ಶೀರ್ಷಿಕೆ : ನೊಣಗಳ ಹಾವಳಿ ನಿಯಂತ್ರಣಕ್ಕೆ ಪಶುಪಾಲನಾ ಇಲಾಖೆ ತಾಕೀತು
ಲಿಂಕ್ : ನೊಣಗಳ ಹಾವಳಿ ನಿಯಂತ್ರಣಕ್ಕೆ ಪಶುಪಾಲನಾ ಇಲಾಖೆ ತಾಕೀತು
ನೊಣಗಳ ಹಾವಳಿ ನಿಯಂತ್ರಣಕ್ಕೆ ಪಶುಪಾಲನಾ ಇಲಾಖೆ ತಾಕೀತು
ಕೊಪ್ಪಳ ನ.24 (ಕರ್ನಾಟಕ ವಾರ್ತೆ): ಕೋಳಿ ಫಾರಂಗಳಿಂದ ಉಂಟಾಗುವ ನೊಣಗಳ ಹಾವಳಿಯನ್ನು ತಡೆಗಟ್ಟಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಕಟ್ಟು ನಿಟ್ಟಿನ ಸೂಚನೆ ನೀಡಿದೆ.
ನೊಣಗಳ ಹಾವಳಿ ಹೆಚ್ಚಾಗಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಪೌಲ್ಟ್ರಿ ಫಾರ್ಮ ಮಾಲೀಕರಿಗೆ ಕೋಳಿಗಳ ಆಹಾರದೊಂದಿಗೆ ಲಾರ್ವಿಸೈಡ್ ಔಷಧಿ ಬಳಸಿ ನೊಣಗಳ ಹತೋಟಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.
ಕೋಳಿಗಳ ಆಹಾರ ಮಿಶ್ರಣದಲ್ಲಿ ಪ್ರತಿ ಟನ್ ಕೋಳಿ ಆಹಾರಕ್ಕೆ ಒಂದು ಕೆ.ಜಿ ಲಾರ್ವಿಡೆಕ್ಸ್ ಔಷಧವನ್ನು ನಿಯಮಿತವಾಗಿ ಮಿಶ್ರಣ ಮಾಡಬೇಕು. ಇದರಿಂದ ನೊಣಗಳ ಲಾರ್ವಾ ಉತ್ಪತ್ತಿ ನಿಯಂತ್ರಣಗೊಂಡು, ನೊಣಗಳ ಉತ್ಪತ್ತಿಯೂ ಕಡಿಮೆಯಾಗುತ್ತದೆ. ಕೋಳಿ ಶೆಡ್ಡುಗಳ ಸುತ್ತಲೂ ನೊಣಗಳ ಹಾವಳಿ ತಪ್ಪಿಸಲು ಪೈರೆಥ್ರಿನ ಸಿಂಪರಣೆ ನಿಯಮಿತವಾಗಿ ಮಾಡಬೇಕು. ಲಾರ್ವಾಫಿಕ್ಸ್ ಘನತ್ಯಾಜ್ಯ ಹಾಗೂ ಕೋಳಿ ಹಿಕ್ಕೆಯನ್ನು ನಿಯಮಿತವಾಗಿ ಮತ್ತು ನಿರಂತರವಾಗಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಕೋಳಿ ಫಾರಂನ ಸುತ್ತಲೂ 8 ಕಿ.ಮೀ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಹಳ್ಳಿಗಳಲ್ಲಿ ನಿಯಮಿತವಾಗಿ ನೊಣಗಳ ನಿರೋಧಕ ಔಷಧಿಯನ್ನು ಸಿಂಪಡಿಸಬೇಕು ಎಂದು ಜಿಲ್ಲೆಯ ಪೌಲ್ಟ್ರಿ ಫಾರ್ಮ ಮಾಲೀಕರುಗಳಿಗೆ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಹೀಗಾಗಿ ಲೇಖನಗಳು ನೊಣಗಳ ಹಾವಳಿ ನಿಯಂತ್ರಣಕ್ಕೆ ಪಶುಪಾಲನಾ ಇಲಾಖೆ ತಾಕೀತು
ಎಲ್ಲಾ ಲೇಖನಗಳು ಆಗಿದೆ ನೊಣಗಳ ಹಾವಳಿ ನಿಯಂತ್ರಣಕ್ಕೆ ಪಶುಪಾಲನಾ ಇಲಾಖೆ ತಾಕೀತು ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ನೊಣಗಳ ಹಾವಳಿ ನಿಯಂತ್ರಣಕ್ಕೆ ಪಶುಪಾಲನಾ ಇಲಾಖೆ ತಾಕೀತು ಲಿಂಕ್ ವಿಳಾಸ https://dekalungi.blogspot.com/2017/11/blog-post_631.html
0 Response to "ನೊಣಗಳ ಹಾವಳಿ ನಿಯಂತ್ರಣಕ್ಕೆ ಪಶುಪಾಲನಾ ಇಲಾಖೆ ತಾಕೀತು"
ಕಾಮೆಂಟ್ ಪೋಸ್ಟ್ ಮಾಡಿ