ಶೀರ್ಷಿಕೆ : ಕೊಪ್ಪಳ, ಇರಕಲ್ಲಗಡ ಬೈಪಾಸ್ ರಸ್ತೆ ಪ್ರಸ್ತಾವನೆ : ಜೂ. 27 ರಂದು ಸಮಾಲೋಚನಾ ಸಭೆ
ಲಿಂಕ್ : ಕೊಪ್ಪಳ, ಇರಕಲ್ಲಗಡ ಬೈಪಾಸ್ ರಸ್ತೆ ಪ್ರಸ್ತಾವನೆ : ಜೂ. 27 ರಂದು ಸಮಾಲೋಚನಾ ಸಭೆ
ಕೊಪ್ಪಳ, ಇರಕಲ್ಲಗಡ ಬೈಪಾಸ್ ರಸ್ತೆ ಪ್ರಸ್ತಾವನೆ : ಜೂ. 27 ರಂದು ಸಮಾಲೋಚನಾ ಸಭೆ
ಕೊಪ್ಪಳ ಜೂ. 23 (ಕರ್ನಾಟಕ ವಾರ್ತೆ): ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಭಾರತಮಾಲಾ ಲಾಟ್ 3, ಪ್ಯಾಕೇಜ್-2 ಕಾರ್ಯಕ್ರಮದಡಿ ಕೊಪ್ಪಳ-ಇರಕಲ್ಲಗಡ-ಮೆತಗಲ್ ವರೆಗಿನ ಬೈಪಾಸ್ ರಸ್ತೆ ನಿರ್ಮಿಸುವ ಪ್ರಸ್ತಾವನೆ ಹೊಂದಿದ್ದು, ಈ ಕುರಿತು ಜೂ. 27 ರಂದು ಬೆಳಿಗ್ಗೆ 10-30 ಗಂಟೆಗೆ ಕೊಪ್ಪಳದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸಾರ್ವಜನಿಕರೊಂದಿಗೆ ಸಮಾಲೋಚನಾ ಸಭೆಯನ್ನು ಆಯೋಜಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಭಾರತಮಾಲಾ ಲಾಟ್ 3 (ಆಂಧ್ರಪ್ರದೇಶ, ಕರ್ನಾಟಕ, ಗೋವಾ ಮತ್ತು ಕೇರಳ/ ಪ್ಯಾಕೇಜ್ 2) ಕಾರ್ಯಕ್ರಮದಡಿ ದೇಶದಲ್ಲಿನ ಆರ್ಥಿಕ ಕಾರಿಡಾರ್ ಅಭಿವೃದ್ಧಿ, ಒಳ ಮಾರ್ಗಗಳ ಅಭಿವೃದ್ಧಿ, ಸಂರ್ಪಕ ಮಾರ್ಗಗಳ ಅಭಿವೃದ್ಧಿಯ ಉದ್ದೇಶದಿಂದ ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸುವ ಕೊಪ್ಪಳ-ಇರಕಲ್ಲಗಡ-ಮೆತಗಲ್ ಬೈಪಾಸ್ ರಸ್ತೆಯನ್ನು ನಿರ್ಮಿಸುವ ಯೋಜನೆಗೆ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವ ಕಾರ್ಯವನ್ನು ಕೈಗೊಂಡಿದೆ. ಈ ದಿಸೆಯಲ್ಲಿ ಈ ಮಾರ್ಗದಲ್ಲಿ ಬರುವ ಗ್ರಾಮಗಳಲ್ಲಿ ಅಗತ್ಯ ಸೌಕರ್ಯಗಳನ್ನು ಒದಗಿಸುವುದಕ್ಕೆ ಸಂಬಂಧಿಸಿದಂತೆ ಹಾಗೂ ಯೋಜನೆ ಕುರಿತಂತೆ ಜೂ. 27 ರಂದು ಬೆಳಿಗ್ಗೆ 10-30 ಗಂಟೆಗೆ ಕೊಪ್ಪಳದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸಾರ್ವಜನಿಕರೊಂದಿಗೆ ಸಮಾಲೋಚನಾ ಸಭೆಯನ್ನು ಆಯೋಜಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ದದೇಗಲ್, ಹಲಗೇರಿ, ಯತ್ನಟ್ಟಿ, ಓಜನಹಳ್ಳಿ, ಟಣಕನಕಲ್, ಲೇಬಗೇರಾ, ಹಟ್ಟಿ, ತಾಡಕನಕಾಪುರ, ಯಲಮಗೇರಾ, ಇರಕಲ್ಲಗಡ, ಕೊಡದಾಳ, ಚಾಮಲಾಪುರ, ಚಿಲಕಮುಖಿ, ಸಿಡಗನಹಳ್ಳಿ, ಹಿರೇಸೂಳಿಕೆರಿ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರುಗಳಿಗೆ ಈಗಾಗಲೆ ಸಭೆಯಲ್ಲಿ ಭಾಗವಹಿಸುವಂತೆ ಆಹ್ವಾನಿಸಿದೆ. ಸಭೆಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪಾಲ್ಗೊಳ್ಳುವರು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಚಿತ್ರದುರ್ಗ ವಿಭಾಗದ ಯೋಜನಾ ನಿರ್ದೇಶಕರು ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಕೊಪ್ಪಳ, ಇರಕಲ್ಲಗಡ ಬೈಪಾಸ್ ರಸ್ತೆ ಪ್ರಸ್ತಾವನೆ : ಜೂ. 27 ರಂದು ಸಮಾಲೋಚನಾ ಸಭೆ
ಎಲ್ಲಾ ಲೇಖನಗಳು ಆಗಿದೆ ಕೊಪ್ಪಳ, ಇರಕಲ್ಲಗಡ ಬೈಪಾಸ್ ರಸ್ತೆ ಪ್ರಸ್ತಾವನೆ : ಜೂ. 27 ರಂದು ಸಮಾಲೋಚನಾ ಸಭೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಕೊಪ್ಪಳ, ಇರಕಲ್ಲಗಡ ಬೈಪಾಸ್ ರಸ್ತೆ ಪ್ರಸ್ತಾವನೆ : ಜೂ. 27 ರಂದು ಸಮಾಲೋಚನಾ ಸಭೆ ಲಿಂಕ್ ವಿಳಾಸ https://dekalungi.blogspot.com/2018/06/27_23.html
0 Response to "ಕೊಪ್ಪಳ, ಇರಕಲ್ಲಗಡ ಬೈಪಾಸ್ ರಸ್ತೆ ಪ್ರಸ್ತಾವನೆ : ಜೂ. 27 ರಂದು ಸಮಾಲೋಚನಾ ಸಭೆ"
ಕಾಮೆಂಟ್ ಪೋಸ್ಟ್ ಮಾಡಿ