ಶೀರ್ಷಿಕೆ : ಮಾದಕ ವ್ಯಸನಿಗಳಿಂದ ದೇಶದ ಸಾಮಾಜಿಕ ಅಭಿವೃದ್ಧಿ ಕುಂಠಿತ- ಡಾ. ರಾಮಕೃಷ್ಣ
ಲಿಂಕ್ : ಮಾದಕ ವ್ಯಸನಿಗಳಿಂದ ದೇಶದ ಸಾಮಾಜಿಕ ಅಭಿವೃದ್ಧಿ ಕುಂಠಿತ- ಡಾ. ರಾಮಕೃಷ್ಣ
ಮಾದಕ ವ್ಯಸನಿಗಳಿಂದ ದೇಶದ ಸಾಮಾಜಿಕ ಅಭಿವೃದ್ಧಿ ಕುಂಠಿತ- ಡಾ. ರಾಮಕೃಷ್ಣ
ಕೊಪ್ಪಳ ಜೂ. 29 (ಕರ್ನಾಟಕ ವಾರ್ತೆ) : ಮದ್ಯ ಮತ್ತು ಮಾದಕ ವ್ಯಸನಿಗಳಿಂದಾಗಿ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಸಾಮಾಜಿಕ ಅಭಿವೃದ್ಧಿಗೆ ಅಡ್ಡಿಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳ ಕಛೇರಿ ಹಾಗೂ ಪೋಲಿಸ್ ಇಲಾಖೆ ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ‘‘ಅಂತರ ರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಅಕ್ರಮ ಕಳ್ಳ ಸಾಗಾಣಿಕೆ ವಿರೋಧಿ ಸಪ್ತಾಹ’’ ಅಂಗವಾಗಿ ಕೊಪ್ಪಳದಲ್ಲಿ ಶುಕ್ರವಾರದಂದು ಏರ್ಪಡಿಸಲಾದ ‘’ ಜನಜಾಗೃತಿ ಜಾಥಾ’’ ಉದ್ಘಾಟಿಸಿ ಮಾತನಾಡಿದರು.
ಮನುಷ್ಯ ತನ್ನ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಆರೋಗ್ಯವಂತ ಸಮಾಜದಿಂದ ದೇಶದ ಅಭಿವೃದ್ಧಿ ಸಾಧ್ಯ. ಆದರೆ ಇಂದಿನ ಯುವಪೀಳಿಗೆ ತಮಗರಿವಿಲ್ಲದೆ ದುಶ್ಚಟಗಳಿಗೆ ಮಾರುಹೋಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಮಾದಕ ವಸ್ತುಗಳಾದ ಗಾಂಜಾ, ಅಪೀಮ್, ಕುಡಿತ. ಡ್ರಗ್ಸ್ ಸೇವನೆ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇದನ್ನು ತಡೆಗಟ್ಟುವ ಉದ್ದೇಶದಿಂದ ಆರೋಗ್ಯ ಇಲಾಖೆ ಹೆಚ್ಚಿನ ಕಾಳಜಿವಹಿಸಿ ಜಾಗೃತಿ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡುವ ಪ್ರಯತ್ನ ಮಾಡುತ್ತಿದೆ. ಭಾರತದಲ್ಲಿ 7.32 ಕೋಟಿ ಜನ ಮದ್ಯ ಮತ್ತು ಮಾದಕ ವಸ್ತುಗಳ ವ್ಯಸನಗಳಾಗಿದ್ದಾರೆ. ಇದರಲ್ಲಿ 6.25 ಕೋಟಿ ಜನ ಮದ್ಯ ವ್ಯಸನಿಗಳು, 87 ಲಕ್ಷ ಜನ ಗಾಂಜಾ ವ್ಯಸನಿಗಳು, 20 ಲಕ್ಷ ಜನ ಅಪೀಮ್ ವ್ಯಸನಿಗಳಾಗಿದ್ದಾರೆ. ಬಹಳಷ್ಟು ರಸ್ತೆ ಅಪಘಾತಗಳು ಮದ್ಯಪಾನ ಹಾಗೂ ಮಾದಕ ವ್ಯಸನಿಗಳಿಂದ ಸಂಭವಿಸುತ್ತವೆ ಎಂಬುದಾಗಿ ವರದಿಗಳಿಂದ ತಿಳಿದುಬರುತ್ತದೆ ಎಂದು ಡಾ. ರಾಮಕೃಷ್ಣ ಕಳವಳ ವ್ಯಕ್ತ ಪಡಿಸಿದರು.
ಜಿಲ್ಲಾ ಮಾನಸಿಕ ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ. ಎಸ್.ಕೆ. ದೇಸಾಯಿ ಅವರು ಮಾತನಾಡಿ, ಆತ್ಮಹತ್ಯೆ ಪ್ರಕರಣಗಳಲ್ಲಿ ಶೇ. 25 ರಷ್ಟು ಮದ್ಯಪಾನ ವ್ಯಸನಿಗಳಿಂದ ಸಂಭವಿಸುತ್ತವೆ. ಈ ವರ್ಷ ‘’ಮೊದಲು ಆಲಿಸಿ - ಮಕ್ಕಳ ಮತ್ತು ಯುವಕರ ಸಮಸ್ಯೆಗಳನ್ನು ಆಲಿಸುವುದು ಅವರ ಆರೋಗ್ಯಕರ ಹಾಗೂ ಸುರಕ್ಷತೆ ಬೆಳವಣಿಗೆಗೆ ಬೇಕಾಗುವ ಮೊದಲ ಹೆಜ್ಜೆ’’ ಎಂಬ ಘೋಷ ವಾಕ್ಯದಡಿಯಲ್ಲಿ ಈ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ ಎಂದರು.
ಜನಜಾಗೃತಿ ಜಾಥಾ ಕಾರ್ಯಕ್ರಮವು ಹಳೆ ಜಿಲ್ಲಾ ಆಸ್ಪತ್ರೆ ಆವರಣದಿಂದ ಅಶೋಕ ವೃತ್ತ, ಹಸನ್‍ರೋಡ, ದಿವಟರ್ ವೃತ್ತ, ಡಾ|| ಸಿಂಪಿಲಿಂಗಣ್ಣ ರಸ್ತೆ ಮಾರ್ಗವಾಗಿ ಕೇಂದ್ರ ಬಸ್ ನಿಲ್ದಾಣದವರೆಗೆ ನೆರವೇರಿತು. ಬಸ್ ನಿಲ್ದಾಣದಲ್ಲಿ ಕಾರ್ಯಕ್ರಮದ ಅಂಗವಾಗಿ ಕುಷ್ಟಗಿಯ ಜನಜಾಗೃತಿ ಕಲಾ ಸಂಸ್ಥೆಯ ಕಲಾವಿದ ಶರಣಪ್ಪ ವಡಿಗೇರಿ ಇವರ ನಾಯಕತ್ವದಲ್ಲಿ ಕಾರ್ಯಕ್ರಮಕ್ಕೆ ಸಂಬಂಧಿಸಿದ ಬೀದಿ ನಾಟಕ ಪ್ರದರ್ಶನಗೊಂಡಿತು.
ಕಾರ್ಯಕ್ರಮದಲ್ಲಿ ಡಾ|| ಜಂಬಯ್ಯ ಜಿಲ್ಲಾ ಕುಟುಂಬ ಕಲ್ಯಾಣ ಅನುಷ್ಠಾನಾಧಿಕಾರಿಗಳು, ಡಾ|| ರಾಮಾಂಜನೇಯ ಕೊಪ್ಪಳ ತಾಲೂಕಾ ಆರೋಗ್ಯಾಧಿಕಾರಿಗಳು, ಶಿವಾನಂದ ಪ್ರಭಾರಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು. ಕಿರಿಯ ಆರೋಗ್ಯ ಸಹಾಯಕರು, ತರಬೇತಿ ಕೇಂದ್ರದ ವಿಧ್ಯಾರ್ಥಿನಿಯರು, ಆಶಾ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಹೀಗಾಗಿ ಲೇಖನಗಳು ಮಾದಕ ವ್ಯಸನಿಗಳಿಂದ ದೇಶದ ಸಾಮಾಜಿಕ ಅಭಿವೃದ್ಧಿ ಕುಂಠಿತ- ಡಾ. ರಾಮಕೃಷ್ಣ
ಎಲ್ಲಾ ಲೇಖನಗಳು ಆಗಿದೆ ಮಾದಕ ವ್ಯಸನಿಗಳಿಂದ ದೇಶದ ಸಾಮಾಜಿಕ ಅಭಿವೃದ್ಧಿ ಕುಂಠಿತ- ಡಾ. ರಾಮಕೃಷ್ಣ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಮಾದಕ ವ್ಯಸನಿಗಳಿಂದ ದೇಶದ ಸಾಮಾಜಿಕ ಅಭಿವೃದ್ಧಿ ಕುಂಠಿತ- ಡಾ. ರಾಮಕೃಷ್ಣ ಲಿಂಕ್ ವಿಳಾಸ https://dekalungi.blogspot.com/2018/06/blog-post_29.html

0 Response to "ಮಾದಕ ವ್ಯಸನಿಗಳಿಂದ ದೇಶದ ಸಾಮಾಜಿಕ ಅಭಿವೃದ್ಧಿ ಕುಂಠಿತ- ಡಾ. ರಾಮಕೃಷ್ಣ"
ಕಾಮೆಂಟ್ ಪೋಸ್ಟ್ ಮಾಡಿ