ಶೀರ್ಷಿಕೆ : News and photo Date: 13--11--2017
ಲಿಂಕ್ : News and photo Date: 13--11--2017
News and photo Date: 13--11--2017
ಎರಡು ತಿಂಗಳಲ್ಲಿ ಪೌರ ಕಾರ್ಮಿಕರ ಹೊರಗುತ್ತಿಗೆ ಪದ್ದತಿ ರದ್ದು
*****************************************************
ಕಲಬುರಗಿ,ನ.13.(ಕ.ವಾ.)-ರಾಜ್ಯದಲ್ಲಿ ಮುಂದಿನ ಎರಡು ತಿಂಗಳೊಳಗಾಗಿ ಪೌರ ಕಾರ್ಮಿಕರ ಹೊರಗುತ್ತಿಗೆ ಪದ್ಧತಿ ರದ್ದಾಗುತ್ತಿದ್ದು, ಪೌರ ಕಾರ್ಮಿಕರಿಗೆ ನಗರ ಸ್ಥಳೀಯ ಸಂಸ್ಥೆಗಳಿಂದ ನೇರವಾಗಿ ವೇತನ ನೀಡಲಾಗುವುದು ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗು ವ್ಯವಸ್ಥಾಪಕ ನಿರ್ದೇಶಕ ಎಸ್. ಮಾರೆಪ್ಪ ತಿಳಿಸಿದರು.
ಅವರು ಸೋಮವಾರ ಕಲಬುರಗಿ ಮಹಾನಗರ ಪಾಲಿಕೆಯ ಟೌನ್‍ಹಾಲ್‍ನಲ್ಲಿ ಹಮ್ಮಿಕೊಂಡಿದ್ದ ಸಫಾಯಿ ಕರ್ಮಚಾರಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಇನ್ನು ಮುಂದೆ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಸಫಾಯಿ ಕರ್ಮಚಾರಿಗಳ ಮಧ್ಯೆ ಯಾವುದೇ ಗುತ್ತಿಗೆದಾರರು ಕೆಲಸ ನಿರ್ವಹಿಸುದಿಲ್ಲ. ಕಾರಣ ಸಫಾಯಿ ಕರ್ಮಚಾರಿಗಳು ಗುತ್ತಿಗೆದಾರರು ತಮಗೆ ಭವಿಷ್ಯ ನಿಧಿ ಪಾವತಿಸಿರುವ ಬಗ್ಗೆ ಖಚಿತಪಡಿಸಿಕೊಳ್ಳುವಂತೆ ತಿಳಿಸಿದರು.
ದೇಶದಲ್ಲಿ 13 ಸಫಾಯಿ ಕರ್ಮಚಾರಿ ಆಯೋಗಗಳಿವೆ ಆದರೆ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಸ್ಥಾಪಿಸಿದ ಏಕೈಕ ರಾಜ್ಯವೆಂಬ ಕೀರ್ತಿ ಕರ್ನಾಟಕಕ್ಕೆ ಸಲ್ಲುತ್ತದೆ. ಮುಖ್ಯಮಂತ್ರಿಗಳು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ರೂ. ಅನುದಾನ ನೀಡಿದ್ದಾರೆ. ಈ ಅನುದಾನದಲ್ಲಿ ಸಫಾಯಿ ಕರ್ಮಚಾರಿಗಳ ಕಾಲೋನಿಗಳಿಗೆ ರಸ್ತೆ, ಚರಂಡಿಗಳಂತಹ ಮೂಲಭೂತ ಸೌಲಭ್ಯ ದೊರಕಿಸಲಾಗುವುದು ಎಂದರು.
ನಿಗಮದಿಂದ ಸಫಾಯಿ ಕರ್ಮಚಾರಿಗಳಿಗೆ ನಿವೇಶನ ಹಾಗೂ ನಿವೇಶನದಲ್ಲಿ ಸ್ವಂತ ಮನೆ ಕಟ್ಟುವುದಕ್ಕಾಗಿ ಸಹಾಯ ನೀಡಲಾಗುವುದು. ಕರ್ಮಚಾರಿಗಳ ಮಕ್ಕಳು ವ್ಯಾಸಂಗ ಮಾಡುತ್ತಿದ್ದರೆ ಅವರಿಗೆ ತಲಾ 1 ಸಾವಿರ ರೂಪಾಯಿ ನೀಡಲು ತೀರ್ಮಾನಿಸಲಾಗಿದೆ ಹಾಗೂ ಪದವಿ, ಇಂಜಿನಿಯರಿಂಗ್, ಮೆಡಿಕಲ್ ವ್ಯಾಸಂಗ ಮಾಡಲು ಇಚ್ಛೀಸುವ ಮಕ್ಕಳಿಗೆ ಸರ್ಕಾರವೇ ವೆಚ್ಚ ಭರಿಸುವುದು. ಸ್ವಯಂ ಉದ್ಯೋಗ ಮಾಡಬಯಸುವವರಿಗೆ 5ರಿಂದ 10 ಲಕ್ಷ ರೂಪಾಯಿ ಸಾಲ ನೀಡಲಾಗುವುದು. ಸಫಾಯಿ ಕರ್ಮಚಾರಿಗಳಿಗೆ ಮನೆ ಹಾಗೂ ಉದ್ಯೋಗಕ್ಕಾಗಿ ಒಂದು ಕಾರು ನೀಡುವ ಮೂಲಕ ಅವರಿಗೆ ಆಸ್ತಿ ರೂಪಿಸಿ ಕೊಡಲಾಗುತ್ತಿದೆ. ಕಲಬುರಗಿ ಮಹಾನಗರಪಾಲಿಕೆಯಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ ಸುಮಾರು 30 ಪೌರ ಕಾರ್ಮಿಕರನ್ನು ಗಾರ್ಬೆಲ್ ಸಿಸ್ಟ್‍ಂ ಅಡಿ ಸೇರಿಸುವ ಪ್ರಯತ್ನ ಮಾಡಬೇಕು ಎಂದರು.
ಪರಿಸರ ಇಂಜಿನಿಯರ್ ಮುನಾಫ್ ಪಟೇಲ್ ಮಾತನಾಡಿ, ಸದ್ಯ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ 191 ಖಾಯಂ ಪೌರ ಕಾರ್ಮಿಕರಿದ್ದಾರೆ. ಮೊದಲು 775 ಹೊರಗುತ್ತಿಗೆ ಪೌರ ಕಾರ್ಮಿಕರಿದ್ದರು. 2011ರ ಸಮೀಕ್ಷೆ ಪ್ರಕಾರ 900 ಪೌರಕಾರ್ಮಿಕರು ಬೇಕಾಗಿದ್ದರು. ಖಾಯಂ, ಹೊರಗುತ್ತಿಗೆ ಹಾಗೂ ವಾಹನ ಚಾಲಕರು ಸೇರಿದಂತೆ ಒಟ್ಟು 1024 ಪೌರ ಕಾರ್ಮಿಕರ ಸೇವೆ ಪಡೆಯಲು ಅನುಮತಿ ದೊರೆತ ಹಿನ್ನೆಲೆಯಲ್ಲಿ ಸುಮಾರು 30-40 ಜನರ ಸೇವೆಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಪರಿಸರ ಅಭಿಯಂತರ ಮುಜಾಮಿಲ್ ಅಲಂ, ಚೇತನಕುಮಾರ್, ನಗರಾಭವೃದ್ಧಿ ಕೋಶದ ಇಂಜಿನಿಯರ್, ಪೌರ ಕಾರ್ಮಿಕ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.

ಜವಳಿ ಉದ್ದಿಮೆಯಿಂದ ಹೆಚ್ಚಿನ ಆದಾಯ
***********************************
ಕಲಬುರಗಿ ನ.13 (ಕ.ವಾ): ಕಲಬುರಗಿಯಲ್ಲಿ ನೂತನವಾಗಿ ಜವಳಿ ಉದ್ಯೋಗ ಪ್ರಾರಂಭಿಸುವವರು ಉತ್ಪಾದನಾ ವೆಚ್ಚ ಕಡಿಮೆಗೊಳಿಸಿ ಮಾರಾಟ ದರ ಹೆಚ್ಚಿಸುವುದರ ಮೂಲಕ ಹೆಚ್ಚಿನ ಆದಾಯ ಪಡೆಯಬಹುದಾಗಿದೆ ಎಂದು ಸಿಡಾಕ್ ಜಂಟಿ ನಿರ್ದೇಶಕ ಜಿ.ಯು.ಹುಡೇದ್ ಹೇಳಿದರು.
ಅವರು ಸೋಮವಾರ ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್ ಕಲಬುರಗಿ ಕರ್ನಾಟಕ ಉದ್ಯಮಶೀಲಾಭಿವೃದ್ಧಿ ಕೇಂದ್ರ(ಸಿಡಾಕ್),ಧಾರವಾಡ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಗುಲಬರ್ಗಾ ಉದ್ದಿಮೆ ವಸಾಹತು ಉತ್ಪಾದಕರ ಸಂಘದಲ್ಲಿಂದು ಹಮ್ಮಿಕೊಂಡಿದ್ದ 6 ದಿನಗಳ ಉದ್ಯಮಶೀಲತಾ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಲಬುರಗಿಯಲ್ಲಿ ಉದ್ದಿಮೆ ಸ್ಥಾಪಿಸಲು ಅವಶ್ಯಕವಿರುವ ನಿವೇಶನವು ಕಡಿಮೆ ದರದಲ್ಲಿ ಲಭ್ಯವಾಗುವುದು. ಅಲ್ಲದೇ ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ಅನ್ವಯವಾಗಿರುವ 371(ಜೆ) ಕಲಂನಿಂದಾಗಿ ವಿಶೇಷ ರಿಯಾಯಿತಿಗಳು ಲಭ್ಯವಾಗುವವು. ಹೈ.ಕ. ಪ್ರದೇಶ ಬಿಟ್ಟರೆ ಬೇರೆ ಪ್ರದೇಶಗಳಲ್ಲಿ ಉದ್ದಿಮೆ ಸ್ಥಾಪಿಸಲು ಸಹಾಯಧನದ ಸೌಲಭ್ಯ ಸಿಗುವುದಿಲ್ಲ. ಹೀಗಾಗಿ ಈ ಭಾಗದಲ್ಲಿ ಉದ್ದಿಮೆ ಸ್ಥಾಪಿಸಿ ಪ್ರಯತ್ನ ಪಟ್ಟಲ್ಲಿ ಹೆಚ್ಚು ಲಾಭಗಳಿಸಬಹುದು ಎಂದು ಅಭಿಪ್ರಾಯಪಟ್ಟರು.
ಜವಳಿ ಕ್ಷೇತ್ರಕ್ಕೆ ಹೈ.ಕ. ಭಾಗದಲ್ಲಿ ವಿಪುಲ ಅವಕಾಶಗಳಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಉದ್ದಿಮೆ ಸ್ಥಾಪಿಸಲು ಶೇ. 75ರಷ್ಟು ಸಹಾಯಧನ ದೊರೆಯುತ್ತದೆ. ಈ ಸವಲತ್ತುಗಳ ಪ್ರಯೋಜನ ಪಡೆಯಬೇಕು. ಸಿದ್ದ ಉಡುಪು ತಯಾರಿಸಿದ್ದಲ್ಲಿ ಸುಮಾರು 3-4 ವರ್ಷಗಳ ಕಾಲ ಬೇಡಿಕೆ ಇದ್ದು, ಇದರಿಂದ ಯಾವುದೇ ಹಾನಿಯಾಗುವುದಿಲ್ಲ. ಉದ್ದಿಮೆದಾರರು ಉದ್ಯಮಗಳ ಬಗ್ಗೆ ಹೆಚ್ಚಿನ ಜ್ಞಾನ ಹೊಂದಿ ಪ್ರಾರಂಭಿಸಿದ್ದಲ್ಲಿ ಯಶಸ್ಸು ಸಾಧ್ಯವಾಗುವುದು. ಜವಳಿ ಆಧಾರಿತ ಉದ್ದಿಮೆಗಳು ಪ್ರಾರಂಭವಾಗುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ. ಅದರಲ್ಲೂ ಮಹಿಳೆಯರಿಗೆ ಹೆಚ್ಚಿನ ಉದ್ಯೋಗ ದೊರೆಯಲಿದೆ ಎಂದು ಹೇಳಿದರು.
ನೂತನ ಜವಳಿ ನೀತಿ 2013-18 ಅಡಿಯಲ್ಲಿ ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಫಲಾನುಭವಿಗಳು ಹಾಗೂ ಸಣ್ಣ ಮತ್ತು ಮಧ್ಯಮ ಜವಳಿ ಉದ್ದಿಮೆ ಸ್ಥಾಪಿಸುವ ಉದ್ದಿಮೆದಾರರಿಗೆ ಇಲಾಖೆಯಿಂದ ದೊರಕುವ ಸೌಲಭ್ಯಗಳು ಮತ್ತು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜವಳಿ ವಲಯದ ಯೋಜನೆಗಳ ಮಾಹಿತಿ ನೀಡುವ ಉದ್ದೇಶದಿಂದ ನ.13 ರಿಂದ ನ.18 ವರೆಗೆ ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ 6 ದಿನಗಳ ಉದ್ಯಮಶೀಲ ತರಬೇತಿ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಲೀಡ್ ಬ್ಯಾಂಕ್ ಅಧಿಕಾರಿ ವಿಷ್ಣು ಮಾತನಾಡಿ, ಕೇಂದ್ರ ಸರ್ಕಾರದಿಂದ ಮುದ್ರಾ, ಸ್ಟ್ಯಾಂಡ್ ಅಪ್ ಇಂಡಿಯಾಗಳಂತಹ ಯೋಜನೆಗಳಿದ್ದು, ಉದ್ದಿಮೆ ಪ್ರಾರಂಭಿಸಲು ಸುಮಾರು ಶೇ. 75ರಷ್ಟು ಸಹಾಯಧನ ದೊರೆಯುವುದು. ಇದರ ಪ್ರಯೋಜನ ಪಡೆದುಬ್ಯಾಂಕ್ ಸಹಾಯದೊಂದಿಗೆ ಉದ್ದಿಮೆ ಪ್ರಾರಂಭಿಸಬೇಕು. ಉದ್ದಿಮೆ ಪ್ರಾರಂಭಿಸಲು ಭೂಮಿ, ಕಟ್ಟಡ, ಯಂತ್ರೋಪಕರಣಗಳನ್ನೊಳಗೊಂಡ ವಿವರವಾದ ಯೋಜನಾ ವರದಿ ಬ್ಯಾಂಕುಗಳಿಗೆ ನೀಡಿದಲ್ಲಿ ಯಾವುದೇ ಬ್ಯಾಂಕ್‍ನಿಂದ ಸಾಲ ಪಡೆಯಬಹುದಾಗಿದೆ ಎಂದು ವಿವರಿಸಿದರು.
ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿದೇಶಕ ಮಂಜುನಾಥ ಎ., ಗುಲಬಗಾ ಉದ್ದಿಮೆ ವಸಾಹತು ಉತ್ಪಾದಕರ ಸಂಘದ ಗೌರವ ಕಾರ್ಯದರ್ಶಿ ಸುರೇಶ ನಂದ್ಯಾಳ, ಸ್ಮಾಸ್ ಫುಡ್ ಕ್ಲಸ್ಟರ್‍ನ ಅಧ್ಯಕ್ಷೆ ವಿಜಯಲಕ್ಷ್ಮೀ ಶೀಲವಂತ, ಕೈಮಗ್ಗ ಮತ್ತು ಜವಳಿ ಇಲಾಖೆಯ ಜವಳಿ ಪ್ರವರ್ಧನಾಧಿಕಾರಿ ಸಂತೋಷ ಚಾರಖಾನಿ, ಕೈಮಗ್ಗ ಮತ್ತು ಜವಳಿ ಇಲಾಖೆ ಸಿಬ್ಬಂದಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಹೈಕೋರ್ಟ ಪೀಠದಲ್ಲಿ ಹೊಟೇಲ್ ನಡೆಸಲು ಟೆಂಡರ್ ಆಹ್ವಾನ
*****************************************************
ಕಲಬುರಗಿ,ನ.13.(ಕ.ವಾ.)-ಕಲಬುರಗಿ ಹೈಕೋರ್ಟ್ ಪೀಠದಲ್ಲಿರುವ ಕ್ಯಾಂಟೀನ ನಡೆಸಲು ಹೊಟೇಲ್ ಅಥವಾ ಕ್ಯಾಟರೆರ್ಸ್‍ರರಿಂದ ಟೆಂಡರ್ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಹೈಕೋರ್ಟ್ ಪೀಠದ ಹೆಚ್ಚುವರಿ ರಿಜಿಸ್ಟ್ರಾರ್ ಜನರಲ್ ಕೆ.ಬಿ. ಅಸೂದೆ ಅವರು ತಿಳಿಸಿದ್ದಾರೆ.
ಟೆಂಡರ್ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ ಪೀಠದ ಕಲಬುರಗಿ ಕಚೇರಿಯಿಂದ ನವೆಂಬರ್ 14ರಿಂದ 30ರವರೆಗೆ ಬೆಳಿಗ್ಗೆ 10.30 ರಿಂದ ಸಾಯಂಕಾಲ 4 ಗಂಟೆಯವರೆಗೆ 100 ರೂ. ಶುಲ್ಕ ಪಾವತಿಸಿ, ಪಡೆದು ಭರ್ತಿ ಮಾಡಿ ದ್ವಿಲಕೋಟೆಯೊಂದಿಗೆ ದಿ ಅಡಿಷನಲ್ ರಿಜಿಸ್ಟ್ರಾರ್ ಜನರಲ್, ಹೈಕೋರ್ಟ್ ಆಫ್ ಕರ್ನಾಟಕ, ಕಲಬುರಗಿ ಬೇಂಚ್ ಇವರ ಹೆಸರಿನಲ್ಲಿ 10,000ರೂ.ಗಳ ಡಿಮ್ಯಾಂಡ್ ಡ್ರಾಫ್ಟ್ ಪಡೆದು, ಲಕೋಟೆ ಒಂದರಲ್ಲಿ 10,000 ರೂ.ಗಳ ಡಿಮ್ಯಾಂಡ್ ಡ್ರಾಫ್ಟ್ ಮತ್ತು ಲಕೋಟೆ ಎರಡರಲ್ಲಿ ಟೆಂಡರ್ ಸಂಬಂಧಪಟ್ಟ ಅರ್ಜಿ, ಲೈಸೆನ್ಸ್ ನೋಂದಣಿ ಪತ್ರ, ಕ್ಯಾಂಟಿನ ಚಲಾಯಿಸಲು ಆಹಾರ ಪದಾರ್ಥಗಳ ದರಪಟ್ಟಿ ಮತ್ತು ಹಿಂದೆ ಕ್ಯಾಂಟಿನ್ ನಡೆಸಿದ ಅನುಭವ ಪ್ರಮಾಣಪತ್ರ ಸೇರಿದಂತೆ ಅಗತ್ಯ ದಾಖಲಾತಿಗಳನ್ನು ಭದ್ರಪಡಿಸಿದ ಲಕೋಟೆಯೊಂದಿಗೆ 2017ರ ನವೆಂಬರ್ 30ರ ಸಂಜೆ 4 ರೊಳಗಾಗಿ ಸಲ್ಲಿಸಬೇಕು.
ಅರ್ಜಿದಾರರ ಸಮಕ್ಷಮದಲ್ಲಿ ಭದ್ರಪಡಿಸಿದ ಅರ್ಜಿ ಲಕೋಟೆಗಳನ್ನು 2017ರ ಡಿಸೆಂಬರ್ 2ರಂದು ಮಧ್ಯಾಹ್ನ 1 ಗಂಟೆಗೆ ತೆರೆಯಲಾಗುವುದು ಷರತ್ತು, ನಿಬಂಧನೆ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಹೈಕೋರ್ಟ ಪೀಠದ ಕಾರ್ಯಾಲಯವನ್ನು ಸಂಪರ್ಕಿಸಲು ಕೋರಿದೆ.

ಗಂಡೋರಿನಾಲಾ ಯೋಜನೆ ಅಚ್ಟುಕಟ್ಟು ಪ್ರದೇಶದ ಕಾಲುವೆಯಲ್ಲಿ ನೀರು ಬಿಡುಗಡೆ
***********************************************************************
ಕಲಬುರಗಿ,ನ.13.(ಕ.ವಾ.)-ನೀರಾವರಿ ಸಲಹಾ ಸಮಿತಿ ನಿರ್ಣಯ ಮತ್ತು ರೈತರ ಬೇಡಿಕೆ ಮೇರೆಗೆ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಜಿ. ರಾಮಕೃಷ್ಣ, ಚಿಂಚೋಳಿ ಶಾಸಕ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಶಾಸಕ ಡಾ|| ಉಮೇಶ ಜಾಧವ ಇವರುಗಳ ನಿರ್ದೇಶನದಂತೆ 2017ನೇ ಸಾಲಿನ ಹಿಂಗಾರು ಹಂಗಾಮಿನ ಬೆಳೆಗಳಿಗೆ ಗಂಡೋರಿನಾಲಾ ಯೋಜನೆಯ ಅಚ್ಟುಕಟ್ಟು ಪ್ರದೇಶದ ಕಾಲುವೆಯಲ್ಲಿ ನವೆಂಬರ್ 11 ರಿಂದ ನೀರು ಬಿಡಲಾಗಿದೆ. ಈ ಯೋಜನೆಯ ಅಚ್ಟುಕಟ್ಟು ಪ್ರದೇಸದ ಎಲ್ಲ ರೈತರು ನೀರಿನ ಸದುಪಯೋಗ ಪಡೆಯಬೇಕೆಂದು ಕಲಬುರಗಿ ಐ.ಪಿ.ಸಿ. ವಿಭಾಗ ನಂ. 1ರ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

ಕೆಳದಂಡೆ ಮುಲ್ಲಾಮಾರಿ ಯೋಜನೆ ಅಚ್ಟುಕಟ್ಟು ಪ್ರದೇಶದ ಕಾಲುವೆಯಲ್ಲಿ ನೀರು
*********************************************************************
ಬಿಡುಗಡೆ
**********
ಕಲಬುರಗಿ,ನ.13.(ಕ.ವಾ.)-ನೀರಾವರಿ ಸಲಹಾ ಸಮಿತಿ ನಿರ್ಣಯ ಮತ್ತು ರೈತರ ಬೇಡಿಕೆ ಮೇರೆಗೆ ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ ಹಾಗೂ ಚಿಂಚೋಳಿ ಶಾಸಕ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಶಾಸಕ ಡಾ|| ಉಮೇಶ ಜಾಧವ ಇವರುಗಳ ನಿರ್ದೇಶನದಂತೆ 2017ನೇ ಸಾಲಿನ ಹಿಂಗಾರು ಹಂಗಾಮಿನ ಬೆಳೆಗಳಿಗೆ ಕೆಳದಂಡೆ ಮುಲ್ಲಾಮಾರಿ ಯೋಜನೆಯ ಅಚ್ಟುಕಟ್ಟು ಪ್ರದೇಶದ ಕಾಲುವೆಯಲ್ಲಿ ನವೆಂಬರ್ 14 ರಿಂದ ನೀರು ಬಿಡಲಾಗುತ್ತಿದೆ. ಈ ಯೋಜನೆಯ ಅಚ್ಟುಕಟ್ಟು ಪ್ರದೇಶದ ಎಲ್ಲ ರೈತರು ನೀರಿನ ಸದುಪಯೋಗ ಪಡೆಯಬೇಕೆಂದು ಕಲಬುರಗಿ ಐ.ಪಿ.ಸಿ. ವಿಭಾಗ ನಂ. 1ರ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

ನವೆಂಬರ್ 14ರಂದು ಕಾನೂನು ಅರಿವು ಜಾಗೃತಿ ಕಾರ್ಯಕ್ರಮ
*******************************************************
ಕಲಬುರಗಿ,ನ.13.(ಕ.ವಾ.)-ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ರೆಹನುಮಾ ಕಾನೂನು ಸಲಹಾ ಕೇಂದ್ರ ಹಾಗೂ ಸಹರಾ ಸೇವಾ ಕೇಂದ್ರ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ “ಮಕ್ಕಳ ಹಕ್ಕುಗಳ ಬಗ್ಗೆ ಕಾನೂನು ಅರಿವು ನೆರವು ಜಾಗೃತಿ ಕಾರ್ಯಕ್ರಮ” ವನ್ನು ನವೆಂಬರ್ 14ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿ ರೆಹನುಮಾ ಕಾನೂನು ಸಲಹಾ ಕೇಂದ್ರದಲ್ಲಿ ಏರ್ಪಡಿಸಲಾಗಿದೆ.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್. ಮಾಣಿಕ್ಯ ಅವರು ಈ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ಸಹರಾ ಸೇವಾ ಸಂಸ್ಥೆ ನಿರ್ದೇಶಕ ಮಸ್ತಾನ್ ಬಿರಾದರ, ಹೆಡ್ ಚೈಲ್ಡ್ ಹೋಂ ಮುಖ್ಯಸ್ಥ ಕರಿಬಸಪ್ಪ ವಾಲಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಆರ್.ಕೆ. ಹಿರೇಮಠ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಕರಿಬಸಪ್ಪ ವಾಲಿ ಅವರು ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಸಂರಕ್ಷಣೆ ಕುರಿತು ಅವರು ಉಪನ್ಯಾಸ ನೀಡುವರು.

ಬ್ಯಾನರ್-ಫ್ಲೇಕ್ಸ್-ಕಟೌಟ್ ಅಳವಡಿಕೆಗೆ ಪುರಸಭೆ ಅನುಮತಿ ಕಡ್ಡಾಯ
***********************************************************
ಕಲಬುರಗಿ,ನ.13.(ಕ.ವಾ.)-ಸೇಡಂ ಪಟ್ಟಣದ ಸಾರ್ವಜನಿಕರು ಪುರಸಭೆ ವ್ಯಾಪ್ತಿಯಲ್ಲಿ ಬರುವ ಸ್ಥಳಗಳಲ್ಲಿ ಯಾವುದೇ ಜಯಂತಿ ಅಂಗವಾಗಿ ಪಟ್ಟಣದಲ್ಲಿ ಬ್ಯಾನರ್, ಫ್ಲೇಕ್ಸ್ ಮತ್ತು ಕಟೌಟ್‍ಗಳನ್ನು ಅಳವಡಿಸಲು ಏಳು ದಿನಗಳ ಮುಂಚೆ ಸೇಡಂ ಪುರಸಭೆಯಿಂದ ಕಡ್ಡಾಯವಾಗಿ ಅನುಮತಿ ಪಡೆದು ಹಾಕಬೇಕೆಂದು ಸೇಡಂ ಪುರಸಭೆ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.
ಅನುಮತಿ ಪಡೆದ ನಂತರ ಮರಳಿ ಬ್ಯಾನರ್, ಫ್ಲೇಕ್ಸ್ ಮತ್ತು ಕಟೌಟ್‍ಗಳನ್ನು ಮೂರು ದಿನದೊಳಗಾಗಿ ತೆರವುಗೊಳಿಸಬೇಕು. ಒಂದು ವೇಳೆ ತೆರವುಗೊಳಿಸದಿದ್ದಲ್ಲಿ ಸೇಡಂ ಪುರಸಭೆಯಿಂದ ದಂಡ ಹಾಗೂ ನಿಯಮಾನುಸಾರ ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ದನಗಳನ್ನು ರಸ್ತೆಗೆ ಬಿಡದಂತೆ ಸೂಚನೆ
*********************************
ಕಲಬುರಗಿ,ನ.13.(ಕ.ವಾ.)- ಜೇವರ್ಗಿ ಪಟ್ಟಣದ ಸಾರ್ವಜನಿಕರು ಪುರಸಭೆ ವ್ಯಾಪ್ತಿಯ ರಸ್ತೆ ಮತ್ತು ಇನ್ನಿತರ ಜನನಿಬಿಡ ಪ್ರದೇಶದಲ್ಲಿ ತಮ್ಮ ದನ, ಎಮ್ಮೆ, ಹಂದಿ, ನಾಯಿಗಳನ್ನು ಬಿಡದೆ ತಮ್ಮ ಅಧೀನದಲ್ಲಿ ಇಟ್ಟುಕೊಳ್ಳಬೇಕೆಂದು ಜೇವರ್ಗಿ ಪುರಸಭೆ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.
ರಸ್ತೆಯಲ್ಲಿ ದನ, ಎಮ್ಮೆ, ಹಂದಿ, ನಾಯಿ ತಿರುಗಾಡುವುದರಿಂದ ಸಂಚಾರಕ್ಕೆ ತೊಂದರೆಯಾಗಿ ಅನಾಹುತಕ್ಕೆ ಎಡೆಮಾಡಿಕೊಡುತ್ತಿದೆ. ಒಂದು ವೇಳೆ ದನಗಳು ರಸ್ತೆಯ ಮೇಲೆ ಬಂದು ಸಾರ್ವಜನಿಕರಿಗೆ ತೊಂದರೆ ನೀಡಿದ್ದಲ್ಲಿ ಪುರಸಭೆ ಕಾಯ್ದೆ 1964ರ ನಿಯಮಾವಳಿ 239 ರನ್ವಯ ಕ್ರಮ ಕೈಗೊಳ್ಳಲಾಗುವುದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೀಗಾಗಿ ಲೇಖನಗಳು News and photo Date: 13--11--2017
ಎಲ್ಲಾ ಲೇಖನಗಳು ಆಗಿದೆ News and photo Date: 13--11--2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ News and photo Date: 13--11--2017 ಲಿಂಕ್ ವಿಳಾಸ https://dekalungi.blogspot.com/2017/11/news-and-photo-date-13-11-2017.html
0 Response to "News and photo Date: 13--11--2017"
ಕಾಮೆಂಟ್ ಪೋಸ್ಟ್ ಮಾಡಿ