ವಿಧಾನಸಭಾ ಚುನಾವಣೆ 2018 : ಕೊಪ್ಪಳ ಜಿಲ್ಲೆಯಲ್ಲಿ 1078364 ಮತದಾರರು : ಮತದಾನ ಕರ್ತವ್ಯಕ್ಕೆ 7795 ಸಿಬ್ಬಂದಿ

ವಿಧಾನಸಭಾ ಚುನಾವಣೆ 2018 : ಕೊಪ್ಪಳ ಜಿಲ್ಲೆಯಲ್ಲಿ 1078364 ಮತದಾರರು : ಮತದಾನ ಕರ್ತವ್ಯಕ್ಕೆ 7795 ಸಿಬ್ಬಂದಿ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ವಿಧಾನಸಭಾ ಚುನಾವಣೆ 2018 : ಕೊಪ್ಪಳ ಜಿಲ್ಲೆಯಲ್ಲಿ 1078364 ಮತದಾರರು : ಮತದಾನ ಕರ್ತವ್ಯಕ್ಕೆ 7795 ಸಿಬ್ಬಂದಿ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ವಿಧಾನಸಭಾ ಚುನಾವಣೆ 2018 : ಕೊಪ್ಪಳ ಜಿಲ್ಲೆಯಲ್ಲಿ 1078364 ಮತದಾರರು : ಮತದಾನ ಕರ್ತವ್ಯಕ್ಕೆ 7795 ಸಿಬ್ಬಂದಿ
ಲಿಂಕ್ : ವಿಧಾನಸಭಾ ಚುನಾವಣೆ 2018 : ಕೊಪ್ಪಳ ಜಿಲ್ಲೆಯಲ್ಲಿ 1078364 ಮತದಾರರು : ಮತದಾನ ಕರ್ತವ್ಯಕ್ಕೆ 7795 ಸಿಬ್ಬಂದಿ

ಓದಿ


ವಿಧಾನಸಭಾ ಚುನಾವಣೆ 2018 : ಕೊಪ್ಪಳ ಜಿಲ್ಲೆಯಲ್ಲಿ 1078364 ಮತದಾರರು : ಮತದಾನ ಕರ್ತವ್ಯಕ್ಕೆ 7795 ಸಿಬ್ಬಂದಿ


ಕೊಪ್ಪಳ ಮೇ. 03 (ಕರ್ನಾಟಕ ವಾರ್ತೆ): ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧಿಸಿದಂತೆ ಮೇ. 12 ರಂದು ಮತದಾನ ನಡೆಯಲಿದ್ದು, ಮತದಾರರ ಪಟ್ಟಿಗೆ ಹೆಸರು ಸೇರಿಸಲು ಹೆಚ್ಚಿನ ಕಾಲಾವಕಾಶ ನೀಡಲಾಗಿತ್ತು.  ಮತದಾರರ ಪರಿಷ್ಕøತ ಪಟ್ಟಿಯನ್ವಯ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 1078364 ಮತದಾರರು ಹಾಗೂ 372 ಸೇವಾ ಮತದಾರರಿದ್ದು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1301 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ತಿಳಿಸಿದ್ದಾರೆ.  
ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಕೊಪ್ಪಳ ಜಿಲ್ಲೆಯಲ್ಲಿನ ಒಟ್ಟು ಮತದಾರರ ಸಂಖ್ಯೆ, ಒಟ್ಟು ಮತಗಟ್ಟೆಗಳು, ನೇಮಕ ಮಾಡಲಾದ ಮತಗಟ್ಟೆ ಸಿಬ್ಬಂದಿಗಳು, ಮೈಕ್ರೋ ಆಬ್ಸರ್ವರ್ಸ್, ಸ್ಪರ್ಧಿಸುವ ಅಭ್ಯರ್ಥಿಗಳ ಸಂಖ್ಯೆ, ಚುನಾವಣೆಗಾಗಿ ಉಪಯೋಗಿಸಲಾಗುವ ವಿದ್ಯುನ್ಮಾನ ಮತಯಂತ್ರಗಳು, ಮತ ಎಣಿಕೆ ಹಾಗೂ ಟೇಬಲ್ ಹಾಗೂ ಸಿಬ್ಬಂದಿಗಳು, ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕೆಂದ್ರ, ಮತ ಎಣಿಕಾ ಕೇಂದ್ರ, ಚುನಾವಣಾ ಕರ್ತವ್ಯಕ್ಕಾಗಿ ಉಪಯೋಗಿಸಲಾಗುವ ವಾಹನಗಳ ಸಂಖ್ಯೆ, ಸಖಿ ಮತಗಟ್ಟೆಗಳು (ಪಿಂಕ್ ಪುಲ್ಲಿಂಗ್ ಸ್ಟೇಶನ್ಸ್), ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು, ವಶಪಡಿಸಿಕೊಂಡ ನಗದು ಹಣದ ವಿವಿರ, ಚುನಾವಣಾ ಸಂಬಂದಿತ ಸಾರ್ವಜನಿಕರ ದೂರುಗಳು, ಚುನಾವಣಾ ಪ್ರಚಾರದ ಅನುಮತಿಗಾಗಿ ಸ್ವೀಕರಿಸಿದ ಅರ್ಜಿಗಳ ವಿವರ ಇಂತಿದೆ.
ಮತದಾರರ ಸಂಖ್ಯೆ :
******* 60-ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ 113469 ಪುರುಷರು, 111210 ಮಹಿಳೆಯರು ಹಾಗೂ 10 ಇತರೆ ಸೇರಿ ಒಟ್ಟು 224689 ಮತದಾರರಿದ್ದು, 139 ಸೇವಾ ಮತದಾರರಿದ್ದಾರೆ.  61-ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ 104786 ಪುರುಷರು, 106751 ಮಹಿಳೆಯರು ಹಾಗೂ 6 ಇತರೆ ಸೇರಿ ಒಟ್ಟು 211543 ಮತದಾರರಿದ್ದು, 22 ಸೇವಾ ಮತದಾರರಿದ್ದಾರೆ.  62-ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ 96709 ಪುರುಷರು, 97347 ಮಹಿಳೆಯರು ಹಾಗೂ 01 ಇತರೆ ಸೇರಿ ಒಟ್ಟು 194057 ಮತದಾರರಿದ್ದು, 22 ಸೇವಾ ಮತದಾರರಿದ್ದಾರೆ.  63-ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ 104458 ಪುರುಷರು, 102648 ಮಹಿಳೆಯರು ಹಾಗೂ 04 ಇತರೆ ಸೇರಿ ಒಟ್ಟು 207110 ಮತದಾರರಿದ್ದು, 122 ಸೇವಾ ಮತದಾರರಿದ್ದಾರೆ.  64-ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ 120336 ಪುರುಷರು, 120614 ಮಹಿಳೆಯರು ಹಾಗೂ 15 ಇತರೆ ಸೇರಿ ಒಟ್ಟು 240965 ಮತದಾರರಿದ್ದು, 67 ಸೇವಾ ಮತದಾರರಿದ್ದಾರೆ.  ಜಿಲ್ಲೆಯಲ್ಲಿ 539758 ಪುರುಷರು, 538570 ಮಹಿಳೆಯರು ಹಾಗೂ 36 ಇತರೆ ಸೇರಿ ಒಟ್ಟು 1078364 ಮತದಾರರಿದ್ದು, 372 ಸೇವಾ ಮತದಾರರಿದ್ದಾರೆ.  372 ಸೇವಾ ಮತದಾರರಿಗೆ ಏ. 28 ರಂದು ಇಟಿಪಿಬಿಎಸ್ (ಎಲೆಕ್ಟ್ರಾನಿಕಲಿ ಟ್ರಾನ್ಸ್‍ಮಿಟೆಟ್ ಪೋಸ್ಟಲ್ ಬ್ಯಾಲೆಟ್ ಸಿಸ್ಟಮ್) ಮೂಲಕ ಅಂಚೆ ಮತಪತ್ರಗಳನ್ನು ರವಾನಿಸಲಾಗಿದೆ. 
ಮಟಗಟ್ಟೆಗಳು :
*****ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿರುವ ಮತಗಟ್ಟೆಗಳ ವಿವರ ಇಂತಿದೆ.  ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ 269 ಮತಗಟ್ಟೆಗಳಿವೆ.  ಕನಕಗಿರಿ-260 ಮತಗಟ್ಟೆಗಳು.  ಗಂಗಾವತಿ - 232 ಮತಗಟ್ಟೆಗಳು.  ಯಲಬುರ್ಗಾ-253 ಮತಗಟ್ಟೆಗಳು.  ಹಾಗೂ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ 287 ಮತಗಟ್ಟೆಗಳಿದ್ದು, ಜಿಲ್ಲೆಯಲ್ಲಿ ಒಟ್ಟು 1301 ಮತಗಟ್ಟೆಗಳಿವೆ.
ಮಟಗಟ್ಟೆ ಸಿಬ್ಬಂದಿಗಳು : ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ನೇಮಕ ಮಾಡಲಾದ ಮತಗಟ್ಟೆ ಸಿಬ್ಬಂದಿಗಳ ವಿವರ ಇಂತಿದೆ.  ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಪಿ.ಆರ್.ಓ - 322, ಎ.ಪಿ.ಆರ್.ಓ - 322, ಪಿ.ಓ.ಎಸ್- 966 ಸೇರಿ ಒಟ್ಟು 1610 ಸಿಬ್ಬಂದಿಗಳನ್ನು ಮತಗಟ್ಟೆಗಳಿಗೆ ನೇಮಕ ಮಾಡಲಾಗಿದೆ.  ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಪಿ.ಆರ್.ಓ - 311, ಎ.ಪಿ.ಆರ್.ಓ - 311, ಪಿ.ಓ.ಎಸ್- 933, ಒಟ್ಟು 1555 ಸಿಬ್ಬಂದಿಗಳು.  ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಪಿ.ಆರ್.ಓ - 278, ಎ.ಪಿ.ಆರ್.ಓ - 278, ಪಿ.ಓ.ಎಸ್ - 834, ಒಟ್ಟು 1390 ಸಿಬ್ಬಂದಿಗಳು.  ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಪಿ.ಆರ್.ಓ - 304, ಎ.ಪಿ.ಆರ್.ಓ - 304, ಪಿ.ಓ.ಎಸ್-912, ಒಟ್ಟು 1520 ಸಿಬ್ಬಂದಿಗಳು.  ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಪಿ.ಆರ್.ಓ - 344, ಎ.ಪಿ.ಆರ್.ಓ - 344, ಪಿ.ಓ.ಎಸ್- 1032, ಒಟ್ಟು 1720 ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದ್ದು, ಜಿಲ್ಲೆಯಲ್ಲಿ ಪಿ.ಆರ್.ಓ - 1559, ಎ.ಪಿ.ಆರ್.ಓ - 1559, ಪಿ.ಓ.ಎಸ್ – 4677.  ಜಿಲ್ಲೆಯಲ್ಲಿ ಮೇ. 12 ರಂದು ಜರುಗುವ ಮತದಾನ ಕಾರ್ಯಕ್ಕೆ ಒಟ್ಟಾರೆ ಒಟ್ಟು 7795 ಸಿಬ್ಬಂದಿಗಳನ್ನು ಮತಗಟ್ಟೆಗಳಿಗೆ ನೇಮಕ ಮಾಡಲಾಗಿದೆ.
ಮೈಕ್ರೋ ಆಬ್ಸರ್ವರ್ಸ್ : ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಮೈಕ್ರೋ ಆಬ್ಸರ್ವರ್ಸ್ ಸಂಖ್ಯೆ ವಿವರ ಇಂತಿದೆ. ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ 52, ಕನಕಗಿರಿ-49, ಗಂಗಾವತಿ -50, ಯಲಬುರ್ಗಾ-56, ಕೊಪ್ಪಳ-50, ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ಮೈಕ್ರೋ ಆಬ್ಸರ್ವರ್ಸ್ 257. 
ಅಭ್ಯರ್ಥಿಗಳ ಸಂಖ್ಯೆ : ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಸಂಖ್ಯೆ ವಿವರ ಇಂತಿದೆ.   ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ 09,  ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ 10,  ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ 12, ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ 11, ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ 10 ಅಭ್ಯರ್ಥಿಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 52 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ವಿದ್ಯುನ್ಮಾನ ಮತಯಂತ್ರಗಳು : ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆಗಾಗಿ ಉಪಯೋಗಿಸುವ ವಿದ್ಯುನ್ಮಾನ ಮತಯಂತ್ರಗಳ ವಿವಿರ ಇಂತಿದೆ.  60-ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಬ್ಯಾಲೊಟ್ ಯುನಿಟ್, ಕಂಟ್ರೋಲ ಯುನಿಟ್ ಹಾಗೂ ವಿವಿಪ್ಯಾಡ್ ತಲಾ 323, 61-ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಬ್ಯಾಲೊಟ್ ಯುನಿಟ್, ಕಂಟ್ರೋಲ ಯುನಿಟ್ ಹಾಗೂ ವಿವಿಪ್ಯಾಡ್ ತಲಾ 312, 62-ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಬ್ಯಾಲೊಟ್ ಯುನಿಟ್, ಕಂಟ್ರೋಲ ಯುನಿಟ್ ಹಾಗೂ ವಿವಿಪ್ಯಾಡ್ ತಲಾ 279, 63-ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಬ್ಯಾಲೊಟ್ ಯುನಿಟ್, ಕಂಟ್ರೋಲ ಯುನಿಟ್ ಹಾಗೂ ವಿವಿಪ್ಯಾಡ್ ತಲಾ 304, 64-ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಬ್ಯಾಲೊಟ್ ಯುನಿಟ್, ಕಂಟ್ರೋಲ ಯುನಿಟ್ ಹಾಗೂ ವಿವಿಪ್ಯಾಡ್ ತಲಾ 345, ಯಂತ್ರಗಳನ್ನು ಉಪಯೋಗಿಸಲಾಗುತ್ತಿದ್ದು, ಜಿಲ್ಲೆಯಲ್ಲಿ ಬ್ಯಾಲೊಟ್ ಯುನಿಟ್-1563, ಕಂಟ್ರೋಲ ಯುನಿಟ್-1563, ಹಾಗೂ ವಿವಿಪ್ಯಾಡ್-1563 ವಿದ್ಯುನ್ಮಾನ ಮತಯಂತ್ರಗಳನ್ನು ಉಪಯೋಗಿಸಲಾಗುತ್ತಿದೆ.
ಮತ ಎಣಿಕಾ ಟೇಬಲ್ ಹಾಗೂ ಸಿಬ್ಬಂದಿಗಳು :
************** ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಮತ ಎಣೆಕಾ ಟೇಬಲ್ ಹಾಗೂ ಸಿಬ್ಬಂದಿಗಳ ವಿವರ ಇಂತಿದೆ.  ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 14 ಟೇಬಲ್‍ಗಳು, ಹಾಗೂ ಮತ ಎಣಿಕಾ ಮೇಲ್ವಿಚಾರಕರು-17, ಸಹಾಯಕರು-17, ಮತ್ತು ಸ್ಟ್ಯಾಟಿಕ್ ಆಬ್ಸರ್ವರ್ಸ್-17 ಸಿಬ್ಬಂದಿಗಳನ್ನು ನೇಮಿಸಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 70 ಟೇಬಲ್‍ಗಳು, ಮತ ಎಣಿಕಾ ಮೇಲ್ವಿಚಾರಕರು-85, ಸಹಾಯಕರು-85, ಮತ್ತು ಸ್ಟ್ಯಾಟಿಕ್ ಆಬ್ಸರ್ವರ್ಸ್-85 ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು.
ಮಸ್ಟರಿಂಗ್ & ಡಿ-ಮಸ್ಟರಿಂಗ್ ಕೇಂದ್ರ : ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕೆಂದ್ರಗಳ ವಿವರ ಇಂತಿದೆ. ಕುಷ್ಟಗಿ ವಿಧಾನಸಭಾ ಕ್ಷೇತ್ರಕ್ಕೆ ಕುಷ್ಟಗಿಯ ಪ್ರಥಮ ದರ್ಜೆ ಪದವಿ ಕಾಲೇಜು ಮಸ್ಟರಿಂಗ್ ಕೇಂದ್ರ ಹಾಗೂ ಪ್ರಥಮ ಡಿ-ಮಸ್ಟರಿಂಗ್ ಕೇಂದ್ರವಾಗಿದೆ.  ಕನಕಗಿರಿ ವಿಧಾನಸಭಾ ಕ್ಷೇತ್ರಕ್ಕೆ ಗಂಗಾವತಿಯ ಎಮ್.ಎನ್.ಎಮ್ ಬಾಲಕಿಯರ ಪದವಿ ಪೂರ್ವ ಕಾಲೇಜು ಮಸ್ಟರಿಂಗ್ ಕೇಂದ್ರ ಹಾಗೂ ಪ್ರಥಮ ಡಿ-ಮಸ್ಟರಿಂಗ್ ಕೇಂದ್ರವಾಗಿದೆ.  ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಗಂಗಾವತಿಯ ಲಯನ್ಸ್ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪದವಿ ಪೂರ್ವ ಕಾಲೇಜು ಮಸ್ಟರಿಂಗ್ ಕೇಂದ್ರ ಹಾಗೂ ಪ್ರಥಮ ಡಿ-ಮಸ್ಟರಿಂಗ್ ಕೇಂದ್ರವಾಗಿದೆ.  ಯಲಬುರ್ಗಾ ವಿಧಾನಸಭಾ ಕ್ಷೇತ್ರಕ್ಕೆ ಯಲಬುರ್ಗಾದ ಪ್ರಥಮ ದರ್ಜೆ ಪದವಿ ಕಾಲೇಜು ಮಸ್ಟರಿಂಗ್ ಕೇಂದ್ರ ಹಾಗೂ ಪ್ರಥಮ ಡಿ-ಮಸ್ಟರಿಂಗ್ ಕೇಂದ್ರವಾಗಿದೆ.  ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಕೊಪ್ಪಳ ನಗರದ ಗವಿಸಿದ್ದೇಶ್ವರ ಪ್ರೌಢ ಶಾಲೆಯು ಮಸ್ಟರಿಂಗ್ ಕೇಂದ್ರ ಹಾಗೂ ಪ್ರಥಮ ಡಿ-ಮಸ್ಟರಿಂಗ್ ಕೇಂದ್ರವಾಗಿದೆ.
ಮತ ಎಣಿಕಾ ಕೇಂದ್ರ್ರ :
********* ಗವಿಸಿದ್ದೇಶ್ವರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲವು ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಮತ ಎಣಿಕಾ ಕೇಂದ್ರವಾಗಿದೆ.  ಕುಷ್ಟಗಿ, ಕನಕಗಿರಿ ಮತ್ತು ಕೊಪ್ಪಳ ವಿಧಾನಸಭಾ ಕ್ಷೇತ್ರಗಳ ಮತ ಎಣಿಕಾ ಕೇಂದ್ರದ ಸ್ಟ್ರಾಂಗ್ ರೂಮ್ ಸಂಖ್ಯೆ-02, ಗಂಗಾವತಿ ವಿಧಾನಸಭಾ ಕ್ಷೇತ್ರದ ಮತ ಎಣಿಕಾ ಕೇಂದ್ರದ ಸ್ಟ್ರಾಂಗ್ ರೂಮ್ ಸಂಖ್ಯೆ-01, ಹಾಗೂ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಮತ ಎಣಿಕಾ ಕೇಂದ್ರದ ಸ್ಟ್ರಾಂಗ್ ರೂಮ್ ಸಂಖ್ಯೆ-03 ಆಗಿದ್ದು, ನೆಲಮಹಡಿ ರೂಮ್ ನಂ.6 ರಲ್ಲಿ ಮೀಡಿಯಾ ಸೆಂಟರ್, ನಂ.11 ರಲ್ಲಿ ಪೊಲೀಸ್ ವೇಟಿಂಗ್ ರೋಮ್, ನಂ.14 ರಲ್ಲಿ ಲೇಡಿಸ್ ವೇಟಿಂಗ್ ರೂಮ್, ನಂ. 13 ರಲ್ಲಿ ಅಬ್ಸರ್ವರ್ ರೂಮ್ ಹಾಗೂ ಮೊದಲನೆ ಮಹಡಿ ರೂಮ್. ನಂ. 25 ರಲ್ಲಿ ಡಿ.ಇ.ಓ ರೂಮ್ ಆಗಿ ನಿಗದಿಪಡಿಸಲಾಗಿದೆ.
ವಾಹನಗಳ ಸಂಖ್ಯೆ :
******** ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ದಿನದಂದು ಚುನಾವಣಾ ಕರ್ತವ್ಯಕ್ಕಾಗಿ ಉಪಯೋಗಿಸಲಾಗುವ ವಾಹನಗಳ ಸಂಖ್ಯೆ ವಿವರ ಇಂತಿದೆ.  ಕುಷ್ಟಗಿ ವಿಧಾನಸಭಾ ಕ್ಷೇತ್ರಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್‍ಗಳು-48, ಕ್ರೂಸರ್-15, ಮಿನಿಬಸ್-04, ಕನಕಗಿರಿ ವಿಧಾನಸಭಾ ಕ್ಷೇತ್ರಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್‍ಗಳು-32, ಕ್ರೂಸರ್-29, ಜೀಪ್-45, ಮ್ಯಾಕ್ಸಿಕ್ಯಾಬ್-11, ಹಾಗೂ ಮಿನಿಬಸ್-02, ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್‍ಗಳು-17, ಕ್ರೂಸರ್-50, ಜೀಪ್-39, ಮ್ಯಾಕ್ಸಿಕ್ಯಾಬ್-08, ಹಾಗೂ ಮಿನಿಬಸ್-02, ಯಲಬುರ್ಗಾ ವಿಧಾನಸಭಾ ಕ್ಷೇತ್ರಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್‍ಗಳು-37, ಕ್ರೂಸರ್-16, ಜೀಪ್-36, ಮ್ಯಾಕ್ಸಿಕ್ಯಾಬ್-11, ಹಾಗೂ ಮಿನಿಬಸ್-02, ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್‍ಗಳು-36, ಕ್ರೂಸರ್-35, ಜೀಪ್-30, ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ಕೆ.ಎಸ್.ಆರ್.ಟಿ.ಸಿ ಬಸ್‍ಗಳು-170, ಕ್ರೂಸರ್-145, ಜೀಪ್-150, ಮ್ಯಾಕ್ಸಿಕ್ಯಾಬ್-30, ಹಾಗೂ ಮಿನಿಬಸ್-10, ಉಪಯೋಗಿಸಲಾಗುವುದು.
ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು :
************* ಕೊಪ್ಪಳ ಜಿಲ್ಲೆಯಲ್ಲಿ ಇದುವರೆಗೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ವಿವರ ಇಂತಿದೆ.  ಅಬಕಾರಿ ಇಲಾಖೆಯಿಂದ 294.11 ಲೀ. ( ಅಂದಾಜು ಮೌಲ್ಯ ರೂ. 1,25,776) ಹಾಗೂ ಪೊಲೀಸ್ ಇಲಾಖೆಯಿಂದ 1631.94 ಲೀ. (ಅಂದಾಜು ಮೌಲ್ಯ ರೂ. 1,98,726) ಮದ್ಯ ವಶಪಡಿಸಿಕೊಂಡಿದ್ದಾರೆ.  0.3 ಕೆಜಿ ಗಾಂಜಾ, 15 ಕೆಜಿ ಗಾಂಜಾ ಗ್ರೀನ್ ಪ್ಲ್ಯಾಂಟ್ಸ್, 25.50 ಕೆಜಿ ಗಾಂಜಾ ಗ್ರೀನ್ ಪ್ಲ್ಯಾಂಟ್ಸ್ (ಮೌಲ್ಯ ರೂ.44,000) ಹಾಗೂ 15 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.  ಫ್ಲೈಯಿಂಗ್ ಸ್ಕ್ವಾಡ್‍ಗಳು 6,00,880/- ಲಕ್ಷವನ್ನು ವಶಪಡಿಸಿಕೊಂಡಿದ್ದಾರೆ.  5 ಲಕ್ಷವನ್ನು ಪರಿಶೀಲನೆ ನಂತರ ಬಿಡುಗಡೆಗೊಳಿಸಿದ್ದಾರೆ.  ಹಾಗೂ 1,00,880 ರೂ. ಮೊತ್ತ ಖಜಾನೆಯಲ್ಲಿ ಠೇವಣಿ ಇರಿಸಿದ್ದಾರೆ.  ಎಸ್.ಎಸ್.ಟಿ. ತಂಡದಿಂದ 7,68,800/- ರೂ. ವಶಪಡಿಸಿಕೊಂಡಿದ್ದಾರೆ.  2,77,000 ರೂ. ಪರಿಶೀಲನೆ ನಂತರ ಬಿಡುಗಡೆಗೊಳಿಸಿದ್ದಾರೆ.  ಹಾಗೂ 4,91,800 ರೂ. ಮೊತ್ತ ಖಜಾನೆಯಲ್ಲಿ ಠೇವಣಿ ಇರಿಸಿದ್ದಾರೆ. 
    ಚುನಾವಣಾ ಸಂಬಂಧಿತ ಸಾರ್ವಜನಿಕರಿಂದ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳನ್ನು ಸೇರಿ ಒಟ್ಟು 40 ದೂರುಗಳ ದಾಖಲಾಗಿದ್ದು, 40 ದೂರುಗಳನ್ನು ವಿಲೇವಾರಿಗೊಳಿಸಲಾಗಿದೆ.  ಚುನಾವಣಾ ಪ್ರಚಾರದ ಅನುಮತಿಗಾಗಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳನ್ನು ಸೇರಿ ಒಟ್ಟು 499 ಅರ್ಜಿಗಳು ಸ್ವೀಕೃತಿಯಾಗಿದ್ದು, 486 ವಿಲೇವಾರಿಯಾಗಿ 13 ಬಾಕಿ ಇವೆ. 
     ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಮೇ. 12 ರಂದು ಜಿಲ್ಲೆಯಾದ್ಯಂತ ಬೆಳಿಗ್ಗೆ 07 ಗಂಟೆಯಿಂದ ಸಂಜೆ 06 ಗಂಟೆಯವರೆಗೆ ಮತದಾನ ನಡೆಯಲಿದ್ದು, ಎಲ್ಲ ಮತದಾರರು ತಪ್ಪದೆ ಸಂವಿಧಾನಾತ್ಮಕ ಹಕ್ಕನ್ನು ಚಲಾಯಿಸುವ ಮೂಲಕ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾಗುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಮನವಿ ಮಾಡಿದ್ದಾರೆ. 


ಹೀಗಾಗಿ ಲೇಖನಗಳು ವಿಧಾನಸಭಾ ಚುನಾವಣೆ 2018 : ಕೊಪ್ಪಳ ಜಿಲ್ಲೆಯಲ್ಲಿ 1078364 ಮತದಾರರು : ಮತದಾನ ಕರ್ತವ್ಯಕ್ಕೆ 7795 ಸಿಬ್ಬಂದಿ

ಎಲ್ಲಾ ಲೇಖನಗಳು ಆಗಿದೆ ವಿಧಾನಸಭಾ ಚುನಾವಣೆ 2018 : ಕೊಪ್ಪಳ ಜಿಲ್ಲೆಯಲ್ಲಿ 1078364 ಮತದಾರರು : ಮತದಾನ ಕರ್ತವ್ಯಕ್ಕೆ 7795 ಸಿಬ್ಬಂದಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ವಿಧಾನಸಭಾ ಚುನಾವಣೆ 2018 : ಕೊಪ್ಪಳ ಜಿಲ್ಲೆಯಲ್ಲಿ 1078364 ಮತದಾರರು : ಮತದಾನ ಕರ್ತವ್ಯಕ್ಕೆ 7795 ಸಿಬ್ಬಂದಿ ಲಿಂಕ್ ವಿಳಾಸ https://dekalungi.blogspot.com/2018/05/2018-1078364-7795.html

Subscribe to receive free email updates:

0 Response to "ವಿಧಾನಸಭಾ ಚುನಾವಣೆ 2018 : ಕೊಪ್ಪಳ ಜಿಲ್ಲೆಯಲ್ಲಿ 1078364 ಮತದಾರರು : ಮತದಾನ ಕರ್ತವ್ಯಕ್ಕೆ 7795 ಸಿಬ್ಬಂದಿ"

ಕಾಮೆಂಟ್‌‌ ಪೋಸ್ಟ್‌ ಮಾಡಿ