ಶೀರ್ಷಿಕೆ : ಒಂದು ಟಾಯ್ಲೆಟ್ ಪ್ರಸಂಗ ಮತ್ತು ಹಿಂದಿ ಹೇರಿಕೆ.
ಲಿಂಕ್ : ಒಂದು ಟಾಯ್ಲೆಟ್ ಪ್ರಸಂಗ ಮತ್ತು ಹಿಂದಿ ಹೇರಿಕೆ.
ಒಂದು ಟಾಯ್ಲೆಟ್ ಪ್ರಸಂಗ ಮತ್ತು ಹಿಂದಿ ಹೇರಿಕೆ.
ಡಾ. ಅಶೋಕ್. ಕೆ. ಆರ್
ಮೊನ್ನೆ ಮೊನ್ನೆ ರಾಹುಲ್ ಗಾಂಧಿ ಗುಜರಾತಿನಲ್ಲಿದ್ದಾಗ ಮೇಲ್ನೋಟಕ್ಕೆ ಅಪಹಾಸ್ಯವೆನ್ನಿಸುವ, ರಾಹುಲ್ ಗಾಂಧಿಯ ದಡ್ಡತನವನ್ನು ಎತ್ತಿ ತೋರಿಸುವಂತನ್ನಿಸುವ ಘಟನೆಯೊಂದು ಸಂಭವಿಸಿದೆ. ರಾಹುಲ್ ಗಾಂಧಿ ಮಹಿಳೆಯರ ಟಾಯ್ಲೆಟ್ಟಿನೊಳಗೋಗಿಬಿಟ್ಟಿದ್ದರಂತೆ. ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ರಾಹುಲ್ ಗಾಂಧಿ ಆ ಮಹಿಳೆಯರ ಟಾಯ್ಲೆಟ್ಟಿನಿಂದ ಹೊರಬರುತ್ತಿರುವ ಚಿತ್ರ ಪ್ರಕಟವಾಗಿದೆ. ಆ ಟಾಯ್ಲೆಟ್ಟಿನ ಬಾಗಿಲಿನ ಮೇಲೆ ‘ಮಹಿಳೆಯರಿಗೆ’ ಎಂದು ಬರೆಯಲಾಗಿದೆ. ರಾಹುಲ್ ಗಾಂಧಿ ಯಾಕದನ್ನು ಗಮನಿಸದೇ ಒಳಹೋದರು? ಯಾಕೆ ಒಳಹೋದರೆಂದರೆ ‘ಮಹಿಳೆಯರಿಗೆ’ ಎಂದು ಗುಜರಾತಿ ಭಾಷೆಯಲ್ಲಿ ಬರೆಯಲಾಗಿತ್ತು ಮತ್ತು ರಾಹುಲ್ ಗಾಂಧಿಗೆ ಗುಜರಾತಿ ಓದಲು ಬರುವುದಿಲ್ಲ. ಹೀಗಾಗಿ ಟಾಯ್ಲೆಟ್ಟಿನ ಒಳಹೊಕ್ಕು ಪೇಚಿಗೆ ಸಿಲುಕಿ ನಗೆಪಾಟಲಿಗೀಡಾಗಿದ್ದಾರೆ.
ಹಿಂದಿ ಹೇರಿಕೆಯ ಅಡಿಪಾಯ ಹಾಕಿದ ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿಗೆ ಹಿಂದಿಯೆತರ ರಾಜ್ಯದ ಜನರು ಅನುಭವಿಸುವ ಕಷ್ಟಗಳ ಅರಿವಾಗಿರಬೇಕು. ನಮ್ಮ ಬ್ಯಾಂಕುಗಳನ್ನು ‘ರಾಷ್ಟ್ರೀಕೃತ’ಗೊಳಿಸಿದರು; ಬ್ಯಾಂಕು, ಅಂಚೆಯ ಚಲನ್ನುಗಳಲ್ಲಿ, ವ್ಯವಹಾರಗಳಲ್ಲಿ ಹಂತಹಂತವಾಗಿ ನಮ್ಮ ಸ್ಥಳೀಯ ಭಾಷೆಯನ್ನು ಕಡೆಗಣಿಸುತ್ತಾ ಹಿಂದಿಗೆ ಮಣೆ ಹಾಕಿದ ಪರಿಣಾಮವನ್ನು ಹಿಂದಿ ಮತ್ತು ಇಂಗ್ಲೀಷ್ ಬರದ ಜನರು ದಿನನಿತ್ಯ ಅನುಭವಿಸುತ್ತಿದ್ದಾರೆ. ಒಂದು ಸಾಮಾನ್ಯ ಚನಲ್ ಅನ್ನು ತುಂಬಲು ಕನ್ನಡ ಬರುವ ವ್ಯಕ್ತಿಯು ಅನ್ಯರ ಸಹಾಯ ಪಡೆಯುವಂತೆ ಮಾಡಿಬಿಟ್ಟಿದೆ ಹಿಂದಿ ಹೇರಿಕೆ. ಕಾರಣ ಬಹುತೇಕ ಬ್ಯಾಂಕಿನ ಚಲನ್ನುಗಳಲ್ಲಿ ಮುಂದೆ ಹಿಂದಿ, ಹಿಂದೆ ಇಂಗ್ಲೀಷ್ ಅಷ್ಟೇ ಇದೆ. ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಜಾಣತನದಿಂದ ಹಿಂದಿಯನ್ನು ಮುಂದಾಗಿಸಿದ ಕಾರಣದಿಂದ ಬ್ಯಾಂಕಿನ ಸಿಬ್ಬಂದಿಗಳಲ್ಲಿ ಹೆಚ್ಚಿನವರು ಹಿಂದಿ ರಾಜ್ಯದವರೇ ಆಗಿಬಿಡುತ್ತಿದ್ದಾರೆ. ‘ಹಿಂದಿ ಕಲುತ್ಕೊಂಡು ಬರೋಗು’ ಎಂಬ ದರ್ಪ ತೋರಿಸುವವರೂ ಹೆಚ್ಚಾಗುತ್ತಿದ್ದಾರೆ. ನಮ್ಮ ತೆರಿಗೆ ಹಣದಲ್ಲಿ ಹಿಂದಿ ದಿವಸ್, ಹಿಂದಿ ವಾರ, ಹಿಂದಿ ಪಾಕ್ಷಿಕ, ಹಿಂದಿ ತಿಂಗಳು ಅಂತೆಲ್ಲ ಮಾಡಿಕೊಂಡು ಕನ್ನಡ ಹಾಗೂ ಇತರೆ ಭಾಷೆಗಳನ್ನು ಅವಗಣನೆಗೆ ದೂಡುವುದು ಯಾವ ನ್ಯಾಯ? ಎಚ್ಚೆತ್ತ ಕನ್ನಡಿಗ ಪ್ರಜ್ಞೆ ಮತ್ತು ಕನ್ನಡ ಪರ ಸಂಘಟನೆಗಳ ಪ್ರಯತ್ನದಿಂದ ಹೇರಿಕೆಯ ಮನಸ್ಥಿತಿಯನ್ನು ಹಿಮ್ಮೆಟ್ಟಿಸುವ ಪ್ರಯತ್ನಗಳು ನಡೆಯುತ್ತಿವೆಯಾದರೂ ಕೇಂದ್ರ ಸರಕಾಗಳು ಕೂಡ ಹಿಂದಿ ಹೇರಿಕೆಗೆ ಹೊಸ ಹೊಸ ಮಾರ್ಗಗಳನ್ನು ಅನ್ವೇಷಿಸುತ್ತಿವೆ. ಹಿಂದಿ ಹೇರಿಕೆಯ ವಿರುದ್ಧದ ಹೋರಾಟ ನಿರಂತರವಾಗಿರಲಬೇಕು, ಅನ್ಯ ದಾರಿಯಿಲ್ಲ.
ಆ ಟಾಯ್ಲೆಟ್ಟಿನ ಮೇಲೆ ಗುಜರಾತಿ ಭಾಷೆಯ ಜೊತೆಗೆ ಇಂಗ್ಲೀಷೂ ಇದ್ದಿದ್ದರೆ ಸ್ಥಳೀಯರಿಗೂ ಮಾಹಿತಿ ಸಿತುತ್ತಿತ್ತು, ಅನ್ಯ ರಾಜ್ಯಗಳಿಂದ ಬಂದ ರಾಹುಲ್ ಗಾಂಧಿಯಂತವರು ಅಪಹಾಸ್ಯಕ್ಕೀಡಾಗುವುದೂ ತಪ್ಪುತ್ತಿತ್ತು. ಭಾರತಕ್ಕೆ ಬೇಕಿರುವುದು ಸ್ಥಳೀಯ ಭಾಷೆ ಹಾಗೂ ಇಂಗ್ಲೀಷನ್ನೊಳಗೊಂಡ ದ್ವಿಭಾಷಾ ನೀತಿಯೇ ಹೊರತು ಹಿಂದಿ ಹೇರುವ ತ್ರಿಭಾಷಾ ಸೂತ್ರವಲ್ಲ.
ಹೀಗಾಗಿ ಲೇಖನಗಳು ಒಂದು ಟಾಯ್ಲೆಟ್ ಪ್ರಸಂಗ ಮತ್ತು ಹಿಂದಿ ಹೇರಿಕೆ.
ಎಲ್ಲಾ ಲೇಖನಗಳು ಆಗಿದೆ ಒಂದು ಟಾಯ್ಲೆಟ್ ಪ್ರಸಂಗ ಮತ್ತು ಹಿಂದಿ ಹೇರಿಕೆ. ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಒಂದು ಟಾಯ್ಲೆಟ್ ಪ್ರಸಂಗ ಮತ್ತು ಹಿಂದಿ ಹೇರಿಕೆ. ಲಿಂಕ್ ವಿಳಾಸ https://dekalungi.blogspot.com/2017/10/blog-post_36.html
0 Response to "ಒಂದು ಟಾಯ್ಲೆಟ್ ಪ್ರಸಂಗ ಮತ್ತು ಹಿಂದಿ ಹೇರಿಕೆ."
ಕಾಮೆಂಟ್ ಪೋಸ್ಟ್ ಮಾಡಿ