ಶೀರ್ಷಿಕೆ : ಮುರ್ಲಾಪುರದಲ್ಲಿ ವಿಶೇಷ ಕಾನೂನು ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ
ಲಿಂಕ್ : ಮುರ್ಲಾಪುರದಲ್ಲಿ ವಿಶೇಷ ಕಾನೂನು ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ
ಮುರ್ಲಾಪುರದಲ್ಲಿ ವಿಶೇಷ ಕಾನೂನು ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ
ಕೊಪ್ಪಳ ನ. 13 (ಕರ್ನಾಟಕ ವಾರ್ತೆ): ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆಯ ಅಂಗವಾಗಿ ಕೊಪ್ಪಳ ತಾಲೂಕಿನ ಮುರ್ಲಾಪುರ ಗ್ರಾಮದಲ್ಲಿ ಆಯೋಜಿಸಲಾಗಿದ್ದ, ವಿಶೇಷ ಕಾನೂನು ಅರಿವು ವಿದ್ಯಾ ಪ್ರಸಾರ ಕಾರ್ಯಕ್ರಮಕ್ಕೆ ಸಿವಿಲ್ ನ್ಯಾಯಾಧೀಶರಾದ ವಿಜಯಕುಮಾರ ಕನ್ನೂರು ಅವರು ಚಾಲನೆ ನೀಡಿದರು.
ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾವಾದಿಗಳ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮುರ್ಲಾಪುರ ಗ್ರಾಮ ಪಂಚಾಯತ ಹಾಗೂ ಸ್ತ್ರೀ ಶಕ್ತಿ ಸಂಘಗಳ ಸಹಯೋಗದಲ್ಲಿ ವಿಶೇಷ ಕಾನೂನು ಪ್ರಸಾರ ಕಾರ್ಯಕ್ರಮವನ್ನು ಮುರ್ಲಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕೊಪ್ಪಳ ಸಿವಿಲ್ ನ್ಯಾಯಾಧೀಶರಾದ ವಿಜಯಕುಮಾರ ಕನ್ನೂರು ಅವರು ಕಾರ್ಯಕ್ರಮ ಉದ್ಘಾಟಿಸಿ, ಮಗುವಿನ ಜನನದಿಂದ ಮರಣದವರೆಗೂ ಇರುವ ಕಾನೂನುಗಳಾದ ಜನನ ಮರಣ ಕಾಯ್ದೆ ಮತ್ತು ಕಡ್ಡಾಯ ಶಿಕ್ಷಣ ಹಕ್ಕುಗಳ ಬಗ್ಗೆ, ಜೀತ ಪದ್ಧತಿಯ ನಿಷೇಧದ ಬಗ್ಗೆ, ಜೀವನಾಂಶ ಹಾಗೂ ವಾರಸಾ ಹಕ್ಕುಗಳ ಬಗ್ಗೆ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಿದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಮನುಶರ್ಮ ಅವರು ಪ್ರಚಲಿತ ಕಾನೂನುಗಳ ಮತ್ತು ನಿಯಮಗಳ ಬಗ್ಗೆ ಅರಿವು ಮೂಡಿಸಿದರು. ವಕೀಲರಾದ ನಿರಂಜನಸ್ವಾಮಿ ಡಿ. ಹಿರೇಮಠ ಅವರು ಕಾನೂನಿ ಮಾಹಿತಿ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸಿ.ಡಿ.ಪಿ.ಓ ಇಮಾಲಪ್ಪ ಡಿ.ಕಂದಳ್ಳಿ, ಶರಣಬಸವನಗೌಡ ಪಾಟೀಲ್, ಬಸವರಾಜ ಹಾರೋಗೇರಿ, ಶಿವರೆಡ್ಡಿ ಮ್ಯಾಗಳಮನಿ, ಹನುಮವ್ವ ಬಸಪ್ಪ ಹರಿಜನ ಸೇರಿದಂತೆ ಮರ್ಲಾಪುರ ಗ್ರಾಮಸ್ಥರು ಹಾಗೂ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹೀಗಾಗಿ ಲೇಖನಗಳು ಮುರ್ಲಾಪುರದಲ್ಲಿ ವಿಶೇಷ ಕಾನೂನು ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ
ಎಲ್ಲಾ ಲೇಖನಗಳು ಆಗಿದೆ ಮುರ್ಲಾಪುರದಲ್ಲಿ ವಿಶೇಷ ಕಾನೂನು ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಮುರ್ಲಾಪುರದಲ್ಲಿ ವಿಶೇಷ ಕಾನೂನು ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ಲಿಂಕ್ ವಿಳಾಸ https://dekalungi.blogspot.com/2017/11/blog-post_32.html
0 Response to "ಮುರ್ಲಾಪುರದಲ್ಲಿ ವಿಶೇಷ ಕಾನೂನು ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ"
ಕಾಮೆಂಟ್ ಪೋಸ್ಟ್ ಮಾಡಿ