ಶೀರ್ಷಿಕೆ : ಪ್ರಾಣೇಶ್ ಮಾತಿನ ಮೋಡಿಗೆ ನಕ್ಕು ನಲಿದರು : ಮತದಾನ ಜಾಗೃತಿಯನ್ನೂ ಪಡೆದರು
ಲಿಂಕ್ : ಪ್ರಾಣೇಶ್ ಮಾತಿನ ಮೋಡಿಗೆ ನಕ್ಕು ನಲಿದರು : ಮತದಾನ ಜಾಗೃತಿಯನ್ನೂ ಪಡೆದರು
ಪ್ರಾಣೇಶ್ ಮಾತಿನ ಮೋಡಿಗೆ ನಕ್ಕು ನಲಿದರು : ಮತದಾನ ಜಾಗೃತಿಯನ್ನೂ ಪಡೆದರು
ಕೊಪ್ಪಳ ಏ. 27 (ಕರ್ನಾಟಕ ವಾರ್ತೆ): ಈ ನಾಡಿನ ಖ್ಯಾತ ಹಾಸ್ಯ ಸಾಹಿತಿ ಗಂಗಾವತಿ ಬೀಚಿ ಎಂದೇ ಪ್ರಸಿದ್ಧರಾಗಿರುವ ಪ್ರಾಣೇಶ್ ಅವರ ಮಾತಿನ ಮೋಡಿಗೆ ಕೊಪ್ಪಳದ ಜನ ಹೊಟ್ಟೆ ಹುಣ್ಣಾಗುವಂತೆ ನಕ್ಕು ನಲಿದರು, ಇದರ ಜೊತೆ ಜೊತೆಗೆ ನೈತಿಕ ಮತದಾನದ ಜಾಗೃತಿಯನ್ನೂ ಪಡೆದುಕೊಂಡರು.
ಚುನಾವಣಾ ಆಯೋಗದಿಂದ ಕೊಪ್ಪಳ ಜಿಲ್ಲೆಗೆ ಮತದಾನ ಜಾಗೃತಿಗಾಗಿ ಐಕಾನ್ ಆಗಿ ನೇಮಕಗೊಂಡಿರುವ ಖ್ಯಾತ ಹಾಸ್ಯ ಸಾಹಿತಿ ಗಂಗಾವತಿ ಪ್ರಾಣೇಶ್ ಅವರು ಕೊಪ್ಪಳದ ಸಾರ್ವಜನಿಕ ಮೈದಾನದಲ್ಲಿ ಗುರುವಾರದಂದು ನಡೆಸಿಕೊಟ್ಟ ಹಾಸ್ಯ ಸಂಜೆ ಕಾರ್ಯಕ್ರಮದಲ್ಲಿ, ಜನರು ಹೊಟ್ಟೆ ಹುಣ್ಣಾಗುವಂತೆ ನಕ್ಕರು, ಜೊತೆಗೆ ನೈತಿಕ ಮತದಾನದ ಬಗ್ಗೆ ಅವರು ನೀಡಿದ ಹೇಳಿಕೆಗಳಿಗೆ ತಮ್ಮ ಸಹಮತಿಯನ್ನು ವ್ಯಕ್ತಪಡಿಸಿ, ತಪ್ಪದೆ ತಾವು ಮತ ಚಲಾಯಿಸುವುದಾಗಿ ಘೋಷಿಸಿದರು.
ಮತದಾನ ಏಕೆ ಮಾಡಬೇಕು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಂದು ಮತಕ್ಕೂ ಎಷ್ಟು ಮಹತ್ವವಿದೆ ಎಂಬ ವಿಷಯವನ್ನು ತಮ್ಮದೇ ಆದ ಉತ್ತರ ಕರ್ನಾಟಕ ಶೈಲಿಯ ಪಂಚಿಂಗ್ ಡೈಲಾಗ್‍ಗಳ ಮೂಲಕ ಜಾಗೃತಿ ಮೂಡಿಸಿ, ಜನರನ್ನು ನಕ್ಕು, ನಗಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಣೇಶ್ ಅವರು, ಈ ಹಿಂದೆ ಕಲಾವಿದರುಗಳಿಗೆ ಹೆಚ್ಚು ಅವಕಾಶಗಳು ಸಿಗುತ್ತಿರಲಿಲ್ಲ. ಮಾಧ್ಯಮಗಳ ಸಹಕಾರದಿಂದಾಗಿ, ಇಂದು ಕಲಾವಿದರು ಹೆಚ್ಚು, ಅವಕಾಶಗಳನ್ನು ಪಡೆಯುವ ಜೊತೆಗೆ ಖ್ಯಾತಿಯನ್ನೂ ಪಡೆಯುತ್ತಿದ್ದಾರೆ. ಚುನಾವಣೆಗಳಲ್ಲಿ ಮತದಾರರಿಗೆ ಜಾಗೃತಿ ಮೂಡಿಸುವಂತಹ ಕಾರ್ಯಗಳಿಗೆ ನಮ್ಮಂತಹ ಕಲಾವಿದರನ್ನು ಐಕಾನ್ ಆಗಿ ನೇಮಿಸುವ ಮೂಲಕ ಆಯೋಗ, ಕಲಾವಿದರಿಗೆ ಗೌರವ ಸಲ್ಲಿಸಿದೆ. ದೇಶ ಕಟ್ಟುವ, ದೇಶ ಸೇವೆಯ ಕಾರ್ಯಗಳಿಗೆ ಕಲಾವಿದರೂ ಎಂದೂ ಹಿಂಜರಿಯುವುದಿಲ್ಲ. ತಮ್ಮನ್ನು ಜಿಲ್ಲೆಗೆ ಐಕಾನ್ ಆಗಿ ಗುರುತಿಸಿದ್ದಕ್ಕಾಗಿ ಜಿಲ್ಲಾಡಳಿತ ಹಾಗೂ ಚುನಾವಣಾ ಆಯೋಗಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಶಾಲಾ ಹಂತದಲ್ಲಿಯೇ ಮತ ಜಾಗೃತಿ ಮೂಡಿಸಿ :
************** ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ನಮ್ಮ ದೇಶದಲ್ಲಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಇರುವ ಮತದಾನ ವ್ಯವಸ್ಥೆ ನಿಜಕ್ಕೂ ಅದ್ಭುತವಾಗಿದೆ. 18 ವರ್ಷ ತುಂಬಿದ ಬಳಿಕವೇ ಮತದಾನದ ಹಕ್ಕನ್ನು ನೀಡಲಾಗುತ್ತಿದೆ. ಹೀಗಾಗಿ ಮತದಾನ ಪ್ರಜ್ಞೆ ಯುವಕರಿಗೆ ಮಾತ್ರ ಮೂಡುತ್ತಿದೆ. ಆದರೆ ಮತದಾನ ಏಕೆ ಅತ್ಯಂತ ಅಗತ್ಯ ಎಂಬುದರ ಬಗ್ಗೆ ಹಾಗೂ ನೈತಿಕ ಮತದಾನ ಕುರಿತು ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಜಾಗೃತಿ ಮೂಡಿಸಿದಲ್ಲಿ, ಮತದಾನ ಹಕ್ಕು ಪಡೆದ ಬಳಿಕ, ಅವರ ಮತ ಪ್ರಜ್ಞೆ ಜಾಗೃತಗೊಳ್ಳಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಚಿಂತನೆ ನಡೆಯಬೇಕಿದೆ ಎಂದರು.
ಮೇ. 12 ರಂದು ಪಿಕ್‍ನಿಕ್ ಬೇಡ :
*********** ಮತದಾನ ಪ್ರಕ್ರಿಯೆ ಮೇ. 12 ರಂದು ಶನಿವಾರ ನಡೆಯಲಿದ್ದು, ಕೆಲವರು ಶನಿವಾರ ಮತ್ತು ಭಾನುವಾರ ರಜಾ ದಿನಗಳಿವೆ ಎಂಬುದಾಗಿ ಭಾವಿಸಿ, ಮತದಾನ ಮಾಡುವುದನ್ನು ಬಿಟ್ಟು, ಪಿಕ್‍ನಿಕ್‍ಗೆ ಹೋಗುವುದು, ನಿಜಕ್ಕೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ನಾವು ಅವಮಾನ ಮಾಡಿದಂತೆ, ಮತದಾನ ಮಾಡಿ, ತಮ್ಮ ಕರ್ತವ್ಯ ನಿಭಾಯಿಸಬೇಕು. ಒಂದು ವೇಳೆ ಜಿಲ್ಲೆಯಲ್ಲಿ ಯಾವುದೇ ಮತದಾರರು ಮೇ. 12 ರಂದು ಪಿಕ್‍ನಿಕ್ ಅಥವಾ ಇತರೆ ಊರುಗಳಿಗೆ ತೆರಳಬೇಕು ಅಂದುಕೊಂಡಿದ್ದಲ್ಲಿ, ಕೂಡಲೆ ತಮ್ಮ ನಿರ್ಧಾರ ಬದಲಿಸಬೇಕು. ಯಾವುದೇ ಚುನಾವಣೆಯಲ್ಲಿ ಸೂಕ್ತ ಅಭ್ಯರ್ಥಿ ಆಯ್ಕೆಯಾಗಲಿಲ್ಲ ಎಂದರೆ, ಅದಕ್ಕೆ ಮತದಾನ ಮಾಡದಿರುವವರೇ ಕಾರಣಕರ್ತರಾಗುತ್ತಾರೆ. ನಗರವಾಸಿಗಳಿಗಿಂತ, ಗ್ರಾಮೀಣರೆ ಮತದಾನ ಪ್ರಕ್ರಿಯೆಯಲ್ಲಿ ಹೆಚ್ಚು ತೊಡಗಿಸಿಕೊಂಡಿರುವುದು ಹಿಂದಿನ ಚುನಾವಣೆಗಳ ಅಂಕಿ-ಅಂಶಗಳಿಂದ ತಿಳಿದು ಬರುತ್ತದೆ. ಅದರಲ್ಲೂ ಮಹಿಳೆಯರೇ ಮತದಾನದಲ್ಲೂ ಮುಂದಿರುತ್ತಾರೆ. ಶಿಕ್ಷಣ, ಉದ್ಯೋಗ, ರಾಜಕೀಯ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಮುಂಚೂಣಿಗೆ ಬರುತ್ತಿರುವುದು ಒಳ್ಳೆಯ ಬೆಳವಣಿಗೆ. ಮತದಾನ ಎಂಬುದು ಪ್ರಜಾಪ್ರಭುತ್ವದ ಹಬ್ಬವಿದ್ದಂತೆ, ಪ್ರತಿಯೊಬ್ಬ ಮತದಾರರು, ಮೇ. 12 ರಂದು ತಪ್ಪದೆ ಮತಗಟ್ಟೆಗೆ ತೆರಳಿ ಮತ ಚಲಾಯಿಸಿ, ಹಬ್ಬದಂತೆಯೇ ಸಂಭ್ರಮಿಸಬೇಕು ಎಂದು ಗಂಗಾವತಿ ಪ್ರಾಣೇಶ್ ಅವರು ತಮ್ಮ ಹಾಸ್ಯ ಮಾತುಗಳ ಮೂಲಕ ಮನವರಿಕೆ ಮಾಡಿಕೊಟ್ಟರು.
ಇದಕ್ಕೂ ಪೂರ್ವದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ ಅವರು, ಗಂಗಾವತಿ ಪ್ರಾಣೇಶ್ ಅವರಂತಹ ಖ್ಯಾತ ಹಾಸ್ಯ ಸಾಹಿತಿಗಳನ್ನು ಮತದಾರರ ಜಾಗೃತಿಗೆ ಐಕಾನ್ ಆಗಿ ನೇಮಕ ಮಾಡಿಕೊಳ್ಳಲಾಗಿದೆ. ಪ್ರಾಣೇಶ್ ಅವರು ಕೊಪ್ಪಳ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಪ್ರಮುಖ ಸ್ಥಳಗಳಲ್ಲಿ ತಮ್ಮ ಕಾರ್ಯಕ್ರಮಗಳ ಮೂಲಕ ಜನರಲ್ಲಿ ನೈತಿಕ ಮತದಾನ ಕುರಿತು ಜಾಗೃತಿ ಮೂಡಿಸಲಿದ್ದಾರೆ. ಮತದಾರರಲ್ಲಿ ನೈತಿಕ ಮತದಾನ ಕುರಿತು ಜಾಗೃತಿ ಮೂಡಿಸಲು ಜಿಲ್ಲಾ ಸ್ವೀಪ್ ಸಮಿತಿ ಹಲವಾರು ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳುತ್ತಿದೆ. ಒಟ್ಟಾರೆ ಚುನಾವಣೆಯಲ್ಲಿ ಹೆಚ್ಚಿನ ಮತದಾನ ಪ್ರಮಾಣ ದಾಖಲಾಗಬೇಕು ಎನ್ನುವುದು ಜಿಲ್ಲಾಡಳಿತದ ಆಶಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು, ಮತದಾನ ಜಾಗೃತಿಗಾಗಿ ಕೊಪ್ಪಳ ಜಿಲ್ಲೆಗೆ ಆಯ್ಕೆ ಮಾಡಲಾಗಿರುವ ವೋಟರ್ ಕುಮಾರ್ ಲಾಂಛನದ ಚಿರತೆಯ ಮಾಸ್ಕ್ ಧರಿಸುವ ಮೂಲಕ, ಪ್ರಚಾರ ಸಾಮಗ್ರಿಯನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಗಂಗಾವತಿ ಪ್ರಾಣೇಶ್, ಸಿಇಒ ವೆಂಕಟ್ ರಾಜಾ ಸೇರಿದಂತೆ ಎಲ್ಲ ಅಧಿಕಾರಿಗಳು ವೋಟರ್ ಕುಮಾರ್ ಚಿರತೆಯ ಮಾಸ್ಕ್ ಧರಿಸುವ ಮೂಲಕ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಲ್ಲ ಸಾರ್ವಜನಿಕರಿಗೂ ವೋಟರ್ ಕುಮಾರ್ ಚಿರತೆಯ ಮಾಸ್ಕ್ ವಿತರಿಸಲಾಯಿತು. ಸಾರ್ವಜನಿಕರು ಮಾಸ್ಕ್ ಧರಿಸಿ ಸಂಭ್ರಮಿಸಿದರು. ಇದರ ಜೊತೆಗೆ ಚುನಾವಣೆಯಲ್ಲಿ ಇವಿಎಂ ಮತ ಯಂತ್ರಗಳ ಬಳಕೆ ಹಾಗೂ ವಿವಿ ಪ್ಯಾಟ್ ಬಳಕೆ ಕುರಿತು ಸಾರ್ವಜನಿಕರಿಂದ ಅಣಕು ಮತದಾನ ಮಾಡಿಸುವ ಮೂಲಕ ಪ್ರಾತ್ಯಕ್ಷಿಕೆ ನೀಡಿ, ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಕೊಪ್ಪಳ ಕ್ಷೇತ್ರ ಚುನಾವಣಾಧಿಕಾರಿ ಸಿ.ಡಿ. ಗೀತಾ, ಕೊಪ್ಪಳ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂತಿ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ ವೋಟರ್‍ಗ್ರಾಂ ಫೋಟೋ ಸ್ಪಾಟ್ ಫ್ರೇಂನಲ್ಲಿ ಜಿಲ್ಲಾಧಿಕಾರಿಗಳು, ಗಂಗಾವತಿ ಪ್ರಾಣೇಶ್, ಸಿಇಒ ವೆಂಕಟ್ ರಾಜಾ ಸೇರಿದಂತೆ ಹಲವು ಅಧಿಕಾರಿಗಳು, ಸಾರ್ವಜನಿಕರು ಫೋಟೋ ಕ್ಲಿಕ್ಕಿಸಿಕೊಂಡರು.
ಹೀಗಾಗಿ ಲೇಖನಗಳು ಪ್ರಾಣೇಶ್ ಮಾತಿನ ಮೋಡಿಗೆ ನಕ್ಕು ನಲಿದರು : ಮತದಾನ ಜಾಗೃತಿಯನ್ನೂ ಪಡೆದರು
ಎಲ್ಲಾ ಲೇಖನಗಳು ಆಗಿದೆ ಪ್ರಾಣೇಶ್ ಮಾತಿನ ಮೋಡಿಗೆ ನಕ್ಕು ನಲಿದರು : ಮತದಾನ ಜಾಗೃತಿಯನ್ನೂ ಪಡೆದರು ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಪ್ರಾಣೇಶ್ ಮಾತಿನ ಮೋಡಿಗೆ ನಕ್ಕು ನಲಿದರು : ಮತದಾನ ಜಾಗೃತಿಯನ್ನೂ ಪಡೆದರು ಲಿಂಕ್ ವಿಳಾಸ https://dekalungi.blogspot.com/2018/04/blog-post_939.html
0 Response to "ಪ್ರಾಣೇಶ್ ಮಾತಿನ ಮೋಡಿಗೆ ನಕ್ಕು ನಲಿದರು : ಮತದಾನ ಜಾಗೃತಿಯನ್ನೂ ಪಡೆದರು"
ಕಾಮೆಂಟ್ ಪೋಸ್ಟ್ ಮಾಡಿ