ವಿಷನ್ 2025 : ಸಾರ್ವಜನಿಕರಿಗೆ ಆನ್‍ಲೈನ್‍ನಲ್ಲಿ ಸರ್ಕಾರದ ಎಲ್ಲ ಸೇವೆಗಳು ಲಭಿಸಲಿ

ವಿಷನ್ 2025 : ಸಾರ್ವಜನಿಕರಿಗೆ ಆನ್‍ಲೈನ್‍ನಲ್ಲಿ ಸರ್ಕಾರದ ಎಲ್ಲ ಸೇವೆಗಳು ಲಭಿಸಲಿ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ವಿಷನ್ 2025 : ಸಾರ್ವಜನಿಕರಿಗೆ ಆನ್‍ಲೈನ್‍ನಲ್ಲಿ ಸರ್ಕಾರದ ಎಲ್ಲ ಸೇವೆಗಳು ಲಭಿಸಲಿ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ವಿಷನ್ 2025 : ಸಾರ್ವಜನಿಕರಿಗೆ ಆನ್‍ಲೈನ್‍ನಲ್ಲಿ ಸರ್ಕಾರದ ಎಲ್ಲ ಸೇವೆಗಳು ಲಭಿಸಲಿ
ಲಿಂಕ್ : ವಿಷನ್ 2025 : ಸಾರ್ವಜನಿಕರಿಗೆ ಆನ್‍ಲೈನ್‍ನಲ್ಲಿ ಸರ್ಕಾರದ ಎಲ್ಲ ಸೇವೆಗಳು ಲಭಿಸಲಿ

ಓದಿ


ವಿಷನ್ 2025 : ಸಾರ್ವಜನಿಕರಿಗೆ ಆನ್‍ಲೈನ್‍ನಲ್ಲಿ ಸರ್ಕಾರದ ಎಲ್ಲ ಸೇವೆಗಳು ಲಭಿಸಲಿ


ಕೊಪ್ಪಳ ಅ. 28 (ಕರ್ನಾಟಕ ವಾರ್ತೆ): ಸರ್ಕಾರ ಜನರ ಹಿತಕ್ಕಾಗಿ ಜಾರಿಗೊಳಿಸುವ ಎಲ್ಲ ಸೇವೆಗಳ ಸೌಲಭ್ಯ ಆನ್‍ಲೈನ್ ಮೂಲಕವೇ ದೊರೆಯುವಂತಾಗಬೇಕು, ಸರ್ಕಾರಿ ನೌಕರರ ಕಾರ್ಯದಕ್ಷತೆಯ ಮೌಲ್ಯಮಾಪನ ಪ್ರತಿ ವರ್ಷ ನಡೆಯುವಂತಾಗಬೇಕು ಎಂಬ ಅಭಿಪ್ರಾಯ ಸಾರ್ವಜನಿಕರು, ವಿಷಯ ತಜ್ಞರಿಂದ ವ್ಯಕ್ತವಾಯಿತು.
     ಕರ್ನಾಟಕ ವಿಷನ್-2025 ಜಿಲ್ಲಾ ಮಟ್ಟದ ಕಾರ್ಯಗಾರದಲ್ಲಿ ಅಭಿವೃದ್ಧಿಗಾಗಿ ಜನರ ಅಭಿಪ್ರಾಯ ಸಂಗ್ರಹಣೆ ಕುರಿತು ಜಿಲ್ಲಾಡಳಿತ ಭವನದ ಎನ್‍ಐಸಿ ಸಭಾಂಗಣದಲ್ಲಿ ಜರುಗಿದ ವಿಷಯಾಧಾರಿತ ಗುಂಪು ಚರ್ಚೆಯಲ್ಲಿ ಇಂತಹ ಅಭಿಪ್ರಾಯ ವ್ಯಕ್ತಗೊಂಡವು.
ಆಡಳಿತ : ಎಲ್ಲಾ ಕಛೇರಿಗಳಲ್ಲಿ 2025 ರೊಳಗಾಗಿ ಕಾಗದ ರಹಿತ (ಪೇಪರ್ ಲೆಸ್) ಕಾರ್ಯನಿರ್ವಹಿಸಬೇಕು.  ಎಲ್ಲಾ ಸರ್ಕಾರಿ ಸೌಲಭ್ಯಗಳನ್ನು ಆನ್ ಲೈನ್‍ನಲ್ಲಿ ಎಲ್ಲ ಜನ ಸಾಮಾನ್ಯರು ಪಡೆಯುವಂತಾಗಬೇಕು.  ಸರ್ಕಾರಿ ನೌಕರರ ಕಾರ್ಯದಕ್ಷತೆಯ ಮೌಲ್ಯಮಾಪನ ಪ್ರತಿ ವರ್ಷ ಜರುಗಬೇಕು.  ಪ್ರತಿ ಗ್ರಾ.ಪಂ ಗಳಿಗೆ ಆನ್‍ಲೈನ್ ಸೌಲಭ್ಯ, ಹಾಗೂ ಸಿಸಿ ಕ್ಯಾಮರಾ ಅಳವಡಿಕೆ ಮಾಡಲೇಬೇಕು.  ಎಲ್ಲಾ ವಾಹನಗಳಿಗೆ ಜಿ.ಪಿ.ಎಸ್ ಅಳವಡಿಸುವ ನಿಯಮ ಜಾರಿಗೊಳ್ಳಬೇಕು.   ಎಲ್ಲಾ ಪದವಿ ಕಾಲೇಜುಗಳಲ್ಲೂ 18 ವರ್ಷಕ್ಕಿಂತ ಮೇಲ್ಪಟ್ಟ ಯುವಕ-ಯುವತಿಯರಿಗೆ ಚುನಾವಣಾ ಗುರುತಿನ ಚೀಟಿ ಮತ್ತು ಚಾಲನಾ ಪರವಾನಿಗೆ ಪ್ರಮಾಣ ಪತ್ರ, ಸಂದರ್ಶನ ಮಾಡಿ ವಿತರಿಸುವಂತಾಗಬೇಕು.  ಪ್ರತಿ ಇಲಾಖೆಯ ನೌಕರರ ವರ್ಗಾವಣೆ ನಿಗದಿತ ಅವಧಿ ಅಂದರೆ ಏಪ್ರಿಲ್-ಮೇ ತಿಂಗಳ ಒಳಗೆ ಕಡ್ಡಾಯವಾಗಿ ಕೌನ್ಸಿಲಿಂಗ್ ಮೂಲಕವೇ ಪೂರ್ಣಗೊಳ್ಳಬೇಕು.  ಎಲ್ಲಾ ಗ್ರಾಮಗಳು ಇಂಟರ್‍ನೆಟ್ ಸೌಲಭ್ಯ ಪಡೆದು, ಗ್ರಾಮಗಳಿಂದಲೇ ಸರ್ಕಾರಿ ಸೌಲಭ್ಯಗಳನ್ನು ಪಡೆಯುವಂತಾಗಬೇಕು.  ಚುನಾವಣೆಯಲ್ಲಿ ಎಲ್ಲಾ ಮತದಾನವು ಆನ್‍ಲೈನ್ ಹಾಗೂ ಮೊಬೈಲ್ ಮೂಲಕ ಮತದಾನ ಮಾಡುವಂತಾಗಬೇಕು ಎಂಬ ಸಲಹೆಗಳು ಸಾರ್ವಜನಿಕ ವಲಯದಿಂದ ಕೇಳಿಬಂದವು.
ಕಾನೂನು ಮತ್ತು ನ್ಯಾಯ : ಪ್ರತಿಯೊಬ್ಬ ನಾಗರಿಕನು ತಮ್ಮ ಗ್ರಾಮ, ವಾರ್ಡ, ತಾಲೂಕು ಜಿಲ್ಲಾ ಸಮಸ್ಯೆಗಳನ್ನು ಮೊಬೈಲ್‍ಗಳನ್ನು  ಬಳಸಿ, ಸಂಬಂಧಪಟ್ಟ ಇಲಾಖೆಗಳಿಗೆ ತಲುಪಿಸಿ, ಶೀಘ್ರವಾಗಿ ಕಾರ್ಯ ಪೂರ್ಣಗೊಳಿಸುವ ರೀತಿಯಲ್ಲಿ ತರಬೇತಿ ನೀಡುವುದು.  20 ಸಾವಿರ ಜನಸಂಖ್ಯೆಗಳಿಗೆ ಒಂದು ಪೊಲೀಸ್ ಠಾಣೆ ತೆರಯಬೇಕು.  ಮತ್ತು ಪ್ರತಿ ಠಾಣೆಗೆ 2 ಮಹಿಳಾ ಸಿಬ್ಬಂದಿ ಮಿತಿಗೊಳಿಸಬೇಕು.   ಪೊಲೀಸ್ ಕೇಸ್‍ಗಳಲ್ಲಿ ಎಲ್ಲಾ ಇಲಾಖೆಗಳಿಂದ ವರದಿಯು ಆನ್‍ಲೈನ್ ಮೂಲಕ ನೀಡಿದಲ್ಲಿ ಇತ್ಯರ್ಥಗೊಳಿಸಬಹುದು.  ಆರೋಪಿಯಿಂದ ಸಾಕ್ಷಿಯನ್ನು ವಿಡಿಯೋ ಮೂಲಕ ತೆಗೆದುಕೊಳ್ಳಬೇಕು.  ಇದರಿಂದ ಸಾಕ್ಷಿ ಭದ್ರತೆ ದೊರೆಯುತ್ತದೆ.  ಎಲ್ಲಾ ನ್ಯಾಯಾಲಯಗಳಿಂದಲೂ ಹೊರಡಿಸುವ ಆದೇಶ, ತೀರ್ಪುಗಳನ್ನು ಆನ್‍ಲೈನ್ ಮೂಲಕವೇ ಮಾಹಿತಿ ತಲುಪಿಸಿ, ಕಾರ್ಯ ಕೈಗೊಳ್ಳುವಂತಾಗಬೇಕು.  ವಿಮೆ ಇಲ್ಲದ ವಾಹನಗಳನ್ನು ಪತ್ತೆ ಹಚ್ಚಲು, ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು.  ಪ್ರತಿ ತಾಲೂಕು ಕೇಂದ್ರಕ್ಕೆ ಒಂದು ಜೈಲು, ಸೆರೆಮನೆ ತೆರೆಯಬೇಕು.  ಪ್ರತಿ ಆರೋಗ್ಯ ಕೇಂದ್ರದಿಂದಲೂ ಒಂದು ಆಂಬುಲೆನ್ಸ್ ಇರಬೇಕು.  ಜೈಲು ಸುಧಾರಣೆ, ಬಗ್ಗೆ ಕೌನ್ಸಿಲಿಂಗ್, ಮನೋತಜ್ಞರ ಮೂಲಕ ಕೌಶಲ್ಯ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಸಲಹೆಗಳು ತಜ್ಞರು, ಸಾರ್ವಜನಿಕರಿಂದ ಕೇಳಿಬಂದವು.
     ಉಪವಿಭಾಗಾಧಿಕಾರಿ ಗುರುದತ್ ಹೆಗ್ಡೆ ಅವರು ಈ ಕ್ಷೇತ್ರಗಳಿಗೆ ಸಂಬಂಧಿಸಿದ ಗುಂಪು ಚರ್ಚೆಯ ನೇತೃತ್ವ ವಹಿಸಿದ್ದರು.  ಉಳಿದಂತೆ ಪೊಲೀಸ್ ಇಲಾಖೆ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು, ಹಲವು ನ್ಯಾಯವಾದಿಗಳು ಪಾಲ್ಗೊಂಡಿದ್ದರು.


ಹೀಗಾಗಿ ಲೇಖನಗಳು ವಿಷನ್ 2025 : ಸಾರ್ವಜನಿಕರಿಗೆ ಆನ್‍ಲೈನ್‍ನಲ್ಲಿ ಸರ್ಕಾರದ ಎಲ್ಲ ಸೇವೆಗಳು ಲಭಿಸಲಿ

ಎಲ್ಲಾ ಲೇಖನಗಳು ಆಗಿದೆ ವಿಷನ್ 2025 : ಸಾರ್ವಜನಿಕರಿಗೆ ಆನ್‍ಲೈನ್‍ನಲ್ಲಿ ಸರ್ಕಾರದ ಎಲ್ಲ ಸೇವೆಗಳು ಲಭಿಸಲಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ವಿಷನ್ 2025 : ಸಾರ್ವಜನಿಕರಿಗೆ ಆನ್‍ಲೈನ್‍ನಲ್ಲಿ ಸರ್ಕಾರದ ಎಲ್ಲ ಸೇವೆಗಳು ಲಭಿಸಲಿ ಲಿಂಕ್ ವಿಳಾಸ https://dekalungi.blogspot.com/2017/10/2025_43.html

Subscribe to receive free email updates:

0 Response to "ವಿಷನ್ 2025 : ಸಾರ್ವಜನಿಕರಿಗೆ ಆನ್‍ಲೈನ್‍ನಲ್ಲಿ ಸರ್ಕಾರದ ಎಲ್ಲ ಸೇವೆಗಳು ಲಭಿಸಲಿ"

ಕಾಮೆಂಟ್‌‌ ಪೋಸ್ಟ್‌ ಮಾಡಿ