news and photo Date: 25--11--2017

news and photo Date: 25--11--2017 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು news and photo Date: 25--11--2017, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : news and photo Date: 25--11--2017
ಲಿಂಕ್ : news and photo Date: 25--11--2017

ಓದಿ


news and photo Date: 25--11--2017

ಅನ್ನದಾತನಿಗೆ ಆತ್ಮಸ್ಥೈರ್ಯ ತುಂಬುವುದು ಅವಶ್ಯಕ
*********************************************
ಕಲಬುರಗಿ,ನ.25.(ಕ.ವಾ.)- ಮಳೆ ನೀರನ್ನೆ ಆಶ್ರಯಿಸಿರುವ ಈ ಭಾಗದಲ್ಲಿ ಸೂಕ್ತ ಸಮಯದಲ್ಲಿ ಮಳೆ ಅಭಾವ ಕಾರಣ ರೈತ ಬೆಳೆದ ಬೆಳೆ ಉತ್ತಮ ಇಳುವರಿ ಸಿಗದ ಕಾರಣ ಅನ್ನದಾತ ರೈತ ನಿರಾಶೆಯಾಗಿ ಆತ್ಮಹತ್ಯೆದಂತಹ ಕಠಿಣ ನಿರ್ಧಾರ ಕೈಗೊಳ್ಳುತ್ತಿದ್ದು ತುಂಬಾ ಆತಂಕಕಾರಿ ಬೆಳವಣಿಗೆಯಾಗಿದೆ. ಜಗಕ್ಕೆ ಅನ್ನ ನೀಡುವ ರೈತನು ಇಂತಹ ನಿರ್ಧಾರ ತೆಗೆದುಕೊಳ್ಳದಂತೆ ಅವನಲ್ಲಿ ಆತ್ಮಸ್ಥೈರ್ಯ ತುಂಬುವ ಅಗತ್ಯವಿದೆ ಎಂದು ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ ಸಿ. ರೇವೂರ ಹೇಳಿದರು.
ಅವರು ಶನಿವಾರ ಆಳಂದ ರಸ್ತೆಯ ಕೃಷಿ ಸಂಶೋಧನಾ ಕೇಂದ್ರದ ಆವರಣದಲ್ಲಿ ಕೃಷಿ ವಿಶ್ವವಿದ್ಯಾಲಯ ರಾಯಚೂರು, ಕೃಷಿ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ, ಕೃಷಿ ಮಹಾವಿದ್ಯಾಲಯ, ಆತ್ಮ ಯೋಜನೆ, ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ “ಕೃಷಿ ಮೇಳ” ಉದ್ಘಾಟಿಸಿ ಮಾತನಾಡಿದರು.
ಅನ್ನದಾತನ ಶ್ರೇಯೋಭಿವೃದ್ಧಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಅನೇಕ ರೈತಪರ ಯೋಜನೆಗಳು ಜಾರಿಗೆ ತಂದಿದ್ದು ರೈತ ವರ್ಗ ಇದರ ಸದುಪಯೋಗ ಪಡೆದು ಸ್ವಾಭಿಮಾನದ ಬದುಕು ಸಾಗಬೇಕು. ರೈತ ತನ್ನ ಹೊಲದಲ್ಲಿ ಮಣ್ಣಿಗೆ ಅನುಗುಣವಾಗಿ ಯಾವ ಯಾವ ಬೆಳೆಗಳು ಬೆಳೆಯದರೆ ಉತ್ತಮ, ಯಾವ ಬೆಳೆ ಬೆಳೆಯುವುದರಿಂದ ಉತ್ತಮ ಇಳುವರಿ ಪಡೆಯಲು ಸಾಧ್ಯ ಎಂಬುದರ ಕುರಿತು ಕೃಷಿ ವಿಜ್ಞಾನಿಗಳು ರೈತರಿಗೆ ಆಗಾಗ ಮಾಹಿತಿ ನೀಡಬೇಕು. ಈ ನಿಟ್ಟಿನಲ್ಲಿ ಕೃಷಿ ಸಂಶೋಧನಾ ಕೇಂದ್ರ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಸಲಹೆ ನೀಡಿದರು.
ದಿವ್ಯ ಸಾನಿಧ್ಯವನ್ನು ವಹಿಸಿದ್ದ ಕಲಬುರಗಿ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿಗಳು ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಪೂಜ್ಯ ಡಾ.ಶರಣಬಸಪ್ಪ ಅಪ್ಪಾ ಮಾತನಾಡಿ ರೈತ ಸಮುದಾಯ ಕೃಷಿಯೊಂದಿಗೆ ಕೃಷಿಯೇತರ ಚಟುವಟಿಕೆಗಳಾದ ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆ ಮಾಡುವ ಮೂಲಕ ಆರ್ಥಿಕ ಸದೃಢವಾಬೇಕು. ಎಲ್ಲರಿಗೂ ಅನ್ನ ನೀಡುವ ರೈತನೆ ನಿಜವಾದ ದಾಸೋಹಿ ಎಂದ ಅವರು ಮಾಲದಂಡಿ ಜೋಳ ಸಂಶೋಧನೆಯ ನಂತರ ಈ ಭಾಗದಲ್ಲಿ ಮಾಲದಂಡಿ ಜೋಳ ಬಿತ್ತನೆಯಾಗುತ್ತಿದೆ. ಅದೇ ರೀತಿ ಔಷಧ ಸಿಂಪಡಿಸದೆ ಬೆಳೆಯುವಂತಹ ತೊಗರಿ ತಳಿ ಸಂಶೋಧನೆಗೆ ಕೃಷಿ ವಿಜ್ಞಾನಿಗಳ ಹೆಜ್ಜೆ ಇಡಬೇಕು ಎಂದರು.
ತೊಗರಿ ಕಣಜವಾಗಿರುವ ಕಲಬುರಗಿ ಶಿಕ್ಷಣದಲ್ಲಿ ದಾಪುಗಾಲು ಇಡುತ್ತಿದೆ, ಹೈದ್ರಾಬಾದ ಕರ್ನಾಟಕ ಭಾಗದಲ್ಲಿ ವಿಶ್ವವಿದ್ಯಾಲಯ, ವೈದ್ಯಕೀಯ, ಇಂಜಿನಿಯರಿಂಗ್ ಕಾಲೇಜು ಸ್ಥಾಪನೆಯಾಗುವ ಮೂಲಕ ಇಲ್ಲಿನ ವಿದ್ಯಾರ್ಥಿಗಳಿಗೆ ಜ್ಞಾನರ್ಜನೆ ನೀಡುವ ಮೂಲಕ ಇದು ವಿದ್ಯಾ ರಾಜಧಾನಿಯಾಗಿ ರೂಪುಗೊಂಡಿದೆ. ರೈತ ಕುಟುಂಬದ ಮಕ್ಕಳಿಗೆ ಕೃಷಿ, ನೀರಾವರಿ, ಹೂನುಗಾರಿಕೆ ಬಗ್ಗೆ ಕಾಲಕಾಲಕ್ಕೆ ತರಬೇತಿ ನೀಡುವ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಶರಣಬಸವ ವಿಶ್ವವಿದ್ಯಾಲಯದಿಂದ 7ನೇ ಮತ್ತು 10ನೇ ತರಗತಿ ಉತ್ತೀರ್ಣರಾದವರಿಗೆ ಕೃಷಿ ತರಬೇತಿ ನೀಡಲು ಯೋಚಿಸಲಾಗಿದೆ ಎಂದರು.
ಕಲಬುರಗಿ ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಜೆ.ಆರ್.ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿ ಕಲಬುರಗಿ ಕೃಷಿ ಸಂಶೋಧನಾ ಕೇಂದ್ರದಿಂದ ಇದೂವರೆಗೆ ಜಿಎಸ್-1, ಮಾರುತಿ ಸೇರಿದಂತೆ ಆರು ತೊಗರಿ ತಳಿ ಬಿಡುಗಡೆ ಮಾಡಲಾಗಿದೆ. ಐ.ಸಿ.ಎ.ಆರ್. ಸಂಸ್ಥೆಯ ನೆರವಿನಿಂದ ಕೇಂದ್ರವು ಅನೇಕ ಹೊಸ ತಳಿಗಳ ಸಂಶೋಧನೆ ಮಾಡುತ್ತಿದೆ. ಈ ಕೇಂದ್ರದಿಂದ ಸಂಶೋಧಿಸಿದ ಟಿಎಸ್3 ತೊಗರಿ ತಳಿ ಕಲಬುರಗಿ ಜಿಲ್ಲೆಯ ಸುಮಾರು 4 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದು, ಇದಕ್ಕೆ ಹೆಚ್ಚಿನ ಬೇಡಿಕೆ ಇದೆ ಎಂದರು.
ಹೊಸ ತಳಿಗಳ ಪ್ರಾತ್ಯಕ್ಷಿಕೆ ವೀಕ್ಷಣೆ ಹಾಗೂ ವಿವಿಧ ಬೆಳೆಗಳ ಅಧುನಿಕ ಬೇಸಾಯ ಕ್ರಮಗಳ ಬಗ್ಗೆ ರೈತಾಪಿ ವರ್ಗಕ್ಕೆ ತಿಳಿಹೇಳಲು ಆಯೋಜಿಸಿರುವ ಈ ಕೃಷಿ ಮೇಳದಲ್ಲಿ ಕೃಷಿ ವಸ್ತು ಪ್ರದರ್ಶನ, ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ವಿವಿಧ ತಳಿಯ ಜಾನುವಾರುಗಳ ಪ್ರದರ್ಶನ, ಶ್ವಾನಪ್ರದರ್ಶನ ಏರ್ಪಡಿಸಲಾಗಿದೆ. ಎರೆಹುಳು ಗೊಬ್ಬರ ಉತ್ಪಾದನೆ ಘಟಕ ಹಾಗೂ ಮಣ್ಣು ಪರೀಕ್ಷಾ ಕೇಂದ್ರದ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಹೈನುಗಾರಿಕೆ ಮತ್ತು ಅರಣ್ಯ ಇಲಾಖೆಗಳಿಂದ ಸರ್ಕಾರ ರೂಪಿಸಿರುವ ಹಲವು ರೈತಪರ ಯೋಜನೆಗಳ ಮಾಹಿತಿಯನ್ನು ರೈತರಿಗೆ ನೀಡಲಿದ್ದು, ಇದಕ್ಕಾಗಿ ಸುಮಾರು 110 ಮಳಿಗೆಗಳನ್ನು ಸ್ಥಾಪಿಸಲಾಗಿದೆ.
ಇದಕ್ಕು ಮುನ್ನ ಶಾಸಕರು ಹಾಗೂ ಗಣ್ಯರೆಲ್ಲರು ಕೃಷಿ ಸಂಶೋಧನಾ ಕೇಂದ್ರದಿಂದ ಅಭಿವೃದ್ಧಿಪಡಿಸಲಾದ ತೊಗರಿ ಹಾಗೂ ಕಡಲೆ ತಳಿಗಳಿಂದ ಬೆಳೆಯಲಾದ ಬೆಳೆಗಳ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿ ಕೃಷಿ ಮೇಳ ಅಂಗವಾಗಿ ವಿವಿಧ ಇಲಾಖೆಯಿಂದ ಸ್ಥಾಪಿಸಲಾಗಿರುವ ಮಳಿಗೆಗೆ ಭೇಟಿ ನೀಡಿ ಮಾಹಿತಿ ಪಡೆದರು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ಚೌಕಿ ಮಠದ ಪೂಜ್ಯ ನೀಲಕಂಠ ಸ್ವಾಮಿ, ಕರ್ನಾಟಕ ತೊಗರಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ, ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸಂಜೀವನ ರಮೇಶ ಯಾಕಾಪುರ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪುರ, ಕಲಬುರಗಿ-ಯಾದಗಿರಿ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಶರಣಬಸಪ್ಪ ಅಷ್ಟಗಿ, ರಾಯಚೂರು ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಅಮರೇಶ ಬಲ್ಲಿದವ, ಸಿದ್ದಪ್ಪ ಭಂಡಾರಿ, ವೀರನಗೌಡ ಪರಸರೆಡ್ಡಿ, ಸಂಶೋಧನಾ ನಿರ್ದೇಶಕ ಡಾ.ಐ.ಶಂಕರಗೌಡ, ವಿಸ್ತರಣಾ ನಿರ್ದೇಶಕ ಡಾ.ಎಸ್.ಕೆ.ಮೇಟಿ ಸೇರಿದಂತೆ ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಗಳು, ಕೃಷಿ ವಿಜ್ಞಾನಿಗಳಾದ ಡಾ.ರವಿ ಗುಂಡಪಗೋಳ, ಡಾ.ಮುನಿಸ್ವಾಮಿ, ಡಾ.ಬಿ.ಎಂ.ದೊಡ್ಡಮನಿ, ಡಾ.ರಾಚಪ್ಪ ವಿ., ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಬಾಲರಾಜ, ಕೃಷಿ ಉಪನಿರ್ದೇಶಕ ಸಮದ ಪಟೇಲ್, ಪ್ರಗತಿಪರ ರೈತ ದೇವೆಂದ್ರ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಇನ್ನೀತರ ಮುಖಂಡರು ಭಾಗವಹಿಸಿದ್ದರು. ಕೃಷಿ ಸಂಶೋಧನಾ ಕೇಂದ್ರದ ಯೋಜನಾ ನಿರ್ದೇಶಕರು ಹಾಗೂ ಕೃಷಿ ಮೇಳದ ಅಧ್ಯಕ್ಷ ಡಾ. ಡಿ.ಎಂ.ಮಣ್ಣೂರ ಸ್ವಾಗತಿಸಿದರು.
ಸುಗಮ ಮತ್ತು ಸುರಕ್ಷಿತ ಸಂಚಾರ ಸಪ್ತಾಹ: ಮೊದಲ ದಿನವೇ 4.55 ಲಕ್ಷ ರೂ.ಗಳ
************************************************************************ದಾಖಲೆಯ ದಂಡ ವಸೂಲಿ
************************
ಕಲಬುರಗಿ,ನ.25.(ಕ.ವಾ)-ಈಶಾನ್ಯ ವಲಯ ವ್ಯಾಪ್ತಿಯ ಕಲಬುರಗಿ, ಯಾದಗಿರಿ ಮತ್ತು ಬೀದರ್ ಜಿಲ್ಲೆಗಳಲ್ಲಿ ನವೆಂಬರ್ 24ರಿಂದ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕಾಗಿ ಸಪ್ತಾಹ ಕಾರ್ಯಕ್ರಮ ಕೈಗೊಂಡಿದ್ದು, ಮೊದಲನೇ ದಿನವೇ ಹೆಲ್ಮೇಟ್ ರಹಿತ ಇನ್ನಿತರ ಕಾರಣಕ್ಕಾಗಿ ಚಾಲನೆ ಮಾಡಿದ್ದಕ್ಕಾಗಿ ಒಟ್ಟು 3934 ಪ್ರಕರಣ ದಾಖಲಿಸಿ 4,55,500 ರೂ.ಗಳ ದಾಖಲೆ ದಂಡ ವಸೂಲು ಮಾಡಲಾಗಿದೆ ಎಂದು ಕಲಬುರಗಿ ಈಶಾನ್ಯ ವಲಯದ ಪೊಲೀಸ್ ಮಹಾ ನಿರೀಕ್ಷಕ ಆಲೋಕಕುಮಾರ ಅವರು ತಿಳಿಸಿದ್ದಾರೆ.
ಸಪ್ತಾಹದ ಅಂಗವಾಗಿ ಮೊದಲ ದಿನದಂದು ಹೆಲ್ಮೆಟ್ ರಹಿತ ಹಾಗೂ ಕುಡಿದ ಅಮಲಿನಲ್ಲಿ ವಾಹನ ಚಾಲನೆ, ಟ್ರಿಪಲ್ ರೈಡಿಂಗ್ ಪ್ರಕರಣಗಳು, ಅತೀ ವೇಗ ಮತ್ತು ನಿಷ್ಕಾಳಜಿತನದ ಚಾಲನೆ, ವಾಹನ ಚಾಲನೆಯಲ್ಲಿ ಮೊಬೈಲ್ ಬಳಕೆ, ಸಮವಸ್ತ್ರ ಧರಿಸದೇ ವಾಹನ ಚಾಲನೆ, ವಾಹನಗಳಿಗೆ ಟಿಂಟೇಡ್ ಗ್ಲಾಸ್ ಅಳವಡಿಕೆ ಹೀಗೆ ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 2,869 ಪ್ರಕರಣಗಳಿಂದ 3,31,700ರೂ ದಂಡ., ಬೀದರ್ ಜಿಲ್ಲೆಯಲ್ಲಿ 813 ಪ್ರಕರಣಗಳಿಂದ 91,800 ರೂ. ದಂಡ ಮತ್ತು ಯಾದಗಿರಿ ಜಿಲ್ಲೆಯಲ್ಲಿ 252 ಪ್ರಕರಣಗಳಿಂದ 32,000 ರೂ. ದಂಡ ಸೇರಿದಂತೆ ಒಟ್ಟು 3,934 ಪ್ರಕರಣಗಳನ್ನು ದಾಖಲಿಸಿ 4,55,500 ರೂ.ಗಳ ದಂಡ ವಿಧಿಸಲಾಗಿದೆ. ಸುಗಮ ಮತ್ತು ಸುರಕ್ಷಿತ ಸಂಚಾರಕ್ಕಾಗಿ ಈಶಾನ್ಯ ವಲಯದಲ್ಲಿಯೇ ಇದ ಮೊದಲ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸಪ್ತಾಹದ ಈ ಅಭಿಯಾನದಲ್ಲಿ ಆಯಾ ಜಿಲ್ಲೆಗಳ ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಸಹಾಯಕ ಪೊಲೀಸ್ ಅಧೀಕ್ಷಕರು, ಪೊಲೀಸ್ ಉಪಾಧೀಕ್ಷಕರು, ಸಿಪಿಐ/ಪಿ.ಐ., ಪಿ.ಎಸ್.ಐ. ಮತ್ತು ಪೊಲೀಸ್ ಸಿಬ್ಬಂದಿಗಳು ಪಾಲ್ಗೊಂಡು ನಿಯಮ ಪಾಲಿಸದವರಿಗೆ ದಂಡ ಹಾಕಿದಲ್ಲದೇ ಹೆಲ್ಮೆಟ್ ಧರಿಸಿ ವಾಹನ ಚಾಲನೆ, ಸಮವಸ್ತ್ರ ಧರಿಸಿ ಅಟೋ ಚಾಲನೆ ಮತ್ತು ಬೇಲ್ಟ ಧರಿಸಿ 4 ಚಕ್ರ ವಾಹನ ಚಲಾಯಿಸುವವರಿಗೆ ಪುಷ್ಪ ನೀಡಿ ಶುಭ ಕೋರಿದರು.
ವಲಯದ ಮೂರೂ ಜಿಲ್ಲೆಗಳಲ್ಲಿ ದ್ವಿಚಕ್ರ ಸವಾರರು ಹೆಲ್ಮೆಟ್ ಧರಿಸಿ, ನಾಲ್ಕು ಚಕ್ರದ ವಾಹನ ಚಾಲಕರು ಬೆಲ್ಟ್ ಧರಿಸಿಕೊಂಡು ವಾಹನ ಚಾಲನೆ ಮಾಡಬೇಕು. ಆಟೋ ಡ್ರೈವರ್‍ಗಳು ಸಮವಸ್ತ್ರ ಧರಿಸಿಕೊಂಡು ನಿಗದಿತ ಮಿತಿಯಲ್ಲಿ ಆಟೋರಿಕ್ಷಾ ಚಾಲನೆ ಮಾಡುವುದು ಕಡ್ಡಾಯವಾಗಿದೆ. ಕುಡಿದ ಅಮಲಿನಲ್ಲಿ ವಾಹನ ಚಾಲನೆ, ಟ್ರಿಪಲ್ ರೈಡಿಂಗ್, ಅತೀ ವೇಗ ಮತ್ತು ನಿಷ್ಕಾಳಜಿತನದ ಚಾಲನೆ, ವಾಹನ ಚಾಲನೆಯಲ್ಲಿ ಮೊಬೈಲ್ ಬಳಕೆ, ಸಮವಸ್ತ್ರ ಧರಿಸದೇ ವಾಹನ ಚಾಲನೆ ಮಾಡುವವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದ ಅವರು ವಾಹನ ಚಾಲನೆ ಸಂದರ್ಭದಲ್ಲಿ ಚಾಲನೆ ಪರವಾನಿಗೆ, ಆರ್.ಸಿ. ಪುಸ್ತಕ, ವಿಮೆ ಇತ್ಯಾದಿಗಳ ನಕಲು ಪ್ರತಿಯನ್ನು ವಾಹನ ಸವಾರರು ಕಡ್ಡಾಯವಾಗಿ ತಮ್ಮ ಹತ್ತಿರ ಇಟ್ಟುಕೊಳ್ಳತಕ್ಕದ್ದು. ಪೊಲೀಸರು ವಿಚಾರಣೆಗೊಳಪಡಿಸಿದಾಗ ಇವುಗಳನ್ನು ಹಾಜರುಪಡಿಸಿ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕಾಗಿ ಜಾರಿಗೊಳಿಸಿರುವ ಪೊಲೀಸ್ ಇಲಾಖೆಯ ಕ್ರಮಕ್ಕೆ ಸಾರ್ವಜನಿಕರು ಸಹಕರಿಸಬೇಕೆಂದು ಅವರು ಕೋರಿದ್ದಾರೆ.
ನವೆಂಬರ್ 26ರಂದು ಕಾನೂನು ಅರಿವು ನೆರವು ಕಾರ್ಯಕ್ರಮ
*****************************************************
ಕಲಬುರಗಿ,ನ.25.(ಕ.ವಾ)-ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಶರಣಬಸವೇಶ್ವರ ಸ್ವತಂತ್ರ ಪದವಿಪೂರ್ವ ಕಾಲೇಜು ಮತ್ತು ಮಾಹಿತಿ ಹಕ್ಕು ಕಾರ್ಯಕರ್ತರ ಸಂಘ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ “ಸಂವಿಧಾನದ ದಿನಾಚರಣೆ” ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ನವೆಂಬರ್ 26ರಂದು ರವಿವಾರ ಬೆಳಿಗ್ಗೆ 10.30 ಗಂಟೆಗೆ ಕಲಬುರಗಿಯ ಶರಣಬಸವೇಶ್ವರ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾಗಿದೆ.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್. ಮಾಣಿಕ್ಯ ಕಾರ್ಯಕ್ರಮವನ್ನು ಉದ್ಘಾಟಿಸುವರು. ಶರಣಬಸವೇಶ್ವರ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರದ್ಧಾ ಹಲಕಟ್ಟಿ ಅಧ್ಯಕ್ಷತೆ ವಹಿಸುವರು. ನ್ಯಾಯವಾದಿ ಸಂಘದ ಅಧ್ಯಕ್ಷ ಆರ್.ಕೆ. ಹಿರೇಮಠ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತರ ಸಂಘದ ಅಧ್ಯಕ್ಷ ಸಿದ್ರಾಮಯ್ಯ ಹಿರೇಮಠ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಸಂಪನ್ಮೂಲ ವ್ಯಕ್ತಿಯಾಗಿ ಎಸ್.ಎಸ್. ಲಾಹೋಟಿ ಕಾನೂನು ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಕೆ.ಎಸ್. ಬಗಾಲೆ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಮಾತನಾಡುವರು.
ಬೆಂಬಲ ಬೆಲೆ ಯೋಜನೆಯಡಿ ಉದ್ದಿನ ಕಾಳು ಖರೀದಿ
*********************************************
ಕಲಬುರಗಿ,ನ.25.(ಕ.ವಾ)-ಮುಂಗಾರು ಹಂಗಾಮಿನಲ್ಲಿ 2017-18ನೇ ಸಾಲಿನ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ. ಗುಣಮಟ್ಟದ ಉದ್ದಿನ ಕಾಳನ್ನು ಪ್ರತಿ ಕ್ವಿಂಟಲ್‍ಗೆ 5400ರೂ.ಗಳ ದರದಲ್ಲಿ ನವೆಂಬರ್ 24ರಿಂದ ಡಿಸೆಂಬರ್ 3ರವರೆಗೆ ಹತ್ತು ದಿನಗಳ ಕಾಲ ಖರೀದಿಸಲು ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ ಎಂದು ಟಾಸ್ಕ್‍ಪೋರ್ಸ್ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದ್ದಾರೆ.
ಎಲ್ಲ ರೈತ ಬಾಂದವರು ತಾವು ಬೆಳೆದ ಉದ್ದಿನ ಕಾಳನ್ನು ಈಗಾಗಲೇ ಪ್ರಾರಂಭಿಸಿರುವ ಖರೀದಿ ಕೇಂದ್ರಗಳಲ್ಲಿ ಅವಶ್ಯಕ ದಾಖಲೆಗಳನ್ನು ಸಲ್ಲಿಸಿ ಹೆಸರು ನೋಂದಾಯಿಸಿ ಮಾರಾಟ ಮಾಡಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಬಲಾ ಯೋಜನೆ: ಸ್ವಯಂ ಸೇವಾ ಸಂಸ್ಥೆಗಳಿಂದ ಅರ್ಜಿ ಅಹ್ವಾನ
********************************************************
ಕಲಬುರಗಿ,ನ.25.(ಕ.ವಾ)-ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ 2017-18ನೇ ಸಾಲಿಗೆ ಅನುಷ್ಠಾನಗೊಳ್ಳುತ್ತಿರುವ ಸಬಲಾ ಯೋಜನೆ ಅಡಿಯಲ್ಲಿ ಪೌಷ್ಟಿಕೇತರ ಅಂಶಗಳ ಅನುಷ್ಠಾನಕ್ಕಾಗಿ ಅರ್ಹ ಸ್ವಯಂ ಸೇವಾ ಸಂಸ್ಥೆಗಳನ್ನು ಆಯ್ಕೆ ಮಾಡಬೇಕಾಗಿದೆ. ಇದಕ್ಕಾಗಿ ಕಲಬುರಗಿ ಜಿಲ್ಲೆಯ ಅರ್ಹ ಸ್ವಯಂ ಸೇವಾ ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಅರ್ಜಿಯೊಂದಿಗೆ ಅವಶ್ಯಕ ದಾಖಲೆಗಳನ್ನು ದ್ವಿಪ್ರತಿಯಲ್ಲಿ ಲಗತ್ತಿಸಿ ಡಿಸೆಂಬರ್ 5ರೊಳಗಾಗಿ ಕಲಬುರಗಿ ಚಂದ್ರಶೇಖರ ಪಾಟೀಲ ಕ್ರೀಡಾಂಗಣ ಎದುರಿಗೆಯಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕಾರ್ಯಾಲಯದಲ್ಲಿ ಸಲ್ಲಿಸಬೇಕು. ಅರ್ಹ ಸ್ವಯಂ ಸೇವಾ ಸಂಸ್ಥೆಗಳನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಜಿಲ್ಲಾ ಮಟ್ಟದ ಸಮಿತಿಯ ಮೂಲಕ ಆಯ್ಕೆ ಮಾಡಲಾಗುವುದು. ಜಿಲ್ಲಾಧಿಕಾರಿಗಳ ತೀರ್ಮಾನವೇ ಅಂತಿಮವಾಗಿರುತ್ತದೆ.
ಸ್ವಯಂ ಸೇವಾ ಸಂಸ್ಥೆಗಳು ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆ ವಿವರ ಹಾಗೂ ಮತ್ತಿತರ ಮಾಹಿತಿಗಾಗಿ ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯಾಲಯವನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-278659ನ್ನು ಸಂಪರ್ಕಿಸಲು ಕೋರಲಾಗಿದೆ.
ರಾಜೀವ ಆವಾಸ್ ಯೋಜನೆ ಮನೆ ನಿರ್ಮಾಣ ಕಾಮಗಾರಿ ಹಾಗೂ
*********************************************************
ರೊಚ್ಚು ನೀರು ಶುದ್ಧೀಕರಣ ಘಟಕದ ಉದ್ಘಾಟನಾ ಸಮಾರಂಭ ಮುಂದೂಡಿಕೆ
******************************************************************
ಕಲಬುರಗಿ,ನ.25.(ಕ.ವಾ)-ಕೇಂದ್ರ ಪುರಸ್ಕøತ ರಾಜೀವ ಆವಾಸ್ ಯೋಜನೆಯ ಅಡಿಯಲ್ಲಿ ಜಫರಾಬಾದನಲ್ಲಿ ನಿರ್ಮಿಸಿರುವ 1024 ಮನೆಗಳ ನಿರ್ಮಾಣ ಕಾಮಗಾರಿಯ ಹಾಗೂ ನಂದಿಕೂರ ಗ್ರಾಮದಲ್ಲಿ 40 ಎಂ.ಎಲ್.ಡಿ. ಸಾಮಥ್ರ್ಯದ ರೊಚ್ಚು ನೀರು ಶುದ್ಧೀಕರಣ ಘಟಕದ ಉದ್ಘಾಟನಾ ಸಮಾರಂಭವನ್ನು ನವೆಂಬರ್ 27ರಂದು ನಿಗದಿಪಡಿಸಲಾಗಿತ್ತು. ಈ ಎರಡೂ ಸಮಾರಂಭಗಳು ಅನಿವಾರ್ಯ ಕಾರಣದಿಂದ ಮುಂದೂಡಲಾಗಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತ ಪಿ. ಸುನೀಲಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನವೆಂಬರ್ 26 ಹಾಗೂ 27ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
*************************************************************
ಕಲಬುರಗಿ,ನ.25.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದಿಂದ ನವೆಂಬರ್ 26ರಂದು ರವಿವಾರ 11ಕೆ.ವಿ. ಸಿನಿಮಾ ಫೀಡರ ವ್ಯಾಪ್ತಿಯಲ್ಲಿ 33ಕೆ.ವಿ.ಎ. ವಿದ್ಯುತ್ ಕಂಬಗಳ ಅಳವಡಿಸುವ ಪ್ರಯುಕ್ತ ಹಾಗೂ ನವೆಂಬರ್ 27ರಂದು ಸೋಮವಾರ 11 ಸಿದ್ದೇಶ್ವರ ಫೀಡರ್ ವ್ಯಾಪ್ತಿಯಲ್ಲಿ ಯು.ಜಿ. ಕೇಬಲ ಕಾರ್ಯಕೈಗೊಳ್ಳುವ ಪ್ರಯುಕ್ತ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.
11ಕೆ.ವಿ. ಸಿನಿಮಾ ಫೀಡರ್: ನವೆಂಬರ್ 26ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಸೂಪರ ಮಾರ್ಕೆಟ್, ಕಾಮತ ಹೋಟೆಲ್, ಶಹಾ ಬಜಾರ್ ಜಿ.ಡಿ.ಎ., ಕಟಗರಪುರ, ಪ್ರಕಾಶ ಟಾಕೀಸ್, ತರಕಾರಿ ಮಾರ್ಕೆಟ್, ಲೋಹಾರಗಲ್ಲಿ, ಐಯ್ಯರವಾಡಿ, ಸಿಟಿ ಬಸ್ ನಿಲ್ದಾಣ, ಮಹಾಲಕ್ಷ್ಮೀ ಲೇಔಟ್, ಮಾರವಾಡಿ ಗಲ್ಲಿ, ಟ್ಬಂಡಾ ಬಜಾರ, ಹನುಮಾನ ಟೆಂಪಲ್, ಸರಸ್ವತಿ ಗೋದಾಮ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.
11ಕೆ.ವಿ. ಸಿದ್ದೇಶ್ವರ ಫೀಡರ್: ನವೆಂಬರ್ 27ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಬಡೇಪೂರ ಕಾಲೋನಿ, ದರ್ಶನ ಅಪಾರ್ಟ್‍ಮೆಂಟ್, ಪ್ರಗತಿ ಕಾಲೋನಿ, ಕೆ,ಹೆಚ್.ಬಿ. ಕಾಂಪ್ಲೇಕ್ಸ್, ಖರ್ಗೆ ಪೆಟ್ರೋಲ್ ಪಂಪ್ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.
ಕುಡಿಯುವ ನೀರಿನ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ
***********************************************************
ಕಲಬುರಗಿ,ನ.25.(ಕ.ವಾ.)-ಜಿಲ್ಲೆಯಲ್ಲಿ ಕೈಗೆತ್ತಿಕೊಳ್ಳಲಾದ ಕುಡಿಯುವ ನೀರಿನ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕೆಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾವ ಮಲಾಜಿ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಶನಿವಾರ ಕಲಬುರಗಿ ಜಿಲ್ಲಾ ಪಂಚಾಯತ ಹೊಸ ಸಭಾಂಗಣದಲ್ಲಿ ನಡೆದ ಜಿಲ್ಲಾ ಪಂಚಾಯಿತಿಯ ಸಾಮಾನ್ಯ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಕಳೆದ ವರ್ಷ ಕುಡಿಯುವ ನೀರಿನ ಯೋಜನೆಗಳಿಗಾಗಿ 12 ಕೋಟಿ ರೂ. ಅನುದಾನವನ್ನು ಜಿಲ್ಲಾ ಪಂಚಾಯಿತಿಗೆ ಬಿಡುಗಡೆಯಾಗಿದ್ದು, ಯಾವುದೇ ಕಾರಣಕ್ಕೂ ಅನುದಾನ ಉಳಿಸದಂತೆ ಕ್ರಿಯಾ ಯೋಜನೆ ಅನ್ವಯ ನಿಗದಿತ ಅವಧಿಯೊಳಗಾಗಿ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕೆಂದು ತಿಳಿಸಿದರು.
ಕಲಬುರಗಿ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯಿತಿಯ ಅಡಿಯಲ್ಲಿ ಗ್ರಾಮೀಣ ಭಾಗದಲ್ಲಿ ನಿರ್ಮಿಸಲಾಗುತ್ತಿರುವ ರಸ್ತೆಗಳಲ್ಲಿ ಗುಣಮಟ್ಟ ಕಾಪಾಡಿಕೊಂಡು ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಿ, ರಸ್ತೆ ಸಂಚಾರಕ್ಕೆ ಮುಕ್ತಗೊಳಿಸಬೇಕು.
ಹಿಂಗಾರು ಹಂಗಾಮಿನಲ್ಲಿ ಬೆಳೆ ಬೆಳೆಯುವ ರೈತರಿಗೆ ಅವರ ಬೇಡಿಕೆಯಂತೆ ರಸಗೊಬ್ಬರವನ್ನು ಪೂರೈಸಬೇಕು. ಈ ನಿಟ್ಟಿನಲ್ಲಿ ಅಗತ್ಯ ದಾಸ್ತಾನು ಇಟ್ಟುಕೊಳ್ಳುವಂತೆ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ವಿವಿಧ ಇಲಾಖೆಯ ಅಧಿಕಾರಿಗಳು ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ಕೇಳಿರುವ ಮಾಹಿತಿಯನ್ನು ನೀಡುತ್ತಿಲ್ಲ ಎಂಬ ಸದಸ್ಯರ ಆರೋಪಿಸುತ್ತಿದ್ದು, ಈ ನಿಟ್ಟಿನಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು ಸದಸ್ಯರ ಕೋರಿಕೆಯಂತೆ ಮಾಹಿತಿಯನ್ನು ನೀಡಬೇಕು ಎಂದು ಅಧ್ಯಕ್ಷರು ಸೂಚಿಸಿದರು. ಕೃಷಿ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ಕೇಳಿ 7 ತಿಂಗಳಾದರೂ ಇದುವರೆಗೆ ಮಾಹಿತಿ ನೀಡಿಲ್ಲ ಎಂದು ಸದಸ್ಯೆ ವಿಜಯಲಕ್ಷ್ಮೀ ಹಾಗರಗಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿ ಸಿ.ಇ.ಓ. ಸಂಬಂಧಿಸಿದ ಅಧಿಕಾರಿಗಳಿಗೆ ನೋಟೀಸು ನೀಡಿ ಅವರಿಂದ ಉತ್ತರ ಪಡೆಯಲಾಗುವುದು ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಮಾತನಾಡಿ, ಜಿಲ್ಲೆಯಲ್ಲಿರುವ ಎಲ್ಲಾ ವಸತಿ ನಿಲಯಗಳಲ್ಲಿ ಈ ಹಿಂದೆ ಸೂಚಿಸಿರುವಂತೆ ಬಯೋಮೆಟ್ರಿಕ್ ಅಳವಡಿಸಿ ದಿನನಿತ್ಯ ಪರಿಶೀಲನೆ ನಡೆಸಬೇಕು. ಒಂದು ವಾರದ ಒಳಗಾಗಿ ತಾಲೂಕಿನ ಎಲ್ಲಾ ವಸತಿ ನಿಲಯಗಳಲ್ಲಿ ವಾಸವಾಗಿರುವ ವಿದ್ಯಾರ್ಥಿಗಳ ಹಾಜರಾತಿಯ ಸಂಪೂರ್ಣ ಮಾಹಿತಿಯನ್ನು ನೀಡಬೇಕು. ವಸತಿ ನಿಲಯಗಳಿಗೆ ಭೇಟಿ ನೀಡಿ ಅಲ್ಲಿರುವ ಶೌಚಾಲಯ, ವಿದ್ಯಾರ್ಥಿಗಳಿಗೆ ನೀಡುತ್ತಿರುವ ಆಹಾರದ ಪಟ್ಟಿ ಕುರಿತು ಪರಿಶೀಲನೆ ಮಾಡಬೇಕೆಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಪ್ರವೀಣ ಪ್ರಿಯಾ, ಜಿ.ಪಂ. ಸದಸ್ಯರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ಬಾಟಲಿಯಿಂದ ಹೊಡೆದು ಗಾಯಗೊಳಿಸಿದ ಆರೋಪಿಗೆ 6 ತಿಂಗಳು ಶಿಕ್ಷೆ
*************************************************************
ಕಲಬುರಗಿ,ನ.25.(ಕ.ವಾ)-ಫಿರ್ಯಾದಿ ಮಹೇಶನೊಂದಿಗೆ ಜಗಳ ತೆಗೆದು ಜಾತಿ ನಿಂದನೆ ಮಾಡಿದಲ್ಲದೇ ಬೀಯರ್ ಬಾಟಲಿಯಿಂದ ಹೊಡೆದು ಗಾಯಗೊಳಿಸಿದ ಕಲಬುರಗಿ ತಾಲೂಕಿನ ಹರಕಂಚಿಯ ಅಮೃತ ಸಾಯಬಣ್ಣ ವಾರಿಕ ಇವರಿಗೆ 6 ತಿಂಗಳ ಸಾದಾ ಶಿಕ್ಷೆ ಮತ್ತು 5000ರೂ.ಗಳ ದಂಡ ವಿಧಿಸಿ ಕಲಬುರಗಿ ಎರಡನೇ ಅಪರ ಸೆಷನ್ ನ್ಯಾಯಾಲಯದ ನ್ಯಾಯಾಧೀಶೆ ಮನಗೋಳಿ ಪ್ರೇಮಾವತಿ ತೀರ್ಪು ನೀಡಿ ಆದೇಶ ಹೊರಡಿಸಿರುತ್ತಾರೆ.
ಆರೋಪಿ ಅಮೃತ ಸಾಯಣ್ಣ ವಾರಿಕ ಇತನು 2015ರ ಜೂನ್ 27ರಂದು ಸಾಯಂಕಾಲ ಮಹಾಗಾಂವ ಠಾಣೆ ವ್ಯಾಪ್ತಿಯಲ್ಲಿ ಬರುವ ಮಹಾಗಾಂವ ಕ್ರಾಸ್‍ನ ಲಕ್ಷ್ಮೀ ಫೋಟೋ ಸ್ಟುಡಿಯೋ ಹತ್ತಿರದ ರಸ್ತೆಯಲ್ಲಿ ಜಗನ್ನಾಥನೊಂದಿಗೆ ಜಗಳವಾಡುತ್ತಿದ್ದಾಗ ಸ್ಥಳದಲ್ಲಿದ್ದ ವಿನೋದ ಈ ರೀತಿ ಜಗಳ ಮಾಡುವುದು ಸರಿಯಲ್ಲ ಎಂದು ಹೇಳಿದ. ಅದೇ ಸಿಟ್ಟಿನಿಂದ ಆರೋಪಿಯು ಅಂದು ರಾತ್ರಿ 8 ಗಂಟೆಗೆ ಮಹೇಶ, ವಿನೋದ ಮತ್ತು ಜಗನ್ನಾಥ ಅವರೊಂದಿಗೆ ಜಗಳಕ್ಕೆ ಬಿದ್ದು, ಜಾತಿ ನಿಂದನೆ ಮಾಡಿ ಫಿರ್ಯಾದಿ ಮಹೇಶನಿಗೆ ಬಾಟಲಿಯಿಂದ ಕುತ್ತಿಗೆ ಮೇಲೆ ಹೊಡೆದು ಗಾಯಗೊಳಿಸಿರುತ್ತಾನೆ. ಈ ಸಂಬಂಧ ಮಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿತನು ಕಲಂ 324, 504 ಐಪಿಸಿ ಮತ್ತು 3(1)(10) ಎಸ್.ಸಿ./ಎಸ್.ಟಿ. ಪಿ.ಎ. ಕಾಯ್ದೆ ಅಡಿಯಲ್ಲಿ ಅಪರಾಧ ಮಾಡಿದ್ದಾನೆಂದು ದೋಷಾರೋಪಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.
ಪ್ರಕರಣದ ವಿಚಾರಣೆ ಮಾಡಿದ ನ್ಯಾಯಾಧೀಶರು ಆರೋಪಿತನು ತಪ್ಪಿತಸ್ಥನೆಂದು ತೀರ್ಮಾನಿಸಿ ಆರೋಪಿ ಅಮೃತ ಸಾಯಬಣ್ಣ ವಾರಿಕ ಇವರಿಗೆ ಕಲಂ 324 ಐ.ಪಿ.ಸಿ. ಅಡಿಯ ಅಪರಾಧಕ್ಕಾಗಿ 6 ತಿಂಗಳ ಸಾಧಾ ಶಿಕ್ಷೆ ಮತ್ತು 4000ರೂ. ದಂಡ ಹಾಗೂ ಕಲಂ 504 ಐ.ಪಿ.ಸಿ. ಅಡಿಯಲ್ಲಿ ಅಪರಾಧಕ್ಕಾಗಿ 3 ತಿಂಗಳ ಸಾದಾ ಶಿಕ್ಷೆ ಮತ್ತು 1000ರೂ.ಗಳ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಪರವಾಗಿ ಕಲಬುರಗಿ ವಿಶೇಷ ಸರ್ಕಾರಿ ಅಭಿಯೋಜಕ ಸಫೀರ್ ಅಹ್ಮದ್ ಅವರು ವಾದವನ್ನು ಮಂಡಿಸಿದರು.












ಹೀಗಾಗಿ ಲೇಖನಗಳು news and photo Date: 25--11--2017

ಎಲ್ಲಾ ಲೇಖನಗಳು ಆಗಿದೆ news and photo Date: 25--11--2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ news and photo Date: 25--11--2017 ಲಿಂಕ್ ವಿಳಾಸ https://dekalungi.blogspot.com/2017/11/news-and-photo-date-25-11-2017.html

Subscribe to receive free email updates:

0 Response to "news and photo Date: 25--11--2017"

ಕಾಮೆಂಟ್‌‌ ಪೋಸ್ಟ್‌ ಮಾಡಿ