ಶೀರ್ಷಿಕೆ : ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳನ್ನು ಜೋಡಿಸುವ ಭಾರತಮಾಲಾ ಯೋಜನೆ : ಕೊಪ್ಪಳ-ಮೆತಗಲ್ ಬೈಪಾಸ್ ರಸ್ತೆ ಅಭಿವೃದ್ಧಿಗೆ ಪೂರಕವಾಗಲಿದೆ- ಸಂಸದ ಕರಡಿ ಸಂಗಣ್ಣ
ಲಿಂಕ್ : ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳನ್ನು ಜೋಡಿಸುವ ಭಾರತಮಾಲಾ ಯೋಜನೆ : ಕೊಪ್ಪಳ-ಮೆತಗಲ್ ಬೈಪಾಸ್ ರಸ್ತೆ ಅಭಿವೃದ್ಧಿಗೆ ಪೂರಕವಾಗಲಿದೆ- ಸಂಸದ ಕರಡಿ ಸಂಗಣ್ಣ
ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳನ್ನು ಜೋಡಿಸುವ ಭಾರತಮಾಲಾ ಯೋಜನೆ : ಕೊಪ್ಪಳ-ಮೆತಗಲ್ ಬೈಪಾಸ್ ರಸ್ತೆ ಅಭಿವೃದ್ಧಿಗೆ ಪೂರಕವಾಗಲಿದೆ- ಸಂಸದ ಕರಡಿ ಸಂಗಣ್ಣ
ಕೊಪ್ಪಳ ಜೂ. 28 (ಕರ್ನಾಟಕ ವಾರ್ತೆ): ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಭಾರತಮಾಲಾ ಲಾಟ್ 3, ಪ್ಯಾಕೇಜ್-2 ಕಾರ್ಯಕ್ರಮದಡಿ ಎನ್‍ಹೆಚ್ 50 ಹಾಗೂ ಎನ್‍ಹೆಚ್ 63 ಅನ್ನು ಸಂಪರ್ಕಿಸುವ ಕೊಪ್ಪಳ-ಇರಕಲ್ಲಗಡ-ಮೆತಗಲ್ ವರೆಗಿನ ಬೈಪಾಸ್ ರಸ್ತೆಯು ದೂರದೃಷ್ಟಿ ಯೋಜನೆಯಾಗಿದ್ದು ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಹೇಳಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಕೊಪ್ಪಳ-ಇರಕಲ್ಲಗಡ-ಮೆತಗಲ್ ಬೈಪಾಸ್ ರಸ್ತೆ ಯೋಜನೆಯ ಡಿಪಿಆರ್ ತಯಾರಿಕೆ ಕುರಿತಂತೆ ಕೊಪ್ಪಳದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸಾರ್ವಜನಿಕರೊಂದಿಗೆ ಏರ್ಪಡಿಸಲಾಗಿದ್ದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಭಾರತಮಾಲಾ ಲಾಟ್ 3, ಪ್ಯಾಕೇಜ್-2 ಕಾರ್ಯಕ್ರಮದಡಿ ಎನ್‍ಹೆಚ್ 50 ಹಾಗೂ ಎನ್‍ಹೆಚ್ 63 ಅನ್ನು ಸಂಪರ್ಕಿಸುವ ಕೊಪ್ಪಳ-ಇರಕಲ್ಲಗಡ-ಮೆತಗಲ್ ವರೆಗಿನ 28. 01 ಕಿ.ಮೀ. ಬೈಪಾಸ್ ರಸ್ತೆಯನ್ನು ನಿರ್ಮಿಸಲು ಯೋಜಿಸಿದ್ದು, ಕೇಂದ್ರ ಸರ್ಕಾರದ ಈ ಯೋಜನೆ ಕುರಿತು ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಇಂತಹ ಅಭಿವೃದ್ಧಿ ಯೋಜನೆಗಳು ಸಾಕಾರಗೊಳ್ಳುವಾಗ, ರೈತರು, ಸಾರ್ವಜನಿಕರ ಭೂಮಿ, ಆಸ್ತಿ-ಪಾಸ್ತಿಯನ್ನು ತ್ಯಾಗ ಮಾಡಬೇಕಾಗುತ್ತದೆ. ಆದರೆ ಯಾವುದೇ ರೈತರು ಅಥವಾ ಸಾರ್ವಜನಿಕರಿಗೆ ಆರ್ಥಿಕವಾಗಿ ನಷ್ಟವನ್ನು ಮಾಡುವುದಿಲ್ಲ. ಸೂಕ್ತ ರೀತಿಯಲ್ಲಿ ಪರಿಹಾರವನ್ನು ಒದಗಿಸಲಾಗುತ್ತದೆ. ರೈತರು ಪರಿಹಾರವನ್ನು ಪಡೆದು, ಪರ್ಯಾಯವಾಗಿ ಭೂಮಿಯನ್ನು ಖರೀದಿಸಿ, ತಮ್ಮ ವ್ಯವಸಾಯವನ್ನು ಮುಂದುವರೆಸಿಕೊಂಡು ಹೋಗಬೇಕು. ಭಾರತಮಾಲ ಯೋಜನೆಯಡಿ ರಾಜ್ಯದಲ್ಲಿ ಪ್ರಮುಖ ಮೂರು ಯೋಜನೆಗಳಿಗೆ ಕೇಂದ್ರ ಸರ್ಕಾರ ಒಪ್ಪಿಗೆಯನ್ನು ನೀಡಿದ್ದು, ಈ ಪೈಕಿ ಕೊಪ್ಪಳ ಜಿಲ್ಲೆಯದ್ದೂ ಒಂದು. 28. 1 ಕಿ.ಮೀ. ಕಾರಿಡಾರ್ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಸುಮಾರು 600 ಕೋಟಿ ರೂ. ಗೂ ಹೆಚ್ಚಿನ ವೆಚ್ಚವಾಗಲಿದೆ. ಹಿರಿಯರು ಮಾಡಿದ ಆಸ್ತಿಯನ್ನು ಕಳೆದುಕೊಳ್ಳಬೇಕಾಗುವುದು ನೋವಿನ ಸಂಗತಿಯಾದರೂ, ಅಭಿವೃದ್ಧಿಯ ವಿಷಯದಲ್ಲಿ ತ್ಯಾಗ ಮಾಡಬೇಕಾಗುತ್ತದೆ. ಭೂಮಿ, ಆಸ್ತಿ ಕಳೆದುಕೊಂಡ ರೈತರಿಗೆ ಸೂಕ್ತ ರೀತಿಯಲ್ಲಿ ಪರಿಹಾರ ನೀಡುವುದರಿಂದ, ಈ ಪರಿಹಾರದ ಹಣದಲ್ಲಿ ಬೇರೆ ಕಡೆ ಭೂಮಿಯನ್ನು ಖರೀದಿ ಮಾಡಬಹುದು. ಅಲ್ಲದೆ ರಸ್ತೆಯ ಅಕ್ಕ-ಪಕ್ಕದಲ್ಲಿ ಉಳಿಯಬಹುದಾದ ಭೂಮಿಯಲ್ಲಿ ವಾಣಿಜ್ಯ ವ್ಯವಹಾರವನ್ನು ಕೂಡ ಮುಂದುವರೆಸಬಹುದು. ರೈತರು, ಸಾರ್ವಜನಿಕರು ತಮ್ಮ ಅಭಿಪ್ರಾಯ, ಕುಂದುಕೊರತೆಗಳನ್ನು ಹಂಚಿಕೊಳ್ಳುವ ಸಲುವಾಗಿಯೇ ಸಾರ್ವಜನಿಕ ಸಮಾಲೋಚನಾ ಸಭೆಗಳನ್ನು ಕೈಗೊಳ್ಳಲಾಗುತ್ತಿದೆ. ಈಗಾಗಲೆ ಯೋಜನೆಯ ಕುರಿತಂತೆ ಪ್ರಾಥಮಿಕವಾಗಿ ದದೇಗಲ್, ಓಜನಹಳ್ಳಿ, ಇರಕಲ್ಲಗಡ ಮತ್ತು ಚಿಲಕಮುಖಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಮಾಲೋಚನೆ ನಡೆಸಲಾಗಿದೆ. ಸಾರ್ವಜನಿಕರು, ರೈತರು ನೀಡುವ ಅಭಿಪ್ರಾಯಗಳಿಗೂ ಮನ್ನಣೆ ನೀಡಲಾಗುವುದು. ಹೀಗಾಗಿ ಇಂತಹ ಅಭಿವೃದ್ಧಿಪರ ಯೋಜನೆಗೆ ರೈತರು, ಸಾರ್ವಜನಿಕರು ಸಹಕಾರ ನೀಡುವ ಮೂಲಕ ಯೋಜನೆ ಸಾಕಾರಕ್ಕೆ ನೆರವಾಗಬೇಕು ಎಂದು ಸಂಸದ ಕರಡಿ ಸಂಗಣ್ಣ ಅವರು ಮನವಿ ಮಾಡಿಕೊಂಡರು.
ಯೋಜನೆಯ ಸಂಕ್ಷಿಪ್ತ ಮಾಹಿತಿ :
*********** ಭಾರತಮಾಲಾ ಲಾಟ್ 3, ಪ್ಯಾಕೇಜ್-2 ಕಾರ್ಯಕ್ರಮದಡಿ ಎನ್‍ಹೆಚ್ 50 ಹಾಗೂ ಎನ್‍ಹೆಚ್ 64 ಅನ್ನು ಸಂಪರ್ಕಿಸುವ ಕೊಪ್ಪಳ-ಇರಕಲ್ಲಗಡ-ಮೆತಗಲ್ ವರೆಗಿನ ಬೈಪಾಸ್ ರಸ್ತೆಯು ಇದಾಗಿದ್ದು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಯೋಜನೆಯನ್ನು ಕಾರ್ಯಗತಗೊಳಿಸಲಿದೆ. ದದೇಗಲ್, ಹಲಗೇರಿ, ಯತ್ನಟ್ಟಿ, ಓಜನಹಳ್ಳಿ, ಟಣಕನಕಲ್, ಲೇಬಗೇರಾ, ಹಟ್ಟಿ, ತಾಡಕನಕಾಪುರ, ಯಲಮಗೇರಾ, ಇರಕಲ್ಲಗಡ, ಕೊಡದಾಳ, ಚಾಮಲಾಪುರ, ಚಿಲಕಮುಖಿ, ಸಿಡಗನಹಳ್ಳಿ, ಹಿರೇಸೂಳಿಕೆರಿ ಗ್ರಾಮಗಳು ಯೋಜನೆಯ ವ್ಯಾಪ್ತಿಗೆ ಬರಲಿವೆ. ಯೋಜನೆಯ ಒಟ್ಟು ಉದ್ದ 28. 1 ಕಿ.ಮೀ., ಯೋಜನೆಯ ವ್ಯಾಪ್ತಿಯಲ್ಲಿ ಯಾವುದೇ ಅರಣ್ಯ ಪ್ರದೇಶ ಬರುವುದಿಲ್ಲ. ನಾಲ್ಕು ಪಥದ ರಸ್ತೆ ಇದಾಗಲಿದ್ದು, 70 ಮೀ. ವ್ಯಾಪ್ತಿಯಲ್ಲಿ ಇರಲಿದೆ. ಯೋಜನೆಗೆ ಸುಮಾರು 195 ಎಕರೆ ಹೆಚ್ಚುವರಿ ಜಮೀನಿನ ಭೂಸ್ವಾಧೀನ ಅವಶ್ಯಕತೆ ಇದ್ದು, 11.12 ಕಿ.ಮೀ. ಸರ್ವಿಸ್ ರಸ್ತಗೆ ನಿರ್ಮಾಣವಾಗಲಿದೆ. ಯೋಜನೆಯ ಒಟ್ಟಾರೆ ಉದ್ದ ಒಟ್ಟು 28. 01 ಕಿ.ಮೀ. ಗಳಾಗಿದ್ದು, ಬೈಪಾಸ್ ರಸ್ತೆಯ ಉದ್ದ ಸುಮಾರು 17. 37 ಕಿ.ಮೀ. ಆಗಿದ್ದು, ಇದರಲ್ಲಿ ಕೊಪ್ಪಳ ಬೈಪಾಸ್ ಉದ್ದ -9. 4 ಮೀ., ಟಣಕನಕಲ್ ಬೈಪಾಸ್-1.3 ಕಿ.ಮೀ., ಇರಕಲ್ಲಗಡ ಬೈಪಾಸ್- 2. 6 ಕಿ.ಮೀ., ಕೊಡದಾಳ ಬೈಪಾಸ್- 1. 8 ಕಿ.ಮೀ., ರಾಷ್ಟ್ರೀಯ ಹೆದ್ದಾರಿ 63 ಮತ್ತು ರಾ.ಹೆ. 50 ಕೂಡುವ ಪ್ರಮುಖ ಜಂಕ್ಷನ್‍ಗೆ ಕ್ಲೋವರ್ ಲೀಫ್ ಇಂಟರ್‍ಚೇಂಜ್ ವ್ಯವಸ್ಥೆ ರೂಪಗೊಳ್ಳಲಿದೆ. ಉದ್ದೇಶಿತ ಈ ಬೈಪಾಸ್ ರಸ್ತೆಯಲ್ಲಿ ವಾಹನಗಳ ಕೆಳಸೇತುವೆ- 04, ಮೇಲು ಸೇತುವೆ- 02, ಸಣ್ಣ ವಾಹನಗಳ ಕೆಳಸೇತುವೆ- 03, ಲಘು ವಾಹನಗಳ ಕೆಳ ಸೇತುವೆ- 06, ರೈಲು ಮೇಲ್ಸೇತುವೆ- 01, ಪಾದಚಾರಿಗಳ ಮೇಲ್ಸೇತುವೆ- 01, ಹೊಸ ಬಸ್ ತಂಗುದಾಣಗಳು- 09, ಲಾರಿ ವಿಶ್ರಾಂತಿ ಸ್ಥಳ-01 ಹಾಗೂ 01 ಟೋಲ್ ಪ್ಲಾಜಾ ಇರಲಿವೆ. ಕೊಪ್ಪಳ ವ್ಯಾಪ್ತಿಯಲ್ಲಿ ಸುಮಾರು 1150 ಆಸ್ತಿ-ಭೂಮಿ ಬಾಧಿತಗೊಳ್ಳಲಿದ್ದು, ಈ ಪೈಕಿ ವಾಣಿಜ್ಯ ಆಸ್ತಿ ಹೆಚ್ಚು ಇವೆ. ಟಣಕನಕಲ್ ಗ್ರಾಮ ವ್ಯಾಪ್ತಿಯಲ್ಲಿ ಸುಮರು 87 ಖಾಸಗಿ ಆಸ್ತಿ ಇದ್ದು, ವಸತಿ ಕಟ್ಟಡಗಳು ಹೆಚ್ಚಿವೆ. ಇರಕಲ್ಲಗಡ ವ್ಯಾಪ್ತಿಯಲ್ಲಿ ಸುಮಾರು 274 ಆಸ್ತಿ ಇದ್ದು, ಈ ಪೈಕಿ ರಸ್ತೆಯ ಇಕ್ಕೆಲಗಳಲ್ಲಿನ ಆಸ್ತಿ ಹಾಗೂ ವಾಣಿಜ್ಯ ಆಸ್ತಿಗಳಿವೆ. ಚಿಲಕಮುಕಿ ವ್ಯಾಪ್ತಿಯಲ್ಲಿ 162 ಆಸ್ತಿಗಳಿದ್ದು, ಬಹಳಷ್ಟು ವಸತಿ ಕಟ್ಟಡಗಳಿವೆ.
ಸಭೆಯಲ್ಲಿ ಭಾಗವಹಿಸಿದ್ದ ರೈತರು ಹಾಗೂ ಸಾರ್ವಜನಿಕರು ಯೋಜನೆ ಕುರಿತ ಸಾಧಕ-ಬಾಧಕಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು, ಯೋಜನಾ ರಸ್ತೆಯಲ್ಲಿ ಕೆಲವು ಅಂಡರ್ ಪಾಸ್, ಸರ್ವಿಸ್ ರಸ್ತೆ, ಪರಿಹಾರ ಕುರಿತಂತೆ ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯಲ್ಲಿ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಚಿತ್ರದುರ್ಗ ವಿಭಾಗದ ಯೋಜನಾ ನಿರ್ದೇಶಕ ಸೋಮಶೇಖರ್, ಜಿ.ಪಂ. ಸದಸ್ಯ ರಾಮಣ್ಣ ಚೌಡ್ಕಿ ಸೇರಿದಂತೆ ಹಲವು ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.
ಹೀಗಾಗಿ ಲೇಖನಗಳು ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳನ್ನು ಜೋಡಿಸುವ ಭಾರತಮಾಲಾ ಯೋಜನೆ : ಕೊಪ್ಪಳ-ಮೆತಗಲ್ ಬೈಪಾಸ್ ರಸ್ತೆ ಅಭಿವೃದ್ಧಿಗೆ ಪೂರಕವಾಗಲಿದೆ- ಸಂಸದ ಕರಡಿ ಸಂಗಣ್ಣ
ಎಲ್ಲಾ ಲೇಖನಗಳು ಆಗಿದೆ ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳನ್ನು ಜೋಡಿಸುವ ಭಾರತಮಾಲಾ ಯೋಜನೆ : ಕೊಪ್ಪಳ-ಮೆತಗಲ್ ಬೈಪಾಸ್ ರಸ್ತೆ ಅಭಿವೃದ್ಧಿಗೆ ಪೂರಕವಾಗಲಿದೆ- ಸಂಸದ ಕರಡಿ ಸಂಗಣ್ಣ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳನ್ನು ಜೋಡಿಸುವ ಭಾರತಮಾಲಾ ಯೋಜನೆ : ಕೊಪ್ಪಳ-ಮೆತಗಲ್ ಬೈಪಾಸ್ ರಸ್ತೆ ಅಭಿವೃದ್ಧಿಗೆ ಪೂರಕವಾಗಲಿದೆ- ಸಂಸದ ಕರಡಿ ಸಂಗಣ್ಣ ಲಿಂಕ್ ವಿಳಾಸ https://dekalungi.blogspot.com/2018/06/blog-post_58.html
0 Response to "ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳನ್ನು ಜೋಡಿಸುವ ಭಾರತಮಾಲಾ ಯೋಜನೆ : ಕೊಪ್ಪಳ-ಮೆತಗಲ್ ಬೈಪಾಸ್ ರಸ್ತೆ ಅಭಿವೃದ್ಧಿಗೆ ಪೂರಕವಾಗಲಿದೆ- ಸಂಸದ ಕರಡಿ ಸಂಗಣ್ಣ"
ಕಾಮೆಂಟ್ ಪೋಸ್ಟ್ ಮಾಡಿ