ಶೀರ್ಷಿಕೆ : ಗ್ರಾಮ ಪಂಚಾಯತಿ ಚುನಾವಣೆ : ನ. 27 ರಿಂದ ಮದ್ಯಪಾನ ನಿಷೇಧ
ಲಿಂಕ್ : ಗ್ರಾಮ ಪಂಚಾಯತಿ ಚುನಾವಣೆ : ನ. 27 ರಿಂದ ಮದ್ಯಪಾನ ನಿಷೇಧ
ಗ್ರಾಮ ಪಂಚಾಯತಿ ಚುನಾವಣೆ : ನ. 27 ರಿಂದ ಮದ್ಯಪಾನ ನಿಷೇಧ
ಕೊಪ್ಪಳ ನ. 25 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಯರಗೇರಾ, ಗಂಗಾವತಿ ತಾಲೂಕಿನ ಗೌರಿಪುರ, ಚಿಕ್ಕಬೆಣಕಲ್ ಮತ್ತು ಮರಳಿ ಗ್ರಾಮ ಪಂಚಾಯತಿಗಳಲ್ಲಿ ವಿವಿಧ ಕಾರಣಗಳಿಂದ ಆಕಸ್ಮಿಕವಾಗಿ ತೆರವಾಗಿರುವ ಸದಸ್ಯರ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಗ್ರಾ.ಪಂ ವ್ಯಾಪ್ತಿಯಲ್ಲಿ ನ. 27 ರಿಂದ ಡಿ. 20 ರವರೆಗೆ ಮದ್ಯಪಾನ ನಿಷೇಧಿಸಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಆದೇಶ ಹೊರಡಿಸಿದ್ದಾರೆ.
ವಿವಿಧ ಕಾರಣಗಳಿಂದ ಆಕಸ್ಮಿಕವಾಗಿ ತೆರವಾಗಿರುವ ಗ್ರಾಮ ಪಂಚಾಯತಿ ಸದಸ್ಯರ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ, ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಪಾಲನೆಗಾಗಿ ಹಾಗೂ ಸಾರ್ವಜನಿಕ ಹಿತಾಸಕ್ತಿ ಕಾಪಾಡುವ ದೃಷ್ಠಿಯಿಂದ, ಮದ್ಯಪಾನ, ಮದ್ಯ ಮಾರಾಟವನ್ನು ನ. 27 ರಿಂದ ಡಿ. 20 ರವರೆಗೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಯರಗೇರಾ, ಗಂಗಾವತಿ ತಾಲೂಕಿನ ಗೌರಿಪುರ, ಚಿಕ್ಕಬೆಣಕಲ್ ಮತ್ತು ಮರಳಿ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ನಿಷೇಧಿಸಲಾಗಿದೆ. ಇದರನ್ವಯ ನಿಷೇಧಿತ ವ್ಯಾಪ್ತಿಯಲ್ಲಿನ ಎಲ್ಲಾ ಮದ್ಯದ ಅಂಗಡಿಗಳನ್ನು ಮತ್ತು ಮದ್ಯ ತಯಾರಿಕಾ ಘಟಕಗಳನ್ನು ಅದರ ಮಾಲೀಕರು, ಅಧಿಭೋಗದಾರರು ಮತ್ತು ವ್ಯವಸ್ಥಾಪಕರು ಮುಚ್ಚಬೇಕು. ಹಾಗೂ ಮೊಹರು ಮಾಡಿ ಅದರ ಕೀಲಿಗಳನ್ನು ಸಂಬಂಧಪಟ್ಟ ತಹಶೀಲ್ದಾರರ ಸುಪರ್ದಿಗೆ ಒಪ್ಪಿಸಬೇಕು ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಗ್ರಾಮ ಪಂಚಾಯತಿ ಚುನಾವಣೆ : ನ. 27 ರಿಂದ ಮದ್ಯಪಾನ ನಿಷೇಧ
ಎಲ್ಲಾ ಲೇಖನಗಳು ಆಗಿದೆ ಗ್ರಾಮ ಪಂಚಾಯತಿ ಚುನಾವಣೆ : ನ. 27 ರಿಂದ ಮದ್ಯಪಾನ ನಿಷೇಧ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಗ್ರಾಮ ಪಂಚಾಯತಿ ಚುನಾವಣೆ : ನ. 27 ರಿಂದ ಮದ್ಯಪಾನ ನಿಷೇಧ ಲಿಂಕ್ ವಿಳಾಸ https://dekalungi.blogspot.com/2017/11/27_25.html
0 Response to "ಗ್ರಾಮ ಪಂಚಾಯತಿ ಚುನಾವಣೆ : ನ. 27 ರಿಂದ ಮದ್ಯಪಾನ ನಿಷೇಧ"
ಕಾಮೆಂಟ್ ಪೋಸ್ಟ್ ಮಾಡಿ