NEWS AND PHOTO DATE: 04--10--2017

NEWS AND PHOTO DATE: 04--10--2017 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು NEWS AND PHOTO DATE: 04--10--2017, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : NEWS AND PHOTO DATE: 04--10--2017
ಲಿಂಕ್ : NEWS AND PHOTO DATE: 04--10--2017

ಓದಿ


NEWS AND PHOTO DATE: 04--10--2017

ಅಕ್ಟೋಬರ್ 7ರಂದು ಡೊಂಗರಗಾಂವದಲ್ಲಿ ಜನಸ್ಪಂದನ ಸಭೆ
*****************************************************
ಕಲಬುರಗಿ,ಅ.04.(ಕ.ವಾ.)-ಕಲಬುರಗಿ ತಾಲೂಕಿನ ಕಮಲಾಪುರ ಹೋಬಳಿಯ ಡೊಂಗರಗಾಂವ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಅಕ್ಟೋಬರ್ 7ರಂದು ಬೆಳಿಗ್ಗೆ 11 ಗಂಟೆಗೆ ಜನಸ್ಪಂದನ ಸಭೆ ನಡೆಸಲಾಗುವುದು ಎಂದು ಗ್ರೇಡ್-2 ತಹಶೀಲ್ದಾರ್ ಜಗನ್ನಾಥ ಎಮ್. ಪೂಜಾರಿ ತಿಳಿಸಿದ್ದಾರೆ.
ಡೊಂಗರಗಾಂವ ಗ್ರಾಮ ಪಂಚಾಯತಿ ವ್ಯಾಪ್ತಿಗೊಳಪಟ್ಟ ಜನಪ್ರತಿನಿಧಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಖುದ್ದಾಗಿ ಈ ಜನಸ್ಪಂದನ ಸಭೆಯಲ್ಲಿ ಭಾಗವಹಿಸಬೇಕೆಂದು ಕೋರಿದ್ದಾರೆ.
ವಿಜನ್ 2025ಗೆ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹ
*************************************************
ಕಲಬುರಗಿ,ಅ.04.(ಕ.ವಾ.)-ಕರ್ನಾಟಕ ರಾಜ್ಯವು 2025ರ ಇಸ್ವಿವರೆಗೆ ಯಾವ ಯಾವ ಕ್ಷೇತ್ರದಲ್ಲಿ ಹೇಗೆ ಅಭಿವೃದ್ಧಿಗೊಳ್ಳಬೇಕು ಎಂಬುವದರ ಬಗ್ಗೆ ಸರ್ಕಾರವು ಕರ್ನಾಟಕ ವಿಜನ್-2025 ಡಾಕುಮೆಂಟ್ ಸಿದ್ಧಗೊಳಿಸುತ್ತಿದೆ. ಈ ನಿಟ್ಟಿನಲ್ಲಿ ಕಲಬುರಗಿ ಜಿಲ್ಲೆಯು 2025ನೇ ಇಸ್ವಿಯಲ್ಲಿ ಯಾವ ರೀತಿ ಅಭಿವೃದ್ಧಿಗೊಳ್ಳಬೇಕು ಎಂಬುವುದರ ಬಗ್ಗೆ ಸಾರ್ವಜನಿಕರು ತಮಗೆ ಇಷ್ಟವಾದ ಕ್ಷೇತ್ರದ ಬೆಳವಣಿಗೆ ಕುರಿತು ಅಭಿಪ್ರಾಯ ನೀಡಬಹುದಾಗಿದೆ. ಸಾರ್ವಜನಿಕರು http://ift.tt/2wxzTFQ ಈ ಲಿಂಕ್ ಮೂಲಕ ಅಕ್ಟೋಬರ್ 10ರೊಳಗಾಗಿ ತಮ್ಮ ಅಭಿಪ್ರಾಯ ಮತ್ತು ಸಲಹೆಯನ್ನು ನೀಡಬಹುದಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶೆಂಕರ ತೆಗ್ಗೆಳ್ಳಿ ತಿಳಿಸಿದ್ದಾರೆ.
ಕನಕ ಸಾಹಿತ್ಯ ಲೋಕ ಪ್ರಬಂಧ ರಚನಾ ಸ್ಪರ್ಧೆ: ಅರ್ಜಿ ಆಹ್ವಾನ
ಕಲಬುರಗಿ,ಅ.04.(ಕ.ವಾ.)-ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಿಂದ 2017-18ನೇ ಸಾಲಿನ ಕಲಬುರಗಿ ಜಿಲ್ಲೆಯ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ “ಕನಕ ಸಾಹಿತ್ಯ ಲೋಕ ಪ್ರಬಂಧ ರಚನಾ ಸ್ಪರ್ಧೆ”ಯನ್ನು ಅಕ್ಟೋಬರ್ 10ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿಯ ದರ್ಗಾ ರಸ್ತೆಯಲ್ಲಿರುವ ಸರ್ಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆಯಲ್ಲಿ ಏರ್ಪಡಿಸಲಾಗಿದೆ ಎಂದು ಕಮಲಾಪುರ ಡಯಟ್ ಸಂಸ್ಥೆಯ ಉಪನಿರ್ದೇಶಕ ಶಶಿಕಾಂತ ಮರ್ತುಳೆ ತಿಳಿಸಿದ್ದಾರೆ.
ಜಿಲ್ಲೆಯ ಎಂಟು ತಾಲೂಕಿನ ಪ್ರೌಢಶಾಲೆಯ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಶಾಲೆಯಿಂದ ಓರ್ವ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಈ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಮೊದಲು ಬಂದ 50 ವಿದ್ಯಾರ್ಥಿಗಳ ಅರ್ಜಿಗಳನ್ನು ಮಾತ್ರ ಪ್ರಬಂಧ ಸ್ಪರ್ಧೆಗೆ ಪರಿಗಣಿಸಲಾಗುವುದು. ಡಯಟ್ ಸಂಸ್ಥೆಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 7 ಕೊನೆಯ ದಿನವಾಗಿದೆ. ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ 5000ರೂ., ದ್ವಿತೀಯ-4000ರೂ., ಮತ್ತು ತೃತೀಯ ಸ್ಥಾನ ಪಡೆದವರಿಗೆ 3000ರೂ. ನೀಡಲಾಗುವುದು. 4 ಮತ್ತು 5ನೇ ರ್ಯಾಂಕ್ ಪಡೆದವರಿಗೆ ಸಮಾಧಾನಕರ ಸ್ಥಾನ ತಲಾ 1000ರೂ. ರಂತೆ ಬಹುಮಾನ ವಿತರಿಸಲಾಗುವುದು.
ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ 2017ರ ನವೆಂಬರ್ 6ರಂದು ಜಿಲ್ಲಾಮಟ್ಟದ ಕನಕದಾಸ ಜಯಂತಿ ಸಮಾರಂಭದಲ್ಲಿ ಪ್ರಶಸ್ತಿ ಪತ್ರ ಹಾಗೂ ಬಹುಮಾನವನ್ನು ವಿತರಿಸಲಾಗುವುದು. ಪ್ರಬಂಧ ರಚನಾ ವಿಷಯ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಾರ್ಯಕ್ರಮದ ನೋಡಲ್ ಅಧಿಕಾರಿ ಮಾಳಪ್ಪ ಎನ್. ಪೂಜಾರಿ ಇವರ ಮೊಬೈಲ್ ಸಂಖ್ಯೆ 9980095383ನ್ನು ಸಂಪರ್ಕಿಸಲು ಕೋರಲಾಗಿದೆ.
ಪಠ್ಯ ಪುಸ್ತಕದ ಬೇಡಿಕೆ ಪಟ್ಟಿ ಸಲ್ಲಿಕೆಗೆ ಮುಖ್ಯ ಶಿಕ್ಷಕರಿಗೆ ಸೂಚನೆ
*******************************************************
ಕಲಬುರಗಿ,ಅ.04.(ಕ.ವಾ.)-ಕಲಬುರಗಿ ಉತ್ತರ ವಲಯದ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು 2018-19ನೇ ಸಾಲಿನ (ಉಚಿತ ಮತ್ತು ಮಾರಾಟ ಪಠ್ಯ ಪುಸ್ತಕ) ಮಾಧ್ಯಮವಾರು ಬೇಡಿಕೆ ಪಟ್ಟಿಯನ್ನು ತಮ್ಮ ಶಾಲೆಯ 1 ರಿಂದ 10ನೇ ತರಗತಿಯ ಮಕ್ಕಳ ಎಸ್.ಟಿ.ಎಸ್. ಮಾಹಿತಿಯಂತೆ ಕಲಬುರಗಿ ಉತ್ತರ ವಲಯದ ಪಠ್ಯ ಪುಸ್ತಕದ ನೋಡಲ್ ಅಧಿಕಾರಿ ಹಾಗೂ ಶಿಕ್ಷಣ ಸಂಯೋಜಕ ಹಣಮಂತರಾವ ಕುಲಕರ್ಣಿ ಮತ್ತು ಲಕ್ಷ್ಮಣ ದೊಡಮನಿ ಇವರಲ್ಲಿ ನೋಂದಣಿ ಮಾಡಿಕೊಳ್ಳಬೇಕೆಂದು ಕಲಬುರಗಿ ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಭರತರಾಜ ಸಾವಳಗಿ ತಿಳಿಸಿದ್ದಾರೆ.
ಕಲಬುರಗಿ ಉತ್ತರ ವಲಯದ ಎಲ್ಲ ಸರ್ಕಾರಿ/ ಅನುದಾನ, ಅನುದಾನ ರಹಿತ ಮತ್ತು ಆರ್.ಎಂ.ಎಸ್.ಎ. ಶಾಲೆಗಳು, ಸಮಾಜ ಕಲ್ಯಾಣ ಇಲಾಖೆಯಿಂದ ನಡೆಸಲಾಗುತ್ತಿರುವ ಶಾಲೆಗಳು ಮತ್ತು ಅಲ್ಪಸಂಖ್ಯಾತರ, ಏಕಲವ್ಯ, ಆಟಲ್ ಬಿಹಾರಿ ವಾಜಪೇಯಿ, ಮೊರಾರ್ಜಿ ದೇಸಾಯಿ, ಕಿತ್ತೂರು ಚನ್ನಮ್ಮ ವಸತಿ ಶಾಲೆ ಮತ್ತು ಆಶ್ರಮ ಶಾಲೆಗಳ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಮಾಧ್ಯಮವಾರು ಬೇಡಿಕೆ ಪಟ್ಟಿ ಸಲ್ಲಿಸಿ ಎಸ್.ಟಿ.ಎಸ್. ಮಾಹಿತಿಯಂತೆ ನೋಂದಣಿ ಮಾಡಿಕೊಳ್ಳಬೇಕು. ಒಂದು ವೇಳೆ ಪಠ್ಯಪುಸ್ತಕಗಳ ನೋಂದಣಿ ಮಾಡಸದೇ ಇದ್ದಲ್ಲಿ ಹಾಗೂ ಪಠ್ಯ ಪುಸ್ತಕಗಳನ್ನು ಸರಬರಾಜಾಗದೇ ಇದ್ದಲ್ಲಿ ಸಂಬಂಧಿಸಿದ ಸಂಸ್ಥೆಯ ಮುಖ್ಯಸ್ಥರೇ ಇದಕ್ಕೆ ಹೊಣೆಗಾರರಾಗಿರುತ್ತಾರೆ ಎಂದು ಅವರು ತಿಳಿಸಿದ್ದಾರೆ.
ಕಾಲೇಜು ರಂಗೋತ್ಸವ ಆಚರಣೆ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
******************************************************
ಕಲಬುರಗಿ,ಅ.04.(ಕ.ವಾ.)-ಕಲಬುರಗಿ ರಂಗಾಯಣ ವತಿಯಿಂದ ಕಾಲೇಜು ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಲು ಮತ್ತು ವಿದ್ಯಾರ್ಥಿಗಳಲ್ಲಿ ಕಲೆಗಳ ಅಭಿವ್ಯಕ್ತಿಗೆ ಆತ್ಮಸ್ಥೈರ್ಯ ತುಂಬಲು ಕಾಲೇಜು ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ರಂಗೋತ್ಸವವನ್ನು ಏರ್ಪಡಿಸಲು ಆಸಕ್ತರಿಂದ ಅರ್ಜಿ ಸಲ್ಲಿಸುವ ಅವಧಿಯನ್ನು ಅಕ್ಟೋಬರ್ 13 ರವರೆಗೆ ವಿಸ್ತರಿಸಲಾಗಿದೆ ಎಂದು ರಂಗಾಯಣ ನಿರ್ದೇಶಕ ಮಹೇಶ ವಿ. ಪಾಟೀಲ ತಿಳಿಸಿದ್ದಾರೆ.
ನಾಟಕ ಸ್ಪರ್ಧೆಯು 3 ಹಂತದಾಗಿದ್ದು, ಜಿಲ್ಲೆ, ವಿಭಾಗೀಯ ಮತ್ತು ರಾಜ್ಯಮಟ್ಟದಲ್ಲಿ ಆಯೋಜಿಸಲಾಗುವುದು. ಪ್ರಥಮ ಹಂತದಲ್ಲಿ ಪ್ರತಿಯೊಂದು ಜಿಲ್ಲೆಯಲ್ಲಿ ನಾಟಕೋತ್ಸವವನ್ನು ಏರ್ಪಡಿಸಲಾಗುವುದು. ಇದಕ್ಕೆ ಪೂರ್ವಭಾವಿಯಾಗಿ ಕಾಲೇಜು ವಿದ್ಯಾರ್ಥಿಗಳ 8 ತಂಡಗಳನ್ನು ಸ್ಥಳೀಯ ಸಂಚಾಲನಾ ಸಮಿತಿ ಆಯ್ಕೆ ಮಾಡುತ್ತದೆ. ಆಯ್ಕೆಯಾದ ತಂಡಗಳಿಗೆ 10 ದಿನಗಳ ತರಬೇತಿ ಶಿಬಿರವನ್ನು 8 ಕಾಲೇಜುಗಳಲ್ಲಿ ಏರ್ಪಡಿಸಲಾಗುವುದು. ಹಾಗೇಯೇ ಆಯ್ಕೆಯಾದ ಪ್ರತಿಯೊಂದು ಕಾಲೇಜು ತಂಡ ಒಂದು ಜಾನಪದ ಪ್ರಕಾರವನ್ನು ಆಯ್ಕೆ ಮಾಡಿ ಉತ್ಸವ ಸಂದರ್ಭದಲ್ಲಿ ಪ್ರದರ್ಶಿಸಬೇಕು.
ಜಾನಪದ ಕಲಾಪ್ರಕಾರಗಳು ಪ್ರದರ್ಶಕ ಜಾನಪದ ಕಲೆಗಳಾಗಿರಬೇಕು. ಡೊಳ್ಳು, ಕಂಸಾಳೆ, ತಮಟೆ, ಕೋಲಾಟ, ಜಗ್ಗಲಿಗೆ ಇತ್ಯಾದಿ. 10 ದಿನಗಳ ತರಬೇತಿಯ ನಂತರ ಸಿದ್ಧಗೊಂಡ ನಾಟಕ ಮತ್ತು ಜಾನಪದ ಕಾರ್ಯಕ್ರಮಗಳನ್ನು ನಿಗದಿತ ದಿನಾಂಕದಂದು ಸ್ಪರ್ಧಾತ್ಮಕ ರೀತಿಯಲ್ಲಿ ಪ್ರದರ್ಶನ ಏರ್ಪಡಿಸಿ, ಉತ್ತಮ 2 ನಾಟಕ ತಂಡ ಹಾಗೂ 2 ಜಾನಪದ ತಂಡಗಳನ್ನು ಜಿಲ್ಲಾ ಮಟ್ಟದಲ್ಲಿ ಆಯ್ಕೆ ಮಾಡಿ ವಿಭಾಗ ಮಟ್ಟಕ್ಕೆ ಕಳುಹಿಸಲಾಗುವುದು.
ಆಸಕ್ತ ಸರ್ಕಾರಿ/ಖಾಸಗಿ ಕಾಲೇಜುಗಳ ಮುಖ್ಯಸ್ಥರು ರಂಗಾಯಣದಲ್ಲಿ ಲಭ್ಯವಿರುವ ಅರ್ಜಿ ನಮೂನೆಯನ್ನು ಪಡೆದು ಅಕ್ಟೋಬರ್ 13ರ ಸಾಯಂಕಾಲ 5-30ರೊಳಗಾಗಿ ನೊಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08472-227735ನ್ನು ಸಂಪರ್ಕಿಸಲು ಕೋರಲಾಗಿದೆ.
ಹಳೆ ದಿನಪತ್ರಿಕೆಗಳ ವಿಲೇವಾರಿಗಾಗಿ ದರಪಟ್ಟಿ ಆಹ್ವಾನ
************************************************
ಕಲಬುರಗಿ,ಅ.04.(ಕ.ವಾ.)-ಕಲಬುರಗಿ ನಗರ ಕೇಂದ್ರ ಗ್ರಂಥಾಲಯ ಹಾಗೂ ಅಧೀನದಲ್ಲಿ ಬರುವ ಎಲ್ಲ ಶಾಖಾ ಗ್ರಂಥಾಲಯಗಳಲ್ಲಿ 2016ರ ಏಪ್ರಿಲ್ 1 ರಿಂದ 2017ರ ಮಾರ್ಚ್ 31ವರೆಗಿನ ಸಂಗ್ರಹವಾಗಿರುವ ಹಳೆಯ ದಿನಪತ್ರಿಕೆ ಮತ್ತು ನಿಯತಕಾಲಿಕೆಗಳ ವಿಲೇವಾರಿಗಾಗಿ ದರಪಟ್ಟಿಗಳನ್ನು ಆಹ್ವಾನಿಸಲಾಗಿದೆ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಇಚ್ಛೆಯುಳ್ಳ ಸಂಸ್ಥೆಯವರು ಕನ್ನಡ ಮತ್ತು ಇತರೆ ಭಾಷೆಯ ದಿನಪತ್ರಿಕೆ, ಆಂಗ್ಲ ಭಾಷೆಯ ದಿನಪತ್ರಿಕೆ, ಕನ್ನಡ ಹಾಗೂ ಇತರೆ ಭಾಷೆಯ ನಿಯತಕಾಲಿಕೆ ಹಾಗೂ ಆಂಗ್ಲ ಭಾಷೆಯ ನಿಯತಕಾಲಿಕೆಗಳ ಪ್ರತಿ 1ಕೆ.ಜಿ.ಗೆ ರೂ. ದರವನ್ನು ನಮೂದಿಸಿ ಭದ್ರಪಡಿಸಿದ ಲಕೋಟೆಯನ್ನು ಅಕ್ಟೋಬರ್ 24ರ ಮಧ್ಯಾಹ್ನ 12 ಗಂಟೆಯೊಳಗಾಗಿ ಉಪನಿರ್ದೇಶಕರು, ನಗರ ಕೇಂದ್ರ ಗ್ರಂಥಾಲಯ, ಜಗತ್ ವೃತ್ತ ಕಲಬುರಗಿ ಕಚೇರಿಯಲ್ಲಿ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬೇಕು. ಅದೇ ದಿನ ಸಂಜೆ 4 ಗಂಟೆಗೆ ಟೆಂಡರ್ ದರವನ್ನು ತೆರೆಯಲಾಗುವುದು. ಟೆಂಡರ್ ಷರತ್ತು, ಇ.ಎಂ.ಡಿ. ಮೊತ್ತ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಸದರಿ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.
ಯಶಸ್ವಿಯಾಗಿ ಜರುಗಿದ ಉಚಿತ ಆಯುಷ್ ಆರೋಗ್ಯ ಶಿಬಿರ
****************************************************
ಕಲಬುರಗಿ ಅ.04 (ಕ.ವಾ) ಜಿಲ್ಲಾ ಸರ್ಕಾರಿ ಹೋಮಿಯೋಪತಿ ಹಾಗೂ ಆಯುರ್ವೇದ ಸಂಯುಕ್ತ ಆಸ್ಪತ್ರೆ ಮತ್ತು ಜಿಲ್ಲಾ ಪಂಚಾಯಿತಿ ಹಾಗೂ ಆಯುಷ್ ಇಲಾಖೆ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಕಲಬುರಗಿಯ ಭವಾನಿ ನಗರದ ಪೂಜಾರಿ ಮಠದಲ್ಲಿ ಉಚಿತ ಆಯುಷ್ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಈ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ, ಕಲಬುರಗಿ ಮಹಾನಗರಪಾಲಿಕೆ ಸದಸ್ಯ ಶಿವಾನಂದ ಪಾಟೀಲ ಅಷ್ಟಗಿ ಬಡಾವಣೆಯ ಸುತ್ತಮುತ್ತಲಿನ ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಆರೋಗ್ಯ ಶಿಬಿರ ಆಯೋಜಿಸಲಾಗಿದ್ದು, ಇನ್ನು ಸಂಸ್ಥೆಯಿಂದ ಹೆಚ್ಚು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಜಿಲ್ಲಾ ಆಯುಷ್ ಅಧಿಕಾರಿ ಡಾ|| ನಾಗರತ್ನ ಎಸ್.ಚಿಮ್ಮಲಗಿ ಮಾತನಾಡಿ, ಮನೆ ಮದ್ದುವಿನ ಬಗ್ಗೆ ಹಾಗೂ ಕಾರ್ಯಕ್ರಮದ ಉದ್ದೇಶ ಮತ್ತು ಸರ್ಕಾರದ ಯೋಜನೆಯ ಕುರಿತು ಜನರಿಗೆ ಮನವರಿಕೆ ಮಾಡಿಕೊಟ್ಟರು. ಡಾ. ಸುಧೀರ ಕುಳಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಬಸವರಾಜ ಬಿರಾದಾರ, ರತ್ನಾಬಾಯಿ ಪೂಜಾರಿ ಪಾಲ್ಗೊಂಡಿದ್ದರು.
ತಜ್ಞ ವೈದ್ಯಾಧಿಕಾರಿಗಳಾದ ಡಾ|| ಉಮಾಶಂಕರ ಹಿರೇಮಠ, ಡಾ|| ಸುಧೀರ ಕುಳಗೇರಿ, ಡಾ|| ಸುಜಾತಾ ಬಿ.ಪಾಟೀಲ, ಡಾ|| ಆರತಿ ಬಡಗೇರ ರೋಗಿಗಳಿಗೆ ತಪಾಸಣೆ ಮಾಡಿ ಸೂಕ್ತ ಔಷಧಿ ನೀಡಿ ಮಾರ್ಗದರ್ಶನ ನೀಡಿದರು. ಈ ಶಿಬಿರದಲ್ಲಿ ಸುಮಾರು 527 ರೋಗಿಗಳು ಉಚಿತ ಚಿಕಿತ್ಸಾ ಶಿಬಿರದ ಪ್ರಯೋಜನ ಪಡೆದುಕೊಂಡರು. ಔಷಧ ವಿತರಕರಾದ ಸೈಯದ್ ನಜಮುದ್ದೀನ್, ಕು. ಸುಜಾತಾ, ಅರುಕುಮಾರ್ ಮತ್ತು ಗುಂಡಪ್ಪ ಉಪಸ್ಥಿತರಿದ್ದರು. ಡಾ|| ಕೆ.ಬಿ.ಬಬಲಾದಿ ಸ್ವಾಗತಿಸಿದರು. ಡಾ|| ಉಮಾಶಂಕರ್ ವಂದಿಸಿದರು.
ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸ್ವರ್ಧೆಯಲ್ಲಿ ಭಾಗವಹಿಸಿ
***********************************************
-ಅನೀಲ ರಾಜೋಳೆ
******************
ಕಲಬುರಗಿ,ಅ.4(ಕ.ವಾ)-ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸ್ವರ್ಧೆಗಳಲ್ಲಿ ಭಾಗವಹಿಸಿ ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಬೇಕೆಂದು ಅನೀಲ ರಾಜೋಳೆ ಅಭಿಪ್ರಾಯಪಟ್ಟರು.
ಅವರು ಆಳಂದ ತಾಲೂಕಿನ ಹೊದಲೂರ ಸರ್ಕಾರಿ ಮಾದರಿ ಶಾಲೆಯಲ್ಲಿ ಗ್ರಾಮ ಪಂಚಾಯಿತಿ, ಶಿಕ್ಷಣ ಇಲಾಖೆ ಸಮುದಾಯ, ಶೈಕ್ಷಣಿಕ ಸ್ವಯಂ ಸೇವಕರು ಹಾಗೂ ಅಕ್ಷರ ಫೌಂಡೇಶನ್ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಗ್ರಾಮ ಪಂಚಾಯಿತಿ ಮಟ್ಟದ ಶಾಲಾ ಮಕ್ಕಳ ಗಣಿತ ಸ್ವರ್ಧೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು ಮತ್ತು ಸ್ವರ್ಧೆಯಲ್ಲಿ ಭಾಗವಹಿಸಿ ವಿಜೇತರದ ಮಕ್ಕಳಿಗೆ ನಗದು ಬಹುಮಾನ ವಿತರಿಸಿದರು.
ಕಾರ್ಯಕ್ರಮದಲ್ಲಿ ಅಕ್ಷರ ಫೌಂಡೇಶನ್ ತಾಲೂಕ ಸಂಯೋಜಕ ಜಗದೀಶ್ ಬೆಳಮ ಪಡಸಾವಳಿ ಮಾತನಾಡಿ, ಸತತ ಕಠಿಣ ಪರಿಶ್ರಮದಿಂದ ಗಣಿತ ವಿಷಯದಲ್ಲಿ ಪ್ರಾವೀಣತೆ ಹೊಂದಬಹುದು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಕ್ಷ್ಮಣ ಪೂಜಾರಿ ಮಾತನಾಡಿದರು.
ಅಣೂರ ಜವಳಗಾ(ಜೆ), ಹೋದಲೂರ, ನಂದಗೂರ ಶಾಲೆಯ 4,5 ಮತ್ತು 6 ನೇ ತರಗತಿಯ ಮಕ್ಕಳು ಸ್ವರ್ಧೆಯಲ್ಲಿ ಭಾಗವಹಿಸಿದರು. ನಂತರ ಪ್ರಥಮ, ದ್ವಿತೀಯ ಹಾಗೂ ತೃತಿಯ ಸ್ಥಾನ ಪಡೆದ ವಿವಿಧ ಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಹೊದಲೂರ ವಲಯ ಸಿಆರ್‍ಪಿ ವೆಂಕಟ ಚವ್ಹಾಣ, ಶಿವಶರಣಪ್ಪ ಬಜಂತ್ರಿ, ಮಲಕಣ್ಣ ರುದ್ರವಾಡಿ, ರಾಜೇಂದ್ರ ಕಾಸರ್,ಕಲ್ಲಪ್ಪ ಮಳಸವಳಗಿ, ಹಣಮಂತ ಪಾತ್ರೆ, ಮಂಜುನಾಥ ರೆಡ್ಡಿ, ಸುಭಾಶ ಸಿ,ಬುರತಿ ಮತ್ತು ಶೈಕ್ಷಣಿಕ ಸ್ವಯಂ ಸೇವಕರಾದ ಸಂತೋಷ ಬಿ.ಪೂಜಾರಿ, ಪ್ರಶಾಂತಕುಮಾರ, ಗುರುನಾಥ, ವಿಕಾಸ ಶಾಂತಪ್ಪ ಸುರವಸೆ,ಸಿದ್ದಲಿಂಗ ಸಿ.ಪೂಜಾರಿ, ಜತ್ರೇಂದ್ರ ಸುಭಾಶ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಹಣಮಂತ ಪಾತ್ರೆ ಕಾರ್ಯಕ್ರಮ ನಿರೂಪಿಸಿದರು.
ಅಕ್ಟೋಬರ್ 8ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
*************************************************
ಕಲಬುರಗಿ,ಅ.4(ಕ.ವಾ)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗ-1ರಿಂದ 220 ಕೆ.ವಿ. ಕಪನೂರ ಉಪ ಕೇಂದ್ರದಲ್ಲಿ ಸುಧಾರಣಾ ಕಾರ್ಯ ಕೈಗೊಳ್ಳುವ ಪ್ರಯುಕ್ತ ಅಕ್ಟೋಬರ್ 8ರಂದು ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸದರಿ ಫೀಡರುಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳು ಮತ್ತು ಇತರೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.
ವಿದ್ಯುತ್ ನಿಲುಗಡೆಯಾಗುವ ವಿದ್ಯುತ್ ವಿತರಣಾ ಕೇಂದ್ರ ಮತ್ತು ಪೀಡರಿನ ವಿವರ ಇಂತಿದೆ. 110 ಕೆ.ವಿ. ಕಪನೂರ ಉಪವಿತರಣಾ ಕೇಂದ್ರ: ಬ್ಯಾಂಕ-1ರ ಕೆ.ಐ.ಡಿ.ಬಿ.-1, ಕೆ.ಐ.ಡಿ.ಬಿ.-2, ಅಶೋಕ ಪಾಲಿಮರ. ಬ್ಯಾಂಕ-2ರ ಹರಸೂರ, ತಾವರಗೇರಾ, ಕರೂರ, ಹರಸೂರ, ಹಾಳ ಸುಲ್ತಾನಪೂರ, ಅವರಾದ ಎಕ್ಸ್‍ಪ್ರೆಸ್, ಮಾಲಗತ್ತಿ, ಭೂಪಾಲ ತೇಗನೂರ, ವೆಂಕಟ್‍ಬೆನ್ನುರ ಮತ್ತು ಬೇಲೂರ ಇಂಡಸ್ಟ್ರೀಸ್.
110/33/11 ಕೆ.ವಿ. ಉತ್ತರ ವಿದ್ಯುತ ವಿತರಣಾ ಕೇಂದ್ರ: ಕಡಗಂಚಿ ಮತ್ತು ಜಂಬಗಾ. 110/33/11 ಕೆ.ವಿ. ದಕ್ಷಿಣ ವಿದ್ಯುತ ವಿತರಣಾ ಕೇಂದ್ರ: ವರಗೀಸ, ಆಲ್ ಇಂಡಿಯಾ ರೇಡಿಯೊ, ನಂದಿಕೂರ, ಹೌಸಿಂಗ್ ಬೋರ್ಡ್, ನೃಪತುಂಗ ಕಾಲೋನಿ. 33/11 ಕೆ.ವಿ ಮಾಡಿಯಾಳ ಕೇಂದ್ರ: ಮಾಡ್ಯಾಳ, ಯಳಸಂಗಿ, ದೇವಂತಗಿ, ನಿಂಬಾಳ. 33/11ಕೆ.ವಿ.ಚೌಡಾಪುರ: ಚೌಡಾಪೂರ, ಹಾವನೂರ, ಚಿಣಮಗೇರಾ, ಅವರಾದಿ ಮತ್ತು ಗಾಣಗಾಪುರ.



ಹೀಗಾಗಿ ಲೇಖನಗಳು NEWS AND PHOTO DATE: 04--10--2017

ಎಲ್ಲಾ ಲೇಖನಗಳು ಆಗಿದೆ NEWS AND PHOTO DATE: 04--10--2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ NEWS AND PHOTO DATE: 04--10--2017 ಲಿಂಕ್ ವಿಳಾಸ https://dekalungi.blogspot.com/2017/10/news-and-photo-date-04-10-2017.html

Subscribe to receive free email updates:

0 Response to "NEWS AND PHOTO DATE: 04--10--2017"

ಕಾಮೆಂಟ್‌‌ ಪೋಸ್ಟ್‌ ಮಾಡಿ