ಶೀರ್ಷಿಕೆ : ಜು. 01 ರಂದು ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಪ್ರವೇಶ ಪರೀಕ್ಷೆ : ಅಗತ್ಯ ಸಿದ್ಧತೆಗೆ ರವಿ ತಿರ್ಲಾಪುರ ಸೂಚನೆ
ಲಿಂಕ್ : ಜು. 01 ರಂದು ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಪ್ರವೇಶ ಪರೀಕ್ಷೆ : ಅಗತ್ಯ ಸಿದ್ಧತೆಗೆ ರವಿ ತಿರ್ಲಾಪುರ ಸೂಚನೆ
ಜು. 01 ರಂದು ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಪ್ರವೇಶ ಪರೀಕ್ಷೆ : ಅಗತ್ಯ ಸಿದ್ಧತೆಗೆ ರವಿ ತಿರ್ಲಾಪುರ ಸೂಚನೆ

ಕೊಪ್ಪಳ ಜೂ. 28 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಜುಲೈ. 01 ರಂದು ಯು.ಪಿ.ಎಸ್.ಸಿ., ಕೆ.ಎ.ಎಸ್., ಎಸ್.ಎಸ್.ಸಿ., ಬ್ಯಾಂಕಿಂಗ್ ಹುದ್ದೆಗಳಿಗೆ ತರಬೇತಿ ನೀಡಲು ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಪ್ರವೇಶ ಪರೀಕ್ಷೆ ಜುಲೈ. 01 ರಂದು ಜಿಲ್ಲೆಯಲ್ಲಿ ನಡೆಯಲಿದ್ದು, ಅಗತ್ಯ ಸಿದ್ಧತೆಗಳನ್ನು ಸಮರ್ಪಕವಾಗಿ ಕೈಗೊಳ್ಳುವಂತೆ ಉಪ ವಿಭಾಗಾಧಿಕಾರಿ ರವಿ ತಿರ್ಲಾಪುರ ಅವರು ಸಂಬಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿವಿಧ ಸ್ಪಧಾತ್ಮಕ ಪ್ರವೇಶ ಪರೀಕ್ಷೆಯ ನಿಮಿತ್ಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರದಂದು ಏರ್ಪಡಿಸಲಾದ ಪೂರ್ವಬಾವಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಯು.ಪಿ.ಎಸ್.ಸಿ., ಕೆ.ಎ.ಎಸ್., ಎಸ್.ಎಸ್.ಸಿ., ಬ್ಯಾಂಕಿಂಗ್ ಹುದ್ದೆಗಳಿಗೆ ತರಬೇತಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಗಳು ಜಿಲ್ಲೆಯ ಕೊಪ್ಪಳದ 07 ಮತ್ತು ಗಂಗಾವತಿಯ 05 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿವೆ. ಒಟ್ಟು 4720 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಜುಲೈ. 01 ರಂದು ಬೆಳಿಗ್ಗೆ 10-30 ರಿಂದ ಯು.ಪಿ.ಎಸ್.ಸಿ., ಕೆ.ಎ.ಎಸ್ ಹಾಗೂ ಮಧ್ಯಾಹ್ನ. 2-30 ರಿಂದ 4-30 ರವರೆಗೆ ಎಸ್.ಎಸ್.ಸಿ., ಬ್ಯಾಂಕಿಂಗ್ ಪರೀಕ್ಷೆಗಳು ಜರುಗಲಿವೆ. ಪರೀಕ್ಷೆ ಸುಗಮವಾಗಿ ಹಾಗೂ ಕಟ್ಟುನಿಟ್ಟಾಗಿ ಜರುಗಬೇಕು. ಪ್ರಶ್ನೆಪತ್ರಿಕೆ ಹಾಗೂ ಇತರೆ ರಹಸ್ಯ ಬಂಡಲ್‍ಗಳು ಬೆಂಗಳೂರಿನಿಂದ ಜಿಲ್ಲಾ ಖಜಾನೆಗೆ ಬರಲಿದ್ದು, ತ್ರಿ-ಸದಸ್ಯ ಸಮಿತಿಯವರು ಸ್ವೀಕರಿಸಿ ಖಜಾನೆಯಲ್ಲಿ ಠೇವಣಿ ಇರಿಸಬೇಕು. ಅಲ್ಲದೆ ಪರೀಕ್ಷಾ ಕೇಂದ್ರಕ್ಕೆ ನಿಗದಿತ ಸಮಯದೊಳಗೆ ಸರಿಯಾಗಿ ಭದ್ರತಾ ಸಿಬ್ಬಂದಿ ಹಾಗೂ ಜವಾಬ್ದಾರಿ ವಹಿಸಿರುವ ಅಧಿಕಾರಿಗಳೊಂದಿಗೆ ತಲುಪಿಸುವ ವ್ಯವಸ್ಥೆ ಆಗಬೇಕು. ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆ, ಅವ್ಯವಹಾರಗಳು ನಡೆಯದಂತೆ ಪರೀಕ್ಷಾ ಕೇಂದ್ರ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು. ಪೊಲೀಸ್ ಬಂದೋಬಸ್ತ ಹಾಗೂ ಪರೀಕ್ಷಾ ಕೇಂದ್ರಗಳ ಸುತ್ತ ಮುತ್ತಲಿನಲ್ಲಿ ಝರಾಕ್ಸ್ ಅಂಗಡಿಗಳನ್ನು ಬಂದ್ ಮಾಡುವಂತೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಕೊಠಡಿ ಹೊರಗೆ ಹಾಗೂ ಕಾಲೇಜಿನ ಕಾರಿಡಾರನಲ್ಲಿ ಮತ್ತು ನೆಲದ ಮೇಲೆ ಕುಳಿತು ಪರೀಕ್ಷೆ ಬರೆಸುವುದು ಆಗಬಾರದು. ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳಿಗೆ ಸಮರ್ಪಕ ಆಸನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಅಧಿಕಾರಿಗಳು, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಮೊಬೈಲ್, ಕೈ ಗಡಿಯಾರ, ಲ್ಯಾಪ್‍ಟಾಪ್ ಇತರೆ ಎಲೆಕ್ಟ್ರಾನಿಕ್ ವಸ್ತುಗಳ ಬಳಕೆಯಾಗಬಾರದು. ಎಂದು ಉಪ ವಿಭಾಗಾಧಿಕಾರಿ ರವಿ ತಿರ್ಲಾಪುರ ಅವರು ಹೇಳಿದರು.
ಪರೀಕ್ಷಾ ಕೇಂದ್ರಗಳ ವಿವರ :
*********ಕೊಪ್ಪಳ ಜಿಲ್ಲೆಯಲ್ಲಿ ಜುಲೈ. 01 ರಂದು ನಡೆಯಲಿರುವ ಯು.ಪಿ.ಎಸ್.ಸಿ., ಕೆ.ಎ.ಎಸ್., ಎಸ್.ಎಸ್.ಸಿ., ಬ್ಯಾಂಕಿಂಗ್ ಸಾಮಾನ್ಯ ಪ್ರವೇಶ ಪರೀಕ್ಷೆಗಳು ನಡೆಯುವ ಪರೀಕ್ಷಾ ಕೇಂದ್ರಗಳ ವಿವರ ಇಂತಿದೆ. ಕೊಪ್ಪಳದ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಗವಿಸಿದ್ದೇಶ್ವರ ಪಿಯು ಕಾಲೇಜು, ಬಸಮ್ಮ ಕಾತರಗಿ ಸೈನ್ಸ್, ಆಟ್ರ್ಸ್ & ಕಾಮರ್ರ್ಸ್ ಪಿಯು ಕಾಲೇಜು, ಸ್ವಾಮಿ ವಿವೇಕಾನಂದ ಹೈಸ್ಕೂಲ್, ನವಚೇತನ ಪಿಯು ಸೈನ್ಸ್ ರೆಸಿಡೆಂಶಿಯಲ್ ಕಾಲೇಜು ಭಾಗ್ಯನಗರ (ಯತ್ನಟ್ಟಿ ರೋಡ್), ಸರಕಾರಿ ಪ್ರಥಮ ದರ್ಜೆ ಕಾಲೇಜು, ಗಂಗಾವತಿಯ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಎಸ್.ಎಂ.ಎನ್.ಎಂ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಹೆಚ್.ಆರ್ ಸರೋಜಮ್ಮ ಬಾಲಕಿಯರ ಪದವಿ ಪೂರ್ವ ಕಾಲೇಜು, ಜೆ.ಎಸ್.ಎಸ್. ಕ್ಯಾಂಪ್ ಪಿಯು ಕಾಲೇಜ ಜುಲೈ ನಗರ ಹಾಗೂ ಬೆಥಲ್ ಗಲ್ರ್ಸ್ ಪಿಯು ಕಾಲೇಜಿನಲ್ಲಿ ನಡೆಯಲಿದೆ.
ಸಭೆಯಲ್ಲಿ ಕೊಪ್ಪಳ ತಹಶಿಲ್ದಾರ ಗುರುಬಸವರಾಜ, ಡಿಡಿಪಿಯು ಎಲ್.ಜಿ. ರಾಟಿಮನಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಕೊಪ್ಪಳ ಮತ್ತು ಗಂಗಾವತಿ ಪರೀಕ್ಷಾ ಕೇಂದ್ರಗಳ ಪ್ರಾಶುಂಪಾಲರು ಉಪಸ್ಥಿತರಿದ್ದರು.
ಹೀಗಾಗಿ ಲೇಖನಗಳು ಜು. 01 ರಂದು ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಪ್ರವೇಶ ಪರೀಕ್ಷೆ : ಅಗತ್ಯ ಸಿದ್ಧತೆಗೆ ರವಿ ತಿರ್ಲಾಪುರ ಸೂಚನೆ
ಎಲ್ಲಾ ಲೇಖನಗಳು ಆಗಿದೆ ಜು. 01 ರಂದು ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಪ್ರವೇಶ ಪರೀಕ್ಷೆ : ಅಗತ್ಯ ಸಿದ್ಧತೆಗೆ ರವಿ ತಿರ್ಲಾಪುರ ಸೂಚನೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಜು. 01 ರಂದು ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಪ್ರವೇಶ ಪರೀಕ್ಷೆ : ಅಗತ್ಯ ಸಿದ್ಧತೆಗೆ ರವಿ ತಿರ್ಲಾಪುರ ಸೂಚನೆ ಲಿಂಕ್ ವಿಳಾಸ https://dekalungi.blogspot.com/2018/06/01.html
0 Response to "ಜು. 01 ರಂದು ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಪ್ರವೇಶ ಪರೀಕ್ಷೆ : ಅಗತ್ಯ ಸಿದ್ಧತೆಗೆ ರವಿ ತಿರ್ಲಾಪುರ ಸೂಚನೆ"
ಕಾಮೆಂಟ್ ಪೋಸ್ಟ್ ಮಾಡಿ