ನೇಮಕ ಪ್ರಕ್ರಿಯೆ ಪೂರ್ಣಗೊಳಿಸಿದ ಮೊದಲ ಜಿಲ್ಲೆ ಕೊಪ್ಪಳ : ಖಾಯಂಗೊಂಡ 89 ಪೌರಕಾರ್ಮಿಕರಿಗೆ ನೇಮಕ ಆದೇಶ ಪತ್ರ ವಿತರಣೆ

ನೇಮಕ ಪ್ರಕ್ರಿಯೆ ಪೂರ್ಣಗೊಳಿಸಿದ ಮೊದಲ ಜಿಲ್ಲೆ ಕೊಪ್ಪಳ : ಖಾಯಂಗೊಂಡ 89 ಪೌರಕಾರ್ಮಿಕರಿಗೆ ನೇಮಕ ಆದೇಶ ಪತ್ರ ವಿತರಣೆ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ನೇಮಕ ಪ್ರಕ್ರಿಯೆ ಪೂರ್ಣಗೊಳಿಸಿದ ಮೊದಲ ಜಿಲ್ಲೆ ಕೊಪ್ಪಳ : ಖಾಯಂಗೊಂಡ 89 ಪೌರಕಾರ್ಮಿಕರಿಗೆ ನೇಮಕ ಆದೇಶ ಪತ್ರ ವಿತರಣೆ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ನೇಮಕ ಪ್ರಕ್ರಿಯೆ ಪೂರ್ಣಗೊಳಿಸಿದ ಮೊದಲ ಜಿಲ್ಲೆ ಕೊಪ್ಪಳ : ಖಾಯಂಗೊಂಡ 89 ಪೌರಕಾರ್ಮಿಕರಿಗೆ ನೇಮಕ ಆದೇಶ ಪತ್ರ ವಿತರಣೆ
ಲಿಂಕ್ : ನೇಮಕ ಪ್ರಕ್ರಿಯೆ ಪೂರ್ಣಗೊಳಿಸಿದ ಮೊದಲ ಜಿಲ್ಲೆ ಕೊಪ್ಪಳ : ಖಾಯಂಗೊಂಡ 89 ಪೌರಕಾರ್ಮಿಕರಿಗೆ ನೇಮಕ ಆದೇಶ ಪತ್ರ ವಿತರಣೆ

ಓದಿ


ನೇಮಕ ಪ್ರಕ್ರಿಯೆ ಪೂರ್ಣಗೊಳಿಸಿದ ಮೊದಲ ಜಿಲ್ಲೆ ಕೊಪ್ಪಳ : ಖಾಯಂಗೊಂಡ 89 ಪೌರಕಾರ್ಮಿಕರಿಗೆ ನೇಮಕ ಆದೇಶ ಪತ್ರ ವಿತರಣೆ

ಆರೋಗ್ಯ ಹಾಗೂ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲು ಪೌರಕಾರ್ಮಿಕರಿಗೆ ಡಿಸಿ ಕನಗವಲ್ಲಿ ಕರೆ
***************************
ಕೊಪ್ಪಳ ಜೂ. 23 (ಕರ್ನಾಟಕ ವಾರ್ತೆ):ನಗರ, ಪಟ್ಟಣಗಳ ಸ್ವಚ್ಛತೆಯಂತಹ ಪ್ರಮುಖ ಕಾರ್ಯ ನಿರ್ವಹಿಸುವ ಪೌರಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದಲ್ಲದೆ, ತಮ್ಮ ಮಕ್ಕಳ ಶಿಕ್ಷಣಕ್ಕೂ ಪ್ರಮುಖ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಪೌರಕಾರ್ಮಿಕರಿಗೆ ಕರೆ ನೀಡಿದರು.

     ಪೌರಕಾರ್ಮಿಕರ ವಿಶೇಷ ನೇರ ನೇಮಕಾತಿ ನಿಯಮಗಳಡಿ ಖಾಯಂಗೊಂಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ 89 ಪೌರಕಾರ್ಮಿಕರಿಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನೇಮಕಾತಿ ಆದೇಶ ಪತ್ರ ವಿತರಿಸಿ ಅವರು ಮಾತನಾಡಿದರು.
     ಗುತ್ತಿಗೆ / ದಿನಗೂಲಿ ಆಧಾರದಲ್ಲಿ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವವರನ್ನು ಖಾಯಂಗೊಳಿಸಬೇಕು ಎನ್ನುವ ಬೇಡಿಕೆ ಬಹಳ ಕಾಲದಿಂದಲೂ ಇತ್ತು.  ಇದೀಗ ಅವರ ಬೇಡಿಕೆ ಈಡೇರಿದಂತಾಗಿದೆ.  ಇನ್ನೂ ಕೆಲವರಿಗೆ ಖಾಯಂಗೊಳಿಸಲು ಸಾಧ್ಯವಾಗಿಲ್ಲ.  ಆದರೆ ಈ ಕುರಿತು ಪ್ರಸ್ತಾವನೆಯನ್ನು ಈಗಾಗಲೆ ಸರ್ಕಾರಕ್ಕೆ ಸಲ್ಲಿಸಲಾಗಿದೆ.  ನೇಮಕಾತಿ ಆದೇಶ ಪಡೆದಿರುವ ಎಲ್ಲ ಪೌರ ಕಾರ್ಮಿಕರಿಗೂ ಅಭಿನಂದನೆ ಸಲ್ಲಿಸುವುದರ ಜೊತೆಗೆ, ಸ್ವಚ್ಛತೆಯ ಕಾರ್ಯ ನಿರ್ವಹಿಸುವ ತಾವು, ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರತ್ತ ಗಮನ ನೀಡಬೇಕು.  ತಮ್ಮ ಕರ್ತವ್ಯವನ್ನು ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಮಾಡಬೇಕು.  ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸಿ, ಅವರನ್ನು ವಿದ್ಯಾವಂತರನ್ನಾಗಿ ಮಾಡಿ ಎನ್ನುವ ಮನವಿಯನ್ನು ಮಾಡುತ್ತೇನೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

89 ಪೌರಕಾರ್ಮಿಕರಿಗೆ ನೇಮಕಾತಿ ಆದೇಶ :
**************** ಈಗಿನ ನಿಯಮದಂತೆ ನಗರ, ಪಟ್ಟಣಗಳಲ್ಲಿ ಪ್ರತಿ 700 ಜನಸಂಖ್ಯೆಗೆ ಒಬ್ಬರು ಪೌರಕಾರ್ಮಿಕರು ಇರಬೇಕು. ಕೊಪ್ಪಳ ಜಿಲ್ಲೆಯಲ್ಲಿ 02 ನಗರಸಭೆ, 02- ಪುರಸಭೆ ಹಾಗೂ 05 ಪಟ್ಟಣ ಪಂಚಾಯತಿಗಳು ಇವೆ.  ಈ ಪೈಕಿ 04 ಪಟ್ಟಣ ಪಂಚಾಯತಿ ಹಾಗೂ 01 ಪುರಸಭೆ ಸೇರಿ ಒಟ್ಟು 05 ಸ್ಥಳೀಯ ಸಂಸ್ಥೆಗಳು ಕೆಲ ವರ್ಷಗಳ ಹಿಂದೆಯಷ್ಟೇ ಗ್ರಾ.ಪಂ. ನಿಂದ ಮೇಲ್ದರ್ಜೆಗೇರಿದ ಸಂಸ್ಥೆಗಳಾಗಿವೆ.  ಸರ್ಕಾರ ಪೌರಕಾರ್ಮಿಕರ ವಿಶೇಷ ನೇಮಕಾತಿ ನಿಯಮ ರೂಪಿಸಿದ್ದರಿಂದ ಕಳೆದ ಐದಾರು ತಿಂಗಳ ಹಿಂದೆ ಅರ್ಜಿ ಆಹ್ವಾನಿಸಿ, ಗುತ್ತಿಗೆ /ದಿನಗೂಲಿ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದ ಪೌರಕಾರ್ಮಿಕರನ್ನು ಖಾಯಂಗೊಳಿಸಲು ಕ್ರಮ ಕೈಗೊಳ್ಳಲಾಗಿತ್ತು.  ನೇಮಕ ಪ್ರಕ್ರಿಯೆಯನ್ನು ತ್ವರಿತವಾಗಿ ಕೈಗೊಂಡು, ಕಳೆದ ಮಾರ್ಚ್ ತಿಂಗಳಿನಲ್ಲಿಯೇ ನೇಮಕ ಆದೇಶ ನೀಡಬೇಕಾಗಿತ್ತು.  ಆದರೆ ಚುನಾವಣೆ ನೀತಿ ಸಂಹಿತೆ ಜಾರಿಯಾದ ಕಾರಣದಿಂದ ನೇಮಕ ಆದೇಶ ನೀಡುವುದು ವಿಳಂಬವಾಯಿತು.  ಕೊಪ್ಪಳ ಜಿಲ್ಲೆ ಇಡೀ ರಾಜ್ಯದಲ್ಲಿಯೇ ಪೌರಕಾರ್ಮಿಕರ ನೇಮಕ ಪ್ರಕ್ರಿಯೆ ತ್ವರಿತವಾಗಿ ಕೈಗೊಂಡು ನೇಮಕ ಆದೇಶ ನೀಡುತ್ತಿರುವ ಮೊದಲ ಜಿಲ್ಲೆ ಆಗಿದೆ.  ಇದೀಗ ಒಟ್ಟು 89 ಪೌರಕಾರ್ಮಿಕರನ್ನು ಖಾಯಂಗೊಳಿಸಿ, ನೇಮಕ ಆದೇಶ ನೀಡಲಾಗಿದೆ.  ಕೊಪ್ಪಳ ನಗರಸಭೆ- 17, ಗಂಗಾವತಿ-10, ಕುಷ್ಟಗಿ- 8, ಯಲಬುರ್ಗಾ-02, ಕಾರಟಗಿ- 20, ಕುಕನೂರ- 15, ಭಾಗ್ಯನಗರ- 08, ಕನಕಗಿರಿ-06 ಹಾಗೂ ತಾವರಗೇರಾ ಪಟ್ಟಣ ಪಂಚಾಯತಿಯಲ್ಲಿ 03 ಜನ ಪೌರಕಾರ್ಮಿಕರಿಗೆ ನೇಮಕಾತಿ ಆದೇಶ ನೀಡಲಾಗಿದೆ.   ಕೊಪ್ಪಳ ಜಿಲ್ಲೆಯ ಒಟ್ಟು 09 ನಗರ, ಸ್ಥಳೀಯ ಸಂಸ್ಥೆಗಳಲ್ಲಿ 514 ಪೌರಕಾರ್ಮಿಕರ ಹುದ್ದೆಗಳು ಇವೆ.  ಇದೀಗ 214 ಖಾಯಂ ನೌಕರರಾದಾಂತಾಗಿದ್ದು, ಇನ್ನೂ  157 ಪೌರಕಾರ್ಮಿಕರ ಹುದ್ದೆಗಳು ಖಾಲಿ ಉಳಿದಿವೆ.  ಖಾಲಿ ಇರುವ 157 ಹುದ್ದೆಗಳನ್ನು ಭರ್ತಿ ಮಾಡಲು ಅವಕಾಶ ಮಾಡಿಕೊಡುವಂತೆ ಈಗಾಗಲೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.  ಅನುಮೋದನೆ ದೊರೆತಲ್ಲಿ, ಉಳಿದ ಹುದ್ದೆಗಳನ್ನೂ ಕೂಡ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.

     ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯಕುಮಾರ ಮೆಕ್ಕಳಕಿ ಅವರು ಮಾತನಾಡಿ, ಕೊಪ್ಪಳ ನಗರಸಭೆಯಲ್ಲಿ 120 ಪೌರಕಾರ್ಮಿಕರ ಹುದ್ದೆ ಇದ್ದು, 33 ಖಾಯಂ ಕಾರ್ಮಿಕರಿದ್ದರು, ಈಗ 17 ಜನರಿಗೆ ಖಾಯಂಗೊಳಿಸಿದ್ದು, ಖಾಯಂ ನೌಕರರ ಸಂಖ್ಯೆ 50 ಆದಂತಾಗಿದೆ.  ಇನ್ನೂ 10 ಹುದ್ದೆಗಳು ಖಾಲಿ ಇವೆ.  60 ಜನ ಗುತ್ತಿಗೆ ನೌಕರರಿದ್ದಾರೆ.  ಗಂಗಾವತಿ ನಗರಸಭೆಯಲ್ಲಿ 165 ಹುದ್ದೆಗಳಿದ್ದು, ಈಗ 66 ಖಾಯಂ ಇದ್ದಾರೆ.  16 ಹುದ್ದೆ ಖಾಲಿ ಇದ್ದು, 164 ಗುತ್ತಿಗೆ ಪೌರಕಾರ್ಮಿಕರಿದ್ದಾರೆ.  ಈಗ ಖಾಯಂಗೊಳಿಸಿರುವ ಹುದ್ದೆಗಳನ್ನು ಹೊರತುಪಡಿಸಿ, ಉಳಿದಂತೆ ಕುಷ್ಟಗಿ ಪುರಸಭೆಯಲ್ಲಿ 21 ಪೌರಕಾರ್ಮಿಕರ ಹುದ್ದೆ ಖಾಲಿ ಉಳಿದಿವೆ.  ಯಲಬುರ್ಗಾ-16, ಕಾರಟಗಿ-26, ಕುಕನೂರು-10, ಭಾಗ್ಯನಗರ-21, ಕನಕಗಿರಿ-17 ಹಾಗೂ ತಾವರಗೇರಾ ಪಟ್ಟಣ ಪಂಚಾಯತಿಯಲ್ಲಿ 20 ಪೌರಕಾರ್ಮಿಕರ ಹುದ್ದೆಗಳು ಖಾಲಿ ಉಳಿದಂತಾಗಿದೆ.  ಖಾಲಿ ಉಳಿದಿರುವ ಒಟ್ಟು 157 ಹುದ್ದೆಗಳನ್ನು ಕೂಡ ಭರ್ತಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

     ಖಾಯಂಗೊಂಡು, ನೇಮಕಾತಿ ಆದೇಶ ಸ್ವೀಕರಿಸಿದ ನೌಕರರು ಹಾಗೂ ಪೌರಕಾರ್ಮಿಕ ಮುಖಂಡರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ, ರಾಜ್ಯದ ಯಾವ ಜಿಲ್ಲೆಯಲ್ಲಿಯೂ ಇನ್ನೂ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿಲ್ಲ.  ಆದರೆ ಕೊಪ್ಪಳ ಜಿಲ್ಲೆಯಲ್ಲಿ ಈಗಿನ ಜಿಲ್ಲಾಧಿಕಾರಿಗಳಂತಹ ಸಹೃದಯಿ ಹಾಗೂ ಪ್ರಾಮಾಣಿಕ ಅಧಿಕಾರಿಗಳ ಪ್ರಯತ್ನದಿಂದಾಗಿ, ಪೌರಕಾರ್ಮಿಕರಿಗೆ ನಿವೇಶನವನ್ನು ನೀಡಿದ್ದಾರೆ.  ಅನುಕಂಪ ಆಧಾರಿತ ನೇಮಕಗಳನ್ನೂ ಸಹ ಬೇಗನೆ ಮಾಡಿಕೊಟ್ಟಿದ್ದಾರೆ.  ಅಲ್ಲದೆ ಇದೀಗ ಖಾಯಂ ನೌಕರರಾಗಿ ನಾವು ನೇಮಕಾತಿ ಆದೇಶವನ್ನು ಪಡೆಯುತ್ತಿದ್ದೇವೆ.  ಪೌರ ಕಾರ್ಮಿಕರ ಬಗ್ಗೆ ಅಧಿಕಾರಿಗಳು ಹೊಂದಿರುವ ಕಾಳಜಿಗೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ.  ಅಲ್ಲದೆ ಇನ್ನಷ್ಟು ಜವಾಬ್ದಾರಿಯಿಂದ, ನಿಷ್ಠೆಯಿಂದ ಸ್ವಚ್ಛತಾ ಕಾಯಕವನ್ನು ನಾವು ನಿರ್ವಹಿಸುತ್ತೇವೆ ಎಂದು ಭರವಸೆ ನೀಡಿದರು.
     ಕಾರ್ಯಕ್ರಮದಲ್ಲಿ ಕೊಪ್ಪಳ ನಗರಸಭೆ ಪೌರಾಯುಕ್ತ ಸುನಿಲ್ ಪಾಟೀಲ್ ಸೇರಿದಂತೆ ವಿವಿಧ ನಗರ, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಪಾಲ್ಗೊಂಡಿದ್ದರು.  ಪೌರಕಾರ್ಮಿಕರ ಹುದ್ದೆಯ ನೇಮಕಾತಿ ಆದೇಶ ಪಡೆದ ನೌಕರರು, ಅಭಿಮಾನದಿಂದ ಜಿಲ್ಲಾಧಿಕಾರಿಗಳನ್ನು ಹಾಗೂ ಯೋಜನಾ ನಿರ್ದೇಶಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿದರು.


ಹೀಗಾಗಿ ಲೇಖನಗಳು ನೇಮಕ ಪ್ರಕ್ರಿಯೆ ಪೂರ್ಣಗೊಳಿಸಿದ ಮೊದಲ ಜಿಲ್ಲೆ ಕೊಪ್ಪಳ : ಖಾಯಂಗೊಂಡ 89 ಪೌರಕಾರ್ಮಿಕರಿಗೆ ನೇಮಕ ಆದೇಶ ಪತ್ರ ವಿತರಣೆ

ಎಲ್ಲಾ ಲೇಖನಗಳು ಆಗಿದೆ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಿದ ಮೊದಲ ಜಿಲ್ಲೆ ಕೊಪ್ಪಳ : ಖಾಯಂಗೊಂಡ 89 ಪೌರಕಾರ್ಮಿಕರಿಗೆ ನೇಮಕ ಆದೇಶ ಪತ್ರ ವಿತರಣೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಿದ ಮೊದಲ ಜಿಲ್ಲೆ ಕೊಪ್ಪಳ : ಖಾಯಂಗೊಂಡ 89 ಪೌರಕಾರ್ಮಿಕರಿಗೆ ನೇಮಕ ಆದೇಶ ಪತ್ರ ವಿತರಣೆ ಲಿಂಕ್ ವಿಳಾಸ https://dekalungi.blogspot.com/2018/06/89.html

Subscribe to receive free email updates:

0 Response to "ನೇಮಕ ಪ್ರಕ್ರಿಯೆ ಪೂರ್ಣಗೊಳಿಸಿದ ಮೊದಲ ಜಿಲ್ಲೆ ಕೊಪ್ಪಳ : ಖಾಯಂಗೊಂಡ 89 ಪೌರಕಾರ್ಮಿಕರಿಗೆ ನೇಮಕ ಆದೇಶ ಪತ್ರ ವಿತರಣೆ"

ಕಾಮೆಂಟ್‌‌ ಪೋಸ್ಟ್‌ ಮಾಡಿ