ಶೀರ್ಷಿಕೆ : ಮಹಿಳೆಯರಲ್ಲಿ ಮತ ಜಾಗೃತಿಗೆ ಕ್ರಮ : ಕೊಪ್ಪಳ ಜಿಲ್ಲೆಯಲ್ಲಿ ಐದು ಸಖಿ ಮತಗಟ್ಟೆಗಳು : ಎಂ. ಕನಗವಲ್ಲಿ
ಲಿಂಕ್ : ಮಹಿಳೆಯರಲ್ಲಿ ಮತ ಜಾಗೃತಿಗೆ ಕ್ರಮ : ಕೊಪ್ಪಳ ಜಿಲ್ಲೆಯಲ್ಲಿ ಐದು ಸಖಿ ಮತಗಟ್ಟೆಗಳು : ಎಂ. ಕನಗವಲ್ಲಿ
ಮಹಿಳೆಯರಲ್ಲಿ ಮತ ಜಾಗೃತಿಗೆ ಕ್ರಮ : ಕೊಪ್ಪಳ ಜಿಲ್ಲೆಯಲ್ಲಿ ಐದು ಸಖಿ ಮತಗಟ್ಟೆಗಳು : ಎಂ. ಕನಗವಲ್ಲಿ
ಕೊಪ್ಪಳ ಮೇ. 01 (ಕರ್ನಾಟಕ ವಾರ್ತೆ): ಮಹಿಳೆಯರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲು ಹಾಗೂ ಚುನಾವಣಾ ಮುಖ್ಯವಾಹಿನಿಗೆ ಮಹಿಳೆಯರನ್ನು ಸೆಳೆಯುವ ಉದ್ದೇಶದಿಂದ ಈ ಬಾರಿ ಕೊಪ್ಪಳ ಜಿಲ್ಲೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ಒಂದರಂತೆ ಒಟ್ಟು 05 ‘ಸಖಿ’ (ಪಿಂಕ್) ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.
ಕೊಪ್ಪಳ ನಗರದ ಪಿಎಲ್‍ಡಿ ಬ್ಯಾಂಕ್ ಬಳಿಯ ಮತಗಟ್ಟೆ ಭಾಗ ಸಂಖ್ಯೆ 126 ಮತಗಟ್ಟೆಯನ್ನು ಸಖಿ ಮತಗಟ್ಟೆಯನ್ನಾಗಿ ರೂಪಿಸಲಾಗುತ್ತಿದ್ದು, ಈ ಕುರಿತು ಮಂಗಳವಾರ ಮತಗಟ್ಟೆಗೆ ಭೇಟಿ ನೀಡಿ ಕಾರ್ಯ ಪರಿಶೀಲಿಸಿ ಅವರು ಮಾತನಾಡಿದರು.
ಸಖಿ ಮತಗಟ್ಟೆಗಳಿವು :
**********ಕುಷ್ಟಗಿ ಕ್ಷೇತ್ರದಲ್ಲಿ ಕುಷ್ಟಗಿ ಕೃಷ್ಣಗಿರಿ ಕಾಲೋನಿಯ ಬಾಲಕರ ಸರ್ಕಾರಿ ಹಿ.ಪ್ರಾ.ಶಾಲೆ, ಭಾಗ ಸಂಖ್ಯೆ- 172. ಇಲ್ಲಿ ಪುರುಷ-234, ಮಹಿಳೆ- 254, ಒಟ್ಟು- 488 ಮತದಾರರಿದ್ದಾರೆ. ಕನಕಗಿರಿ ಕ್ಷೇತ್ರದಲ್ಲಿ ಕನಕಗಿರಿಯ ದ್ಯಾಮವ್ವ ದೇವಸ್ಥಾನ ಬಳಿಯ ಜಿ.ಎಲ್.ಪಿ. ಶಾಲಾ ಕಟ್ಟಡ, ಭಾಗ ಸಂಖ್ಯೆ-71, ಇಲ್ಲಿ ಪುರುಷ-304, ಮಹಿಳೆ- 322, ಒಟ್ಟು- 626 ಮತದಾರರಿದ್ದಾರೆ. ಗಂಗಾವತಿ ಕ್ಷೇತ್ರದಲ್ಲಿ ಗಂಗಾವತಿ ಪಂಪಾನಗರದ ಹೆಚ್.ಆರ್. ಸರೋಜಮ್ಮ ಸ್ಮಾರಕ ಬಾಲಕಿಯರ ಪ.ಪೂ. ಕಾಲೇಜು, ಭಾಗ ಸಂಖ್ಯೆ- 121, ಈ ಮತಗಟ್ಟೆಯಲ್ಲಿ ಪುರುಷ-165, ಮಹಿಳೆ- 185, ಒಟ್ಟು- 350 ಮತದಾರರಿದ್ದಾರೆ. ಯಲಬುರ್ಗಾ ಕ್ಷೇತ್ರದಲ್ಲಿ ಯಲಬುರ್ಗಾದ ಪಟ್ಟಣ ಪಂಚಾಯತಿ ಕಾರ್ಯಾಲಯ ಕಟ್ಟಡ, ಭಾಗ ಸಂಖ್ಯೆ-75, ಇಲ್ಲಿ ಪುರುಷ-497, ಮಹಿಳೆ- 535, ಒಟ್ಟು- 1032 ಮತದಾರರಿದ್ದಾರೆ. ಕೊಪ್ಪಳ ಕ್ಷೇತ್ರದಲ್ಲಿ ಕೊಪ್ಪಳ ನಗರದ ಪಿಎಲ್‍ಡಿ ಬ್ಯಾಂಕ್ ಕಟ್ಟಡ ಭಾಗ ಸಂಖ್ಯೆ- 126. ಇಲ್ಲಿ ಪುರುಷ-454, ಮಹಿಳೆ- 467, ಒಟ್ಟು- 921 ಮತದಾರರಿದ್ದಾರೆ.
ವಿವಿಧ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕೊಪ್ಪಳದಲ್ಲಿ ಸ್ಥಾಪಿಸಲಾಗುತ್ತಿರುವ ಪಿಂಕ್ ಮತಗಟ್ಟೆ ಕಾರ್ಯದ ಪರಿಶೀಲನೆಗೆ ಜಿಲ್ಲಾಧಿಕಾರಿಗಳು ಪಿಂಕ್ ಬಣ್ಣದ ಉಡುಗೆಯನ್ನೇ ಧರಿಸಿ ಆಗಮಿಸಿದ್ದು ವಿಶೇಷವಾಗಿತ್ತು.
ಹೀಗಾಗಿ ಲೇಖನಗಳು ಮಹಿಳೆಯರಲ್ಲಿ ಮತ ಜಾಗೃತಿಗೆ ಕ್ರಮ : ಕೊಪ್ಪಳ ಜಿಲ್ಲೆಯಲ್ಲಿ ಐದು ಸಖಿ ಮತಗಟ್ಟೆಗಳು : ಎಂ. ಕನಗವಲ್ಲಿ
ಎಲ್ಲಾ ಲೇಖನಗಳು ಆಗಿದೆ ಮಹಿಳೆಯರಲ್ಲಿ ಮತ ಜಾಗೃತಿಗೆ ಕ್ರಮ : ಕೊಪ್ಪಳ ಜಿಲ್ಲೆಯಲ್ಲಿ ಐದು ಸಖಿ ಮತಗಟ್ಟೆಗಳು : ಎಂ. ಕನಗವಲ್ಲಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಮಹಿಳೆಯರಲ್ಲಿ ಮತ ಜಾಗೃತಿಗೆ ಕ್ರಮ : ಕೊಪ್ಪಳ ಜಿಲ್ಲೆಯಲ್ಲಿ ಐದು ಸಖಿ ಮತಗಟ್ಟೆಗಳು : ಎಂ. ಕನಗವಲ್ಲಿ ಲಿಂಕ್ ವಿಳಾಸ https://dekalungi.blogspot.com/2018/05/blog-post_98.html
0 Response to "ಮಹಿಳೆಯರಲ್ಲಿ ಮತ ಜಾಗೃತಿಗೆ ಕ್ರಮ : ಕೊಪ್ಪಳ ಜಿಲ್ಲೆಯಲ್ಲಿ ಐದು ಸಖಿ ಮತಗಟ್ಟೆಗಳು : ಎಂ. ಕನಗವಲ್ಲಿ"
ಕಾಮೆಂಟ್ ಪೋಸ್ಟ್ ಮಾಡಿ