ಶೀರ್ಷಿಕೆ : news and photo date: 22---2---2018
ಲಿಂಕ್ : news and photo date: 22---2---2018
news and photo date: 22---2---2018
ರೈತರಿಗೆ ಕಬ್ಬಿನ ಹಣ ಪಾವತಿಸಲು ಜಿಲ್ಲಾಧಿಕಾರಿಗಳ ಸೂಚನೆ
*****************************************************
ಕಲಬುರಗಿ,ಫೆ.22.(ಕ.ವಾ.)-ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿರುವ ರೈತರ ಕಬ್ಬಿನ ಹಣವನ್ನು ಆದಷ್ಟು ಬೇಗ ಪಾವತಿ ಮಾಡಬೇಕು. ಹಣ ಪಾವತಿಸುವುದು ತಡವಾದ್ದಂತೆ ರೈತರಿಗೆ ಸಮಸ್ಯೆಗಳು ಹೆಚ್ಚುತ್ತವೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಸೂಚಿಸಿದರು.
ಅವರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಲಬುರಗಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳೊಂದಿಗೆ ಕರೆದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಸಕ್ಕರೆ ಕಾರ್ಖಾನೆ ಅಧಿಕಾರಿಗಳು ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಆದಷ್ಟು ಬೇಗ ರೈತರ ಬಾಕಿ ಹಣವನ್ನು ಪಾವತಿಸಬೇಕು. ರೈತರಿಗೆ ಪಾವತಿಸುವ ಹಣದ ವರದಿಯನ್ನು ಪ್ರತಿದಿನ ಸಲ್ಲಿಸಬೇಕೆಂದು ತಿಳಿಸಿದರು.
ಉಗಾರ ಶುಗರ್ಸ್ ಕಾರ್ಖಾನೆಯವರು 2725 ರೈತರಿಂದ 2.96 ಲಕ್ಷ ಮೆಟ್ರಿಕ್ ಟನ್ ಕಬ್ಬು ಖರೀದಿಸಿದ್ದು, ಈವರೆಗೆ 22 ಕೋಟಿ ರೂ. ಹಣ ಪಾವತಿಸಿದ್ದಾರೆ. ಇನ್ನೂ 65 ಕೋಟಿ ರೂ. ಪಾವತಿಸಬೇಕಾಗಿದೆ. ರೇಣುಕಾ ಶುಗರ್ಸ್ ಕಾರ್ಖಾನೆಯವರು 4251 ರೈತರಿಂದ 6.31 ಲಕ್ಷ ಮೆಟ್ರಿಕ್ ಟನ್ ಕಬ್ಬು ಖರೀದಿ ಮಾಡಿ 41 ಕೋಟಿ ರೂ. ಪಾವತಿಸಿದ್ದಾರೆ. ಇನ್ನೂ 139 ಕೋಟಿ ರೂ. ಪಾವತಿಸಬೇಕಾಗಿದೆ. ಎನ್.ಎಸ್.ಎಲ್. ಭೂಸನೂರ ಕಾರ್ಖಾನೆಯವರು 331 ರೈತರಿಂದ 2.26 ಲಕ್ಷ ಮೆಟ್ರಿಕ್ ಟನ್ ಕಬ್ಬು ಖರೀದಿಸಿದ್ದಾರೆ. 49 ಕೋಟಿ ರೂ. ಪಾವತಿಸಬೇಕಾಗಿದೆ. ಅದೇ ರೀತಿ ಕೋರ್ ಗ್ರೀನ್ ಸಕ್ಕರೆ ಕಾರ್ಖಾನೆಯವರು 1245 ರೈತರಿಂದ 4.35 ಲಕ್ಷ ಮೆಟ್ರಿಕ್ ಟನ್ ಕಬ್ಬು ಖರೀದಿಸಿ 27 ಕೋಟಿ ರೂ. ಪಾವತಿಸಿದ್ದಾರೆ. ಇನ್ನೂ 95 ಕೋಟಿ ರೂ. ಪಾವತಿಸಬೇಕಾಗಿದೆ. ಆದಷ್ಟು ಬೇಗ ಈ ಹಣವನ್ನು ಪಾವತಿಸಲು ಕ್ರಮ ಜರುಗಿಸಬೇಕೆಂದು ತಿಳಿಸಿದರು.
ರೈತರು ಬೆಳೆದ ಕಬ್ಬು ನಿಗದಿತ ಅವಧಿಯಲ್ಲಿ ಕಟಾವು ಮಾಡುತ್ತಿಲ್ಲ ಎನ್ನುವ ದೂರುಗಳಿದ್ದು, ಸಕ್ಕರೆ ಕಾರ್ಖಾನೆಯವರು ಮೂರು ದಿನಗಳಲ್ಲಿ ಕಬ್ಬು ಕಟಾವು ಮಾಡುವ ಟೋಳಿ ಹೆಚ್ಚಿಸಿ ಈಗಿರುವ ಹಾಗೂ ಹೆಚ್ಚಿಸಿರುವ ಟೋಳಿಗಳ ವರದಿ ನೀಡಬೇಕು. ಟೋಳಿಗಳನ್ನು ಹೆಚ್ಚಿಸಿ ಹೆಚ್ಚಿನ ಪ್ರಮಾಣದ ಕಬ್ಬು ಕಟಾವಿಗೆ ಮುಂದಾಗಬೇಕು. ಕಬ್ಬು ಕಟಾವು ಮಾಡುವ ಟೋಳಿಗಳ ಜೊತೆಗೆ ರೈತರು ಸಹಾಯ ಮಾಡಿದ್ದಲ್ಲಿ ಅಥವಾ ರೈತರೇ ಟೋಳಿಗಳೊಂದಿಗೆ ಕಬ್ಬು ಕಟಾವು ಮಾಡಿದ್ದಲ್ಲಿ ಒಂದು ಟನ್‍ಗೆ 275 ರೂ. ನೀಡಲಾಗುವುದು. ರೈತರು ಇದರ ಪ್ರಯೋಜನ ಪಡೆಯಬೇಕು. ಈ ವರ್ಷ ರೈತರು ಚೆನ್ನಾಗಿ ಕಬ್ಬು ಬೆಳೆದಿದ್ದು, ರೈತರಿಗೆ ಕಬ್ಬಿನ ಸಿಹಿ ದೊರಕಿಸಿಕೊಡಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು.
ಬೆಳಗಾವಿ ಜಿಲ್ಲೆಯಲ್ಲಿಯೂ ಸಹ ಹೆಚ್ಚು ಪ್ರಮಾಣದ ಕಬ್ಬು ಬೆಳೆಯುತ್ತಾರೆ. ಅಲ್ಲಿ ಸ್ವತ: ರೈತರೇ ಕಬ್ಬು ಕಟಾವು ಮಾಡಿ ಕಾರ್ಖಾನೆಗಳಿಗೆ ಸಾಗಿಸುತ್ತಾರೆ. ಆದರೆ ಈ ಭಾಗದಲ್ಲಿ ಕಬ್ಬು ಕಟಾವಿಗೆ ಮಹಾರಾಷ್ಟ್ರದ ಟೋಳಿಗಳನ್ನು ಅವಲಂಬಿಸಬೇಕಾಗಿದೆ. ರೈತರೇ ಸ್ವತ: ಕಬ್ಬು ಕಟಾವು ಮಾಡಿಕೊಂಡಲ್ಲಿ ತುಂಬಾ ಅನುಕೂಲವಾಗಲಿದೆ ಎಂದು ಸಕ್ಕರೆ ಕಾರ್ಖಾನೆಯ ಪ್ರತಿನಿಧಿಗಳು ವಿವರಿಸಿದರು.
ಸಭೆಯಲ್ಲಿ ಉಗಾರ ಶುಗರ್ಸ್‍ನ ಕಬ್ಬು ಅಭಿವೃದ್ಧಿ ಅಧಿಕಾರಿ ಅನೀಲಕುಮಾರ ಪಾಟೀಲ, ಕೋರ ಗ್ರೀನ್ ಸಕ್ಕರೆ ಕಾರ್ಖಾನೆಯ ಮ್ಯಾನೇಜರ್ ಶಿವಾನಂದ ನಂದಗಿರಿ, ಎನ್.ಎಸ್.ಎಲ್. ಭೂಸನೂರ ಸಕ್ಕರೆ ಕಾರ್ಖಾನೆಯ ಉಪ ವ್ಯವಸ್ಥಾಪಕ ಪ್ರಭಾಕರ ರೆಡ್ಡಿ ಹಾಗೂ ರೇಣುಕಾ ಸಕ್ಕರೆ ಕಾರ್ಖಾನೆಯ ಉಪ ವ್ಯವಸ್ಥಾಪಕ ಅನೀಲಕುಮಾರ ಎಸ್. ವಾಲಿಕಾರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಅರುಣಕುಮಾರ ಸಂಗಾವಿ ಮತ್ತಿತರರು ಪಾಲ್ಗೊಂಡಿದ್ದರು.

ತೊಗರಿ ಖರೀದಿ: ಧರಣಿ-ಸತ್ಯಾಗ್ರಾಹಕ್ಕೆ ರೈತರು ಮುಂದಾಗದಂತೆ ಮನವಿ
***************************************************************
ಕಲಬುರಗಿ,ಫೆ.22.(ಕ.ವಾ.)-ತೊಗರಿ ಖರೀದಿಗೆ ಸಂಬಂಧಿಸಿದಂತೆ ಜಿಲ್ಲೆಯ ರೈತರು ತಮ್ಮ ಜೀವಕ್ಕೆ ಅಪಾಯ ತಂದುಕೊಳ್ಳುವಂತೆ ಅನಿರ್ದಿಷ್ಟ ಉಪಹಾಸ ಸತ್ಯಾಗ್ರಹವಾಗಲಿ ಅಥವಾ ಧರಣಿಯನ್ನು ಹಮ್ಮಿಕೊಳ್ಳಬಾರದು ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಮನವಿ ಮಾಡಿದರು.
ಅವರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಲಬುರಗಿ ಜಿಲ್ಲೆಯ ರೈತ ಪ್ರತಿನಿಧಿಗಳೊಂದಿಗೆ ಜರುಗಿದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ರಾಜ್ಯದಲ್ಲಿ ಮೂರನೇ ಹಂತದ ತೊಗರಿ ಖರೀದಿ ಪ್ರಕ್ರಿಯೆ ಪ್ರಾರಂಭಿಸಲು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದೊಂದಿಗೆ ಸತತ ಮಾತುಕತೆ ನಡೆಸಿದ್ದು, ಅದಷ್ಟು ಬೇಗ ಖರೀದಿ ಪ್ರಾರಂಭವಾಗಲಿದೆ ಎಂದು ಹೇಳಿದರು.
ಮೂರನೇ ಹಂತದ ತೊಗರಿ ಖರೀದಿಗೆ ರಾಜ್ಯಕ್ಕೆ ನಿಗದಿಪಡಿಸುವ ಪ್ರಮಾಣದ ಅರ್ಧದಷ್ಟು ಕಲಬುರಗಿ ಜಿಲ್ಲೆಗೆ ಒದಗಿಸುವಂತೆ ಈಗಾಗಲೇ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. 2017ರ ಆಗಸ್ಟ್ ಮಾಹೆಯಲ್ಲಿ ಜಿಲ್ಲೆಯಿಂದ 40 ಲಕ್ಷ ಕ್ವಿಂಟಲ್ ತೊಗರಿ ಖರೀದಿಸಬೇಕೆಂದು ಠರಾವು ಪಾಸು ಮಾಡಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ತೊಗರಿ ಖರೀದಿಗಾಗಿ ಅತೀ ಹೆಚ್ಚು ರೈತರು ನೋಂದಣಿಯಾಗಿದ್ದಾರೆ. ಹಾಗೂ ಜಿಲ್ಲೆಯಲ್ಲಿ ಅತೀ ಹೆಚ್ಚು ತೊಗರಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಆದರೂ ಸಹ ಇನ್ನೂ ಹೆಚ್ಚಿನ ರೈತರನ್ನು ತೊಗರಿ ಮಾರಾಟಕ್ಕೆ ನೋಂದಣಿ ಮಾಡಿಕೊಳ್ಳಲು ಕ್ರಮ ಜರುಗಿಸಲಾಗುವುದು. ಈಗಾಗಲೇ ಪ್ರಾರಂಭಿಸಿರುವ ತೊಗರಿ ಖರೀದಿ ಕೇಂದ್ರಗಳಲ್ಲಿ ಕಡಲೆ ಖರೀದಿಗಾಗಿ ಒಂದು ತೂಕದ ಯಂತ್ರ ನೀಡಲಾಗುವುದು ಎಂದರು.
ತೊಗರಿ ಮಾರಾಟಕ್ಕೆ ಈಗಾಗಲೇ ವೆಬ್‍ಸೈಟ್‍ನಲ್ಲಿ ರೈತರು ನೋಂದಣಿಯಾಗಿದ್ದಾರೆ. ನೋಂದಣಿಯ ಹಿರಿತನದ ಆಧಾರದ ಮೇಲೆ ತೊಗರಿ ಖರೀದಿ ಕೇಂದ್ರದಲ್ಲಿ ರೈತರಿಂದ ತೊಗರಿ ಖರೀದಿಯಾಗದಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಈ ರೀತಿ ಯಾರಾದರೂ ತಪ್ಪು ಮಾಡಿದ್ದಲ್ಲಿ ಅವರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು. ಅಲ್ಲದೇ ತೊಗರಿ ಖರೀದಿ ಕೇಂದ್ರಕ್ಕೆ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಿ ತೊಂದರೆಗಳನ್ನು ನಿವಾರಿಸಲಾಗುತ್ತಿದೆ ಎಂದರು.
ರೈತ ಮುಖಂಡ ಮಾರುತಿ ಮಾನ್ಪಡೆ ಮಾತನಾಡಿ, ಮಾರುಕಟ್ಟೆಯಲ್ಲಿ ಸರ್ಕಾರ ನಿಗದಿಪಡಿಸಿರುವ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ತೊಗರಿ ಮಾರಾಟ ವಾಗುತ್ತಿದೆ. ಇದು ಅಪರಾಧವಾಗುತ್ತದೆ. ಇದನ್ನು ತಡೆಯಬೇಕು. ಜಿಲ್ಲೆಯಲ್ಲಿ ರೈತರು ತೊಗರಿ ಮಾರಾಟ ಮಾಡಲು ನೋಂದಣಿಯಾಗುವಂತೆ ಕ್ರಮ ಜರುಗಿಸಬೇಕು. ಅದಕ್ಕಾಗಿ ನೋಂದಣಿ ಪ್ರಕ್ರಿಯೆ ಪುನ: ಪ್ರಾರಂಭಿಸಬೇಕು. ಪಡಿತರದಲ್ಲಿ ತೊಗರಿ ಬೇಳೆಯನ್ನು ಒಂದು ಕೆ.ಜಿ. ಬದಲಾಗಿ 2 ಕೆ.ಜಿ. ನೀಡಲು ಕ್ರಮ ಜರುಗಿಸಬೇಕು ಎಂದು ವಿವರಿಸಿದರು.
ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಜಿಲಾನಿ ಹೆಚ್. ಮೊಕಾಶಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಜಯಶ್ರೀ, ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕ ಜಿ. ಮಾದ್ವಚಾರ ಮತ್ತಿತರ ರೈತ ಮುಖಂಡರು ಪಾಲ್ಗೊಂಡಿದ್ದರು.

ಫೆಬ್ರವರಿ 24ರಂದು ಆಳಂದÀದಲ್ಲಿ ಎ.ಸಿ.ಬಿ.ಅಧಿಕಾರಿಗಳಿಂದ ಅಹವಾಲು ಸ್ವೀಕಾರ
**********************************************************************
ಕಲಬುರಗಿ,ಫೆ.22.(ಕ.ವಾ.)-ಕಲಬುರಗಿ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಬಸವರಾಜ ಯಲಿಗಾರ ಅವರು ಫೆಬ್ರವರಿ 24ರಂದು ಆಳಂದÀಕ್ಕೆ ಭೇಟಿ ನೀಡಿ, ಆಳಂದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಂದು ಬೆಳಗಿನ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಸಾರ್ವಜನಿಕರಿಂದ ಅಹವಾಲುಗಳನ್ನು ಆಲಿಸಲಿದ್ದಾರೆ. ಅವರ ಮೊಬೈಲ್ ಸಂಖ್ಯೆ 9480803609 ಇರುತ್ತದೆ ಎಂದು ಕಲಬುರಗಿ ಭ್ರಷ್ಟಚಾರ ನಿಗ್ರಹ ದಳದ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೆಬ್ರವರಿ 24ರಂದು ಶಾಂತಿ ಸಮಿತಿ ಸಭೆ
*************************************
ಕಲಬುರಗಿ,ಫೆ.22.(ಕ.ವಾ.)-ಪ್ರಸಕ್ತ ಸಾಲಿನ ಹೋಳಿ ಹಬ್ಬ ಆಚರಣೆಗೆ ಸಂಬಂಧಿಸಿದಂತೆ ಕಲಬುರಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಫೆಬ್ರವರಿ 24ರಂದು ಸಂಜೆ 5 ಗಂಟೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಶಾಂತಿ ಸಭೆ ನಡೆಯಲಿದೆ.
ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಶಾಂತಿ ಸಮಿತಿ ಸದಸ್ಯರುಗಳು ಈ ಸಭೆಗೆ ತಪ್ಪದೇ ಖುದ್ದಾಗಿ ಹಾಜರಾಗಿ ಸೂಕ್ತ ಸಲಹೆಗಳನ್ನು ನೀಡಲು ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ಕೋರಿದ್ದಾರೆ.

ಬಾಲಕನ ಪೋಷಕರ ಪತ್ತೆಗೆ ಮನವಿ
********************************
ಕಲಬುರಗಿ,ಫೆ.22.(ಕ.ವಾ.)-ಕಲಬುರಗಿ ಬಾಲಕರ ಸರ್ಕಾರಿ ಬಾಲ ಮಂದಿರದಲ್ಲಿರುವ 17 ವರ್ಷದ ಮೂಕ ಬಾಲಕ ಬಾಬುಕುಮಾರ ಸತೀಶಕುಮಾರ 2018ರ ಫೆಬ್ರವರಿ 16ರಂದು ಚೈಲ್ಡ್ ಲೈನ್ ಸಂಸ್ಥೆಯಿಂದ ಕಲಬುರಗಿ ಸರ್ಕಾರಿ ಬಾಲಕರ ಬಾಲಮಂದಿರದಲ್ಲಿ ದಾಖಲಾಗಿದ್ದು, ಈ ಬಾಲಕನು ಯಾವುದೇ ಮಾಹಿತಿ/ವಿಳಾಸ ತಿಳಿಸಿರುವುದಿಲ್ಲ.
ಈ ಬಾಲಕನು ಬಿಳಿ ಬಣ್ಣ ಹೊಂದಿರುತ್ತಾನೆ. ಮೇಲ್ಕಂಡ ಬಾಲಕನ ಪಾಲಕರು ಮತ್ತು ಪೋಷಕರು ಪ್ರಕಟಣೆಯಾದ 60 ದಿನದೊಳಗೆ ಅಗತ್ಯ ದಾಖಲೆಗಳೊಂದಿಗೆ ಕಲಬುರಗಿಯ ಪ್ರಗತಿ ಕಾಲೋನಿಯ ಬಾಲಕರ ಸರ್ಕಾರಿ ಬಾಲ ಮಂದಿರದ ಅಧೀಕ್ಷಕರನ್ನು ಹಾಗೂ ದೂರವಾಣಿ ಸಂಖ್ಯೆ 08472-269438 ನ್ನು ಸಂಪರ್ಕಿಸಲು ಕೋರಿದೆ.

ಫೆಬ್ರವರಿ 23ರಂದು ಕುರಿ/ ಮೇಕೆ ಸಾಗಾಣಿಕೆ ತರಬೇತಿ ಕಾರ್ಯಾಗಾರ ಉದ್ಘಾಟನೆ
***********************************************************************
ಕಲಬುರಗಿ,ಫೆ.22.(ಕ.ವಾ.)-ಜಿಲ್ಲೆಯ 28 ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಸದಸ್ಯರುಗಳಿಗೆ ಹಾಗೂ ಕುರಿ ಮತ್ತು ಮೇಕೆ ಸಾಕಾಣಿಕೆದಾರರಿಗೆ ಫೆಬ್ರವರಿ 23ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಒಂದು ದಿನದ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.
ಕರ್ನಾಟಕ ಸಹಕಾರ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಂಘಗಳ ಮಹಾಮಂಡಳದ ರಾಜ್ಯಾಧ್ಯಕ್ಷ ಪಂಡಿತರಾವ ಚಿದ್ರಿ ಅವರು ಕಾರ್ಯಾಗಾರವನ್ನು ಉದ್ಘಾಟಿಸುವರು. ಪಶು ಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ|| ಜಿ.ಹೆಚ್. ನಾಗರಾಜ ಹಾಗೂ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಉಪನಿರ್ದೇಶಕ ಡಾ|| ಜಿ.ಎಸ್. ನಾಗರಾಜ ಉಪಸ್ಥಿತರಿರುವರು.

ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಚಿತ್ರ ಬಿಡಿಸುವ ಸ್ಪರ್ಧೆ
**********************************************************
ಕಲಬುರಗಿ,ಫೆ.22.(ಕ.ವಾ.)-ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿಯು (ಏSಅSಖಿ) ಯಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ-2018ರ ಅಂಗವಾಗಿ ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಫೆಬ್ರವರಿ 24ರಂದು ಬೆಳಿಗ್ಗೆ 8 ಗಂಟೆಗೆ ಕಲಬುರಗಿ ಕುಸನೂರ ರಸ್ತೆಯಲ್ಲಿರುವ ವಿ.ಟಿ.ಯು ಪ್ರಾದೇಶಿಕ ಕಚೇರಿ ಆವರಣದಲ್ಲಿ ಏರ್ಪಡಿಸಲಾಗಿದೆ.
ಸ್ಮಾರ್ಟ್ ಸಿಟಿಯ ಪರಿಕಲ್ಪನೆ, ಸಂಪನ್ಮೂಲಗಳ ಮರುಬಳಕೆ ಮತ್ತು ಪುನರ್ ಬಳಕೆ, ಪರಿಸರ ಸಂರಕ್ಷಣೆಗಾಗಿ ಸುಸ್ಥಿರ ತಂತ್ರಜ್ಞಾನಗಳು, ಸುಸ್ಥಿರ ಸಾರಿಗೆ ವ್ಯವಸ್ಥೆ, ನಗರೀಕರಣ ಮತ್ತು ಹವಾಮಾನ ಬದಲಾವಣೆ ಹಾಗೂ ಆಹಾರ ಭದ್ರತೆ ಮತ್ತು ಸುಸ್ಥಿರ ಕೃಷಿ ಚಿತ್ರ ಬಿಡಿಸುವ ಸ್ಪರ್ಧೆಯ ವಿಷಯಗಳಾಗಿವೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಚಿತ್ರ ಬಿಡಿಸಲು ಡ್ರಾಯಿಂಗ್ ಹಾಳೆಯನ್ನು ಕೆ.ಎಸ್.ಸಿ.ಎಸ್.ಟಿ. ಸಂಸ್ಥೆಯಿಂದ ಒದಗಿಸಲಾಗುವುದು. ವಿದ್ಯಾರ್ಥಿಗಳು ಬಣ್ಣ, ಬ್ರಷ್, ರಟ್ಟು ಮತ್ತು ಇತರ ಪರಿಕರಗಳನ್ನು ತರಬೇಕು. ``ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ” ಕೇಂದ್ರ ವಿಷಯವಾಗಿದೆ.
ಈ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಫೆಬ್ರವರಿ 28ರಂದು ಕಲಬುರಗಿ ನಗರದ ಗುಬ್ಬಿ ಕಾಲನಿಯಲ್ಲಿರುವ ಎಸ್. ಎಸ್. ತೆಗನೂರು ಡಿಗ್ರಿ ಕಾಲೇಜಿನ ಆಡಿಟೋರಿಯಂದಲ್ಲಿ ನಡೆಯುವ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಸಮಾರಂಭದಲ್ಲಿ ಬಹುಮಾನವನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಅನಿಲಕುಮಾರ ಭಸ್ಮೆ ಮೊಬೈಲ್ ಸಂಖ್ಯೆ 9620196124ಯನ್ನು ಸಂಪರ್ಕಿಸಲು ಕೋರಲಾಗಿದೆ.

ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಪ್ರಬಂಧ ಸ್ಪರ್ಧೆ
***************************************************
ಕಲಬುರಗಿ,ಫೆ.22.(ಕ.ವಾ.)-ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿಯು (ಏSಅSಖಿ) ರಾಷ್ಟ್ರೀಯ ವಿಜ್ಞಾನ ದಿನಾಚರಣೆ-2018ರ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಆಯಾ ಪ್ರೌಢಶಾಲೆಗಳಲ್ಲಿ ಏರ್ಪಡಿಸಲಾಗಿದೆ. ಈ ಸ್ಪರ್ಧೆಗಳನ್ನು ಆಯಾ ಶಾಲೆಯ ಮುಖ್ಯೋಪಾಧ್ಯಾಯರುಗಳು ತಮ್ಮ ಶಾಲೆಯಲ್ಲಿಯೇ ಏರ್ಪಡಿಸಬೇಕು.
ಸ್ಮಾರ್ಟ್ ಸಿಟಿಯ ಪರಿಕಲ್ಪನೆ, ಸಂಪನ್ಮೂಲಗಳ ಮರುಬಳಕೆ ಮತ್ತು ಪುನರ್ ಬಳಕೆ, ಪರಿಸರ ಸಂರಕ್ಷಣೆಗಾಗಿ ಸುಸ್ಥಿರ ತಂತ್ರಜ್ಞಾನಗಳು, ಸುಸ್ಥಿರ ಸಾರಿಗೆ ವ್ಯವಸ್ಥೆ, ನಗರೀಕರಣ ಮತ್ತು ಹವಾಮಾನ ಬದಲಾವಣೆ ಹಾಗೂ ಆಹಾರ ಭದ್ರತೆ ಮತ್ತು ಸುಸ್ಥಿರ ಕೃಷಿ ಪ್ರಬಂಧ ಸ್ಪರ್ಧೆಯ ವಿಷಯಗಳಾಗಿವೆ.
ಪ್ರತಿ ಶಾಲೆಯಿಂದ ಅತ್ಯುತ್ತಮ ಒಂದು ಪ್ರಬಂಧವನ್ನು ಆಯ್ಕೆ ಮಾಡಿ ದಿನಾಂಕ 26ನೇ ಫೆಬ್ರವರಿ 2018 ರೊಳಗಾಗಿ ಕಲಬುರಗಿಯ ಕೆ.ಎಸ್.ಸಿ.ಎಸ್.ಟಿ. ಸಂಸ್ಥೆಗೆ ಅಥವಾ ಸಂಸ್ಥೆಯ ಡಿಛಿg@ಞsಛಿsಣ.iisಛಿ.eಡಿಟಿeಣ.iಟಿ ಇ-ಮೇಲ್ ವಿಳಾಸಕ್ಕೆ ಕಳುಹಿಸಬೇಕು. ವಿಜೇತ ವಿದ್ಯಾರ್ಥಿಗಳ ಹಾಗೂ ಶಾಲೆಯ ಹೆಸರನ್ನು ನಮೂದಿಸಿರಬೇಕು. ಈ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಫೆಬ್ರವರಿ 28ರಂದು ಕಲಬುರಗಿ ನಗರದ ಗುಬ್ಬಿ ಕಾಲನಿಯಲ್ಲಿರುವ ಎಸ್. ಎಸ್. ತೆಗನೂರು ಡಿಗ್ರಿ ಕಾಲೇಜಿನ ಆಡಿಟೋರಿಯಂನಲ್ಲಿ ನಡೆಯುವ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಸಮಾರಂಭದಲ್ಲಿ ಬಹುಮಾನವನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಅನಿಲಕುಮಾರ ಭಸ್ಮೆ ಮೊಬೈಲ್ ಸಂಖ್ಯೆ 9620196124ನ್ನು ಸಂಪರ್ಕಿಸಲು ಕೋರಲಾಗಿದೆ.

ಜೆಸ್ಕಾಂ ವಿದ್ಯುತ್ ದರ ಪರಿಷ್ಕರಣೆ:
******************************
ಫೆಬ್ರವರಿ 23ರಂದು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಣಾ ಸಭೆ
*********************************************************
ಕಲಬುರಗಿ,ಫೆ.22.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿಯು ಆರ್ಥಿಕ ವರ್ಷ 2018-19ನೇ ಸಾಲಿಗೆ ವಿದ್ಯುತ್ ದರ ಪರಿಷ್ಕರಿಸಬೇಕೆಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ 2018-19ನೇ ಸಾಲಿನ ವಿದ್ಯುತ್ ದರ ಪರಿಷ್ಕರಣೆ ಕುರಿತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಣಾ ಸಭೆಯು ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಫೆಬ್ರವರಿ 23 ರಂದು ಬೆಳಿಗ್ಗೆ 11 ಗಂಟೆಗೆ ಜರುಗಲಿದೆ.
ವಿದ್ಯುತ್ ದರ ಪರಿಷ್ಕರಣೆಗೆ ಸಂಬಂಧಿಸಿದಂತೆ ನಡೆಯುವ ಈ ಸಭೆಗೆ ಆಸಕ್ತ ವ್ಯಕ್ತಿಗಳು, ಸಂಘ ಸಂಸ್ಥೆಗಳು ಮತ್ತು ಇತರೆ ಸಾರ್ವಜನಿಕರು ಆಗಮಿಸಿ ತಮ್ಮ ಅಭಿಪ್ರಾಯಗಳನ್ನು ಮೌಖಿಕವಾಗಿ ಅಥವಾ ಲಿಖಿತ ರೂಪದಲ್ಲಿ ಆಯೋಗದ ಮುಂದೆ ಮಂಡಿಸಬಹುದಾಗಿದೆ ಎಂದು ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿಯ (ನಿಗಮ ಯೋಜನೆ) ನಿಗಮ ಕಚೇರಿಯ ಮುಖ್ಯ ಇಂಜಿನಿಯರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತೊಗರಿ ಖರೀದಿ ಕೇಂದ್ರಗಳಲ್ಲಿ ರೈತರಿಂದ ಹಣ ಪಡೆಯುತ್ತಿರುವ ಆರೋಪ:
****************************************************************
ಕೇಂದ್ರಗಳಿಗೆ ಭೇಟಿ ನೀಡುವಂತೆ ಸೂಚನೆ
***********************************
ಕಲಬುರಗಿ,ಫೆ.22.(ಕ.ವಾ.)-ಕೇಂದ್ರ ಸರ್ಕಾರದ ಬೆಂಬಲ ಬೆಲೆಯೊಂದಿಗೆ ಜಿಲ್ಲೆಯಲ್ಲಿ ತೊಗರಿ ಖರೀದಿಸಲಾಗುತ್ತಿರುವ ಕೇಂದ್ರಗಳಲ್ಲಿ ರೈತರಿಂದ ಅಕ್ರಮವಾಗಿ ಹಣ ಪಡೆಯುತ್ತಿರುವ ಬಗ್ಗೆ ಆರೋಪಗಳು ಕೇಳಿ ಬರುತಿದ್ದು, ತುರ್ತಾಗಿ ಖರೀದಿ ಕೇಂದ್ರಗಳಿಗೆ ಭೇಟಿ ನೀಡುವಂತೆ ಜಂಟಿ ಕೃಷಿ ನಿದೇಶಕರಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಸೂಚಿಸಿದರು.
ಅವರು ಗುರುವಾರ ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಮಾಸಿಕ ಕೆ.ಡಿ.ಪಿ. ಸಭೆ ಅಧ್ಯಕ್ಷತೆವಹಿಸಿ ಮಾತನಾಡಿ, ಆಳಂದ ತಾಲೂಕಿನ ಸನಗುಂದ, ಬೆಳಮಗಿ ತೊಗರಿ ಖರೀದಿ ಕೇಂದ್ರಗಳಲ್ಲಿ ಕೇಂದ್ರದ ಸಿಬ್ಬಂದಿಗಳು ಹಣ ಪಡೆಯುತ್ತಿದ್ದಾರೆ ಎಂದು ಅಲ್ಲಿನ ರೈತರು ದೂರುತ್ತಿದ್ದು, ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸಂಬಂಧಿಸಿದವರ ಮೇಲೆ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ನಡೆಸಲಾಗುತ್ತಿರುವ ವಸತಿ ನಿಲಯಗಳಲ್ಲಿರುವ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಲು ಅಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಬೇಕು ಎಂದರು. ಆಳಂದ ಆಸ್ಪತ್ರೆಯ ಮುಖ್ಯಸ್ಥರು ಸಿಬ್ಬಂದಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪವಿದ್ದು, ಅವರ ವಿರುದ್ಧ ತುರ್ತು ಕ್ರಮಕೈಗೊಳ್ಳಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯೆಸಿದ ಡಿ.ಎಚ್.ಓ. ಮಾಧವರಾವ ಕೆ. ಪಾಟೀಲ ಪ್ರಕರಣ ಫೆಬ್ರವರಿ 19 ರಂದು ಗಮನಕ್ಕೆ ಬಂದಿದ್ದು, ಫೆಬ್ರವರಿ 21ರಂದೇ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯಕ್ಕೆ ವರದಿ ಸಲ್ಲಿಸಲಾಗಿದೆ ಎಂದರು.
ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಸಂಜೀವನ ಯಾಕಾಪುರ ಮಾತನಾಡಿ, ವಿವಿಧ ಇಲಾಖೆಯ ವಸತಿ ನಿಲಯಗಳಿಗೆ ಮತ್ತು ಬಿಸಿಯೂಟಕ್ಕೆ ಸರಿಯಾಗಿ ಗುಣಮಟ್ಟದ ಆಹಾರಧಾನ್ಯ ಪೂರೈಕೆಯಾಗುತ್ತಿಲ್ಲ. ಶಾಲೆಯ ಮುಖ್ಯಗುರುಗಳು ಪಾಠ-ಪ್ರವಚನಕ್ಕೆ ಬದಲಾಗಿ ಅಕ್ಷರ ದಾಸೋಹ ಕಾರ್ಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯೆಸಿದ ಜಿ.ಪಂ. ಸಿ.ಇ.ಓ. ಅವರು ಅಂತಹ ಶಾಲೆಗಳ ವಿವರ ನೀಡಿದಲ್ಲಿ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು. ಪ್ರೌಢ ಶಾಲೆಯ ಮುಖ್ಯಗುರುಗಳು ನಿಯಮಾವಳಿಯನ್ವಯ ಶೈಕ್ಷಣಿಕ ಶೆಡ್ಯೂಲ್ ಪ್ರಕಾರ ತರಗತಿ ಬೋಧನೆ ಮಾಡಿರುವ ಬಗ್ಗೆ ವಿವರ ಸಲ್ಲಿಸಿ ಎಂದು ಡಿ.ಡಿ.ಪಿ.ಐ.ಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೋರ್ಲಪಾಟಿ ಮಾತನಾಡಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಿಂದ ಕೈಗೆತ್ತಿಕೊಂಡಿರುವ ಕಾಮಗಾರಿಯಲ್ಲಿ ಆರ್ಥಿಕ ಮತ್ತು ಭೌತಿಕ ಪ್ರಗತಿ ಕಡಿಮೆಯಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಕೂಡಲೇ ಇಲಾಖೆಯಿಂದ ಕೈಗೆತ್ತಿಕೊಂಡಿರುವ ಎಲ್ಲ ಕಾಮಗಾರಿಗಳು ಮತ್ತು ಒಪ್ಪಂದ ಮಾಡಿಕೊಂಡಿರುವ ಕಾಮಗಾರಿಗಳ ವಿವರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಣ್ಣ ನೀರಾವರಿ ಇಲಾಖೆ ಎಸ್.ಸಿ.ಪಿ./ಟಿ.ಎಸ್.ಪಿ ಯೋಜನೆಯಡಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ನಿರೀಕ್ಷಿತ ಮಟ್ಟದಲ್ಲಿ ಜೆಸ್ಕಾಂ ಅಧಿಕಾರಿಗಳಿಂದ ಸೂಕ್ತ ಸಹಕಾರ ಸಿಗುತ್ತಿಲ್ಲ ಎಂದ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಈ ಬಗ್ಗೆ ಎಲ್ಲಾ ಕಾಮಗಾರಿಗಳ ಸವಿವರ ನೀಡಲು ಸೂಚಿಸಿದರು. ಮುಂದಿನ ತಿಂಗಳು ಪರೀಕ್ಷೆ ಸಮಯ ಇರುವುದರಿಂದ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಫಲಿತಾಂಶ ಹೆಚ್ಚಳಕ್ಕೆ ಅಧಿಕಾರಿಗಳು ವಿಶೇಷ ಗಮನಹರಿಸಬೇಕೆಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಾಂತಗೌಡ ಪಾಟೀಲ್ ಅವರು ಮಾರ್ಚ್-2018ರಲ್ಲಿ ಜರುಗುವ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆಗೈಯ್ಯಲು ಹೆಚ್.ಕೆ.ಆರ್.ಡಿ.ಬಿ. ಸಹಾಯಧನದೊಂದಿಗೆ ಪಾಸಿಂಗ್ ಪ್ಯಾಕೇಜ್ ಅಡಿಯಲ್ಲಿ ಈಗಾಗಲೇ 6000 ವಿದ್ಯಾರ್ಥಿಗಳಿಗೆ ಶಾಲಾ ಹಂತದಲ್ಲಿ 2 ತಿಂಗಳ ವಿಶೇಷ ತರಗತಿ ಹಮ್ಮಿಕೊಳ್ಳಲಾಗಿದೆ. ಇದಲ್ಲದೆ ಪ್ರತಿದಿನ ಮಧ್ಯಾಹ್ನ 3.15 ರಿಂದ 4.30 ಗಂಟೆಯವರೆಗೆ ರೇಡಿಯೋ ಕಾರ್ಯಕ್ರಮ ನಡೆಸಿ ವಿದ್ಯಾರ್ಥಿಗಳಲ್ಲಿರುವ ಹಲವು ಶೈಕ್ಷಣಿಕ ಗೊಂದಲಗಳÀನ್ನು ನುರಿತ ತಜ್ಞರಿಂದ ಪರಿಹರಿಸುವ ಕಾರ್ಯ ಕೈಗೊಳ್ಳಲಾಗಿದೆ. ಏತನ್ಮಧ್ಯೆ ಜನವರಿಯಲ್ಲಿ ಪೂರ್ವಭಾವಿ ಪರೀಕ್ಷೆ ಸಹ ನಡೆಸಲಾಗಿದ್ದು, ಶೀಘ್ರವೇ ಅದರ ಫಲಿತಾಂಶ ಹೊರಬರಲಿದೆ. ತದನಂತರ ಈ ಫಲಿತಾಂಶದಲ್ಲ್ಲಿ ಸಿ ಮತ್ತು ಸಿ+ ಶ್ರೇಣಿ ಪಡೆಯುವ ಎಸ್.ಸಿ./ಎಸ್.ಟಿ. ವರ್ಗದ ವಿದ್ಯಾರ್ಥಿಗಳಿಗೆ 10 ದಿನಗಳ ಕಾಲ ವಿಶೇಷ ತರಗತಿ ಹಮ್ಮಿಕೊಳ್ಳುವ ಯೋಚನೆಯೂ ಇಲಾಖೆಯ ಮುಂದಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಕೃಷಿ, ಸಮಾಜ ಕಲ್ಯಾಣ, ಶಿಕ್ಷಣ, ಪಶು ಸಂಗೋಪನೆ, ವಯಸ್ಕರ ಶಿಕ್ಷಣ, ಲೋಕೋಪಯೋಗಿ, ನೀರಾವರಿ ಯೋಜನೆಗಳು, ಗ್ರಾಮೀಣ ಕುಡಿಯುವ ನೀರು ಸರಬರಾಜು, ಅಕ್ಷರ ದಾಸೋಹ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೋಭಾ ಸಿದ್ದು ಶಿರಸಗಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ದೇವಕಿ ಚನ್ನಮಲ್ಲ ಹಿರೇಮಠ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದಕುಮಾರ ಚವ್ಹಾಣ, ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿ ಪ್ರವೀಣ ಪ್ರಿಯಾ ಡೇವಿಡ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಫೆಬ್ರವರಿ 24ರಂದು ಇ.ಎಸ್.ಐ.ಸಿ. ಸಂಸ್ಥಾಪನಾ ದಿನಾಚರಣೆ
****************************************************
ಕಲಬುರಗಿ,ಫೆ.22(ಕ.ವಾ.)-ಕಲಬುರಗಿಯ ಇ.ಎಸ್.ಐ.ಸಿ. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ 66ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಎಕ್ಸ್‍ಟೆಸಿ ಉತ್ಸವ-2018ನ್ನು ಫೆಬ್ರವರಿ 24ರಂದು ಶನಿವಾರ ಸಾಯಂಕಾಲ 4 ಗಂಟೆಗೆ ನಗರದ ಸೇಡಂ ರಸ್ತೆಯಲ್ಲಿರುವ ಇಎಸ್‍ಐಸಿ ಮೆಡಿಕಲ್ ಕಾಲೇಜಿನ ಕ್ಯಾಂಪಸ್ ಆವರಣದ ಮುಖ್ಯ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್. ಆರ್. ನಿರಂಜನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಇಎಸ್‍ಐಸಿ ಡೆಂಟಲ್ ಕಾಲೇಜಿನ ಡೀನ್ ಡಾ. ನಾಗರಾಜ್, ಇ.ಎಸ್.ಐ.ಸಿ. ಎಂ.ಸಿ. ರಜಿಸ್ಟ್ರಾರ್ ಅಕಾಡೆಮಿಕ್ ಡಾ. ಹೆಚ್.ಎಸ್.ಕಡ್ಲಿಮಟ್ಟಿ, ಇಎಸ್‍ಐಸಿ ಆಸ್ಪತ್ರೆಯ ಮೆಡಿಕಲ್ ಸುಪರಿಂಟೆಂಡೆಂಟ್ ಡಾ. ರಾಜೇಶ್ ಸಂಗ್ರಾಮ್, ವೈಸ್ ಪ್ರಿನ್ಸಿಪಾಲ್ ಡಾ.ಕ್ರಿಸ್ಟಿ ಮೇಕಲ್.ವಿ., ಎಸ್‍ಆರ್‍ಒ ಜಂಟಿ ನಿರ್ದೇಶಕ ಕಾಶಿನಾಥನ್ ವಿ., ಇಎಸ್‍ಐಸಿ ಎಂಸಿ ಆಂಡ್ ಹೆಚ್ (ಆಡಳಿತ) ಉಪನಿರ್ದೇಶಕ ವಿಜಯಕುಮಾರ, ಹಣಕಾಸು ಉಪನಿರ್ದೇಶಕ ವಾಯ್.ವಿ.ಪ್ರತಾಪ ಹಾಗೂ ಇ.ಎಸ್.ಐ.ಸಿ. ಮೆಡಿಕಲ್ ಕಾಲೇಜಿನ ಡೀನ್ ಡಾ.ಪ್ರಶಾಂತ ಪೌನಿಪಗರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಹೀಗಾಗಿ ಲೇಖನಗಳು news and photo date: 22---2---2018
ಎಲ್ಲಾ ಲೇಖನಗಳು ಆಗಿದೆ news and photo date: 22---2---2018 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ news and photo date: 22---2---2018 ಲಿಂಕ್ ವಿಳಾಸ https://dekalungi.blogspot.com/2018/02/news-and-photo-date-22-2-2018.html
0 Response to "news and photo date: 22---2---2018"
ಕಾಮೆಂಟ್ ಪೋಸ್ಟ್ ಮಾಡಿ