ಶೀರ್ಷಿಕೆ : ಆಧಾರ್ ಅದಾಲತ್‍ಗೆ ಡಿಸಿ ಕನಗವಲ್ಲಿ ಚಾಲನೆ
ಲಿಂಕ್ : ಆಧಾರ್ ಅದಾಲತ್‍ಗೆ ಡಿಸಿ ಕನಗವಲ್ಲಿ ಚಾಲನೆ
ಆಧಾರ್ ಅದಾಲತ್‍ಗೆ ಡಿಸಿ ಕನಗವಲ್ಲಿ ಚಾಲನೆ
ಕೊಪ್ಪಳ ನ. 27 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾಡಳಿತವು ಇ-ಆಡಳಿತ. ಬೆಂಗಳೂರು ಇವರ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಸ್ಪಂದನ ಕೇಂದ್ರದಲ್ಲಿ ಆಯೋಜಿಸಿರುವ ಆಧಾರ್ ಅದಾಲತ್ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಚಾಲನೆ ನೀಡಿದರು.
ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು, ಸರ್ಕಾರ ಇತ್ತೀಚೆಗೆ ಎಲ್ಲ ಯೋಜನೆಗಳಿಗೆ ಆಧಾರ್ ಸಂಖ್ಯೆಯ ಜೋಡಣೆಗೊಳಿಸುವ ಮೂಲಕ ಆಧಾರ್ ಸಂಖ್ಯೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ. ಅಲ್ಲದೆ, ಪ್ರತಿಯೊಬ್ಬರೂ ಆಧಾರ್ ಕಾರ್ಡ್ ಮಾಡಿಸುವುದು ಕಡ್ಡಾಯವೂ ಆಗಿದೆ. ಈ ಹಿಂದೆ ಪಡೆಯಲಾಗಿರುವ ಆಧಾರ್ ಕಾರ್ಡ್ ನಲ್ಲಿ ಕಣ್ತಪ್ಪಿನಿಂದಾಗಿ ಕೆಲವೊಂದು ಲೋಪದೋಷಗಳು ಆಗಿರುವ ಸಾಧ್ಯತೆ ಇದ್ದರೆ, ಕೆಲವರ ವಿಳಾಸ ಬದಲಾಗಿದೆ. ಹೀಗಾಗಿ ಇವೆಲ್ಲವನ್ನೂ ಸರಿಪಡಿಸಿಕೊಳ್ಳಲು ಇದೀಗ ಆಧಾರ್ ಅದಾಲತ್ ಅನ್ನು ನ. 27 ರಿಂದ ಡಿ. 02 ರವರೆಗೆ ಕೊಪ್ಪಳ ಜಿಲ್ಲಾಡಳಿತ ಭವನ ಆವರಣದಲ್ಲಿರುವ ಸ್ಪಂದನ ಕೇಂದ್ರದಲ್ಲಿ ಹೊಸದಾಗಿ ಆಧಾರ್ ನೋಂದಣಿ, ತಿದ್ದುಪಡಿ, ವಿಳಾಸ ಬದಲಾವಣೆ ಇಂತಹ ಕಾರ್ಯ ಚಟುವಟಿಕೆಗಳನ್ನು ಇಲ್ಲಿ ಮಾಡಿಕೊಡಲಾಗುವುದು.
ಇದುವರೆಗೂ ಆಧಾರ್ ನೊಂದಣಿ ಮಾಡಿಸದೇ ಇರುವವರು, ಆಧಾರ್ ನೋಂದಣಿ ಮಾಡಿಸಿಕೊಳ್ಳಬಹುದು. ಅಲ್ಲದೆ ಆಧಾರ್ ಕಾರ್ಡ್ ತಿದ್ದುಪಡಿ, ವಿಳಾಸ ಬದಲಾವಣೆ ಮಾಡಿಸಲೂ ಅವಕಾಶ ಇರುತ್ತದೆ. ಈ ವಿಶೇಷ ಕಾರ್ಯಕ್ರಮದ ಪ್ರಯೋಜನ ಪಡೆಯಬಯಸುವವರು, ಸ್ವಯಂ ದೃಢೀಕರಿಸಿದ ದಾಖಲಾತಿಗಳಾದ ಮತದಾರರ ಗುರುತಿನ ಚೀಟಿ, ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ, ಪಡಿತರ ಚೀಟಿ, ಬ್ಯಾಂಕ್ ಪಾಸ್ ಪುಸ್ತಕ, ವಾಸಸ್ಥಳ ಪ್ರಮಾಣ ಪತ್ರ, ಪಾನ್ ಕಾರ್ಡ್, ಡಿ.ಎಲ್. ಪ್ರತಿ ಮತ್ತು ಇನ್ನಿತರ ಅಧಿಕೃತ ದಾಖಲಾತಿಗಳು ಹಾಗೂ ಈ ಹಿಂದೆ ಪಡೆದ ಆಧಾರ್ ಕಾರ್ಡ್‍ನ ಪ್ರತಿಯನ್ನು ತರಬೇಕು. ಸಾರ್ವಜನಿಕರು ಆಧಾರ್ ಅದಾಲತ್ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.
ಆಧಾರ್ ಅದಾಲತ್ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಲು ಮೊದಲನೆ ದಿನವಾದ ಇಂದು ನೂರಾರು ಸಾರ್ವಜನಿಕರು ಅದಾಲತ್‍ನಲ್ಲಿ ಪಾಲ್ಗೊಂಡರು. ಆಧಾರ್ ನೋಂದಣಿ ಜಿಲ್ಲಾ ವ್ಯವಸ್ಥಾಪಕ ಜಾಫರ್ ಸೇರಿದಂತೆ ವಿವಿಧ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಹೀಗಾಗಿ ಲೇಖನಗಳು ಆಧಾರ್ ಅದಾಲತ್‍ಗೆ ಡಿಸಿ ಕನಗವಲ್ಲಿ ಚಾಲನೆ
ಎಲ್ಲಾ ಲೇಖನಗಳು ಆಗಿದೆ ಆಧಾರ್ ಅದಾಲತ್‍ಗೆ ಡಿಸಿ ಕನಗವಲ್ಲಿ ಚಾಲನೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಆಧಾರ್ ಅದಾಲತ್‍ಗೆ ಡಿಸಿ ಕನಗವಲ್ಲಿ ಚಾಲನೆ ಲಿಂಕ್ ವಿಳಾಸ https://dekalungi.blogspot.com/2017/11/blog-post_391.html
0 Response to "ಆಧಾರ್ ಅದಾಲತ್‍ಗೆ ಡಿಸಿ ಕನಗವಲ್ಲಿ ಚಾಲನೆ"
ಕಾಮೆಂಟ್ ಪೋಸ್ಟ್ ಮಾಡಿ