ಡಿ. 22 ರಿಂದ ಬಾಗಲಕೋಟದಲ್ಲಿ ತೋಟಗಾರಿಕೆ ಮೇಳ

ಡಿ. 22 ರಿಂದ ಬಾಗಲಕೋಟದಲ್ಲಿ ತೋಟಗಾರಿಕೆ ಮೇಳ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಡಿ. 22 ರಿಂದ ಬಾಗಲಕೋಟದಲ್ಲಿ ತೋಟಗಾರಿಕೆ ಮೇಳ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಡಿ. 22 ರಿಂದ ಬಾಗಲಕೋಟದಲ್ಲಿ ತೋಟಗಾರಿಕೆ ಮೇಳ
ಲಿಂಕ್ : ಡಿ. 22 ರಿಂದ ಬಾಗಲಕೋಟದಲ್ಲಿ ತೋಟಗಾರಿಕೆ ಮೇಳ

ಓದಿ


ಡಿ. 22 ರಿಂದ ಬಾಗಲಕೋಟದಲ್ಲಿ ತೋಟಗಾರಿಕೆ ಮೇಳ


ಕೊಪ್ಪಳ ಡಿ. 16 (ಕರ್ನಾಟಕ ವಾರ್ತೆ): ಬಾಗಲಕೋಟ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ತೋಟಗಾರಿಕೆ, ಕೃಷಿ ಇಲಾಖೆ ಹಾಗೂ ಇತರೆ ಅಭಿವೃದ್ಧಿ ಇಲಾಖೆಗಳ ಸಹಯೋಗದಲ್ಲಿ “ತೋಟಗಾರಿಕೆ ಮೇಳ”ವನ್ನು ಡಿ. 22 ರಿಂದ 23 ರವರೆಗೆ ಬಾಗಲಕೋಟೆಯ ನವನಗರದ ಉದ್ಯಾನಗರಿಯಲ್ಲಿ ಆಯೋಜಿಸಲಾಗಿದೆ.
         ಪ್ರತಿ ವರ್ಷದಂತೆ ಈ ವರ್ಷವೂ ಸಹ ಡಿ. 22, 23 ಮತ್ತು 24 ರಂದು ಮೂರು ದಿನಗಳಕಾಲ ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿ ತೋಟಗಾರಿಕೆ ಮೇಳ ಜರುಗಲಿದೆ. ತೋಟಗಾರಿಕೆ ಮೇಳವನ್ನು ಪ್ರಸ್ತುತ ವರ್ಷ “ಕೌಶಲ್ಯೋದ್ಯಮ ತೋಟಗಾರಿಕೆ” ಪ್ರಗತಿಯ ಪ್ರಣಾಳಿಕೆ ಎಂಬ ಧ್ಯೇಯದೊಂದಿಗೆ ಹಮ್ಮಿಕೊಳ್ಳಲಾಗುತ್ತಿದೆ. ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳ ಅರಿವು ಮೂಡಿಸುವುದು, ರೈತರ ಸಾಮಥ್ರ್ಯ ಬಲವರ್ಧನೆ ಮಾಡಿ, ಕೌಶಲ ಕಲಿತು ಉದ್ದಿಮೆ ಕೈಗೊಳ್ಳುವ ದಿಕ್ಕಿನಲ್ಲಿ ಚಿಂತನೆ ಮಂಥನ, ರೈತರ ಆದಾಯವನ್ನು ವೃದ್ಧಿಗೊಳಿಸುವಂತೆ ಮಾಡುವುದು ಹಾಗೂ ಸುಸ್ಥಿರಗೊಳಿಸುವುದು. ಒಂದೇ ಸೂರಿನಡಿಯಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ ಪಶುಪಾಲನೆ ಇತ್ಯಾದಿ ಸಮಗ್ರತೆ ಬಿಂಬಿಸುವ ತಾಂತ್ರಿಕತೆಗಳ ಬಗ್ಗೆ ಮಾಹಿತಿ, ಹನಿ ನೀರಾವರಿ, ಸಿಂಚಣ ನೀರಾವರಿ, ತುಂತುರು ನೀರಾವರಿ ಉಪಕರಣಗಳು ರೈತರಿಗೆ ಬೇಕಾಗುವ ಎಲ್ಲಾ ಕೃಷಿ ಉಪಕರಣಗಳು ಮತ್ತು ಅವುಗಳ ಮಾಹಿತಿ ಮೇಳದಲ್ಲಿ ದೊರೆಯಲಿದೆ.
ವಿಶೇಷತೆಗಳು :
************* ತೋಟಗಾರಿಕೆ ಮೇಳದ ವಿಶೇಷತೆಗಳು ಇಂತಿವೆ, ನವೀನ ಪದ್ಧತಿಯಲ್ಲಿ ಸುಸ್ಥಿರ ತರಕಾರಿ ಬೇಸಾಯ. ದೇಶಿ ಹಾಗೂ ವಿದೇಶಿ ತರಕಾರಿಗಳ ಪ್ರಾತ್ಯಕ್ಷಿಕೆ, ತಾರಸಿ ತರಕಾರಿ, ಹೂವು ಹಾಗೂ ಹಣ್ಣಿನ ತೋಟ. ಎರೋಪೋನಿಕ್ಸ್, ಹೈಡ್ರೊಪೋನಿಕ್ಸ್ ಮಾದರಿಗಳು. ಸ್ವಯಂ ಚಾಲಿತ ನೀರಾವರಿ ವ್ಯವಸ್ಥೆ. ಜಾನುಮಾರು ಮೇಳ. ಕೃಷಿ ಬ್ಯಾಂಕಿಂಗ್ ವ್ಯವಹಾರಗಳು. ಕೃಷಿ ಮತ್ತು ತೋಟಗಾರಿಕೆ ಪ್ರಕಟಣೆಗಳು. ರೈತರಿಗೆ ಆತ್ಮಸ್ಥೈರ್ಯ ತುಂಬುಬ ಕಾರ್ಯಕ್ರಮಗಳು. ಲಂಬ ತೋಟಗಳ ಮಾದರಿ. ನೆರಳು ಮನೆಯಲ್ಲಿ ಪಪಾಯಿ ಹಾಗೂ ವೀಳ್ಯದೆಲೆ ತಾಕುಗಳು. ಕೃಷಿ ಯಂತ್ರೋಪಕರಣಗಳ ಹಾಗೂ ಉಪಕರಣಗಳ ಪ್ರದರ್ಶನ. ರಾಸಾಯನಿಕ ಗೊಬ್ಬರಗಳು ಹಾಗೂ ಪೀಡನಾಶಕಗಳು. ಭವಿಷ್ಯದ ಬೆಳೆಗಳಾದ ಡ್ರ್ಯಾಗನ್ ಹಣ್ಣು, ಪೊದೆ ಮೆಣಸು, ಗೋಡಂಬಿ, ಹಲಸು, ಸ್ಟ್ರಾಬೆರ್ರಿ, ಅಂಜೂರ, ಸೀತಾಫಲ ಹಾಗೂ ಬಾರೆ ಹಣ್ಣು. ಇಸ್ರೇಲ್ ಮಾದರಿಯ ತೂಗು ತೋಟಗಳು. ರಸಾವರಿ ಮಾದರಿಗಳು. ಕಿರು ಹಣ್ಣಿನ ಪ್ರಾತ್ಯಕ್ಷಿಕೆ ತಾಕುಗಳು. ಜೇನು ಕೃಷಿ-ಮಧುವನ. ಸಮಗ್ರ ಕೃಷಿ ಪದ್ಧತಿ, ಸುಸ್ಥಿರ ಕೃಷಿ ಪದ್ಧತಿಗಳು. ವಿಜ್ಞಾನಿಗಳಿಂದ ತಾಂತ್ರಿಕ ಮಾಹಿತಿ. ಕೃಷಿ ಪರಿಕರಗಳ ಪ್ರದರ್ಶನ. ಶ್ರೇಷ್ಠ ರೈತ/ ರೈತ ಮಹಿಳೆ ಪ್ರಶಸ್ತಿ ಸಮಾರಂಭ. ಕೌಶಲ್ಯ ಪ್ರಾತ್ಯಕ್ಷಿಕೆಗಳು ಎಂಬ ವಿಶೇಷತೆಗಳನ್ನು ತೋಟಗಾರಿಕೆ ಮೇಳವು ಹೊಂದಿದೆ.
ರೈತರಿಗೆ ಸಮಗ್ರ ಮಾಹಿತಿ :
****************************ತೋಟಗಾರಿಕೆ ಮೇಳವು ರೈತರಲ್ಲಿ ಅಪೇಕ್ಷಿತ ಬದಲಾವಣೆ ತರುವ ಒಂದು ಅವಕಾಶವನ್ನು ಒದಗಿಸುತ್ತದೆ. ಇದರಲ್ಲಿ ತೋಟಗಾರಿಕೆ ಮತ್ತು ಕೃಷಿ ಬೆಳೆಗಳ, ವಿವಿಧ ತಳಿಗಳ, ಉತ್ಪನ್ನಗಳ ಪ್ರದರ್ಶನ, ಕ್ಷೇತ್ರ ಭೇಟಿ, ಪ್ರಾತ್ಯಕ್ಷಿಕೆ, ಭಿತ್ತಿಚಿತ್ರ, ವಿಡಿಯೋ ಮುಂತಾದವುಗಳ ಮೂಲಕ ರೈತರಿಗೆ ತಂತ್ರಜ್ಞಾನದ ಮಾಹಿತಿ ನೀಡಲಾಗುತ್ತದೆ. ಸಮಗ್ರ ಕೃಷಿ ಪದ್ಧತಿಯ ಅಡಿಯಲ್ಲಿ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳ ಸಮಗ್ರ ಮಾಹಿತಿಯು ದೊರೆಯುತ್ತದೆ. ವಿಜ್ಞಾನಿಗಳು, ಪ್ರಗತಿಪರ ರೈತ, ರೈತ ಉದ್ಯಮಿ ಮುಂತಾದವರನ್ನು ನೇರವಾಗಿ ಭೇಟಿಯಾಗಿ ಅವರ ಯಶೋಗಾಥೆಗಳಿಂದ ಪ್ರೇರಣೆ ಪಡೆಯುವುದಲ್ಲದೇ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ.
ರೈತರಿಗೆ ಸನ್ಮಾನ :
*********** ತೋಟಗಾರಿಕೆ ಮೇಳದಲ್ಲಿ 23 ಜಿಲ್ಲೆಗಳ ಸಾಧಕ ರೈತರಿಗೆ ಸನ್ಮಾನಿಸಲಾಗುವುದು. ತೋಟಗಾರಿಕೆ ಮೇಳದ ಎಲ್ಲಾ ಪ್ರದರ್ಶನಗಳ ಜೊತೆಗೆ ವಿಷಯವಾರು ತಾಂತ್ರಿಕ ಗೋಷ್ಠಿಗಳು ನಿರಂತರವಾಗಿ ಮೂರು ದಿನಗಳ ಕಾಲ ನಡೆಯುತ್ತವೆ. ತೋಟಗಾರಿಕೆಗೆ ಸಂಬಂಧಿಸಿದ ಅನೇಕ ವಿಷಯಗಳ ಬಗ್ಗೆ ಅನುಭವಿ ವಿಜ್ಞಾನಿಗಳಿಂದ ವಿಷಯ ಮಂಡನೆ ಪ್ರಗತಿಪರ ರೈತರೊಂದಿಗೆ ಇತರ ರೈತರ ಸಂವಾದ ಕಾರ್ಯಕ್ರಮಗಳು ಜರುಗುತ್ತವೆ. ಹಾಗೂ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ 23 ಜಿಲ್ಲೆಗಳಿಂದ ಸಾಧಕ ರೈತರನ್ನು ಗುರುತಿಸಿ ಅವರಿಗೆ ಗೌರವಪೂರ್ವಕ ಸನ್ಮಾನ ಸಮಾರಂಭ ಜರುಗಲಿದೆ.
ಈ ತೋಟಗಾರಿಕೆ ಮೇಳದಲ್ಲಿ ಸುಮಾರು ರೈತರು ಹಾಗೂ ಇತರರು ಸೇರಿ ಒಟ್ಟು 4 ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆ ಇದೆ. ರೈತರು ಮತ್ತು ವೀಕ್ಷಕರಿಗಾಗಿ ಸ್ಥಳೀಯ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಬಾಗಲಕೋಟ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ. ಪಿ.ಎಂ ಗಂಗಾಧರಪ್ಪನವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಹೀಗಾಗಿ ಲೇಖನಗಳು ಡಿ. 22 ರಿಂದ ಬಾಗಲಕೋಟದಲ್ಲಿ ತೋಟಗಾರಿಕೆ ಮೇಳ

ಎಲ್ಲಾ ಲೇಖನಗಳು ಆಗಿದೆ ಡಿ. 22 ರಿಂದ ಬಾಗಲಕೋಟದಲ್ಲಿ ತೋಟಗಾರಿಕೆ ಮೇಳ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಡಿ. 22 ರಿಂದ ಬಾಗಲಕೋಟದಲ್ಲಿ ತೋಟಗಾರಿಕೆ ಮೇಳ ಲಿಂಕ್ ವಿಳಾಸ https://dekalungi.blogspot.com/2017/12/22.html

Subscribe to receive free email updates:

0 Response to "ಡಿ. 22 ರಿಂದ ಬಾಗಲಕೋಟದಲ್ಲಿ ತೋಟಗಾರಿಕೆ ಮೇಳ"

ಕಾಮೆಂಟ್‌‌ ಪೋಸ್ಟ್‌ ಮಾಡಿ