ಚಳಿಗಾಲಕ್ಕೆ ಉತ್ತಮ ಲಾಭದಾಯಕ ಹೂ/ಎಲೆ ಕೋಸು : ರೈತರಿಗೆ ಸಲಹೆ

ಚಳಿಗಾಲಕ್ಕೆ ಉತ್ತಮ ಲಾಭದಾಯಕ ಹೂ/ಎಲೆ ಕೋಸು : ರೈತರಿಗೆ ಸಲಹೆ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಚಳಿಗಾಲಕ್ಕೆ ಉತ್ತಮ ಲಾಭದಾಯಕ ಹೂ/ಎಲೆ ಕೋಸು : ರೈತರಿಗೆ ಸಲಹೆ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಚಳಿಗಾಲಕ್ಕೆ ಉತ್ತಮ ಲಾಭದಾಯಕ ಹೂ/ಎಲೆ ಕೋಸು : ರೈತರಿಗೆ ಸಲಹೆ
ಲಿಂಕ್ : ಚಳಿಗಾಲಕ್ಕೆ ಉತ್ತಮ ಲಾಭದಾಯಕ ಹೂ/ಎಲೆ ಕೋಸು : ರೈತರಿಗೆ ಸಲಹೆ

ಓದಿ


ಚಳಿಗಾಲಕ್ಕೆ ಉತ್ತಮ ಲಾಭದಾಯಕ ಹೂ/ಎಲೆ ಕೋಸು : ರೈತರಿಗೆ ಸಲಹೆ

ಕೊಪ್ಪಳ ನ.22 (ಕರ್ನಾಟಕ ವಾರ್ತೆ): ಚಳಿಗಾಲದಲ್ಲಿ ಕೇವಲ 70 ದಿನಗಳೊಳಗೆ ಕಟಾವಿಗೆ ಬರುವ ಎಲೆ ಮತ್ತು ಹೂ ಕೋಸು ಬೆಳೆ ರೈತರಿಗೆ ಲಾಭದಾಯಕವಾಗಲಿದೆ ಎಂದು ತೋಟಗಾರಿಕೆ ವಿಷಯ ತಜ್ಞ ವಾಮನಮೂರ್ತಿ ತಿಳಿಸಿದ್ದಾರೆ.

     ಎಲೆ ಮತ್ತು ಹೂ ಕೋಸು ಕುಕರಬಟೇಸಿ ಕುಟುಂಬಕ್ಕೆ ಸೇರಿದ ಚಳಿಗಾಲದ ಮುಖ್ಯ ಬೆಳೆಗಳಾಗಿವೆ. ಇವು ಕೇವಲ 70 ದಿನದೊಳಗೆ ಕಟಾವಿಗೆ ಬರುವ ಹಾಗೂ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ತರುವ ಬೆಳೆಗಳಾಗಿವೆ.  ಈ ಬೆಳೆ ‘ಎ’ ಮತ್ತು ‘ಸಿ’ ಅನ್ನಾಂಗ ಹೊಂದಿದ ಲಾಭದಾಯಕ ಬೆಳೆಗಳಾಗಿದ್ದು, ಪಟ್ಟಣದ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಇದಕ್ಕೆ ಉತ್ತಮ ಬೇಡಿಕೆ ಇದೆ.
ಬಿತ್ತನೆಯ ಕಾಲ: ಚಳಿಗಾಲದ ಬೆಳೆ ಆರಂಭಿಸಲು ಅಕ್ಟೋಬರ್-ನವೆಂಬರ್ ಸೂಕ್ತ ಕಾಲ. ಚಳಿ ಹೆಚ್ಚಾದಲ್ಲಿ ಹೂ ಕೋಸು ಅಷ್ಟೊಂದು ಚನ್ನಾಗಿ ಬರುವುದಿಲ್ಲ, ಈ ಬೆಳೆ ಆರಂಭ ಮಾಡುವವರು ಈಗಲೇ ಬಿತ್ತನೆ/ನಾಟಿ ಮಾಡುವುದು ಸೂಕ್ತ. ಈ ಬೆಳೆಗಳು ಕೆಂಪು ಮಿಶ್ರಿತ ಮಣ್ಣಿನಲ್ಲಿ ಉತ್ತಮ ಇಳುವರಿ ಕೊಡುತ್ತವೆ.  ಸ್ವಲ್ಪ ಸವಳು ಇರುವ ಸಾಧಾರಣ ಮಣ್ಣು ಮತ್ತು ರಸಸಾರ 8 ಈ ಬೆಳೆಗಳಿಗೆ ಸೂಕ್ತ.  ಇದರಲ್ಲಿ ಅನೇಕ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಎಲೆಕೋಸು ಬೆಳೆಗಳಲ್ಲಿ ಗೋಲ್ಡನ್ ಎಕೆರ, ಪ್ರೈಡ್ ಆಫ್ ಇಂಡಿಯಾ ಇವರು 60-70 ದಿನಗಳಲ್ಲಿ ಕಟಾವಿಗೆ ಬರುವ ಚಪ್ಪಟೆಯಾಕಾರದ ಅರ್ಲಿಡ್ರಮ್ ಹೆಡ್ ಇದಲ್ಲದೇ ಮಾರುಕಟ್ಟೆಯಲ್ಲಿ ಅನೇಕ ಕಂಪನಿಗಳ ಹೈಬ್ರಿಡ್ ಗಳು ಲಭ್ಯವಿವೆ. ಇನ್ನು ಹೂಕೋಸು ಬೆಳಗೆಳಲ್ಲಿ ಅರ್ಲಿ ಸ್ನೋಬಾಲ್, ಅರ್ಕಾ ಸ್ಪೂರ್ತಿ, ಅರ್ಕಾ ವಿಮಲ ಇವು 80 ದಿನಗಳಲ್ಲಿ ಕಟಾವಿಗೆ ಬರುವ ಎಲೆ ಚುಕ್ಕೆ ರೋಗಕ್ಕೆ ನಿರೋಧಕ ಶಕ್ತಿ ಹೊಂದಿರುವ ಕೆನೆ ಬಣ್ಣದ ಕರ್ಡ(ಹೂಗುಚ್ಛ) ಹೊಂದಿರುವ ಶ್ರೇಷ್ಠ ತಳಿ. ಈ ತಳಿಯ ಸರಾಸರಿ ತೂಕ 375 ಗ್ರಾಂ. ದೀರ್ಘಾವಧಿ ತಳಿಗಳನ್ನು ಈ ತಿಂಗಳು ನಾಟಿ ಮಾಡುವುದು ಸೂಕ್ತವಾಗಿದೆ.

ಬಿತ್ತನೆಯ ವಿಧಾನ:
***** ರೈತರು ಆಯ್ಕೆ ಮಾಡಿದ ತಳಿಯ ಬೀಜಗಳನ್ನು ನರ್ಸರಿಯಲ್ಲಿ 1 ಪ್ರೊಟ್ರೇನ್‍ನಲ್ಲಿ ಬೆಳೆಸುವುದು ಆಧುನಿಕ ವಿಧಾನವಾಗಿದೆ. ಈ ವಿಧಾನದಲ್ಲಿ 3-4 ವಾರಗಳಲ್ಲಿ ಏಕಕಾಲಕ್ಕೆ ನಾಟಿಗೆ ಸಿದ್ದವಾಗುತ್ತವೆ. ಸಸಿಗಳು ಸಿದ್ಧವಾಗುವ ಸಮಯದಲ್ಲಿ ಭೂಮಿ ಸಿದ್ಧತೆ ಮಾಡಿಕೊಂಡು 60-75 ಸೆಂ.ಮೀ ಅಂತರದಲ್ಲಿ ನಾಟಿ ಮಾಡಬೇಕು. ಹನಿ ನೀರಾವರಿ ಸೌಲಭ್ಯ ಇದ್ದಲ್ಲಿ ಕಳೆಯ ಪರಿಣಾಮಕಾರಿ ನಿಯಂತ್ರಣ ಸಾಧ್ಯ.  ನಾಟಿಗೆ 25-30 ದಿನಗಳ ಮುಂಚಿತವಾಗಿ ಎಕರೆಗೆ 10 ಟನ್ ಕೊಟ್ಟಿಗೆ ಗೊಬ್ಬರದ ಜೊತೆಗೆ ಟ್ರೈಕೊಡರ್ಮಾ 5-10 ಕಿ.ಗ್ರಾಂ ರಂಜಕ ಹಾಗೂ 50 ಕಿ.ಗ್ರಾಂ ಪೊಟ್ಯಾಶ್ ಬೆರೆಸಿ ನಾಟಿ ಮಾಡಬೇಕು. ನಾಟಿ ಮಾಡಿದ ಮೂರು ವಾರಗಳ ನಂತರ ಎಕರೆಗೆ 30 ಕಿ.ಗ್ರಾಂ ಸಾರಜನಕ, 5 ಕಿ.ಗ್ರಾಂ. ಜಿಂಕ ಜೊತೆಗೆ ಇತರೆ ಲಘು ಪೋಷಕಾಂಶವನ್ನು ಕೊಡಬೇಕು. ಹೂ ಕೋಸಿಗೆ ಬೋರಾನ್ ಲಘು ಪೋಷಕಾಂಶದ ಬಳಕೆ ಅವಶ್ಯಕತೆ ಇರುತ್ತದೆ. ಎಕರೆಗೆ 10 ಕಿ.ಗ್ರಾಂ. ಬೇವಿನ ಹಿಂಡಿ ಕೊಡಬೇಕು. ಮತ್ತು ತೆಳುವಾಗಿ ನೀರು ಹರಿಸಬೇಕು.
ಸೂಚನೆ: ನಾಟಿ ಮಾಡುವ 15 ದಿನಗಳ ಮೊದಲು ಹಾಗೂ ನಾಟಿಮಾಡಿದ 15 ದಿನಗಳ ನಂತರ 25 ಸಾಲುಗಳ ನಂತರ  ಎರಡು ಸಾಲು ಸಾಸವಿ ಬೀಜ ಬಿತ್ತಿದರೆ ಈ ಬೆಳೆಗೆ ಬರುವ ಕೀಟಗಳ ಪರಿಣಾಮಕಾರಿ ನಿಯಂತ್ರಣ ಮಾಡಬಹುದು. ಎರೆಹುಳು ಗೊಬ್ಬರ ಉಪಯೋಗಿಸಿದರೆ ಯೂರಿಯಾದ ಪ್ರಮಾಣ ಅರ್ಧದಷ್ಟು ಕಡಿಮೆ ಮಾಡಬಹುದು. ತಳಿಗಳನ್ನಾಧರಿಸಿ 70-80 ಮತ್ತು 110-120 ದಿನಗಳ ನಂತರವೇ ಉತ್ತಮ ಇಳುವರಿ ಕೊಡಬಲ್ಲದು.  ಎಕೆರೆಗೆ ಮದ್ಯಮಾವಧಿ ತಳಿಗಳಿಂದ 16-20 ಟನ್ ಎಲೆ ಮತ್ತು 10 ರಿಂದ 12 ಟನ್ ಗಳಷ್ಟು ಹೂ ಕೋಸಿನ ಇಳುವರಿಯನ್ನು ನಿರೀಕ್ಷಿಸಬಹುದಾಗಿದೆ. ಅಂದರೆ ಎಕರೆಗೆ ರೂ.1.5 ರಿಂದ 2 ಲಕ್ಷದ ವರೆಗೆ ಆದಾಯ ನಿರೀಕ್ಷಿಸಬಹುದು. ಇದರಲ್ಲಿ ವಿಶೇಷ ಸೂಚನೆಯಂದರೆ ಎಲೆ ಕೋಸಿನಲ್ಲಿ ಹೂವಿನ ಬಣ್ಣ ಕಾಪಾಡಲು ಬಿಸಿಲಿನಿಂದ ರಕ್ಷಿಸಲು ಎಲೆಗಳಿಂದ ಮುಚ್ಚಬೇಕಾಗುತ್ತದೆ.
ಪ್ರಮುಖ ಕೀಟಗಳು:
************
ವಜ್ರ ಬೆನ್ನಿನ ಚಿಟ್ಟೆ:
********** ಕೀಟಗಳು ಎಲೆ ಹಾಗೂ ಪತ್ರ ಹರಿತ್ತನ್ನು ತಿಂದು ಹಾಳು ಮಾಡುವುದರಿಂದ ಎಲೆಗಳ ಮೇಲೆ ಎಳೆ ಹಾಗೂ ಬಿಳಿ ಪದರಗಳು ಉಂಟಾಗುತ್ತವೆ. ಗಡ್ಡೆ ಕೋರೆಹುಳು ಗಡ್ಡೆ ಕೊರೆದು ತಿಂದಾಗ ಗಡ್ಡೆಗಳು ಹಿಕ್ಕೆಗಳಿಂದ ತುಂಬಿ ಸಂಪೂರ್ಣ ನಾಶವಾಗುತ್ತವೆ. ಈ ಕೀಟ ಎರಡೂ ಬದಿ ಚೂಪಾಗದ್ದು ಹಸಿರು ಬಣ್ಣದಿಂದ ಕೂಡಿರುತ್ತದೆ.  ಇದರ ಹತೋಟಿಗೆ ಈಗಾಗಲೆ ತಿಳಿಸಿದಂತೆ ಸಾಸಿವೆ ಬೀಜ ಬಿತ್ತನೆ ಮಾಡಬೇಕು. ಹಾವಳಿ ಕಾಣಿಸಿಕೊಂಡಾಗ ಬೇವಿನ ಕಷಾಯ, ಕ್ವಿನಾಲ್ ಫಾಸ್, 25 ಇ.ಸಿ ಮತ್ತು ಡೈಕ್ಲೋರೋವಾಸ್ ಅಲ್ಲದೇ ಫಪೋನಿಲ ಎನ್ನುವ ಕೀಟ ನಾಶಕಗಳ ಬಳಕೆ ಈ ಕೀಟದ ಹತೋಟಿಗೆ ತುಂಬಾ ಪರಿಣಾಮಕಾರಿ.
ಸಸ್ಯಹೇನು: ಸುರುಳಿ ಪೂಚಿ ಕೀಟಗಳಿಂದಾಗಿ ಈ ಬೆಳೆ ನಾಶವಾಗುತ್ತದೆ. ಈ ಕೀಟಗಳ ನಿರ್ವಹಣೆಗೆ, ನಾಟಿ ಮಾಡಿದ 15 ದಿನಗಳೊಳಗೆ ಮತ್ತು ನಂತರ ಮೂರು ವಾರಗಳಿಗೊಮ್ಮೆ ಡೈಮೆಥೋಯೆಟ್ 30 ಇ.ಸಿ. 1.70 ಮಿ.ಲೀ ಮತ್ತು ಮ್ಯಾಲಾಥಿಯಾನ್ 50 ಇ.ಸಿ 2 ಮಿ.ಲೀ 1 ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಪ್ರಮುಖ ರೋಗಗಳು:
********** ಎಲೆ ಮಚ್ಚೆ ರೋಗ, ದುಂಡಾಣು ಕಪ್ಪು ಕೊಳೆ ರೋಗ ಮತ್ತು ಬುಡಕೊಳೆ ರೋಗಗಳು ಈ ಬೆಳೆಗಳನ್ನು ಕಾಡುವ ಮುಖ್ಯ ರೋಗಗಳು. ನಿರ್ವಹಣೆ ಕೈಗೊಳ್ಳುವ ವಿಧಾನ ಇಂತಿದೆ. ಸಿ.ಒ.ಸಿ 30 ಗ್ರಾಂ, ಜೊತೆಗೆ ಸ್ರ್ಟೆಪ್ಟೋಮೈಸಿನ್ 0.50 ಮಿ.ಗ್ರಾಂ ಅಥವಾ ಅಗ್ರಿ ಮೈಸಿನ್ 1 ಲೀ ನೀರಿಗೆ ಬೆರೆಸಿ ಸಿಂಪಡಿಸಬೇಕು. ನಾಟಿ ಮಾಡಿದ ಎರಡರಿಂದ ನಾಲ್ಕು ಮತ್ತು ಆರರಿಂದ ಎಂಟನೇ ವಾರದ ಅವಧಿಯಲ್ಲಿ ಮೇಲೆ ತಿಳಿಸಿದ ರಾಸಾಯನಗಳ ನಿಯಮಿತ ಸಿಂಪಡಣೆಯಿಂದ ಈ ರೋಗಗಳ ಪರಿಣಾಮಕಾರಿ ಹತೋಟಿ ಸಾಧ್ಯ. ಹಾಗೇ ಬೆಳೆ ಕಟಾವಿಗೆ ಬರುವ 15 ದಿನಗಳ ಮೊದಲೇ ರಾಸಾಯನಿಕಗಳ ಸಿಂಪಡಣೆ ನಿಲ್ಲಿಸಬೇಕು.
      ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಉಪನಿರ್ದೇಶಕರ ಕಚೇರಿ, ಕೊಪ್ಪಳ ಅಥವಾ ಆಯಾ ತಾಲೂಕ ಕಚೇರಿಗಳಲ್ಲಿ ಅಥವಾ ತೋಟಗಾರಿಕೆ ವಿಷಯ ತಜ್ಞರರು ಮಾಹಿತಿ ಮತ್ತು ಸಲಹಾ ಕೇಂದ್ರ(ಹಾರ್ಟಿಕ್ಲಿನಿಕ್) ಕೊಪ್ಪಳ ಇವರನ್ನು ಸಂಪರ್ಕಿಸಬುದು ಎಂದು ತೋಟಗಾರಿಗೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.


ಹೀಗಾಗಿ ಲೇಖನಗಳು ಚಳಿಗಾಲಕ್ಕೆ ಉತ್ತಮ ಲಾಭದಾಯಕ ಹೂ/ಎಲೆ ಕೋಸು : ರೈತರಿಗೆ ಸಲಹೆ

ಎಲ್ಲಾ ಲೇಖನಗಳು ಆಗಿದೆ ಚಳಿಗಾಲಕ್ಕೆ ಉತ್ತಮ ಲಾಭದಾಯಕ ಹೂ/ಎಲೆ ಕೋಸು : ರೈತರಿಗೆ ಸಲಹೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಚಳಿಗಾಲಕ್ಕೆ ಉತ್ತಮ ಲಾಭದಾಯಕ ಹೂ/ಎಲೆ ಕೋಸು : ರೈತರಿಗೆ ಸಲಹೆ ಲಿಂಕ್ ವಿಳಾಸ https://dekalungi.blogspot.com/2017/11/blog-post_81.html

Subscribe to receive free email updates:

0 Response to "ಚಳಿಗಾಲಕ್ಕೆ ಉತ್ತಮ ಲಾಭದಾಯಕ ಹೂ/ಎಲೆ ಕೋಸು : ರೈತರಿಗೆ ಸಲಹೆ"

ಕಾಮೆಂಟ್‌‌ ಪೋಸ್ಟ್‌ ಮಾಡಿ