ಶೀರ್ಷಿಕೆ : ಕೂರಿಗೆ ಬಿತ್ತನೆಯಿಂದ ವಿಷಮುಕ್ತ ಭತ್ತ ಮತ್ತು ಅಕ್ಕಿ- ಡಾ. ಎಂ.ಬಿ. ಪಾಟೀಲ
ಲಿಂಕ್ : ಕೂರಿಗೆ ಬಿತ್ತನೆಯಿಂದ ವಿಷಮುಕ್ತ ಭತ್ತ ಮತ್ತು ಅಕ್ಕಿ- ಡಾ. ಎಂ.ಬಿ. ಪಾಟೀಲ
ಕೂರಿಗೆ ಬಿತ್ತನೆಯಿಂದ ವಿಷಮುಕ್ತ ಭತ್ತ ಮತ್ತು ಅಕ್ಕಿ- ಡಾ. ಎಂ.ಬಿ. ಪಾಟೀಲ
ಕೊಪ್ಪಳ ನ. 28 (ಕರ್ನಾಟಕ ವಾರ್ತೆ): ಭತ್ತದಲ್ಲಿ ಕೂರಿಗೆ ಬಿತ್ತನೆಯಿಂದ, ಬೆಳೆಯನ್ನು, ಗದ್ದೆಯನ್ನು, ನೀರನ್ನು ಮತ್ತು ವಾತಾವರಣವನ್ನು ವಿಷಮುಕ್ತ ಮಾಡುವದು ಸಾಧ್ಯ ಎಂದು ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥ ಡಾ. ಎಂ.ಬಿ. ಪಾಟೀಲ ತಿಳಿಸಿದರು.
ತಾಲೂಕಿನ ಹಿಟ್ನಾಳ ಗ್ರಾಮದ ಕಾಸಿಮ್‍ಸಾಬ್ ರವರ ಭತ್ತದ ಕೂರಿಗೆ ಬಿತ್ತನೆ ಗದ್ದೆಯಲ್ಲಿ ಏರ್ಪಡಿಸಿದ್ದ ನೇರಕೂರಿಗೆ ಭತ್ತದ ಬೆಳೆ (ಆರ್.ಎನ್.ಆರ್. ತಳಿ) ಕ್ಷೇತ್ರೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೂರಿಗೆ ಬಿತ್ತನೆಯಿಂದ ಬೆಳೆಗೆ ನೀರಿನ, ಗೊಬ್ಬರದ ಬೇಡಿಕೆ ಪ್ರಮಾಣ ಕುಗ್ಗುತ್ತದೆ. ಇದರಿಂದ ಕೀಟ ಮತ್ತು ರೋಗಗಳ ಹಾವಳಿ ತಪ್ಪಿದಂತಾಗಲಿದೆ. ಅನಾವಶ್ಯಕ ಕೀಟ ಮತ್ತು ರೋಗನಾಶಕಗಳ ಬಳಕೆ ತಡೆಗಟ್ಟಿ, ಆರೋಗ್ಯಕರ ಬೆಳೆ, ವಿಷಮುಕ್ತ ಆಹಾರ, ನೀರು ಮತ್ತು ಮಣ್ಣಿನ ಪ್ರದೂಷಣೆ ತಪ್ಪಿಸಬಹುದು ಎಂದು ಡಾ. ಎಂ.ಬಿ. ಪಾಟೀಲ್ ಅಭಿಪ್ರಾಯಪಟ್ಟರು.
ಕೃಷಿ ವಿಜ್ಞಾನಿ ಡಾ. ರೂಪಶ್ರೀ ಮಾತನಾಡಿ ಕೂರಿಗೆ ಬಿತ್ತನೆಯಿಂದ ಬೀಜದ ಉಳಿತಾಯ ಹೆಚ್ಚಿ, ಕೇವಲ ಕಳೆನಾಶಕ್ಕಾಗಿ ವಿವಿಧ ತಂತ್ರಗಳನ್ನು ಬಳಸಬಹುದು ಎಂದು ತಿಳಿಸಿದರು. ರೈತರುಗಳಾದ ಕಾಸಿಮ್‍ಸಾಬ್ ಮತ್ತು ಈಶಣ್ಣ ಕೂರಿಗೆ ಬಿತ್ತನೆ ವ್ಯವಸ್ಥೆಯಿಂದ ಆದ ಅನುಕೂಲಗಳ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು. ಜಿಲ್ಲಾ ಆಹಾರ ಭದ್ರತಾ ಯೋಜನೆ ಸಂಯೋಜಕ ಎಸ್.ಬಿ. ಕೋಣಿ, ರೈತ ಸಂಪರ್ಕ ಕೇಂದ್ರ, ಹುಲಗಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕೃಷಿ ಇಲಾಖೆ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳದ ಸಹಭಾಗಿತ್ವದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ ಅಧ್ಯಕ್ಷ ಧರ್ಮರಾಜ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹಿಟ್ನಾಳ ಹಾಗೂ ಸುತ್ತಲಿನ ರೈತರು ಭಾಗವಹಿಸಿದ್ದರು.
ಹೀಗಾಗಿ ಲೇಖನಗಳು ಕೂರಿಗೆ ಬಿತ್ತನೆಯಿಂದ ವಿಷಮುಕ್ತ ಭತ್ತ ಮತ್ತು ಅಕ್ಕಿ- ಡಾ. ಎಂ.ಬಿ. ಪಾಟೀಲ
ಎಲ್ಲಾ ಲೇಖನಗಳು ಆಗಿದೆ ಕೂರಿಗೆ ಬಿತ್ತನೆಯಿಂದ ವಿಷಮುಕ್ತ ಭತ್ತ ಮತ್ತು ಅಕ್ಕಿ- ಡಾ. ಎಂ.ಬಿ. ಪಾಟೀಲ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಕೂರಿಗೆ ಬಿತ್ತನೆಯಿಂದ ವಿಷಮುಕ್ತ ಭತ್ತ ಮತ್ತು ಅಕ್ಕಿ- ಡಾ. ಎಂ.ಬಿ. ಪಾಟೀಲ ಲಿಂಕ್ ವಿಳಾಸ https://dekalungi.blogspot.com/2017/11/blog-post_654.html
0 Response to "ಕೂರಿಗೆ ಬಿತ್ತನೆಯಿಂದ ವಿಷಮುಕ್ತ ಭತ್ತ ಮತ್ತು ಅಕ್ಕಿ- ಡಾ. ಎಂ.ಬಿ. ಪಾಟೀಲ"
ಕಾಮೆಂಟ್ ಪೋಸ್ಟ್ ಮಾಡಿ