ಶೀರ್ಷಿಕೆ : ತಜ್ಞ ವೈದ್ಯರ ತಂಡ ಕೊಪ್ಪಳ ತಾಲೂಕಿಗೆ ಭೇಟಿ ಕುರಿಗಳಿಗೆ ನೀಲಿ ನಾಲಿಗೆ ರೋಗ : ಲಸಿಕಾ ಕಾರ್ಯ ಪ್ರಾರಂಭ
ಲಿಂಕ್ : ತಜ್ಞ ವೈದ್ಯರ ತಂಡ ಕೊಪ್ಪಳ ತಾಲೂಕಿಗೆ ಭೇಟಿ ಕುರಿಗಳಿಗೆ ನೀಲಿ ನಾಲಿಗೆ ರೋಗ : ಲಸಿಕಾ ಕಾರ್ಯ ಪ್ರಾರಂಭ
ತಜ್ಞ ವೈದ್ಯರ ತಂಡ ಕೊಪ್ಪಳ ತಾಲೂಕಿಗೆ ಭೇಟಿ ಕುರಿಗಳಿಗೆ ನೀಲಿ ನಾಲಿಗೆ ರೋಗ : ಲಸಿಕಾ ಕಾರ್ಯ ಪ್ರಾರಂಭ
ಕೊಪ್ಪಳ. ನ.14 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕಿನಲ್ಲಿ ನೀಲಿ ನಾಲಿಗೆ ರೋಗ ನಿಯಂತ್ರಣಕ್ಕಾಗಿ ಪಶು ವೈದ್ಯಕೀಯ ಸೇವಾ ಇಲಾಖೆಯು ಕುರಿಗಳಿಗೆ ಲಸಿಕೆ ನೀಡುವ ಕಾರ್ಯವನ್ನು ಪ್ರಾರಂಭಿಸಿದೆ ಎಂದು ಇಲಾಖೆಯ ಉಪನಿರ್ದೇಶಕ ಡಾ. ಶಿವಣ್ಣ ತಿಳಿಸಿದ್ದಾರೆ.
ಕೊಪ್ಪಳ ತಾಲೂಕಿನಲ್ಲಿ ಅಕ್ಟೋಬರ ತಿಂಗಳಿನಿಂದ ಈವರೆಗೆ ಒಟ್ಟು 1236 ಕುರಿ/ಮೇಕೆಗಳು ಸಾವನ್ನಪಿದ್ದು, ಈ ಪೈಕಿ, ಸುಮಾರು 1013 ಕುರಿಗಳು ನೀಲಿ ನಾಲಿಗೆ ರೋಗದಿಂದ ಸಾವನ್ನಪ್ಪಿರುವುದು ದೃಢಪಟ್ಟಿರುತ್ತದೆ. 2012 ರ ಜಾನುವಾರು ಗಣತಿಯನ್ವಯ ಕೊಪ್ಪಳ ತಾಲೂಕಿನಲ್ಲಿ 168945 ಕುರಿ/ಮೇಕೆಗಳ ಗಣತಿ ಮಾಡಲಾಗಿದೆ. ಈಗ ಅಕ್ಟೋಬರ್ ತಿಂಗಳಿನಿಂದ ಇಲ್ಲಿಯವರೆಗೂ 1013 ಕುರಿಗಳು ನೀಲಿನಾಲಿಗೆ ರೋಗಕ್ಕೆ ತುತ್ತಾಗಿವೆ. ಪ್ರಕರಣ ಬೆಳಕಿಗೆ ಬಂದ ಬಳಿಕ, ಬೆಂಗಳೂರಿನಿಂದ ತಜ್ಞ ವೈದ್ಯರು ಮತ್ತು ಅಧಿಕಾರಿಗಳ ತಂಡ, ಕೊಪ್ಪಳ ತಾಲೂಕಿಗೆ ನೀಲಿ ನಾಲಗೆ ರೋಗದ ನಿಯಂತ್ರಣಕ್ಕಾಗಿ ಮಂಗಳವಾರದಂದು ಭೇಟಿ ನೀಡಿ, ರೋಗಗ್ರಸ್ಥ ಕುರಿಗಳ ಪರೀಕ್ಷೆ ಹಾಗೂ ಸಾವನ್ನಪ್ಪಿರುಗ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿ, ಅಂಗಾಂಗಗಳ ಮಾದರಿಯನ್ನು ಸಂಗ್ರಹಿಸಿದೆ. ಈ ರೋಗದ ಹತೋಟಿಗೆ ಅಗತ್ಯ ಸಲಹೆಗಳನ್ನೂ ನೀಡಿದ್ದಾರೆ.
ಕಳೆದ ಅಕ್ಟೋಬರ್ ತಿಂಗಳಲ್ಲಿ ಪ್ರಾದೇಶಿಕ ಪ್ರಾಣಿ ರೋಗ ತನಿಕಾ ಪ್ರಯೋಗಾಲಯದ ವಿಜ್ಞಾನಿಗಳು ಜಿಲ್ಲೆಯಲ್ಲಿನ ರೋಗ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ತನಿಖೆ ಮಾಡಿದ್ದು, ನೀಲಿ ನಾಲಗೆ ರೋಗದ ಜೊತೆಗೆ ಫೂಟ್ ರಾಟ್ ರೋಗ ಇರುವಿಕೆಯನ್ನು ಅನುಮಾನಿಸಿ ಮಿಶ್ರ ರೋಗಗಳಿಂದಾಗಿ ಕುರಿ/ಮೇಕೆಗಳ ಸಾವನ್ನಪ್ಪಿರುವುದಾಗಿ ಅಭಿಪ್ರಾಯ ಪಟ್ಟಿದ್ದಾರೆ.
ಸದ್ಯ ಸಾವನ್ನಪ್ಪಿರುವ ಕುರಿ/ ಮೇಕೆಗಳ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ನೀಲಿ ನಾಲಗೆ ರೋಗವಿರುವುದು ದೃಢಪಟ್ಟಿದೆ. ಈ ರೋಗವು ಬಿ.ಟಿ.ವಿ ಎಂಬ ವೈರಾಣುವಿನಿಂದ ಬರುವಂತದ್ದಾಗಿದ್ದು, ಕೀಟಗಳಿಂದ ಈ ರೋಗ ಪ್ರಸರಿಸುತ್ತದೆ. ಹೆಚ್ಚಾಗಿ ಕುರಿಗಳಲ್ಲಿ ಈ ರೋಗ ಕಂಡುಬರುತ್ತದೆ. ಈ ಬಾರಿ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚಾಗಿ ಮಳೆಯಾಗಿರುವುದರಿಂದ ರೋಗೋದ್ರೇಕವಾಗಿರುವುದಾಗಿ ರೋಗ ತನಿಖಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಪಶುವೈದ್ಯರ ಕೊರತೆಯಿದ್ದು, ಮಂಜೂರಾದ ಒಟ್ಟು67 ಪಶುವೈದ್ಯರ/ಮುಖ್ಯ ಪಶುವೈದ್ಯರ ಹುದ್ದೆಗಳಲ್ಲಿ 22 ಹುದ್ದೆಗಳು ಮಾತ್ರ ಭರ್ತಿಯಾಗಿದ್ದು, ಉಳಿದ 45 ಹುದ್ದೆಗಳು ಖಾಲಿ ಉಳಿದಿವೆ. ಇದರಿಂದಾಗಿ ಇಲಾಖೆಯ ಕಾರ್ಯಚಟುವಟಿಕೆಗೆ ತೊಂದರೆಯಾಗಿದ್ದು ಕೂಡಲೇ ಪಶುವೈದ್ಯರ ಕೊರತೆ ನೀಗಿಸುವಂತೆ ಕೋರಲಾಗಿದೆ. ಹಾಗೂ ಕುರಿ/ಮೇಕೆಗಳು ಸಾವನ್ನಪ್ಪಿದ ಪ್ರಸ್ತಾವನೆಗಳನ್ನು ಕುರಿ ಮಂಡಳಿಗೆ ಸಲ್ಲಿಸುವುದಕ್ಕಾಗಿ ಸಾವನ್ನಪ್ಪಿದ ಕುರಿಯ ಭಾವಚಿತ್ರದೊಂದಿಗೆ ಸ್ಥಳೀಯ ಪಶುವೈದ್ಯರ ಹಾಜರಿ ಕಡ್ಡಾಯಗೊಳಿಸಲಾಗಿದೆ ಆದ್ದರಿಂದ ಜಿಲ್ಲೆಯಲ್ಲಿ ಪಶುವೈದ್ಯರ ಕೊರತೆ ಇದ್ದು, ಸಾಕಷ್ಟು ತೊಂದರೆಗಳನ್ನು ರೈತರು ಅನುಭವಿಸುವಂತಾಗಿದ್ದರಿಂದ ಭಾವಚಿತ್ರಕ್ಕೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅರೆ-ತಾಂತ್ರಿಕ ಪಶುವೈದ್ಯಕೀಯ ಸಿಬ್ಬಂದಿಗಳು ನಿಲ್ಲುವುದಕ್ಕೆ ಅನುವು ಮಾಡಿಕೊಡುವಂತೆಯೂ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಕೋರಿಕೆ ಸಲ್ಲಿಸಲಾಗಿದೆ ಎಂದು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ. ಶಿವಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ತಜ್ಞ ವೈದ್ಯರ ತಂಡ ಕೊಪ್ಪಳ ತಾಲೂಕಿಗೆ ಭೇಟಿ ಕುರಿಗಳಿಗೆ ನೀಲಿ ನಾಲಿಗೆ ರೋಗ : ಲಸಿಕಾ ಕಾರ್ಯ ಪ್ರಾರಂಭ
ಎಲ್ಲಾ ಲೇಖನಗಳು ಆಗಿದೆ ತಜ್ಞ ವೈದ್ಯರ ತಂಡ ಕೊಪ್ಪಳ ತಾಲೂಕಿಗೆ ಭೇಟಿ ಕುರಿಗಳಿಗೆ ನೀಲಿ ನಾಲಿಗೆ ರೋಗ : ಲಸಿಕಾ ಕಾರ್ಯ ಪ್ರಾರಂಭ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ತಜ್ಞ ವೈದ್ಯರ ತಂಡ ಕೊಪ್ಪಳ ತಾಲೂಕಿಗೆ ಭೇಟಿ ಕುರಿಗಳಿಗೆ ನೀಲಿ ನಾಲಿಗೆ ರೋಗ : ಲಸಿಕಾ ಕಾರ್ಯ ಪ್ರಾರಂಭ ಲಿಂಕ್ ವಿಳಾಸ https://dekalungi.blogspot.com/2017/11/blog-post_62.html
0 Response to "ತಜ್ಞ ವೈದ್ಯರ ತಂಡ ಕೊಪ್ಪಳ ತಾಲೂಕಿಗೆ ಭೇಟಿ ಕುರಿಗಳಿಗೆ ನೀಲಿ ನಾಲಿಗೆ ರೋಗ : ಲಸಿಕಾ ಕಾರ್ಯ ಪ್ರಾರಂಭ"
ಕಾಮೆಂಟ್ ಪೋಸ್ಟ್ ಮಾಡಿ