News and photo date: 14-11--2017

News and photo date: 14-11--2017 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು News and photo date: 14-11--2017, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : News and photo date: 14-11--2017
ಲಿಂಕ್ : News and photo date: 14-11--2017

ಓದಿ


News and photo date: 14-11--2017

ಪಾಲಕರ ಕಷ್ಟ ಮತ್ತು ತ್ಯಾಗದಿಂದ ಮಕ್ಕಳ ಭವಿಷ್ಯ ಉಜ್ವಲ
**************************************************
ಕಲಬುರಗಿ ನ.14 (ಕ.ವಾ): ಪಾಲಕರು ಕಷ್ಟಪಟ್ಟು ಹಾಗೂ ತ್ಯಾಗ ಮಾಡಿ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ದೊರಕಿಸಿದರೆ ಮುಂದಿನ ಪೀಳಿಗೆಯ ಬದಲಾವಣೆಗೆ ಕಾರಣರಾಗುವುದರೊಂದಿಗೆ ಮಕ್ಕಳ ಭವಿಷ್ಯ ಉಜ್ವಲವಾಗುವುದು ಎಂದು ಈಶಾನ್ಯ ವಲಯದ ಪೊಲೀಸ್ ಮಹಾನಿರೀಕ್ಷಕ ಅಲೋಕಕುಮಾರ ತಿಳಿಸಿದರು.
ಅವರು ಮಂಗಳವಾರ ಜಿಲ್ಲಾ ಪಂಚಾಯಿತಿ ವತಿಯಿಂದ ಹಮ್ಮಿಕೊಳ್ಳುವ ಸಿರಿ ಕಾರ್ಯಕ್ರಮದ ನೇರ ಫೋನ್-ಇನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಬಡತನದ ಸಂಕಷ್ಟವನ್ನು ಎದುರಿಸುವ ಪಾಲಕರು ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಮಾಡದೇ ಕಷ್ಟಪಡಬೇಕು. ವಿವಿಧ ಚಟಗಳಿಗೆ ಬಲಿಯಾಗಿರುವ ಪಾಲಕರು ತಮ್ಮ ಚಟಗಳನ್ನು ತ್ಯಾಗ ಮಾಡಿ ಮಕ್ಕಳ ಬೆಳವಣಿಗೆ ಹಾಗೂ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕೆಂದರು.
ಬದುಕು ಕಟ್ಟಿಕೊಳ್ಳುವುದು ಅಷ್ಟೊಂದು ಸುಲಭವಾಗಿಲ್ಲ. ಯುವಕರು ಒಳ್ಳೆಯ ದಾರಿಯಲ್ಲಿ ನಡೆದು ಸುಂದರ ಬದುಕು ಕಟ್ಟಿಕೊಳ್ಳಲು ಹೋರಾಟ ಮಾಡಲು ಹಾಗೂ ಮಾನಸಿಕವಾಗಿ ಗಟ್ಟಿಯಾಗಬೇಕು. ಮೊಬೈಲ್ ಮತ್ತು ಟಿ.ವಿ. ಸಂಸ್ಕಾರದಿಂದ ಶಿಕ್ಷಣ ಮತ್ತು ಸಾಮಾಜಿಕ ವ್ಯವಸ್ಥೆ ಹಾಳಾಗುತ್ತಿದೆ. ಮಕ್ಕಳು ಇವುಗಳಿಂದ ದೂರವಿರಬೇಕು. ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡಿ ಬಾಲ್ಯವಿವಾಹಗಳನ್ನು ತಪ್ಪಿಸಬೇಕು ಎಂದರು.
ಹಬ್ಬ-ಹರಿದಿನಗಳನ್ನು ಆಚರಿಸುವಾಗ ತಮ್ಮ ತಮ್ಮ ಧರ್ಮದ ದಬ್ಬಾಳಿಕೆ ಮಾಡುವುದು ಸಮಾಜದ ಬೆಳವಣಿಗೆಗೆ ಮಾರಕವಾಗಿದೆ. ಜಾತಿ, ಧರ್ಮದ ವಿಷಬೀಜ ಮಕ್ಕಳಲ್ಲಿ ಬೆಳೆಯದಂತೆ ಪಾಲಕರು ಹಾಗೂ ಶಿಕ್ಷಕರು ಮುಂಜಾಗೃತೆ ವಹಿಸಬೇಕು. ಶಾಲಾ ಮಕ್ಕಳು ಸಂಘಟನೆ ಮಾಡಿಕೊಂಡು ಜಾತಿ, ಅಸ್ಪøಷ್ಯತೆ ನಿವಾರಣೆಗೆ ಮುಂದಾಗಬೇಕು. ಮನುಷ್ಯನಿಗೆ ಮನುಷ್ಯ ಪ್ರೀತಿ ಮಾಡಲು ಮನುಷ್ಯ ಜಾತಿ ತಾನೊಂದೇ ವಲಂ ಎಂಬ ಮನೋಭಾವ ಬೆಳೆಸುವುದು ಅಗತ್ಯವಾಗಿದೆ ಎಂದರು.
ಬಾಲ್ಯಾವಸ್ಥೆಯಲ್ಲಿ ಸರ್ವಾಂಗೀಣ ಅಭಿವೃದ್ಧಿಗೆ ಓದಿನ ಜೊತೆಗೆ ಆಟ-ಪಾಠಗಳು ಮುಖ್ಯವಾಗಿವೆ. ಪ್ರತಿಯೊಬ್ಬ ಮಗುವಿನಲ್ಲಿ ಯಾವುದಾದರೊಂದು ಕ್ಷಮತೆ ಇದ್ದು, ಅದನ್ನು ಪಾಲಕರು ಮತ್ತು ಶಿಕ್ಷಕರು ಗುರುತಿಸಿ ಅಂತಹ ಕ್ಷೇತ್ರದಲ್ಲಿ ಮಕ್ಕಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ದೇಶವು ಯುವಶಕ್ತಿಯನ್ನು ಹೊಂದಿದೆ. ಕ್ರೀಡೆಗಳಲ್ಲಿ ವೈಯಕ್ತಿಕ ಪದಕಗಳನ್ನು ಪಡೆಯಲು ಪ್ರಯತ್ನಿಸಬೇಕು. ಹರಿಯಾಣದ ರೀತು ಮತ್ತು ಬಬಿತಾ ಪೊಗಟರಂತಹ ಕುಸ್ತಿ ಪಟುಗಳ ಜೀವನ ಚರಿತ್ರೆಯನ್ನು ತಿಳಿಹೇಳುವ ಮೂಲಕ ಹೆಣ್ಣು ಮಕ್ಕಳ ಕ್ಷಮತೆಯನ್ನು ಕ್ರೀಡೆಗಳ ಮೂಲಕ ಹೊರಹೊಮ್ಮಿಸಬೇಕೆಂದರು.
ಇದೇ ಸಂದರ್ಭದಲ್ಲಿ ತಮ್ಮ ಬಾಲ್ಯಾವಸ್ಥೆಯನ್ನು ಮೆಲಕು ಹಾಕಿಕೊಂಡ ಅಲೋಕಕುಮಾರ ಅವರು ನಮ್ಮ ತಂದೆ-ತಾಯಿ ಇಬ್ಬರು ಶಾಲಾ ಶಿಕ್ಷಕರಿದ್ದು, ಸ್ವಾತಂತ್ರ್ಯ ಸಂಗ್ರಾಮದ ಆ ದಿನಗಳಲ್ಲಿ ನನಗೆ ಸ್ವಾತಂತ್ರ್ಯ ಸಂಗ್ರಾಮ ಮತ್ತು ಸುಭಾಷಚಂದ್ರ ಬೋಸರ ಬಗ್ಗೆ ತಿಳಿಸುತ್ತಿದ್ದರು. ಇದರಿಂದ ಸ್ಪೂರ್ತಿ ದೊರೆತು ಸಮಾಜ ಸೇವೆ ಮಾಡಬೇಕೆಂಬ ಆಲೋಚನೆ ಬಂದು ಐ.ಪಿ.ಎಸ್. ಹುದ್ದೆಗೆ ಸೇರ್ಪಡೆಯಾಗಲು ಅನುಕೂಲವಾಯಿತು ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಮಾತನಾಡಿ, ಪಾಲಕರು ಮಕ್ಕಳಿಗೆ ಪ್ರೋತ್ಸಾಹ ನೀಡಿ ಅವರ ಇಚ್ಛೆಯ ಕ್ಷೇತ್ರದಲ್ಲಿ ಬೆಳೆಯಲು ಅನುಕೂಲವಾಗುವ ಹಾಗೆಯೇ ವಾತಾವರಣ ನಿರ್ಮಿಸಿಕೊಡಬೇಕು. ಎಲ್ಲ ಶಾಲಾ ಮಕ್ಕಳು ಕಡ್ಡಾಯವಾಗಿ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಬೇಕು. ಶಾಲೆಯಲ್ಲಿರುವ ಎಲ್ಲ ಮಕ್ಕಳು ಶೌಚಾಲಯ ನಿರ್ಮಿಸಿಕೊಂಡಲ್ಲಿ ಅಂತಹ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು. ಎಲ್ಲ ಮಕ್ಕಳು ಓದಿನ ಜೊತೆಗೆ ಆಟಪಾಠಗಳಲ್ಲಿ ಆಸಕ್ತಿ ತೋರಿ ಸ್ಫೂರ್ತಿಯಿಂದ ಗುರಿಯನ್ನು ತಲುಪಬೇಕೆಂದರು.
ಗುಲಬರ್ಗಾ ಆಕಾಶವಾಣಿ ಕೇಂದ್ರದ ನಿಲಯ ನಿರ್ದೇಶಕಿ ಅಂಜನಾ ಯಾತನೂರ ನೇರ ಫೋನ್ ಇನ್ ಕಾರ್ಯಕ್ರಮ ನಡೆಸಿಕೊಟ್ಟರು. ಜೇವರ್ಗಿ, ಕೋತನಹಿಪ್ಪರಗಾ, ಖನದಾಳ, ಚೌಡಾಪುರ, ಬೀರಾಳ(ಬಿ) ಊಡಗಿ, ತಾಜ್ ಸುಲ್ತಾನಪುರ, ಊದನೂರ, ಪ್ರೌಢಶಾಲೆಯ ಮಕ್ಕಳು ಫೋನ್ ಇನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಸಮಸ್ಯೆಗಳನ್ನು ತೊಡಿಕೊಂಡರು. ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಾಂತಗೌಡ ಉಪಸ್ಥಿತರಿದ್ದರು.
ಶಿಸ್ತಿನಿಂದ ಉತ್ತಮ ಸಮುದಾಯ ನಿರ್ಮಾಣ
**************************************
ಕಲಬುರಗಿ ನ.14 (ಕ.ವಾ): ಇಂದಿನ ಮಕ್ಕಳು ನಾಳಿನ ಪ್ರಜೆಗಳು ಮಾತ್ರವಲ್ಲ ಸಮುದಾಯವಾಗಿದ್ದಾರೆ. ಎಲ್ಲ ಮಕ್ಕಳು ಶಿಸ್ತನ್ನು ಮೈಗೂಡಿಸಿಕೊಂಡಲ್ಲಿ ಉತ್ತಮ ಸಮುದಾಯ ನಿರ್ಮಾಣ ಮಾಡಲು ಸಾಧ್ಯ ಎಂದು ಕಲಬುರಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧ್ಯಕ್ಷ ಆರ್. ವೆಂಕಟೇಶ ಕುಮಾರ ಅಭಿಪ್ರಾಯಪಟ್ಟರು.
ಅವರು ಮಂಗಳವಾರ ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಸಹಾಯವಾಣಿ 1098 ಇವುಗಳ ಸಂಯುಕ್ತಾಶ್ರಯದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಮಂಗಳವಾರ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ “ಮಕ್ಕಳ ಹಬ್ಬ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಡಾ. ಪಂಡಿತ ಜವಾಹರಲಾಲ್ ನೆಹರು ಅವರ ಹುಟ್ಟುಹಬ್ಬದಂದು ಆಚರಿಸಲ್ಪಡುತ್ತಿರುವ ಮಕ್ಕಳ ದಿನಾಚರಣೆಯು ಮಕ್ಕಳಿಗೆ ಪ್ರಮುಖ ಹಬ್ಬವೆನಿಸಿದೆ. ಮಕ್ಕಳು ಉತ್ತಮ ಅಂಕ ಪಡೆದು, ಒಳ್ಳೆಯ ಶಾಲೆಗಳಲ್ಲಿ ವ್ಯಾಸಂಗ ಮಾಡಬೇಕು. ಯಾವುದೇ ಸಮುದಾಯದಲ್ಲಿ ಶಿಸ್ತು ಇಲ್ಲದಿದ್ದರೆ ಅಭಿವೃದ್ಧಿ ಆಗುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ಶಿಕ್ಷಕರು ಮಕ್ಕಳಿಗೆ ಶಿಸ್ತು ಕಲಿಸಲು ಹೆಚ್ಚು ಒತ್ತು ನೀಡಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಸಹಾಯವಾಣಿ ಹಾಗೂ ಡಾನ್‍ಬಾಸ್ಕೋ ಸಂಸ್ಥೆ ನೇತೃತ್ವದಲ್ಲಿ 150ಕ್ಕಿಂತ ಹೆಚ್ಚು ಸಂಭವನೀಯ ಬಾಲ್ಯ ವಿವಾಹವನ್ನು ತಡೆಹಿಡಿಯಲಾಗಿದೆ. ಪೋಷಕರಲ್ಲಿ ಇಲಾಖೆ ವತಿಯಿಂದ ಬಾಲ್ಯವಿವಾಹ ವಿರುದ್ಧ ಜಾಗೃತಿ ಮೂಡಿಸಲಾಗುತ್ತಿದೆ. ಒಂದು ವಾರದಲ್ಲಿ ಕನಿಷ್ಠ ಪಕ್ಷ 3 ದಿನ ಮಕ್ಕಳಿಗೆ ನೈತಿಕ ಶಿಕ್ಷಣ ತಿಳಿಸಿಕೊಡಬೇಕು ಎಂದು ಶಿಕ್ಷಕರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಕ್ಕಳ ಕ್ಷೇತ್ರದಲ್ಲಿ ಅತ್ಯುತ್ತಮ ಕಾರ್ಯನಿರ್ವಹಿಸಿದ ಈಶ್ವರಿ ನಂದೂರ, ಕುಮಾರ ಮಹಾದೇವ, ವೆಂಕಟೇಶ್, ವೈಶಾಲಿ ಮತ್ತು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚ ಅಂಕ ಪಡೆದ ಭಾಗ್ಯಶ್ರೀ ವೀರಭದ್ರಯ್ಯ, ನಾಗೇಶ್ ಸಿದ್ದವೀರ ಹಾಗೂ ಪಿ.ಯು.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವೆಂಕಟೇಶ್ ರಾಠೋಡ, ಮಹಮ್ಮದ ಫರಾನ್ ಧನ್ನಿಶ್, ಐಶ್ವರ್ಯ ಕುಲಕರ್ಣಿಯನ್ನು ಸನ್ಮಾನಿಸಲಾಯಿತು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಸಿ.ವಿ.ರಾಮನ್, ಶಿವಶರಣಪ್ಪ, ಭರತೇಶ್ ಶೀಲವಂತ ಹಾಗೂ ಪೊಲೀಸ್ ಇಲಾಖೆಯ ಪಿಎಸ್‍ಐ ಶರಣಬಸಪ್ಪ ಕೊಡ್ಲಾ, ಪಿಎಸ್‍ಐ ಚಂದ್ರಶೇಖರ ತಿಗಡಿ, ಪಿಎಸ್‍ಐ ಜಗದೇವಪ್ಪ ಪಾಳಾ, ಪಿಎಸ್‍ಐ ರಾಘವೇಂದ್ರ, ಆರೋಗ್ಯ ಇಲಾಖೆಯ ಫಕೀರಪ್ಪ ದೊಡಮನಿ, ರೇಣುಕಾ, ಶಿಕ್ಷಣ ಇಲಾಖೆಯ ಆಶಾ ದೇಶಪಾಂಡೆ, ಶಿವಲೀಲಾ ಕಲಗುತ್ತಿ, ನಾಗೇಂದ್ರಪ್ಪ ಅವರಾದಿ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯ ಬಸವರಾಜ ಬಿರಾದಾರ, ಶಾಕೀರ ಹುಸೇನ್, ರಾಜಶೇಖರಯ್ಯ ಸೇರಿದಂತೆ ವಿಠ್ಠಲ ಚಿಕಣಿ, ಆನಂದರಾಜ್, ಪಂಡಿತ ಶಿಂಧೆ, ಹೆಮಚಂದ್ರ ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಸವರಾಜ ಡಿ,, ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಾಂತಗೌಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಶಿವರಾಜ ಸಜ್ಜನಶೆಟ್ಟಿ, ಕಲಬುರಗಿ ಎಸ್.ಎಸ್.ಎಲ್. ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಹಾಗೂ ಮಕ್ಕಳ ಸಹಾಯವಾಣಿ ನೋಡಲ್ ಕೇಂದ್ರದ ನಿರ್ದೇಶಕ ಡಾ.ಲಿಂಗರಾಜ ಕೋಣಿನ್, ಕೆ.ಎಸ್.ಎಫ್.ಸಿ. ಪ್ರಾದೇಶಿಕ ವ್ಯವಸ್ಥಾಪಕ ಹೆಮಚಂದ್ರ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಚೈಲ್ಡ್ ಲೈನ್ ಸೆ ದೋಸ್ತಿ ಎಂಬ 2018ರ ಕ್ಯಾಲೆಂಡರ್ ಹಾಗೂ ಭಿತ್ತಿಪತ್ರ ಬಿಡುಗಡೆಗೊಳಿಸಿದರು. ಇದಕ್ಕೂ ಮುನ್ನ ಕನ್ನಡಭವನದಿಂದ ಡಾ.ಎಸ್.ಎಂ.ಪಂಡಿತ ರಂಗಮಂದಿರವರೆಗೆ ಜಾಥಾ ಕಾರ್ಯಕ್ರಮ ಜರುಗಿತು.
ಸಿರಿ ಕಾರ್ಯಕ್ರಮ ಅಡಿಯಲ್ಲಿ ಒಟ್ಟು 20 ಸಾವಿರ ಶೌಚಾಲಯ ನಿರ್ಮಾಣ
**************************************************************
ಕಲಬುರಗಿ ನ.14 (ಕ.ವಾ): ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಸಿರಿ ಕಾರ್ಯಕ್ರಮದಡಿಯಲ್ಲಿ ಇಲ್ಲಿಯವರೆಗೆ ಒಟ್ಟು 20,071 ವೈಯಕ್ತಿಕ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತಿಗೆ 200 ವೈಯಕ್ತಿಕ ಶೌಚಲಯಗಳ ಗುರಿಯನ್ನು ನಿಗದಿ ಪಡಿಸಲಾಗಿದೆ. ಜಿಲ್ಲೆಗೆ ಒಟ್ಟು 52000 ವೈಯಕ್ತಿಕ ಶೌಚಾಲಯಗಳ ಗುರಿಯನ್ನು ಸಿರಿ ಕಾರ್ಯಕ್ರಮದಲ್ಲಿ ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ 10,758 ಶೌಚಾಲಯ ನಿರ್ಮಾಣದ ಕಾಮಗಾರಿ ಗುಂಡಿ ಹಂತದಲ್ಲಿದ್ದು, ಇನ್ನೂ 10,000 ವೈಯಕ್ತಿಕ ಶೌಚಾಲಯಗಳು ಪ್ರಗತಿಯ ಕೊನೆ ಹಂತದಲ್ಲಿವೆ. ಬಾಕಿ ಉಳಿದ 10,000 ಶೌಚಾಲಯಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತಿದೆ.
ಕೇವಲ ವೈಯಕ್ತಿಕ ಶೌಚಾಲಯ ನಿರ್ಮಾಣವಲ್ಲದೇ ನಾಳಿನ ಪ್ರಜೆಗಳಾದ ನಮ್ಮ ಮಕ್ಕಳಿಗೆ ಉತ್ತಮ ವಾತಾವರಣ ನಿರ್ಮಿಸುವ ಉದ್ದೇಶ ಸಿರಿ ಕಾರ್ಯಕ್ರಮ ಹೊಂದಿದೆ. ಗ್ರಾಮೀಣ ಪ್ರದೇಶದಲ್ಲಿ ಓದುತ್ತಿರುವ ಎಲ್ಲಾ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳ ಮನೆಯಲ್ಲಿ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸುವುದು ಹಾಗೂ ಶೌಚಾಲಯ ಬಳಸಲು ಪ್ರೇರೇಪಿಸುವುದು. ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದು. ಶಾಲೆ ಹಾಗೂ ಗ್ರಾಮಗಳಲ್ಲಿ ಸ್ವಚ್ಛ ವಾತಾವರಣವನ್ನು ನಿರ್ಮಾಣ ಮಾಡುವುದು. ಮುಂದಾಳತ್ವ ಕಾರ್ಯವಿಧಾನಗಳನ್ನು ಅಳವಡಿಸಿಕೊಳ್ಳುವುದು. ಗ್ರಾಮೀಣ ಪ್ರದೇಶದಲ್ಲಿ ಎಲ್ಲರಿಗೂ ಮೂಲಸೌಕರ್ಯಗಳನ್ನು ಒದಗಿಸುವುದು ಹಾಗೂ ಮಕ್ಕಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವುದೇ ಸಿರಿ ಕಾರ್ಯಕ್ರಮ.
ಈ ಕಾರ್ಯಕ್ರಮವನ್ನು 2017ರ ಆಗಸ್ಟ್ 26ರಂದು ವೈದ್ಯಕೀಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ, ಕಲಬುರಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಹಾಗೂ ಎಲ್ಲಾ ವಿಧಾನ ಸಭೆ ಮತ್ತು ವಿಧಾನ ಪರಿಷತ್ ಚುನಾಯಿತ ಸದಸ್ಯರು, ಜಿಲ್ಲೆಯ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕ ಪಂಚಾಯತ್ ಚುನಾಯಿತ ಸದಸ್ಯರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಉದ್ಘಾಟನೆಗೊಳಿಸಲಾಗಿತ್ತು.
ಮುಂದುವರೆದು ಶಾಲಾ ಶಿಕ್ಷಕರು ಹಾಗೂ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳ ಸಹಯೋಗದೊಂದಿಗೆ ಜಿಲ್ಲೆಯ ಎಲ್ಲಾ ಮಕ್ಕಳ ಮನೆಯಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಿ ಸ್ವಚ್ಚತೆಯ ಕಡೆ ಮಕ್ಕಳ ಹೆಜ್ಜೆಯನ್ನು ಇಡುವುದರ ಮೂಲಕ ಮುಂದಿನ ದಿನಗಳಲ್ಲಿ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿಸಲು ಮಕ್ಕಳ ಮೂಲಕ ದಿಟ್ಟ ಹೆಜ್ಜೆಯನ್ನು ಇಡಲಾಗಿದೆ. ಅಲ್ಲದೆ ಸಿರಿ ಕಾರ್ಯಕ್ರಮದಡಿಯಲ್ಲಿ 49 ಗ್ರಾಮ ಪಂಚಾಯತಿಗಳು ಶೇ 100ರಷ್ಟು ಪ್ರಗತಿಯನ್ನು ಸಾಧಿಸಿರುತ್ತವೆ. ಪ್ರಗತಿ ಸಾಧಿಸಿರುವ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಶಾಲೆಗಳಿಗೆ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಶಾಲೆಗೆ ತಡೆಗೊಡೆಗಳನ್ನು ನಿರ್ಮಿಸಲು ಅನುಮೋದಿಸಿದ್ದು, ಕಾಮಗಾರಿ ಪ್ರಗತಿಯಲ್ಲಿವೆ ಅಂತಹ ಗ್ರಾಮ ಪಂಚಾಯತಿಗಳ ವಿವರ ಇಂತಿದೆ.
ಅಫಜಲಪೂರ ಃ ಹಸರಗುಂಡಗಿ, ಉಡಚಣ, ಗುಡೂರ, ಚೌಡಾಪೂರ, ಮಾಶಾಳ ಹಾಗೂ ಭಂಕಲಗಾ. ಆಳಂದಃ ನರೋಣಾ, ಖಜೂರಿ, ಸರಸಂಬಾ, ತಡೋಳಾ, ತಡಕಲ್, ಭುಸನೂರ, ಹಾಳ ತಡಕಲ್, ನಿಂಬಾಳ ಹಾಗೂ ರುದ್ರವಾಡಿ.
ಚಿಂಚೋಳಿಃ ಐನಾಪೂರ, ಚೇಂಗಟಾ, ಚಿಮ್ಮನಚೊಡ, ಶಾದಿಪೂರ, ಹಸರಗುಂಡಗಿ, ಚಂದನಕೇರಾ, ಹಲಚೇರಾ, ಕೋಡ್ಲಿ, ರಟಕಲ್ ಹಾಗೂ ಕೆರೊಳ್ಳಿ. ಚಿತ್ತಾಪೂರಃ ಭಂಕೂರ, ರಾವೂರ, ಸನ್ನತಿ ಹಾಗೂ ಮಾಡಬೂಳ. ಕಲಬುರಗಿಃ ಕವಲಗಾ, ನಂದಿಕೂರ, ಡೊಂಗರಗಾಂವ, ಹರಸೂರ, ಕಮಲಾಪೂರ, ಕಲಮೂಡ, ಖಣದಾಳ, ಫರಹತಾಬಾದ, ನಂದೂರ ಕೆ.ಆಲಗೂಡ ಹಾಗೂ ಸರಡಗಿ ಬಿ. ಜೇವರ್ಗಿ ಃ ಕುರಳಗೇರಾ, ಅರಳಗುಂಡಗಿ, ಬಳುಂಡಗಿ ಮದರಿ, ನರಿಬೊಳ, ಕಲ್ಲಹಂಗರಗಾ, ಇಟಗಾ ಹಾಗೂ ಕುಕ್ಕುಂದಾ ಮತ್ತು ಸೇಡಂ ಃ ಮೇದಕ.
ಮೇಲಿನ ಎಲ್ಲಾ ಗ್ರಾಮ ಪಂಚಾಯತಗಳು ಉತ್ತಮ ಪ್ರಗತಿ ಸಾಧಿಸುವಲ್ಲಿ ಯಶಸ್ವಿಯಾಗಿದ್ದು, ಈ ಎಲ್ಲಾ ಗ್ರಾಮ ಪಂಚಾಯತ್, ಅಧ್ಯಕ್ಷರು ಹಾಗೂ ಎಲ್ಲಾ ಜನ ಪ್ರತಿನಿಧಿಗಳಿಗೂ,ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳಿಗೂ, ಶಾಲಾ ಮುಖ್ಯ ಗುರುಗಳು ಹಾಗೂ ಶಿP್ಪ್ಷಕರಿಗೆ ಅಭಿನಂದನೆ ಸಲ್ಲಿಸಿದಾರೆ. “ಸಿರಿ” ಕಾರ್ಯಕ್ರಮದ ಕುರಿತು ಕಲಬುರಗಿ ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಉತ್ತಮ ಅಭಿಪ್ರಾಯವನ್ನು ವ್ಯಕ್ತಪಡಿಸಿ ಜಿಲ್ಲೆಯಲ್ಲಿ ವಿನೂತನ ಹಾಗೂ ಒಳ್ಳೆಯ ಹೆಜ್ಜೆಯನ್ನು ಇಟ್ಟು ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯವಾಗಿರುವುದೆಂದು “ದಿಶಾ” ಸಭೆಯಲ್ಲಿ ಹರ್ಷ ವ್ಯಕ್ತಪಡಿಸಿ ಬಾಕಿ ಉಳಿದ ಎಲ್ಲಾ ಗ್ರಾಮ ಪಂಚಾಯತಿಯವರು ಗುರಿ ಸಾಧಿಸಲು ಕ್ರಮವಹಿಸಬೇಕೆಂದು ತಿಳಿಸಿದರು.
ನವೆಂಬರ್ 15ರಂದು “ಜೈವಿಕ ಇಂಧನ” ವಿಚಾರ ಸಂಕಿರಣ
***************************************************
ಕಲಬುರಗಿ ನ.14 (ಕ.ವಾ): ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ ಬೆಂಗಳೂರು ಹಾಗೂ ಜೈವಿಕ ಇಂಧನ ಸಂಶೋಧನೆ, ಮಾಹಿತಿ ಮತ್ತು ಪ್ರದರ್ಶನ ಕೇಂದ್ರ, ಗುಲಬರ್ಗಾ ವಿಶ್ವವಿದ್ಯಾಲಯ ಮತ್ತು ಕೆಎಸ್‍ಸಿಎಸ್‍ಟಿ ಪ್ರಾದೇಶಿಕ ಕೇಂದ್ರ ಕಲಬುರಗಿ ಇವುಗಳ ಸಂಯುಕ್ತಾಶ್ರಯಲ್ಲಿ ನವೆಂಬರ್ 15ರಂದು ಬೆಳಿಗ್ಗೆ 10.30 ಗಂಟೆಗೆ ಒಂದು ದಿನದ ಜೈವಿಕ ಇಂಧನ ವಿಚಾರ ಸಂಕಿರಣವನ್ನು ಗುಲಬರ್ಗಾ ವಿಶ್ವವಿದ್ಯಾಲಯದ ಕಾರ್ಯಸೌಧದಲ್ಲಿನ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯ ಕಡಗಂಚಿಯ ಸಮ ಕುಲಪತಿ ಪ್ರೊ. ಜಿ.ಆರ್.ನಾಯಕ ವಿಚಾರ ಸಂಕಿರಣವನ್ನು ಉದ್ಘಾಟಿಸುವರು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕಲಬುರಗಿ ಪ್ರಾದೇಶಿಕ ನಿರ್ದೇಶಕ ಪ್ರೊ. ಬಸವರಾಜ ಗಡ್ಗೆ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಕೆಎಸ್‍ಸಿಎಸ್‍ಟಿ ಕಾರ್ಯಕಾರಿ ಕಾರ್ಯದರ್ಶಿ ಡಾ.ಎಸ್.ಜಿ. ಶ್ರೀಕಂಠೇಶ್ವರ ಸ್ವಾಮಿ ಅತಿಥಿಗಳಾಗಿ ಆಗಮಿಸುವರು. ಗುಲಬರ್ಗಾ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎಸ್.ಆರ್.ನಿರಂಜನ್ ಅಧ್ಯಕ್ಷತೆ ವಹಿಸುವರು.
ಪುಸ್ತಕ ಬಹುಮಾನಕ್ಕಾಗಿ ಅರ್ಜಿ ಆಹ್ವಾನ
***********************************
ಕಲಬುರಗಿ,ನ.14.(ಕ.ವಾ.)-ಕರ್ನಾಟಕ ಶಿಲ್ಪಕಲಾ ಅಕಾಡೆಮಿಯಿಂದ 2015, 2016 ಮತ್ತು 2017ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಯಡಿ ಪುಸ್ತಕ ಬಹುಮಾನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ರಿಜಿಸ್ಟ್ರಾರ್ ಇಂದ್ರಮ್ಮ ಹೆಚ್.ವಿ. ತಿಳಿಸಿದ್ದಾರೆ.
ಪುಸ್ತಕ ಬಹುಮಾನದ ಮೊತ್ತ 25,000ರೂ ಇರುತ್ತದೆ. ಬಹುಮಾನಕ್ಕೆ ಕಳುಹಿಸುವ ಪುಸ್ತಕವು ಪುನರ ಮುದ್ರಣವಾಗಿರಬಾರದು. ಮೊದಲ ಆವೃತ್ತಿಯಲ್ಲಿ ಪ್ರಕಟಗೊಂಡಿರಬೇಕು. ಯಾವುದೇ ತರಗತಿಗಳಿಗೆ ಪಠ್ಯಪುಸ್ತಕವಾಗಿರಬಾರದು. ಪುಸ್ತಕವು ಲೇಖಕರ ಸ್ವಂತ ರಚನೆಯಾಗಿರಬೇಕು. ಸಂಪಾದಿತ ಕೃತಿಯಾಗಿರಬಾರದು.
2014ನೇ ಸಾಲಿನ ಬಹುಮಾನಕ್ಕೆ ಕೃತಿ/ಪುಸ್ತಕವು 2014ರ ಜನವರಿ 1 ರಿಂದ ಡಿಸೆಂಬರ್ 31ರ ಅವಧಿಯಲ್ಲಿ ಮುದ್ರಣಗೊಂಡಿರಬೇಕು. 2015ನೇ ಸಾಲಿನ ಬಹುಮಾನಕ್ಕಾಗಿ ಕೃತಿಯು 2015ರ ಜನವರಿ 1 ರಿಂದ ಡಿಸೆಂಬರ್ 31ರ ಅವಧಿಯಲ್ಲಿ ಮುದ್ರಣಗೊಂಡಿರಬೇಕು. 2016ನೇ ಸಾಲಿನ ಬಹುಮಾನಕ್ಕೆ ಕೃತಿಯು 2016ರ ಜನವರಿ 1 ರಿಂದ ಡಿಸೆಂಬರ್ 31ರ ಅವಧಿಯಲ್ಲಿ ಮುದ್ರಣಗೊಂಡಿರಬೇಕು.
ಬಹುಮಾನದ ಪುಸ್ತಕಗಳನ್ನು 2017ರ ಡಿಸೆಂಬರ್ 10ರೊಳಗಾಗಿ ಖುದ್ದಾಗಿ ಅಥವಾ ಅಂಚೆ ಮೂಲಕ ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ಕನ್ನಡ ಭವನ, ಮೇಲ್ಮನೆ, ಚಾಲುಕ್ಯ ವಿಭಾಗ, ಜೆ.ಸಿ. ರಸ್ತೆ ಬೆಂಗಳೂರು-560002 ವಿಳಾಸಕ್ಕೆ ಸಲ್ಲಿಸಬೇಕು. ಅಕಾಡೆಮಿ ದೂರವಾಣಿ ಸಂಖ್ಯೆ 080-22278725ಯನ್ನು ಸಂಪರ್ಕಿಸಲು ಕೋರಲಾಗಿದೆ.
ಕಲಾಧ್ಯಯನ ಫೆಲೋಶಿಪ್‍ಗಾಗಿ ಅರ್ಜಿ ಆಹ್ವಾನ
****************************************
ಕಲಬುರಗಿ,ನ.14.(ಕ.ವಾ.)-ಕರ್ನಾಟಕ ಲಲಿತಕಲಾ ಅಕಾಡೆಮಿಯಿಂದ ಗಿರಿಜನ ಅಭಿವೃದ್ಧಿ ಯೋಜನೆಯಡಿ ಲಲಿತಕಲೆಯಲ್ಲಿ 2017-18ನೇ ಸಾಲಿನ ಕಲಾಧ್ಯಯನ ಫೆಲೋಶಿಫ್, ವಿಶೇಷ ಸಾಧನೆ ಮಾಡಿದ ಪರಿಣಿತರಿಗೆ ಸಂಶೋಧನೆ/ಕಲಾ ಅಧ್ಯಯನ ಮಾಡಲು ಪರಿಶಿಷ್ಟ ಪಂಗಡದ ಆಸಕ್ತ ಕಲಾವಿದರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಅಕಾಡೆಮಿ ರಿಜಿಸ್ಟ್ರಾರ್ ಇಂದ್ರಮ್ಮ ಹೆಚ್.ವಿ. ತಿಳಿಸಿದ್ದಾರೆ.
ಕಲಾಧ್ಯಾಯನದ ಅವಧಿ ಒಂದು ವರ್ಷ ಇರುತ್ತದೆ. ಆಸಕ್ತರು ಕಲಾ ಸಂಶೋಧನೆಗಾಗಿ/ಯಾವುದೇ ಲಲಿತಕಲೆಯ (ಚಿತ್ರಕಲೆ) ವಿಷಯವನ್ನು ಆರಿಸಿಕೊಂಡು ಈ ಕುರಿತು ಸುಮಾರು 4-5 ಪುಟಗಳ ಸಾರಲೇಖವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಡಿಸೆಂಬರ್ 8 ಕೊನೆಯ ದಿನವಾಗಿದೆ. ಫೆಲೋಶಿಪ್‍ಗಾಗಿ ಒಟ್ಟು 10 ಪರಿಶಿಷ್ಟ ಪಂಗಡದ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಅಯ್ಕೆಯಾದವರಿಗೆ 1 ಲಕ್ಷ ರೂ.ಗಳ ಕಲಾ ಸಂಶೋಧನಾ ಫೆಲೋಶಿಪ್ ಮೊತ್ತವನ್ನು ಮೂರು ಕಂತುಗಳಲ್ಲಿ ನೀಡಲಾಗುವುದು.
ಅರ್ಜಿ ನಮೂನೆಯನ್ನು ಅಕಾಡೆಮಿಯ ವೆಬ್‍ಸೈಟ್ ತಿತಿತಿ.ಟಚಿಟiಣhಞಚಿಟಚಿಞಚಿಡಿಟಿಚಿಣಚಿಞಚಿ.oಡಿg ನಲ್ಲಿ ಅಥವಾ ಕರ್ನಾಟಕ ಲಲಿತಕಲಾ ಅಕಾಡೆಮಿ ಕಾರ್ಯಾಲಯ, ಎರಡನೇ ಮಹಡಿ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು 560002 ಕಚೇರಿಯನ್ನು ಸಂಪರ್ಕಿಸಿ ಪಡೆಯಬಹುದಾಗಿದೆ. ಸ್ವವಿಳಾಸದ ಲಕೋಟೆ ಕಳುಹಿಸಿ ಅಂಚೆ ಮೂಲಕವೂ ಅರ್ಜಿಯನ್ನು ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿಯ ದೂರವಾಣಿ ಸಂಖ್ಯೆ 080-22480297 ನ್ನು ಸಂಪರ್ಕಿಸಲು ಕೋರಲಾಗಿದೆ.
ನವೆಂಬರ್ 23ರಂದು ಜಿಲ್ಲಾ ಮಟ್ಟದ ಯುವಜನೋತ್ಸವ ಸ್ಪರ್ಧೆ
ಕಲಬುರಗಿ,ನ.14.(ಕ.ವಾ.)-ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಕಲಬುರಗಿ ಜಿಲ್ಲಾ ಮಟ್ಟದ ಯುವಜನೋತ್ಸವ ಸ್ಪರ್ಧೆಯನ್ನು ನವೆಂಬರ್ 23ರಂದು ಬೆಳಿಗ್ಗೆ 10 ಗಂಟೆಗೆ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ.
ಈ ಸ್ಪರ್ಧೆಯಲ್ಲಿ 15 ರಿಂದ 29 ವರ್ಷದೊಳಗಿನ ಯುವಕ/ಯುವತಿಯರು, ಕಾಲೇಜ ವಿದ್ಯಾರ್ಥಿಗಳು, ಯುವಕ/ಯುವತಿ ಸಂಘಗಳ ಸದಸ್ಯರು, ಸಂಗೀತ/ನೃತ್ಯ ಶಾಲೆ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಸ್ಪರ್ಧೆಗಳ ವಿವರ ಇಂತಿದೆ. ಶಾಸ್ತ್ರೀಯ ನೃತ್ಯಗಳಾದ ಭರಟನಾಟ್ಯ, ಓಡಿಸ್ಸಿ, ಮಣಿಪುರಿ, ಕುಚಪುಡಿ ಮತ್ತು ಕಥಕ. ಶಾಸ್ತ್ರೀಯ ವಾದ್ಯಗಳಾದ ತಬಲಾ, ಸಿತಾರ, ಕೊಳಲು, ವೀಣೆ, ಮೃದಂಗ ಮತ್ತು ಕಥಕ. ಹಾರ್ಮೋನಿಯಂ ಮತ್ತು ಗಿಟಾರ್. ಶಾಸ್ತೀಯ ಗಾಯನಗಳಾದ ಕರ್ನಾಟಕ ಸಂಗೀತ ಮತ್ತು ಹಿಂದೂಸ್ಥಾನಿ ಸಂಗೀತ. ಅಶುಭಾಷಣ ಮತ್ತು ಏಕಾಂಕ ನಾಟಕ ಸ್ಪರ್ಧೆಯು (ಹಿಂದಿ ಅಥವಾ ಇಂಗ್ಲೀಷ ಭಾಷೆ). ಜನಪದ ಗೀತೆ ಮತ್ತು ಜನಪದ ನೃತ್ಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ರಾಜ್ಯ ಮಟ್ಟದ ಸ್ಪರ್ಧೆಯು ಉಡುಪಿಯಲ್ಲಿ 2017ರ ನವೆಂಬರ್ 30 ರಿಂದ ಡಿಸೆಂಬರ 2 ರವರೆಗೆ ನಡೆಯಲಿದೆ. ಪ್ರಥಮ ಸ್ಥಾನ ಪಡೆದು ವಿಜೇತರಾದ ಕ್ರೀಡಾಪಟುಗಳನ್ನು ನಿಯೋಜಿಸಲಾಗುವುದು. ಸ್ಪರ್ಧೆಗಳ ನಿಯಮಗಳನ್ನು ಎಲ್ಲ ಕಾಲೇಜುಗಳಿಗೆ ಸಂಗೀತ/ಶಾಲೆಗಳಿಗೆ ಕಳುಹಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಾರ್ಯಾಲಯವನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ: 08472-268637 ಅಥವಾ ಮೊಬೈಲ್ ಸಂಖ್ಯೆ 8197058425ನ್ನು ಸಂಪರ್ಕಿಸಲು ಕೋರಿದೆ.
ಬೆಳೆನಾಶ ಮಾಡುವ ಕಾಡು ಹಂದಿಗಳನ್ನು ಕೊಲ್ಲಲು ಅನುಮತಿ
*****************************************************
ಕಲಬುರಗಿ,ನ.14.(ಕ.ವಾ.)-ಸರ್ಕಾರದ ದಿನಾಂಕ: 01-10-2016ರ ಆದೇಶದಂತೆ ಕಲಬುರಗಿ ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿ ಮಾನವ ಪ್ರಾಣಕ್ಕೆ ಅಥವಾ ಸ್ವತ್ತಿಗೆ ಅಪಾಯಕಾರಿಯಾಗಿರುವ ಹಾಗೂ ಬೆಳೆ ಹಾನಿಮಾಡುವ ಕಾಡು ಹಂದಿಗಳನ್ನು ಮಾಲೀಕರು ಬೆಳೆ ಬೆಳೆದಿರುವ ಪ್ರದೇಶದ ವ್ಯಾಪ್ತಿಯಲ್ಲಿ ಪರವಾನಿಗೆ ಹೊಂದಿರುವ ಬಂದೂಕಿನಿಂದ ಗುಂಡು ಹಾರಿಸಬಹುದಾಗಿದೆ ಅಥವಾ ಭೇಟಿಯಾಡಬಹುದಾಗಿದೆ ಎಂದು ಕಲಬುರಗಿ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಈ ರೀತಿಯಾಗಿ ಗುಂಡು ಹಾರಿಸಿದಾಗ ಅಥವಾ ಭೇಟಿಯಾಡಿದಾಗ, ಸತ್ತ ಅಥವಾ ಜೀವಂತವಾಗಿರುವ ಕಾಡು ಹಂದಿಗಳನ್ನು 24 ಗಂಟೆಯೊಳಗಾಗಿ ಹತ್ತಿರದ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಬೇಕು. ಕಾಡು ಹಂದಿಗೆ ಗುಂಡು ಹಾರಿಸಿದ್ದಲ್ಲಿ ಸಂಬಂಧಪಟ್ಟ ಫಾರೆಸ್ಟರ್ ಅಥವಾ ಮೇಲಿನ ಹಂತದ ಅಧಿಕಾರಿಗಳು ಇಬ್ಬರು ಸಾಕ್ಷಿದಾರರ ಸಮ್ಮುಖದಲ್ಲಿ ಮಹಜರ್ ಮಾಡಬೇಕು. ಸತ್ತ ಕಾಡುಹಂದಿಯ ಮಾಂಸವನ್ನು ತಿನ್ನಲು ಅಥವಾ ಇತರೆ ಯಾವುದೇ ಉದ್ದೇಶಕ್ಕಾಗಿ ಉಪಯೋಗಿಸಬಾರದು. ಸತ್ತ ಕಾಡು ಹಂದಿಯ ಶವವನ್ನು ಮೂರು ಅಡಿ ಆಳದ ಗುಂಡಿಯಲ್ಲಿ ಸಮಾಧಿ ಮಾಡಬೇಕು ಅಥವಾ ಸುಡತಕ್ಕದ್ದು.
ಇಂತಹ ಪ್ರಕರಣಗಳಲ್ಲಿ ರಾಜ್ಯದ ಮುಖ್ಯ ವನ್ಯಜೀವಿ ಪಾಲಕರಿಗೆ ತಕ್ಷಣ ವರದಿ ಮಾಡಬೇಕು. ಅತಿಕ್ರಮಣ ಮಾಡಿರುವ ಪ್ರದೇಶಗಳಲ್ಲಿ ಕಾಡುಹಂದಿಗಳನ್ನು ಕೊಲ್ಲುವುದನ್ನು ನಿಷೇಧಿಸಲಾಗಿದೆ. ಹಾಲು ಕರೆಯುವ ಕಾಡುಹಂದಿಗಳನ್ನು ಕೊಲ್ಲತಕ್ಕದ್ದಲ್ಲ. ಈ ಕಾರ್ಯಾಚರಣೆ ಸಂದರ್ಭದಲ್ಲಿ ಕಾಡು ಹಂದಿಯು ಅರಣ್ಯಕ್ಕೆ ತಪ್ಪಿಸಿಕೊಂಡು ಹೋದಲ್ಲಿ ಅದನ್ನು ಹಿಂಬಾಲಿಸಿ ಕೊಲ್ಲತಕ್ಕದ್ದಲ್ಲ. ಸತ್ತ ಕಾಡು ಹಂದಿಯನ್ನು ಅರಣ್ಯ ಮತ್ತು ವನ್ಯಜೀವಿ ಇಲಾಖೆಯಿಂದಲೇ ಶವಸಂಸ್ಕಾರ ಮಾಡಬೇಕೆಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವ್ಯಾಪಾರೋದ್ಯಮ ಪ್ರಾರಂಭಿಸುವವರಿಗೆ ಎರಡು ದಿನಗಳ ಉದ್ಯಮಶೀಲತಾ ಪ್ರೇರಣಾ
*************************************************************************
ಶಿಬಿರ
********
ಕಲಬುರಗಿ,ನ.14.(ಕ.ವಾ.)-ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್-ಧಾರವಾಡ), ಕಲಬುರಗಿ ಹಾಗೂ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ 2017-18 ನೇ ಸಾಲಿನ ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆ ಅಡಿಯಲ್ಲಿ ಪರಿಶಿಷ್ವ ಜಾತಿ ಮತ್ತು ಪರಿಶಿಷ್ಟ ಪಂಗಡದ ವ್ಯಾಪಾರೋದ್ಯಮ ಪ್ರಾರಂಭಿಸುವ ಉದ್ದಿಮೆದಾರರಿಗೆ ಎರಡು ದಿನಗಳ ಉದ್ಯಮಶೀಲತಾ ಪ್ರೇರಣಾ ಶಿಬಿರವನ್ನು ಉಚಿತವಾಗಿ ಜಿಲ್ಲೆಯ ಆಯಾ ತಾಲೂಕಾ ಕೇಂದ್ರಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಸಿಡಾಕ್ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಜಿಲ್ಲೆಯ ಆಸಕ್ತ ಅಭ್ಯರ್ಥಿಗಳು ತಮ್ಮ ಹೆಸರು ಮತ್ತು ವಿಳಾಸ, ಮೊಬೈಲ್ ಸಂಖ್ಯೆ, ಶಿಕ್ಷಣ ಹಾಗೂ ಇತರೆ ವಿವರವನ್ನು ನವೆಂಬರ್ 22ರೊಳಗಾಗಿ ಇ-ಮೇಲ್ ರಿಜ.ಛಿeಜoಞ.ಞಟb@gmಚಿiಟ.ಛಿom ಮುಖಾಂತರ ಅಥವಾ 9620910554 ಈ ಮೊಬೈಲ್ ಸಂಖ್ಯೆಗೆ ಎಸ್.ಎಂ.ಎಸ್. ಅಥವಾ ಕರೆ ಮಾಡುವ ಮೂಲಕ ಅಥವಾ ಕಲಬುರಗಿ ಜೇವರ್ಗಿ ಕ್ರಾಸ್‍ನಲ್ಲಿರುವ ಜಿಲ್ಲಾ ಕೈಗಾರಿಕಾ ಕೇಂದ್ರದ ಕಚೇರಿಗೆ ಖುದ್ದಾಗಿ ಭೇಟಿ ನೀಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ.
ಜಿಲ್ಲೆಯ ತಾಲೂಕಾವಾರು ನಡೆಯುವ ತರಬೇತಿ ಕಾರ್ಯಕ್ರಮಗಳ ದಿನಾಂಕಗಳನ್ನು ಅಭ್ಯರ್ಥಿಗಳಿಗೆ ಎಸ್.ಎಂ.ಎಸ್ ಮುಖಾಂತರ ತಿಳಿಸಲಾಗುವುದು. ಅಭ್ಯರ್ಥಿಗಳು ನಿಗದಿಪಡಿಸಿದ ದಿನಾಂಕದಂದು ಈ ತರಬೇತಿಗೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 9620910554, 9449526828, 9632000783ಗಳನ್ನು ಸಂಪರ್ಕಿಸಲು ಕೋರಲಾಗಿದೆ.
ಈ ತರಬೇತಿ ಶಿಬಿರದಲ್ಲಿ ಉದ್ಯಮಶೀಲತೆಯ ಅರ್ಥ, ಅವಶ್ಯಕತೆ, ಲಾಭ ಹಾಗೂ ಸಾಧಿಸುವ ದಾರಿ, ಪ್ರೇರಣಾತ್ಮಕ ತರಬೇತಿ ಹಾಗೂ ಉದ್ಯಮಶೀಲತೆಯ ಅವಶ್ಯಕತೆ, ವ್ಯವಹಾರ ಅಭಿವೃದ್ಧಿಗೆ ಸೃಜನಾತ್ಮಕ ಆಲೋಚನೆ ಹಾಗೂ ಸಮಯ ಪ್ರಜ್ಞೆ ಕುರಿತು ಅರಿವು ಮೂಡಿಸುವದು, ಬ್ಯಾಂಕ್ ವ್ಯವಹಾರ, ಹಣಕಾಸು ನಿರ್ವಹಣೆ ಮಾಹಿತಿ, ಯಶಸ್ವಿ ಉದ್ಯಮಶೀಲರೋಂದಿಗೆ ಸಂವಾದ ಎಸ್.ಸಿ ಮತ್ತು ಎಸ್.ಟಿ ಜನಾಂಗದವರಿಗೆ ಸ್ವಯಂ ಉದ್ಯೋಗಕ್ಕೆ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಡಿಮೆ ವೆಚ್ಚದ ಈರುಳ್ಳಿ ಸಂಗ್ರಹಣಾ ಮನೆ
************************************
ಕಲಬುರಗಿ,ನ.14(ಕ.ವಾ.)-ಈರುಳ್ಳಿಯಲ್ಲಿ ತೇವಾಂಶ ಹೆಚ್ಚಾಗಿರುವದರಿಂದ ಮತ್ತು ಸರಿಯಾದ ವಾತಾವರಣದಲ್ಲಿ ಶೇಖರಣೆ ಮಾಡದೇ ಇದ್ದಾಗ ಅವು ಬಹುಬೇಗನೆ ಕೊಳೆತು ಹಾಳಾಗುತ್ತದೆ. ಈರುಳ್ಳಿಯನ್ನು ಕೋಯ್ಲು ಆದ ನಂತರ 3 ರಿಂದ 4 ತಿಂಗಳವರೆಗೆ ಕೆಡದಂತೆ ಇಡಲು ಮತ್ತು ಒಳ್ಳೆ ಬೆಲೆ ಸಿಗುವರೆಗೆ ಕಡಿಮೆ ವೆಚ್ಚದಲ್ಲಿ ಈರುಳ್ಳಿ ಸಂಗ್ರಹಣಾ ಮನೆ ನಿರ್ಮಿಸಿ ಸಂಗ್ರಹಿಸಿ ಇಟ್ಟು ರೈತರು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದಾಗಿದೆ ಎಂದು ಕಲಬುರಗಿ ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.
ಇದರಿಂದ ರೈತರು ನಷ್ಟಕ್ಕೆ ಇಡಾಗುತ್ತದೆ. ಸ್ಥಳದಲ್ಲಿಯೇ ದೊರಕುವಂತಹ ವಸ್ತುಗಳಾದಂತಹ ಬಿದಿರು, ಹುಲ್ಲು ಮೆದೆ ಅಥವಾ ಕಬ್ಬಿನ ವಾಡೆಯನ್ನು ಉಪಯೋಗಿಸಿ ಕಡಿಮೆ ವೆಚ್ಚದ ಈರುಳ್ಳಿ ಸಂಗ್ರಹಣಾ ಮನೆಯನ್ನು ನಿರ್ಮಿಸಬಹುದಾಗಿದೆ. ಈರುಳ್ಳಿ ಸಂಗ್ರಹಣಾ ಮನೆ ನಿರ್ಮಾಣ ಕುರಿತು ಹೆಚ್ಚಿನ ಮಾಹಿತಿಗಾಗಿ ಕಲಬುರಗಿಯ ಐವಾನ್-ಇ-ಶಾಹಿ ರಸ್ತೆ (ಹಾರ್ಟಿ ಕ್ಲಿನಿಕ್) ತೋಟಗಾರಿಕೆ ಇಲಾಖೆಯ ವಿಷಯ ತಜ್ಞ ಮಂಜುನಾಥ ಪಾಟೀಲ ಅವರನ್ನು ಮೊಬೈಲ್ ಸಂಖ್ಯೆ 7259984026 ನ್ನು ಸಂಪರ್ಕಿಸಲು ಕೋರಲಾಗಿದೆ.
ನವೆಂಬರ್ 16ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
*************************************************
ಕಲಬುರಗಿ,ನ.14.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದಿಂದ ನವೆಂಬರ್ 16ರಂದು 11ಕೆ.ವಿ. ಎಂ.ಎಸ್.ಕೆ. ಮಿಲ್ ಫೀಡರ್ ವ್ಯಾಪ್ತಿಯಲ್ಲಿ ನಿರ್ವಹಣಾ ಕಾರ್ಯಕೈಗೊಳ್ಳುವ ಅಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.
ವಿದ್ಯುತ್ ಸರಬರಾಜಿನಲ್ಲಿ ವಿದ್ಯುತ್ ವ್ಯತ್ಯಯವಾಗುವ ಬಡಾವಣೆಗಳ ವಿವರ ಇಂತಿದೆ. 11 ಕೆ.ವಿ ಎಂ.ಎಸ್.ಕೆ.ಮಿಲ್ ಫೀಡರ್: ಮದೀನಾ ಕಾಲೋನಿ, ನ್ಯೂ ಮದೀನಾ ಕಾಲೋನಿ, ಮೀಸ್‍ಬಾ ನಗರ, ಇಕ್ಬಾಲ್ ಕಾಲೋನಿ, ಹುಸೇನ್ ಗಾರ್ಡನ್, ಕೃಷ್ಣ ಮಿನರಲï್ಸ, ನ್ಯೂ ರಾಘವೇಂದ್ರ ಕಾಲೋನಿ, ಖಾನಿ ಏರಿಯಾ, ಮಹ್ಮದಿ ಚೌಕ್, ಕೆ.ಬಿ.ಎನ್. ಹುಸೇನ್ ಕೊಲ್ಡ್‍ಸ್ಟೊರೇಜ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ನವೆಂಬರ್ 25ಕ್ಕೆ ಮುಂದೂಡಿಕೆ
**********************************************************
ಕಲಬುರಗಿ ನ.14(ಕ.ವಾ):ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಅವರ ಅಧ್ಯಕ್ಷತೆಯಲ್ಲಿ ಜರುಗಲಿರುವ ಕಲಬುರಗಿ ಜಿಲ್ಲಾ ಪಂಚಾಯಿತಿಯ ಒಂಭತ್ತನೇ ಸಾಮಾನ್ಯ ಸಭೆಯು ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯತ್ತಿರುವ ಪ್ರಯುಕ್ತ ನವೆಂಬರ್ 25ಕ್ಕೆ ಮುಂದೂಡಲಾಗಿದೆ.
ಈ ಮುಂದೂಡಿಕೆ ಸಭೆಯು ನವೆಂಬರ್ 25ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯಿತಿ ಹೊಸ ಸಭಾಂಗಣದಲ್ಲಿ ಜರುಗಲಿದೆ. ಸಂಬಂಧಪಟ್ಟ ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳು ಸಂಬಂಧಿಸಿದ ಎಲ್ಲ ಅಗತ್ಯ ದಾಖಲೆಗಳೊಂದಿಗೆ ಸದರಿ ಸಭೆಗೆ ಖುದ್ದಾಗಿ ಹಾಜರಾಗಬೇಕು. ಸದರಿ ಸಭೆಯು ಈ ಮುಂಚೆ ನವೆಂಬರ್ 16ರಂದು ನಿಗದಿಯಾಗಿತ್ತು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.













ಹೀಗಾಗಿ ಲೇಖನಗಳು News and photo date: 14-11--2017

ಎಲ್ಲಾ ಲೇಖನಗಳು ಆಗಿದೆ News and photo date: 14-11--2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ News and photo date: 14-11--2017 ಲಿಂಕ್ ವಿಳಾಸ https://dekalungi.blogspot.com/2017/11/news-and-photo-date-14-11-2017.html

Subscribe to receive free email updates:

0 Response to "News and photo date: 14-11--2017"

ಕಾಮೆಂಟ್‌‌ ಪೋಸ್ಟ್‌ ಮಾಡಿ