ಮಣ್ಣು ಪರೀಕ್ಷಾ ಘಟಕಗಳ ಸ್ಥಾಪನೆಗೆ ಸಹಾಯಧನ : ಅರ್ಜಿ ಆಹ್ವಾನ

ಮಣ್ಣು ಪರೀಕ್ಷಾ ಘಟಕಗಳ ಸ್ಥಾಪನೆಗೆ ಸಹಾಯಧನ : ಅರ್ಜಿ ಆಹ್ವಾನ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಮಣ್ಣು ಪರೀಕ್ಷಾ ಘಟಕಗಳ ಸ್ಥಾಪನೆಗೆ ಸಹಾಯಧನ : ಅರ್ಜಿ ಆಹ್ವಾನ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಮಣ್ಣು ಪರೀಕ್ಷಾ ಘಟಕಗಳ ಸ್ಥಾಪನೆಗೆ ಸಹಾಯಧನ : ಅರ್ಜಿ ಆಹ್ವಾನ
ಲಿಂಕ್ : ಮಣ್ಣು ಪರೀಕ್ಷಾ ಘಟಕಗಳ ಸ್ಥಾಪನೆಗೆ ಸಹಾಯಧನ : ಅರ್ಜಿ ಆಹ್ವಾನ

ಓದಿ


ಮಣ್ಣು ಪರೀಕ್ಷಾ ಘಟಕಗಳ ಸ್ಥಾಪನೆಗೆ ಸಹಾಯಧನ : ಅರ್ಜಿ ಆಹ್ವಾನ


ಕೊಪ್ಪಳ ನ. 16 (ಕರ್ನಾಟಕ ವಾರ್ತೆ): ಕೊಪ್ಪಳ ಜಂಟಿ ಕೃಷಿ ನಿರ್ದೇಶಕರ ಕಛೇರಿ ವತಿಯಿಂದ ಮಣ್ಣು ಆರೋಗ್ಯ ನಿರ್ವಹಣೆ ಕಾರ್ಯಕ್ರಮದಡಿ ಮಣ್ಣು ಪರೀಕ್ಷಾ ಘಟಕಗಳ ಸ್ಥಾಪನೆಗೆ ಸಹಾಯಧನವನ್ನು ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.   
ಮಣ್ಣು ಆರೋಗ್ಯ ನಿರ್ವಹಣೆ ಕಾರ್ಯಕ್ರಮದಡಿ ಸ್ಥಳೀಯ ಉದ್ದಿಮೆದಾರರಿಂದ ಮಣ್ಣು ಪರೀಕ್ಷಾ ಘಟಕಗಳ ಪ್ರಾಯೋಜನೆಯ ಮೂಲಕ ಉದ್ದೇಶವು ಗ್ರಾಮೀಣ ಯುವ ಜನರಿಗೆ ಉದ್ಯೋಗಾವಕಾಶವನ್ನು ಸೃಷ್ಠಿಸುವುದು ಮತ್ತು ನಿಗಧಿತ ಅವಧಿಯಲ್ಲಿ ಮಣ್ಣು ಮಾದರಿಗಳ ವಿಶ್ಲೇಷಣೆಯನ್ನು ಉತ್ತಮಗೊಳಿಸುವುದು.  ಈ ಘಟಕದಡಿ ಫಲಾನುಭವಿಗಳನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಇರುವ ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿಯಲ್ಲಿ ಆಯ್ಕೆ ಮಾಡಲಾಗುತ್ತದೆ.  ಪ್ರತಿ ರೈತ ಸಂಪರ್ಕ ಕೇಂದ್ರಗಳಿಗೆ ಒಂದರಂತೆ ಮಣ್ಣು ಪರೀಕ್ಷಾ ಘಟಕಗಳ ಸ್ಥಾಪನೆ ಮಾಡಲು ರಾಜ್ಯ ಸರ್ಕಾರವು ಸೂಚನೆ ನಿಡಿದೆ.  (ಸಂಸದ ಆದರ್ಶ ಗ್ರಾಮ ಯೋಜನೆಯ ಗ್ರಾಮಗಳಿಗೆ ಆದ್ಯತೆಯನ್ನು ನೀಡಲಾಗುವುದು) ಇದರ ಪ್ರಯೋಜನೆಯ ಗರಿಷ್ಠ ವೆಚ್ಚ ರೂ. 5.00 ಲಕ್ಷಗಳಾಗಿದ್ದು, 75 ರಷ್ಟು ಸಹಾಯಧನವನ್ನು ನೀಡಲಾಗುತ್ತದೆ.  ಉಳಿದ ಶೇ. 25 ರಷ್ಟನ್ನು ಉದ್ದಿಮೆದಾರರು ಸ್ವಂತವಾಗಿ ಭರಿಸಬೇಕಿರುತ್ತದೆ.  
    ಈ ಮಾರ್ಗಸೂಚಿಯನ್ವಯ ಸ್ಥಳೀಯ ಉದ್ದಿಮೆದಾರರಿಂದ ಗ್ರಾಮ ಮಟ್ಟದಲ್ಲಿ ಸ್ಥಾಪಿಸಲಾಗುವ ಮಣ್ಣು ಪರೀಕ್ಷಾ ಘಟಕಗಳಿಗೆ ಮಣ್ಣು ಮಾದರಿ ಸಂಗ್ರಹಣೆ, ವಿಶ್ಲೇಷಣೆ ಮತ್ತು ಮಣ್ಣು ಆರೋಗ್ಯ ಚೀಟಿ ತಯಾರಿಕೆ ಹಾಗೂ ವಿತರಣೆಗಾಗಿ ಮಣ್ಣು ಆರೋಗ್ಯ ಚೀಟಿ ಕಾರ್ಯಕ್ರಮದ ಮಾರ್ಗಸೂಚಿ ಪ್ರಕಾರ ಪ್ರತಿ ಮಣ್ಣು ಮಾದರಿಗೆ ರೂ. 300/- ಗಳನ್ನು 2 ಕಂತುಗಳಲ್ಲಿ ನೀಡಲಾಗುವುದು.  ಶೇ. 50 ರಷ್ಟು ಎಸ್.ಹೆಚ್.ಸಿ ಪೋರ್ಟಲ್‍ನಲ್ಲಿ ನೋಂದಣಿಯಾದ ಹಾಗೂ ಶೇ. 50% ರಷ್ಟನ್ನು ರೈತರಿಗೆ ಮಣ್ಣು ಆರೋಗ್ಯ ಚೀಟಿಗಳನ್ನು ವಿತರಿಸಿ ನಂತರ ರಾಜ್ಯ ಸರ್ಕಾರದಿಂದ ಪಾವತಿಸಲಾಗುವುದು.
    ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಗ್ರಾಮಮಟ್ಟದಲ್ಲಿ ವಾಸವಿರಬೇಕು.  18 ರಿಂದ 45 ವರ್ಷ ವಯೋಮಿತಿಯಲ್ಲಿರಬೇಕು.  ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ  ಉತ್ತೀರ್ಣರಾಗಿರಬೇಕು.  ಹಾಗೂ ಬೇಸಿಕ್ ಕಂಪ್ಯೂಟರ್ ಬಳಕೆಯ ಜ್ಞಾನ ಹೊಂದಿರಬೇಕು.  ಮಣ್ಣು ಆರೋಗ್ಯ ಘಟಕ ನಡೆಸಲು ಬೇಕಾದ ಸ್ವಂತ ಕಟ್ಟಡ ಹೊಂದಿರಬೇಕು ಅಥವಾ ಬಾಡಿಗೆ ಕಟ್ಟಡವಿದ್ದಲ್ಲಿ 4 ವರ್ಷಗಳ ಕರಾರು ಪತ್ರ ಹೊಂದಿರಬೇಕು.  ಫಲಾನುಭವಿಯು ಕನಿಷ್ಠ 4 ವರ್ಷ ಈ ಕೇಂದ್ರವನ್ನು ನಡೆಸಲು ಒಪ್ಪಿ ಕರಾರು ಪತ್ರ ಬರೆದುಕೊಡಬೇಕು.  ಆಸಕ್ತರು ಸಂಬಂಧಿಸಿದ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಿಂದ ಅರ್ಜಿಯನ್ನು ಪಡೆದು ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಪಿ.ಯು.ಸಿ (ವಿಜ್ಞಾನ) ಅಂಕಪಟ್ಟಿ, ಕಂಪ್ಯೂಟರ್ ತರಬೇತಿ ಪಡೆದ ಪ್ರಮಾಣ ಪತ್ರ ಹಾಗೂ ಆಧಾರ ಕಾರ್ಡ್/ ಪಾನ್ ಕಾರ್ಡ್ ಇತ್ಯಾದಿ ಅಗತ್ಯ ದಾಖಲೆಗಳ ಧೃಢಿಕೃತ ಪ್ರತಿಗಳೊಂದಿಗೆ ಜಂಟಿ ಕೃಷಿ ನಿರ್ದೇಶಕರ ಕಛೇರಿಗೆ ನ. 27 ರೊಳಗಾಗಿ ಸಲ್ಲಿಸಬೇಕು ಎಂದು ಕೊಪ್ಪಳ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಹೀಗಾಗಿ ಲೇಖನಗಳು ಮಣ್ಣು ಪರೀಕ್ಷಾ ಘಟಕಗಳ ಸ್ಥಾಪನೆಗೆ ಸಹಾಯಧನ : ಅರ್ಜಿ ಆಹ್ವಾನ

ಎಲ್ಲಾ ಲೇಖನಗಳು ಆಗಿದೆ ಮಣ್ಣು ಪರೀಕ್ಷಾ ಘಟಕಗಳ ಸ್ಥಾಪನೆಗೆ ಸಹಾಯಧನ : ಅರ್ಜಿ ಆಹ್ವಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಮಣ್ಣು ಪರೀಕ್ಷಾ ಘಟಕಗಳ ಸ್ಥಾಪನೆಗೆ ಸಹಾಯಧನ : ಅರ್ಜಿ ಆಹ್ವಾನ ಲಿಂಕ್ ವಿಳಾಸ https://dekalungi.blogspot.com/2017/11/blog-post_69.html

Subscribe to receive free email updates:

0 Response to "ಮಣ್ಣು ಪರೀಕ್ಷಾ ಘಟಕಗಳ ಸ್ಥಾಪನೆಗೆ ಸಹಾಯಧನ : ಅರ್ಜಿ ಆಹ್ವಾನ"

ಕಾಮೆಂಟ್‌‌ ಪೋಸ್ಟ್‌ ಮಾಡಿ