ಯೋಗದಿಂದ ದೇಹ ಮಾತ್ರವಲ್ಲ ಮನಸ್ಸೂ ಗಟ್ಟಿಯಾಗಲಿದೆ- ರಾಜಶೇಖರ ಹಿಟ್ನಾಳ

ಯೋಗದಿಂದ ದೇಹ ಮಾತ್ರವಲ್ಲ ಮನಸ್ಸೂ ಗಟ್ಟಿಯಾಗಲಿದೆ- ರಾಜಶೇಖರ ಹಿಟ್ನಾಳ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಯೋಗದಿಂದ ದೇಹ ಮಾತ್ರವಲ್ಲ ಮನಸ್ಸೂ ಗಟ್ಟಿಯಾಗಲಿದೆ- ರಾಜಶೇಖರ ಹಿಟ್ನಾಳ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಯೋಗದಿಂದ ದೇಹ ಮಾತ್ರವಲ್ಲ ಮನಸ್ಸೂ ಗಟ್ಟಿಯಾಗಲಿದೆ- ರಾಜಶೇಖರ ಹಿಟ್ನಾಳ
ಲಿಂಕ್ : ಯೋಗದಿಂದ ದೇಹ ಮಾತ್ರವಲ್ಲ ಮನಸ್ಸೂ ಗಟ್ಟಿಯಾಗಲಿದೆ- ರಾಜಶೇಖರ ಹಿಟ್ನಾಳ

ಓದಿ


ಯೋಗದಿಂದ ದೇಹ ಮಾತ್ರವಲ್ಲ ಮನಸ್ಸೂ ಗಟ್ಟಿಯಾಗಲಿದೆ- ರಾಜಶೇಖರ ಹಿಟ್ನಾಳ


ಕೊಪ್ಪಳ, ಜೂ.21 (ಕರ್ನಾಟಕ ವಾರ್ತೆ) : ಪರಂಪರಾಗತವಾಗಿ ಬಂದಿರುವ ಭಾರತದ ಯೋಗದಿಂದ ದೇಹ ಮಾತ್ರವಲ್ಲ ಮನಸ್ಸನ್ನೂ ಕೂಡ ಸದೃಢವಾಗಿರಿಸಿಕೊಳ್ಳಬಹುದಾಗಿದೆ.  ಹೀಗಾಗಿಯೇ ಯೋಗವು ವಿಶ್ವದ ಮನ್ನಣೆಯನ್ನು ಪಡೆದುಕೊಂಡಿದೆ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ರಾಜಶೇಖರ ಹಿಟ್ನಾಳ ಅವರು ಹೇಳಿದರು.

     ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಆಯುಷ್ ಇಲಾಖೆಯ ಸಹಯೋಗದಲ್ಲಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರದಂದು ಏರ್ಪಡಿಸಲಾಗಿದ್ದ ನಾಲ್ಕನೆ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

     ಭಾರತ ದೇಶದಲ್ಲಿ  ಪರಂಪರಾಗತವಾಗಿ ಬಂದಿರುವ ಯೋಗವು ಇಡೀ ವಿಶ್ವದ ಮನ್ನಣೆಯನ್ನು ಪಡೆದಿದ್ದು, ಅಂತರರಾಷ್ಟ್ರೀಯ ಯೋಗ ದಿನವನ್ನು ಇಂದು ಭಾರತದಲ್ಲಷ್ಟೇ ಅಲ್ಲದೇ, ಜಗತ್ತಿನ ನೂರಾರು ದೇಶಗಳು ಆಚರಿಸುತ್ತಿರುವುದೇ ಇದಕ್ಕೆ ನಿದರ್ಶನವಾಗಿದೆ.     ಭಾರತ ಪರಿಚಯಿಸಿದ ಯೋಗದ ಮಹತ್ವದಿಂದಾಗಿ ಇಡೀ ಜಗತ್ತು ಭಾರತದತ್ತ ತಿರುಗು ನೋಡುವಂತಾಗಿದೆ.  ಜಗತ್ತಿಗೆ ಭಾರತದ ಕೊಡುಗೆಯಾಗಿರುವ ಯೋಗವು ಇಂದು ಯಾವುದೇ ಧರ್ಮಕ್ಕೆ ಸೀಮಿತಗೊಳ್ಳದೇ ವಿಶ್ವ ವ್ಯಾಪ್ತಿಯಾಗಿ ಬೆಳೆದಿರುವುದು ಅದರ ಜನಪ್ರಿಯತೆಗೆ ಸಾಕ್ಷಿಯಾಗಿದೆ.   ಯೋಗದಿಂದ ದೇಹವನ್ನಷ್ಟೇ ಅಲ್ಲ ಮನಸ್ಸನ್ನೂ ಕೂಡ ಗಟ್ಟಿಗೊಳಿಸಬಹುದಾಗಿದೆ.  ಒತ್ತಡದ ನಡುವೆ ಬದುಕು ಸಾಗಿಸುವ ಇಂದಿನ ಜೀವನ ಶೈಲಿಗೆ ಯೋಗ ಅವಶ್ಯಕವಾಗಿ ಬೇಕಾಗಿದ್ದು, ಯೋಗದಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಲ್ಲರು.  ದಿನನಿತ್ಯ ಯೋಗಾಭ್ಯಾಸ ಮಾಡುವವರು, ಇಡೀ ದಿನ ಹುರುಪಿನಿಂದ ಹಾಗೂ ಚೈತನ್ಯದಿಂದ ಕಾರ್ಯ ನಿರ್ವಹಿಸಲು ಸಾಧ್ಯವಿದೆ.  ಯೋಗವು ಇಂದಿನ ಸಾಮಾಜಿಕ ಬದುಕಿನಲ್ಲಿನ ಒತ್ತಡಗಳನ್ನು ಕೆಲವೇ ನಿಮಿಷಗಳಲ್ಲಿ ನಿವಾರಿಸುವ ದಿವ್ಯ ಔಷಧಿಯಾಗಿದೆ.  ಯೋಗದಿಂದ ಬದುಕಿನಲ್ಲಿ ಏಕಾಗ್ರತೆ ಹಾಗೂ ದೃಢ ಮನಸ್ಸು ಪಡೆಯಲು ಸಾಧ್ಯವಿದೆ.  ಬದುಕಿನ ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ನೀಡುವ ಸಾಮಥ್ರ್ಯ ಯೋಗಕ್ಕಿದೆ.   ಪ್ರತಿಯೊಬ್ಬರು ತಮ್ಮ ದೈನಂದಿನ ಜೀವನದಲ್ಲಿ ದಿನಕ್ಕೆ ಕೆಲ ಸಮಯ ಯೋಗಕ್ಕೆ ಮೀಸಲಿಡುವುದು ಅಗತ್ಯ ಎಂದು ರಾಜಶೇಖರ ಹಿಟ್ನಾಳ ಅವರು ಹೇಳಿದರು.

     ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ಮಾತನಾಡಿ, ಜೀವನದಲ್ಲಿ ಏನನ್ನಾದರೂ ಸಾಧಿಸಲು ಏಕಾಗ್ರತೆ ಹಾಗೂ ಶ್ರದ್ಧೆ ಬೇಕು.  ಯೋಗದಿಂದ ಮಾತ್ರ ಏಕಾಗ್ರತೆ ಪಡೆಯಲು ಸಾಧ್ಯವಿದೆ.  ಸರ್ಕಾರಿ ನೌಕರರು ಹೆಚ್ಚಿನ ಒತ್ತಡದಲ್ಲಿ ಕಾರ್ಯ ನಿರ್ವಹಿಸುವ ಪರಿಸ್ಥಿತಿ ಇದ್ದು, ಒತ್ತಡದಿಂದ ಮುಕ್ತರಾಗಲು ಯೋಗ ಮಾಡುವುದು ಅಗತ್ಯವಾಗಿದೆ.  ರಕ್ತದೊತ್ತಡದಂತಹ ರೋಗಗಳನ್ನು ನಿಗ್ರಹಿಸಲು ಯೋಗ ಉತ್ತಮ ವಿಧಾನವಾಗಿದೆ ಎಂದರು.

     ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಮಾತನಾಡಿ, ಹಿಂದಿನ ದಿನಮಾನಗಳಲ್ಲಿ ಆಧುನಿಕ ತಂತ್ರಜ್ಞಾನ ಹಾಗೂ ಸೌಲಭ್ಯ ಇಲ್ಲದಿದ್ದಾಗಲೂ ಜನರು ಆರೋಗ್ಯವಂತರಾಗಿರುತ್ತಿದ್ದರು.  ಆದರೆ ಮೊಬೈಲ್ ನಂತಹ ಸೌಲಭ್ಯಗಳು ಬಂದ ಬಳಿಕ ಜನರು ಒತ್ತಡದ ಬದುಕು ಸಾಗಿಸುವಂತಾಗಿದೆ.   ಯೋಗಾಭ್ಯಾಸ ಕೇವಲ ದಿನಾಚರಣೆ ದಿನದಂದು ಮಾತ್ರ ಸೀಮಿತವಾಗಬಾರದು. ದೈನಂದಿನ ಬದುಕಿನ ಚಟುವಟಿಕೆಯ ಭಾಗವಾಗಬೇಕು.  ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು, ಶಾಂತ ಮನಸ್ಸು ಕಾಪಾಡಿಕೊಳ್ಳಲು ಯೋಗದಿಂದ ಸಾಧ್ಯ  ಎಂದರು.
        ಸಮಾರಂಭಕ್ಕೂ ಮುನ್ನ ಜಿಲ್ಲಾ ಕ್ರೀಡಾಂಗಣದಲ್ಲಿ ಕೊಪ್ಪಳದ ಯೋಗ ಗುರು ಅಶೋಕಸ್ವಾಮಿ ಹಿರೇಮಠ ಅವರು, ಎಲ್ಲ ಅಧಿಕಾರಿಗಳು, ಜನಪ್ರತಿನಿಧಿಗಳು, ವಿದ್ಯಾರ್ಥಿಗಳಿಗೆ ಯೋಗಾಭ್ಯಾಸ ನಡೆಸಿಕೊಟ್ಟರು.  ಜಿಲ್ಲಾ ಆಯುಷ್ ಅಧಿಕಾರಿ ಡಾ. ಬಸಪ್ಪ ವಾಲಿಕಾರ್, ಈಶ್ವರಿ ವಿಶ್ವವಿದ್ಯಾಲಯದ ಯೋಗಿನಿ ಅಕ್ಕ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.  ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು, ಅಧಿಕಾರಿಗಳು, ಜನಪ್ರತಿನಿಧಿಗಳು ಇದೇ ಸಂದರ್ಭದಲ್ಲಿ ವಿವಿಧ ಆಸನಗಳೊಂದಿಗೆ ಯೋಗಾಭ್ಯಾಸ ಮಾಡಿದರು.


ಹೀಗಾಗಿ ಲೇಖನಗಳು ಯೋಗದಿಂದ ದೇಹ ಮಾತ್ರವಲ್ಲ ಮನಸ್ಸೂ ಗಟ್ಟಿಯಾಗಲಿದೆ- ರಾಜಶೇಖರ ಹಿಟ್ನಾಳ

ಎಲ್ಲಾ ಲೇಖನಗಳು ಆಗಿದೆ ಯೋಗದಿಂದ ದೇಹ ಮಾತ್ರವಲ್ಲ ಮನಸ್ಸೂ ಗಟ್ಟಿಯಾಗಲಿದೆ- ರಾಜಶೇಖರ ಹಿಟ್ನಾಳ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಯೋಗದಿಂದ ದೇಹ ಮಾತ್ರವಲ್ಲ ಮನಸ್ಸೂ ಗಟ್ಟಿಯಾಗಲಿದೆ- ರಾಜಶೇಖರ ಹಿಟ್ನಾಳ ಲಿಂಕ್ ವಿಳಾಸ https://dekalungi.blogspot.com/2018/06/blog-post_64.html

Subscribe to receive free email updates:

0 Response to "ಯೋಗದಿಂದ ದೇಹ ಮಾತ್ರವಲ್ಲ ಮನಸ್ಸೂ ಗಟ್ಟಿಯಾಗಲಿದೆ- ರಾಜಶೇಖರ ಹಿಟ್ನಾಳ"

ಕಾಮೆಂಟ್‌‌ ಪೋಸ್ಟ್‌ ಮಾಡಿ