News and photo Date: 10--10--2017

News and photo Date: 10--10--2017 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು News and photo Date: 10--10--2017, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : News and photo Date: 10--10--2017
ಲಿಂಕ್ : News and photo Date: 10--10--2017

ಓದಿ


News and photo Date: 10--10--2017

ಡಿಸೆಂಬರ್ ಅಂತ್ಯಕ್ಕೆ ಕರ್ನಾಟಕ ವಿಷನ್-2025 ದಾಖಲಾತಿ ಲಭ್ಯ
********************************************************
ಕಲಬುರಗಿ,ಅ.10.(ಕ.ವಾ.)- ಮುಂದಿನ ಏಳು ವರ್ಷಗಳಲ್ಲಿ ರಾಜ್ಯವು ವಿವಿಧ ಕ್ಷೇತ್ರದಲ್ಲಿ ಸಾಧಿಸಬೇಕಾದ ಅಭಿವೃದ್ಧಿ ಕುರಿತು ಸಾರ್ವಜನಿಕರಿಂದ ಅಭಿಪ್ರಾಯ ಪಡೆಯಲಾಗುತ್ತಿದ್ದು, ಡಿಸೆಂಬರ್-2017ರ ಅಂತ್ಯಕ್ಕೆ ಕರ್ನಾಟಕ ವಿಷನ್-2025 ಕುರಿತು ಸರ್ಕಾರಕ್ಕೆ ದಾಖಲಾತಿಗಳನ್ನು ಸಲ್ಲಿಸಲಾಗುವುದೆಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ವಿಜನ್ ಡಾಕ್ಯೂಮೆಂಟ್ ಪ್ರಾಜೆಕ್ಟ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೇಣುಕಾ ಚಿದಂಬರಂ ತಿಳಿಸಿದರು.
ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ವಿಷನ್-2025 ಅಂಗವಾಗಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹಣೆಗೆ ಆಯೋಜಿಸಲಾಗಿದ್ದ ಕಲಬುರಗಿ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕನಸಿನ ಕರ್ನಾಟಕಕ್ಕಾಗಿ ನೀಲ ನಕ್ಷೆ ತಯಾರಿಸುವುದೆ ವಿಷನ್-2025ರ ಉದ್ದೇಶವಾಗಿದ್ದು, ಈ ನಿಟ್ಟನಲ್ಲಿ ಪ್ರತಿ ಜಿಲ್ಲೆಯಲ್ಲಿ ಕಾರ್ಯಾಗಾರ, ವಿಚಾರ ಸಂಕಿರಣ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಸಾರ್ವಜನಿಕರು ತಮ್ಮೂರಿನ ಅಭಿವೃದ್ಧಿ ಬಗ್ಗೆ ಇಟ್ಟುಕೊಂಡಿರುವ ಆಶಾ ಭಾವನೆಗಳನ್ನು ಪಡೆಯಲಾಗುತ್ತಿದೆ. ಇದರ ಭಾಗವಾಗಿ 30 ದಿನದಲ್ಲಿ 30 ಜಿಲ್ಲೆಗಳನ್ನು ಪ್ರವಾಸ ಮಾಡಿ ಪ್ರತಿ ಜಿಲ್ಲೆಯಿಂದ ರಾಜ್ಯದ ಅಭಿವೃದ್ಧಿಗೆ ಪೂರಕವಾದ ಸಲಹೆಗಳನ್ನು ಪಡೆಯಲಾಗುತ್ತಿದೆ. ಇದೂವರೆಗೆ 8 ಜಿಲ್ಲೆಗಳಲ್ಲಿ ಈ ರೀತಿಯ ಕಾರ್ಯಾಗಾರ ಏರ್ಪಡಿಸಲಾಗಿದೆ. ಸರ್ಕಾರದ ನೀತಿ ನಿರ್ಧಾರಗಳು ಶಕ್ತಿಕೇಂದ್ರ ವಿಧಾನಸೌಧದಿಂದಲೆ ಅಂತಿಮಗೊಳ್ಳುತ್ತಿರುವುದರಿಂದ ಸ್ಥಳೀಯವಾಗಿ ಸಾರ್ವಜನಿಕರ ಅಪೇಕ್ಷೆಯಂತೆ ಅಭಿವೃದ್ಧಿ ಕಾರ್ಯಗಳು ಅನುಷ್ಠಾನಗೊಳ್ಳುತ್ತಿಲ್ಲ ಎಂಬ ಕೂಗಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರ ಸಹಭಾಗಿತ್ವವನ್ನು ಮನಗಂಡಿರುವ ರಾಜ್ಯ ಸರ್ಕಾರ ರಾಜ್ಯದ ಅಭಿವೃದ್ಧಿ ನಕಾಶೆಯಲ್ಲಿ ಪ್ರತಿಯೊಬ್ಬ ಪ್ರಜೆಯ ಪಾಲುದಾರಿಕೆ ಇರಬೇಕೆಂದು ಭಾವಿಸಿ ಸಾಮಾನ್ಯ ಪ್ರಜೆಯಿಂದ ಹಿಡಿದು ಪ್ರಜಾ
ಪ್ರತಿನಿಧಿಗಳ ಅನಿಸಿಕೆಗಳನ್ನು ವ್ಯಕ್ತಪಡಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರತಿಯೊಬ್ಬ ನಾಗರೀಕನ ಭರವಸೆಗಳು, ಬಯಕೆಗಳು ಮತ್ತು ನಿರೀಕ್ಷೆಗಳು ಇದರಲ್ಲಿ ಪ್ರತಿಫಲಿಸಲಿದೆ. ಅಭಿಪ್ರಾಯ ವ್ಯಕ್ತವಾಗುವ ಒಟ್ಟಾರೆ ಸಲಹೆಗಳಲ್ಲಿ ಉತ್ತಮ ಸಲಹೆಗಳನ್ನು ಪಡೆದು ಡಿಸೆಂಬರ್ ಅಂತ್ಯಕ್ಕೆ ಅಂತಿಮಗೊಳಿಸಲಾಗುವುದು ಎಂದರು.
ನೆರೆಯ ಆಂಧ್ರ ಪ್ರದೇಶ ಮತ್ತು ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಈ ರೀತಿಯ ವಿಷನ್ ನೀಲ ನಕ್ಷೆಯನ್ನು ತಯಾರಿಸಲಾಗುತ್ತಿದೆ. ಆದರೆ ರಾಜ್ಯದ ಮುನ್ನೋಟದಲ್ಲಿ ವಿಶೇಷವೇನೆಂದರೆ ಎಲ್ಲಾ ಕ್ಷೇತ್ರದಲ್ಲಿ ಪ್ರತಿಯೊಬ್ಬರ ಪಾಲ್ಗೊಳ್ಳುವಿಕೆಯನ್ನು ಬಯಸಲಾಗುತ್ತಿದೆ. ಈ ದಾಖಲಾತಿಯು ಪರಿಣಾಮ ಆಧಾರಿತ ದಾಖಲಾತಿಯಾಗಲಿದ್ದು, ಇದರ ಮುಂದಿನ ಹಿಂದಿನ ಸಂಪರ್ಕಗಳನ್ನು ಗೊತ್ತುಪಡಿಸುತ್ತದೆ. ಸರ್ಕಾರಕ್ಕೆ ಯೋಜನೆವಾರು ಹಮ್ಮಿಕೊಂಡಿರುವ ಗುರಿ ಮುಖ್ಯವಲ್ಲ, ಇಟ್ಟುಕೊಂಡಿರುವ ಗುರಿಯನ್ನು ಸಂಬಂಧಿಸಿದ ಫಲಾನುಭವಿಗಳಿಗೆ ತಲುಪಿದೆಯೆ ಎಂಬುದು ಅರಿಯುವುದು ಮುಖ್ಯವಾಗಿದೆ ಎಂದರು.
ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಮಾತನಾಡಿ ವಿಷನ್-2025ಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಆನ್ ಲೈನ್ ಆ್ಯಪ್ ಮೂಲಕ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಇನ್ನುಳಿದಂತೆ ವಿಷನ್-2025ಗೆ ಜಿಲ್ಲೆಯ ಅಭಿಪ್ರಾಯ ಮಂಡನೆಗೆ ನಗರಾಭಿವೃದ್ಧಿ ಮತ್ತು ಮೂಲಸೌಕರ್ಯ, ಸಾಮಾಜಿಕ ನ್ಯಾಯ, ಆರೋಗ್ಯ ಮತ್ತು ಶಿಕ್ಷಣ, ಕೃಷಿ ಮತ್ತು ಕೃಷಿ ಸಂಬಂಧಿತ ಮತ್ತು ಗ್ರಾಮೀಣಾಭಿವೃದ್ಧಿ, ಕೈಗಾರಿಕೆ, ಉದ್ಯೋಗ, ತಂತ್ರಜ್ಞಾನ ಮತ್ತು ಕೌಶಲ್ಯ, ಆಡಳಿತ ಮತ್ತು ಕಾನೂನು ಹೀಗೆ ಐದು ಗುಂಪುಗಳನ್ನು ವಿಂಗಡಿಸಿ ಎಲ್ಲಾ ಗುಂಪಿನಲ್ಲಿ ಸಂಬಂಧಿಸಿದ ತಜ್ಞರು ಸಮಾಲೋಚಿಸಿ ಅವರಿಂದ ಸಲಹೆ ಸೂಚನೆ ಪಡೆದು ಅಂತಿಮವಾಗಿ ಕ್ರೋಢೀಕೃತ ಜಿಲ್ಲೆಯ ಅಭಿಪ್ರಾಯವನ್ನು ಇಂದಿಲ್ಲಿ ಮಂಡಿಸಲಾಗುತ್ತಿದೆ ಎಂದರು.
ನಂತರ ಐದು ಗುಂಪುಗಳು ಆಂತರಿಕವಾಗಿ ಚರ್ಚಿಸಿ ತಮ್ಮ ಅಭಿಪ್ರಾಯವನ್ನು ಪ್ರಾತ್ಯಕ್ಷಿಕೆ ಮೂಲಕ ಸಲ್ಲಿಸಿದರು. ತದನಂತರ ನಡೆದ ಮುಕ್ತ ಚರ್ಚೆಯಲ್ಲಿ ಸಾರ್ವಜನಿಕರು ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿದರು.
ಕಾರ್ಯಾಗಾರದಲ್ಲಿ ಚಿಂಚೋಳಿ ಶಾಸಕ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಡಾ|| ಉಮೇಶ ಜಾಧವ, ವಿಧಾನ ಪರಿಷತ್ ಶಾಸಕರಾದ ಅಮರನಾಥ ಪಾಟೀಲ, ಬಿ.ಜಿ.ಪಾಟೀಲ, ಕಲಬುರಗಿ ಮಹಾನಗರ ಪಾಲಿಕೆಯ ಮಹಾಪೌರ ಶರಣಕುಮಾರ ಮೋದಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಸಗರ ಚುಲಬುಲ್, ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾ ರಾಣಿ ಕೋರ್ಲಪಾಟಿ, ಮಹಾನಗರ ಪಾಲಿಕೆ ಆಯುಕ್ತ ಸುನೀಲ ಕುಮಾರ ಪಿ., ಹೆಚ್ಚುವರಿ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಜಯಪ್ರಕಾಶ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಗಣ್ಯರು, ಸಂಘ-ಸಂಸ್ಥೆಯ ಪದಾಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು. ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ಸ್ವಾಗತಿಸಿದರು.
ಕಣ್ಣಿಗೆ ಕಾಣಿಸದೆ ಇರುವ ದೈಹಿಕ ವ್ಯವಸ್ಥೆಯೇ ಮಾನಸಿಕ ಆರೋಗ್ಯ
**********************************************************
ಕಲಬುರಗಿ,ಅ.10.(ಕ.ವಾ.)-ಪ್ರಸ್ತುತ ನಾವು ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವಂತೆ ಮಾನಸಿಕ ಆರೋಗ್ಯವು ಸ್ವಚ್ಛವಾಗಿಟ್ಟುಕೊಳ್ಳಬೇಕಾಗಿದೆ. ಮಾನಸಿಕ ಆರೋಗ್ಯ ಎಂಬುದು ಕಣ್ಣಿಗೆ ಕಾಣೀಸದೆ ಇರುವ ದೈಹಿಕ ವ್ಯವಸ್ಥೆ. ವ್ಯಕ್ತಿಯ ಮನಸ್ಸಿನಲ್ಲಿನ ತುಮಲು ಯಾರಿಗೂ ಕಾಣಿಸುವುದಿಲ್ಲ. ಕೇವಲ ಅನುಭವಕ್ಕೆ ಬರುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಸ್.ಆರ್.ಮಾಣಿಕ್ಯ ಅಭಿಪ್ರಾಯ ಪಟ್ಟರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಹೆಚ್.ಐ.ಟಿ ಹಾಲ್‍ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾನಸಿಕ ಖಿನ್ನತೆಗೆ ಹಾಗೂ ಒತ್ತಡಕ್ಕೆ ಒಳಗಾದ ವ್ಯಕ್ತಿಯೇ ಇಲ್ಲ. ಇಂದು ಶಿಕ್ಷಿತರಾದ ಉದ್ಯೋಗಸ್ಥರು ಹೆಚ್ಚು ಮಾನಸಿಕ ಆರೋಗ್ಯ ತೊಂದರೆಗೆ ಒಳಗಾಗುತ್ತಿದ್ದಾರೆ. ಆದ್ದರಿಂದಲೇ “ಕಾರ್ಯ ಸ್ಥಳದಲ್ಲಿ ಮಾನಸಿಕ ಆರೋಗ್ಯ’’ ಎಂಬ ಘೋಷ ವಾಕ್ಯದಡಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಆಚರಿಸುತ್ತಿದ್ದೇವೆ. ಉದ್ಯೋಗದಲ್ಲಿ ವ್ಯಕ್ತಿ ಒತ್ತಡಕ್ಕೆ ಒಳಗಾಗದೆ ಕ್ಷೇತ್ರದಲ್ಲಿ ತನ್ನಿಂದ ತಾನೇ ಉತ್ತಮ ವಾತಾವರಣ ಸೃಷ್ಠಿಸಿಕೊಳ್ಳಬೇಕು ಎಂದರು.
ಕಲಬುರಗಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಮನೋವೈದ್ಯ ಡಾ.ಚಂದ್ರಶೇಖರ ಹುಡೇದ ಉಪನ್ಯಾಸ ನೀಡಿ, ವೃತ್ತಿಯಲ್ಲಿ ನಿರತರಾದ ವ್ಯಕ್ತಿಗಳಿಗೆ ವಿಭಿನ್ನ ಜನ, ವಿಭಿನ್ನ ಹಿನ್ನೆಲೆಯಿಂದ ಬಂದ ವ್ಯಕ್ತಿಗಳು ಹಾಗೂ ಅವರ ವಿಚಾರಧಾರೆಯೊಂದಿಗೆ ಹೊಂದಿಕೊಳ್ಳಲು ಆಗದೆ ಇರುವ ಪರಿಸ್ಥಿತಿಯಲ್ಲಿ ಹಾಗೂ ಅಧಿಕ ಕೆಲಸದ ಸಮಯ, ಮೇಲಾಧಿಕಾರಿಯ ಕಿರುಕುಳ ತಾಳಲಾರದೆ
ಮಾನಸಿಕ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂದು ನಿರುದ್ಯೋಗ ಯುವಕರು ಆರ್ಥಿಕ ತೊಂದರೆಯಿಂದ ಆತ್ಮಹತ್ಯೆ ಹಾಗೂ ಅಪರಾಧ ಚಟುವಟಿಕೆಗಳಲ್ಲಿ ತೊಡಗುತ್ತಿರುವುದು ದುರಂತ. ಒತ್ತಡಕ್ಕೆ ಒಳಗಾದ ವ್ಯಕ್ತಿ ಕುಟುಂಬ, ಆಪ್ತರೊಂದಿಗೆ ಚರ್ಚಿಸಬೇಕೆಂದು ಸಲಹೆ ನೀಡಿದರು. ಖಿನ್ನತೆಗೆ ಒಳಗಾದ ವ್ಯಕ್ತಿ ಕಂಡುಬಂದಲ್ಲಿ ಅವರಲ್ಲಿ ಆತ್ಮಸ್ಥೆರ್ಯ ಬೆಳೆಸಬೇಕಾದುದು ಮನುಷ್ಯರಾದವರ ಕರ್ತವ್ಯ ಎಂದು ಅಭಿಪ್ರಾಯ ಪಟ್ಟರು.
ಕಲಬುರಗಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ಶರಣಬಸಪ್ಪ. ಕೆ ಅತಿಥಿಯಾಗಿ ಮಾತನಾಡಿ, ಪ್ರತಿ ಸಮಸ್ಯೆಗೆ ಆತ್ಮಹತ್ಯೆವೇ ಪರಿಹಾರವಲ್ಲ. ಸಮಸ್ಯೆ ವ್ಯಕ್ತಪಡಿಸಲು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಕೌನ್ಸಿಲಿಂಗ್ ನಡೆಸಿ, ಮಾತ್ರೆ ಕೊಡಲಾಗುತ್ತದೆ. ಜನರಲ್ಲಿ ಜಾಗೃತಿ ಮೂಡಿಸಲು ಆಶಾ ಕಾರ್ಯಕರ್ತೆಯರಿಗೆ, ವೈದ್ಯರಿಗೆ, ಶೂಶ್ರೂಷಕರಿಗೆ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು. ಕೆಬಿಎನ್ ಕಾಲೇಜು ವಿದ್ಯಾರ್ಥಿಗಳಿಂದ ಕಿರುನಾಟಕ ಪ್ರದರ್ಶಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ನಿಮಿತ್ಯ ಬೆಳಗ್ಗೆ 9.30ಕ್ಕೆ ಹಮ್ಮಿಕೊಂಡಿದ್ದ ಜಾಥಾ ಕಾರ್ಯಕ್ರಮಕ್ಕೆ ಕಲಬುರಗಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ ಚಾಲನೆ ನೀಡಿದರು. ಕಲಬುರಗಿ ಜಿಲ್ಲಾ ಆಸ್ಪತ್ರೆಯಿಂದ ಆರಂಭಗೊಂಡು ಎಸ್‍ಟಿ-ಬಿಟಿ ಕ್ರಾಸ್ ಹಾಗೂ ಜಿಲ್ಲಾ ಆರೋಗ್ಯ ವೈದಾಧಿಕಾರಿ ಆಫೀಸ್‍ನಿಂದ ಹೆಚ್.ಐ.ಟಿ ಹಾಲ್‍ವರೆಗೆ ಜಾಥಾ ಜರುಗಿತು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಸಿಬ್ಬಂದಿಗಳಾದ ರೇಣುಕಾ ಬಗಾಲೇ, ನಾಗರಾಜ, ಸಿದ್ದಪ್ಪ, ಬಾಳಪ್ಪ, ಸುರೇಖಾ, ಶರಣಬಸಪ್ಪ ಉಪಸ್ಥಿತರಿದ್ದರು. ನಾಗರಾಜ ಬಿರಾದಾರ ನಿರೂಪಿಸಿದರು.
ಲಂಚ ಪಡೆದ ಗ್ರಾ.ಪಂ. ಮಾಜಿ ಅಧ್ಯಕ್ಷರಿಗೆ ಏಳು ವರ್ಷ ಜೈಲು ಶಿಕ್ಷೆ
*********************************************************
ಕಲಬುರಗಿ,ಅ.10.(ಕ.ವಾ.)-ಮನೆಯ ಮುಟೇಶನ್ ಮಾಡಿಕೊಡಲು ಮೂರು ಸಾವಿರ ರೂ. ಲಂಚ ಪಡೆದ ಹೇರೂರ(ಬಿ) ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಬಸವರಾಜಪ್ಪ ಅವರ ವಿರುದ್ಧ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ವಿಶೇಷ ಸೆಷನ್ಸ್ ನ್ಯಾಯಾಧೀಶ ಬಿ.ವಿ. ಪಾಟೀಲ ಅವರು ಏಳು ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ಆದೇಶಿಸಿದ್ದಾರೆ.
ಹೆರೂರ ಗ್ರಾಮದ ಮನೆ ನಂ. 7-85 ಮನೆಯು ಫಿರ್ಯಾದಿಯ ಹೆಸರಿನಲ್ಲಿದ್ದು, ಅದರ ಅರ್ಧ ಭಾಗ ಫಿರ್ಯಾದಿಯ ಸೊಸೆಯಾದ ಕಾಶಿಬಾಯಿ ಇವರ ಹೆಸರಿಗೆ ವಾಟ್ನಿ ಪತ್ರದ ಮೂಲಕ ಬರೆದು ಕೊಟ್ಟಿದ್ದ ಮನೆಯ ಮುಟೇಶನ್ ಮಾಡಿಕೊಡಲು ಆರೋಪಿ ಬಸವರಾಜಪ್ಪ ಇವರು 3000ರೂ. ಬೇಡಿಕೆ ಇಟ್ಟು. 2012ರ ಫೆಬ್ರವರಿ 8ರಂದು ಮಧ್ಯಾಹ್ಯ 2.45 ಗಂಟೆಗೆ ಕಲಬುರಗಿ ನಗರದ ಹಿರಿಯ ತೋಟಗಾರಿಕೆ ನಿರ್ದೆಶಕರ ಕಚೇರಿಯ ಎದುರಿಗೆ ಇರುವ ಗಾರ್ಡನ್‍ದಲ್ಲಿ ಫಿರ್ಯಾದಿಯಿಂದ ಲಂಚದ ಹಣ ಪಡೆದು ಅಪರಾಧ ಎಸೆಗಿರುತ್ತಾರೆ. ಈ ಕುರಿತು ಪೊಲೀಸ್ ಇನ್ಸ್‍ಪೆಕ್ಟರ್ ವಿನಾಯಕ ಬಡಿಗೇರ್ ಹಾಗೂ ಜೇಮ್ಸ್ ಲಾರ್ಯ ಮಿನೇಜಸ್ ಅವರು ಆರೋಪಿತನ ವಿರುದ್ಧ ದೋಷಾರೋಪಣೆ ಪತ್ರ ಸಲ್ಲಿಸಿದರು.
ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ನ್ಯಾಯಾಧೀಶರು ಆರೋಪಿ ಬಸವರಾಜಪ್ಪ ವಿರುದ್ಧ ಹಾಜರುಪಡಿಸಲಾದ ಸಾಕ್ಷ್ಯಾಧಾರಗಳು ಸಾಬೀತಾಗಿದ್ದರಿಂದ ಆರೋಪಿ ತಪ್ಪಿತಸ್ಥನೆಂದು ಪರಿಗಣಿಸಿ ಕಲಂ 7 ಹಾಗೂ 13(1)ಡಿ ಸಂಗಡ 13(2) ಲಂಚ ನಿಷೇಧ ಕಾಯ್ದೆ ಅಡಿಯಲ್ಲಿ ಕಲಂ 7ರ ಲಂಚ ನಿಷೇಧ ಕಾಯ್ದೆ ಅಡಿಯಲ್ಲಿನ ಅಪರಾಧಕ್ಕೆ 3 ವರ್ಷ ಕಾರಾಗೃಹ ವಾಸ ಹಾಗೂ 3000 ರೂ. ದಂಡ ಮತ್ತು ಕಲಂ 13(2)ರ ಅಡಿಯಲ್ಲಿನ ಅಪರಾಧಕ್ಕೆ 4 ವರ್ಷ ಶಿಕ್ಷೆ ಹಾಗೂ 5000ರೂ. ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ವಿಶೇಷ ಸರ್ಕಾರಿ ಅಭಿಯೋಜಕ ಐ. ವಿರುಪಣ್ಣ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.
ನಾರಿಶಕ್ತಿ ಪುರಸ್ಕಾರ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
******************************************
ಕಲಬುರಗಿ,ಅ.10.(ಕ.ವಾ.)-ಮಹಿಳಾ ಅಭಿವೃದ್ಧಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳು ಹಾಗೂ ಅರ್ಹ ವ್ಯಕ್ತಿಗಳಿಂದ 2017-18ನೇ ಸಾಲಿನ ಕೇಂದ್ರ ಸರ್ಕಾರ ಪ್ರಧಾನ ಮಾಡುವ ನಾರಿಶಕ್ತಿ ಪುರಸ್ಕಾರ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಈ ಪ್ರಶಸ್ತಿಯನ್ನು 2018ರ ಮಾರ್ಚ್ 8ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಪ್ರದಾನ ಮಾಡಲಾಗುವುದು. ನಿಗದಿತ ಅರ್ಜಿ ನಮೂನೆಯನ್ನು ಕಲಬುರಗಿ ಚಂದ್ರಶೇಖರ ಪಾಟೀಲ ಕ್ರೀಡಾಂಗಣ ಎದುರುಗಡೆಯಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಪಡೆದು ಭರ್ತಿ ಮಾಡಿ ಅಕ್ಟೋಬರ್ 18ರೊಳಗಾಗಿ ಸದರಿ ಕಚೇರಿಯಲ್ಲಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 08472-278659ನ್ನು ಸಂಪರ್ಕಿಸಲು ಕೋರಲಾಗಿದೆ.
ಅಂಚೆ ಇಲಾಖೆಯ ಉಳಿತಾಯ ಖಾತೆಗಳಿಗೆ ಆಧಾರ್ ಜೋಡಣೆ:
******************************************************
ಒಪ್ಪಿಗೆ ಪತ್ರ ನೀಡಲು ಸೂಚನೆ
**************************
ಕಲಬುರಗಿ,ಅ.10.(ಕ.ವಾ.)-ಅಂಚೆ ಇಲಾಖೆಯು ಪೋಸ್ಟ್ ಆಫೀಸ್ ಉಳಿತಾಯ ಬ್ಯಾಂಕ್ ಖಾತೆಗಳಿಗೆ ಆಧಾರ್, ಮೊಬೈಲ್, ಪ್ಯಾನ್ ಸಂಖ್ಯೆಗಳನ್ನು ಜೋಡಿಸಲು ಒಪ್ಪಿಗೆ ಪತ್ರ ಪಡೆಯುವ ಪ್ರಕ್ರಿಯೆಯಲ್ಲಿ ತೊಡಗಿದೆ. ಉಳಿತಾಯ ಬ್ಯಾಂಕ್ ಖಾತೆಗಳಿಗೆ ಜೋಡಣಾ ಕಾರ್ಯವನ್ನು ಪೂರ್ಣಗೊಳಿಸಲು 2017ರ ಅಕ್ಟೋಬರ್ ತಿಂಗಳಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ವಿಭಾಗದ ಹಿರಿಯ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.
ಅಂಚೆ ಕಚೇರಿಯ ಉಳಿತಾಯ ಬ್ಯಾಂಕಿನ ಎಲ್ಲ ಗ್ರಾಹಕರು ತಮ್ಮ ಖಾತೆಗಳನ್ನು ತೆರೆದಿರುವ ಅಂಚೆ ಕಚೇರಿಗಳಲ್ಲಿ ತಮ್ಮ ಆಧಾರ್ ಪ್ರತಿಯೊಂದಿಗೆ ಮೊಬೈಲ್ ನಂಬರ್ ಹಾಗೂ ಪ್ಯಾನ್ ಸಂಖ್ಯೆಗಳ ಮಾಹಿತಿಯೊಂದಿಗೆ ನಿಗದಿತ ಒಪ್ಪಿಗೆ ಪತ್ರವನ್ನು ನೀಡಬೇಕು. ಇದರ ಜೊತೆಗೆ ಗ್ರಾಹಕರ ಮಾಹಿತಿ ನಮೂನೆಯಲ್ಲಿ (ಸಿ.ಐ.ಎಫ್.) ತಮ್ಮ ಹೆಸರಿನಲ್ಲಿರುವ ಅಂಚೆ ಇಲಾಖೆಯ ಇತರೆ ಉಳಿತಾಯ ಖಾತೆಗಳನ್ನು ಜೋಡಿಸಬೇಕೆಂದು ಅವರು ತಿಳಿಸಿದ್ದಾರೆ.
ರೈಫಲ್ ಶೂಟಿಂಗ್‍ನಲ್ಲಿ ಎನ್.ಸಿ.ಸಿ. ಘಟಕದ ವಿದ್ಯಾರ್ಥಿನಿ ಸುಜಾತಾಗೆ ಚಿನ್ನದ ಪದಕ
ಕಲಬುರಗಿ,ಅ.10.(ಕ.ವಾ.)-ನವದೆಹಲಿಯಲ್ಲಿ ಸೆಪ್ಟೆಂಬರ್ 18ರಿಂದ 29ರವರೆಗೆ ನಡೆದ ರಾಷ್ಟ್ರಮಟ್ಟದ ಎನ್.ಸಿ.ಸಿ. ಥಲ್ ಸೇವಾ ಕ್ಯಾಂಪ್‍ನಲ್ಲಿ ನಡೆದ ಅಡ್ವಾನ್ಸ್ ರೈಫಲ್ ಶೂಟಿಂಗ್‍ನಲ್ಲಿ ಕಲಬುರಗಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಎನ್.ಸಿ.ಸಿ. ಘಟಕದ ವಿದ್ಯಾರ್ಥಿನಿ ಸುಜಾತಾ ಬಸವರಾಜ ಚಿನ್ನದ ಪದಕ ಪಡೆದಿದ್ದಾರೆ. ಈ ವಿದ್ಯಾರ್ಥಿನಿಯ ಸಾಧನೆಗೆ ಪ್ರಾಂಶುಪಾಲ ಎಸ್.ಬಿ. ಪಾಟೀಲ ಹಾಗೂ ಎನ್.ಸಿ.ಸಿ. ಅಧಿಕಾರಿ ರಾಜಶೇಖರ ಹೀರಾ ಅಭಿನಂದಿಸಿದ್ದಾರೆ.
ಶುಲ್ಕ ಪಾವತಿಸಿ ಎಲ್.ಇ.ಡಿ. ಪರದೆ ಮೂಲಕ ವ್ಯಾಪಾರ ಪ್ರಚಾರ ಪಡೆಯಲು ಸೂಚನೆ
**************************************************************************
ಕಲಬುರಗಿ,ಅ.10.(ಕ.ವಾ.)-ಕಲಬುರಗಿ ಮಹಾನಗರ ಪಾಲಿಕೆಯಿಂದ ಜಿಲ್ಲಾ ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿ ಎಲ್.ಇ.ಡಿ. ಪರದೆ ಅಳವಡಿಸಲಾಗಿದೆ. ಈ ಪರದೆ ಮೇಲೆ ಇಚ್ಛೆಯುಳ್ಳ ಸಾರ್ವಜನಿಕರು, ಕಂಪನಿ, ವರ್ತಕರು ತಮ್ಮ ಕಂಪನಿ, ಸಂಸ್ಥೆ ಅಥವಾ ಮತ್ತಿತರ ರೀತಿಯ ವ್ಯಾಪಾರದ ಪ್ರಚಾರಕ್ಕಾಗಿ ಇಚ್ಛಿಸಿದ್ದಲ್ಲಿ ಮಹಾನಗರ ಪಾಲಿಕೆಯಿಂದ ಅನುಮತಿ ಪಡೆದು ಜಾಹಿರಾತು ಶುಲ್ಕ ಪಾವತಿಸಿ ಪ್ರದರ್ಶಿಸಬಹುದಾಗಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತ ಪಿ. ಸುನೀಲಕುಮಾರ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಮಹಾನಗರ ಪಾಲಿಕೆ ಪರಿಸರ ಇಂಜಿನಿಯರ್ ಮುನಾಫ್ ಪಟೇಲ್ ಅವರನ್ನು ಮೊಬೈಲ್ ಸಂಖ್ಯೆ 9742117786 ಹಾಗೂ ಜಾಹೀರಾತು ಶಾಖೆಯ ಪ್ರಥಮ ದರ್ಜೆ ಸಹಾಯಕ ಮೊಹರಿರ್ ಅವರನ್ನು ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.
ಧನ ಸಹಾಯ ಪಡೆಯಲು-ಜವಾಹರ ನವೋದಯ ಶಾಲೆಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ
ಕಲಬುರಗಿ,ಅ.10.(ಕ.ವಾ.)-ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನ ಕರ್ನಾಟಕ ರಾಜ್ಯ ಘಟಕದಿಂದ 2017-18ನೇ ಸಾಲಿನ ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ಧನಸಹಾಯ ಮಂಜೂರಾತಿಗಾಗಿ ಹಾಗೂ ಜವಾಹರ ನವೋದಯ ಶಾಲೆಗಳಲ್ಲಿ ಪ್ರವೇಶಕ್ಕಾಗಿ ಪ್ರತಿಭಾನ್ವಿತ 5ನೇ ತರಗತಿಯ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಅರ್ಹ ಪ್ರಾಥಮಿಕ/ ಪ್ರೌಢಶಾಲೆಗಳ ಶಿಕ್ಷಕರು ತಮ್ಮ ಮಕ್ಕಳ ಉನ್ನತ ವ್ಯಾಸಂಗ ಧನಸಹಾಯ ಮಂಜೂರಾತಿಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ http://ift.tt/2kDDEI8 ಅರ್ಜಿಯನ್ನು ಡೌನ್‍ಲೋಡ್ ಮಾಡಿಕೊಂಡು ಭರ್ತಿ ಮಾಡಿ ಉನ್ನತ ವ್ಯಾಸಂಗ ಧನಸಹಾಯ ನಿಧಿ ಕಚೇರಿಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನವಾಗಿದೆ.
ಅದೇ ರೀತಿ ಜವಾಹರ ನವೋದಯ ಶಾಲೆಗಳ ಪ್ರವೇಶಕ್ಕಾಗಿ www.nvshq.org ಅಥವಾhttp://ift.tt/1QcJwgE ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡಿ ಹಾರ್ಡ್ ಕಾಪಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ನವೆಂಬರ್ 25ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ವಿಜಯಕುಮಾರ ಮೊಬೈಲ್ ಸಂಖ್ಯೆ 9980630009 ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಇ. ಖಾನ್ ಇವರನ್ನು ಮೊಬೈಲ್ ಸಂಖ್ಯೆ 9480695213ನ್ನು ಸಂಪರ್ಕಿಸಲು ಕೋರಲಾಗಿದೆ.










ಹೀಗಾಗಿ ಲೇಖನಗಳು News and photo Date: 10--10--2017

ಎಲ್ಲಾ ಲೇಖನಗಳು ಆಗಿದೆ News and photo Date: 10--10--2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ News and photo Date: 10--10--2017 ಲಿಂಕ್ ವಿಳಾಸ https://dekalungi.blogspot.com/2017/10/news-and-photo-date-10-10-2017.html

Subscribe to receive free email updates:

0 Response to "News and photo Date: 10--10--2017"

ಕಾಮೆಂಟ್‌‌ ಪೋಸ್ಟ್‌ ಮಾಡಿ