ಶೀರ್ಷಿಕೆ : 2nd Round news 10-10-2017
ಲಿಂಕ್ : 2nd Round news 10-10-2017
2nd Round news 10-10-2017
ಕರ್ನಾಟಕ ವಿಷನ್-2025: ಕಲಬುರಗಿ ಜಿಲ್ಲೆಯಿಂದ ಅಭಿಪ್ರಾಯ ಸಲ್ಲಿಕೆ
ಕಲಬುರಗಿ,ಅ.10.(ಕ.ವಾ.)- ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಸಕಾರಾತ್ಮಕ ಸಲಹೆ ಪಡೆದು ಕರ್ನಾಟಕ ಮುನ್ನೋಟ-2025 ದಾಖಲಾತಿ ಸಿದ್ದಪಡಿಸಲಾಗುತ್ತಿದ್ದು, ಅದರಂತೆ ಕಲಬುರಗಿ ಜಿಲ್ಲೆಯಿಂದ ಅನೇಕ ಉತ್ತಮ ಸಲಹೆಗಳನ್ನು ಪಡೆಯಲಾಗಿದೆ ಎಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ವಿಜನ್ ಡಾಕ್ಯೂಮೆಂಟ್ ಪ್ರಾಜೆಕ್ಟ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೇಣುಕಾ ಚಿದಂಬರಂ ಹೇಳಿದರು.
ಅವರು ಮಂಗಳವಾರ ಕಲಬುರಗಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕರ್ನಾಟಕ ವಿಷನ್-2025 ಕಾರ್ಯಾಗಾರದಲ್ಲಿ ವಿವಿಧ ಗುಂಪಿನ ಅಭಿಪ್ರಾಯವನ್ನು ಆಲಿಸಿದ ನಂತರ ಮಾತನಾಡಿ, ಕಲಬುರಗಿಯ ತೊಗರಿ ಅಭಿವೃದ್ಧಿ ಮಂಡಳಿಯನ್ನು ಬಲವರ್ಧನೆಗೊಳಿಸುವ, ಪ್ರತಿ ಗ್ರಾಮ ಪಂಚಾಯತಿಗೆ ವೈಫೈ ವ್ಯವಸ್ಥೆ ಕಲ್ಪಿಸುವ, ಉತ್ತಮ ಆರೋಗ್ಯ ಸೇವೆ ಒದಗಿಸಲು ಆರೋಗ್ಯ ಹಕ್ಕು ಎಂದು ಪರಿಗಣಿಸುವುದು, ರಾಷ್ಟ್ರೀಯ ಹೆದ್ದಾರಿಗಳಂತೆ ರಾಜ್ಯ ಹೆದ್ದಾರಿಯಲ್ಲಿ ಪೊಲೀಸ್ ಗಸ್ತು ಇರಬೇಕು, ಜಾಗತೀಕ ಹೂಡಿಕೆದಾರರ ಸಮಾವೇಶವನ್ನು ಎರಡನೇ ಹಂತದ ನಗರಗಳಿಗೂ ವಿಸ್ತರಿಸಬೇಕು ಎಂಬ ಅನೇಕ ಸಲಹೆಗಳನ್ನು ನೀಡಲಾಗಿದ್ದು, ಇದನ್ನು ಪರಿಗಣಿಸಲಾಗುವುದು ಎಂದರು.
ಇದಕ್ಕು ಮುನ್ನ ನಗರಾಭಿವೃದ್ಧಿ ಮತ್ತು ಮೂಲಸೌಕರ್ಯ, ಸಾಮಾಜಿಕ ನ್ಯಾಯ, ಆರೋಗ್ಯ ಮತ್ತು ಶಿಕ್ಷಣ, ಕೃಷಿ ಮತ್ತು ಕೃಷಿ ಸಂಬಂಧಿತ ಮತ್ತು ಗ್ರಾಮೀಣಾಭಿವೃದ್ಧಿ, ಕೈಗಾರಿಕೆ, ಉದ್ಯೋಗ, ತಂತ್ರಜ್ಞಾನ ಮತ್ತು ಕೌಶಲ್ಯ, ಆಡಳಿತ ಮತ್ತು ಕಾನೂನು ಹೀಗೆ ಐದು ಗುಂಪುಗಳನ್ನು ವಿಂಗಡಿಸಿ ಎಲ್ಲಾ ಗುಂಪಿನಲ್ಲಿ ಸಂಬಂಧಿಸಿದ ತಜ್ಞರು ಪರಸ್ಪರ ಸಮಾಲೋಚಿಸಿ ಅಂತಿಮವಾಗಿ ಕ್ರೋಢೀಕೃತ ಜಿಲ್ಲೆಯ ಅಭಿಪ್ರಾಯವನ್ನು ಪ್ರಾತ್ಯಕ್ಷಿಕೆ ಮೂಲಕ ಮಂಡಿಸಿದ್ದು, ಅದರ ಪ್ರಮುಖ ಅಂಶಗಳು ಇಂತಿವೆ.
ಕೃಷಿ ಮತ್ತು ಕೃಷಿ ಸಂಬಂಧಿತ ಮತ್ತು ಗ್ರಾಮೀಣಾಭಿವೃದ್ಧಿ:- ರೈತರಿಗೆ 24 ಗಂಟೆ ವಿದ್ಯುತ್ ಪೂರೈಸಬೇಕಲ್ಲದೆ ಸೌರ ವಿದ್ಯುತ್ ಸ್ಥಾಪಿಸಲು ಉತ್ತೇಜಿಸಬೇಕು. ಇಲ್ಲಿನ ಪ್ರಮುಖ ಬೆಳೆ ತೊಗರಿಯಲ್ಲಿ ಶೇ.24 ರಷ್ಟು ಪ್ರೊಟೀನ್ ಅಂಶಗಳಿರುವುದರಿಂದ ಇದನ್ನು ಬ್ರ್ಯಾಂಡ್ ಆಗಿ ಪರಿವರ್ತಿಸಿ ಮಾರಾಟಕ್ಕೆ ಉತ್ತಮ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು. ರೈತ ಕೃಷಿಯೊಂದಿಗೆ ಲಾಭದಾಯಕ ಉಪ ಕಸಬುಗಳಲ್ಲಿ ತೊಡಗಿಸಿಕೊಂಡು ಆರ್ಥಿಕ ಪ್ರಗತಿ ಸಾಧಿಸಲು ರೇಷ್ಮೆ, ಹೈನುಗಾರಿಕೆ ಚಟುವಟಿಕೆಗೆ ಪ್ರೋತ್ಸಾಹ ನೀಡಬೇಕು. ರೈತ ಬೆಳೆದ ಬೆಳೆಗಳಿಗೆ ಎರಡನೇ ಕೃಷಿ ಆಯೋಗದ ಶಿಫಾರಸ್ಸಿನಂತೆ ಬೆಂಬಲ ಬೆಲೆ ನೀಡಿ ಖರೀದಿಸಲು ನೀತಿ ರೂಪಿಸುವುದಲ್ಲದೆ ರೈತ ಆತ್ಮಹತ್ಯೆ ತಡೆಗಟ್ಟುವಿಕೆ ಹಾಗೂ ರೈತಾಪಿ ಕುಟುಂಬದ ಸಮಗ್ರ ಅಭಿವೃದ್ಧಿಗೆ ಕೃಷಿ ನೀತಿ ಜಾರಿಗೆ ತರಬೇಕೆಂದು ಗುಂಪಿನ ಅಭಿಪ್ರಾಯವನ್ನು ರೈತ ಮುಖಂಡ ಮಾರುತಿ ಮಾನ್ಪಡೆ ಮಂಡಿಸಿದರು.
ನಗರಾಭಿವೃದ್ಧಿ ಮತ್ತು ಮೂಲಸೌಕರ್ಯ:- ನಗರಗಳು ಬೆಳೆದಂತೆ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ನಗರಗಳಲ್ಲಿ ರಸ್ತೆ ಮೇಲ್ಸೇತುವೆ, ಹೊರ ವರ್ತುಲ ರಸ್ತೆ ನಿರ್ಮಾಣ, ಸ್ಮಾರ್ಟ್ ಪಾರ್ಕಿಂಗ್ ಮತ್ತು ಉತ್ತಮ ಸಂಚಾರ ನಿರ್ವಹಣೆ ಆಗಬೇಕು. ನಗರದ ಸ್ಲಂ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಬೇಕು. ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಶಾಲೆ ಮತ್ತು ಆರೋಗ್ಯ ಕೇಂದ್ರ ಇರುವಂತಾಗಬೇಕಲ್ಲದೆ ಪ್ರತಿಯೊಬ್ಬರು ಗುಣಮಟ್ಟದ ಆರೋಗ್ಯ ಸೇವೆ ಪಡೆಯುವಂತಾಗಬೇಕು. ನೈಸರ್ಗಿಕ ವಿಪತ್ತು ನಿರ್ವಹಣೆ, ಭಯೋತ್ಪಾದನೆ ಮತ್ತು ಸಮಾಜ ಘಾತುಕ ಶಕ್ತಿಗಳ ನಿಯಂತ್ರಣಕ್ಕೆ ಪ್ರತಿ ಜಿಲ್ಲೆಯಲ್ಲಿ ವಿಪತ್ತು ನಿರ್ವಹಣಾ ಸೆಲ್ ರಚಿಸಬೇಕು ಹಾಗೂ ನಗರ ಪ್ರದೇಶದಲ್ಲಿನ ಪ್ರತಿ ಆಸ್ತಿಯ ಕರ, ವಿದ್ಯುತ್ ಮತ್ತು ನೀರಿನ ಬಿಲ್ಲು ಪಾವತಿಸಲು ಯೂನಿಕ್ ಐ.ಡಿ. ಒದಗಿಸುವ ಕೆಲಸವಾಗಬೇಕು ಎಂದು ಗುಂಪಿನ ಅಭಿಪ್ರಾಯವನ್ನು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಡಾ.ಸುನೀಲ ಮಂಡಿಸಿದರು.
ಆಡಳಿತ, ಕಾನೂನು ಮತ್ತು ನ್ಯಾಯ:- ಪ್ರತಿ ಜಿಲ್ಲೆಯಲ್ಲಿ ನಡೆಯುವ ಧರಣಿ, ಸತ್ಯಾಗ್ರಹ, ಪ್ರತಿಭಟನೆ ಮೆರವಣಿಗೆ ಸೂಕ್ತ ಮಾರ್ಗ ಮತ್ತು ಸ್ಥಳ ನಿಗದಿಯಾದಲ್ಲಿ ಅನಾವಶ್ಯಕ ಸಾರ್ವಜನಿಕರಿಗೆ ಆಗುವ ತೊಂದರೆ ತಪ್ಪಿಸಬಹುದಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡಲಾಗುತ್ತಿದ್ದು, ಇದನ್ನು ನಿಗ್ರಹಿಸಲು ಜಿಲ್ಲಾ ಹಂತದಲ್ಲಿ ಸೂಕ್ತ ಮಾನವ ಸಂಪನ್ಮೂಲದೊಂದಿಗೆ ಸಾಮಾಜಿಕ ಮಾಧ್ಯಮ ಮೇಲ್ವಿಚಾರಣಾ ಸೆಲ್ ರಚಿಸಬೇಕು. ರಾಷ್ಟ್ರೀಯ ಹೆದ್ದಾರಿಗಳಂತೆ ರಾಜ್ಯ ಹೆದ್ದಾರಿಯಲ್ಲಿಯೂ ಹೈವೆ ಪೆಟ್ರೋಲಿಂಗ್ ಆಗಬೇಕು ಪ್ರತಿ 80 ಕಿ.ಮಿನಂತೆ ರಾಜ್ಯ ಮತ್ತು ರಾಷ್ಟ್ರ ಹೆದ್ದಾರಿಗಳಲ್ಲಿ ರಸ್ತೆ ಅಫಘಾತಕ್ಕೆ ತುತ್ತಾದವರಿಗೆ ಒಂದು ಗಂಟೆಯಲ್ಲಿ ಚಿಕಿತ್ಸೆ ಲಭ್ಯವಾಗುವಂತೆ ಟ್ರಾಮಾ ಸೆಂಟರ್ ಸ್ಥಾಪಿಸಬೇಕು. ಸರ್ಕಾರಿ ಸೇವೆಗಳನ್ನು ಆನ್‍ಲೈನ್ ಮಾಡುವ ಮೂಲಕ ಭ್ರಷ್ಟಾಚಾರ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಗ್ರಾಮೀಣ ಪ್ರದೇಶವನ್ನು ಡಿಜಟಲೀಕರಣ ಮಾಡಬೇಕು ಎಂದು ಗುಂಪಿನ ಅಭಿಪ್ರಾಯವನ್ನು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ ಹಾಗೂ ಸಿದ್ರಾಮ ಹಿರೇಮಠ ಮಂಡಿಸಿದರು.
ಕೈಗಾರಿಕಾಭಿವೃದ್ಧಿ, ಉದ್ಯೋಗ ಮತ್ತು ಕೌಶಲ್ಯ:- ಉತ್ಪಾದನಾ ವಲಯ ಹೆಚ್ಚಿಸಲು ನಿಮ್ಜ್ (ಓIಒZ) ಸ್ಥಾಪಿಸಬೇಕು. ಕಲಬುರಗಿಯಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣವನ್ನು ಉಡಾನ್ ಯೋಜನೆಯಲ್ಲಿ ಸೇರಿಸಬೇಕು ಹಾಗೂ ಫುಡ್ ಪಾರ್ಕ್, ತೊಗರಿ ಅಭಿವೃದ್ಧಿ ಪಾರ್ಕ್, ಅಟೋಮೋಬೈಲ್ ಪಾರ್ಕ್, ಜ್ಯೂವೆಲ್ಲರಿ ಪಾರ್ಕ್ ಸ್ಥಾಪಿಸಬೇಕು. ಜಿಲ್ಲೆಯ ಶಹಾಬಾದ ಪಟ್ಟಣದ ಕಲ್ಲುಗಳು ದೇಶದ್ಯಾಂತ ಖ್ಯಾತಿ ಹೊಂದಿದ್ದು, ಸದರಿ ಕಲ್ಲುಗಳನ್ನು ದೇಶ-ವಿದೇಶಕ್ಕೆ ರಫ್ತು ಆಗುತ್ತಿದ್ದು, ಕಲ್ಲಿನ ವಲಯದಲ್ಲಿ ಸೆಂಟರ್ ಆಫ್ ಎಕ್ಸ್‍ಲೆನ್ಸ್ ಕೇಂದ್ರ ಸ್ಥಾಪಿಸಬೇಕು ಎಂದು ಗುಂಪಿನ ಅಭಿಪ್ರಾಯವನ್ನು ಉದ್ಯಮಿ ಶೇಷಾದ್ರಿ ಕುಲಕರ್ಣಿ ಮಂಡಿಸಿದರು.
ಸಾಮಾಜಿಕ ನ್ಯಾಯ, ಶಿಕ್ಷಣ ಮತ್ತು ಆರೋಗ್ಯ:- ವಸತಿ ನಿಲಯಗಳಿಗೆ ಪ್ರತಿ ವಿದ್ಯಾರ್ಥಿಗಳ ಊಟಕ್ಕೆ ನೀಡುವ ಅನುದಾನವನ್ನು ಹೆಚ್ಚಿಸಬೇಕು ಹಾಗೂ ವಸತಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಆರಂಭಿಸಬೇಕು. ಶಿಶು-ತಾಯಿ ಮರಣ ಪ್ರಮಾಣ ತಗ್ಗಿಸಲು ಅಗತ್ಯ ಕ್ರಮಕೈಗೊಳ್ಳಬೇಕು, ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಿಫ್ಟ್ ಆಧಾರದ ಮೇಲೆ ಕಾರ್ಯನಿರ್ವಹಿಸಲು 3 ತಜ್ಞ ವೈದ್ಯರು ಇರಬೇಕು, ಪ್ರತಿ ಜಿಲ್ಲೆಯಲ್ಲಿ ಕಾರ್ಯನಿರತ ಮಹಿಳೆಯರ ವಾಸಕ್ಕೆ ವಸತಿ ನಿಲಯ ಸ್ಥಾಪಿಸಬೇಕು. ವೈಚಾರಿಕೆ ಮತ್ತು ವ್ಶೆಜ್ಞಾನಿಕ ತಳಹದಿಯ ಮೇಲೆ ಶಿಕ್ಷಣ ನೀಡಬೇಕಾಗಿದ್ದು, ಏಕ ರೂಪದ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಬೇಕು. ಪ್ರತಿ ತಾಲೂಕಿಗೆ ವೃದ್ಧಾಶ್ರಮ ಮತ್ತು ಅಂಗವಿಕಲರ ಭವನ ನಿರ್ಮಿಸಬೇಕೆಂದು ಗುಂಪಿನ ಅಭಿಪ್ರಾಯವನ್ನು ವೆಂಕಣ್ಣ ಡೊಣ್ಣೆಗೌಡರ ಮಂಡಿಸಿದರು.
ಮುಕ್ತ ಚರ್ಚೆಯ ಸಂದರ್ಭದಲ್ಲಿ ನಗರದ ಹಲವು ಸಂಘ ಸಂಸ್ಥೆಗಳ ಗಣ್ಯರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
ಕಾರ್ಯಗಾರದ ಚರ್ಚೆಯಲ್ಲಿ ಚಿಂಚೋಳಿ ಶಾಸಕ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಡಾ|| ಉಮೇಶ ಜಾಧವ, ಕಲಬುರಗಿ ಮಹಾನಗರ ಪಾಲಿಕೆಯ ಮಹಾಪೌರ ಶರಣಕುಮಾರ ಮೋದಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಸಗರ ಚುಲಬುಲ್, ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೋರ್ಲಪಾಟಿ, ಮಹಾನಗರ ಪಾಲಿಕೆ ಆಯುಕ್ತ ಸುನೀಲ ಕುಮಾರ ಪಿ. ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಗಣ್ಯರು, ಸಂಘ-ಸಂಸ್ಥೆಯ ಪದಾಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು.

ಹೀಗಾಗಿ ಲೇಖನಗಳು 2nd Round news 10-10-2017
ಎಲ್ಲಾ ಲೇಖನಗಳು ಆಗಿದೆ 2nd Round news 10-10-2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ 2nd Round news 10-10-2017 ಲಿಂಕ್ ವಿಳಾಸ https://dekalungi.blogspot.com/2017/10/2nd-round-news-10-10-2017.html
0 Response to "2nd Round news 10-10-2017"
ಕಾಮೆಂಟ್ ಪೋಸ್ಟ್ ಮಾಡಿ