ಶೀರ್ಷಿಕೆ : ಬಹುಉಪಯೋಗಿ ಚುನಾವಣಾ ಆ್ಯಪ್ : ಡೌನ್‍ಲೋಡ್ ಮಾಡಿ ನೋಡಿ
ಲಿಂಕ್ : ಬಹುಉಪಯೋಗಿ ಚುನಾವಣಾ ಆ್ಯಪ್ : ಡೌನ್‍ಲೋಡ್ ಮಾಡಿ ನೋಡಿ
ಬಹುಉಪಯೋಗಿ ಚುನಾವಣಾ ಆ್ಯಪ್ : ಡೌನ್‍ಲೋಡ್ ಮಾಡಿ ನೋಡಿ
ಕೊಪ್ಪಳ ಮೇ. 07 (ಕರ್ನಾಟಕ ವಾರ್ತೆ): ಈ ಬಾರಿಯ ವಿಧಾನಸಭಾ ಚುನಾವಣೆ ಸಂಬಂಧಿತ ಪ್ರತಿಯೊಂದು ಮಾಹಿತಿಯೂ ಮೊಬೈಲ್‍ನಲ್ಲಿ ಬೆರಳ ತುದಿಯಲ್ಲಿ ಲಭ್ಯವಾಗುತ್ತಿದೆ. ಅದು ಚುನಾವಣಾ ಆಯೋಗ ಪರಿಚಯಿಸಿರುವ ಚುನಾವಣಾ ಆ್ಯಪ್ ಮೂಲಕ.
ಬಹುತೇಕ ಜನರ ಕೈಯಲ್ಲಿಯೂ ಇದೀಗ ಸ್ಮಾರ್ಟ್ ಫೋನ್‍ಗಳು ರಾರಾಜಿಸುತ್ತಿವೆ. ಎಲ್ಲರೂ ಫೇಸ್‍ಬುಕ್, ವಾಟ್ಸಾಪ್ ಮುಂತಾದ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ವಿನಿಮಯ ಮಾಡಿಕೊಳ್ಳುವಲ್ಲಿ ಬ್ಯುಸಿಯಾಗಿದ್ದಾರೆ. ಮೊಬೈಲ್ ಸ್ಮಾರ್ಟ್ ಫೋನ್‍ಗಳ ಮೂಲಕವೆ ಚುನಾವಣೆಗೆ ಸಂಬಂಧಿತ ಮಾಹಿತಿ ಲಭ್ಯವಾಗುವಂತೆ ಮಾಡುವಲ್ಲಿ ಚುನಾವಣಾ ಆಯೋಗವೂ ಕೂಡ ಮುಂದಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಬೆರಳ ತುದಿಯಲ್ಲಿ ಚುನಾವಣೆಗೆ ಸಂಬಂಧಿತ ಮಾಹಿತಿ ಲಭ್ಯವಾಗುವಂತೆ ಮಾಡಲು ಆಯೋಗವು ‘ಚುನಾವಣಾ’ ( Chunavana) ಆ್ಯಪ್ ಅನ್ನು ಅಭಿವೃದ್ಧಿಪಡಿಸಿದ್ದು, ಈ ಆ್ಯಪ್ ಗೂಗಲ್ ಸ್ಟೋರ್‍ನಲ್ಲಿ ಲಭ್ಯವಿದೆ. ಗೂಗಲ್ ಸ್ಟೋರ್ ನಲ್ಲಿ Chunavana ಆ್ಯಪ್ ಅನ್ನು ಡೌನ್‍ಲೋಡ್ ಮಾಡಿಕೊಂಡರೆ ಸಾಕು, ಇಡೀ ರಾಜ್ಯದ ಚುನಾವಣೆಗೆ ಸಂಬಂಧಿತ ಮಾಹಿತಿ ನಿಮ್ಮ ಮೊಬೈಲ್‍ನಲ್ಲಿದ್ದಂತೆಯೇ. ಈ ಆ್ಯಪ್ ತೆರೆದರೆ ಸಾಕು, ಇದರಲ್ಲಿ ತಾವು ಇರುವ ಸ್ಥಳದ ಮಾಹಿತಿ, ಮತಗಟ್ಟೆಯ ವಿವರ, ಚುನಾವಣಾಧಿಕಾರಿಗಳ ಹೆಸರು, ಮೊಬೈಲ್ ಸಂಖ್ಯೆ, ಸ್ಪರ್ಧಿಸಿರುವ ಅಭ್ಯರ್ಥಿಗಳ ಹೆಸರು, ಪಕ್ಷ, ಫೋಟೋ ಸಹಿತ ಲಭ್ಯವಿದೆ. ಇದರ ಜೊತೆಗೆ ಚುನಾವಣಾ ವೇಳಾಪಟ್ಟಿ, ಚುನಾವಣಾ ಗುರುತಿನ ಚೀಟಿ ಸಂಖ್ಯೆ ಮೂಲಕ ಮತಗಟ್ಟೆ ಹಾಗೂ ವಿಳಾಸದ ವಿವರ, ಸಮೀಪದ ಪೊಲೀಸ್ ಠಾಣೆ ವಿವರ, ಆರೋಗ್ಯ ಸೌಲಭ್ಯಗಳು, ಮತಗಟ್ಟೆಗೆ ತೆರಳಿ ಮತ ಚಲಾಯಿಸಲು ಸರದಿ ಸಾಲು ಹೆಚ್ಚಾಗಿದೆಯೇ, ಕಡಿಮೆ ಇದೆಯೋ ಎಂಬ ಮಾಹಿತಿಯನ್ನೂ ಕೂಡ ಈ ಆ್ಯಪ್‍ನಿಂದ ಪಡೆಯಬಹುದಾಗಿದೆ. ವಿಕಲಚೇತನ ಮತದಾರರು, ಮತಗಟ್ಟೆಯಲ್ಲಿ ಗಾಲಿ ಕುರ್ಚಿಗಾಗಿ ಈ ಆ್ಯಪ್ ಮೂಲಕವೇ ಸಂದೇಶ ನೀಡಿ, ಕಾಯ್ದಿರಿಸಿಕೊಳ್ಳಬಹುದಾಗಿದೆ. ಹೀಗೆ ಮತದಾರರಿಗೆ ಚುನಾವಣಾ ಆ್ಯಪ್ ಬಹು ಉಪಯೋಗಿಯಾಗಿದ್ದು, ಇನ್ನೇಕೆ ತಡ, ಕೂಡಲೆ ತಮ್ಮ ಮೊಬೈಲ್‍ಗೆ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ, ಹಾಗೂ ಚುನಾವಣೆ ಸಂಬಂಧಿತ ಮಾಹಿತಿ ಪಡೆಯಿರಿ.
ಹೀಗಾಗಿ ಲೇಖನಗಳು ಬಹುಉಪಯೋಗಿ ಚುನಾವಣಾ ಆ್ಯಪ್ : ಡೌನ್‍ಲೋಡ್ ಮಾಡಿ ನೋಡಿ
ಎಲ್ಲಾ ಲೇಖನಗಳು ಆಗಿದೆ ಬಹುಉಪಯೋಗಿ ಚುನಾವಣಾ ಆ್ಯಪ್ : ಡೌನ್‍ಲೋಡ್ ಮಾಡಿ ನೋಡಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಬಹುಉಪಯೋಗಿ ಚುನಾವಣಾ ಆ್ಯಪ್ : ಡೌನ್‍ಲೋಡ್ ಮಾಡಿ ನೋಡಿ ಲಿಂಕ್ ವಿಳಾಸ https://dekalungi.blogspot.com/2018/05/blog-post_7.html
0 Response to "ಬಹುಉಪಯೋಗಿ ಚುನಾವಣಾ ಆ್ಯಪ್ : ಡೌನ್‍ಲೋಡ್ ಮಾಡಿ ನೋಡಿ"
ಕಾಮೆಂಟ್ ಪೋಸ್ಟ್ ಮಾಡಿ