ಶೀರ್ಷಿಕೆ :
ಲಿಂಕ್ :
ಸಾಫ್ಟ್ ವೇರ್ ಜನರಿಂದ ವನ`ಸಿರಿ'ಗೆ ಕೊಡುಗೆ
# ಬಂಡಿಪುರ ಸುತ್ತಮುತ್ತ ಪರ್ಮಾಕಲ್ಚರ್ ಕಲರವ # ಅಂತರ್ಜಲ ಹೆಚ್ಚಳಕ್ಕೆ ಕಾಂಟೂರ್ ಬಂಡ್ಡಿಂಗ್ ಬಲ
ಸಾಫ್ಟ್ ವೇರ್ ಕಂಪನಿಯಲ್ಲಿ ಉದ್ಯೋಗ.ಕೈತುಂಬಾ ಸಂಬಳ.ಬಿಡುವಿಲ್ಲದಷ್ಟು ಕೆಲಸ ಇದ್ದರೆ ಏನು ಮಾಡಬಹುದು.ಸ್ವಂತಕ್ಕೊಂದು ಸುಂದರ ಮನೆ ಕಟ್ಟಿಕೊಳ್ಳಬಹುದು.ಓಡಾಡಲು ಐಷಾರಾಮಿ ಕಾರು ಖರೀದಿಸಿ ನಗರದಲ್ಲಿ ಬದುಕು ಕಟ್ಟಿಕೊಂಡು ಆರಾಮವಾಗಿ ಇದ್ದು ಬಿಡಬಹುದು. ಆದರೆ ಅದನ್ನೆಲ್ಲಾ ಬಿಟ್ಟು ಕಾಡು ಬೆಳೆಸಲು ಮುಂದಾಗಿರುವ ಹಸಿರು ಪ್ರೇಮಿಗಳ ಕತೆ ಇದು.
ಬಂಡೀಪುರ ಅರಣ್ಯದ ಕುಂದುಕೆರೆ ಅರಣ್ಯ ವಲಯಕ್ಕೆ ಸೇರಿದ ಶೆಟ್ಟಹಳ್ಳಿ ಬಳಿ ಕಾಡಂಚಿನಲ್ಲಿ ನಲವತ್ತು ಎಕರೆ ಪ್ರದೇಶದಲ್ಲಿ ವೈವಿಧ್ಯ ಸಸ್ಯಗಳ ಕಾಡುಬೆಳೆಸಿ ಪರ್ಮಾ ಕಲ್ಚರ್ (ಶಾಶ್ವತ ಕೃಷಿ) ಮಾಡಲು ಹೊರಟ ಸಮಾನ ಮನಸ್ಕ ಗೆಳೆಯರ ಕಥಾನಕ ಇದು.
ಬೆಂಗಳೂರಿನ ಸಂತೋಷ್ ತಮ್ಮಂತಹ ಹಲವಾರು ಗೆಳೆಯರು ಸೇರಿ ಹೀಗೆ ನಾನಾ ಭಾಗಗಳಲ್ಲಿ ಮಾಡುತ್ತಿರುವ ಯೋಜನೆಗಳ ಬಗ್ಗೆ ಹೇಳುತ್ತಿದ್ದಾಗ ಈ ಭೂಮಿಯ ಮೇಲೆ ಎಂತೆಂತಹ ಪರಿಸರ ಪ್ರೇಮಿಗಳು, `ಹಸಿರು ಹುಚ್ಚರು' ಇದ್ದಾರಲ್ಲ! ಅನಿಸಿತು.
ಕಳೆದ ಹತ್ತು ವರ್ಷಗಳಿಂದ ಅವರೆಲ್ಲಾ ಶೆಟ್ಟಹಳ್ಳಿಯ ಕರ್ಮಭೂಮಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು, ಪುಣೆ, ಹೈದರಾಬಾದ್ ಹೀಗೆ ಬೇರೆ ಬೇರೆ ಕಡೆ ಕೆಲಸಮಾಡುತ್ತಿದ್ದ ಸಮಾನಮನಸ್ಕ ಗೆಳೆಯರನ್ನು ಹಸಿರು ಪ್ರೀತಿ ಒಂದೆಡೆ ಸೇರಿಸಿದೆ.ಕೆಲವರು ಬಿಡುವಿನ ವೇಳೆಯಲ್ಲಿ ಇಲ್ಲಿಗೆ ಓಡೋಡಿ ಬಂದರೆ ಮತ್ತೆ ಕೆಲವರು ಇಲ್ಲೇ ನಿಂತು ಇದನ್ನೆಲ್ಲಾ ನೋಡಿಕೊಳ್ಳುತ್ತಿದ್ದಾರೆ.
ಬೆಂಗಳೂರಿನ ಸಂತೋಷ್ ಬಾಚಹಳ್ಳಿ ಎಲ್ಲೆಗೆ ಸೇರಿದ ಚಿಕ್ಕ ಎಲಚೆಟ್ಟಿ ಗ್ರಾಮದಲ್ಲಿ ಜಮೀನು ಖರೀದಿಸಿ ಮನೆಮಾಡಿಕೊಂಡಿದ್ದಾರೆ. ಜೇಡಿ ಆಲ್ಫ್ರೆಡ್ ಪುಣೆಯಲ್ಲಿದ್ದ ತಮ್ಮ ಮನೆ,ಆಸ್ತಿ ಎಲ್ಲಾ ಮಾರಾಟಮಾಡಿ,ಐಟಿ ಉದ್ಯೋಗವನ್ನೂ ಬಿಟ್ಟು ಪತ್ನಿ ಸಮೇತ ಪಮರ್ಾಕಲ್ಚರ್ ಕೃಷಿಮಾಡಲು ಬಂದಿದ್ದಾರೆ.ಹಿಮಾಲಯದ ರಾಣಿಕೇತ್ನಲ್ಲಿರುವ ಲೀಡರ್ ಶಿಫ್ ಸ್ಕೂಲ್ನ ನಿದರ್ೇಶಕ ರವಿ ಕುಮಾರ್,ನಂದನ್ ನೀಲಕೆಣಿ ಜೊತೆ ಕೆಲಸಮಾಡುತ್ತಿರುವ ಜಗದೀಶ್,ಕೌಶಿಕ್ ಎಲ್ಲಾ ಸೇರಿ ಮಾಡುತ್ತಿರುವ ಕೆಲಸದಿಂದ ಒಂದೆರಡು ವರ್ಷದಲ್ಲಿ ಶೆಟ್ಟಹಳ್ಳಿಯ ಸುತ್ತಮತ್ತ ಅಂತರ್ಜಲ ಮಟ್ಟ ಸುಧಾರಿಸಲಿದೆ.ಅದಕ್ಕಿಂತ ಮುಖ್ಯವಾಗಿ ನೂರಾರು ಬಗೆಯ ಕಾಡುಜಾತಿಯ ಗಿಡಮರಗಳು ಇಲ್ಲಿ ಬರಲಿವೆ.ಇದರಿಂದ ಇಡೀ ಪ್ರದೇಶ ಹಸಿರನ್ನು ಹೊದ್ದು ಕಂಗೊಳಿಸಲಿದೆ.ಹಳ್ಳಿಯ ಆಸಕ್ತ ರೈತರಿಗೆ ಪಮರ್ಾಕಲ್ಚರ್ನ ಮಾದರಿ ನೋಡಲು ಅಲ್ಲಿ ಸಿಗುತ್ತದೆ.ಜೊತೆಗೆ ತಮ್ಮ ಜಮೀನುಗಳಲ್ಲೂ ಪಮರ್ಾಕಲ್ಚರ್,ಕಾಂಟೂರ್ ಬಂಡ್ಡಿಂಗ್ ಮಾಡಿಕೊಳ್ಳಲು,ಜೀವನಮಟ್ಟ ಸುಧಾರಿಸಿಕೊಳ್ಳಲು ಈ ಗೆಳೆಯರ ಸಹಕಾರ,ಸಲಹೆ ಹಾಗೂ ನೆರವು ನೀಡಲಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹೀಗೆ ಸಾವಯವ ಕೃಷಿಕರ ಬಗ್ಗೆ ಹುಡುಕಾಟ ನಡೆಸುತ್ತಿದ್ದಾಗ ಗುಂಡ್ಲುಪೇಟೆ ತಾಲೂಕಿನ ಮಂಗಲ ಗ್ರಾಮದ ಕೆ.ಎನ್.ನಾಗೇಶ್ ಎಂಬ ಯುವಕ ಪರ್ಮಾ ಕಲ್ಚರ್,ಕಾಂಟೂರ್ ಬಂಡ್ಡಿಂಗ್ ಮತ್ತು ವಿವಿಧ ಬಗೆಯ ಅರಣ್ಯಜಾತಿಯ ಮರಗಿಡಗಳ ಬಗ್ಗೆ ಬರೆಯುತ್ತಿರುವುದನ್ನು ಗಮನಿಸುತ್ತಿದ್ದೆ.ನೈಸರ್ಗಿಕ ಕೃಷಿಯಲ್ಲಿನ ಆಸಕ್ತಿ,ಸದಭಿರುಚಿ ನೋಡಿ ಮತ್ತಷ್ಟು ಕುತೂಹಲವಾಗಿ ನೋಡಲು ಹೊರಟೆ.ನಾಗೇಶ್ ಅವರನ್ನು ಭೇಟಿಮಾಡಲು ಕೃಷಿಕ ಮಿತ್ರರಾದ ಶರಣು ಮತ್ತು ಹಂಚೀಪುರದ ಪ್ರಸಾದ್ ಅವರೊಂದಿಗೆ ಹೊರಟವನಿಗೆ ಅಲ್ಲಿ ಮತ್ತೊಂದು ಹೊಸ ಪ್ರಪಂಚವೇ ತೆರೆದುಕೊಂಡಿತ್ತು.ನಮ್ಮ ಆಲೋಚನೆಳನ್ನೆ ತಲೆಕೆಳಗೂ ಮಾಡುವ,ಬದುಕನ್ನು ಸಹಜವಾಗಿ ನೋಡುವ,ಪರಿಸರದ ಜೊತೆ ಜೊತೆಯಾಗಿ ನೈತಿಕ ಅನುಸಂಧಾನ ನಡೆಸುವ ಮಾದರಿಯ ದರ್ಶನವಾಯಿತು.
ಇದೆಲ್ಲಾ ಸರಿ ಇಷ್ಟೊಂದು ಹಣ ವೆಚ್ಚ ಮಾಡಿ ಹೀಗೆ ಕಾಡು ಬೆಳೆಸುತ್ತೀರಲ್ಲಾ ಇದರಿಂದ ಲಾಭ ಏನು ಅಂತ ವ್ಯವಹಾರಿಕ ಪ್ರಶ್ನೆ ಕೇಳಿದಾಗ ಸಂತೋಷ್ "ಹಣ ಬೇರೊಂದು ಕಡೆಯಿಂದ ಬರುತ್ತದೆ. ಆದರೆ ನಮಗೆ ಮರಗಿಡ ಬೆಳೆಸಿದ ಸಂತೋಷ ಇದೆಯಲ್ಲಾ ಅದಕ್ಕೆ ಬೆಲೆಕಟ್ಟಲಾಗದು. ಇಲ್ಲೂ ಪರ್ಮಾ ಕಲ್ಚರ್ ಮಾಡುವುದರಿಂದಲ್ಲೂ ಹಣ ಬಂದೇ ಬರುತ್ತದೆ ಆದರೆ ಸ್ವಲ್ಪಕಾಲ ಕಾಯಬೇಕು" ಎಂದಾಗ ಹೌದು ಹಣವಂತರೆಲ್ಲಾ ಹೀಗೆ ಯೋಚನೆಮಾಡಿಬಿಟ್ಟರೆ ಭೂಮಿತಾಯಿ ಧನ್ಯಳಾಗಿಬಿಡುತ್ತಾಳೆ,ಸುತ್ತೆಲ್ಲಾ ಹಸಿರು ವನರಾಶಿ ಸೃಷ್ಠಿಯಾಗಿಬಿಡುತ್ತದೆ ಅನಿಸಿತು.
ಕಳೆದ ಐದಾರು ವರ್ಷಗಳಿಂದ ಮಳೆ ಇಲ್ಲದೆ ಬಂಡೀಪುರದ ಸುತ್ತಮುತ್ತಾ ಬರಡಾಗಿದ್ದ ಭೂಮಿ ಈಗ ಹಸಿರಾಗಿದೆ.ಮೂರ್ನಾಲ್ಕು ತಿಂಗಳಿನಿಂದ ಸುರಿಯುತ್ತಿರುವ ಮಳೆ ಇಡಿ ವಾತಾವರಣವನ್ನು ತಂಪಾಗಿಸಿದೆ. ಪ್ರಸಕ್ತ ವರ್ಷ ಅಲ್ಲಿ ಹದಿಮೂರು ಸಾವಿರ ಗಿಡಗಳನ್ನು ಹಾಕಿದ್ದಾರೆ.ಮುಂದಿನ ವರ್ಷ ಐವತ್ತು ಸಾವಿರ ಗಿಡಗಳನ್ನು ಹಾಕುವ ಯೋಜನೆ ಇದೆ ಎನ್ನುತ್ತಾರೆ ಸಂತೋಷ್.
ದೇಶದ ನಾನಾ ಭಾಗಗಳಲ್ಲಿ ವೈವಿಧ್ಯಮಯ ಗಿಡಗಳನ್ನು ಹುಡುಕಿ ತಂದು ಇಲ್ಲಿ ಹಾಕಲಾಗಿದೆ. ಕೊಯಮತ್ತೂರಿನ ಈಶಾ ಫೌಂಡೇಶನ್ ನರ್ಸರಿಯಲ್ಲಿ ಹೆಚ್ಚು ಕಾಡುಗಿಡಗಳು ಸಿಕ್ಕಿವೆ. ಒಂದು ಬಾರಿ ಗಿಡ ನೆಟ್ಟಾಗ ನೀರು ಹಾಕುವುದನ್ನು ಬಿಟ್ಟರೆ ಸಹಜವಾಗಿಯೇ ಪರಿಸರಕ್ಕೆ ಹೊಂದಿಕೊಂಡು ಬೆಳೆಯಲು ಬಿಡಲಾಗುತ್ತದೆ.ಇದೊಂದು ಪರಸರದಲ್ಲಿ ಸಹಜವಾಗಿ ನಡೆಯುವ ಪ್ರಕ್ರಿಯೆ.ಗಿಡ ಬೆಳೆಯಲು ನೀರು ಮತ್ತು ಸೂಕ್ತವಾದ ಪರಿಸರ ನಿಮರ್ಾಣ ಮಾಡಿಕೊಟ್ಟುಬಿಟ್ಟರೆ ಅಲ್ಲಿ ವಿಸ್ಮಯವೇ ನಡೆಯುತ್ತದೆ.ಅದನ್ನು ಗಮನಿಸುವುದೆ ಒಂದು ಸೌಂದರ್ಯ ಮತ್ತು ಖುಶಿ ಎಂದು ಸಂತೋಷ್ ಕರ್ಮಭೂಮಿಯಲ್ಲಿ ನಿಂತು ಹೇಳುತ್ತಿದ್ದರೆ ಬೆಟ್ಟದ ಮೇಲಿಂದ ಬೀಸುತಿದ್ದ ತಂಗಾಳಿ ನಮ್ಮನ್ನು ಹಿತವಾಗಿ ಮುಟ್ಟಿ ಮಾತನಾಡಿಸಿ ಮುಂದೆ ಹೋಗುತ್ತಿತ್ತು.
ಇಲ್ಲಿ ನಡೆಯುತ್ತಿರುವ ಕಾಡುಮರಗಳು ಮತ್ತು ಪರಿಸರದಲ್ಲಿ ಜರುಗುವ ವಿಸ್ಮಯವನ್ನು ನೋಡಲು ಇಸ್ರೋ ವಿಜ್ಞಾನಿ ಸಾಂಬಕುಮಾರ್ ಸೇರಿದಂತೆ ಹಲವು ವಿಜ್ಞಾನಿಗಳು ಅಧ್ಯಯನಕ್ಕೆ ಬರುತ್ತಾರೆ.ಪ್ರತಿ ಗಿಡಮರಗಳ ಬಗ್ಗೆ ದಾಖಲಾತಿ ಇದೆ. ಐದು ಎಕರೆ ಪ್ರದೇಶದಲ್ಲಿ ಐದು ಪ್ರತ್ಯೇಕ ವಲಯಗಳನ್ನಾಗಿ ಮಾಡಿಕೊಂಡು ಅದನ್ನು ಮಾತ್ರ ಉಳುಮೆ ಮಾಡಿದ್ದಾರೆ. ಅಲ್ಲಿ ಬೇಳೆಕಾಳುಗಳನ್ನು ಬೆಳೆಯುವ ಪ್ರದೇಶ,ಹಣ್ಣಿನ ಗಿಡಮರ ಬೆಳೆಯುವ ಪ್ರದೇಶ,ಅರಣ್ಯಧಾರಿತ ಮರ ಬೆಳೆಯುವ ಪ್ರದೇಶ,ಹುಲ್ಲುಗಾವಲು (ಗ್ರಾಸ್ ಲ್ಯಾಂಡ್) ಹೀಗೆ ವಿಗಂಡಣೆ ಮಾಡಿಕೊಂಡು ನೈಸಗರ್ಿಕವಾಗಿ ಬೆಳೆಯಲಾಗುತ್ತಿದೆ.
ಉಕ್ಕಿಬಂದ ಗಂಗೆ : ನೀರಿಗಾಗಿ ಒಂದು ಬೋರ್ವೆಲ್ ತೆಗಿಸಿ ಅದಕ್ಕೆ ಹ್ಯಾಂಡ್ಪಂಪ್ ಅಳವಡಿಸಿಕೊಂಡಿದ್ದಾರೆ. ಮಳೆ ಶುರುವಾಗುವುದಕ್ಕಿಂತ ಐದಾರು ತಿಂಗಳ ಹಿಂದೆ 570 ಅಡಿಗೆ ಮತ್ತೊಂದು ಬೋರ್ವೆಲ್ ಕೊರೆಸಲಾಗಿತ್ತು.ಒಂದು ಹನಿ ನೀರು ಬರಲಿಲ್ಲ.ಬರೀ ಧೂಳು.ಸರಿ ಮತ್ತೆ ಪ್ರಯೋಜನವಿಲ್ಲ ಅಂತ ಬಿಟ್ಟುಬಿಟ್ಟರು. ಮಳೆ ಆರಂಭವಾದಾಗ ಕೇವಲ ಒಂದೇ ಮಳೆಗೆ ಆ ನಿಜರ್ೀವ ಬೋರ್ವೆಲ್ಗೂ ಜೀವಬಂತು.ಗಂಗೆ ಹರಿದು ಬಂದಳು.ಇದಕ್ಕೆಲ್ಲಾ ಕಾರಣವಾಗಿದ್ದು ಕಾಂಟೂರ್ ಬಂಡ್ಡಿಂಗ್ ಎಂಬ ಸಂಜೀವಿನಿ.
ಮಳೆ ಬಂದ ನಂತರ ಜನರೇಟರ್ ತಂದು ಎರಡು ದಿನ ಬೋರ್ವೆಲ್ನಿಂದ ನೀರೆತ್ತಿ ಇಳುವರಿ ಪರೀಕ್ಷೆ ಮಾಡಿದ್ದಾರೆ.190 ಅಡಿ ಮೇಲೆ ಬೋರ್ವೆಲ್ನಲ್ಲಿ ನೀರು ನಿಂತಿದೆ.ಒಳ್ಳೆಯ ನೀರಿನ ಇಳುವರಿಯೂ ಸಿಗುತ್ತಿದೆ.ಸಧ್ಯ ಆ ಬೋರ್ವೆಲ್ಗೆ ಸೋಲಾರ್ ವಿದ್ಯುತ್ ಅಳವಡಿಸುವ ಕೆಲಸಸಾಗಿದೆ.
ಯಾಕೆ,ಇಲ್ಲಿ ವಿದ್ಯುತ್ ವ್ಯವಸ್ಥೆ ಇಲ್ಲವೇ? ಎಂದು ಕೇಳಿದರೆ,ಒಂದೆರಡು ಕಿ,ಮೀ.ಅಂತರದಿಂದ ವಿದ್ಯುತ್ ಸಂಪರ್ಕಕ್ಕೆ ಕಂಬ ತರಬಹುದು.ಆದರೆ ಅದೆಲ್ಲಾ ನಮಗೆ ಬೇಡ.ಸಾಧ್ಯವಾದಷ್ಟು ವಿಕಾರಗಳಿಂದ ದೂರವಿರಬೇಕು. ಪ್ರಕೃತಿಯಲ್ಲಿ ಸಿಗುವ ಸಂಪನ್ಮೂಲಗಳನ್ನಷ್ಟೇ ಬಳಸಿಕೊಂಡು ಕೃಷಿಮಾಡುವುದು ನಮ್ಮ ಧ್ಯೇಯ.ಪಮರ್ಾಕಲ್ಚರ್ನ ಮೂಲಧರ್ಮ ಕೂಡ ಅದೆ.ಪ್ರಾಕೃತಿಕ ಸಂಪನ್ಮೂಲಗಳನ್ನು ಎಚ್ಚರಿಕೆಯಿಂದ ಬಳಸಬೇಕು. ಆದಷ್ಟು ಕಡಿಮೆ ಬಳಸಿ ಸುದೀರ್ಘ ಅವಧಿಯವರೆಗೆ ಕಾಯ್ದುಕೊಳ್ಳಬೇಕು.ಕಡಿಮೆ ಶ್ರಮ,ವೆಚ್ಚ ಹಾಗೂ ಹೆಚ್ಚು ಉತ್ಪಾದನೆ.ಜೊತೆಗೆ ಪರಿಸರ ಯಾವತ್ತೂ ಮನುಷ್ಯನಿಗೆ ಸ್ಫೂತರ್ಿದಾಯಕ ವಾಗಿಬೇಕು ಎನ್ನುತ್ತಾರೆ ಸಂತೋಷ್.
ಕಾಂಟೂರ್ ಬಂಡ್ಡಿಂಗ್: ಮಳೆ ಬಂದರೆ ನೀರು ಜಮೀನಿನಲ್ಲಿ ಹಳ್ಳ ಇರುವ ಕಡೆಗೆ ಹರಿದು ನಿಲ್ಲುತ್ತದೆ ಅಥವಾ ಕೆರೆಕಟ್ಟೆ ಪಾಲಾಗುತ್ತದೆ.ಇದರಿಂದ ಭೂಮಿ ಸಮಪ್ರಮಾಣದಲ್ಲಿ ನೀರು ಕುಡಿಯುವುದಿಲ್ಲ.ಒಂದು ಭಾಗದಲ್ಲಿ ಹೆಚ್ಚು ಮತ್ತೊಂದು ಭಾಗದಲ್ಲಿ ಕಡಿಮೆ ನೀರು ಅಸಮಾನವಾಗಿ ಹಂಚಿಕೆಯಾಗುತ್ತದೆ. ಆದರೆ ಕಾಂಟೂರ್ ಬಂಡ್ಡಿಂಗ್ ಮಾಡುವುದರಿಂದ ಇಡೀ ಭೂಮಿ ಸಮಾನಾಂತರವಾಗಿ ನೀರು ಕುಡಿಯುತ್ತದೆ.ಶೇಕಡ 75 ರಷ್ಟು ನೀರು ಭೂಮಿಗೆ ಸಮಪ್ರಮಾಣದಲ್ಲಿ ಹಂಚಿಕೆಯಾಗುತ್ತದೆ.
ಜಮೀನಿನಲ್ಲಿ ತಂತ್ರಜ್ಞಾನ ಬಳಸಿ ಕಾಂಟೂರ್ ಲೈನ್ ಮಾಡಿಕೊಂಡು ನಂತರ ಟ್ರಂಚ್ ಮತ್ತು ಬಂಡ್ಡಿಂಗ್ ಮಾಡುವುದರಿಂದ ಮಣ್ಣು ಫಲವತ್ತಾಗಿ,ಅಂತರ್ಜಲವೂ ಹೆಚ್ಚಾಗುತ್ತದೆ. ಈಗ ಈ ನಲವತ್ತು ಎಕರೆಯಲ್ಲಿ ಕಾಂಟೂರ್ ಬಂಡ್ಡಿಂಗ್ ಮಾಡಿರುವುದರಿಂದ ಮಳೆ ಬಂದಾಗ ನೀರು ಎಲ್ಲಾ ಟ್ರಂಚ್ಗಳಲ್ಲೂ ಒಂದು ಮಟ್ಟದಲ್ಲಿ ನಿಂತು ನಂತರ ನಡೆಯುತ್ತದೆ.ಬೆಟ್ಟದ ಮೇಲೆ ನೀಮತು ನೋಡಿದರೆ ನೀರಿನ ಪ್ರಮಾಣ ಸಮಾನಾಂತರವಾಗಿ ಹಂಚಿಕೆಯಾಗಿರುವುದನ್ನು ನೋಡಬಹುದು.ಒಂದು ಸಾರಿ ಟ್ರಂಚ್ಗಳು ತುಂಬಿದರೆ 12 ಲಕ್ಷ ಲೀಟರ್ ನೀರು ಅಂತರ್ಜಲ ಸೇರುತ್ತದೆ ಎನ್ನುತ್ತಾರೆ ಸಂತೋಷ್.
ಇಲ್ಲಿನ ಸುತ್ತಮುತ್ತಲಿನ ಜನರಿಗೆ ಈಗ ನಮ್ಮನ್ನು ನೋಡಿದರೆ ಕುತೂಹಲ.ಏನೋ ಜೀಪಿನಲ್ಲಿ ಬರುತ್ತಾರೆ ಹೋಗುತ್ತಾರೆ ಅಂತ ತಿಳಿದುಕೊಂಡಿದ್ದಾರೆ.ಆದರೆ ಹೀಗೆ ಮಳೆ ಆದರೆ ಒಂದೆರಡು ವರ್ಷದಲ್ಲಿ ಇಲ್ಲಿ ನಡೆಯುತ್ತಿರುವ ಗುಣಾತ್ಮಕ ಬದಲಾವಣೆಗಳು ಕಣ್ಣಿಗೆ ಬೀಳುತ್ತವೆ. ನಾವೂ ಕೂಡ ಸಮುದಾಯದ ಜೊತೆ ಸೇರಿ ಕೆಲಸಮಾಡಬೇಕು ಎಂದುಕೊಂಡಿದ್ದೇವೆ.ಅದಕ್ಕಾಗಿ ಶೆಟ್ಟಹಳ್ಳಿಯಲ್ಲೇ ಯಾವುದಾದರೂ ಸಣ್ಣ ರೈತರ ಒಂದೆರಡು ಎಕರೆಯಲ್ಲಿ ಪರ್ಮಾ ಕಲ್ಚರ್ (ಶಾಶ್ವತ ಕೃಷಿ) ಮಾದರಿ ಮಾಡಲು ತೀರ್ಮಾನಿಸಿದ್ದೇವೆ. ಜೊತೆಗೆ ವಾಟರ್ ಶೆಡ್,ನರ್ಸರಿ,ಪರ್ಮಾ ಕಲ್ಚರ್ ಅಂದರೆ ಫರ್ಮನೆಂಟ್ ಕೃಷಿ ಬಗ್ಗೆ ಯುವ ರೈತರಿಗೆ ತರಬೇತಿ ಎಲ್ಲವನ್ನೂ ಮಾಡುವ ಆಲೋಚನೆ ಇದೆ ಎನ್ನುತ್ತಾರೆ ಸಂತೋಷ್.
ನಮ್ಮೂರಿನ ಕೂಗಳತೆ ದೂರದಲ್ಲೇ ನಡೆಯುತ್ತಿರುವ ಪ್ರಯೋಗಶೀಲ ಪರಿಸರ ವಿಸ್ಮಯ ನಮ್ಮ ಜನರ ಕಣ್ಣಿಗೆ ಬೀಳಲಿ,ಕೃಷಿಯ ನಾನಾ ಮುಖಗಳನ್ನು ಅದು ತೆರೆದುತೋರಿಸಲಿ ಎನ್ನುವ ಆಶಯದೊಂದಿಗೆ ನಾವು ಅಲ್ಲಿಂದ ಹೊರಟಾಗ ಸೋನೆ ಮಳೆ ಮತ್ತೆ ಆರಂಭವಾಗಿತ್ತು. ನಾವೂ ಕೂಡ ಈಗ ನಮ್ಮ ಜಮೀನುಗಲಲ್ಲಿ ಸಂತೋಷ್ ಮತ್ತು ಗೆಳೆಯರ ನೆರವಿನಿಂದ ಕಾಂಟೂರ್ ಬಡ್ಡಿಂಗ್ ಮಾಡಿಕೊಳ್ಳುವ ತೀರ್ಮಾನಕ್ಕೆ ಬಂದಿದ್ದೆವೆ. ಮುಂದಿನ ಮಳೆಗಾಲದ ಹೊತ್ತಿಗೆ ನಮ್ಮ ಜಮೀನುಗಳು ಕಾಂಟೂರ್ ಆಗಲಿವೆ.
ಹೀಗಾಗಿ ಲೇಖನಗಳು
ಎಲ್ಲಾ ಲೇಖನಗಳು ಆಗಿದೆ
ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಲಿಂಕ್ ವಿಳಾಸ https://dekalungi.blogspot.com/2017/10/blog-post_24.html
0 Response to " "
ಕಾಮೆಂಟ್ ಪೋಸ್ಟ್ ಮಾಡಿ