ಚುನಾವಣಾ ಅಕ್ರಮ ತಡೆಗೆ ಫ್ಲೈಯಿಂಗ್ ಸ್ಕ್ವಾಡ್ ಸಮರ್ಪಕ ಕಾರ್ಯ- ಎಂ. ಕನಗವಲ್ಲಿ

ಚುನಾವಣಾ ಅಕ್ರಮ ತಡೆಗೆ ಫ್ಲೈಯಿಂಗ್ ಸ್ಕ್ವಾಡ್ ಸಮರ್ಪಕ ಕಾರ್ಯ- ಎಂ. ಕನಗವಲ್ಲಿ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಚುನಾವಣಾ ಅಕ್ರಮ ತಡೆಗೆ ಫ್ಲೈಯಿಂಗ್ ಸ್ಕ್ವಾಡ್ ಸಮರ್ಪಕ ಕಾರ್ಯ- ಎಂ. ಕನಗವಲ್ಲಿ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಚುನಾವಣಾ ಅಕ್ರಮ ತಡೆಗೆ ಫ್ಲೈಯಿಂಗ್ ಸ್ಕ್ವಾಡ್ ಸಮರ್ಪಕ ಕಾರ್ಯ- ಎಂ. ಕನಗವಲ್ಲಿ
ಲಿಂಕ್ : ಚುನಾವಣಾ ಅಕ್ರಮ ತಡೆಗೆ ಫ್ಲೈಯಿಂಗ್ ಸ್ಕ್ವಾಡ್ ಸಮರ್ಪಕ ಕಾರ್ಯ- ಎಂ. ಕನಗವಲ್ಲಿ

ಓದಿ


ಚುನಾವಣಾ ಅಕ್ರಮ ತಡೆಗೆ ಫ್ಲೈಯಿಂಗ್ ಸ್ಕ್ವಾಡ್ ಸಮರ್ಪಕ ಕಾರ್ಯ- ಎಂ. ಕನಗವಲ್ಲಿ


ಕೊಪ್ಪಳ ಮೇ. 01 (ಕರ್ನಾಟಕ ವಾರ್ತೆ) : ಪ್ರಸಕ್ತ ವಿಧಾನಸಭಾ ಚುನಾವಣೆ ನಿಮಿತ್ಯ ಈಗಾಗಲೆ ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡಿದ್ದು, ಜಿಲ್ಲೆಯಾದ್ಯಂತ ಚುನಾವಣಾ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಫ್ಲೈಯಿಂಗ್ ಸ್ಕ್ವಾಡ್ ತಂಡಗಳು ಕಾರ್ಯನಿರತವಾಗಿವೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.

  ವಿಧಾನಸಭೆ ಚುನಾವಣೆ ಸಂಬಂಧ ವಿವಿಧ ಕಾರ್ಯ ಚಟುವಟಿಕೆಗಳ ಕುರಿತು ಪರಿಶೀಲನೆಗಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಸಾಮಾನ್ಯ ವೀಕ್ಷಕರು, ವೆಚ್ಚ ವೀಕ್ಷಕರು ಹಾಗೂ ಪೊಲೀಸ್ ವೀಕ್ಷಕರೊಂದಿಗೆ ಏರ್ಪಡಿಸಲಾಗಿದ್ದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

  ಜಿಲ್ಲೆಯ ಕುಷ್ಟಗಿ, ಕನಕಗಿರಿ, ಗಂಗಾವತಿ, ಯಲಬುರ್ಗಾ ಮತ್ತು ಕೊಪ್ಪಳ ವಿಧಾನಸಭಾ ಕ್ಷೇತ್ರಗಳಿಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡಿದ್ದು, ಮಾನ್ಯತೆ ಹೊಂದಿರುವ ಪಕ್ಷಗಳು ಹಾಗೂ ಪಕ್ಷೇತರ ಅಭ್ಯರ್ಥಿಗಳಿಗೆ ಚುನಾವಣಾ ಗುರುತಿನ ಚಿಹ್ನೆ ನಿಗದಿಪಡಿಸುವ ಕಾರ್ಯ ಅಂತಿಮಗೊಂಡಿದೆ. ಮತಗಟ್ಟೆಗಳ ಅಂತಿಮ ಹಂತದ ಪರಿಶೀಲನೆ ಪೂರ್ಣಗೊಂಡಿದೆ.  ಆಯಾ ಕ್ಷೇತ್ರಗಳಲ್ಲಿ ಇವಿಎಂ ಮತಯಂತ್ರಗಳ ಎರಡನೆ ಹಂತದ ರ್ಯಾಂಡಮೈಜೇಶನ್ ಹಂತ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಈಗಾಗಲೆ ಪೂರ್ಣಗೊಂಡಿದೆ.  ಇವಿಎಂ ಯಂತ್ರದ ಬ್ಯಾಲೆಟ್ ಯೂನಿಟ್‍ಗಳಿಗೆ ಅಭ್ಯರ್ಥಿಗಳ ಹೆಸರು ಹಾಗೂ ಭಾವಚಿತ್ರ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ.   ಜಿಲ್ಲೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಹಾಗೂ ಅಕ್ರಮ ಮದ್ಯ ಸಾಗಾಣಿಕೆ ಪ್ರಕರಣಗಳನ್ನು ತಡೆಗಟ್ಟುವ ಕಾರ್ಯ ಸಮರ್ಪಕವಾಗಿ ನಡೆಯುತ್ತಿದೆ.  ಈಗಾಗಲೆ ಎಸ್‍ಎಸ್‍ಟಿ ತಂಡ ಹಾಗೂ ಫ್ಲೈಯಿಂಗ್ ಸ್ಕ್ವಾಡ್ ತಂಡಗಳು ಕಾರ್ಯ ತತ್ಪರರಾಗಿದ್ದು, ವಿಡಿಯೋ ಚಿತ್ರೀಕರಣ ತಂಡದೊಂದಿಗೆ ಕಾರ್ಯಾಚರಣೆ ಕೈಗೊಳ್ಳುತ್ತಿವೆ.  ಮತದಾರರ ಮೇಲೆ ಪ್ರಭಾವ ಬೀರುವ ಸಲುವಾಗಿ ಹಣ, ಕಾಣಿಕೆ ಅಥವಾ ಮದ್ಯ ಪೂರೈಕೆ, ಉಚಿತ ಊಟ ಪೂರೈಕೆ, ಬೆದರಿಕೆ, ಶಸ್ತ್ರಗಳ ಬಳಕೆ ಸೇರಿದಂತೆ ಇತರೆ ಅಕ್ರಮಗಳ ಬಗ್ಗೆ ದೂರುಗಳು ಕೇಳಿ ಬಂದಲ್ಲಿ, ಫ್ಲೈಯಿಂಗ್ ಸ್ಕ್ವಾಡ್, ವಿಡಿಯೋ ಸರ್ವೆಲೆನ್ಸ್ ತಂಡ, ಎಸ್‍ಎಸ್‍ಟಿ ತಂಡಗಳು ಕಾರ್ಯಾಚರಣೆ ಕೈಗೊಂಡು, ಅಕ್ರಮ ಪತ್ತೆ ಹಚ್ಚಿ, ಪ್ರಕರಣ ದಾಖಲಿಸುವಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿವೆ.  ಫ್ಲೈಯಿಂಗ್ ಸ್ಕ್ವಾಡ್ ತಂಡಗಳಿಗೆ ಹಾಗೂ ಎಸ್‍ಎಸ್‍ಟಿ ತಂಡಗಳಿಗೆ ಈಗಾಗಲೆ ತರಬೇತಿಯನ್ನು ನೀಡಿ, ಸೂಕ್ತ ಮಾರ್ಗದರ್ಶನ ನೀಡಲಾಗಿದೆ.  ತಂಡಗಳು ದೈನಂದಿನ ವರದಿಯನ್ನೂ ಸಲ್ಲಿಸುತ್ತಿವೆ.  ಫ್ಲೈಯಿಂಗ್ ಸ್ಕ್ವಾಡ್ ತಂಡಗಳು ತಮ್ಮ ಕಾರ್ಯಾಚರಣೆ ವ್ಯಾಪ್ತಿಯಲ್ಲಿ, ಧ್ವನಿ ವರ್ಧಕಗಳ ಮೂಲಕ ಜನರಿಗೆ ‘ಚುನಾವಣಾ ಅಕ್ರಮ ಕೈಗೊಳ್ಳುವುದು ಕಾನೂನು ರೀತ್ಯ ಅಪರಾಧವಾಧವಾಗಿದ್ದು, ಮತದಾರರು ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೆ, ನೈತಿಕವಾಗಿ ಮತದಾನ ಮಾಡಬೇಕು, ಮತದಾನಕ್ಕಾಗಿ ಯಾವುದೇ ಹಣ ನೀಡುವುದು ಅಥವಾ ಪಡೆಯುವುದು ಐಪಿಸಿ 171(ಬಿ) ಪ್ರಕಾರ ಅಪರಾಧವಾಗಿದೆ.  ಅಥವಾ ಮತದಾರರಿಗೆ ಯಾವುದೇ ಬಗೆಯ ಬೆದರಿಕೆ ಮಾಡಿ, ಆತನ ಹಕ್ಕನ್ನು ಕಸಿಯಲು ಯತ್ನಿಸಿದಲ್ಲಿ 171(ಸಿ) ಪ್ರಕಾರ ಅಪರಾಧವಾಗಿದೆ.  ಇದಕ್ಕಾಗಿ ಕನಿಷ್ಟ 01 ವರ್ಷ ಜೈಲು ಹಾಗೂ ದಂಡ ವಿಧಿಸಲು ಅವಕಾಶವಿದೆ.  ಈ ಕುರಿತ ಜಾಗೃತಿಯನ್ನು ನೀಡಲು ಫ್ಲೈಯಿಂಗ್ ಸ್ಕ್ವಾಡ್‍ಗಳಿಗೆ ನಿರ್ದೇಶನ ನೀಡಲಾಗಿದೆ.  ಆಯಾ ಕ್ಷೇತ್ರಗಳು ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣೆ ಸಂಬಂಧ ದೂರು ದಾಖಲಿಸಲು ಕಂಟ್ರೋಲ್ ರೂಂ ಸ್ಥಾಪಿಸಿದ್ದು, ದೂರವಾಣಿ ಮೂಲಕ ಬರುವ ದೂರುಗಳನ್ನು ದಾಖಲಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ವಿವರಿಸಿದರು.
  ಕೊಪ್ಪಳ ಕ್ಷೇತ್ರದ ಚುನಾವಣಾ ಸಾಮಾನ್ಯ ವೀಕ್ಷಕ ಎಂ. ಶಂಕರನಾರಾಯಣನ್ ಅವರು ಮಾತನಾಡಿ, ಬ್ಯಾಂಕ್‍ಗಳಲ್ಲಿ ಶಂಕಾಸ್ಪದ ಹಣದ ವ್ಯವಹಾರಗಳ ವಿವರವನ್ನು ಲೀಡ್ ಬ್ಯಾಂಕ್ ಮ್ಯಾನೇಜರ್ ಮೂಲಕ ಆಯಾ ಬ್ಯಾಂಕ್‍ಗಳು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು.  ಜಿಲ್ಲಾಧಿಕಾರಿಗಳು ಪರಿಶೀಲಿಸಿ, ಅಂತಹವರ ವಿವರ ಹಾಗೂ ಮಾಹಿತಿಯನ್ನು ಆಯಾ ಕ್ಷೇತ್ರ ಚುನಾವಣಾಧಿಕಾರಿಗಳಿಗೆ ಹಾಗೂ ವೀಕ್ಷಕರಿಗೆ ಸಲ್ಲಿಸಬೇಕು ಎಂದರು.
  ಗಂಗಾವತಿ, ಯಲಬುರ್ಗಾ ಕ್ಷೇತ್ರಗಳ ಚುನಾವಣೆ ವೆಚ್ಚ ವೀಕ್ಷಕ ಮಹಮ್ಮದ್ ಇರ್ಫಾನ್ ಅವರು ಮಾತನಾಡಿ, ಈಗಾಗಲೆ ಅಭ್ಯರ್ಥಿಗಳಿಗೆ ಮೊದಲ ಹಂತದ ವೆಚ್ಚ ವಿವರಣೆ ಸಮೀಕ್ಷೆಗೆ ಹಾಜರಾಗಲು ಸೂಚನೆ ನೀಡಲಾಗಿತ್ತು.  ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ವೆಚ್ಚ ವಿವರಣೆ ಸಮೀಕ್ಷೆಗೆ ಹಾಜರಾಗುತ್ತಿದ್ದಾರೆ.  ಆದರೆ ಪಕ್ಷೇತರ ಅಭ್ಯರ್ಥಿಗಳು ಹಾಜರಾಗುತ್ತಿಲ್ಲ.  ಪಕ್ಷೇತರ ಅಭ್ಯರ್ಥಿಗಳ ಧೋರಣೆ ಇದೇ ರೀತಿ ಮುಂದುವರೆದರೆ, ಅಂತಹವರಿಗೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದರು.
  ಕುಷ್ಟಗಿ ಮತ್ತು ಕನಕಗಿರಿ ಚುನಾವಣಾ ವೆಚ್ಚ ವೀಕ್ಷಕ ಮನಿಶ್ ಅವರು ಮಾತನಾಡಿ, ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಕೈಗೊಳ್ಳುವ ಪ್ರಚಾರ ಕಾರ್ಯಕ್ರಮಗಳ ಬಗ್ಗೆ ವಿಡಿಯೋ ಸರ್ವೆಲೆನ್ಸ್ ತಂಡಗಳು ಪೂರ್ವಭಾವಿಯಾಗಿ ಮಾಹಿತಿ ಪಡೆದುಕೊಂಡು, ಕಾರ್ಯಕ್ರಮಗಳ ಸ್ಥಳಗಳಿಗೆ ತೆರಳಿ, ವಿಡಿಯೋ ಚಿತ್ರೀಕರಣ ಮಾಡಿಕೊಳ್ಳಬೇಕು.  ಇಂತಹ ವಿಡಿಯೋಗಳನ್ನು ಆಯಾ ಕ್ಷೇತ್ರ ಚುನಾವಣಾಧಿಕಾರಿಗಳು ಪರಿಶೀಲಿಸಿ, ವೆಚ್ಚವನ್ನು ಅಭ್ಯರ್ಥಿಗಳ ಚುನಾವಣಾ ವೆಚ್ಚಕೆ ಸೇರಿಸಬೇಕು.  ನಿಯಮಗಳ ಉಲ್ಲಂಘನೆ ಕಂಡುಬಂದಲ್ಲಿ, ಅಗತ್ಯ ಕ್ರಮ ಕೈಗೊಳ್ಳುವ ಕಾರ್ಯ ಸಮರ್ಪಕವಾಗಿ ಆಗಬೇಕು ಎಂದರು.
  ಕೊಪ್ಪಳ ಜಿಲ್ಲಾ ಪೊಲೀಸ್ ವೀಕ್ಷಕರಾದ ಶಂಕರ್ ಜೈಸ್ವಾಲ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕುರಿತು ನಿಗಾ ವಹಿಸಲಾಗಿದ್ದು, ಅಹಿತಕರ ಘಟನೆಗಳಿಗೆ ಕಾರಣರಾಗುವವರನ್ನು ಯಾವುದೇ ಕಾರಣಕ್ಕೂ, ಯಾರದೇ ಪ್ರಭಾವಕ್ಕೆ ಒಳಗಾಗದೆ ಕಾನೂನು ರೀತ್ಯ ಕ್ರಮ ವಹಿಸಬೇಕು ಎಂದರು.  ಕುಷ್ಟಗಿ ಮತ್ತು ಯಲಬುರ್ಗಾ ಕ್ಷೇತ್ರಗಳ ಸಾಮಾನ್ಯ ವೀಕ್ಷಕ ಕೆ.ಎನ್. ಸತೀಶ್, ಕನಕಗಿರಿ-ಗಂಗಾವತಿ ಕ್ಷೇತ್ರ ಸಾಮಾನ್ಯ ವೀಕ್ಷಕ ಎಂ. ಜಾಯ್‍ಸಿಂಗ್, ಕೊಪ್ಪಳ ವೆಚ್ಚ ವೀಕ್ಷಕ ನೀರಜ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ, ಜಿಲ್ಲಾ ಪಂಚಾಯತಿ ಸಿಇಒ ವೆಂಕಟ್ ರಾಜಾ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಕೊಪ್ಪಳ ಚುನಾವಣಾಧಿಕಾರಿ ಸಿ.ಡಿ. ಗೀತಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಹೀಗಾಗಿ ಲೇಖನಗಳು ಚುನಾವಣಾ ಅಕ್ರಮ ತಡೆಗೆ ಫ್ಲೈಯಿಂಗ್ ಸ್ಕ್ವಾಡ್ ಸಮರ್ಪಕ ಕಾರ್ಯ- ಎಂ. ಕನಗವಲ್ಲಿ

ಎಲ್ಲಾ ಲೇಖನಗಳು ಆಗಿದೆ ಚುನಾವಣಾ ಅಕ್ರಮ ತಡೆಗೆ ಫ್ಲೈಯಿಂಗ್ ಸ್ಕ್ವಾಡ್ ಸಮರ್ಪಕ ಕಾರ್ಯ- ಎಂ. ಕನಗವಲ್ಲಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಚುನಾವಣಾ ಅಕ್ರಮ ತಡೆಗೆ ಫ್ಲೈಯಿಂಗ್ ಸ್ಕ್ವಾಡ್ ಸಮರ್ಪಕ ಕಾರ್ಯ- ಎಂ. ಕನಗವಲ್ಲಿ ಲಿಂಕ್ ವಿಳಾಸ https://dekalungi.blogspot.com/2018/05/blog-post_12.html

Subscribe to receive free email updates:

0 Response to "ಚುನಾವಣಾ ಅಕ್ರಮ ತಡೆಗೆ ಫ್ಲೈಯಿಂಗ್ ಸ್ಕ್ವಾಡ್ ಸಮರ್ಪಕ ಕಾರ್ಯ- ಎಂ. ಕನಗವಲ್ಲಿ"

ಕಾಮೆಂಟ್‌‌ ಪೋಸ್ಟ್‌ ಮಾಡಿ