ಶೀರ್ಷಿಕೆ : ಮಾ. 01 ರಂದು ಕುರುಗೋಡು ದೊಡ್ಡ ಬಸವೇಶ್ವರ ಮಹಾ ರಥೋತ್ಸವ
ಲಿಂಕ್ : ಮಾ. 01 ರಂದು ಕುರುಗೋಡು ದೊಡ್ಡ ಬಸವೇಶ್ವರ ಮಹಾ ರಥೋತ್ಸವ
ಮಾ. 01 ರಂದು ಕುರುಗೋಡು ದೊಡ್ಡ ಬಸವೇಶ್ವರ ಮಹಾ ರಥೋತ್ಸವ
ಕೊಪ್ಪಳ ಫೆ. 22 (ಕರ್ನಾಟಕ ವಾರ್ತೆ): ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಬಳ್ಳಾರಿ ಜಿಲ್ಲೆ ಕುರುಗೋಡು ಕ್ಷೇತ್ರದ ದೊಡ್ಡ ಬಸವೇಶ್ವರ ಸ್ವಾಮಿ ದೇವಸ್ಥಾನದ ಮಹಾ ರಥೋತ್ಸವ ಮಾರ್ಚ್. 01 ರಂದು ಸಂಜೆ 5-30 ಕ್ಕೆ ಜರುಗಲಿದೆ.
ದೊಡ್ಡ ಬಸವೇಶ್ವರ ಮಹಾ ರಥೋತ್ಸವದ ನಿಮಿತ್ಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು, ಫೆ. 22 ರಂದು ರಾತ್ರಿ 8-30 ಕ್ಕೆ ನಾಗಾಭರಣ ವಾಹನೋತ್ಸವ, 23 ರಂದು ರಾತ್ರಿ 8-30 ಕ್ಕೆ ನವಿಲು ವಾಹನೋತ್ಸವ, 24 ರಂದು ರಾತ್ರಿ 8-30 ಕ್ಕೆ ಸಿಂಹ ವಾಹನೋತ್ಸವ, 25 ರಂದು ರಾತ್ರಿ 8-30 ಕ್ಕೆ ಅಶ್ವ ವಾಹನೋತ್ಸವ, 26 ರಂದು ರಾತ್ರಿ 8-30 ಕ್ಕೆ ಬಿಳಿ ಬಸವಣ್ಣ ವಾಹನೋತ್ಸವ, 27 ರಂದು ರಾತ್ರಿ 8-30 ಕ್ಕೆ ನೀಲಮ್ಮ ತಾಯಿಗೆ ಉಡಿ ತುಂಬುವುದು ಹಾಗೂ ರಾತ್ರಿ 3 ಗಂಟೆಗೆ ನೀಲಮ್ಮ ಉತ್ಸವ, 28 ರಂದು ರಾತ್ರಿ 8-30 ಕ್ಕೆ ಗಜವಾಹನೋತ್ಸವ. ಮಾರ್ಚ್. 01 ರಂದು ಸಂಜೆ 5-30 ಕ್ಕೆ ಮಹಾ ರಥೋತ್ಸವ, ಹಾಗೂ ಮಾ. 02 ರಂದು ರಾತ್ರಿ 10-30 ಕ್ಕೆ ಲಂಕೆ ಸುಡುವ ಕಾರ್ಯಕ್ರಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗುವುದು. ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಾಧಿಗಳು ಪಾಲ್ಗೊಳ್ಳುವಂತೆ ಕೋರಲಾಗಿದೆ.
ಕುರುಗೋಡು ದೊಡ್ಡ ಬಸವೇಶ್ವರ ಸ್ವಾಮಿ ಮೂಲ ವಿಗ್ರಹಕ್ಕೆ ಈಶ್ವರ ಲಿಂಗ ಮತ್ತು ಬಾಗಿಲುಗೆ 150 ಕೆ.ಜಿ ತೂಕದ ಬೆಳ್ಳಿಯನ್ನು ಉಪಯೋಗಿಸಿ ಕವಚ ಮಾಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ದೇವರ ಬೆಳ್ಳಿ ಕವಚಕ್ಕೆ ಭಕ್ತಾಧಿಗಳು ಬೆಳ್ಳಿಯನ್ನು ನೀಡಬಹುದಾಗಿದೆ. ದೊಡ್ಡ ಬಸವೇಶ್ವರ ಸ್ವಾಮಿಯ ಮೂಲ ವಿಗ್ರಹಕ್ಕೆ ಬೆಳ್ಳಿಯನ್ನು ನೀಡಿ ದೇವರ ಕಾರ್ಯದಲ್ಲಿ ಭಾಗವಹಿಸಲು ಕೋರಿದೆ. ಬೆಳ್ಳಿ/ ಕಾಣಿಕೆಯನ್ನು ದೇವಸ್ಥಾನದ ಕಛೇರಿಯಲ್ಲಿ ನೀಡಿ ಅಧಿಕೃತವಾದ ರಸೀದಿಯನ್ನು ಪಡೆಯಬಹುದು. ದೇವಸ್ಥಾನಲ್ಲಿ ಖಾಯಂ ಸೇವಾ ಠೇವಣಿ ಯೋಜನೆ ಜಾರಿಯಲ್ಲಿರುತ್ತದೆ. ಭಕ್ತಾಧಿಗಳ ಈ ಯೋಜನೆಯಲ್ಲಿ ರೂ.3000-00 ಗಳನ್ನು ತೊಡಗಿಸಿದಲ್ಲಿ ಅದರಿಂದ ಬರುವ ಬಡ್ಡಿಯಿಂದ ಭಕ್ತರು ಇಚ್ಚಿಸುವ ಒಂದು ದಿನ ರುಧ್ರಾಭಿಷೇಕ ಮಾಡಲಾಗುವುದು. ಹಾಗೂ ಪ್ರಸಾದವನ್ನು ಅಂಚೆ ಮೂಲಕ ಕಳುಹಿಸಲಾಗುವುದು.
ದೇವಸ್ಥಾನಕ್ಕೆ ನೀಡಬಯಸುವ ಚಿನ್ನ, ಬೆಳ್ಳಿ ಆಭರಣ ಧವಸ ಧಾನ್ಯಗಳನ್ನು ಹಾಗೂ ಇತ್ಯಾದಿಗಳನ್ನು ಆಡಳಿತಾಧಿಕಾರಿಗಳ ಕಛೇರಿಗೆ ನೀಡಿ ಅಧಿಕೃತ ರಸೀದಿ ಪಡೆಯಲು ಕೋರಿದೆ. ರಸೀದಿ ಪಡೆಯದೆ ಕೊಡುವ ಕಾಣಿಕೆಯು ದೇವಸ್ಥಾನಕ್ಕೆ ಸೇರುವುದಿಲ್ಲ. ಅನ್ನ ದಾಸೋಹಕ್ಕೆ ಧವಸ ಧಾನ್ಯಗಳನ್ನು ದೇವಸ್ಥಾನದ ಕಛೇರಿಯಲ್ಲಿ ನೀಡಿ ರಸೀದಿ ಪಡೆಯಬಹುದಾಗಿದೆ. ಅನ್ನ ಪ್ರಸಾದ ವಿತರಣೆ ಕಾರ್ಯಕ್ರಮವು ಫೆ. 28, ಮಾರ್ಚ್. 01 ಮತ್ತು 02 ರಂದು ಮೂರು ದಿನಗಳ ಕಾಲ ಜರುಗಲಿದೆ ಎಂದು ಬಳ್ಳಾರಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಹೀಗಾಗಿ ಲೇಖನಗಳು ಮಾ. 01 ರಂದು ಕುರುಗೋಡು ದೊಡ್ಡ ಬಸವೇಶ್ವರ ಮಹಾ ರಥೋತ್ಸವ
ಎಲ್ಲಾ ಲೇಖನಗಳು ಆಗಿದೆ ಮಾ. 01 ರಂದು ಕುರುಗೋಡು ದೊಡ್ಡ ಬಸವೇಶ್ವರ ಮಹಾ ರಥೋತ್ಸವ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಮಾ. 01 ರಂದು ಕುರುಗೋಡು ದೊಡ್ಡ ಬಸವೇಶ್ವರ ಮಹಾ ರಥೋತ್ಸವ ಲಿಂಕ್ ವಿಳಾಸ https://dekalungi.blogspot.com/2018/02/01_22.html
0 Response to "ಮಾ. 01 ರಂದು ಕುರುಗೋಡು ದೊಡ್ಡ ಬಸವೇಶ್ವರ ಮಹಾ ರಥೋತ್ಸವ"
ಕಾಮೆಂಟ್ ಪೋಸ್ಟ್ ಮಾಡಿ