ಶೀರ್ಷಿಕೆ : ಗ್ರಾ.ಪಂ. ಉಪಚುನಾವಣೆ : ಶಸ್ತ್ರ ಒಪ್ಪಿಸಲು ಸೂಚನೆ
ಲಿಂಕ್ : ಗ್ರಾ.ಪಂ. ಉಪಚುನಾವಣೆ : ಶಸ್ತ್ರ ಒಪ್ಪಿಸಲು ಸೂಚನೆ
ಗ್ರಾ.ಪಂ. ಉಪಚುನಾವಣೆ : ಶಸ್ತ್ರ ಒಪ್ಪಿಸಲು ಸೂಚನೆ
ಕೊಪ್ಪಳ ನ. 27 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಯರಗೇರಾ, ಗೌರಿಪುರ, ಚಿಕ್ಕಬೆಣಕಲ್ ಮತ್ತು ಮರಳಿ ಗ್ರಾಮ ಪಂಚಾಯತಿಗಳಲ್ಲಿ ವಿವಿಧ ಕಾರಣಗಳಿಂದ ಆಕಸ್ಮಿಕವಾಗಿ ತೆರವಾಗಿರುವ ಸದಸ್ಯರ ಸ್ಥಾನಗಳಿಗೆ ಡಿಸೆಂಬರ್. 17 ರಂದು ಚುನಾವಣೆ ನಡೆಯಲಿದ್ದು, ಈ ವ್ಯಾಪ್ತಿಯಲ್ಲಿ ಇರುವ ಪರವಾನಿಗೆ ಪಡೆದ ಶಸ್ತ್ರಗಳನ್ನು ಡಿ. 20 ರವರೆಗೂ ಪೊಲೀಸ್ ಇಲಾಖೆಯ ವಶಕ್ಕೆ ಒಪ್ಪಿಸುವಂತೆ ಆದೇಶಿಸಲಾಗಿದೆ.
ಗ್ರಾಮ ಪಂಚಾಯತಿ ಉಪಚುನಾವಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ, ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಪಾಲನೆ ಉದ್ದೇಶದಿಂದ ಚುನಾವಣೆ ಜರುಗುವ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಪರವಾನಿಗೆ ಪಡೆದ ಶಸ್ತ್ರಗಳನ್ನು ಚುನಾವಣೆ ನೀತಿ ಸಂಹಿತೆ ಮುಗಿಯುವವರೆಗೆ ಅಂದರೆ ಡಿ. 20 ರವರೆಗೆ ಪೊಲೀಸ್ ಇಲಾಖೆಯಲ್ಲಿ ನಿಯಮಾನುಸಾರ ಠೇವಣಿ ಮಾಡಿಕೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಆದೇಶವು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಹಾಗೂ ಆರ್‍ಬಿಐ ನಿಂದ ಮಾನ್ಯತೆ ಪಡೆದಿರುವ ಬ್ಯಾಂಕುಗಳ ಸೆಕ್ಯುರಿಟಿ ಗಾರ್ಡ್ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಗ್ರಾ.ಪಂ. ಉಪಚುನಾವಣೆ : ಶಸ್ತ್ರ ಒಪ್ಪಿಸಲು ಸೂಚನೆ
ಎಲ್ಲಾ ಲೇಖನಗಳು ಆಗಿದೆ ಗ್ರಾ.ಪಂ. ಉಪಚುನಾವಣೆ : ಶಸ್ತ್ರ ಒಪ್ಪಿಸಲು ಸೂಚನೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಗ್ರಾ.ಪಂ. ಉಪಚುನಾವಣೆ : ಶಸ್ತ್ರ ಒಪ್ಪಿಸಲು ಸೂಚನೆ ಲಿಂಕ್ ವಿಳಾಸ https://dekalungi.blogspot.com/2017/11/blog-post_550.html
0 Response to "ಗ್ರಾ.ಪಂ. ಉಪಚುನಾವಣೆ : ಶಸ್ತ್ರ ಒಪ್ಪಿಸಲು ಸೂಚನೆ"
ಕಾಮೆಂಟ್ ಪೋಸ್ಟ್ ಮಾಡಿ