ಶೀರ್ಷಿಕೆ : ವೇದಿಕೆಗಳ ಮುಖಾಂತರ ಪ್ರತಿಭೆ ಪ್ರದರ್ಶಿಸಿ ವ್ಯಕ್ತಿತ್ವ ರೂಪಿಸಿಕೊಳ್ಳಿ : ರಾಮಣ್ಣ ಚೌಡ್ಕಿ
ಲಿಂಕ್ : ವೇದಿಕೆಗಳ ಮುಖಾಂತರ ಪ್ರತಿಭೆ ಪ್ರದರ್ಶಿಸಿ ವ್ಯಕ್ತಿತ್ವ ರೂಪಿಸಿಕೊಳ್ಳಿ : ರಾಮಣ್ಣ ಚೌಡ್ಕಿ
ವೇದಿಕೆಗಳ ಮುಖಾಂತರ ಪ್ರತಿಭೆ ಪ್ರದರ್ಶಿಸಿ ವ್ಯಕ್ತಿತ್ವ ರೂಪಿಸಿಕೊಳ್ಳಿ : ರಾಮಣ್ಣ ಚೌಡ್ಕಿ
ಕೊಪ್ಪಳ ನ. 21 (ಕರ್ನಾಟಕ ವಾರ್ತೆ): ಪ್ರತಿಯೊಬ್ಬರಲ್ಲಿ ಒಂದಲ್ಲ ಒಂದು ಪ್ರತಿಭೆ ಅಡಗಿರುತ್ತದೆ. ಯುವಜನತೆ ಇಂತಹ ವೇದಿಕೆಗಳನ್ನು ಬಳಸಿಕೊಂಡು ತಮ್ಮಲ್ಲಿ ಅಡಗಿರುವ ಪ್ರತಿಭೆಗಳನ್ನು ಪ್ರದರ್ಶಿಸಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಮುಂದಾಗಬೇಕು ಎಂದು ಕೊಪ್ಪಳ ಜಿಲ್ಲಾ ಪಂಚಾಯತಿಯ ಸದಸ್ಯ ರಾಮಣ್ಣ ಚೌಡ್ಕಿ ಅವರು ಕರೆ ನೀಡಿದರು.
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಯುವ ಸಂಘಗಳ ಒಕ್ಕೂಟ ಇವರ ಸಹಯೋಗದಲ್ಲಿ ನಗರದ ಸಾಹಿತ್ಯಾ ಭವನದಲ್ಲಿ ಮಂಗಳವಾರದಂದು ಹಮ್ಮಿಕೊಳ್ಳಲಾಗಿದ್ದ, “ಕೊಪ್ಪಳ ಜಿಲ್ಲಾ ಮಟ್ಟದ ರಾಷ್ಟ್ರೀಯ ಯುವಜನೋತ್ಸವ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯುವಶಕ್ತಿಗಳಲ್ಲಿ ಅಡಗಿದ ಜಾನಪದ, ಸಂಗೀತ, ನಾಟಕ, ಭಾಷಣ ಇತ್ಯಾದಿ ಸಾಂಸ್ಕøತಿಕ ಚಟುವಟಿಕೆಗಳ ಪ್ರದರ್ಶನಕ್ಕೆ ಹಾಗೂ ಪ್ರತಿಭೆಗಳನ್ನು ಗುರುತಿಸಲು “ಕೊಪ್ಪಳ ಜಿಲ್ಲಾ ಮಟ್ಟದ ರಾಷ್ಟ್ರೀಯ ಯುವಜನೋತ್ಸವ” ಕಾರ್ಯಕ್ರಮ ಒಂದು ಸುವರ್ಣ ಅವಕಾಶವನ್ನು ಕಲ್ಪಿಸಿದೆ. ಎಲ್ಲ ಯುವಕ-ಯುವತಿಯರು ಜಿಲ್ಲಾ ಮಟ್ಟ ಯುವಜನೋತ್ಸವದಲ್ಲಿ ಭಾಗವಹಿಸಿ ಮುಂದೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಯುವಜನೋತ್ಸವದಲ್ಲಿ ಉತ್ತಮವಾದ ಪ್ರದರ್ಶನವನ್ನು ನೀಡಿ, ನಮ್ಮ ಜಿಲ್ಲೆಯ ಉತ್ತಮ ಸಂಗೀತಗಾರರು, ನಾಟಕಕಾರರು, ಕಲಾವಿದರಾಗಿ ಗುರುತಿಸಿಕೊಂಡು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ ಎಂದು ಜಿಲ್ಲಾ ಪಂಚಾಯತಿಯ ಸದಸ್ಯ ರಾಮಣ್ಣ ಚೌಡ್ಕಿ ಅವರು ಯುವಕ/ ಯುವತಿಯರಿಗೆ ಕಿವಿಮಾತನ್ನು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ, ಜಿಲ್ಲಾ ಪಂಚಾಯತಿ ಸದಸ್ಯ ಗವಿಸಿದ್ದಪ್ಪ ಕರಡಿ ಅವರು ಮಾತನಾಡಿ, ಭಾರತ ಶೇ. 60% ಯುವ ಜನಾಂಗವನ್ನು ಹೊಂದಿದ ದೇಶವಾಗಿದೆ. ಇತ್ತೀಚಿನ ದಿನಮಾನಗಳಲ್ಲಿ ಟಿ.ವಿ., ಮೊಬೈಲ್, ಕಂಪ್ಯೂಟರಗಳು ಇತ್ಯಾದಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳನ್ನೇ ಮರೆಯುತ್ತಿದ್ದೆವೆ. “ಕೊಪ್ಪಳ ಜಿಲ್ಲಾ ಮಟ್ಟದ ರಾಷ್ಟ್ರೀಯ ಯುವಜನೋತ್ಸವದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗಿದ್ದು, ಯುವಕ-ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು, ತಮ್ಮಲ್ಲಿ ಅಡಗಿದ ಪ್ರತಿಭೆ ಇಂತಹ ಸಮಾರಂಭಗಳ ಮೂಲಕ ಹೊರಹೊಮ್ಮಲಿವೆ ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವೈ. ಸುದರ್ಶನರಾವ್ ಅವರು ಪ್ರಾಸ್ಥಾವಿಕವಾಗಿ ಮಾತನಾಡಿ, ಕೊಪ್ಪಳ ಜಿಲ್ಲಾ ಮಟ್ಟದ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮದಲ್ಲಿ ಜನಪದ ನೃತ್ಯ, ಜನಪದ ಗೀತೆ, ನಾಟಕ (ಹಿಂದಿ ಅಥವಾ ಇಂಗ್ಲೀಷ್), ಭರತನಾಟ್ಯ, ತಬಲಾ ಸೋಲೋ, ಕೊಳಲು, ಶಾಸ್ತ್ರೀಯ ಸಂಗೀತ, ವೀಣಾ ಸೋಲೋ, ಆಶು ಭಾಷಣ, ಕುಚುಪುಡಿ ನೃತ್ಯ, ಗಿಟಾರ್ ಸೋಲೋ, ಹಾರ್ಮೊನಿಯಂ, ಸಿತಾರ್ ಸೋಲೋ ಸೇರಿದಂತೆ ಒಟ್ಟು 16 ಕಲೆಗಳ ಸ್ಪರ್ಧೆಗಳನ್ನು ವೈಯಕ್ತಿಕ ಹಾಗೂ ಗುಂಪು ವಿಭಾಗಗಳಲ್ಲಿ ಸಂಘಟಿಸಲಾಗುತ್ತಿದೆ. ಇದರಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿನ 15 ರಿಂದ 29 ವರ್ಷದೊಳಗಿನ ಯುವಕ-ಯುವತಿಯರು, ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಮಹಿಳಾ-ಪುರುಷ ವಿದ್ಯಾರ್ಥಿಗಳು, ಸಂಘ-ಸಂಸ್ಥೆ ಸದಸ್ಯರು, ಸಂಗೀತ ಸಂಸ್ಥೆಗಳ ಸದಸ್ಯರು, ಕಲಾವಿದರುಗಳು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಸಮಾರಂಭದಲ್ಲಿ ಎ.ಪಿ.ಎಂ.ಸಿ ಸದಸ್ಯ ಬಸವರಾಜ, ಹಿರಿಯ ಪತ್ರಕರ್ತ ರಮೇಶ ಸುರ್ವೆ, ಶಿವಾನಂದ ಹೊದ್ಲೂರ, ಸಿ.ವಿ. ಜಡಿಯವರ್, ಸದಾಶಿವ ಪಾಟೀಲ್, ಮಂಜುನಾಥ ಗೊಂಡಬಾಳ, ಕಲಾವತಿ, ರಾಕೇಶ ಕಾಂಬ್ಳೆಕರ, ಜಗದಯ್ಯ ಸಾಲಿಮಠ, ಶರಣಪ್ಪ ವಡಿಗೇರಿ, ಸೇರಿದಂತೆ ವಿವಿಧ ತಾಲೂಕಿನ ಕ್ರೀಡಾಧಿಕಾರಿಗಳು ಉಪಸ್ಥಿತರಿದ್ದರು.
ಹೀಗಾಗಿ ಲೇಖನಗಳು ವೇದಿಕೆಗಳ ಮುಖಾಂತರ ಪ್ರತಿಭೆ ಪ್ರದರ್ಶಿಸಿ ವ್ಯಕ್ತಿತ್ವ ರೂಪಿಸಿಕೊಳ್ಳಿ : ರಾಮಣ್ಣ ಚೌಡ್ಕಿ
ಎಲ್ಲಾ ಲೇಖನಗಳು ಆಗಿದೆ ವೇದಿಕೆಗಳ ಮುಖಾಂತರ ಪ್ರತಿಭೆ ಪ್ರದರ್ಶಿಸಿ ವ್ಯಕ್ತಿತ್ವ ರೂಪಿಸಿಕೊಳ್ಳಿ : ರಾಮಣ್ಣ ಚೌಡ್ಕಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ವೇದಿಕೆಗಳ ಮುಖಾಂತರ ಪ್ರತಿಭೆ ಪ್ರದರ್ಶಿಸಿ ವ್ಯಕ್ತಿತ್ವ ರೂಪಿಸಿಕೊಳ್ಳಿ : ರಾಮಣ್ಣ ಚೌಡ್ಕಿ ಲಿಂಕ್ ವಿಳಾಸ https://dekalungi.blogspot.com/2017/11/blog-post_78.html
0 Response to "ವೇದಿಕೆಗಳ ಮುಖಾಂತರ ಪ್ರತಿಭೆ ಪ್ರದರ್ಶಿಸಿ ವ್ಯಕ್ತಿತ್ವ ರೂಪಿಸಿಕೊಳ್ಳಿ : ರಾಮಣ್ಣ ಚೌಡ್ಕಿ"
ಕಾಮೆಂಟ್ ಪೋಸ್ಟ್ ಮಾಡಿ