರಿ ಕಾನೂನು ಕಾಲೇಜಿನ ಪ್ರವೇಶ ಪ್ರಕ್ರಿಯೆ ಪ್ರಾರಂಭ
***************************************************************
ಕಲಬುರಗಿ,ಜೂ.07.(ಕ.ವಾ.)-ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿರುವ ಮರತೂರ ವಿಜ್ಞಾನೇಶ್ವರ ಸರ್ಕಾರಿ ಕಾನೂನು ಕಾಲೇಜಿನಲ್ಲಿ 2018-19ನೇ ಸಾಲಿನ ಶೈಕ್ಷಣಿಕ ವರ್ಷದ ಐದು ವರ್ಷದ ಬಿ.ಎ.-ಎಲ್.ಎಲ್.ಬಿ. ಮತ್ತು ಮೂರು ವರ್ಷದ ಎಲ್.ಎಲ್.ಬಿ. ಕಾನೂನು ಪದವಿಗಳ ಪ್ರವೇಶ ಪ್ರಕ್ರಿಯೆಯು ಈಗಾಗಲೇ ಪ್ರಾರಂಭವಾಗಿದೆ ಎಂದು ವಿಜ್ಞಾನೇಶ್ವರ ಸರ್ಕಾರಿ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ. ಶಿವಾನಂದ ಎಚ್. ಲೇಂಗಟಿ ಅವರು ತಿಳಿಸಿದ್ದಾರೆ.
ಬಿಎ ಮತ್ತು ಎಲ್‍ಎಲ್‍ಬಿ ಕೋರ್ಸಿನ ಅವಧಿ 5 ವರ್ಷವಾಗಿದೆ. ಮೊದಲ ಎರಡು ವರ್ಷ ಕಲಾ ವಿಷಯಗಳಿಗೆ ಸೀಮಿತವಾಗಿದ್ದು, ಕೊನೆಯ 3 ವರ್ಷಗಳು ಕಾನೂನು ವಿಷಯಗಳನ್ನೊಳಗೊಂಡಿದೆ. ಐದು ವರ್ಷದ ಬಿ.ಎ.-ಎಲ್.ಎಲ್.ಬಿ. ಪ್ರವೇಶಕ್ಕಾಗಿ ದ್ವಿತೀಯ ವರ್ಷದ ಪಿ.ಯು.ಸಿ. ಅಥವಾ ತತ್ಸಮಾನದಲ್ಲಿ ಪರೀಕ್ಷೆಯಲ್ಲಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಒಟ್ಟು ಶೇ. 45ರಷ್ಟು ಅಂಕ ಪಡೆದಿರಬೇಕು ಇತರೆ ಹಿಂದುಳಿದ ವರ್ಗದವರು ಶೇ. 42 ರಷ್ಟು ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಶೇ. 40 ರಷ್ಟು ಅಂಕ ಪಡೆದಿರಬೇಕು. ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ವಯೋಮಿತಿ ಗರಿಷ್ಠ 20 ವರ್ಷ. (1998ರ ಮೇ 10ರಂದು ಅಥವಾ ನಂತರ ಜನಿಸಿರಬೇಕು) ಹಾಗೂ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಮತ್ತು ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಗರಿಷ್ಠ 22 ವರ್ಷ (1996 ರ ಮೇ 10ರಂದು ಅಥವಾ ನಂತರ ಜನಿಸಿರಬೇಕು) ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
ಮೂರು ವರ್ಷದ ಎಲ್.ಎಲ್.ಬಿ. ಪ್ರವೇಶಕ್ಕಾಗಿ ಅಂಗೀಕರಿಸಿದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಾಸಾಗಿರಬೇಕು. ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ವಯೋಮಿತಿ ಗರಿಷ್ಠ 30 ವರ್ಷ. (1988ರ ಮೇ 10ರಂದು ಅಥವಾ ನಂತರ ಜನಿಸಿರಬೇಕು) ಹಾಗೂ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಮತ್ತು ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಗರಿಷ್ಠ 35 ವರ್ಷ. (1983 ರ ಮೇ 10 ರಂದು ಅಥವಾ ನಂತರ ಜನಿಸಿರಬೇಕು) ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
ನೇಮಕಾತಿಯಲ್ಲಿ ಸರ್ಕಾರದ ಮೀಸಲಾತಿ ನಿಯಮಗಳನ್ನು ಪಾಲಿಸಲಾಗುವುದು. ಅರ್ಜಿ ನಮೂನೆಗಳನ್ನು ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿರುವ ವಿಜ್ಞಾನೇಶ್ವರ ಸರ್ಕಾರಿ ಕಾನೂನು ಕಾಲೇಜಿನಿಂದ ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲೆಗಳನ್ನು ಲಗತ್ತಿಸಿ ಆಗಸ್ಟ್ 10ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಡಾ. ಶಿವಾನಂದ ಎಚ್. ಲೇಂಗಟಿ ಮೊಬೈಲ್ ಸಂಖ್ಯೆ 9449122506, ಡಾ. ಚತ್ಕಳಾ ಜೆ. ಮಠಪತಿ ಮೊಬೈಲ್ ಸಂಖ್ಯೆ 9448569343 ಹಾಗೂ ಆಶಾ ಆಫ್ರಿನ್ ಮೊಬೈಲ್ ಸಂಖ್ಯೆ 7975365094ನ್ನು ಸಂಪರ್ಕಿಸಲು ಕೋರಲಾಗಿದೆ.
ತೋಟಗಾರಿಕೆ ಕ್ಷೇತ್ರಗಳಲ್ಲಿ ಸಸಿಗಳ ಮಾರಾಟಕ್ಕೆ ಲಭ್ಯ
***********************************************
ಕಲಬುರಗಿ,ಜೂ.07.(ಕ.ವಾ.)-ಕಲಬುರಗಿ ಜಿಲ್ಲೆಯ ವಿವಿಧ ತಾಲೂಕಿನ ತೋಟಗಾರಿಕೆ ಕ್ಷೇತ್ರ/ ನರ್ಸರಿಗಳಲ್ಲಿ ವಿವಿಧ ಕಸಿ/ಸಸಿಗಳು ಮಾರಾಟಕ್ಕೆ ಲಭ್ಯವಿರುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಕಲಬುರಗಿ (ರಾಜ್ಯ ವಲಯ) ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.
ಕ್ಷೇತ್ರದ ಹೆಸರು ಹಾಗೂ ಮಾರಾಟ ಮಾಡುವ ಸಸಿ/ಕಸಿಗಳ ವಿವರ ಇಂತಿದೆ. ಕಲಬುರಗಿ ತಾಲೂಕಿನ ಕಲಬುರಗಿ ಐವಾನ್ ಶಾಹಿ ನರ್ಸಿರಿ ಕ್ಷೇತ್ರದಲ್ಲಿ ದುರಂತ, ಕರಿಬೇವು, ಅಲಂಕಾರಿಕ ಸಸಿಗಳು ಮತ್ತು ನಿಂಬೆ. ಮಾಲಗತ್ತಿ ತೋಟಗಾರಿಕೆ ಕ್ಷೇತ್ರದಲ್ಲಿ ನಿಂಬೆ ಮತ್ತು ಕರಿಬೇವು. ಬಡೆಪುರ ತೋಟಗಾರಿಕೆ ಕ್ಷೇತ್ರದಲ್ಲಿ ಕರಿಬೇವು, ಅಲಂಕಾರಿಕ ಸಸಿಗಳು, ತೆಂಗು, ನಿಂಬೆ, ನುಗ್ಗೆ ಮತ್ತು ಮಾವು. ಹಳ್ಳಿ ಸಲಗರ ತೋಟಗಾರಿಕೆ ಕ್ಷೇತ್ರದಲ್ಲಿ ನಿಂಬೆ ಕಸಿ/ಸಸಿಗಳು ಮಾರಾಟಕ್ಕೆ ಲಭ್ಯವಿರುತ್ತದೆ.
ಅದೇ ರೀತಿ ಕೆಸರಟಗಿ ತೋಟಗಾರಿಕೆ ಕ್ಷೇತ್ರದಲ್ಲಿ ಅಲಂಕಾರಿಕ ಸಸಿಗಳು, ನುಗ್ಗೆ, ಕರಿಬೇವು, ನಿಂಬೆ, ಸಿತಾಫಲ ಮತ್ತು ಮಾವು. ಚಿತ್ತಾಪುರ ತಾಲೂಕಿನ ಚಿತ್ತಾಪುರ ತೋಟಗಾರಿಕೆ ಕ್ಷೇತ್ರದಲ್ಲಿ ನಿಂಬೆ ಮತ್ತು ಕರಿಬೇವು. ಚಿಂಚೋಳಿ ತಾಲೂಕಿನ ಚಂದ್ರಂಪಳ್ಳಿ ತೋಟಗಾರಿಕೆ ಕ್ಷೇತ್ರದಲ್ಲಿ ಮಾವು, ನಿಂಬೆ, ಸೀಬೆ, ಕರಿಬೇವು, ತೆಂಗು ಮತ್ತು ಅಲಂಕಾರಿ ಸಸಿಗಳು. ಸೇಡಂ ತಾಲೂಕಿನ ಸೇಡಂ ತೋಟಗಾರಿಕಾ ಕ್ಷೇತ್ರದಲ್ಲಿ ನಿಂಬೆ, ನುಗ್ಗೆ ಮತ್ತು ಅಲಂಕಾರಿಕ ಸಸಿಗಳು ಮಾರಾಟಕ್ಕೆ ಲಭ್ಯವಿರುತ್ತದೆ.
ಆರನೇ ತರಗತಿ ಪ್ರವೇಶಕ್ಕಾಗಿ ಜೂನ್ 9 ರಿಂದ ಕೌನ್ಸಿಲಿಂಗ್
***************************************************
ಕಲಬುರಗಿ,ಜೂ.07.(ಕ.ವಾ.)-ಕಲಬುರಗಿ ಜಿಲ್ಲೆಯ ಮೋರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ ಮಾದರಿ, ಡಾ.ಬಿ.ಆರ್.ಅಂಬೇಡ್ಕರ್, ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಗಳಲ್ಲಿ 2018-19ನೇ ಸಾಲಿನ 6ನೇ ತರಗತಿ ಪ್ರವೇಶಕ್ಕಾಗಿ ನಡೆಸಲಾದ ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ 2018ರ ಜೂನ್ 9 ರಿಂದ 13ರ ವರೆಗೆ ಕಲಬುರಗಿ ನಗರದ ಸರ್ದಾರ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿರುವ ಕನ್ನಡ ಭವನದಲ್ಲಿ (ಬಾಪುಗೌಡ ದರ್ಶನಾಪುರ ರಂಗಮಂದಿರ) ಕೌನ್ಸಿಲಿಂಗ್ ನಡೆಸಲಾಗುವುದೆಂದು ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರವರ್ಗವಾರು ಕೌನ್ಸಿಲಿಂಗ್ ನಡೆಯುವ ದಿನಾಂಕ ಮತ್ತು ಸಮಯದ ವಿವರ: ಜೂನ್ 9ರಂದು ಬೆಳಿಗ್ಗೆ 9.30 ಗಂಟೆಗೆ ಅಂಗವಿಕಲರು, ಅಲೆಮಾರಿ, ಅರೆ ಅಲೆಮಾರಿ, ಸಫಾಯಿ ಕರ್ಮಚಾರಿ ಮಕ್ಕಳು, ಆಶ್ರಮ ಶಾಲೆ ಮಕ್ಕಳು, ಮಾಜಿ ಸೈನಿಕರು, ಯೋಜನಾ ನಿರಾಶ್ರಿತರು, ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳಿಗೆ ಹಾಗೂ ಅಂದು ಬೆಳಿಗ್ಗೆ 11.30 ಗಂಟೆಗೆ ಪರಿಶಿಷ್ಟ ಪಂಗಡ, ಸಾಮಾನ್ಯ ವರ್ಗ ಹಾಗೂ ಪ್ರವರ್ಗ-1ರ ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ನಡೆಯಲಿದೆ.
ಜೂನ್ 10ರಂದು ಬೆಳಿಗ್ಗೆ 9.30 ಗಂಟೆಗೆ ಪರಿಶಿಷ್ಟ ಜಾತಿಯ ಹೆಣ್ಣು ಮಕ್ಕಳಿಗೆ, ಜೂನ್ 11ರಂದು ಬೆಳಿಗ್ಗೆ 9.30 ಗಂಟೆಗೆ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ, ಜೂನ್ 12ರಂದು ಬೆಳಿಗ್ಗೆ 9.30 ಗಂಟೆಗೆ ಪ್ರವರ್ಗ-2ಎ, 2ಬಿ, 2ಎ ಮತ್ತು 3ಬಿ ವಿದ್ಯಾರ್ಥಿಗಳಿಗೆ, ಜೂನ್ 13ರಂದು ಬೆಳಿಗ್ಗೆ 9.30 ಗಂಟೆಗೆ ಎಲ್ಲ ಪ್ರವರ್ಗದ ಕಾಯ್ದಿರಿಸಿದ ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ನಡೆಯಲಿದೆ.
ಪ್ರವರ್ಗವಾರು ಕಟ್ ಆಫ್ ಅಂಕಗಳ ವಿವರ: ಪರಿಶಿಷ್ಟ ಪಂಗಡ (ಗಂಡು-5, ಹೆಣ್ಣು-7), ಸಾಮಾನ್ಯ ವರ್ಗ (ಹೆಣ್ಣು-82), ಪ್ರವರ್ಗ-1 (ಗಂಡು-70, ಹೆಣ್ಣು-66), ಪರಿಶಿಷ್ಠ ಜಾತಿ (ಗಂಡು-43, ಹೆಣ್ಣು-29),ಪ್ರವರ್ಗ-2ಎ (ಗಂಡು-69, ಹೆಣ್ಣು-62), ಪ್ರವರ್ಗ-2ಬಿ (ಗಂಡು-57, ಹೆಣ್ಣು-56), ಪ್ರವರ್ಗ-3ಎ (ಗಂಡು-53, ಹೆಣ್ಣು-56), ಪ್ರವರ್ಗ-3ಬಿ (ಗಂಡು-73, ಹೆಣ್ಣು-71).
ಪ್ರವೇಶ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಇಲಾಖೆಯ ತಿತಿತಿ.ಞಡಿies.ಞಚಿಡಿ.ಟಿiಛಿ.iಟಿ ವೆಬ್‍ಸೈಟ್‍ನಲ್ಲಿ ವೀಕ್ಷಿಸಬಹುದಾಗಿದೆ. ಕೌನ್ಸಿಲಿಂಗ್ ಆಯ್ಕೆಯಾದ ಅರ್ಹ ವಿದ್ಯಾರ್ಥಿಗಳು ನಿಗದಿತ ದಿನಾಂಕದಂದು ಖುದ್ದಾಗಿ ಪಾಲಕರೊಂದಿಗೆ ಮೂಲಕ ದಾಖಲಾತಿಗಳೊಂದಿಗೆ ನಿಗದಿತ ಸಮಯಕ್ಕೆ ಕೌನ್ಸಿಲಿಂಗ್ ಸ್ಥಳದಲ್ಲಿ ಹಾಜರಾಗಬೇಕು. ಆಯ್ಕೆಯಾದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ವೈಯಕ್ತಿಕವಾಗಿ ಕೌನ್ಸಿಲಿಂಗ್‍ಗೆ ಹಾಜರಾಗಲು ತಿಳುವಳಿಕೆ ಪತ್ರವನ್ನು ಅಂಚೆ ಮೂಲಕ ರವಾನಿಸಲಾಗಿದೆ. ತಿಳುವಳಿಕೆ ಪತ್ರ ತಲುಪದೇ ಇದ್ದಲ್ಲಿ ಅರ್ಹ ವಿದ್ಯಾರ್ಥಿಗಳು ಹಾಲ್ ಟಿಕೆಟ್ ಮತ್ತು ಮೂಲ ದಾಖಲೆಯೊಂದಿಗೆ ಕೌನ್ಸಿಲಿಂಗ್ ಸ್ಥಳಕ್ಕೆ ಹಾಜರಾಗಬೇಕು.
ಜೂನ್ 13 ರಂದು ಹೆಚ್ಚುವರಿ ಪಟ್ಟಿಯಲ್ಲಿರುವ ವಿದ್ಯಾರ್ಥಿಗಳಿಗೆ ಪ್ರವರ್ಗವಾರು ಸ್ಥಾನಗಳು ಲಭ್ಯವಿದ್ದಲ್ಲಿ ಮಾತ್ರ ಆದ್ಯತಾನುಸಾರ ಕೌನ್ಸಿಲಿಂಗ್‍ಗಾಗಿ ಪರಿಗಣಿಸಲಾಗುವುದು. ಕಟ್ ಆಫ್ ರ್ಯಾಂಕ್ ಹಾಗೂ ಆಯ್ಕೆ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ ಕಾರ್ಯಾಲಯವನ್ನು ಸಂಪರ್ಕಿಸಲು ಕೋರಲಾಗಿದೆ.
ಜೂನ್ 8ರಂದು ನಗರದ ವಿವಿಧ ಬಡಾವಣೆಯಲ್ಲಿ ನೀರು ಸರಬರಾಜು
***********************************************************
ಕಲಬುರಗಿ,ಜೂ.07.(ಕ.ವಾ.)-ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಕಲಬುರಗಿ ನಗರದ ವಿವಿಧ ಬಡಾವಣೆಗಳಲ್ಲಿ ಜೂನ್ 8ರಂದು ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಸಾರ್ವಜನಿಕರು ಇದನ್ನು ಗಮನಿಸಬೇಕೆಂದು ಮಂಡಳಿಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಉಮೇಶ ಎಂ. ಪಾಂಚಾಳ ಅವರು ತಿಳಿಸಿದ್ದಾರೆ.
ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ ಇಂತಿದೆ. ಓಂ ನಗರ ಏರಿಯಾ, ಜಯ ನಗರ ಏರಿಯಾ, ಶಾಸ್ತ್ರೀ ನಗರ. ಶಾಂತಿ ನಗರ. ಪ್ರಗತಿ ಕಾಲೋನಿ, ಗುಬ್ಬಿ ಕಾಲೋನಿ ಪ್ರದೇಶಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿದ್ದು, ಈ ಪ್ರದೇಶದ ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ ಶಾಖಾಧಿಕಾರಿ ಸಹಾಯಕ ಇಂಜಿನಿಯರ್ ಮೊಬೈಲ್ ಸಂಖ್ಯೆ 9448147069ನ್ನು ಸಂಪರ್ಕಿಸಬೇಕು.
ಇಸ್ಲಾಮಾಬಾದ್ ಕಾಲೋನಿ ಫೇಸ್-1,2,3 ಮತ್ತು ಶರ್ಫು ಮಡ್ಡಿ ಬಡಾವಣೆ, ಹೌಸಿಂಗ್ ಬೋರ್ಡ್ ಕಾಲೋನಿ, ಬಾಂಬೆ ಹೋಟೆಲ್ ಏರಿಯಾ, ಗಂಜ ಕಾಲೋನಿ (ಭಾ), ಬ್ಯಾಂಕ್ ಕಾಲೋನಿ(ಭಾ), ಗೆಸುದರಾಜ್ ಕಾಲೋನಿ (ಭಾ), ಫೀರ್ದೋಸ್ ಕಾಲೋನಿ, ಜಿಡಿಎ ಸಂತ್ರಾಸವಾಡಿ ಸುತ್ತಮುತ್ತಲಿನ ಏರಿಯಾಗಳು, ಬಸವೇಶ್ವರ ಕಾಲೋನಿ (ಭಾ), ಬಂದೇ ನವಾಜ ಕಾಲೋನಿ, ಸಂತ್ರಾಸ್‍ವಾಡಿ (ಭಾ)., ಖಮರ್ ಕಾಲೋನಿ, ಪೀರ ಬಂಗಾಲಿ, ನೂರಾನಿ ಮೊಹಲ್ಲಾ (ಭಾ)., ಟಾರಫೈಲ್ 14ನೇ ಮತ್ತು 8ನೇ ಕ್ರಾಸ್, ಕೃಷ್ಣಾ ನಗರ , ಟಾರಫೈಲ್(ಭಾ) 1 ನೇ ಫೇಸ್, ವಿಶಾಲ ನಗರ, ಅಂಬಿಕಾ ನಗರ, ಕರುಣೇಶ್ವರ ನಗರ, ಭಾಗ್ಯವಂತಿ ನಗರ, ಯಶವಂತ ನಗರ, ವರದಾ ನಗರ, ಬ್ಯಾಂಕ ಕಾಲೋನಿ, ಮಹಾರಾಜಾ ಲೇಔಟ್, ದೇವಾ ನಗರ ಶ್ರೀಹರಿ ನಗರ, ಎಲ್.ಐ.ಜಿ. ಮತ್ತು ಎಮ್.ಐ.ಜಿ. ಪ್ರದೇಶಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿದ್ದು, ಈ ಪ್ರದೇಶದ ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ ಶಾಖಾಧಿಕಾರಿ ಸಹಾಯಕ ಇಂಜಿನಿಯರ್ ಅಬ್ದುಲ್ ಬಾಸೀತ್ ಮೊಬೈಲ್ ಸಂಖ್ಯೆ 9480689516ನ್ನು ಸಂಪರ್ಕಿಸಬೇಕು.
ವÉೂೀಮಿನಪೂರಾ, ಸಂದಲ್ ಗಲ್ಲಿ, ಜಗತ್ ಮೇಲ್ಭಾಗ, ಸುಂದರ್ ನಗರ(ಭಾ), ಲುಕಮಾನ್ ಕಾಲೇಜ ತಾಂಡಾ, ಜಲಾಲ್ ವಾಡಿ, ಭಕ್ಷೀ ಗಲ್ಲಿ, ಲಿಟಲ್ ರೋಜ್ ಶಾಲೆ ಹತ್ತಿರ, ಪೋಲಿಸ್ ಕಾಲೋನಿ, ಕುವೆಂಪು ನಗರ, ವೀರೇಶ ನಗರ, ಎಂ.ಆರ್.ಎಂ.ಸಿ. ಕಾಲೇಜು ಎದುರುಗಡೆ ಪ್ರದೇಶಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿದ್ದು, ಈ ಪ್ರದೇಶದ ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ ಶಾಖಾಧಿಕಾರಿ ಕಿರಿಯ ಇಂಜಿನಿಯರ್ ಉಮೇಶ ಎಂ. ಪಾಂಚಾಳ ಅವರನ್ನು ಮೊಬೈಲ್ ಸಂಖ್ಯೆ 9480689519ನ್ನು ಸಂಪರ್ಕಿಸಬೇಕು.
ಚನ್ನವೀರ ನಗರ, ರಾಜೀವ ಗಾಂಧೀ ನಗರ (ಭಾ), ಸೇವಾಲಾಲ ನಗರ, ಶಿವಾಜಿ ನಗರ, ಭವಾನಿ ನಗರ, ಮುನಿಂ ಸಂಘ, ನಂದಿ ಕಾಲೋನಿ, ಲಂಗಾರ್ ಹನುಮಾನ್ ನಗರ, ಕಮಲ್ ನಗರ, ಭವಾನಿ ನಗರ (ಭಾಃ), ಭೀಮ್ ನಗರ, ಸಂತೋಷ ಕಾಲೋನಿ, ಜೆ.ಆರ್.ನಗರ, ದೇವಿ ನಗರ, ವಿವೇಕಾನಂದ ನಗರ, ವಿಶ್ವರಾಧ್ಯ ಕಾಲೋನಿ, ಕೈಲಾಸ ನಗರ, ಆಳಂದ ಕಾಲೋನಿ, ಶಿವ ನಗರ, ಶೇಖ ರೋಜಾ, ಖಾದ್ರಿ ಚೌಕ್, ಮಾಳೆ ವಾಡಿ ಪ್ರದೇಶಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಶಾಖಾಧಿಕಾರಿ ಕಿರಿಯ ಇಂಜಿನಿಯರ್ ಕೆ.ಎಂ. ಜೋಶಿ ಅವರ ಮೊಬೈಲ್ ಸಂಖ್ಯೆ 9480689518ನ್ನು ಸಂಪರ್ಕಿಸಲು ಕೋರಲಾಗಿದೆ.
ಬಸವ ನಗರ, ಬೋರಾಬಾಯಿ ನಗರ, ವಡ್ಡರ್ ಗಲ್ಲಿ, ನ್ಯೂ ರಾಘವೇಂದ್ರ ಕಾಲೋನಿ, ಗಂಗಾ ನಗರ (ಭಾ), ಪೋಲಿಸ್ ಸ್ಟೇಷನ್ ಎರಿಯಾ, ಬಾಳೆ ಲೇಔಟ್ ಮಾಣಿಕೇಶ್ವರ ಕಾಲೋನಿ, ಚೌಡೇಶ್ವರ ಕಾಲೋನಿ, ಕೈಲಾಸ ನಗರ, ಲಾಲಗೇರಿ ಕ್ರಾಸ್, ಮಹಾಲಕ್ಷ್ಮೀ ಲೇಔಟ್, ಕುಂಬಾರ್ ಗಲ್ಲಿ, ವೆಂಕವ್ವಾ ಮಾರ್ಕೆಟ್, ಸುಭಾಶ ಚೌಕ್, ಸಂಗಮೇಶ್ವರ ಕಾಲೋನಿ (ಭಾ), ಬನಶಂಕರಿ ಲೇಔಟ್, ಕೀರ್ತಿ ನಗರ ಪ್ರದೇಶಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿದ್ದು, ಈ ಪ್ರದೇಶದ ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ ಶಾಖಾಧಿಕಾರಿ ಕಿರಿಯ ಇಂಜಿನಿಯರ್ ಆರ್.ಜೆ. ಡಿಸೋಜಾ ಅವರ ಮೊಬೈಲ್ ಸಂಖ್ಯೆ 7019143725ನ್ನು ಸಂಪರ್ಕಿಸಲು ಕೋರಲಾಗಿದೆ.
ಭೀಮಾ ನದಿಯ ಮೂಲಸ್ಥಾವರ ಸರಡಗಿ, ಐ.ಪಿ.ಎಸ್. ಕೋಟನೂರ ಮತ್ತು ಬೆಣ್ಣೆತೋರಾ ಮೂಲಸ್ಥಾವರದಲ್ಲಿ ಪಂಪು ಮತ್ತು ಮೋಟಾರ್‍ಗಳಲ್ಲಿ ತಾಂತ್ರಿಕ ದೋಷ, ಮುಖ್ಯ ಕೊಳವೆ ಮಾರ್ಗಗಳಲ್ಲಿ ಸೋರುವಿಕೆ, ವಿದ್ಯುತ್ ಸರಬರಾಜಿನಲ್ಲಿ ಅಡಚಣೆಯಾಗಿದ್ದಲ್ಲಿ ಮೇಲ್ಕಂಡ ನೀರು ಸರಬರಾಜಿನ ವೇಳಾಪಟ್ಟಿಯಲ್ಲಿ ಬದಲಾವಣೆಯಾಗುತ್ತದೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಉಮೇಶ ಎಂ. ಪಾಂಚಾಳ ಅವರು (ಮೊಬೈಲ್ ಸಂಖ್ಯೆ 9480813194) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




ಹೀಗಾಗಿ ಲೇಖನಗಳು NEWS AND PHOTO DATE: 7--6--2018

ಎಲ್ಲಾ ಲೇಖನಗಳು ಆಗಿದೆ NEWS AND PHOTO DATE: 7--6--2018 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ NEWS AND PHOTO DATE: 7--6--2018 ಲಿಂಕ್ ವಿಳಾಸ https://dekalungi.blogspot.com/2018/06/news-and-photo-date-7-6-2018.html

Subscribe to receive free email updates:

0 Response to "NEWS AND PHOTO DATE: 7--6--2018"

ಕಾಮೆಂಟ್‌‌ ಪೋಸ್ಟ್‌ ಮಾಡಿ