ಮತದಾರರಲ್ಲದವರು ಮತದಾನಕ್ಕೆ 48 ಗಂಟೆ ಪೂರ್ವದಲ್ಲಿ ಕ್ಷೇತ್ರ ಬಿಟ್ಟು ಹೊರಡಿ- ಎಂ. ಕನಗವಲ್ಲಿ

ಮತದಾರರಲ್ಲದವರು ಮತದಾನಕ್ಕೆ 48 ಗಂಟೆ ಪೂರ್ವದಲ್ಲಿ ಕ್ಷೇತ್ರ ಬಿಟ್ಟು ಹೊರಡಿ- ಎಂ. ಕನಗವಲ್ಲಿ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಮತದಾರರಲ್ಲದವರು ಮತದಾನಕ್ಕೆ 48 ಗಂಟೆ ಪೂರ್ವದಲ್ಲಿ ಕ್ಷೇತ್ರ ಬಿಟ್ಟು ಹೊರಡಿ- ಎಂ. ಕನಗವಲ್ಲಿ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಮತದಾರರಲ್ಲದವರು ಮತದಾನಕ್ಕೆ 48 ಗಂಟೆ ಪೂರ್ವದಲ್ಲಿ ಕ್ಷೇತ್ರ ಬಿಟ್ಟು ಹೊರಡಿ- ಎಂ. ಕನಗವಲ್ಲಿ
ಲಿಂಕ್ : ಮತದಾರರಲ್ಲದವರು ಮತದಾನಕ್ಕೆ 48 ಗಂಟೆ ಪೂರ್ವದಲ್ಲಿ ಕ್ಷೇತ್ರ ಬಿಟ್ಟು ಹೊರಡಿ- ಎಂ. ಕನಗವಲ್ಲಿ

ಓದಿ


ಮತದಾರರಲ್ಲದವರು ಮತದಾನಕ್ಕೆ 48 ಗಂಟೆ ಪೂರ್ವದಲ್ಲಿ ಕ್ಷೇತ್ರ ಬಿಟ್ಟು ಹೊರಡಿ- ಎಂ. ಕನಗವಲ್ಲಿ


ಕೊಪ್ಪಳ ಮೇ. 07 (ಕರ್ನಾಟಕ ವಾರ್ತೆ): ಕರ್ನಾಟಕ ವಿಧಾನಸಭೆ ಚುನಾವಣೆ ಸಂಬಂಧಿಸಿದಂತೆ, ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಲು ಅನುವಾಗುವಂತೆ, ಮತದಾನಕ್ಕೆ 48 ಗಂಟೆ ಪೂರ್ವದಲ್ಲಿ ಆಯಾ ಮತ ಕ್ಷೇತ್ರದ ಮತದಾರರಲ್ಲದವರು, ಕ್ಷೇತ್ರ ಬಿಟ್ಟು ಹೊರಡುವಂತೆ ಜಿಲ್ಲಾ ಚುನಾವಣಾಧಿಕಾರಿ ಎಂ. ಕನಗವಲ್ಲಿ ಅವರು ತಾಕೀತು ಮಾಡಿದ್ದಾರೆ.
     ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ಜರುಗಿಸುವ ಸಂಬಂಧವಾಗಿ, ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ತಮ್ಮ ಪ್ರಚಾರಕ್ಕಾಗಿ ಹೊರಗಿನ ಮತ ಕ್ಷೇತ್ರದಿಂದ ಕರೆತಂದ ಮತ್ತು ಕ್ಷೇತ್ರದ ಮತದಾರರಲ್ಲದೇ ಇರುವ ರಾಜಕೀಯ ಅಧಿಕಾರಸ್ಥರು, ತಾರಾ ಪ್ರಚಾರಕರು, ಪಕ್ಷದ ಕಾರ್ಯಕರ್ತರು, ಮೆರವಣಿಗೆ ಸಂಬಂಧ ಕರೆತಂದ ಕಾರ್ಯಕರ್ತರು, ಪ್ರಚಾರ ಕಾರ್ಯಕರ್ತರು ಮತದಾನ ಮುಕ್ತಾಯಗೊಳ್ಳುವ 48 ಗಂಟೆಗಳ ಪೂರ್ವದಲ್ಲಿ ವಿಧಾನಸಭೆ ಕ್ಷೇತ್ರಗಳಿಂದ ಹೊರ ಹೋಗಬೇಕು.  ಚುನಾವಣೆ ಅವಧಿಯಲ್ಲಿ ರಾಜಕೀಯ ಪಕ್ಷಗಳ ರಾಜ್ಯದ ಪ್ರಭಾರ ಹೊಂದಿರುವ ಪದಾಧಿಕಾರಿಗಳ ಸಂಬಂಧದಲ್ಲಿ ಈ ನಿರ್ಬಂಧನೆಗಳು ಅನ್ವಯಿಸುವುದಿಲ್ಲ.  ರಾಜಕೀಯ ಪಕ್ಷದ ಅಂತಹ ಪದಾಧಿಕಾರಿಗಳು ರಾಜ್ಯ ಕೇಂದ್ರ ಸ್ಥಾನದಲ್ಲಿ ವಾಸ್ತವ್ಯ ಹೂಡಿರುವ ಸ್ಥಳವನ್ನು ಘೋಷಿಸಬೇಕು.  ಅಲ್ಲದೆ ಈ ಅವಧಿಯಲ್ಲಿನ ಅವರ ಚಲನವಲನಗಳು ಸಾಮಾನ್ಯವಾಗಿ ಅವರ ಪಕ್ಷದ ಕಚೇರಿ ಮತ್ತು ಅವರು ವಾಸ್ತವ್ಯ ಹೂಡಿರುವ ಸ್ಥಳಗಳಿಗೆ ಸೀಮಿತವಾಗಿರಬೇಕು.  ಈ ಸಮಯದಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಬಾಗಿಲಿಗೆ ಹೋಗಿ ಮತ ಯಾಚಿಸುವ ಸಲುವಾಗಿ ಮನೆಯಿಂದ ಮನೆಗೆ ಹೋಗುವುದು ನಿರ್ಬಂಧಿಸಿರುವುದಿಲ್ಲ ಆದರೆ 10 ಜನರಿಗಿಂತ ಹೆಚ್ಚಿನ ಗುಂಪು ಕೂಡಿಕೊಂಡು ಮನೆಯಿಂದ ಮನೆಗೆ ಹೋಗಿ ಮತ ಯಾಚಿಸುವುದನ್ನು ನಿರ್ಬಂಧಿಸಲಾಗಿದೆ.  ಎಲ್ಲ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಹಾಗೂ ಸಾರ್ವಜನಿಕರು ಜಿಲ್ಲೆಯಲ್ಲಿ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಲು ಸಹಕರಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಎಂ. ಕನಗವಲ್ಲಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.



ಹೀಗಾಗಿ ಲೇಖನಗಳು ಮತದಾರರಲ್ಲದವರು ಮತದಾನಕ್ಕೆ 48 ಗಂಟೆ ಪೂರ್ವದಲ್ಲಿ ಕ್ಷೇತ್ರ ಬಿಟ್ಟು ಹೊರಡಿ- ಎಂ. ಕನಗವಲ್ಲಿ

ಎಲ್ಲಾ ಲೇಖನಗಳು ಆಗಿದೆ ಮತದಾರರಲ್ಲದವರು ಮತದಾನಕ್ಕೆ 48 ಗಂಟೆ ಪೂರ್ವದಲ್ಲಿ ಕ್ಷೇತ್ರ ಬಿಟ್ಟು ಹೊರಡಿ- ಎಂ. ಕನಗವಲ್ಲಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಮತದಾರರಲ್ಲದವರು ಮತದಾನಕ್ಕೆ 48 ಗಂಟೆ ಪೂರ್ವದಲ್ಲಿ ಕ್ಷೇತ್ರ ಬಿಟ್ಟು ಹೊರಡಿ- ಎಂ. ಕನಗವಲ್ಲಿ ಲಿಂಕ್ ವಿಳಾಸ https://dekalungi.blogspot.com/2018/05/48.html

Subscribe to receive free email updates:

0 Response to "ಮತದಾರರಲ್ಲದವರು ಮತದಾನಕ್ಕೆ 48 ಗಂಟೆ ಪೂರ್ವದಲ್ಲಿ ಕ್ಷೇತ್ರ ಬಿಟ್ಟು ಹೊರಡಿ- ಎಂ. ಕನಗವಲ್ಲಿ"

ಕಾಮೆಂಟ್‌‌ ಪೋಸ್ಟ್‌ ಮಾಡಿ