ಜಿಲ್ಲೆಯಲ್ಲಿ 192 ಆನೆಕಾಲು ರೋಗಿಗಳು ಪತ್ತೆ : ಆನೆಕಾಲು ರೋಗ ನಿವಾರಣೆಗಾಗಿ ಸಾಮೂಹಿಕ ಮಾತ್ರೆ ನುಂಗಿಸುವ ಕಾರ್ಯಕ್ರಮಕ್ಕೆ ಚಾಲನೆ

ಜಿಲ್ಲೆಯಲ್ಲಿ 192 ಆನೆಕಾಲು ರೋಗಿಗಳು ಪತ್ತೆ : ಆನೆಕಾಲು ರೋಗ ನಿವಾರಣೆಗಾಗಿ ಸಾಮೂಹಿಕ ಮಾತ್ರೆ ನುಂಗಿಸುವ ಕಾರ್ಯಕ್ರಮಕ್ಕೆ ಚಾಲನೆ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಜಿಲ್ಲೆಯಲ್ಲಿ 192 ಆನೆಕಾಲು ರೋಗಿಗಳು ಪತ್ತೆ : ಆನೆಕಾಲು ರೋಗ ನಿವಾರಣೆಗಾಗಿ ಸಾಮೂಹಿಕ ಮಾತ್ರೆ ನುಂಗಿಸುವ ಕಾರ್ಯಕ್ರಮಕ್ಕೆ ಚಾಲನೆ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಜಿಲ್ಲೆಯಲ್ಲಿ 192 ಆನೆಕಾಲು ರೋಗಿಗಳು ಪತ್ತೆ : ಆನೆಕಾಲು ರೋಗ ನಿವಾರಣೆಗಾಗಿ ಸಾಮೂಹಿಕ ಮಾತ್ರೆ ನುಂಗಿಸುವ ಕಾರ್ಯಕ್ರಮಕ್ಕೆ ಚಾಲನೆ
ಲಿಂಕ್ : ಜಿಲ್ಲೆಯಲ್ಲಿ 192 ಆನೆಕಾಲು ರೋಗಿಗಳು ಪತ್ತೆ : ಆನೆಕಾಲು ರೋಗ ನಿವಾರಣೆಗಾಗಿ ಸಾಮೂಹಿಕ ಮಾತ್ರೆ ನುಂಗಿಸುವ ಕಾರ್ಯಕ್ರಮಕ್ಕೆ ಚಾಲನೆ

ಓದಿ


ಜಿಲ್ಲೆಯಲ್ಲಿ 192 ಆನೆಕಾಲು ರೋಗಿಗಳು ಪತ್ತೆ : ಆನೆಕಾಲು ರೋಗ ನಿವಾರಣೆಗಾಗಿ ಸಾಮೂಹಿಕ ಮಾತ್ರೆ ನುಂಗಿಸುವ ಕಾರ್ಯಕ್ರಮಕ್ಕೆ ಚಾಲನೆ


ಕೊಪ್ಪಳ ನ. 25 (ಕರ್ನಾಟಕ ವಾರ್ತೆ): ಕೊಪ್ಪಳ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಜಿಲ್ಲೆಯಲ್ಲಿ ಆನೆಕಾಲು  ರೋಗ ನಿವಾರಣೆಗಾಗಿ ಜಿಲ್ಲೆಯ ಕಿನ್ನಾಳ, ತಾವರಗೇರಾ ಮತ್ತು ಹನುಮಸಾಗರ ಗ್ರಾಮಗಳಲ್ಲಿ ನ. 27 ರಿಂದ ಡಿಸೆಂಬರ್. 04 ರವರೆಗೆ ಹಮ್ಮಿಕೊಂಡಿರುವ “ಸಾಮೂಹಿಕ ಮಾತ್ರೆ ನುಂಗಿಸುವ ಕಾರ್ಯಕ್ರಮ” ಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ಹೆಚ್. ಅವರು ಸಾರ್ವಜನಿಕರಲ್ಲಿ ವಿಶ್ವಾಸವನ್ನು ಮೂಡಿಸುವ ಸಲುವಾಗಿ ಸ್ವತಃ ತಾವೇ ಮಾತ್ರೆಗಳನ್ನು ನುಂಗುವುದರ ಮೂಲಕ ಚಾಲನೆ ನೀಡಿದರು.
    ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ಹೆಚ್. ಅವರು ಮಾತನಾಡಿ, ನ. 27 ರಿಂದ ಡಿ. 04 ರವರೆಗೆ ಆರೋಗ್ಯ ಇಲಾಖೆಯವರು ಮನೆ-ಮನೆಗೆ ಹಾಗೂ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಖುದ್ದಾಗಿ ಆನೆಕಾಲು ರೋಗ ನಿವಾರಕ ಡಿ.ಇ.ಸಿ ಹಾಗೂ ಅಲ್ಬೆಂಡಾಜೋಲ್ ಮಾತ್ರೆಗಳನ್ನು ಉಚಿತವಾಗಿ ನೀಡುವರು.  ಈ ಮಾತ್ರೆಗಳು ಅತ್ಯಂತ ಸುರಕ್ಷಿತವಾಗಿದ್ದು, ಯಾವುದೇ ತೀವ್ರತರನಾದ ಅಡ್ಡ ಪರಿಣಾಮಗಳು ಇರುವುದಿಲ್ಲ.  ಮಾತ್ರೆಗಳನ್ನು ಊಟ ಅಥವಾ ಉಪಹಾರ ಸೇವನೆಯಾದ ನಂತರವೇ ಸೇವಿಸಬೇಕು.  ಡಿ.ಇ.ಸಿ ಹಾಗೂ ಅಲ್ಬೆಂಡಾಜೋಲ್ ಮಾತ್ರೆಗಳನ್ನು ಕಿನ್ನಾಳ, ತಾವರಗೇರಾ ಮತ್ತು ಹನುಮಸಾಗರ ಗ್ರಾಮಗಳಲ್ಲಿರುವ ಪ್ರತಿಯೊಬ್ಬರು ಅಂದರೇ ಎರಡು ವರ್ಷದೊಳಗಿನ ಮಕ್ಕಳು, ಗರ್ಭೀಣಿ ಸ್ತ್ರೀಯರು ಹಾಗೂ ತೀವ್ರತರನಾದ ರೋಗಗಳಿಂದ ಬಳಲುವ ವ್ಯಕ್ತಿಗಳನ್ನು ಹೊರತುಪಡಿಸಿ ಎಲ್ಲರೂ ಸೇವಿಸಿ ಆನೆಕಾಲು ರೋಗದಿಂದ ಪಾರಾಗಲು ಸಾರ್ವಜನಿಕರಿಗೆ ಮನವಿ ಮಾಡಿದರು.    
    ಕೊಪ್ಪಳ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ. ವಿರುಪಾಕ್ಷರೆಡ್ಡಿ ಎಸ್. ಮಾದಿನೂರ ಅವರು ಮಾತನಾಡಿ, ಆನೆಕಾಲು ರೋಗ ಒಂದು ಭಯಂಕರ ರೋಗವಾಗಿದ್ದು, ಒಮ್ಮೆ ಈ ರೋಗದಿಂದ ಪೀಡಿತರಾದರೇ ಈ ರೋಗವನ್ನು ವಾಸಿಮಾಡಲು ಸಾಧ್ಯವಿಲ್ಲ.  ಕಿನ್ನಾಳ, ತಾವರಗೇರಾ ಮತ್ತು ಹನುಮಸಾಗರ ಗ್ರಾಮಗಳಲ್ಲಿ ವಾಸಿಸುವ ವ್ಯಕ್ತಿಗಳು ಮೇಲ್ನೋಟಕ್ಕೆ  ಆರೋಗ್ಯವಂತರಾಗಿ ಕಂಡರೂ ಸಹ ಅವರುಗಳ ದೇಹದಲ್ಲಿ ಈ ರೋಗವನ್ನು ಉಂಟುಮಾಡುವ ರೋಗಾಣುಗಳು ಇರುವ ಸಾಧ್ಯತೆ ಅಧಿಕವಾಗಿರುತ್ತದೆ.  ಆನೆಕಾಲು ರೋಗ ಕ್ಯುಲೆಕ್ಸ್ ಜಾತಿಯ ಸೋಂಕಿತ ಸೊಳ್ಳೆಯ ಕಚ್ಚುವಿಕೆಯಿಂದ ಹರಡುತ್ತದೆ.  ಸೋಂಕಿತ ಸೊಳ್ಳೆ ಕಚ್ಚಿದ ವ್ಯಕ್ತಿಗಳಲ್ಲಿ 06 ರಿಂದ 08 ವರ್ಷಗಳ ನಂತರ ಕಾಲುಗಳು, ಕೈಗಳು, ವೃಷಣಗಳು ಅಥವಾ ಸ್ತನಗಳು ದಪ್ಪವಾಗುವುದರ ಮೂಲಕ ಲಕ್ಷಣಗಳು ಕಾಣಿಸಿಕೊಳ್ಳುವುದರಿಂದ ರೋಗವನ್ನು ಶೀಘ್ರವಾಗಿ ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ. ಕಾರಣ ಈ ಗ್ರಾಮಗಳಲ್ಲಿರುವ ಎಲ್ಲಾ ಸಾರ್ವಜನಿಕರು ಆರೋಗ್ಯ ಇಲಾಖೆಯವರು ನೀಡುವ ಮಾತ್ರೆಗಳನ್ನು ಕಡ್ಡಾಯವಾಗಿ ಸೇವಿಸಿ ಆನೆಕಾಲು ರೋಗ ಮುಕ್ತ ಸಮಾಜವನ್ನು ನಿರ್ಮಿಸವಲ್ಲಿ ಸಹಕರಿಸಬೇಕು.  ಮಾತ್ರೆಗಳನ್ನು ಜನರಿಗೆ ಖುದ್ದಾಗಿ ನುಂಗಿಸುವ ಕಾರ್ಯಕ್ಕೆ ಪ್ರತಿ 50 ಮನೆಗಳಿಗೆ ಒಬ್ಬರು ಆಶಾ/ಅಂಗನವಾಡಿ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿದೆ.  ಇವರು ಮಾತ್ರೆಯನ್ನು ಆಯಾ ಮನೆಯವರು ಸೇವಿಸಿದ್ದನ್ನು ಖಚಿತಪಡಿಸಿಕೊಂಡೇ ಮುಂದಿನ ಮನೆಗೆ ತೆರಳಬೇಕಾಗುತ್ತದೆ.  ಅಲ್ಲದೆ ಪ್ರತಿ 10 ಮನೆಗಳಿಗೆ ಒಬ್ಬರು ಮೇಲ್ವಿಚಾರಕರನ್ನು ಪರಿಶೀಲನೆಗೆ ನೇಮಿಸಲಾಗಿದೆ ಎಂದರು. 
ಜಿಲ್ಲೆಯಲ್ಲಿ 192 ರೋಗಿಗಳು ಪತ್ತೆ :
************ ಆನೆಕಾಲು ರೋಗಿಗಳನ್ನು ಪತ್ತೆ ಹಚ್ಚುವ ಸಲುವಾಗಿ 2016 ರಲ್ಲಿ ಕೈಗೊಂಡ ಸರ್ವೆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಒಟ್ಟು 192 ಆನೆಕಾಲು ರೋಗಿಗಳು ಪತ್ತೆಯಾಗಿದ್ದಾರೆ.  ಈ ಪೈಕಿ ಕುಷ್ಟಗಿ ತಾಲೂಕಿನಲ್ಲಿ ಅತಿ ಹೆಚ್ಚು ಅಂದರೆ 112 ರೋಗಿಗಳು ಪತ್ತೆಯಾಗಿದ್ದಾರೆ.  ಗಂಗಾವತಿ- 42, ಯಲಬುರ್ಗಾ-20 ಹಾಗೂ ಕೊಪ್ಪಳ ತಾಲೂಕಿನಲ್ಲಿ 18 ರೋಗಿಗಳನ್ನು ಪತ್ತೆ ಹಚ್ಚಲಾಗಿದೆ.  ಕುಷ್ಟಗಿ ತಾಲೂಕಿನ ಹನುಮಸಾಗರ ಗ್ರಾಮದಲ್ಲಿಯೇ 56 ರೋಗಿಗಳು ಪತ್ತೆಯಾಗಿದ್ದರೆ, ತಾವರಗೇರಾದಲ್ಲಿ 28 ರೋಗಿಗಳು ಕಂಡುಬಂದಿದ್ದಾರೆ.  ಕಳೆದ ಜನವರಿಯಲ್ಲಿ ಜಿಲ್ಲೆಯಲ್ಲಿ 8152 ರಕ್ತಲೇಪನಗಳನ್ನು ಪರೀಕ್ಷೆಗೆ ಒಳಪಡಿಸಿದ್ದು ಈ ಪೈಕಿ 43 ಹೊಸ ರೋಗಿಗಳನ್ನು ಪತ್ತೆ ಮಾಡಲಾಗಿದೆ.  ಈ ಪೈಕಿ ಕೊಪ್ಪಳ ತಾಲೂಕಿನ ಕಿನ್ನಾಳದಲ್ಲಿಯೂ 06 ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಹನುಮಸಾಗರ, ತಾವರಗೇರಾ ಮತ್ತು ಕಿನ್ನಾಳ ಗ್ರಾಮದಲ್ಲಿ ಸಾಮೂಹಿಕವಾಗಿ ಮಾತ್ರೆ ನುಂಗಿಸುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ.  ರಾಜ್ಯದಲ್ಲಿ ಉತ್ತರಕನ್ನಡ, ದಕ್ಷಿಣಕನ್ನಡ, ರಾಯಚೂರು, ಯಾದಗಿರಿ, ಬಾಗಲಕೋಟೆ, ಬಿಜಾಪುರ ಜಿಲ್ಲೆಗಳಲ್ಲಿ ಆನೆಕಾಲು ರೋಗ ಪ್ರಕರಣಗಳು ಹೆಚ್ಚಾಗಿದ್ದು, ಕೊಪ್ಪಳ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ ಎಂದು ಡಾ. ವಿರುಪಾಕ್ಷರೆಡ್ಡಿ ಮಾದಿನೂರ ಅವರು ತಿಳಿಸಿದರು.
    ಜಿಲ್ಲಾ ಕೀಟ ಜನ್ಯ ರೋಗಗಳ ಸಲಹೆಗಾರರಾದ ರಮೇಶ ಕೆ. ಅವರು ಮಾತನಾಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ರಾಜ್ಯ ಮಟ್ಟದ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದ ಸಹಯೋಗದಲ್ಲಿ ಕೊಪ್ಪಳ ಜಿಲ್ಲೆಯಾದ್ಯಂತ ನಡೆದ ಆನೆಕಾಲು ರೋಗದ ರಾತ್ರಿ ರಕ್ತಲೇಪನ ಸಮೀಕ್ಷೆಯಲ್ಲಿ ಕೊಪ್ಪಳ ತಾಲೂಕಿನ ಕಿನ್ನಾಳ ಹಾಗೂ ಕುಷ್ಟಗಿ ತಾಲೂಕಿನ ತಾವರಗೇರಾ ಮತ್ತು ಹನುಮಸಾಗರ ಗ್ರಾಮಗಳಲ್ಲಿ ಆನೆಕಾಲು ರೋಗವನ್ನುಂಟು ಮಾಡುವ ರೋಗಾಣುಗಳು ನಿಗದಿತ ಪ್ರಮಾಣಕ್ಕಿಂತ ಹೆಚ್ಚಿಗೆ ಇರುವುದು ಪ್ರಯೋಗಾಲಯ ಪರೀಕ್ಷೆಯಲ್ಲಿ ಖಚಿತಪಟ್ಟಿರುತ್ತದೆ.  ಆದ್ದರಿಂದ ಈ ಮೂರು ಗ್ರಾಮಗಳಲ್ಲಿರುವ ಪ್ರತಿಯೊಬ್ಬರು ಆರೋಗ್ಯ ಇಲಾಖೆಯವರ ನೀಡುವ ಮಾತ್ರೆಗಳನ್ನು ತಪ್ಪದೇ ಸೇವಿಸಿ ಆನೆಕಾಲು ರೋಗದಿಂದ ಮುಕ್ತರಾಗಲು “ಸಾಮೂಹಿಕ ಮಾತ್ರೆ ನುಂಗಿಸುವ ಕಾರ್ಯಕ್ರಮ”ಕ್ಕೆ ಸಹಕರಿಸಬೇಕು. ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.
    ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಂಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಕಾರ್ಯಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


ಹೀಗಾಗಿ ಲೇಖನಗಳು ಜಿಲ್ಲೆಯಲ್ಲಿ 192 ಆನೆಕಾಲು ರೋಗಿಗಳು ಪತ್ತೆ : ಆನೆಕಾಲು ರೋಗ ನಿವಾರಣೆಗಾಗಿ ಸಾಮೂಹಿಕ ಮಾತ್ರೆ ನುಂಗಿಸುವ ಕಾರ್ಯಕ್ರಮಕ್ಕೆ ಚಾಲನೆ

ಎಲ್ಲಾ ಲೇಖನಗಳು ಆಗಿದೆ ಜಿಲ್ಲೆಯಲ್ಲಿ 192 ಆನೆಕಾಲು ರೋಗಿಗಳು ಪತ್ತೆ : ಆನೆಕಾಲು ರೋಗ ನಿವಾರಣೆಗಾಗಿ ಸಾಮೂಹಿಕ ಮಾತ್ರೆ ನುಂಗಿಸುವ ಕಾರ್ಯಕ್ರಮಕ್ಕೆ ಚಾಲನೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಜಿಲ್ಲೆಯಲ್ಲಿ 192 ಆನೆಕಾಲು ರೋಗಿಗಳು ಪತ್ತೆ : ಆನೆಕಾಲು ರೋಗ ನಿವಾರಣೆಗಾಗಿ ಸಾಮೂಹಿಕ ಮಾತ್ರೆ ನುಂಗಿಸುವ ಕಾರ್ಯಕ್ರಮಕ್ಕೆ ಚಾಲನೆ ಲಿಂಕ್ ವಿಳಾಸ https://dekalungi.blogspot.com/2017/11/192.html

Subscribe to receive free email updates:

0 Response to "ಜಿಲ್ಲೆಯಲ್ಲಿ 192 ಆನೆಕಾಲು ರೋಗಿಗಳು ಪತ್ತೆ : ಆನೆಕಾಲು ರೋಗ ನಿವಾರಣೆಗಾಗಿ ಸಾಮೂಹಿಕ ಮಾತ್ರೆ ನುಂಗಿಸುವ ಕಾರ್ಯಕ್ರಮಕ್ಕೆ ಚಾಲನೆ"

ಕಾಮೆಂಟ್‌‌ ಪೋಸ್ಟ್‌ ಮಾಡಿ