ನವೋದಯ ವಿದ್ಯಾಲಯ : ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ನವೋದಯ ವಿದ್ಯಾಲಯ : ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ನವೋದಯ ವಿದ್ಯಾಲಯ : ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ನವೋದಯ ವಿದ್ಯಾಲಯ : ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ
ಲಿಂಕ್ : ನವೋದಯ ವಿದ್ಯಾಲಯ : ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಓದಿ


ನವೋದಯ ವಿದ್ಯಾಲಯ : ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ


ಕೊಪ್ಪಳ ಅ. 04 (ಕರ್ನಾಟಕ ವಾರ್ತೆ): ಪ್ರತಿ ವರ್ಷದಂತೆ ಈ ವರ್ಷವೂ ಜವಾಹರ ನವೋದಯ ವಿದ್ಯಾಲಯ 6 ನೇ ತರಗತಿಗಾಗಿ 2018-19 ರ ಶೈಕ್ಷಣಿಕ ವರ್ಷಕ್ಕಾಗಿ ಪ್ರವೇಶ ಪರೀಕ್ಷೆಯ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
       ಈ ವರ್ಷ ಪ್ರಪ್ರಥಮ ಬಾರಿಗೆ ಆನ್‍ಲೈನ್  www.nvshq.org ನಲ್ಲಿ ಅರ್ಜಿ ಆಹ್ವಾನಿಸಲಾಗಿದ್ದು, ಈ ವೆಬ್‍ಸೈಟ್‍ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.  ಸುಲಭ ಮತ್ತು ಸರಳ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಪೋಷಕರಿಗೆ ಸಹಾಯವಾಗುವಂತೆ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಕಾಮನ್ ಸರ್ವಿಸ್ ಸೆಂಟರ್ಸ್‍ನಲ್ಲಿ ಅರ್ಜಿಗಳನ್ನು ಭರ್ತಿ ಮಾಡಬಹುದು.  ಮೊದಲ ಬಾರಿಗೆ  ಈ  ಪ್ರಯೋಗ ನಡೆಸುತ್ತಿರುವುದರಿಂದ  ಈ ವಿಷಯವಾಗಿ ಸಾರ್ವಜನಿಕರ, ಪಾಲಕ- ಪೋಷಕರ ಹಾಗೂ ವಿದ್ಯಾರ್ಥಿಗಳ ಸಹಕಾರ ಕೂಡ ಅತ್ಯವಶ್ಯವಾಗಿದೆ.
        ಅರ್ಜಿ ಸಲ್ಲಿಸಲು ವಿದ್ಯಾರ್ಥಿಯು 5ನೇ ತರಗತಿಯಲ್ಲಿ ಓದುತ್ತಿರುವ ಶಾಲೆಯ ಮುಖ್ಯೋಪಾಧ್ಯಾಯರಿಂದ  ವಿದ್ಯಾರ್ಥಿಯ   ವಿವರಗಳೊಂದಿಗೆ ಪ್ರಮಾಣಪತ್ರವನ್ನು ಪಡೆದು, ಸಾಮಾನ್ಯ ಸೇವಾ ಕೇಂದ್ರಗಳಿಗೆ   ಹೋಗಿ ಅರ್ಜಿ ಸಲ್ಲಿಸಬೇಕು.  ಆಲ್ಲಿ ಪ್ರಮಾಣ ಪತ್ರವನ್ನು  ಅಪ್‍ಲೋಡ್ ಮಾಡಬೇಕು.  ವಿದ್ಯಾರ್ಥಿಯು ಆಯ್ಕೆಯಾದರೆ, ಅದೇ ಪ್ರಮಾಣ ಪತ್ರವನ್ನು  ದಾಖಲಾತಿ ಅಂದರೆ ಅಡ್ಮಿಷನ್ ಸಮಯದಲ್ಲಿ ಪ್ರಸ್ತುತ ಪಡಿಸಬೇಕಾಗುತ್ತದೆ.  ಅರ್ಜಿ ಸಲ್ಲಿಸಲು 2017 ರ ನವೆಂಬರ್ 25 ಕೊನೆಯ ದಿನವಾಗಿರುತ್ತದೆ.   ಪ್ರವೇಶ ಪರೀಕ್ಷೆಯ ದಿನಾಂಕ:- ಶನಿವಾರ 10 ನೇ ಫೆಬ್ರುವರಿ 2018.
       ಸಾಮಾನ್ಯ ಸೇವಾ ಕೇಂದ್ರಗಳು ಡಿಜಿಟಲ್ ಇಂಡಿಯಾದ ಮಹತ್ವಕಾಂಕ್ಷಿ ಯೋಜನೆಯಾಗಿದ್ದು. ಕೊಪ್ಪಳ ಜಿಲ್ಲೆಯಲ್ಲಿ 280 ಕ್ಕಿಂತ ಹೆಚ್ಚು ಸಾಮಾನ್ಯ ಸೇವಾ ಕೇಂದ್ರಗಳು  ಗ್ರಾಮ ಪಂಚಾಯತ ಹಾಗೂ ನಗರ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು. ಈ ಕೇಂದ್ರದಲ್ಲಿ ಆನ್‍ಲೈನ್ ಮುಖಾಂತರ ನವೋದಯ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಭೇಟಿ ನೀಡಬಹುದು.  ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೆ ಪ್ರಾರಂಭವಾಗಿರುತ್ತದೆ.  ಅರ್ಜಿ ಶುಲ್ಕ ರೂ. 35 ಆಗಿದ್ದು, ಸೆಂಟರ್‍ನಲ್ಲಿ ಅರ್ಜಿ ಮುದ್ರಣ ಶುಲ್ಕ ಪ್ರತಿ ಪುಟಕ್ಕೆ ರೂ. 10 ನಿಗದಿಪಡಿಸಲಾಗಿದೆ. 
     ಹೆಚ್ಚಿನ ಮಾಹಿತಿಗಾಗಿ ಬಿಎನ್‍ಟಿ ರೆಡ್ಡಿ, ಪ್ರಾಂಶುಪಾಲಕರು- ಕುಕನೂರು- 08534-230444, ಶಿವಶೇಖರಗೌಡ ಪಾಟೀಲ, ಜಿಲ್ಲಾ ವ್ಯವಸ್ಥಾಪಕರು, ಕೊಪ್ಪಳ- 7892617849, ಸಿ.ಎಸ್.ಸಿ ಸೇವಾ ಕೇಂದ್ರಗಳು ಕೊಪ್ಪಳ- 8495855556, ಕೋಳೂರು, ಕೊಪ್ಪಳ-9972854354, ಗಂಗಾವತಿ- 9036631256, 9164448887, ಕುಷ್ಟಗಿ-9482986599, ದೋಟಿಹಾಳ- 9945750945, ಯಲಬುರ್ಗಾ-9164647701, ಕೊಪ್ಪಳ-9902850637, ಕವಲೂರು, ಕೊಪ್ಪಳ-9886514892 ಕ್ಕೆ ಸಂಪರ್ಕಿಸಬಹುದು ಎಂದು ಕುಕನೂರು ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಹೀಗಾಗಿ ಲೇಖನಗಳು ನವೋದಯ ವಿದ್ಯಾಲಯ : ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಎಲ್ಲಾ ಲೇಖನಗಳು ಆಗಿದೆ ನವೋದಯ ವಿದ್ಯಾಲಯ : ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ನವೋದಯ ವಿದ್ಯಾಲಯ : ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ ಲಿಂಕ್ ವಿಳಾಸ https://dekalungi.blogspot.com/2017/10/blog-post_62.html

Subscribe to receive free email updates:

0 Response to "ನವೋದಯ ವಿದ್ಯಾಲಯ : ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ"

ಕಾಮೆಂಟ್‌‌ ಪೋಸ್ಟ್‌ ಮಾಡಿ