ಶೀರ್ಷಿಕೆ : ಯಲಬುರ್ಗಾ : ಪ್ಲಾಸ್ಟಿಕ್ ಬ್ಯಾನರ್ಸ್ ಮತ್ತು ಬಂಟಿಂಗ್ಸ್ ಬಳಕೆ ನಿಷೇಧ
ಲಿಂಕ್ : ಯಲಬುರ್ಗಾ : ಪ್ಲಾಸ್ಟಿಕ್ ಬ್ಯಾನರ್ಸ್ ಮತ್ತು ಬಂಟಿಂಗ್ಸ್ ಬಳಕೆ ನಿಷೇಧ
ಯಲಬುರ್ಗಾ : ಪ್ಲಾಸ್ಟಿಕ್ ಬ್ಯಾನರ್ಸ್ ಮತ್ತು ಬಂಟಿಂಗ್ಸ್ ಬಳಕೆ ನಿಷೇಧ
ಕೊಪ್ಪಳ ನ. 22 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನಲ್ಲಿ ಹಬ್ಬ ಹರಿದಿನಗಳಲ್ಲಿ ಅಥವಾ ವಿಶೇಷ ಸಂದರ್ಭಗಳಲ್ಲಿ, ಜಾಹೀರಾತು ನೀಡಲು ಯಾವುದೇ ಪ್ಲಾಸ್ಟಿಕ್‍ನಿಂದ ತಯಾರಿಸಿದ ಬ್ಯಾನರ್ಸ್ ಮತ್ತು ಬಂಟಿಂಗ್ಸ್ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ತಿಳಿಸಿದ್ದಾರೆ.
ಸರ್ಕಾರವು ರಾಜ್ಯಾದ್ಯಂತ ಕೆಲವೊಂದು ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ನಿಷೇಧಿಸಿದ್ದು, ಹಬ್ಬ ಹರಿದಿನಗಳಲ್ಲಿ ಅಥವಾ ವಿಶೇಷ ಸಂದರ್ಭಗಳಲ್ಲಿ ಜಾಹೀರಾತು ನೀಡಲು ಯಾವುದೇ ಪ್ಲಾಸ್ಟಿಕ್‍ನಿಂದ ತಯಾರಿಸಿದ ಬ್ಯಾನರ್ಸ್ ಮತ್ತು ಬಂಟಿಂಗ್ಸ್ ಬಳಸದಂತೆ ಕ್ರಮ ವಹಿಸಲು ಸೂಚನೆ ನೀಡಲಾಗಿದೆ. ಈಗಾಗಲೇ ಪ್ರಕಟಣೆ ಮೂಲಕ ತಿಳಿಸಿದ್ದಾಗ್ಯೂ ಪ್ಲಾಸ್ಟಿಕ್‍ನಿಂದ ತಯಾರಿಸಿದ ಬ್ಯಾನರ್ಸ್ ಮತ್ತು ಬಂಟಿಂಗ್ಸ್‍ಗಳನ್ನು ಅನಧಿಕೃತವಾಗಿ ಬಳಕೆ ಮಾಡುತ್ತಿರುವುದು ಮತ್ತು ಕಾರ್ಯಾಲಯದಿಂದ ಪರವಾನಿಗೆ ಪಡೆಯದೆ ಬ್ಯಾನರ್ ಮತ್ತು ಬಂಟಿಂಗ್ಸ್‍ಗಳನ್ನು ಅಳವಡಿಸುತ್ತಿರುವುದು ಕಂಡು ಬಂದಿರುತ್ತದೆ. ಕಾರಣ ಪ್ಲಾಸ್ಟಿಕ್‍ನಿಂದ ತಯಾರಿಸಿದ ಬ್ಯಾನರ್ಸ್ ಮತ್ತು ಬಂಟಿಂಗ್ಸ್‍ಗಳನ್ನು ಬಳಕೆ ಮಾಡದಂತೆ ಸೂಚನೆ ನೀಡಲಾಗಿದೆ.
ಒಂದು ವೇಳೆ ಈ ಆದೇಶವನ್ನು ಉಲ್ಲಂಘಿಸಿ ಪ್ಲಾಸ್ಟಿಕ್ ಬಳಕೆ ಮಾಡಿದ್ದು ಕಂಡುಬಂದಲ್ಲಿ ಮತ್ತು ಅನಧಿಕೃತವಾಗಿ ಬ್ಯಾನರ್ ಮತ್ತು ಬಂಟಿಂಗ್ಸ್‍ಗಳನ್ನು ಅಳವಡಿಸಿದ್ದು ಕಂಡುಬಂದಲ್ಲಿ ಅಂಥವರ ವಿರುದ್ದ ಪರಿಸರ(ಸಂರಕ್ಷಣೆ) ಕಾಯಿದೆ 1986ರ ಸೆಕ್ಷನ್ 19ರ ಅನ್ವಯ ಪ್ರದತ್ತವಾಗಿರುವ ಅಧಿಕಾರದಂತೆ ಸೂಕ್ತ ಕ್ರಮ ಜರುಗಿಸಲಾಗುತ್ತದೆ. ಅದಕ್ಕೆ ಅವಕಾಶ ಕೊಡದಂತೆ ಸಾರ್ವಜನಿಕರು ಪ್ಲಾಸ್ಟೀಕ್ ನಿಂದ ತಯಾರಿಸುವ ಬ್ಯಾನರ್ಸ್ ಮತ್ತು ಬಂಟಿಂಗ್ಸ್‍ಗಳನ್ನು ಬಳಸದೆ ಪರಿಸರ ಸಂರಕ್ಷಣೆಗೆ ಪಟ್ಟಣ ಪಂಚಾಯತಿಯೊಂದಿಗೆ ಕೈಜೋಡಿಸಲು ಹಾಗೂ ಇತರೆ ಬ್ಯಾನರ್ ಹಾಗೂ ಜಾಹೀರಾತು ಫಲಕಗಳನ್ನು ಅಳವಡಿಸಲು ಪಟ್ಟಣ ಪಂಚಾಯತಿಯಿಂದ ಪರವಾನಿಗೆ ಪಡೆದು ನಿಗದಿತ ಸ್ಥಳದಲ್ಲಿ ಅಳವಡಿಸಿ ಸಹಕರಿಸಲು ಯಲಬುರ್ಗಾ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಯಲಬುರ್ಗಾ : ಪ್ಲಾಸ್ಟಿಕ್ ಬ್ಯಾನರ್ಸ್ ಮತ್ತು ಬಂಟಿಂಗ್ಸ್ ಬಳಕೆ ನಿಷೇಧ
ಎಲ್ಲಾ ಲೇಖನಗಳು ಆಗಿದೆ ಯಲಬುರ್ಗಾ : ಪ್ಲಾಸ್ಟಿಕ್ ಬ್ಯಾನರ್ಸ್ ಮತ್ತು ಬಂಟಿಂಗ್ಸ್ ಬಳಕೆ ನಿಷೇಧ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಯಲಬುರ್ಗಾ : ಪ್ಲಾಸ್ಟಿಕ್ ಬ್ಯಾನರ್ಸ್ ಮತ್ತು ಬಂಟಿಂಗ್ಸ್ ಬಳಕೆ ನಿಷೇಧ ಲಿಂಕ್ ವಿಳಾಸ https://dekalungi.blogspot.com/2017/11/blog-post_11.html
0 Response to "ಯಲಬುರ್ಗಾ : ಪ್ಲಾಸ್ಟಿಕ್ ಬ್ಯಾನರ್ಸ್ ಮತ್ತು ಬಂಟಿಂಗ್ಸ್ ಬಳಕೆ ನಿಷೇಧ"
ಕಾಮೆಂಟ್ ಪೋಸ್ಟ್ ಮಾಡಿ