ಶೀರ್ಷಿಕೆ : ಚಿಕಿತ್ಸಾ ವೆಚ್ಚ ಭರಿಸುವಂತೆ ವಿಮಾ ಕಂಪನಿಗೆ ಗ್ರಾಹಕರ ವೇದಿಕೆ ಆದೇಶ
ಲಿಂಕ್ : ಚಿಕಿತ್ಸಾ ವೆಚ್ಚ ಭರಿಸುವಂತೆ ವಿಮಾ ಕಂಪನಿಗೆ ಗ್ರಾಹಕರ ವೇದಿಕೆ ಆದೇಶ
ಚಿಕಿತ್ಸಾ ವೆಚ್ಚ ಭರಿಸುವಂತೆ ವಿಮಾ ಕಂಪನಿಗೆ ಗ್ರಾಹಕರ ವೇದಿಕೆ ಆದೇಶ
ಕೊಪ್ಪಳ ಡಿ. 16 (ಕರ್ನಾಟಕ ವಾರ್ತೆ): ಆರೋಗ್ಯ ವಿಮೆ ಮಾಡಿಸಿದ ಪಾಲಿಸಿದಾರರು, ಪಾಲಿಸಿ ಪಡೆದ ಮೊದಲನೆ ವರ್ಷದಲ್ಲಿ ಚಿಕಿತ್ಸೆ ಮಾಡಿಸಿಕೊಂಡ, ವೆಚ್ಚವನ್ನು ಯುನಿಟೆಡ್ ಇಂಡಿಯಾ ಇನ್ಸುರೆನ್ ವಿಮಾ ಕಂಪನಿ ಭರಿಸಬೇಕು ಎಂದು ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ತೀರ್ಪು ನೀಡಿದೆ.
ಶರಣಯ್ಯ ಸ್ವಾಮಿ ತಂದೆ ವೀರಭದ್ರಯ್ಯ ಸ್ವಾಮಿ ಅವರು ಗಂಗಾವತಿ ತಾಲೂಕು ಕಾರಟಗಿಯ ಆಂಧ್ರಾ ಬ್ಯಾಂಕ್ ಮೂಲಕ ಯುನಿಟೆಡ್ ಇಂಡಿಯಾ ಇನ್ಸುರೆನ್ ವಿಮಾ ಕಂಪನಿ ಇವರಲ್ಲಿ 1 ಲಕ್ಷ ರೂ. ಗಳ ಮೊತ್ತಕ್ಕೆ ಆರೋಗ್ಯಧಾನ ಮೆಡಿಕ್ಲೇಮ್ ಹೆಸರಿನ ಆರೋಗ್ಯ ವಿಮಾ ಪಾಲಿಸಿಯನ್ನು 2015 ರ ಜೂನ್ 09 ರಂದು ಮಾಡಿಸಿದ್ದರು. ಪಾಲಿಸಿಯು 2016 ರ ಜೂ. 08 ರವರೆಗೆ ಚಾಲ್ತಿಯಲ್ಲಿ ಇತ್ತು. ಈ ಅವಧಿಯಲ್ಲಿ ಪಾಲಿಸಿದಾರರು ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳ ಚಿಕಿತ್ಸೆಯನ್ನು ಪಡೆಯಲು ಅವಕಾಶವಿದೆ. ಪಾಲಿಸಿದಾರ 2015 ರ ಡಿ. 22 ರಂದು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ 99907 ರೂ. ವೆಚ್ಚದಲ್ಲಿ ಡಿಜೆ ಸ್ಟೆಂಟ್ ರಿಮೂವಲ್ ಚಿಕಿತ್ಸೆ ಪಡೆದು, ವಿಮಾ ಕಂಪನಿಗೆ ಚಿಕಿತ್ಸಾ ವೆಚ್ಚ ಭರಿಸಲು ಕ್ಲೇಮ್ ಸಲ್ಲಿಸಿದರು. ಆದರೆ ಕಂಪನಿಯು ಪಾಲಿಸಿ ಪಡೆದ ಮೊದಲನೆ ವರ್ಷದೊಳಗಾಗಿ ಚಿಕಿತ್ಸೆ ಪಡೆದಿರುವುದರಿಂದ, ಚಿಕಿತ್ಸಾ ವೆಚ್ಚ ಭರಿಸಲು ಸಾಧ್ಯವಿಲ್ಲ ಎಂದು ಕ್ಲೇಮ್ ಅನ್ನು ನಿರಾಕರಿಸಿದರು. ಈ ಹಿನ್ನೆಲೆಯಲ್ಲಿ ಪಾಲಿಸಿದಾರ ಶರಣಯ್ಯ ಸ್ವಾಮಿ ಅವರು ಕೊಪ್ಪಳದ ಗ್ರಾಹಕರ ವೇದಿಕೆಯ ಮೊರೆ ಹೋಗಿ ಕಂಪನಿಯ ವಿರುದ್ಧ ದೂರು ದಾಖಲಿಸಿದರು. ಗ್ರಾಹಕರ ವೇದಿಕೆಗೆ ಹಾಜರಾದ ವಿಮಾ ಕಂಪನಿಯವರು, ಡಿ.ಜೆ ಸ್ಟೆಂಟ್ ರೀಮೊವಲ್‍ಗಾಗಿ ಚಿಕಿತ್ಸೆಯನ್ನು ಮೆಡಿಕ್ಲೇಮ್ ವಿಮೆ ಪಡೆದ ಮೊದಲನೇ ವರ್ಷದೊಳಗಾಗಿ ಪಡೆದಿರುವುದರಿಂದ ಪಾಲಸಿಯ ನಿಯಮಗಳಿಗನುಸಾರವಾ ಪಾಲಸಿದಾರನ ಚಿಕಿತ್ಸಾ ವೆಚ್ಚವನ್ನು ಭರಿಸಲು ಸಾಧ್ಯವಿಲ್ಲವೆಂದು ವಾದಿಸಿದರು. ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷರಾದ ಏಕತಾ ಹೆಚ್.ಡಿ ಹಾಗೂ ಮಹಿಳಾ ಸದಸ್ಯರಾದ ಸುಜಾತಾ ಅಕ್ಕಸಾಲಿ ಅವರು, ವಾದ ಮತ್ತು ಪ್ರತಿವಾದಗಳನ್ನು ಆಲಿಸಿ, ವಿಮಾ ಕಂಪನಿಯವರು ಪಾಲಸಿದಾರನು 2014ನೇ ವರ್ಷದಿಂದಲೂ ನಿರಂತರವಾಗಿ ಆರೋಗ್ಯವಿಮೆಗಾಗಿ ವಿಮಾ ಕಂತನ್ನು ಪಾವತಿಸಿ ಆರೋಗ್ಯ ವಿಮೆಯನ್ನು ಪಡೆಯುತ್ತಿದ್ದು, ಅವರು ಚಿಕಿತ್ಸೆ ಪಡೆದಿದ್ದು ಡಿಸೆಂಬರ್-2015 ರಲ್ಲಿ ಆದ್ದರಿಂದ ಪಾಲಸಿಯ ಮೊದಲನೇ ವರ್ಷದಲ್ಲಿ ಚಿಕಿತ್ಸೆ ಪಡೆದಂತಾಗುವುದಿಲ್ಲವೆಂದು ಮತ್ತು ಪಾಲಸಿಯ ನಿಯಮವು ಈ ಕ್ಲೇಮ್‍ಗೆ ಅನ್ವಯವಾಗುವುದಿಲ್ಲವೆಂದು ಪರಿಗಣಿಸಿ, ಪಾಲಸಿಯ ಕ್ಲೇಮ್‍ನ್ನು ತಿರಸ್ಕರಿಸಿರುವುದು ಸರಿಯಲ್ಲವೆಂದು ನಿರ್ಧರಿಸಿದರು. ಯುನಿಟೆಡ್ ಇಂಡಿಯಾ ಇನ್ಸುರೆನ್ಸ್ ಕೊ. ಲಿ. ಇವರಿಂದ ನಿರ್ಲಕ್ಷ್ಯತನ ಹಾಗೂ ಸೇವಾ ನ್ಯೂನತೆ ಉಂಟಾಗಿದೆಯಂದು ತೀರ್ಮಾನಿಸಿ, ಪಾಲಿಸಿದಾರರಿಗೆ ಚಿಕಿತ್ಸಾ ವೆಚ್ಚದ ಮೊತ್ತ ರೂ. 99,065, ಮಾನಸಿಕ ವ್ಯಥೆಗೆ ರೂ. 10,000 ಮತ್ತು ದೂರಿನ ಖರ್ಚು ರೂ. 1500 /-ನ್ನು ಒಂದು ತಿಂಗಳ ಒಳಗಾಗಿ ಪಾವತಿಸಬೇಕು. ತಪ್ಪಿದಲ್ಲಿ ವಿಮಾ ಕಂಪನಿಯವರು ಈ ಹಣದ ಮೊತ್ತದ ಮೇಲೆ ದೂರು ದಾಖಲಾದ ದಿನದಿಂದ 9% ಬಡ್ಡಿಯೊಂದಿಗೆ ಪಾವತಿಸುವಂತೆ ತೀರ್ಪು ನೀಡಿದ್ದಾರೆ.
ಹೀಗಾಗಿ ಲೇಖನಗಳು ಚಿಕಿತ್ಸಾ ವೆಚ್ಚ ಭರಿಸುವಂತೆ ವಿಮಾ ಕಂಪನಿಗೆ ಗ್ರಾಹಕರ ವೇದಿಕೆ ಆದೇಶ
ಎಲ್ಲಾ ಲೇಖನಗಳು ಆಗಿದೆ ಚಿಕಿತ್ಸಾ ವೆಚ್ಚ ಭರಿಸುವಂತೆ ವಿಮಾ ಕಂಪನಿಗೆ ಗ್ರಾಹಕರ ವೇದಿಕೆ ಆದೇಶ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಚಿಕಿತ್ಸಾ ವೆಚ್ಚ ಭರಿಸುವಂತೆ ವಿಮಾ ಕಂಪನಿಗೆ ಗ್ರಾಹಕರ ವೇದಿಕೆ ಆದೇಶ ಲಿಂಕ್ ವಿಳಾಸ https://dekalungi.blogspot.com/2017/12/blog-post_16.html
0 Response to "ಚಿಕಿತ್ಸಾ ವೆಚ್ಚ ಭರಿಸುವಂತೆ ವಿಮಾ ಕಂಪನಿಗೆ ಗ್ರಾಹಕರ ವೇದಿಕೆ ಆದೇಶ"
ಕಾಮೆಂಟ್ ಪೋಸ್ಟ್ ಮಾಡಿ