News and photo Date: 23--10--2017

News and photo Date: 23--10--2017 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು News and photo Date: 23--10--2017, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : News and photo Date: 23--10--2017
ಲಿಂಕ್ : News and photo Date: 23--10--2017

ಓದಿ


News and photo Date: 23--10--2017

ಮಾಣಿಕತೆಯಿಂದ ಸೇವೆ ಸಲ್ಲಿಸುವ ಮೂಲಕ ಶಾಂತಿ ಸುವ್ಯವಸ್ಥೆ ಕಾಪಾಡಿ
****************************************************************
-ಗೃಹ ಸಚಿವ ಶ್ರೀ ರಾಮಲಿಂಗಾರೆಡ್ಡಿ
*******************************
ಕಲಬುರಗಿ,ಅ.23.(ಕ.ವಾ.)-ಬುನಾದಿ ತರಬೇತಿ ಪಡೆದ ಪ್ರಶಿಕ್ಷಣಾರ್ಥಿಗಳು ಸದಾಕಾಲ ನ್ಯಾಯ ನಿಷ್ಠೆ, ಪ್ರಮಾಣಿಕತೆಯಿಂದ ಸೇವೆ ಸಲ್ಲಿಸುವ ಮೂಲಕ ದೇಶದ ಆಂತರಿಕ ಭದ್ರತೆ ಹಾಗೂ ಸಮಾಜದಲ್ಲಿನ ಶಾಂತಿ-ಸುವ್ಯಸ್ಥೆ ಕಾಪಾಡಬೇಕೆಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಕರೆ ನೀಡಿದ್ದಾರೆ.
ಅವರು ಸೋಮವಾರ ಕಲಬುರಗಿ ತಾಲೂಕಿನ ನಾಗನಹಳ್ಳಿ ಪೊಲೀಸ್ ತರಬೇತಿ ಮಹಾವಿದ್ಯಾಲಯದಲ್ಲಿ ಪಿ.ಎಸ್.ಐ(ನಾಗರಿಕ) ಏಳನೇ ತಂಡದ 48 ಪ್ರೊಬೇಷನರ್ಸ್ ಮತ್ತು ಪಿ.ಎಸ್.ಐ. (ನಿಸ್ತಂತು) ಮೂರನೇ ತಂಡದ 36 ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಪ್ರಶಿಕ್ಷಣಾರ್ಥಿಗಳು ಯಾವುದೇ ಭಯ, ದಾಕ್ಷಿಣ್ಯ, ಮತೀಯ, ರಾಜಕೀಯ ಸೇರಿದಂತೆ ಇನ್ನಿತರ ಯಾವುದೇ ಪ್ರಭಾವಕ್ಕೆ ಒಳಗಾಗದೇ ಪ್ರತಿಜ್ಞಾ ವಿಧಿ ಸ್ವೀಕರಿಸಿದಂತೆ ಸಂವಿಧಾನಕ್ಕನುಗುಣವಾಗಿ ಸಾರ್ವಜನಿಕರ ಆಸ್ತಿ-ಪಾಸ್ತಿ ಮತ್ತು ಮಾನವ ರಕ್ಷಣೆ ಕಾಪಾಡುವಲ್ಲಿ ತಮ್ಮ ಕರ್ತವ್ಯ ನಿಷ್ಠೆ ಪ್ರದರ್ಶಿಸಬೇಕು ಎಂದು ಅವರು ಹೇಳಿದರು.
ಸೇವೆಗೆ ಸೇರಿದಾಗ ಇರುವ ಉತ್ಸಾಹ-ಹುಮ್ಮಸ್ಸÀನ್ನು ನಿವೃತ್ತಿಯಾಗುವವರೆಗೆ ಮುಂದುವರೆಸಿಕೊಂಡು ಹೋಗಬೇಕು. ದೇಶದಲ್ಲಿ ಕರ್ನಾಟಕ ಪೊಲೀಸ್ ದಕ್ಷತೆ ಮತ್ತು ಕಾರ್ಯದ ಬಗ್ಗೆ ಹೆಮ್ಮೆ ಇದ್ದು, ಇದನ್ನು ಹಾಗೆ ಕಾಪಾಡಿಕೊಂಡು ಹೋಗುವ ಜವಾಬ್ದಾರಿ ಪ್ರತಿ ಪೊಲೀಸ್ ಸಿಬ್ಬಂದಿ ಮೇಲಿದೆ ಎಂದು ಅವರು ಹೇಳಿದರು.
371ಜೆ ಕಲಂ ಜಾರಿಯಾಗಲು ಸಂಸದ ಡಾ. ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಧರ್ಮಸಿಂಗ್ ಹಾಗೂ ಈ ಭಾಗದ ಮತ್ತಿತರ ನಾಯಕರು ಕಾರಣೀಭೂತರಾಗಿದ್ದಾರೆ. 371ಜೆ ಕಲಂ ಜಾರಿಯಿಂದ ಈ ಭಾಗದಲ್ಲಿ ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ ಲಭ್ಯವಾಗಿದ್ದು, ಅದರಂತೆ ಪೊಲೀಸ್ ಇಲಾಖೆಯಲ್ಲಿ ಇಂದು ಬಹಳಷ್ಟು ಜನ ನೇಮಕವಾಗಿದ್ದಾರೆ ಎಂದರು.
ತರಬೇತಿ ಮಹಾವಿದ್ಯಾಲಯ ಪ್ರಾಚಾರ್ಯ ಸವಿತಾ ಹೂಗಾರ ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರಲ್ಲದೆ, ತರಬೇತಿಯ ವರದಿ ವಾಚನ ಮಾಡಿದರು. 2003ರಲ್ಲಿ 94 ಎಕರೆ ವಿಸ್ತೀರ್ಣದಲ್ಲಿ ಸ್ಥಾಪಿತವಾದ ಈ ತರಬೇತಿ ಮಹಾವಿದ್ಯಾಲಯವು ಐ.ಎಸ್.ಓ. ಪ್ರಮಾಣಿತ ರಾಜ್ಯದ ಏಕಮಾತ್ರ ತರಬೇತಿ ಮಹಾವಿದ್ಯಾಲಯವಾಗಿದೆ. ಈ ಕಾಲೇಜಿನಲ್ಲಿ ಪಿ.ಎಸ್.ಐ., ಪೇದೆಗಳು ಸೇರಿದಂತೆ ಇದುವರೆಗೆ 5460 ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ನೀಡಲಾಗಿದೆ ಎಂದು ಮಹಾವಿದ್ಯಾಲಯದ ಕಾರ್ಯಚಟುವಟಿಕೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
ಇದಕ್ಕೂ ಮುನ್ನ ಪರೇಡ್ ಕಮಾಂಡೆಂಟ್ ಪ್ರೊಬೇಷನರ್ ಪಿ.ಎಸ್.ಐ(ಸಿವಿಲ್) ಕಾಳಿಂಗ ಎ. ಬಸವರಾಜ ಮತ್ತು ಸಹಾಯಕ ಪರೇಡ್ ಕಮಾಂಡೆಂಟ್ ಪ್ರೊಬೇಷನರ್ ಪಿ.ಎಸ್.ಐ(ಸಿವಿಲ್) ಶೀಲಾದೇವಿ ನ್ಯಾಮನ್ ಅವರ ನೇತೃತ್ವದಲ್ಲಿ ಮಹಿಳಾ ಪ್ರಶಿಕ್ಷಣಾರ್ಥಿಗಳು ಸೇರಿದಂತೆ ಒಟ್ಟು 127 ಪ್ರಶಿಕ್ಷಣಾರ್ಥಿಗಳ 6 ತುಕಡಿಗಳ ಪಂಥಸಂಚಲನೆ ಪರಿವೀಕ್ಷಿಸಿ, ಪರೇಡ್ ವಂದನೆ ಸ್ವೀಕರಿಸಿದ ಸಚಿವರು ತರಬೇತಿಯಲ್ಲಿ ಉತ್ತಮ ಸಾಧನೆ ಮಾಡಿದ 8 ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ವಿತರಿಸಿದರು. ಇದಲ್ಲದೇ ಪೊಲೀಸ್ ತರಬೇತಿ ಮಹಾವಿದ್ಯಾಲಯದ ಸಮಾಚಾರ ಪತ್ರಿಕೆ ಸಹ ಬಿಡುಗಡೆಗೊಳಿಸಿದರು.
ಪ್ರಶಸ್ತಿ ವಿಜೇತರು:- ಪಿ.ಎಸ್.ಐ(ಸಿವಿಲ್) ವಿಭಾಗದಲ್ಲಿ ಒಳಾಂಗಣ ಅತ್ಯುತ್ತಮ, ಡಿಜಿ ಮತ್ತು ಐಜಿಪಿ ಟ್ರೋಫಿ ಮತ್ತು ಸರ್ವೋತ್ತಮ ಪ್ರಶಸ್ತಿಯನ್ನು ಪ್ರೊಬೇಷನರ್ ಪಿ.ಎಸ್.ಐ ಭಾಷುಮಿಯಾ ಎಂ.ಕೊಂಚೂರ ತಮ್ಮದಾಗಿಸಿಕೊಂಡರು. ಉಳಿದಂತೆ ಹೊರಾಂಗಣ ಅತ್ಯುತ್ತಮ ಪ್ರಶಸ್ತಿ ಮತ್ತು ಸ್ಮಾಲ್ ವೆಪನ್ 9 ಎಂ.ಎಂ.ಪಿಸ್ತೂಲ್ ಶೂಟಿಂಗ್-ಪಿ.ಎಸ್.ಐ. ಕಾಳಿಂಗ ಎ.ಬಸವರಾಜ, ಬಿಗ್ ಆಮ್ರ್ಸ್ 7.62 ಎಂ.ಎಂ. ಎಸ್.ಎಲ್.ಆರ್, ಶೂಟಿಂಗ್-ಪಿ.ಎಸ್.ಐ. ಹನುಮಂತ ಬಿ.ತಿಡಿಗೋಳ ಮತ್ತು ಅತ್ಯುತ್ತಮ ಮಹಿಳಾ ಪ್ರಶಿಕ್ಷಣಾರ್ಥಿ ಪ್ರಶಸ್ತಿ-ಸೌಮ್ಯ ನವೀನ ಕುಮಾರ್ ಅವರಿಗೆ ನೀಡಲಾಯಿತು. ಪಿ.ಎಸ್.ಐ(ನಿಸ್ಸಂತು) ವಿಭಾಗದಲ್ಲಿ ಒಳಾಂಗಣ ಅತ್ಯುತ್ತಮ ಪ್ರಶಸ್ತಿ ಮತ್ತು ಸರ್ವೋತ್ತಮ ಪ್ರಶಸ್ತಿಯನ್ನು ಪ್ರೊಬೇಷನರ್ ಪಿ.ಎಸ್.ಐ ಮನೋಹರ ಕೆ.ಆರ್. ತಮ್ಮದಾಗಿಸಿಕೊಂಡರು. ಹೊರಾಂಗಣ ಅತ್ಯುತ್ತಮ ಪ್ರಶಸ್ತಿ ಮತ್ತು ಬಿಗ್ ಆಮ್ರ್ಸ್ 7.62 ಎಂ.ಎಂ. ಎಸ್.ಎಲ್.ಆರ್, ಶೂಟಿಂಗ್-ಪಿ.ಎಸ್.ಐ. ಷಡಕ್ಷರಿ ಬಿ., ಸ್ಮಾಲ್ ವೆಪನ್ 9 ಎಂ.ಎಂ.ಪಿಸ್ತೂಲ್ ಶೂಟಿಂಗ್-ಪಿ.ಎಸ್.ಐ. ಮಾರುತಿ ತಮ್ಮಣ್ಣನವರ ಮತ್ತು ಡಿಜಿ ಮತ್ತು ಐಜಿಪಿ ಟ್ರೋಫಿ ಪ್ರಶಸ್ತಿ-ರಾಜಶೇಖರ್ ವೈ.ಎಸ್. ಅವರಿಗೆ ನೀಡಲಾಯಿತು.
ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ, ಚಿಂಚೋಳಿ ಶಾಸಕ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಡಾ|| ಉಮೇಶ ಜಾಧವ, ಮಹಾನಗರ ಪಾಲಿಕೆಯ ಮಹಾಪೌರ ಶರಣಕುಮಾರ ಮೋದಿ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಹಾಗೂ ಮಹನಿರೀಕ್ಷಕ ಆರ್.ಕೆ.ದತ್ತಾ, ಪೊಲೀಸ್ ಇಲಾಖೆ ತರಬೇತಿ ವಿಭಾಗದ ಪೊಲೀಸ್ ಮಹಾನಿರ್ದೇಶಕ ಪ್ರೇಮ ಶಂಕರ ಮೀನಾ, ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ, ಬೀದರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೇವರಾಜ, ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ, ಕೆ.ಎಸ್.ಆರ್.ಪಿ. ಕಮಾಂಡೆಂಟ್ ಬಸವರಾಜ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪೊಲೀಸ್ ಇಲಾಖೆಯ ತರಬೇತಿ ವಿಭಾಗದ ಮಹಾ ನಿರೀಕ್ಷಕರಾದ ವಿ.ಕೆ. ಸಿಂಗ್ ಅವರು ಸ್ವಾಗತಿಸಿದರು. ತರಬೇತಿ ಕಾಲೇಜಿನ ಡಿವೈ.ಎಸ್.ಪಿ. ಯಾದವಾಡ ವಂದಿಸಿದರು. ಸಿ.ಪಿ.ಐ. ಸಾಲಿಮಠ ಹಾಗೂ ಪಿ.ಎಸ್.ಐ. ಲಕ್ಷ್ಮೀ ನಿರೂಪಿಸಿದರು.

ಡಿಸೆಂಬರ್‍ನೊಳಗೆ ಪೊಲೀಸ್ ಕಮೀಷನರೇಟ್ ಕಾರ್ಯಾರಂಭ
*****************************************************
--ಗೃಹ ಸಚಿವ ರಾಮಲಿಂಗಾರೆಡ್ಡಿ
*****************************
ಕಲಬುರಗಿ,ಅ.23.(ಕ.ವಾ.)-ಬರುವ ಡಿಸೆಂಬರ್‍ನೊಳಗೆ ಕಲಬುರಗಿಯಲ್ಲಿ ಹೊಸ ಪೊಲೀಸ್ ಆಯುಕ್ತಾಲಯ (ಕಮೀಷನರೇಟ್) ಕಾರ್ಯಾರಂಭ ಮಾಡಲಿದೆ ಎಂದು ರಾಜ್ಯ ಗೃಹ ಸಚಿವ ರಾಮಲಿಂಗಾರೆಡ್ಡಿ ಪ್ರಕಟಿಸಿದ್ದಾರೆ.
ಅವರು ಸೋಮವಾರ ಕಲಬುರಗಿ ಡಿ.ಎ.ಆರ್. ಆವರಣದಲ್ಲಿ ನೂತನವಾಗಿ ನಿರ್ಮಿಸಿದ 120 ಪೊಲೀಸ್ ವಸತಿ ಗೃಹಗಳ ಹಾಗೂ ಸ್ಟೇಶನ್ ಬಜಾರ್ ಪೊಲೀಸ್ ಠಾಣೆಯ ನೂತನ ಕಚೇರಿ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
152 ಕೋಟಿ ರೂ. ಅನುದಾನದಲ್ಲಿ 500 ಕ್ಕಿಂತಲೂ ಹೆಚ್ಚುವರಿ ಸಿಬ್ಬಂದಿಯೊಂದಿಗೆ ಕಮೀಷನರೇಟ್ ಸ್ಥಾಪಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪೊಲೀಸ್ ನೇಮಕಾತಿ ಮತ್ತು ಅವರಿಗೆ ವಸತಿ ಗೃಹಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ ಎಂದ ಅವರು, ಒಟ್ಟು 11 ಸಾವಿರ ವಸತಿ ಗೃಹಗಳನ್ನು ಪೊಲೀಸ್ ಸಿಬ್ಬಂದಿಗಾಗಿ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
ಈ ಪೈಕಿ ಮೊದಲ ಹಂತದಲ್ಲಿ 2272 ವಸತಿ ಗೃಹಗಳನ್ನು ನಿರ್ಮಿಸಲಾಗಿದೆ ಎಂದ ಅವರು, 2 ಮತ್ತು 3ನೇ ಹಂತದಲ್ಲಿ ಉಳಿದ ವಸತಿ ಗೃಹಗಳನ್ನು ನಿರ್ಮಿಸಲಾಗುವುದು. 2018ರೊಳಗೆ ಎಲ್ಲ ವಸತಿ ಗೃಹಗಳನ್ನು ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಪೊಲೀಸ್ ಇಲಾಖೆ ಬಹಳ ಮಹತ್ವದ್ದು, ಪೊಲೀಸರು ಶಾಂತಿ, ಸುವ್ಯವಸ್ಥೆ ಕಾಪಾಡಲು ಶ್ರಮಿಸಬೇಕಾಗುತ್ತದೆ. ಇಂತಹ ಸಿಬ್ಬಂದಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕಾಗಿದೆ ಎಂದು ಅವರು ಪ್ರತಿಪಾದಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಸದ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿ, ಆದಷ್ಟು ಶೀಘ್ರ ಪೊಲೀಸ್ ಆಯುಕ್ತಾಲಯ ಪ್ರಾರಂಭಿಸಬೇಕು. ಸ್ಟೇಶನ್ ಬಜಾರ್ ಠಾಣೆ 116.47 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿ ಇಂದು ಉದ್ಘಾಟನೆ ಮಾಡಲ್ಪಟ್ಟಿರುವ ಹೊಸ ಕಟ್ಟಡಕ್ಕೆ ಸ್ಥಳಾಂತರವಾಗಲಿದ್ದು, ಖಾಲಿಯಾಗುವ ಹಳೆ ಸ್ಟೇಶನ್ ಬಜಾರ್ ಠಾಣೆಯ ಕಟ್ಟಡದಲ್ಲಿ ಪೊಲೀಸ್ ಕಮೀಷನರೇಟ್ ಪ್ರಾರಂಭಿಸಬೇಕೆಂದು ಗೃಹ ಸಚಿವರಿಗೆ ಮನವಿ ಮಾಡಿದರು.
ಕಮೀಷನರೇಟ್ ನಿರ್ಮಾಣದಿಂದ ಸಂಪೂರ್ಣ ಅಧಿಕಾರ ಪೊಲೀಸ್ ಆಯುಕ್ತರಿಗಿರುತ್ತದೆ. ಇದರಿಂದ ಇಲಾಖೆಯ ಕೆಲಸದಲ್ಲಿ ಆಗುವ ವಿಳಂಬ ತಪ್ಪುತ್ತದೆ ಎಂದು ಅವರು ಹೇಳಿದರು.
120 ಪೊಲೀಸ್ ವಸತಿ ಗೃಹಗಳನ್ನು ಕೇವಲ 20 ತಿಂಗಳಲ್ಲಿ ನಿರ್ಮಿಸಿರುವ ಕರ್ನಾಟಕ ರಾಜ್ಯ ಪೊಲೀಸ್ ಹೌಸಿಂಗ್ ಕಾರ್ಪೋರೇಷನ್ ಸಾಧನೆಯನ್ನು ಪ್ರಶಂಸಿಸಿದ ಖರ್ಗೆ ಅವರು, ಈ ವಸತಿ ಗೃಹಗಳ ಅಂದಾಜು ಮೊತ್ತ 21 ಕೋಟಿ 45 ಲಕ್ಷ 90ಸಾವಿರ ರೂಪಾಯಿಯಾಗಿತ್ತು. ಆದರೆ 16 ಕೋಟಿ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಹೀಗಾಗಿ ಇನ್ನೂ 5 ಲಕ್ಷ ರೂಪಾಯಿ ಉಳಿಕೆಯಾಗಿದ್ದು, ಈ ಉಳಿತಾಯ ಹಣವನ್ನು ವಸತಿ ಗೃಹಕ್ಕೆ ರಸ್ತೆ ಮತ್ತಿತರ ಸೌಕರ್ಯ ಕಲ್ಪಿಸಲು ಬಳಸಬೇಕು ಎಂದು ಸಲಹೆ ನೀಡಿದರು.
ಆಳಂದ, ಸೇಡಂ, ಚಿಂಚೋಳಿ, ಕಲಬುರಗಿ ಗ್ರಾಮಾಂತರ ಸೇರಿದಂತೆ 8 ಪೊಲೀಸ್ ಠಾಣೆಗಳ ಕಟ್ಟಡಗಳು ದುಸ್ಥಿಯಲ್ಲಿದ್ದು, ಇಲ್ಲಿ ಹೊಸ ಕಟ್ಟಡ ನಿರ್ಮಿಸಬೇಕೆಂದು ಗೃಹ ಸಚಿವರಿಗೆ ಮನವಿ ಮಾಡಿದರು.
ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ ಅವರು ಮಾತನಾಡಿ, ಅಪರಾಧ ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸ್ ಕಮೀಷನರೇಟ್ ಮಂಜೂರು ಮಾಡಿದ್ದಕ್ಕೆ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರಿಗೆ ಅಭಿನಂದನೆ ಸಲ್ಲಿಸಿದರು.
ಈಗಾಗಲೇ ಹೈದ್ರಾಬಾದ್ ಕರ್ನಾಟಕದ ಜಿಲ್ಲೆಗಳ ಪೊಲೀಸ್ ಇಲಾಖೆಗೆ 13 ಕೋಟಿ ರೂಪಾಯಿ ಅನುದಾನವನ್ನು ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆಯ ಅಗತ್ಯ ಸವಲತ್ತು ಕಲ್ಪಿಸಲು ಹೆಚ್.ಕೆ.ಆರ್.ಡಿ.ಬಿ. ಸಿದ್ಧ ಎಂದು ಹೆಚ್.ಕೆ.ಆರ್.ಡಿ.ಬಿ ಅಧ್ಯಕ್ಷರೂ ಆಗಿರುವ ಶರಣಪ್ರಕಾಶ್ ಪಾಟೀಲ್ ಅವರು ಹೇಳಿದರು.
ಮಹಾನಿರ್ದೇಶಕರು ಹಾಗೂ ಪೊಲೀಸ್ ಮಹಾನಿರ್ದೇಶಕರಾದ ರೂಪಕ್ ಕುಮಾರ ದತ್ತಾ ಅವರು ಮಾತನಾಡಿ, ಪೊಲೀಸ್ ಇಲಾಖೆಯ ಮೂಲಭೂತ ಸೌಕರ್ಯ ಯೋಜನೆಗಳಿಗೆ ಹೆಚ್.ಕೆ.ಆರ್.ಡಿ.ಬಿ. ಅನುದಾನ ನೀಡಬೇಕು ಎಂದು ಕೋರಿದರು. ಪೊಲೀಸರು ಒಳ್ಳೆಯ ಕೆಲಸ ಮಾಡಿ ತೋರಿಸಬೇಕು. ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಬೇಕೆಂದು ಅವರು ಕಿವಿಮಾತು ಹೇಳಿದರು.
ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಜಿ. ಮತ್ತು ಹೆಚ್.ಆರ್.) ಹಾಗೂ ಕೆ.ಎಸ್.ಪಿ.ಹೆಚ್. ಮತ್ತು ಐಡಿಸಿಎಲ್‍ನ ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ಸಂಜಯ ಸಹಾಯ್ ಅವರು ಕರ್ನಾಟಕ ರಾಜ್ಯ ಪೊಲೀಸ್ ಹೌಸಿಂಗ್ ನಿಗಮದ (ಕಾರ್ಪೋರೇಷನ್) ವಸತಿ ನಿರ್ಮಾಣದ ವಿವಿಧ ಕಾರ್ಯಗಳನ್ನು ವಿವರಿಸಿದರು.
ಪ್ರಾಸ್ತಾವಿಕವಾಗಿ ನುಡಿ ನುಡಿದÀ ಈಶಾನ್ಯ ವಲಯದ ಪೊಲೀಸ್ ಮಹಾನಿರೀಕ್ಷಕರಾದ ಆಲೋಕ ಕುಮಾರ ಅವರು ಕಲಬುರಗಿಯಲ್ಲಿ ಪೊಲೀಸ್ ಟೌನ್‍ಶಿಪ್ ನಿರ್ಮಾಣ ಕುರಿತು ಗೃಹ ಸಚಿವರಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಚಿಂಚೋಳಿ ಶಾಸಕ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಡಾ|| ಉಮೇಶ ಜಾಧವ, ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ, ಕಲಬುರಗಿ ಮೇಯರ್ ಶರಣಕುಮಾರ ಮೋದಿ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹ್ಮದ್ ಅಸಗರ ಚುಲಬುಲ್, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಇಲಿಯಾಸ್ ಬಾಗವಾನ್, ಪೊಲೀಸ್ ಮಹಾನಿರ್ದೇಶಕ (ತರಬೇತಿ) ಪ್ರೇಮ್ ಶಂಕರ ಮೀನಾ, ಪೊಲೀಸ್ ಇಲಾಖೆ ತರಬೇತಿ ವಿಭಾಗದ ಮಹಾನಿರ್ದೇಶಕ ಬಿ.ಕೆ. ಸಿಂಗ್, ಬೀದರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೇವರಾಜ್, ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಮುಂತಾದವರು ಇದ್ದರು.
ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ ಗಣ್ಯರನ್ನು ಸ್ವಾಗತಿಸಿದರು. ಕಲಬುರಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಪ್ರಕಾಶ ವಂದಿಸಿದರು.

ಅಕ್ಟೋಬರ್ 23ರಂದು ಕಾನೂನು ಅರಿವು-ನೆರವು ಕಾರ್ಯಕ್ರಮ
******************************************************
ಕಲಬುರಗಿ: ಅ.23 (ಕ.ವಾ):- ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ವಿಕಲಚೇತನ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಮತ್ತು ಮಹಾದೇವಿ ತಾಯಿ ಮಹಿಳಾ ವಿದ್ಯಾವರ್ಧಕ ಸಂಘ, ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ಅಕ್ಟೋಬರ್ 24ರಂದು ಬೆಳಿಗ್ಗೆ 11 ಗಂಟೆಗೆ ನಗರದ ಮಹಾದೇವಿ ತಾಯಿ ಮಹಿಳಾ ವಿದ್ಯಾವರ್ಧಕ ಸಂಘದ ವೃದ್ಧಾಶ್ರಮದಲ್ಲಿ ಹಿರಿಯ ನಾಗರಿಕರಿಗೆ “ನೀವು ಒಂಟಿ ಅಲ್ಲ” ಎಂಬ ವಿಷಯದ ಕುರಿತು ಕಾನೂನು ಅರಿವು-ನೆರವು ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವೆÀಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಸ್.ಆರ್, ಮಾಣಿಕ್ಯ ಉದ್ಘಾಟಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾದೇವಿ ತಾಯಿ ಮಹಿಳಾ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಜಲಜಾಕ್ಷಿ ವಹಿಸಿಕೊಳ್ಳಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಅಂಗವಿಕಲ ಕಲ್ಯಾಣಾಧಿಕಾರಿ ಬನ್ಸಿ ಪವಾರ್, ನ್ಯಾಯಾವಾದಿಗಳ ಸಂಘ ಅಧ್ಯಕ್ಷ ಆರ್.ಕೆ.ಹಿರೇಮಠ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀಕಾಂತ ಕುಲಕರ್ಣಿ ಆಗಮಿಸಲಿದ್ದಾರೆ.
ಅಂಗವಿಕಲರ ಕಲ್ಯಾಣಾಧಿಕಾರಿ ಬನ್ಸಿ ಪವಾರ್ ಸಂಪನ್ಮೂಲ ವ್ಯಕ್ತಿ ಆಗಮಿಸಿ ‘’ಹಿರಿಯ ನಾಗರಿಕರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಕುರಿತು” ಮಾಹಿತಿ ನೀಡಲಿದ್ದಾರೆ.

ಕಿತ್ತೂರು ರಾಣಿ ಚೆನ್ನಮ್ಮ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನ
*************************************************
ಕಲಬುರಗಿ,ಅ.23.(ಕ.ವಾ.)-ಕಳೆದ 2017ರ ಮಾರ್ಚ್ ಮಾಹೆಯಲ್ಲಿ ಜರುಗಿದ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿರುವ ಸರ್ಕಾರಿ ಮತ್ತು ಅನುದಾನಿತ ಪದವಿ ಪೂರ್ವ ಕಾಲೇಜುಗಳ ವಿಜ್ಞಾನ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿನಿಯರಿಗಾಗಿ ಸರ್ಕಾರ ಜಾರಿಗೆ ತಂದಿರುವ 2017-18ನೇ ಸಾಲಿನ “ಕಿತ್ತೂರು ರಾಣಿ ಚೆನ್ನಮ್ಮ ಪುರಸ್ಕಾರ” ಯೋಜನೆಗಾಗಿ ಕಲಬುರಗಿ ಜಿಲ್ಲೆಯ ಅರ್ಹ ವಿದ್ಯಾರ್ಥಿನಿಯರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಡಿ. ಕಲಬುರಗಿ ತಿಳಿಸಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸಿಇಟಿ ಪರೀಕ್ಷೆ ಬರೆದು ವೃತ್ತಿ ಶಿಕ್ಷಣ ಪದವಿ ಕೋರ್ಸುಗಳಾದ ಇಂಜಿನಿಯರ್, ವೈದ್ಯಕೀಯ, ದಂತ ವಿಜ್ಞಾನ ಕಾಲೇಜುಗಳಿಗೆ ಹಾಗೂ ಕೃಷಿ/ಪಶುವೈದ್ಯ ವಿಜ್ಞಾನ ವಿದ್ಯಾಲಯದ ವಿವಿಧ ವೃತ್ತಿ ಶಿಕ್ಷಣ ಪದವಿ ಕೋರ್ಸಗಳನ್ನು ಆಯ್ಕೆ ಮಾಡಿಕೊಂಡು ಕಾಲೇಜುಗಳಿಗೆ ಪ್ರವೇಶ ಪಡೆದಿರುವ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸೇರಿದ ವಿದ್ಯಾರ್ಥಿನಿಯರು ಮಾತ್ರ ಈ ಯೋಜನೆಗೆ ಅರ್ಹರಿರುತ್ತಾರೆ.
ವಿದ್ಯಾರ್ಥಿನಿಯರ ಕುಟುಂಬವು ಬಿಪಿಎಲ್ ಕಾರ್ಡ್ ಹೊಂದಿರಬೇಕು. ಮೇಲಿನ ಅರ್ಹತೆಗೆ ಅನುಗುಣವಾಗಿ ವಿದ್ಯಾರ್ಥಿನಿಯರು ಸರ್ಕಾರವು ನೀಡುವ ಯಾವುದಾದರೂ ಒಂದು ವಿದ್ಯಾರ್ಥಿ ವೇತನಕ್ಕೆ ಮಾತ್ರ ಆಯ್ಕೆ ಮಾಡಲು ಅವಕಾಶವಿರುತ್ತದೆ. ಭರ್ತಿಮಾಡಿದ ಅರ್ಜಿಗಳನ್ನು 2017ರ ನವೆಂಬರ್ 1ರೊಳಗೆ ನೇರವಾಗಿ ಸಂಬಂಧ ಪಟ್ಟ ಕಾಲೇಜುಗಳ ಪ್ರಾಚಾರ್ಯರಿಗೆ ಸಲ್ಲಿಸಬೇಕೆಂದು ಅವರು ತಿಳಿಸಿದ್ದಾರೆ.

ಪ್ರತಿಭಾವಂತರಿಗೆ ಶುಲ್ಕ ಉಚಿತ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
******************************************************
ಕಲಬುರಗಿ,ಅ.23.(ಕ.ವಾ.)-ಕಳೆದ 2017ನೇ ಮಾರ್ಚ್ ತಿಂಗಳಿನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಶೇಕಡಾ 80ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿರುವ ಸರ್ಕಾರಿ ಮತ್ತು ಅನುದಾನಿತ ಪದವಿ ಪೂರ್ವ ಕಾಲೇಜುಗಳ ವಿಜ್ಞಾನ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗಾಗಿ ಸರ್ಕಾರ ಜಾರಿಗೆ ತಂದಿರುವ 2017-18ನೇ ಸಾಲಿನ “ಪ್ರತಿಭಾವಂತರಿಗೆ ಶುಲ್ಕ ಉಚಿತ ಸೌಲಭ್ಯ” ಯೋಜನೆಗಾಗಿ ಕಲಬುರಗಿ ಜಿಲ್ಲೆಯ ಅರ್ಹ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಡಿ. ಕಲಬುರಗಿ ತಿಳಿಸಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸಿಇಟಿ ಪರೀಕ್ಷೆ ಬರೆದು ವೃತ್ತಿ ಶಿಕ್ಷಣ ಪದವಿ ಕೋರ್ಸ್‍ಗಳಾದ ಇಂಜಿನಿಯರ್, ವೈದ್ಯಕೀಯ, ದಂತ ವಿಜ್ಞಾನ ಕಾಲೇಜುಗಳಿಗೆ ಹಾಗೂ ಕೃಷಿ/ ಪಶುವೈದ್ಯ ವಿಜ್ಞಾನ ವಿದ್ಯಾಲಯದ ವಿವಿಧ ವೃತ್ತಿ ಶಿಕ್ಷಣ ಪದವಿ ಕೋರ್ಸಗಳನ್ನು ಆಯ್ಕೆ ಮಾಡಿಕೊಂಡು ಕಾಲೇಜುಗಳಿಗೆ ಪ್ರವೇಶ ಪಡೆದಿರುವ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸೇರಿದ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಮಾತ್ರ ಈ ಸೌಲಭ್ಯಗಳಿಗೆ ಅರ್ಹರಿರುತ್ತಾರೆ. ಇಂತಹ ವಿದ್ಯಾರ್ಥಿ/ವಿದ್ಯಾರ್ಥಿನಿಯರ ಕುಟುಂಬವು ಬಿಪಿಎಲ್ ಕಾರ್ಡ ಹೊಂದಿರಬೇಕು.
ಮೇಲಿನ ಅರ್ಹತೆಗೆ ಅನುಗುಣವಾಗಿ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಸರ್ಕಾರವು ನೀಡುವ ಯಾವುದಾದರೂ ಒಂದು ವಿದ್ಯಾರ್ಥಿ ವೇತನಕ್ಕೆ ಮಾತ್ರ ಆಯ್ಕೆ ಮಾಡಲು ಅವಕಾಶವಿರುತ್ತದೆ. ಅರ್ಹ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಗಳನ್ನು 2017ರ ನವೆಂಬರ್ 1ರೊಳಗೆ ಸಂಬಂಧ ಪಟ್ಟ ಕಾಲೇಜುಗಳ ಪ್ರಾಚಾರ್ಯರಿಗೆ ಸಲ್ಲಿಸಬೇಕೆಂದು ಅವರು ತಿಳಿಸಿದ್ದಾರೆ.

ಅಕ್ಟೋಬರ್ 24ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
**************************************************
ಕಲಬುರಗಿ,ಅ.23(ಕ.ವಾ)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದಿಂದ 11ಕೆವಿ. ಟಿ.ವಿ. ಸ್ಟೇಶನ್, 11ಕೆ.ವಿ. ತಾಜ್‍ನಗರ ಹಾಗೂ 11ಕೆವಿ ವಾಟರ್ ಸಪ್ಲೈ ಎಕ್ಸ್‍ಪ್ರೆಸ್ ಫೀಡರುಗಳ ವ್ಯಾಪ್ತಿಯಲ್ಲಿ ನಿರ್ವಹಣಾ ಕಾರ್ಯ ಕೈಗೊಳ್ಳುವ ಪ್ರಯುಕ್ತ ಅಕ್ಟೋಬರ್ 24ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸದರಿ ಫೀಡರಿನ ವ್ಯಾಪ್ತಿಯ ಬಡಾವಣೆಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ. ವಿದ್ಯುತ್ ವ್ಯತ್ಯಯವಾಗುವ ಬಡಾವಣೆಗಳ ವಿವರ ಇಂತಿದೆ.
11ಕೆ.ವಿ. ಟಿ.ವಿ.ಸ್ಟೇಶನ್ ಫೀಡರ್: ಅಂದು ಬೆಳಿಗೆ 9.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಮುನಿಂ ಸಂಘ, ಕಾಕಡೆ ಚೌಕ್, ರಾಮನಗರ, ರೇವಣಸಿದ್ದೇಶ್ವರ ಕಾಲೋನಿ, ಕೆ.ಕೆ. ನಗರ, ಶಿವಾಜಿ ನಗರ ಮತ್ತು ಭವಾನಿ ನಗರ.
11 ಕೆ.ವಿ. ತಾಜ್‍ನಗರ ಫೀಡರ್: ಅಂದು ಬೆಳಿಗೆ 9.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಚನ್ನವೀರ ನಗರ, ರಾಜೀವಗಾಂಧಿ ನಗರ, ಶಹಾ ಬಜಾರ ತಾಂಡಾ, ಶಿವಶಕ್ತಿ ನಗರ, ತಾಜ್‍ನಗರ, ನಿಜಾಮಪುರ ಮತ್ತು ಹಳೆ ಫೀಲ್ಟರ ಬೇಡ್, ಕಮಲ ನಗರ, ಕೆ.ಎಸ್.ಆರ್.ಪಿ. ಕ್ವಾರ್ಟರ್ಸ್, ಸುವರ್ಣ ನಗರ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.
11ಕೆ.ವಿ. ವಾಟರ್ ಸಪ್ಲೈ ಎಕ್ಸ್‍ಪ್ರೆಸ್ ಫೀಡರ್: ಅಂದು ಮಧ್ಯಾಹ್ನ 2.30 ರಿಂದ ಸಂಜೆ 5.30 ಗಂಟೆಯವರೆಗೆ ಫಿಲ್ಟರ್ ಬೆಡ್ ಹೆಚ್.ಟಿ. ಇನ್‍ಸ್ಟಾಲೇಷನ್ (ವಾಟರ್ ಸಪ್ಲೈ).


















ಹೀಗಾಗಿ ಲೇಖನಗಳು News and photo Date: 23--10--2017

ಎಲ್ಲಾ ಲೇಖನಗಳು ಆಗಿದೆ News and photo Date: 23--10--2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ News and photo Date: 23--10--2017 ಲಿಂಕ್ ವಿಳಾಸ https://dekalungi.blogspot.com/2017/10/news-and-photo-date-23-10-2017.html

Subscribe to receive free email updates:

0 Response to "News and photo Date: 23--10--2017"

ಕಾಮೆಂಟ್‌‌ ಪೋಸ್ಟ್‌ ಮಾಡಿ