NEWS AND PHOTO DATE: 21--11--2017

NEWS AND PHOTO DATE: 21--11--2017 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು NEWS AND PHOTO DATE: 21--11--2017, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : NEWS AND PHOTO DATE: 21--11--2017
ಲಿಂಕ್ : NEWS AND PHOTO DATE: 21--11--2017

ಓದಿ


NEWS AND PHOTO DATE: 21--11--2017

ಕಾನೂನಿನ ಸಾಧಕ ಬಾಧಕಗಳನ್ನು ತಿಳಿಯಲು ಕರೆ
**********************************************
ಕಲಬುರಗಿ,ನ,21(ಕ.ವಾ.)-ವಿದ್ಯಾರ್ಥಿಗಳು ತಮ್ಮ ಓದಿನೊಂದಿಗೆ ಸರ್ಕಾರ ರೂಪಿಸಿರುವ ಕಾನೂನುಗಳ ಸಾಧಕ-ಬಾಧಕಗಳ ಬಗ್ಗೆ ತಿಳಿದು ಗ್ರಾಮೀಣ ಭಾಗದಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ತಿಳಿಸಿದರು.
ಅವರು ಮಂಗಳವಾರ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿಶ್ವವಿದ್ಯಾಲಯ ಬೆಂಗಳೂರು ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಾಹಿತಿ ಹಕ್ಕು ಕಾರ್ಯಕರ್ತರ ಸಂಘ ಕಲಬುರಗಿ, ಕರ್ನಾಟಕ ಸಕಾಲ ವಾಚ್ ರಾಷ್ಟ್ರೋತ್ಥಾನ ಸಂಕಲ್ಪ ಟ್ರಸ್ಟ್ ಹುಬ್ಬಳ್ಳಿ ಇವುಗಳ ಸಂಯುಕ್ತಾಶ್ರಯದಲ್ಲಿ ಜೇವರ್ಗಿ ಕಾಲೋನಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಸಕಾಲ ಕಾಯ್ದೆ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಜಾರಿಗೆ ತಂದಿರುವ ಸಕಾಲ ಕಾಯ್ದೆ ದೇಶದಲ್ಲೇ ಮಾದರಿಯಾಗಿದ್ದು, ಇಂಥಹ ಕಾಯ್ದೆ ಬೇರೆ ದೇಶದಲ್ಲಿ ಜಾರಿಯಲ್ಲಿಲ್ಲ. ಬೇರೆ ದೇಶದವರು ಈ ಕಾಯ್ದೆಯ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳು ಸಕಾಲ ಕಾಯ್ದೆಯ ಪ್ರಯೋಜನಗಳನ್ನು ತಿಳಿದು ಗ್ರಾಮೀಣ ಭಾಗದಲ್ಲಿ ತಿಳಿಸಬೇಕು. ಸರ್ಕಾರದಿಂದ ಸಿಗುವ ಸೇವೆಗಳನ್ನು ನಿಗದಿತ ಸಮಯದಲ್ಲಿ ದೊರಕಿಸಿ ನ್ಯಾಯ ನೀಡುವ ಏಕೈಕ ಕಾಯ್ದೆ ಇದಾಗಿದೆ. ಸರ್ಕಾರ ಜಾರಿಗೊಳಿಸಿರುವ ಕಾನೂನುಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ಪ್ರಯೋಜನಗಳ ಬಗ್ಗೆ ತಿಳಿಸುವುದರಿಂದ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವಾಗುವುದು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್.ಮಾಣಿಕ್ಯ ಮಾತನಾಡಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಸಾರ್ವಜನಿಕರಿಗೆ ದಿನನಿತ್ಯದಲ್ಲಿ ಅವಶ್ಯಕವಿರುವ ಕಾನೂನುಗಳ ಬಗ್ಗೆ ಜಾಗೃತಿ ಮೂಡಿಸಿ ಉಚಿತ ಕಾನೂನು ಸಲಹೆಗಳನ್ನು ನೀಡುತ್ತದೆ. ಸಮಾಜವನ್ನು ಸ್ವಾಸ್ಥ್ಯ ಮಾರ್ಗದಲ್ಲಿ ಕೊಂಡೊಯ್ಯಲು ಕಾನೂನುಗಳನ್ನು ರೂಪಿಸಲಾಗಿದೆ. ಅವುಗಳನ್ನು ಪರಿಪಾಲಿಸದಿದ್ದಲ್ಲಿ ಶಿಕ್ಷೆ ಅನುಭವಿಸಬೇಕಾಗುತ್ತದೆ. ಜನನ-ಮರಣ, ಬಾಲ್ಯವಿವಾಹ, ಗ್ರಾಹಕರ ಹಿತರಕ್ಷಣೆ, ಸಕಾಲ, ಮಾಹಿತಿ ಹಕ್ಕು ಕಾಯ್ದೆಗಳ ಕುರಿತು ಎಲ್ಲರೂ ತಿಳಿಯುವುದು ಅಗಶ್ಯಕವಿದೆ ಎಂದರು.
ಮಾಹಿತಿ ಹಕ್ಕು ಕಾರ್ಯಕರ್ತ ಸಿದ್ರಾಮಯ್ಯ ಹಿರೇಮಠ ಮಾತನಾಡಿ, ಸರ್ಕಾರಿ ವ್ಯವಸ್ಥೆಯಲ್ಲಿ ಸಾರ್ವಜನಿಕರಿಗೆ ಸೇವೆ ನೀಡಲು ಅನುಸರಿಸುತ್ತಿದ್ದ ವಿಳಂಬ ಧೋರಣೆ ಹಾಗೂ ಭ್ರಷ್ಟಾಚಾರವನ್ನು ತಡೆಗಟ್ಟಲು ಸರ್ಕಾರ ಸಕಾಲ ಕಾಯ್ದೆಯನ್ನು ಕಾನೂನು ರೂಪದಲ್ಲಿ ಜಾರಿಗೊಳಿಸಿದೆ. ಸರ್ಕಾರಿ ಸೇವೆ ಪಡೆಯಲು ಸಕಾಲದಲ್ಲಿ ಅರ್ಜಿ ಸಲ್ಲಿಸಿದರೆ ನಿಗದಿತ ಅವಧಿಯಲ್ಲಿ ಸೇವೆ ಒದಗಿಸಲಾಗುತ್ತದೆ. ಸೇವೆ ಒದಗಿಸದಿದ್ದಲ್ಲಿ ಯಾವ ಅಧಿಕಾರಿ ಅಥವಾ ಸಿಬ್ಬಂದಿಯಿಂದ ಸೇವೆ ವಿಳಂಬವಾಗಿದೆಯೋ ಅವರ ಸಂಬಳದಿಂದ 20 ರಿಂದ 500 ರೂ.ಗಳ ವರೆಗೆ ದಂಡ ಕಡಿತಗೊಳಿಸಿ ಅರ್ಜಿದಾರರಿಗೆ ನೀಡಲಾಗುವುದು ಎಂದರು.
ಕಲಬುರಗಿ ಜಿಲ್ಲಾ ಸಕಾಲ ಸಂಚಾಲಕಿ ವಿದ್ಯಾ ದೇವಾಪುರ ಮಾತನಾಡಿ, ರಾಜ್ಯದಲ್ಲಿ ವಿನೂತನ ಸಕಾಲ ಕಾಯ್ದೆ ಜಾರಿಗೊಳಿಸಿದಾಗ 11 ಇಲಾಖೆಗಳ 151 ಸೇವೆಗಳನ್ನು ನೀಡಲಾಗುತ್ತಿತ್ತು. ಸಧ್ಯ 61 ಇಲಾಖೆಗಳ 760 ಸೇವೆಗಳು ಲಭ್ಯವಿದ್ದು, ಸಾರ್ವಜನಿಕರು ಯಾವುದೇ ಸೇವೆಗಾಗಿ ನೇರವಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ನಾಡಕಚೇರಿಗಳಲ್ಲಿ ಸೇವೆ ಪಡೆಯಲು ಸಲ್ಲಿಸಿದ ಅರ್ಜಿಯ ಸ್ಥಿತಿಗತಿಯನ್ನು ತಿತಿತಿ.sಚಿಞಚಿಟಚಿ.ಞಚಿಡಿ.ಟಿiಛಿ.iಟಿ ವೆಬ್‍ಸೈಟ್‍ನಿಂದ ಅಥವಾ ಕಾಲ್ ಸೆಂಟರ್ ಸಂಖ್ಯೆ 08044554455ಗೆ ಕರೆ ಮಾಡುವುದರ ಮೂಲಕ ತಿಳಿದುಕೊಳ್ಳಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಡಿ. ನಾಯಕ, ವಕೀಲ ಬಿ.ಎಸ್. ಪಾಟೀಲ, ಎನ್.ಎಸ್.ಎಲ್.ಐ. ವಿಶ್ವವಿದ್ಯಾಲಯದ ಸಂಶೋಧಕ ಶೈಲೇಂದ್ರಕುಮಾರ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಚಂದ್ರಕಾಂತ ಸನಾದಿ, ಜಾನ್ ವೆಸ್ಲಿ ಮತ್ತಿತರರು ಪಾಲ್ಗೊಂಡಿದ್ದರು.

ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
******************************
ಕಲಬುರಗಿ,ನ.21.(ಕ.ವಾ):ಕಲಬುರಗಿ ಮಹಾನಗರ ಪಾಲಿಕೆಯ ಶೇ. 24.10 ನಿಧಿಯಿಂದ ಸ್ವರ್ಧಾತ್ಮಕ ಪರೀಕ್ಷೆ ಎದುರಿಸಲು ಹಾಗೂ ಪುಸ್ತಕಗಳ ಖರೀದಿಗಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಸಹಾಯಧನ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಪಿ.ಸುನೀಲಕುಮಾರ ತಿಳಿಸಿದ್ದಾರೆ.
ಅಭ್ಯರ್ಥಿಗಳು ಮಹಾನಗರ ಪಾಲಿಕೆ ವ್ಯಾಪ್ತಿಯ ನಿವಾಸಿಯಾಗಿರಬೇಕು. ಯಾವುದೇ ಪ್ರತಿಷ್ಠಿತ ವಿಶ್ವವಿದ್ಯಾಲಯದಿಂದ ಪದವಿ ಪಡೆದ 21 ರಿಂದ 35 ವರ್ಷ ವಯೋಮಿತಿಯ ಕೆ.ಎ.ಎಸ್ ಅಥವಾ ಐ.ಎ.ಎಸ್ ಆಕಾಂಕ್ಷಿಯಾಗಿರಬೇಕು. ಅಭ್ಯರ್ಥಿಗಳು ಅರ್ಜಿಯೊಂದಿಗೆ ಎಸ್.ಎಸ್.ಎಲ್.ಸಿ. ಮತ್ತು ಪದವಿ ಅಂಕಪಟ್ಟಿ, ಚುನಾವಣಾ ಗುರುತಿನ ಚೀಟಿ ಮತ್ತು ಆಧಾರ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣಪತ್ರ., 3 ಪಾಸ್‍ಪೋರ್ಟ್ ಸೈಜ್ ಭಾವಚಿತ್ರಗಳನ್ನು ಲಗತ್ತಿಸಿ ಸಲ್ಲಿಸಬೇಕು. ಅಭ್ಯರ್ಥಿಗಳು ಸಹಾಯಧನ ಪಡೆಯಲು ಪಾಲಿಕೆಯಿಂದ ಏರ್ಪಡಿಸುವ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಪರಿಶಿಷ್ಟ ಜಾತಿ, ಪಂಗಡದ ಅಂಗವಿಕಲ ಅಭ್ಯರ್ಥಿಗಳಿಗೆ 5 ಸ್ಥಾನಗಳನ್ನು ಮೀಸಲಿಡಲಾಗಿದೆ.
ಅಭ್ಯರ್ಥಿಗಳು ಅರ್ಜಿಗಳನ್ನು ಕಲಬುರಗಿಯ ಮಹಾನಗರ ಪಾಲಿಕೆಯ ಇಂದಿರಾ ಸ್ಮಾರಕ ಭವನ (ಟೌನ್‍ಹಾಲ್)ದಲ್ಲಿ ನವೆಂಬರ್ 23ರಿಂದ ಪ್ರತಿದಿನ ಬೆಳಿಗ್ಗೆ 10.30 ರಿಂದ ಸಂಜೆ 5.30 ಗಂಟೆಯವರೆಗೆ (ಸಾರ್ವಜನಿಕ ರಜೆಗಳನ್ನು ಹೊರತುಪಡಿಸಿ) ಪಡೆಯಬೇಕು. ಅರ್ಜಿ ಸಲ್ಲಿಸಲು ಡಿಸೆಂಬರ್ 7 ಕೊನೆಯ ದಿನವಾಗಿದೆ.
ಅರ್ಹತಾ ಪರೀಕ್ಷೆಯು ಡಿಸೆಂಬರ್ 28ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಜರುಗಲಿದೆ. ಅಭ್ಯರ್ಥಿಗಳು ಪರೀಕ್ಷಾ ಪ್ರವೇಶ ಪತ್ರವನ್ನು ಡಿಸೆಂಬರ್ 26 ಹಾಗೂ 27ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಮಹಾನಗರ ಪಾಲಿಕೆ ಕಚೇರಿಯಲ್ಲಿ ಪಡೆಯಬೇಕು. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಮಹಾನಗರ ಪಾಲಿಕೆ ಪರಿಸರ ಅಭಿಯಂತರ ಮುನಾಫ್ ಪಟೇಲ್ ಅವರನ್ನು ಸಂಪರ್ಕಿಸಲು ಕೋರಲಾಗಿದೆ.

ಜಿಲ್ಲೆಯ ಎರಡು ಕೈಗಾರಿಕೆಗಳಿಗೆ ರಾಜ್ಯ ಪ್ರಶಸ್ತಿ
****************************************
ಕಲಬುರಗಿ,ನ.21.(ಕ.ವಾ):ಕರ್ನಾಟಕ ರಾಜ್ಯ ಸರ್ಕಾರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಬೃಹತ್, ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳ ಅತ್ಯುತ್ತಮ ಕೈಗಾರಿಕೋದ್ಯಮಿಗಳಿಗೆ ಕೊಡಮಾಡುವ ಸರ್. ಎಂ. ವಿಶ್ವೇಶ್ವರಯ್ಯಾ ಮ್ಯಾನುಫ್ಯಾಕ್ಚರಿಂಗ್ ಎಕ್ಸ್‍ಲೆನ್ಸಿ ಅವಾರ್ಡ್‍ಗೆ ಕಲಬುರಗಿ ಜಿಲ್ಲೆಯ ಬೃಹತ್ ಕೈಗಾರಿಕೆಯಾದ ಮೆ|| ಕಲಬುರಗಿ ಸಿಮೆಂಟ್ಸ್ ಪ್ರೈ.ಲಿ. (ಮೆಃ ವಿಕಾಟ್ ಸಾಗರ್ ಸಿಮೆಂಟ್ಸ್) ಘಟಕಕ್ಕೆ ರಾಜ್ಯ ಪ್ರಶಸ್ತಿ ಹಾಗೂ ಸಣ್ಣ ಕೈಗಾರಿಕೆಯಾದ ಮೆ|| ಮೂವೆಕ್ಸ್ ಇಂಡಸ್ಟ್ರೀಸ್ ಘಟಕಕ್ಕೆ ಜಿಲ್ಲಾ ಮಟ್ಟದ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿರುತ್ತದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಕಲಬುರಗಿ ಜಿಲ್ಲೆಯಿಂದ ಒಟ್ಟು ಎಂಟು ಕೈಗಾರಿಕೆಗಳ ಹೆಸರನ್ನು ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಇದರಲ್ಲಿ ಜಿಲ್ಲೆಯ ಇಬ್ಬರು ಕೈಗಾರಿಕೋದ್ಯಮಿಗಳು ಪ್ರಶಸ್ತಿಗೆ ಭಾಜನರಾಗುವ ಮೂಲಕ ಎಲ್ಲರ ಗಮನ ಸೆಳೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಪ್ರಸಕ್ತ ಸಾಲಿಗಾಗಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ರಾಜ್ಯದ 61 ಕೈಗಾರಿಕೋದ್ಯಮಿಗಳಿಗೆ ಪ್ರಶಸ್ತಿ ಘೋಷಿಸಿದೆ. ರಾಜ್ಯ ಸರ್ಕಾರವು ಕೈಗಾರಿಕೋದ್ಯಮಿಗಳ ಸಾಧನೆ ಗಮನಿಸಿ ಪ್ರಶಸ್ತಿ ನೀಡಿ ಅಭಿನಂದಿಸುತ್ತಿರುವುದು ಸಂತೋಷ ಉಂಟು ಮಾಡಿದೆ. ನವೆಂಬರ್ 24ರಂದು ಬೆಂಗಳೂರಿನ ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಅಂತರ್ ರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ ಆವರಣದಲ್ಲ್ಲಿ ಪ್ರಶಸ್ತಿ ವಿತರಣೆ ಸಮಾರಂಭ ನಡೆಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾತಿ ನಿಂದನೆ ಮಾಡಿದ ಆರೋಪಿಗೆ ಶಿಕ್ಷೆ
***********************************
ಕಲಬುರಗಿ,ನ.21.(ಕ.ವಾ)-ಜೆಸ್ಕಾಂ ಕಚೇರಿಯ ನೌಕರ ಶಿವಾನಂದ ಇತನೊಂದಿಗೆ ಜಗಳ ತೆಗೆದು ಅವಾಚ್ಯವಾಗಿ ಜಾತಿ ವಿಷಯ ತೆಗೆದು ಬೈದು ಜಾತಿ ನಿಂದನೆ ಮಾಡಿದಲ್ಲದೇ ಹೊಡೆಬಡೆ ಮಾಡಿದ ಆರೋಪಿ ಕಮಲಾಕರ ಮಲ್ಲಣ್ಣ ಗೋಳದ ಇವರಿಗೆ ಸಾದಾ ಶಿಕ್ಷೆ ಮತ್ತು ದಂಡ ವಿಧಿಸಿ ಕಲಬುರಗಿ ಎರಡನೇ ಅಪರ ಸೆಷನ್ ನ್ಯಾಯಾಲಯದ ನ್ಯಾಯಾಧೀಶೆ ಮನಗೋಳಿ ಪ್ರೇಮಾವತಿ ತೀರ್ಪು ನೀಡಿ ಆದೇಶ ಹೊರಡಿಸಿರುತ್ತಾರೆ.
ಆರೋಪಿಯಾದ ಕಮಲಾಪುರ ಮಲ್ಲಣ್ಣ ಗೋಳದ ಇತನು 2014ರ ನವೆಂಬರ್ 11ರಂದು ಬೆಳಿಗ್ಗೆ 10 ಗಂಟೆಗೆ ಕಲಬುರಗಿ ವ್ಯಾಪ್ತಿಯಲ್ಲಿ ಬರುವ ಕೆ.ಇ.ಬಿ. ಹತ್ತಿರದ ಶಿವಪುತ್ರ ಇತನ ಚಹಾ ಅಂಗಡಿ ಮುಂದೆ ನಿಂತುಕೊಂಡಾಗ ಅವಾಚ್ಯವಾಗಿ ಜಾತಿ ವಿಷಯ ತೆಗೆದು ಬೈದು ಜಾತಿ ನಿಂದನೆ ಮಾಡಿದಲ್ಲದೇ ಹೊಡೆಬಡೆ ಮಾಡಿರುತ್ತಾನೆ.
ಆರೋಪಿತನು ಕಲಂ 323, 504 ಐಪಿಸಿ ಮತ್ತು 3(1)(10) ಎಸ್.ಸಿ./ಎಸ್.ಟಿ. ಪಿ.ಎ. ಕಾಯ್ದೆ ಅಡಿಯಲ್ಲಿ ಅಪರಾಧ ಮಾಡಿದ್ದಾನೆಂದು ದೋಷಾರೋಪಣ ಪತ್ರವನ್ನು ಎರಡನೇ ಅಪರ ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.
ಪ್ರಕರಣದ ವಿಚಾರಣೆ ಮಾಡಿದ ನ್ಯಾಯಾಧೀಶರು ಆರೋಪಿತನು ತಪ್ಪಿತಸ್ಥನೆಂದು ತೀರ್ಮಾನಿಸಿ ಆರೋಪಿಯಾದ ಕಮಲಾಕರ ಮಲ್ಲಣ್ಣ ಗೋಳದ ಇವರಿಗೆ ಕಲಂ 504 ಐ.ಪಿ.ಸಿ. ಅಡಿಯ ಅಪರಾಧಕ್ಕಾಗಿ 6 ತಿಂಗಳ ಸಾಧಾ ಶಿಕ್ಷೆ ಮತ್ತು 1000ರೂ. ದಂಡ ಹಾಗೂ ಕಲಂ 3(1)(10) ಎಸ್.ಸಿ./ಎಸ್.ಟಿ. ಪಿ.ಎ. ಕಾಯ್ದೆ ಅಡಿಯಲ್ಲಿ ಅಪರಾಧಕ್ಕಾಗಿ 6 ತಿಂಗಳ ಸಾದಾ ಶಿಕ್ಷೆ ಮತ್ತು 4000ರೂ.ಗಳ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಪರವಾಗಿ ಕಲಬುರಗಿ ವಿಶೇಷ ಸರ್ಕಾರಿ ಅಭಿಯೋಜಕ ಸಫೀರ್ ಅಹ್ಮದ್ ಅವರು ಸಾಕ್ಷ್ಯಾಧಾರಗಳನ್ನು ಮತ್ತು ವಾದವನ್ನು ಮಂಡಿಸಿರುತ್ತಾರೆ.

ಕಾಣೆಯಾದ ವ್ಯಕ್ತಿಯ ಪತ್ತೆಗೆ ಮನವಿ
*******************************
ಕಲಬುರಗಿ,ನ.21.(ಕ.ವಾ)-ಕಲಬುರಗಿ ತಾಲೂಕಿನ ಆಳಂದ ನ್ಯೂ ಅನ್ಸಾರಿ
ಮೊಹಲ್ಲಾದ 23 ವರ್ಷದ ಬಳೆ ವ್ಯಾಪಾರಿ ಅಕ್ಬರ್ ಅಲಿಶೇರ್ ಶೇಖ್ ಇತನು 2017ರ ಸೆಪ್ಟೆಂಬರ್ 1ರಂದು ಸಂಜೆ 7 ಗಂಟೆಗೆ ಮನೆಯಿಂದ ರಾಮ ಮಾರ್ಕೇಟಿಗೆ ಹೋಗಿ ಬರುತ್ತೇನೆಂದು ಮನೆಯಿಂದ ಹೋದವನು ಮರಳಿ ಮನೆಗೆ ಬಾರದೇ ಕಾಣೆಯಾಗಿರುತ್ತಾನೆ.
ಈ ಕುರಿತು ಎಲ್ಲ ಸಂಬಂಧಿಕರನ್ನು ಸಂಪರ್ಕಿಸಿದರೂ ಹಾಗೂ ಹುಡಿಕಿದರೂ ಪತ್ತೆಯಾಗಿರುವುದಿಲ್ಲ. ಈ ಕುರಿತು ಆಳಂದ ಪೊಲೀಸ್ ಠಾಣೆಯಲ್ಲಿ 2017ರ ನವೆಂಬರ್ 3ರಂದು ಪ್ರಕರಣ ದಾಖಲಿಸಲಾಗಿದೆ.
ಕಾಣೆಯಾದ ವ್ಯಕ್ತಿಯು 5.2 ಅಡಿ ಎತ್ತರ., ತಳ್ಳನೆಯ ದೇಹ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿರುತ್ತಾನೆ. ಕನ್ನಡ ಮತ್ತು ಹಿಂದಿ ಭಾಷೆಗಳನ್ನು ಮಾತನಾಡುತ್ತಾರೆ. ಬೂದಿ ಬಣ್ಣದ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.
ಈ ಕುರಿತು ಮಾಹಿತಿ ತಿಳಿದು ಬಂದಲ್ಲಿ ಕಲಬುರಗಿ ಕಂಟ್ರೋಲ್ ರೂ. 08472-263608, 263604 ಹಾಗೂ ಆಳಂದ ಪೊಲೀಸ ಠಾಣೆ ದೂರವಾಣಿ ಸಂಖ್ಯೆ 08472-202222ನ್ನು ಸಂಪರ್ಕಿಸಬೇಕೆಂದು ಆಳಂದ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ಕೋರಿದ್ದಾರೆ.

ರಂಗಾಯಣದಿಂದ ಕಾಲೇಜು ನಾಟಕ-ಜಾನಪದ ಕಲೆ ಸ್ಪರ್ಧೆ: ಅರ್ಜಿ ಆಹ್ವಾನ
*****************************************************************
ಕಲಬುರಗಿ,ನ.21.(ಕ.ವಾ)-ಕಲಬುರಗಿ ರಂಗಾಯಣದಿಂದ ಕಲಬುರಗಿ ವಿಭಾಗದ 6 ಜಿಲ್ಲೆಗಳಲ್ಲಿ ಕಾಲೇಜು ನಾಟಕ ಮತ್ತು ಜಾನಪದ ಕಲಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ಆಸಕ್ತ ಕಾಲೇಜುಗಳು ನಾಟಕ ನಿರ್ದೇಶಕರು ಮತ್ತು ಜಾನಪದ ಕಲಾ ಸಂಯೋಜಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ರಂಗಾಯಣದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿಯೊಂದು ಜಿಲ್ಲೆಯಲ್ಲಿ 8 ನಾಟಕಗಳು ಹಾಗೂ 8 ಜನಪದ ಕಲಾ ಕುಣಿತಗಳನ್ನು ತಯಾರಿಸಬೇಕು. ಯಾವುದೇ ಡಿಗ್ರಿ ಕಾಲೇಜುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಆಯಾ ಜಿಲ್ಲೆಗಳಲ್ಲಿ ಎಂಟು ನಾಟಕ ಮತ್ತು ಎಂಟು ಜಾನಪದ ಕಲಾ ಸ್ಪರ್ಧೆ ಏರ್ಪಡಿಸಿ ಅದರಲ್ಲಿ ಪ್ರಥಮ ಮತ್ತು ದ್ವೀತಿಯ ಸ್ಥಾನಗಳನ್ನು ಪಡೆದ ತಂಡಗಳು ವಿಭಾಗ ಮಟ್ಟಕ್ಕೆ ಆಯ್ಕೆಯಾಗುತ್ತವೆ. ವಿಭಾಗ ಮಟ್ಟದಲ್ಲಿ 6 ಜಿಲ್ಲೆಗಳ ನಾಟಕ ಮತ್ತು ಜಾನಪದ ಕಲೆಗಳು ಪ್ರದರ್ಶನಗೊಂಡು ಅದರಲ್ಲಿ ಪ್ರಥಮ ಮತ್ತು ದ್ವೀತಿಯ ಸ್ಥಾನ ಪಡೆದ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆಯಾಗುತ್ತವೆ.


ನಾಟಕ ನಿರ್ದೇಶಕರಿಗೆ ಮತ್ತು ಜಾನಪದ ಕಲಾ ಸಂಯೋಜಕರಿಗೆ ವಿದ್ಯಾರ್ಥಿಗಳಿಗೆ ತಯಾರಿ ಮಾಡಲು ಗೌರವ ಸಂಭಾವನೆಯು ನೀಡಲಾಗುವುದು. ಅರ್ಜಿಗಳನ್ನು ಆಯಾ ಜಿಲ್ಲೆಗಳ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಕಚೇರಿಯಿಂದ ಪಡೆದು ಭರ್ತಿ ಮಾಡಿ ಡಾ. ಸಿದ್ಧಯ್ಯ ಪುರಾಣಿಕ, ಸುವರ್ಣ ಸಾಂಸ್ಕøತಿಕ ಸಮುಚ್ಛಯ, ಸೇಡಂ ಶಹಾಬಾದ ವರ್ತುಲ ರಸ್ತೆ, ಕಲಬುರಗಿ – 585105 ವಿಳಾಸಕ್ಕೆ ನವೆಂಬರ್ 28ರೊಳಗಾಗಿ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08472- 227735, ಇ-ಮೇಲ್ ವಿಳಾಸ rangayanakalaburgi@gmail.com ಹಾಗೂ http://ift.tt/2hG2ZNn ವೆಬ್‍ಸೈಟ್‍ನ್ನು ಸಂಪರ್ಕಿಸಲು ಕೋರಲಾಗಿದೆ.


ಹೀಗಾಗಿ ಲೇಖನಗಳು NEWS AND PHOTO DATE: 21--11--2017

ಎಲ್ಲಾ ಲೇಖನಗಳು ಆಗಿದೆ NEWS AND PHOTO DATE: 21--11--2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ NEWS AND PHOTO DATE: 21--11--2017 ಲಿಂಕ್ ವಿಳಾಸ https://dekalungi.blogspot.com/2017/11/news-and-photo-date-21-11-2017.html

Subscribe to receive free email updates:

0 Response to "NEWS AND PHOTO DATE: 21--11--2017"

ಕಾಮೆಂಟ್‌‌ ಪೋಸ್ಟ್‌ ಮಾಡಿ