ಶೀರ್ಷಿಕೆ : ಪ್ರೋ. ಪಿ.ಸಿ. ಮಹಾಲನೋಬಿಸ್ ಅವರ ಜನ್ಮ ದಿನಾಚರಣೆ : ಅಂಕಿ-ಅಂಶಗಳ ಸಮರ್ಪಕ ಹೊಂದಾಣಿಕೆ ಮಾಡುವುದೇ ವ್ಯವಸ್ಥಿತ ಆಡಳಿತ : ಪ್ರಭುರಾಜ ನಾಯಕ
ಲಿಂಕ್ : ಪ್ರೋ. ಪಿ.ಸಿ. ಮಹಾಲನೋಬಿಸ್ ಅವರ ಜನ್ಮ ದಿನಾಚರಣೆ : ಅಂಕಿ-ಅಂಶಗಳ ಸಮರ್ಪಕ ಹೊಂದಾಣಿಕೆ ಮಾಡುವುದೇ ವ್ಯವಸ್ಥಿತ ಆಡಳಿತ : ಪ್ರಭುರಾಜ ನಾಯಕ
ಪ್ರೋ. ಪಿ.ಸಿ. ಮಹಾಲನೋಬಿಸ್ ಅವರ ಜನ್ಮ ದಿನಾಚರಣೆ : ಅಂಕಿ-ಅಂಶಗಳ ಸಮರ್ಪಕ ಹೊಂದಾಣಿಕೆ ಮಾಡುವುದೇ ವ್ಯವಸ್ಥಿತ ಆಡಳಿತ : ಪ್ರಭುರಾಜ ನಾಯಕ
ಕೊಪ್ಪಳ, ಜೂ. 29 (ಕರ್ನಾಟಕ ವಾರ್ತೆ): ಸಾರ್ವಜನಿಕರ ಆಡಳಿತ ನಿಂತಿರುವುದೇ ಅಂಕಿ-ಅಂಶಗಳಿಂದ, ಹೀಗಾಗಿ ಅಂಕಿ-ಅಂಶಗಳನ್ನು ಸಮರ್ಪಕವಾಗಿ ಹೊಂದಾಣಿಕೆ ಮಾಡುವಂತಹದ್ದೇ ವ್ಯವಸ್ಥಿತ ಆಡಳಿತವಾಗಿದೆ ಎಂದು ಕೊಪ್ಪಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ಪ್ರಭುರಾಜ ನಾಯಕ ಅವರು ಹೇಳಿದರು.

ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ಕೊಪ್ಪಳ ಜಿಲ್ಲಾಡಳಿತ, ಹಾಗೂ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಛೇರಿ ಇವರ ಸಹಯೋಗದಲ್ಲಿ ಶುಕ್ರವಾರದಂದು ಕೊಪ್ಪಳದ ಗವಿಸಿದ್ದೇಶ್ವರ ಪ.ಪೂ. ಮಹಾವಿದ್ಯಾಲಯದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಭಾರತದ ಖ್ಯಾತ ಸಂಖ್ಯಾ ಶಾಸ್ತ್ರಜ್ಞ ಪ್ರೊ. ಪಿ.ಸಿ. ಮಹಾಲನೋಬಿಸ್ ರವರ ಜನ್ಮ ದಿನಾಚರಣೆ ಸಮಾರಂಭದಲ್ಲಿ ವಿಶೇಷ ಉಪನ್ಯಾಸಕರಾಗಿ ಪಾಲ್ಗೊಂಡು ಅವರು ಮಾತನಾಡಿದರು.


ಸಮಸ್ಯೆಗಳನ್ನು ಗುರುತಿಸಲು ಅಂಕಿ-ಅಂಶಗಳು ಅವಶ್ಯವಾಗಿವೆ. ಒಂದು ನಿರ್ಧಿಷ್ಟ ಗುರಿ ತಲುಪಬೇಕಾದರೆ, ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಲು, ಒಂದು ಯೋಜನೆ ಯಶಸ್ವಿಗೊಳ್ಳಬೇಕಾದರೆ ಹಾಗೂ ಯೋಜನೆಗಳ ನಿಯಂತ್ರಣ ಮಾಡಬೇಕಾದರೆ ಅಂಕಿ-ಅಂಶಗಳು ಮುಖ್ಯವಾಗಿವೆ. ಸರಿಯಾದ ಅಂಕಿ-ಅಂಶಗಳು ದೇಶಕ್ಕೆ ದೂರದೃಷ್ಟಿಯಲ್ಲಿ ಕೊಂಡೊಯುತ್ತವೆ. ಜಗತ್ತಿನ ಮುಂದುವರೆದಿರುವ ದೇಶಗಳು ವಸ್ತುನಿಷ್ಠ ಮಾದರಿಯಲ್ಲಿ ನಿಖರ ಮಾಹಿತಿ ಸಂಗ್ರಹಿಸುವ ಮೂಲಕವೇ ಯಶಸ್ಸು ಗಳಿಸಿವೆ. ಅವಶ್ಯಕತೆಗಳನ್ನು, ಆದ್ಯತತೆಗಳನ್ನು ಗುರುತಿಸಿ, ಅಗತ್ಯ ಯೋಜನೆಗಳನ್ನು ಸಿದ್ಧಪಡಿಸಲು, ಆದ್ಯತಾ ವಲಯಗಳನ್ನು ಗುರುತಿಸಲು, ಅಂಕಿ-ಸಂಖ್ಯೆ ಬಹಳಷ್ಟು ಪ್ರಮುಖ ಪಾತ್ರ ವಹಿಸುತ್ತವೆ. ಭಾರತ ದೇಶದ ಅಂಕಿ-ಸಂಖ್ಯೆ ಸಂಸ್ಥೆಯ ಸಂಸ್ಥಾಪಕ ಹಾಗೂ ಪಿತಾಮಹರಾದ ಪ್ರೋ. ಪಿ.ಸಿ. ಮಹಾಲನೋಬಿಸ್ ಅವರು ಜೂನ್. 29 ರ 1893 ರಂದು ಕಲ್ಕತ್ತಾದಲ್ಲಿ ಜನಿಸಿದರು. ಪ್ರಾರಂಭಿಕ ಶಿಕ್ಷಣವನ್ನು ಮುಗಿಸಿ, ಭೌತಶಾಸ್ತ್ರದಲ್ಲಿ ಬ್ಯಾಚಲರ್ ಡಿಗ್ರಿಯನ್ನು ಪಡೆದು ನಂತರ ಇಂಗ್ಲೆಂಡಿಗೆ ಹೋದರು. ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದರು. ಅಲ್ಲಿನ ಸಂಖ್ಯಾ ಶಾಸ್ತ್ರಜ್ಞ ‘ಕಾರ್ಲ್ ಪೀಯರ್ಸ್’ ಅವರ ಸಂಖ್ಯಾ ತತ್ವಗಳಿಗೆ ಪ್ರಭಾವಿತರಾಗಿ ಸಂಖ್ಯಾ ಶಾಸ್ತ್ರದ ಕಡೆಗೆ ಹೆಚ್ಚಿನ ಗಮನ ಹರಿಸಿದರು. ಮಹಾಲನೋಬಿಸ್ ರವರು 2ನೇಯ ಪಂಚವಾರ್ಷಿಕ ಯೋಜನೆ ರೂಪಿಸುವಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸಿದ್ದರು. ವಿವಿಧ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. ಎಂದು ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಶುಂಪಾಲಕರಾದ ಪ್ರಭುರಾಜ ನಾಯಕ ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗವಿಸಿದ್ದೇಶ್ವರ ಪ.ಪೂ. ಮಹಾವಿದ್ಯಾಲಯದ ಪ್ರಾಚಾರ್ಯ ಸಿದ್ದಲಿಂಗಪ್ಪ ಕೊಟ್ನೇಕಲ್ ಅವರು ಮಾತನಾಡಿ, ಸಂಖ್ಯಾಶಾಸ್ತ್ರವನ್ನು ಯಾವುದೇ ವಿದ್ಯಾರ್ಥಿಗಳು ಹಗುರವಾಗಿ ಪರಿಗಣಿಸಬಾರದು. ಜೀವನದ ಪ್ರತಿಯೊಂದು ಹೆಜ್ಜೆಗೂ ಅಂಕಿ-ಸಂಖ್ಯೆಗಳ ಅಗತ್ಯತೆ ಇರುತ್ತದೆ ಎಂದರು.
ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಅವರು ಮಾತನಾಡಿ, ಜನರ ಅಭ್ಯುದಯಕ್ಕಾಗಿ ಸರ್ಕಾರ ರೂಪಿಸುವ ಯಾವುದೇ ಯೋಜನೆಗಳು, ಆಯಾ ವ್ಯಾಪ್ತಿಯ ಅಂಕಿ-ಅಂಶಗಳ ನಿಖರತೆಯನ್ನು ಅವಲಂಬಿಸಿರುತ್ತದೆ. ಅಂಕಿ-ಅಂಶಗಳ ನಿಖರತೆಯಲ್ಲಿ ವ್ಯತ್ಯಾಸವಾದಲ್ಲಿ ಅಂತಹ ಯೋಜನೆಗಳು ವಿಫಲವಾಗುತ್ತವೆ. ದೇಶದ ಪರಿಣಾಮಕಾರಿ ಅಭಿವೃದ್ಧಿಗೆ ಪಂಚವಾರ್ಷಿಕ ಯೋಜನೆಗಳು ಏಕೆ ಬೇಕು, ಯಾವ ರೀತಿ ಅನುಷ್ಠಾನಗೊಳ್ಳಬೇಕು, ಯಾವ ಕ್ಷೇತ್ರಗಳಿಗೆ ಆದ್ಯತೆ ನೀಡಬೇಕು ಎನ್ನುವುದರ ಬಗ್ಗೆ ಅಂಕಿ-ಅಂಶಗಳ ಸಹಿತ ಸಾಕಾರಗೊಳ್ಳುವಲ್ಲಿ ಪ್ರೊ. ಮಹಾಲನೋಬಿಸ್ ಅವರ ಕೊಡುಗೆ ಅತ್ಯಂತ ಪ್ರಮುಖವಾಗಿದೆ ಎಂದರು.
ಕಾಲೇಜಿನ ನಿವೃತ್ತ ಪ್ರಾಚಾರ್ಯ ಪರೀಕ್ಷಿತರಾಜ್ ಅವರು ಮಾತನಾಡಿ, ಯಾವುದೇ ಸಂಶೋಧನೆಗಳಿಗೆ ಸಮೀಕ್ಷೆಗಳೇ ಮೂಲಾಧಾರ. ಬಂಡವಾಳ ಹೂಡಿಕೆ, ಆರೋಗ್ಯ ಕ್ಷೇತ್ರ, ಅಭಿವೃದ್ಧಿ, ಜನಸಂಖ್ಯೆ ಕುರಿತಾದ ಸಂಶೋಧನೆಗಳಿಗೆ ಅಂಕಿ-ಅಂಶಗಳೇ ಮೂಲ ಆಧಾರ. ಇಂದಿನ ವಿದ್ಯಾರ್ಥಿಗಳಲ್ಲಿ ವಿಜ್ಞಾನ ವಿಷಯವೇ ಹೆಚ್ಚು ಆಸಕ್ತಿದಾಯವಾಗಿದೆ. ಆದರೆ ಅರ್ಥಶಾಸ್ತ್ರ ಅಧ್ಯಯನಕ್ಕೂ ಇದೀಗ ವ್ಯಾಪಕ ಬೇಡಿಕೆ ಇದೆ. ಅರ್ಥಶಾಸ್ತ್ರ ಅಧ್ಯಯನ ಕೈಗೊಳ್ಳುವ ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗಾವಕಾಶಗಳು ಇವೆ ಎಂದರು.
ಕಾಲೇಜಿನ ಉಪನ್ಯಾಸಕ ಗುರುರಾಜ್ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಸ್ವಾಗತಿಸಿ, ನಿರೂಪಿಸಿದರು. ಕಾರ್ಯಕ್ರಮದ ಉದ್ಘಾಟನೆಗೂ ಮುನ್ನ ಸಂಖ್ಯಾ ಶಾಸ್ತ್ರಜ್ಞ ಪ್ರೊ. ಪಿ.ಸಿ. ಮಹಾಲನೋಬಿಸ್ ಅವರ ಭಾವಚಿತ್ರಕ್ಕೆ ಎಲ್ಲ ಗಣ್ಯರು ಪುಷ್ಪನಮನ ಸಲ್ಲಿಸಿದರು. ಅಲ್ಲದೆ ದಿನಾಚರಣೆಯ ಅಂಗವಾಗಿ ಪ್ರೊ. ಪಿ.ಎಸ್. ಮಹಲನೋಬಿಸ್ ಅವರ ಸಂಕ್ಷಿಪ್ತ ಪರಿಚಯ ಅಳವಡಿಸಿದ ನೋಟ್‍ಬುಕ್‍ಗಳನ್ನು ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ವಿತರಿಸಲಾಯಿತು.
ಹೀಗಾಗಿ ಲೇಖನಗಳು ಪ್ರೋ. ಪಿ.ಸಿ. ಮಹಾಲನೋಬಿಸ್ ಅವರ ಜನ್ಮ ದಿನಾಚರಣೆ : ಅಂಕಿ-ಅಂಶಗಳ ಸಮರ್ಪಕ ಹೊಂದಾಣಿಕೆ ಮಾಡುವುದೇ ವ್ಯವಸ್ಥಿತ ಆಡಳಿತ : ಪ್ರಭುರಾಜ ನಾಯಕ
ಎಲ್ಲಾ ಲೇಖನಗಳು ಆಗಿದೆ ಪ್ರೋ. ಪಿ.ಸಿ. ಮಹಾಲನೋಬಿಸ್ ಅವರ ಜನ್ಮ ದಿನಾಚರಣೆ : ಅಂಕಿ-ಅಂಶಗಳ ಸಮರ್ಪಕ ಹೊಂದಾಣಿಕೆ ಮಾಡುವುದೇ ವ್ಯವಸ್ಥಿತ ಆಡಳಿತ : ಪ್ರಭುರಾಜ ನಾಯಕ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಪ್ರೋ. ಪಿ.ಸಿ. ಮಹಾಲನೋಬಿಸ್ ಅವರ ಜನ್ಮ ದಿನಾಚರಣೆ : ಅಂಕಿ-ಅಂಶಗಳ ಸಮರ್ಪಕ ಹೊಂದಾಣಿಕೆ ಮಾಡುವುದೇ ವ್ಯವಸ್ಥಿತ ಆಡಳಿತ : ಪ್ರಭುರಾಜ ನಾಯಕ ಲಿಂಕ್ ವಿಳಾಸ https://dekalungi.blogspot.com/2018/06/blog-post_53.html
0 Response to "ಪ್ರೋ. ಪಿ.ಸಿ. ಮಹಾಲನೋಬಿಸ್ ಅವರ ಜನ್ಮ ದಿನಾಚರಣೆ : ಅಂಕಿ-ಅಂಶಗಳ ಸಮರ್ಪಕ ಹೊಂದಾಣಿಕೆ ಮಾಡುವುದೇ ವ್ಯವಸ್ಥಿತ ಆಡಳಿತ : ಪ್ರಭುರಾಜ ನಾಯಕ"
ಕಾಮೆಂಟ್ ಪೋಸ್ಟ್ ಮಾಡಿ