ಅಬಕಾರಿ ಅಕ್ರಮ : ಜಿಲ್ಲೆಯ ವಿವಿಧೆಡೆ ಪ್ರಕರಣ ದಾಖಲು, ಮೂವರ ಬಂಧನ

ಅಬಕಾರಿ ಅಕ್ರಮ : ಜಿಲ್ಲೆಯ ವಿವಿಧೆಡೆ ಪ್ರಕರಣ ದಾಖಲು, ಮೂವರ ಬಂಧನ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಅಬಕಾರಿ ಅಕ್ರಮ : ಜಿಲ್ಲೆಯ ವಿವಿಧೆಡೆ ಪ್ರಕರಣ ದಾಖಲು, ಮೂವರ ಬಂಧನ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಅಬಕಾರಿ ಅಕ್ರಮ : ಜಿಲ್ಲೆಯ ವಿವಿಧೆಡೆ ಪ್ರಕರಣ ದಾಖಲು, ಮೂವರ ಬಂಧನ
ಲಿಂಕ್ : ಅಬಕಾರಿ ಅಕ್ರಮ : ಜಿಲ್ಲೆಯ ವಿವಿಧೆಡೆ ಪ್ರಕರಣ ದಾಖಲು, ಮೂವರ ಬಂಧನ

ಓದಿ


ಅಬಕಾರಿ ಅಕ್ರಮ : ಜಿಲ್ಲೆಯ ವಿವಿಧೆಡೆ ಪ್ರಕರಣ ದಾಖಲು, ಮೂವರ ಬಂಧನ


 ಕೊಪ್ಪಳ ಏ. 27 (ಕರ್ನಾಟಕ ವಾರ್ತೆ): ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಜಿಲ್ಲೆಯ ವಿವಿಧೆಡೆ ಅಬಕಾರಿ ನಿಯಮಗಳನ್ನು ಉಲ್ಲಂಘಿಸಿದ ಕುರಿತು ಪ್ರಕರಣಗಳು ದಾಖಲಾಗಿದ್ದು, ಅಕ್ರಮವಾಗಿ ಸಾಗಿಸುತ್ತಿದ್ದ ಒಟ್ಟು 18. 60 ಲೀ. ಮದ್ಯ  ವಶಕ್ಕೆ ಪಡೆದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
 
     ನೀರಿ ಸಂಹಿತೆ ಜಾರಿಯಲ್ಲಿದ್ದು, ಅಬಕಾರಿ ಇಲಾಖೆಯು, ಅಬಕಾರಿ ಅಕ್ರಮಗಳನ್ನು ತಡೆಗಟ್ಟಲು ತೀವ್ರ ನಿಗಾ ವಹಿಸುತ್ತಿದೆ.  ಚೆಕ್‍ಪೋಸ್ಟ್‍ಗಳಲ್ಲಿಯೂ ಕೂಡ ತಪಾಸಣೆಯನ್ನು ಬಿಗಿಗೊಳಿಸಲಾಗಿದೆ.  
 
ಪ್ರಕರಣ-1 :
****** ಕೊಪ್ಪಳ ತಾಲೂಕಿನ ಗಿಣಿಗೇರಾ ಗ್ರಾಮ ಬಳಿ ಗುರುವಾರದಂದು  ದ್ವಿಚಕ್ರ ವಾಹನ ಮೂಲಕ  ಅಕ್ರಮವಾಗಿ 5. 460 ಲೀ. ಮದ್ಯ ಸಾಗಿಸುತ್ತಿದ್ದಾಗ, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ದ್ವಿಚಕ್ರ ವಾಹನ ಹಾಗೂ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ.  ಈ ಸಂಬಂಧ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ಹಾಲಹಳ್ಳಿ ಗ್ರಾಮದ  ಗ್ಯಾನಪ್ಪ ಭಜಂತ್ರಿ ಹಾಗೂ ಗವಿಸಿದ್ದಪ್ಪ ಹಡಪದ ಎಂಬುವವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು,   ಅಬಕಾರಿ ಉಪನಿರೀಕ್ಷಕ ಬಿ.ಎ. ಪಾಂಗೇರಿ, ಸಿಬ್ಬಂದಿಗಳಾದ ಬಸವರಾಜ ಮಠ, ನಾಗರಾಜ ಕ್ವಾಟಿ, ಗವಿಸಿದ್ದಪ್ಪ, ರಾಘವೇಂದ್ರ ಕಮ್ಮಾರ್ ದಾಳಿಯಲ್ಲಿ ಪಾಲ್ಗೊಂಡಿದ್ದರು.
 
ಪ್ರಕರಣ-2 :
***** ಕಳೆದ ಬುಧವಾರದಂದು ಗಂಗಾವತಿ ತಾಲೂಕಿನ ದಾಸನಾಳ ಬ್ರಿಡ್ಜ್ ಬಳಿ ಅಬಕಾರಿ ಇಲಾಖೆಯಿಂದ ಗಸ್ತು ಕೈಗೊಂಡ ಸಂದರ್ಭದಲ್ಲಿ ಆಗೋಲಿ ಗ್ರಾಮದ ಮಹಮ್ಮದ್ ಎಂಬುವವರು ದ್ವಿಚಕ್ರ ವಾಹನದಲ್ಲಿ  8. 640 ಲೀ. ಅಕ್ರಮ ಮದ್ಯ ಸಾಗಾಣಿಕೆ ಪ್ರಕರಣ ಪತ್ತೆಯಾಗಿದ್ದು, ಮದ್ಯ ಹಾಗೂ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದು, ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.   
ಪ್ರಕರಣ-3 :
***** ಗಂಗಾವತಿ ತಾಲೂಕು ಶ್ರೀರಾಮನಗರ ಗ್ರಾಮ ಬಳಿ ಅಬಕಾರಿ ಇಲಾಖೆ ಅಧಿಕಾರಿಗಳು ರಸ್ತೆಗಾವಲು ಕೈಗೊಂಡ ಸಂದರ್ಭದಲ್ಲಿ ಅಕ್ರಮ ಮದ್ಯ ಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿ  ನಡೆಸಿದ ದಾಳಿ ಸಂದರ್ಭದಲ್ಲಿ 4. 500 ಲೀ. ಅಕ್ರಮ ಮದ್ಯವನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿಯು ದ್ವಿಚಕ್ರ ವಾಹನ ಹಾಗೂ ಮದ್ಯವನ್ನು ಬಿಟ್ಟು ಪರಾರಿಯಾಗಿದ್ದಾನೆ. ಅಬಕಾರಿ ಇಲಾಖೆ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದೆ.



ಹೀಗಾಗಿ ಲೇಖನಗಳು ಅಬಕಾರಿ ಅಕ್ರಮ : ಜಿಲ್ಲೆಯ ವಿವಿಧೆಡೆ ಪ್ರಕರಣ ದಾಖಲು, ಮೂವರ ಬಂಧನ

ಎಲ್ಲಾ ಲೇಖನಗಳು ಆಗಿದೆ ಅಬಕಾರಿ ಅಕ್ರಮ : ಜಿಲ್ಲೆಯ ವಿವಿಧೆಡೆ ಪ್ರಕರಣ ದಾಖಲು, ಮೂವರ ಬಂಧನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಅಬಕಾರಿ ಅಕ್ರಮ : ಜಿಲ್ಲೆಯ ವಿವಿಧೆಡೆ ಪ್ರಕರಣ ದಾಖಲು, ಮೂವರ ಬಂಧನ ಲಿಂಕ್ ವಿಳಾಸ https://dekalungi.blogspot.com/2018/04/blog-post_297.html

Subscribe to receive free email updates:

0 Response to "ಅಬಕಾರಿ ಅಕ್ರಮ : ಜಿಲ್ಲೆಯ ವಿವಿಧೆಡೆ ಪ್ರಕರಣ ದಾಖಲು, ಮೂವರ ಬಂಧನ"

ಕಾಮೆಂಟ್‌‌ ಪೋಸ್ಟ್‌ ಮಾಡಿ