ನ್ಯಾಯಸಮ್ಮತ ಚುನಾವಣೆಗೆ ಮೈಕ್ರೋ ಅಬ್ಸರ್ವರ್ಸ್ ತೀವ್ರ ನಿಗಾ ವಹಿಸಿ- ಕನಗವಲ್ಲಿ

ನ್ಯಾಯಸಮ್ಮತ ಚುನಾವಣೆಗೆ ಮೈಕ್ರೋ ಅಬ್ಸರ್ವರ್ಸ್ ತೀವ್ರ ನಿಗಾ ವಹಿಸಿ- ಕನಗವಲ್ಲಿ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ನ್ಯಾಯಸಮ್ಮತ ಚುನಾವಣೆಗೆ ಮೈಕ್ರೋ ಅಬ್ಸರ್ವರ್ಸ್ ತೀವ್ರ ನಿಗಾ ವಹಿಸಿ- ಕನಗವಲ್ಲಿ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ನ್ಯಾಯಸಮ್ಮತ ಚುನಾವಣೆಗೆ ಮೈಕ್ರೋ ಅಬ್ಸರ್ವರ್ಸ್ ತೀವ್ರ ನಿಗಾ ವಹಿಸಿ- ಕನಗವಲ್ಲಿ
ಲಿಂಕ್ : ನ್ಯಾಯಸಮ್ಮತ ಚುನಾವಣೆಗೆ ಮೈಕ್ರೋ ಅಬ್ಸರ್ವರ್ಸ್ ತೀವ್ರ ನಿಗಾ ವಹಿಸಿ- ಕನಗವಲ್ಲಿ

ಓದಿ


ನ್ಯಾಯಸಮ್ಮತ ಚುನಾವಣೆಗೆ ಮೈಕ್ರೋ ಅಬ್ಸರ್ವರ್ಸ್ ತೀವ್ರ ನಿಗಾ ವಹಿಸಿ- ಕನಗವಲ್ಲಿ



ಕೊಪ್ಪಳ ಮೇ. 09 (ಕ.ವಾ): ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸುವ ನಿಟ್ಟಿನಲ್ಲಿ ಮೈಕ್ರೋ ಅಬ್ಸರ್ವರ್ಸ್‍ಗಳು ಮತದಾನ ದಿನದಂದು ತೀವ್ರ ನಿಗಾ ವಹಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.

     ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಚುನಾವಣೆ ಕಾರ್ಯಕ್ಕೆ ನೇಮಕಗೊಂಡಿರುವ ಮೈಕ್ರೋ ಅಬ್ಸರ್ವರ್ಸ್ ಗಳಿಗೆ ಮಂಗಳವಾರ ಏರ್ಪಡಿಸಿದ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

     ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಗೆ ಚುನಾವಣಾ ಆಯೋಗ ಮೈಕ್ರೋ ಅಬ್ಸರ್ವರ್ಸ್ ನೇಮಕಕ್ಕೆ ಸೂಚನೆ ನೀಡಿದ್ದು, ಅದರಂತೆ ಕೊಪ್ಪಳ ಜಿಲ್ಲೆಯಲ್ಲಿಯೂ ಸಹ ಕೇಂದ್ರ ಸರ್ಕಾರಿ ನೌಕರರು, ರಾಷ್ಟ್ರೀಕೃತ ಬ್ಯಾಂಕ್‍ಗಳ ಒಟ್ಟು 257 ನೌಕರರನ್ನು ಮೈಕ್ರೋ ಅಬ್ಸರ್ವರ್‍ಗಳಾಗಿ ನಿಯೋಜಿಸಲಾಗಿದೆ.  ಈ ಮೈಕ್ರೋ ಅಬ್ಸರ್ವರ್ಸ್‍ಗಳು ಚುನಾವಣಾ ಆಯೋಗ ನೇಮಿಸಿರುವ ವೀಕ್ಷಕರ ಅಧೀನದಲ್ಲಿ ಕಾರ್ಯ ನಿರ್ವಹಿಸಲಿದ್ದು, ಮತಗಟ್ಟೆಯಲ್ಲಿ ನಡೆಯುವ ಮತದಾನ ಪ್ರಕ್ರಿಯೆಗಳ ಬಗ್ಗೆ ತೀವ್ರ ನಿಗಾ ವಹಿಸುವುದು ಇವರ ಕರ್ತವ್ಯವಾಗಿರುತ್ತದೆ.  ಅಲ್ಲದೆ ಮತದಾನ ಪ್ರಕ್ರಿಯೆ ಪ್ರಾರಂಭಕ್ಕೂ ಮುನ್ನ ಚುನಾವಣಾ ಏಜೆಂಟರುಗಳ ಸಮಕ್ಷಮ ನಡೆಯುವ ಅಣಕು ಮತದಾನ, ಅಣಕು ಮತದಾನದ ಬಳಿಕ ಮತಯಂತ್ರದಲ್ಲಿ ದಾಖಲಾದ ಮತಗಳನ್ನು ಅಳಸಿಹಾಕುವುದು, ಏಜೆಂಟರುಗಳ ಹಾಜರಾತಿ, ಮತದಾನ ಕೇಂದ್ರದೊಳಗೆ ಅಕ್ರಮ ಪ್ರವೇಶ ತಡೆಗಟ್ಟುವುದು, ಮತದಾನ ಸುಗಮ ಪ್ರಕ್ರಿಯೆ ಪರಿಶೀಲನೆ, ನಿಸ್ಪಕ್ಷಪಾತ ಮತದಾನ ಪ್ರಕ್ರಿಯೆ, ಮತಗಟ್ಟೆಯಲ್ಲಿನ ವ್ಯವಸ್ಥೆ, ಸುಗಮ ಮತದಾನ ಪ್ರಕ್ರಿಯೆ, ಮತಗಟ್ಟೆ ಅಧಿಕಾರಿಗಳು ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳ ಕರ್ತವ್ಯ ವೈಖರಿ, ಮತಗಟ್ಟೆಯ ಸುತ್ತಮುತ್ತಲಿನ ಕಾನೂನು ಸುವ್ಯವಸ್ಥೆಯ ಬಗ್ಗೆ ತೀವ್ರ ನಿಗಾ ವಹಿಸುವುದು ಸಹ ಮೈಕ್ರೋ ಅಬ್ಸರ್ವರ್‍ಗಳ ಕಾರ್ಯವಾಗಿದೆ.  ಮತಗಟ್ಟೆಯಲ್ಲಿ ಯಾವುದೇ ಅಕ್ರಮ ಹಾಗೂ ಸಂಶಯಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ಕೂಡಲೆ ಸಂಬಂಧಪಟ್ಟ ಕ್ಷೇತ್ರದ ಚುನಾವಣಾ ವೀಕ್ಷಕರಿಗೆ ಮತ್ತು ಸೆಕ್ಟರ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು.  ಮತಗಟ್ಟೆಯ ಒಳಗಡೆ ಇನ್ನಿತರೆ ಯಾವುದೇ ಸಂಶಯಾಸ್ಪದ ಪ್ರಕರಣಗಳು ಕಂಡುಬಂದಲ್ಲಿ, ತಮ್ಮ ವರದಿಯನ್ನು ಲಿಖಿತವಾಗಿ ಡಿ-ಮಸ್ಟರಿಂಗ್ ಸಮಯದಲ್ಲಿ ಸಲ್ಲಿಸುವ ಅವಕಾಶ ಮೈಕ್ರೋ ಅಬ್ಸರ್ವರ್ಸ್‍ಗಳಿಗೆ ನೀಡಲಾಗಿದೆ.  ಒಟ್ಟಾರೆ ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆಯನ್ನು ನಿಸ್ಪಕ್ಷಪಾತವಾತವಾಗಿ ನಡೆಸಲು ಎಲ್ಲ ಮೈಕ್ರೋ ಅಬ್ಸರ್ವರ್ಸ್‍ಗಳು ಪ್ರಾಮಾಣಿಕವಾಗಿ ಶ್ರಮಿಸುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಮನವಿ ಮಾಡಿದರು.
     ತರಬೇತಿಯಲ್ಲಿ ಭಾಗವಹಿಸಿದ್ದ ಕೊಪ್ಪಳ ವಿಧಾನಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕ ಶಂಕರನಾರಾಯಣನ್ ಅವರು ಮಾತನಾಡಿ, ಸುಗಮ ಚುನಾವಣೆಗೆ ಮೈಕ್ರೋ ಅಬ್ಸರ್ವರ್ಸ್‍ಗಳ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಮತದಾನ ಪ್ರಾರಂಭದ ಹಂತದಿಂದ ಮೊದಲುಗೊಂಡು, ಮುಕ್ತಾಯದ ಹಂತರ ಹಾಗೂ ಆಯಾ ಮತಗಟ್ಟೆಗೆ ಸಂಬಂಧಿತ ಮತಯಂತ್ರ ದಾಸ್ತಾನು ಕೊಠಡಿ ತಲುಪುವವರೆಗೂ, ಮೈಕ್ರೋ ಅಬ್ಸರ್ವರ್‍ಗಳು ತೀವ್ರ ನಿಗಾ ವಹಿಸಿ, ಎಲ್ಲವೂ ಸುಗಮವಾಗಿ ಜರುಗಿದ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು ಎಂದರು.
     ಕನಕಗಿರಿ-ಗಂಗಾವತಿ ಕ್ಷೇತ್ರದ ಚುನಾವಣಾ ವೀಕ್ಷಕ ಜಾಯ್‍ಸಿಂಗ್ ಅವರು ಮಾತನಾಡಿ, ಮತದಾನ ದಿನದಂದು ಮತಗಟ್ಟೆಯಲ್ಲಿ ಮತದಾನದ ಗೌಪ್ಯತೆಗೆ ಅಗತ್ಯ ವ್ಯವಸ್ಥೆ ಕೈಗೊಂಡಿರುವ ಬಗ್ಗೆ  ಹಾಗೂ ಸೂಕ್ತ ಬೆಳಕಿನ ವ್ಯವಸ್ಥೆ ಇರುವ ಬಗ್ಗೆ ಮೈಕ್ರೋ ಅಬ್ಸರ್ವರ್ಸ್‍ಗಳು ಪರಿಶೀಲಿಸಬೇಕು.  ಈ ಕುರಿತ ವರದಿಯನ್ನು ವೀಕ್ಷಕರಿಗೆ ಸಲ್ಲಿಸಬೇಕು ಎಂದರು.
     ಯಲಬುರ್ಗಾ-ಕುಷ್ಟಗಿ ಕ್ಷೇತ್ರದ ವೀಕ್ಷಕ ಕೆ.ಎನ್. ಸತೀಶ್ ಅವರು ಮಾತನಾಡಿ, ಮತದಾನ ಪ್ರಾರಂಭಕ್ಕೂ ಪೂರ್ವದಲ್ಲಿ ಹಾಗೂ ಮತದಾನ ಮುಕ್ತಾಯವಾದ ಬಳಿಕ ಇವಿಎಂ ಮತಯಂತ್ರಗಳನ್ನು ನಿಯಮಾನುಸಾರ ಭದ್ರತೆ ಕ್ರಮಗಳನ್ನು ಅನುಸರಿಸಿರುವ ಬಗ್ಗೆ ಮೈಕ್ರೋ ಅಬ್ಸರ್ವರ್‍ಗಳು ಖಚಿತಪಡಿಸಿಕೊಳ್ಳಬೇಕು.  ಯಾವುದೇ ಗೊಂದಲ ಕಂಡುಬಂದಲ್ಲಿ, ಸೆಕ್ಟರ್ ಅಧಿಕಾರಿಗಳು ಹಾಗೂ ಮತಗಟ್ಟೆ ಅಧಿಕಾರಿಗಳ ಗಮನಕ್ಕೆ ತರುವುದು ಸೂಕ್ತ ಎಂದರು.
     ಮೈಕ್ರೋ ಅಬ್ಸರ್ವರ್ಸ್‍ಗಳಾಗಿ ನೇಮಕಗೊಂಡಿರುವ ಜಿಲ್ಲೆಯಲ್ಲಿನ ಸರ್ಕಾರಿ ನೌಕರರು, ರಾಷ್ಟ್ರೀಕೃತ ಬ್ಯಾಂಕ್‍ಗಳು, ಕೇಂದ್ರ ಸರ್ಕಾರಿ ನೌಕರರು ತರಬೇತಿಯಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿ ಪ್ಯಾಟ್  ನಿರ್ವಹಣೆ ಬಗ್ಗೆ ಮಾಸ್ಟರ್ ಟ್ರೇನರ್ ಅವರು ಮೈಕ್ರೋ ಅಬ್ಸರ್ವರ್ಸ್‍ಗಳಿಗೆ ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಿದರು.


ಹೀಗಾಗಿ ಲೇಖನಗಳು ನ್ಯಾಯಸಮ್ಮತ ಚುನಾವಣೆಗೆ ಮೈಕ್ರೋ ಅಬ್ಸರ್ವರ್ಸ್ ತೀವ್ರ ನಿಗಾ ವಹಿಸಿ- ಕನಗವಲ್ಲಿ

ಎಲ್ಲಾ ಲೇಖನಗಳು ಆಗಿದೆ ನ್ಯಾಯಸಮ್ಮತ ಚುನಾವಣೆಗೆ ಮೈಕ್ರೋ ಅಬ್ಸರ್ವರ್ಸ್ ತೀವ್ರ ನಿಗಾ ವಹಿಸಿ- ಕನಗವಲ್ಲಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ನ್ಯಾಯಸಮ್ಮತ ಚುನಾವಣೆಗೆ ಮೈಕ್ರೋ ಅಬ್ಸರ್ವರ್ಸ್ ತೀವ್ರ ನಿಗಾ ವಹಿಸಿ- ಕನಗವಲ್ಲಿ ಲಿಂಕ್ ವಿಳಾಸ https://dekalungi.blogspot.com/2018/05/blog-post_64.html

Subscribe to receive free email updates:

0 Response to "ನ್ಯಾಯಸಮ್ಮತ ಚುನಾವಣೆಗೆ ಮೈಕ್ರೋ ಅಬ್ಸರ್ವರ್ಸ್ ತೀವ್ರ ನಿಗಾ ವಹಿಸಿ- ಕನಗವಲ್ಲಿ"

ಕಾಮೆಂಟ್‌‌ ಪೋಸ್ಟ್‌ ಮಾಡಿ