ಸೌಯಾರ್ದಯುತ ಈದ್-ಮಿಲಾದ್, ಹನುಮ ಜಯಂತಿ ಆಚರಣೆಗೆ ಡಿ.ಸಿ. ಕನಗವಲ್ಲಿ ಮನವಿ

ಸೌಯಾರ್ದಯುತ ಈದ್-ಮಿಲಾದ್, ಹನುಮ ಜಯಂತಿ ಆಚರಣೆಗೆ ಡಿ.ಸಿ. ಕನಗವಲ್ಲಿ ಮನವಿ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಸೌಯಾರ್ದಯುತ ಈದ್-ಮಿಲಾದ್, ಹನುಮ ಜಯಂತಿ ಆಚರಣೆಗೆ ಡಿ.ಸಿ. ಕನಗವಲ್ಲಿ ಮನವಿ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಸೌಯಾರ್ದಯುತ ಈದ್-ಮಿಲಾದ್, ಹನುಮ ಜಯಂತಿ ಆಚರಣೆಗೆ ಡಿ.ಸಿ. ಕನಗವಲ್ಲಿ ಮನವಿ
ಲಿಂಕ್ : ಸೌಯಾರ್ದಯುತ ಈದ್-ಮಿಲಾದ್, ಹನುಮ ಜಯಂತಿ ಆಚರಣೆಗೆ ಡಿ.ಸಿ. ಕನಗವಲ್ಲಿ ಮನವಿ

ಓದಿ


ಸೌಯಾರ್ದಯುತ ಈದ್-ಮಿಲಾದ್, ಹನುಮ ಜಯಂತಿ ಆಚರಣೆಗೆ ಡಿ.ಸಿ. ಕನಗವಲ್ಲಿ ಮನವಿ


ಕೊಪ್ಪಳ ನ. 28 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಈದ್-ಮಿಲಾದ್ ಮತ್ತು ಹನುಮ ಜಯಂತಿ ಆಚರಣೆಯನ್ನು ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಮನವಿ ಮಾಡಿದರು.
    ಜಿಲ್ಲೆಯಲ್ಲಿ ಡಿಸೆಂಬರ್. 02 ರಂದು ಈದ್-ಮಿಲಾದ್ ಹಬ್ಬ ಹಾಗೂ ಡಿ. 02 ರಂದು ಹನುಮ ಜಯಂತಿ ಆಚರಿಸುವ ಕುರಿತು ಜಿಲ್ಲಾ ಆಡಳಿತ ಭವನದ ಸಭಾಂಗಣದಲ್ಲಿ ಮಂಗಳವಾರದಂದು ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಶಾಂತಿಪಾಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
    ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಜಿಲ್ಲೆಯಲ್ಲಿ ಈದ್-ಮಿಲಾದ್ ಹಬ್ಬದ ಆಚರಣೆಯನ್ನು ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಿಸಬೇಕು.  ಹನುಮ ಜಯಂತಿಯನ್ನು ಕೂಡ ಈದ್-ಮಿಲಾದ್ ಆಚರಣೆ ಸಂದರ್ಭದಲ್ಲಿಯೇ ಆಚರಿಸಲಾಗುವುದರಿಂದ ಈ ಆಚರಣೆಗಳನ್ನು ಎಲ್ಲ ಸಮುದಾಯದವರು ಸೌಹಾರ್ದತೆ ಹಾಗೂ ಭಾವೈಕ್ಯತೆಯಿಂದ ಆಚರಿಸಬೇಕು.  ಜಿಲ್ಲೆಯಾದ್ಯಂತ ಡಿಸೆಂಬರ್. 02 ರಂದು ಈದ್-ಮಿಲಾದ್ ಹಬ್ಬವನ್ನು ಆಚರಣೆ ಮಾಡಲಾಗುತ್ತಿದ್ದು, ಹಾಗೂ ಹನುಮ ಜಯಂತಿ ಪ್ರಯುಕ್ತ ಕೊಪ್ಪಳ ನಗರದಲ್ಲಿ ಇದೇ ನ. 30 ರಂದು ಹನುಮ ಮಾಲಾ ಪೂಜಾ ಕಾರ್ಯಕ್ರಮ, ಡಿ. 02 ರಂದು ಗಂಗಾವತಿಯ ಅಂಜನಾದ್ರಿ ಬೆಟ್ಟದಲ್ಲಿ ಮಾಲಾ ವಿಸರ್ಜನಾ ಕಾರ್ಯಕ್ರಮ ಹಾಗೂ ಪೂಜಾ ಕಾರ್ಯಕ್ರಮ ಆಚರಿಸಲಾಗುತ್ತಿದ್ದು, ಯಾವುದೇ ಗೊಂದಲಗಳಿಗೆ ಅವಕಾಶ ಮಾಡಿಕೊಡದಂತೆ ಸೌಹಾರ್ದಯುತವಾಗಿ ಧಾರ್ಮಿಕ ಕಾರ್ಯಗಳ ಆಚರಣೆಗಳನ್ನು ಮಾಡಿಕೊಳ್ಳಬೇಕು.  ಕೊಪ್ಪಳ ಜಿಲ್ಲೆ ಒಂದು ಹಿಂದುಳಿದ ಜಿಲ್ಲೆಯಾಗಿದ್ದರೂ ಕೂಡ ಇದು ಒಂದು ಶಾಂತಿ, ಸೌಹಾರ್ದತೆಯ ಪ್ರತೀಕವಾದ ಜಿಲ್ಲೆಯಾಗಿದೆ.  ಇದನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಯಾವುದೇ ಗೊಂದಲ, ಸಮಸ್ಯೆಗಳಾದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತನ್ನಿ.  ಹಬ್ಬ ಆಚರಣೆಗಳನ್ನು ಶಾಂತಿಯುತವಾಗಿ ಹಾಗೂ ಸೌಹಾರ್ದತೆಯಿಂದ ಆಚರಿಸಿ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಮನವಿ ಮಾಡಿದರು.
    ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಡಾ. ಅನೂಪ ಶೆಟ್ಟಿ ಅವರು ಮಾತನಾಡಿ, ಡಿ. 02 ರಂದು ಜಿಲ್ಲಾಯಾದ್ಯಂತ ಈದ್-ಮಿಲಾದ್ ಆಚರಣೆ ಮಾಡಲಾಗುತ್ತಿದ್ದು, ಹನುಮ ಮಾಲಾ ಪೂಜಾ ಕಾರ್ಯಕ್ರಮವನ್ನು ಡಿ. 02ರ ಬದಲಿಗೆ ಕೊಪ್ಪಳದಲ್ಲಿ ನ. 30 ರಂದು ಆಚರಿಸಿಕೊಳ್ಳಬೇಕು.  ಹನುಮ ಮಾಲಾ ಕಾರ್ಯಕ್ರಮದಲ್ಲಿ ಭಾಗ್ಯನಗರ, ಕಿನ್ನಾಳ ಸೇರಿದಂತೆ ಕೊಪ್ಪಳ ನಗರದ ಸುತ್ತಮುತ್ತಲಿನ ಗ್ರಾಮಗಳ ಸ್ಥಳೀಯರಷ್ಟೇ ಭಾಗವಹಿಸಬೇಕು.  ಡಿ. 02 ರಂದು ಗಂಗಾವತಿಯ ಅಂಜನಾದ್ರಿ ಬೆಟ್ಟದಲ್ಲಿ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿಕೊಳ್ಳಬಹುದು.  ಗಂಗಾವತಿಯಲ್ಲಿ ಯಾವುದೇ ರೀತಿಯ ಮೆರವಣಿಗೆಗೆ ಅವಕಾಶ ಇಲ್ಲ.  ಪೂಜೆ ಮತ್ತು ಪ್ರಾರ್ಥನೆಗೆ ಮಾತ್ರ ಅವಕಾಶ ನೀಡಲಾಗಿದೆ.  ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವ ಉದ್ದೇಶದಿಂದ ಕೊಪ್ಪಳ ಮತ್ತು ಗಂಗಾವತಿ ನಗರಗಳಲ್ಲಿ ಬ್ಯಾನರ್ಸ್ ಅಳವಡಿಕೆಯನ್ನು ನಿಷೇಧಿಸಲಾಗಿದೆ.  ಡಿ.ಜೆ ಬಳಕೆ ಹಾಗೂ ನಿಷೇಧಿತ ಹಾಡುಗಳನ್ನು ಬಿತ್ತರಿಸುವುದನ್ನು ಕೂಡ ನಿಷೇಧಿಸಲಾಗಿದೆ. ಆಚರಣೆಗಳ  ಸಮಯವನ್ನು ನಿಗದಿಪಡಿಸಲಾಗಿದ್ದು, ಈದ್-ಮಿಲಾದ್ ಆಚರಣೆ ಹಾಗೂ ಹನುಮ ಜಯಂತಿ ಕಾರ್ಯಕ್ರವನ್ನು ಮಧ್ಯಾಹ್ನ 2-30 ಗಂಟೆಯೊಳಗಾಗಿ ಪೂರ್ಣಗೊಳಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. 
    ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಸಹಾಯಕ ಆಯುಕ್ತ ಗುರುದತ್ ಹೆಗ್ಡೆ, ಕೊಪ್ಪಳ ತಹಶೀಲ್ದಾರ ಗುರುಬಸವರಾಜ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.  ಹಲವು ಸಮಾಜದ ಗಣ್ಯರು,   ಮುಖಂಡರುಗಳು ಭಾಗವಹಿಸಿ, ಸಲಹೆ ಸೂಚನೆಗಳನ್ನು ನೀಡಿದರು.


ಹೀಗಾಗಿ ಲೇಖನಗಳು ಸೌಯಾರ್ದಯುತ ಈದ್-ಮಿಲಾದ್, ಹನುಮ ಜಯಂತಿ ಆಚರಣೆಗೆ ಡಿ.ಸಿ. ಕನಗವಲ್ಲಿ ಮನವಿ

ಎಲ್ಲಾ ಲೇಖನಗಳು ಆಗಿದೆ ಸೌಯಾರ್ದಯುತ ಈದ್-ಮಿಲಾದ್, ಹನುಮ ಜಯಂತಿ ಆಚರಣೆಗೆ ಡಿ.ಸಿ. ಕನಗವಲ್ಲಿ ಮನವಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಸೌಯಾರ್ದಯುತ ಈದ್-ಮಿಲಾದ್, ಹನುಮ ಜಯಂತಿ ಆಚರಣೆಗೆ ಡಿ.ಸಿ. ಕನಗವಲ್ಲಿ ಮನವಿ ಲಿಂಕ್ ವಿಳಾಸ https://dekalungi.blogspot.com/2017/11/blog-post_598.html

Subscribe to receive free email updates:

0 Response to "ಸೌಯಾರ್ದಯುತ ಈದ್-ಮಿಲಾದ್, ಹನುಮ ಜಯಂತಿ ಆಚರಣೆಗೆ ಡಿ.ಸಿ. ಕನಗವಲ್ಲಿ ಮನವಿ"

ಕಾಮೆಂಟ್‌‌ ಪೋಸ್ಟ್‌ ಮಾಡಿ