ವಿಧಾನಪರಿಷತ್ ಈಶಾನ್ಯ ಪದವಿಧರ ಕ್ಷೇತ್ರ ಚುನಾವಣೆ : ಕೊಪ್ಪಳ ಜಿಲ್ಲೆಯಲ್ಲಿ ಶೇ. 74. 77 ರಷ್ಟು ದಾಖಲೆಯ ಮತದಾನ

ವಿಧಾನಪರಿಷತ್ ಈಶಾನ್ಯ ಪದವಿಧರ ಕ್ಷೇತ್ರ ಚುನಾವಣೆ : ಕೊಪ್ಪಳ ಜಿಲ್ಲೆಯಲ್ಲಿ ಶೇ. 74. 77 ರಷ್ಟು ದಾಖಲೆಯ ಮತದಾನ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ವಿಧಾನಪರಿಷತ್ ಈಶಾನ್ಯ ಪದವಿಧರ ಕ್ಷೇತ್ರ ಚುನಾವಣೆ : ಕೊಪ್ಪಳ ಜಿಲ್ಲೆಯಲ್ಲಿ ಶೇ. 74. 77 ರಷ್ಟು ದಾಖಲೆಯ ಮತದಾನ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ವಿಧಾನಪರಿಷತ್ ಈಶಾನ್ಯ ಪದವಿಧರ ಕ್ಷೇತ್ರ ಚುನಾವಣೆ : ಕೊಪ್ಪಳ ಜಿಲ್ಲೆಯಲ್ಲಿ ಶೇ. 74. 77 ರಷ್ಟು ದಾಖಲೆಯ ಮತದಾನ
ಲಿಂಕ್ : ವಿಧಾನಪರಿಷತ್ ಈಶಾನ್ಯ ಪದವಿಧರ ಕ್ಷೇತ್ರ ಚುನಾವಣೆ : ಕೊಪ್ಪಳ ಜಿಲ್ಲೆಯಲ್ಲಿ ಶೇ. 74. 77 ರಷ್ಟು ದಾಖಲೆಯ ಮತದಾನ

ಓದಿ


ವಿಧಾನಪರಿಷತ್ ಈಶಾನ್ಯ ಪದವಿಧರ ಕ್ಷೇತ್ರ ಚುನಾವಣೆ : ಕೊಪ್ಪಳ ಜಿಲ್ಲೆಯಲ್ಲಿ ಶೇ. 74. 77 ರಷ್ಟು ದಾಖಲೆಯ ಮತದಾನ


ಕೊಪ್ಪಳ ಜೂ. 08 (ಕರ್ನಾಟಕ ವಾರ್ತೆ): ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಪದವಿಧರ ಕ್ಷೇತ್ರದ ಚುನಾವಣೆ ನಿಮಿತ್ಯ ಶುಕ್ರವಾರದಂದು ಜಿಲ್ಲೆಯಲ್ಲಿ  ಮತದಾನ ಪ್ರಕ್ರಿಯೆ ಬಹುತೇಕ ಶಾಂತಿಯುತವಾಗಿ ಜರುಗಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಒಟ್ಟಾರೆ ಶೇ. 74. 77 ರಷ್ಟು ಉತ್ತಮ ಪ್ರಮಾಣದ ಮತದಾನವಾಗಿದ್ದು ಕಳೆದ 2012 ರ ಚುನಾವಣೆಯ ಮತದಾನ ಪ್ರಮಾಣಕ್ಕಿಂತಲೂ ಶೇ. 28. 77 ರಷ್ಟು ಹೆಚ್ಚು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ತಿಳಿಸಿದ್ದಾರೆ.



     ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಪದವಿಧರ ಕ್ಷೇತ್ರದ ಚುನಾವಣೆ ನಿಮಿತ್ಯ ಶುಕ್ರವಾರದಂದು ಕೊಪ್ಪಳ ಜಿಲ್ಲೆಯಲ್ಲಿ ಜರುಗಿದ ಮತದಾನದಲ್ಲಿ ಶೇ. 74. 77 ಉತ್ತಮ ಮತದಾನ ಪ್ರಮಾಣ ದಾಖಲಾಗಿದೆ.  ಕಳೆದ 2012 ರಲ್ಲಿ ಜರುಗಿದ ಚುನಾವಣೆಯಲ್ಲಿ ಶೇ. 46 ರಷ್ಟು ಮತದಾನ ದಾಖಲಾಗಿತ್ತು.  ಈಶಾನ್ಯ ಪದವಿಧರ ಕ್ಷೇತ್ರದ ಚುನಾವಣೆ ಸಂಬಂಧ ಮತದಾರರು ಸುಗಮವಾಗಿ ಮತ ಚಲಾಯಿಸಲು ಅನುಕೂಲವಾಗುವಂತೆ, ಮತದಾನ ಕುರಿತು ಅರಿವು ಹಾಗೂ ಕೈಗೊಂಡ ಸುಧಾರಣಾ ಕ್ರಮಗಳಿಂದಾಗಿ ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮತದಾನ ಪ್ರಮಾಣ ದಾಖಲಾಗಿದೆ.

ಕೊಪ್ಪಳ ಜಿಲ್ಲೆ ಟಾಪ್ :
****** ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಪದವಿಧರ ಕ್ಷೇತ್ರದ ಈ ಬಾರಿಯ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಅತಿ ಹೆಚ್ಚು ಶೇ. 74. 77 ರಷ್ಟು ಮತದಾನ ಪ್ರಮಾಣ ದಾಖಲಾಗಿದ್ದು, ಕ್ಷೇತ್ರದಲ್ಲಿಯೇ ಮೊದಲ ಸ್ಥಾನದಲ್ಲಿದೆ.  ಉಳಿದಂತೆ ಕ್ಷೇತ್ರದ ಉಳಿದ ಜಿಲ್ಲೆಗಳಾದ ಬೀದರ್- ಶೇ. 67. 50, ರಾಯಚೂರು- 67. 19, ಬಳ್ಳಾರಿ- 73. 70, ಕಲಬುರಗಿ- 55, ಯಾದಗಿರಿ- ಶೇ. 72. 46 ರಷ್ಟು ಮತದಾನ ದಾಖಲಾಗಿದೆ.

6234 ಮತ ಚಲಾವಣೆ :
*********** ಕೊಪ್ಪಳ ಜಿಲ್ಲೆಯಲ್ಲಿ ಪದವಿಧರ ಕ್ಷೇತ್ರಕ್ಕೆ ಮತ ಚಲಾಯಿಸಲು ಪುರುಷ- 6207, ಮಹಿಳೆ- 2130, ಇತರೆ- 01 ಸೇರಿದಂತೆ ಒಟ್ಟು 8338 ಮತದಾರರು ನೊಂದಣಿ ಮಾಡಿಸಿದ್ದರು.  ಶುಕ್ರವಾರದಂದು ಜರುಗಿದ ಚುನಾವಣೆಯಲ್ಲಿ ಪುರುಷ- 4838, ಮಹಿಳೆ- 1396 ಸೇರಿದಂತೆ ಒಟ್ಟು 6234 ಮತದಾರರು ತಮ್ಮ ಮತದಾನದ ಹಕ್ಕು ಚಲಾಯಿಸಿದ್ದು, ಇದರಿಂದಾಗಿ ಒಟ್ಟಾರೆ ಶೇ. 74. 77 ರಷ್ಟು ಮತದಾನವಾಗಿದೆ.  ಮಹಿಳೆಯರಿಗಿಂತ ಪುರುಷರೇ ಹೆಚ್ಚು ಮತದಾನಕ್ಕೆ ಆಸಕ್ತಿಯಿಂದ ಪಾಲ್ಗೊಂಡಿದ್ದು ಕಂಡುಬಂದಿದೆ.  ಯಲಬುರ್ಗಾ ತಾಲೂಕಿನಲ್ಲಿ ಅತಿ ಹೆಚ್ಚು ಶೇ. 78. 27 ರಷ್ಟು ಮತದಾನವಾಗಿದ್ದರೆ, ಗಂಗಾವತಿ ತಾಲೂಕಿನಲ್ಲಿ ಅತಿ ಕಡಿಮೆ ಶೇ. 71. 02 ರಷ್ಟು ಮತದಾನವಾಗಿದೆ.  ಉಳಿದಂತೆ ಕೊಪ್ಪಳ ತಾಲೂಕಿನಲ್ಲಿ ಶೇ. 76. 04 ಹಾಗೂ ಕುಷ್ಟಗಿ ತಾಲೂಕಿನಲ್ಲಿ ಶೇ. 76. 35 ರಷ್ಟು ಮತದಾನವಾಗಿದೆ.

ಮತದಾರರಿಗೆ ತಿಳುವಳಿಕೆ ಪತ್ರ ವಿಶೇಷ :
*********** ಈಶಾನ್ಯ ಪದವಿಧರ ಕ್ಷೇತ್ರದ ಚುನಾವಣೆಗೆ ಮತ ಚಲಾಯಿಸಲು, ಮತದಾರರ ಪಟ್ಟಿಯಲ್ಲಿನ ಪ್ರತಿಯೊಬ್ಬ ಮತದಾರರಿಗೆ ವಯಕ್ತಿಕವಾಗಿ ತಿಳುವಳಿಕೆ ಪತ್ರವನ್ನು ಆಯಾ ತಹಸಿಲ್ದಾರರ ಕಚೇರಿಯಿಂದ ತಲುಪಿಸುವ ವ್ಯವಸ್ಥೆಯನ್ನು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಕೈಗೊಂಡಿದ್ದು, ಈ ಬಾರಿಯ ವಿಧಾನಪರಿಷತ್ ಚುನಾವಣೆಯ ವಿಶೇಷವಾಗಿತ್ತು.  ಮತದಾನ ನಡೆಯುವ ಅಂದರೆ ಜೂ. 08 ಕ್ಕೆ ನಾಲ್ಕು ದಿನಗಳ ಮೊದಲೆ ಮತದಾರರ ವಿಳಾಸಕ್ಕೆ  ಆಯಾ ತಹಸಿಲ್ದಾರರ ಕಚೇರಿಯಿಂದ ಗ್ರಾಮ ಲೆಕ್ಕಿಗರು, ಕರ ವಸೂಲಿಗಾರರ ಮೂಲಕ ತಿಳುವಳಿಕೆ ಪತ್ರ ವಿತರಿಸುವ ವ್ಯವಸ್ಥೆ ಮಾಡಲಾಗಿತ್ತು.  ತಿಳುವಳಿಕೆ ಪತ್ರದಲ್ಲಿ ಆಯಾ ಮತದಾರರು ಮತ ಚಲಾಯಿಸುವ ಮತಗಟ್ಟೆ ವಿಳಾಸ, ಮತಗಟ್ಟೆ ಸಂಖ್ಯೆ, ಮತದಾರರ ಕ್ರಮ ಸಂಖ್ಯೆ, ಭಾಗ ಸಂಖ್ಯೆಯನ್ನು ನಮೂದಿಸಲಾಗಿತ್ತು.  ಇಂತಹ ವ್ಯವಸ್ಥೆ ಇಡೀ ರಾಜ್ಯದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಮಾತ್ರ ಕೈಗೊಂಡಿದ್ದು ವಿಶೇಷ ಎನಿಸಿತು.  ಅಲ್ಲದೆ ಮತದಾರರ ಮತ್ತು ಚುನಾವಣಾ ಆಯೋಗದ ಅಧಿಕಾರಿಗಳ ಪ್ರಶಂಸೆಗೂ ಪಾತ್ರವಾಯಿತು.  ಇದರ ಜೊತೆಗೆ, ಈ.ಕ.ರ.ಸಾ.ಸಂಸ್ಥೆಯ ಅಧಿಕಾರಿಗಳೊಂದಿಗೆ ಸಭೆ ಕೈಗೊಂಡು, ಹೋಬಳಿಗಳಿಂದ ಮತಗಟ್ಟೆಗಳಿಗೆ ಮತ ಚಲಾಯಿಸಲು ಮತದಾರರು ಬರುವಂತಾಗಲು, ಸಮಯಕ್ಕನುಗುಣವಾಗಿ ಬಸ್ ವ್ಯವಸ್ಥೆ (ಉಚಿತವಲ್ಲ) ಕೈಗೊಳ್ಳಲಾಗಿತ್ತು.  ತಿಳುವಳಿಕೆ ಪತ್ರ ತಲುಪದೆ ಇರುವ ಮತದಾರರಿಗೂ ಅನುಕೂಲವಾಗುವಂತೆ, ಎಲ್ಲ ಮತದಾನ ಕೇಂದ್ರ ಬಳಿ, ಮತದಾರರಿಗೆ ಸೌಲಭ್ಯ ಕೇಂದ್ರ ತೆರೆದು, ಮತದಾರರ ಕ್ರಮ ಸಂಖ್ಯೆ ಹಾಗೂ ಭಾಗ ಸಂಖ್ಯೆಯ ವಿವರದ ಸ್ಲಿಪ್ ನೀಡಲು ಕ್ರಮ ಕೈಗೊಳ್ಳಲಾಗಿತ್ತು.  ಒಟ್ಟಾರೆ ಈ ಬಾರಿಯ ವಿಧಾನಪರಿಷತ್ ಚುನಾವಣೆಯಲ್ಲಿ ಮತದಾರರಿಗೆ ಸುಗಮವಾಗಿ ಮತದಾನ ನಡೆಸುವಂಗತಾಗಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು.  ಇವೆಲ್ಲದರ ಪರಿಣಾಮವಾಗಿ ಈ ಬಾರಿಯ ಪದವಿಧರ ಕ್ಷೇತ್ರದ ಚುನಾವಣೆಯಲ್ಲಿ ಶೇ. 74. 77 ರಷ್ಟು ಉತ್ತಮ ಮತದಾನವಾಗಲು ಸಾಧ್ಯವಾಗಿದೆ.
    ಕೊಪ್ಪಳ ಜಿಲ್ಲೆಯಲ್ಲಿ ಬೆಳಗ್ಗೆ 7 ಗಂಟೆಯಿಂದ ಪ್ರಾರಂಭಗೊಂಡ ಮತದಾನ, ಆರಂಭದಲ್ಲಿ ತೀವ್ರ ಮಂದಗತಿಯಿಂದ ಪ್ರಾರಂಭವಾದರೂ,  ನಂತರದಲ್ಲಿ ವೇಗವನ್ನು ಪಡೆದುಕೊಂಡಿತು.  ಮುಂಗಾರು ಮಳೆಯ ಮೋಡಗಳು ಜಿಲ್ಲೆಯಲ್ಲಿ ಬಹುತೇಕ ಆವರಿಸಿಕೊಂಡಿದ್ದರಿಂದ, ಸೂರ್ಯ ಆಗೊಮ್ಮೆ, ಈಗೊಮ್ಮೆ ಇಣುಕು ಹಾಕುತ್ತಿದ್ದರಿಂದ, ಮತದಾರರಿಗೆ ಬಿಸಿಲಿನ ತಾಪದ ಸಮಸ್ಯೆ ತಲೆದೋರಲಿಲ್ಲ. ಜಿಲ್ಲೆಯಲ್ಲಿ ಕೆಲವೆಡೆ ಮಳೆರಾಯನೂ ಪ್ರತ್ಯಕ್ಷನಾದರೂ, ಮತದಾರರ ಮತದಾನದ ಉತ್ಸಾಹಕ್ಕೆ ಭಂಗ ತರಲಿಲ್ಲ.  ಕೊಪ್ಪಳದಲ್ಲಿ ಬೆಳಿಗ್ಗೆ ಮತದಾನ ಪ್ರಕ್ರಿಯೆ ತೀವ್ರ ಮಂದಗತಿಯಲ್ಲಿ ಪ್ರಾರಂಭಗೊಂಡರೂ, ನಂತರದಲ್ಲಿ ವೇಗ ಪಡೆದುಕೊಂಡಿತು.  ಯಲಬುರ್ಗಾದಲ್ಲೂ ಇದೇ ಪರಿಸ್ಥಿತಿ ಇದ್ದು, ಮಧ್ಯಾಹ್ನ 12 ಗಂಟೆಯ ವೇಳೆಗೆ ಯಲಬುರ್ಗಾದ ಮತಗಟ್ಟೆಯಲ್ಲಿ ಮತದಾನಕ್ಕೆ ಸರದಿ ಸಾಲು ಉದ್ದವಾಗಿತ್ತು. ಇಲ್ಲಿನ ಮತಗಟ್ಟೆಯಲ್ಲಿ ಮತದಾರರು ಜಿಲ್ಲಾಡಳಿತದಿಂದ ತಲುಪಿಸಿದ ತಿಳುವಳಿಕೆ ಪತ್ರ ಹಿಡಿದು ಮತ ಚಲಾವಣೆಗಾಗಿ ಸರದಿ ಸಾಲಿನಲ್ಲಿ ನಿಂತಿದ್ದು ಕಂಡುಬಂದಿತು.  ಕೊಪ್ಪಳ ಜಿಲ್ಲೆಯಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗಿನ ಶೇಕಡಾವಾರು ಮತದಾನ ಪ್ರಮಾಣ ತಾಲೂಕುವಾರು ವಿವರ ಇಂತಿದೆ.
     ಬೆಳಿಗ್ಗೆ 9 ಗಂಟೆಯವರೆಗೆ ಕುಷ್ಟಗಿ- 3. 03, ಗಂಗಾವತಿ- 2. 47, ಯಲಬುರ್ಗಾ- 1. 95 ಮತ್ತು ಕೊಪ್ಪಳ- ಶೇ. 2. 16.  ಜಿಲ್ಲೆಯಲ್ಲಿ ಒಟ್ಟಾರೆ. ಶೇ. 2. 37 ರಷ್ಟು ಮತದಾನವಾಗಿತ್ತು.
     ಬೆಳಿಗ್ಗೆ 11 ಗಂಟೆಯ ವೇಳೆಗೆ ಕುಷ್ಟಗಿ- 12. 26, ಗಂಗಾವತಿ- 13. 05, ಯಲಬುರ್ಗಾ- 13. 02 ಮತ್ತು ಕೊಪ್ಪಳ- ಶೇ. 13. 59.  ಜಿಲ್ಲೆಯಲ್ಲಿ ಒಟ್ಟಾರೆ. ಶೇ. 13. 08 ರಷ್ಟು ಮತದಾನವಾಗಿತ್ತು.
     ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ಕುಷ್ಟಗಿ- 36. 99, ಗಂಗಾವತಿ- 34. 27, ಯಲಬುರ್ಗಾ-43. 80 ಮತ್ತು ಕೊಪ್ಪಳ- ಶೇ. 33. 59.  ಜಿಲ್ಲೆಯಲ್ಲಿ ಒಟ್ಟಾರೆ. ಶೇ. 36. 15 ರಷ್ಟು ಮತದಾನವಾಗಿತ್ತು. 
     ಮಧ್ಯಾಹ್ನ 3 ಗಂಟೆಯ ವೇಳೆಗೆ ಕುಷ್ಟಗಿ- 56. 45, ಗಂಗಾವತಿ- 50. 99, ಯಲಬುರ್ಗಾ- 66. 50 ಮತ್ತು ಕೊಪ್ಪಳ- ಶೇ. 53. 60.  ಜಿಲ್ಲೆಯಲ್ಲಿ ಒಟ್ಟಾರೆ. ಶೇ. 55. 41 ರಷ್ಟು ಮತದಾನವಾಗಿದೆ.
     ಮತದಾನಕ್ಕೆ ಅಂತಿಮ ಸಮಯವಾಗಿದ್ದ ಸಂಜೆ 5 ಗಂಟೆಯ ವೇಳೆಗೆ ಕುಷ್ಟಗಿ- 76. 35,   ಗಂಗಾವತಿ- 71. 02, ಯಲಬುರ್ಗಾ- 78. 27 ಮತ್ತು ಕೊಪ್ಪಳ- ಶೇ. 76. 04.  ಜಿಲ್ಲೆಯಲ್ಲಿ ಒಟ್ಟಾರೆ. ಶೇ. 74. 77 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ತಿಳಿಸಿದ್ದಾರೆ. 


ಹೀಗಾಗಿ ಲೇಖನಗಳು ವಿಧಾನಪರಿಷತ್ ಈಶಾನ್ಯ ಪದವಿಧರ ಕ್ಷೇತ್ರ ಚುನಾವಣೆ : ಕೊಪ್ಪಳ ಜಿಲ್ಲೆಯಲ್ಲಿ ಶೇ. 74. 77 ರಷ್ಟು ದಾಖಲೆಯ ಮತದಾನ

ಎಲ್ಲಾ ಲೇಖನಗಳು ಆಗಿದೆ ವಿಧಾನಪರಿಷತ್ ಈಶಾನ್ಯ ಪದವಿಧರ ಕ್ಷೇತ್ರ ಚುನಾವಣೆ : ಕೊಪ್ಪಳ ಜಿಲ್ಲೆಯಲ್ಲಿ ಶೇ. 74. 77 ರಷ್ಟು ದಾಖಲೆಯ ಮತದಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ವಿಧಾನಪರಿಷತ್ ಈಶಾನ್ಯ ಪದವಿಧರ ಕ್ಷೇತ್ರ ಚುನಾವಣೆ : ಕೊಪ್ಪಳ ಜಿಲ್ಲೆಯಲ್ಲಿ ಶೇ. 74. 77 ರಷ್ಟು ದಾಖಲೆಯ ಮತದಾನ ಲಿಂಕ್ ವಿಳಾಸ https://dekalungi.blogspot.com/2018/06/74-77.html

Subscribe to receive free email updates:

0 Response to "ವಿಧಾನಪರಿಷತ್ ಈಶಾನ್ಯ ಪದವಿಧರ ಕ್ಷೇತ್ರ ಚುನಾವಣೆ : ಕೊಪ್ಪಳ ಜಿಲ್ಲೆಯಲ್ಲಿ ಶೇ. 74. 77 ರಷ್ಟು ದಾಖಲೆಯ ಮತದಾನ"

ಕಾಮೆಂಟ್‌‌ ಪೋಸ್ಟ್‌ ಮಾಡಿ