ಶೀರ್ಷಿಕೆ : ಮತದಾನಕ್ಕೆ ವಿಕಲಚೇತನರಿಗೆ ಜಿ.ಪಂ ನಿಂದ ವೀಲ್‍ಚೇರ್ ವ್ಯವಸ್ಥೆ
ಲಿಂಕ್ : ಮತದಾನಕ್ಕೆ ವಿಕಲಚೇತನರಿಗೆ ಜಿ.ಪಂ ನಿಂದ ವೀಲ್‍ಚೇರ್ ವ್ಯವಸ್ಥೆ
ಮತದಾನಕ್ಕೆ ವಿಕಲಚೇತನರಿಗೆ ಜಿ.ಪಂ ನಿಂದ ವೀಲ್‍ಚೇರ್ ವ್ಯವಸ್ಥೆ
ಕೊಪ್ಪಳ ಮೇ. 09 (ಕರ್ನಾಟಕ ವಾರ್ತೆ): ಕರ್ನಾಟಕ ವಿಧಾನಸಭಾ ಚುನಾವಣೆಯ ಅಂಗವಾಗಿ ಮೇ. 12 ರಂದು ವಿಕಲಚೇತನರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ಕೊಪ್ಪಳ ಜಿಲ್ಲಾ ಪಂಚಾಯತ ವತಿಯಿಂದ ವೀಲ್‍ಚೇರ್ ಹಾಗೂ ಸಮೀಪದೃಷ್ಟಿ ಕನ್ನಡಿಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ವೀಲ್‍ಚೇರ್ ಹಾಗೂ ಸಮೀಪದೃಷ್ಟಿ ಕನ್ನಡಿಗಳನ್ನು ಕೊಪ್ಪಳ ತಾಲೂಕಿನ 38 ಗ್ರಾಮ ಪಂಚಾಯತಿಗಳಿಗೆ ಬುಧವಾರದಂದು ತಾ.ಪಂ ಆವರಣದಲ್ಲಿ ವಿತರಿಸಲಾಯಿತು.

ವೀಲ್‍ಚೇರ್ ಹಾಗೂ ಸಮೀಪದೃಷ್ಠಿ ಕನ್ನಡಿಗಳನ್ನು ವಿತರಣೆಗೆ ಚಾಲನೆ ನೀಡಿದ ಕೊಪ್ಪಳ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ಮಾತನಾಡಿ, ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ವಿಕಲಚೇತನರು ಇರುವ ವಾರ್ಡ್‍ಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಅಂತಹ ಮತಗಟ್ಟೆಗಳಲ್ಲಿ ಮಾತ್ರ ವೀಲ್‍ಚೇರ್ ಬಳಕೆಯಾಗಲು ಜವಾಬ್ದಾರಿಯುತ ವ್ಯಕ್ತಿಗೆ ಎಲ್ಲಾ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕಟ್ಟುನಿಟ್ಟಾಗಿ ನೀಡಬೇಕು. ವಿಕಲಚೇತನರು ಸಮಾಜದ ಅವಿಭಾಜ್ಯ ಅಂಗವಾಗಿದ್ದು, ಅವರು ಸಹ ಸಾಮಾನ್ಯರಂತೆ ತಮ್ಮ ಹಕ್ಕು ಭಾಧ್ಯತೆಗಳನ್ನು ನಿರ್ಭಯವಾಗಿ ಚಲಾಯಿಸಬಹುದಾಗಿದೆ. ಈ ದೃಷ್ಟಿಯಿಂದ ವಿಕಲಚೇತನರಿಗೆ ಸಹಕಾರಿಯಾಗಲು ಕೊಪ್ಪಳ ಜಿಲ್ಲಾ ಪಂಚಾಯತ್‍ನಿಂದ ವಿಲ್‍ಚೇರ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಅಂಧರು ಮತ ಚಲಾಯಿಸಲು ಸಮೀಪದೃಷ್ಟಿ ಕನ್ನಡಿಗಳನ್ನು (ಮ್ಯಾಗ್ನಿಫüಯಿಂಗ್ ಗ್ಲಾಸ್) ಗ್ರಾಮ ಪಂಚಾಯತಿಗಳು ತಮ್ಮ ಸ್ವಂತ ಸಂಪನ್ಮೂಲದಿಂದ ಖರೀದಿಸಿ ಅವುಗಳನ್ನು ಮತದಾನ ದಿನದಂದು ಸಂಬಂದಿಸಿದ ಭೂತ್ ಮಟ್ಟದ ಅಧಿಕಾರಿಗಳಿಗೆ ವಿತರಣೆಯಾಗುವಂತೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಚುನಾವಣಾ ದಿನದಂದು ಜಿಲ್ಲೆಯಲ್ಲಿ ಸುಗಮವಾಗಿ ಮತ ಚಲಾಯಿಸಲು ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ಸೂಚನೆ ನೀಡಿದರು.
ಕೊಪ್ಪಳ ತಾಲೂಕ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಟಿ. ಕೃಷ್ಣಮೂರ್ತಿ, ತಾಲೂಕ ಯೋಜನಾಧಿಕಾರಿ ಶರಣಯ್ಯ ಸಸಿಮಠ ಸೇರಿದಂತೆ ತಾಲೂಕಿನ 38 ಗ್ರಾ.ಪಂ. ಗಳ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕ ಸಹಾಹಕರು ಮತ್ತು ತಾ.ಪಂ ಸಿಬ್ಬಂದಿಗಳು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹೀಗಾಗಿ ಲೇಖನಗಳು ಮತದಾನಕ್ಕೆ ವಿಕಲಚೇತನರಿಗೆ ಜಿ.ಪಂ ನಿಂದ ವೀಲ್‍ಚೇರ್ ವ್ಯವಸ್ಥೆ
ಎಲ್ಲಾ ಲೇಖನಗಳು ಆಗಿದೆ ಮತದಾನಕ್ಕೆ ವಿಕಲಚೇತನರಿಗೆ ಜಿ.ಪಂ ನಿಂದ ವೀಲ್‍ಚೇರ್ ವ್ಯವಸ್ಥೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಮತದಾನಕ್ಕೆ ವಿಕಲಚೇತನರಿಗೆ ಜಿ.ಪಂ ನಿಂದ ವೀಲ್‍ಚೇರ್ ವ್ಯವಸ್ಥೆ ಲಿಂಕ್ ವಿಳಾಸ https://dekalungi.blogspot.com/2018/05/blog-post_58.html
0 Response to "ಮತದಾನಕ್ಕೆ ವಿಕಲಚೇತನರಿಗೆ ಜಿ.ಪಂ ನಿಂದ ವೀಲ್‍ಚೇರ್ ವ್ಯವಸ್ಥೆ"
ಕಾಮೆಂಟ್ ಪೋಸ್ಟ್ ಮಾಡಿ